ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು -  ಪ್ರವೇಶಾತಿ ಆರಂಭ


Kemmannu News Network, 10-05-2019 13:13:21


Write Comment     |     E-Mail To a Friend     |     Facebook     |     Twitter     |     Print


ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು -  ಪ್ರವೇಶಾತಿ ಆರಂಭ

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು 2019-20 ನೇ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ಪದವಿ ತರಗತಿಗಳಿಗೆ ಪ್ರವೇಶಾತಿ ಆರಂಭವಾಗಿರುತ್ತದೆ. ನಗರದ ಹೃದಯ ಭಾಗದಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾಗಿದ್ದು ವಿಶ್ವವಿದ್ಯಾನಿಲಯದ ನೇರ ಆಡಳಿತಕ್ಕೆ ಒಳಪಟ್ಟಿರುತ್ತದೆ. 2015 ರಲ್ಲಿ ಆರಂಭಗೊಂಡು 2016-17 ರಲ್ಲಿ ಪ್ರಥಮ ವರ್ಷದ ಪದವಿ ತರಗತಿಗಳು ಆರಂಭಗೊಂಡು ಈ ಶೈಕ್ಷಣಿಕ ವರ್ಷದಲ್ಲಿ ಮೂರನೇ ಶೈಕ್ಷಣಿಕ ವರ್ಷಗಳನ್ನು ಯಶಸ್ವೀಯಾಗಿ ಪೂರೈಸಿದ್ದು, ಕಳೆದ ಎರಡು ವರ್ಷಗಳಿಂದ ಉತ್ತಮ ಫಲಿತಾಂಶಗಳನ್ನು ಗಳಿಸಿಕೊಂದು ಬಂದಿರುತ್ತದೆ. ಅನಿವಾರ್ಯ ಕಾರಣಗಳಿಂದ ವಿದ್ಯಾಭ್ಯಾಸವನ್ನು ಪದವಿ ಪೂರ್ವ ಹಂತದಲ್ಲೇ ಮೊಟಕುಗೊಳಿಸಿದ ಹಾಗೂ ಇತರೆ ಕಾರಣಗಳಿಂದ ಹಗಲು ತರಗತಿಗಳಿಗೆ ಪ್ರವೇಶ ಪಡೆದುಕೊಳ್ಳಲು ಸಾಧ್ಯವಾಗದ ವಿದ್ಯಾಕಾಂಕ್ಷಿಗಳಿಗೆ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಉತ್ತಮ ಆಯ್ಕೆಯಾಗಿರುತ್ತದೆ.

ಪ್ರಸ್ತುತ ಕಾಲೇಜಿನಲ್ಲಿ ಪದವಿ ವಿಭಾಗದಲ್ಲಿ ಬಿ.ಎ, ಬಿ.ಕಾಂ ಹಾಗೂ ಬಿ.ಸಿ.ಎ ಪದವಿ ತರಗತಿಗಳು ಲಭ್ಯವಿದ್ದು ಬಿ.ಎ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ ಹಾಗೂ ಪತ್ರಿಕೋದ್ಯಮ ವಿಷಯಗಳಿವೆ. ಬಿ.ಎ ಪದವಿಯಲ್ಲಿರುವ ಅರ್ಥಶಾಸ್ತ್ರ ಮತ್ತು ಇತಿಹಾಸ ವಿಷಯಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿ, ಕೆಪಿಎಸ್ಸಿ, ಬ್ಯಾಂಕಿಂಗ್ ಪರೀಕ್ಷೆಗಳನ್ನು   ಎದುರಿಸಲು ಸಹಕಾರಿಯಾಗಿದೆ ಹಾಗೂ ಲಭ್ಯವಿರುವ ವಿಪುಲವಾದ ಕೌಶಲ್ಯಾಧಾರಿತ ಉದ್ಯೋಗದ ಅವಕಾಶಗಳನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಸಂಧ್ಯಾ ಕಾಲೇಜುಗಳಲ್ಲಿ ಬಿ.ಎ ಪದವಿಯಲ್ಲಿ ಪತ್ರಿಕೋದ್ಯಮವನ್ನು ಐಚ್ಚಿಕ ವಿಷಯವಾಗಿ ಹೊಂದಿರುವ ಏಕೈಕ ಕಾಲೇಜಾಗಿದು,್ದ ಇಂದಿನ ಬೆಳೆಯುತ್ತಿರುವ ಮಾಧ್ಯಮ ಪ್ರಪಂಚದಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು ಪತ್ರಿಕೋದ್ಯಮ ಹಾಗೂ ಇತರೆ ವಿಷಯಗಳು ಸಹಕಾರಿಯಾಗಲಿದೆ. ಪದವಿ ಪೂರ್ವ ಹಂತದ ಬಳಿಕ ಸಿ.ಎ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ  ಸಂಜೆ ಹೊತ್ತಿನಲ್ಲಿ ಬಿಕಾಂ ಪದವಿಯನ್ನು ಕೂಡ ಪೂರ್ಣಗೊಳಿಸಿಕೊಳ್ಳಬಹುದಾಗಿದೆ. ಸ್ನಾತಕೋತ್ತರ ವಿಭಾಗದಲ್ಲಿ ಎಂಬಿಎ (ಐಬಿ), ಎಂ.ಕಾಂ, ಎಂ.ಎ ಕೊಂಕಣಿ, ಎಂ.ಎ ತುಳು ಹಾಗೂ ಎಂ.ಎ ಇಂಗ್ಲೀಷ್ ಕೋರ್ಸ್‍ಗಳು ಲಭ್ಯವಿವೆ ಹಾಗೂ ಜರ್ಮನ್ ಹಾಗೂ ಫ್ರೆಂಚ್ ಭಾಷೆಗಳಲ್ಲಿ ಡಿಪ್ಲೋಮಾ ಪದವಿಗಳು ಕೂಡ ಲಭ್ಯವಿವೆ.

ಸಂಧ್ಯಾ ಕಾಲೇಜಿನ ಪದವಿಗೂ ಹಗಲು ಕಾಲೇಜುಗಳ ಪದವಿಯ ಮೌಲ್ಯಕ್ಕೂ ಯಾವುದೇ ರೀತಿಯ ವ್ಯತ್ಯಾಸವಿರುವುದಿಲ್ಲ.  ಸಂಧ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗಾಗಿ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶಗಳಿದ್ದು, ಇದಕ್ಕಾಗಿ ಲಲಿತಕಲಾ ಸಂಘ, ಸಾಹಿತ್ಯ ಸಂಘ, ವಾಣಿಜ್ಯ ಸಂಘ, ಕ್ರೀಡಾ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ. ಕಾಲೇಜಿನ ವಿದ್ಯಾರ್ಥಿಗಳು ಹಲವಾರು ಅಂತರ್ ಕಾಲೇಜು ಸ್ಪರ್ಧೆ, ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ವಿದ್ಯಾರ್ಥಿಗಳಿಗೆ ಪದವಿ ಕಲಿಕೆಯ ವೇಳೆಯಲ್ಲಿಯೇ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕುರಿತಂತೆ ಉದ್ಯೋಗ ಮಾರ್ಗದರ್ಶನ ಸೌಲಭ್ಯವೂ ಕಾಲೇಜಿನಲ್ಲಿದೆ.

ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಕಾಲೇಜು ಬಸ್ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣಗಳಿಗೆ ಕೆಲವೇ ನಿಮಿಷಗಳ ನಡಿಗೆಯ ದೂರವನ್ನು ಹೊಂದಿರುತ್ತದೆ. ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗುವಂತಹ ಸುಸಜ್ಜಿತ ಕೊಠಡಿಗಳು, ನುರಿತ ಮತ್ತು ಅನುಭವೀ ಉಪನ್ಯಾಸಕ ವರ್ಗ, ಕಂಪ್ಯೂಟರ್ ಮತ್ತು ಮಾಧ್ಯಮ ಪ್ರಯೋಗಾಲಯಗಳು ಲಭ್ಯವಿದ್ದು ಅತೀ ಕಡಿಮೆ ಶುಲ್ಕದಲ್ಲಿ ವಿದ್ಯಾರ್ಥಿಗಳು ಪದವಿ ಶಿಕ್ಷಣವನ್ನು ಪಡೆಯಬಹುದಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಅವಶ್ಯಕ ದಾಖಲೆಗಳೊಂದಿಗೆ ಪೂರ್ವಾಹ್ನ  ಕಾಲೇಜು 10 ಗಂಟೆಯಿಂದÀ ಕಾಲೇಜು ಕಚೇರಿಯಿಂದ ಅರ್ಜಿಗಳನ್ನು ಪಡೆದುಕೊಂಡು ತಾವು ಇಚ್ಚಿಸಿದ  ಪದವಿಗೆ ಅರ್ಜಿ ಸಲ್ಲಿಸಿ ದಾಖಲಾತಿ ಪಡೆದುಕೊಳ್ಳಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಬಿ.ಎಂ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

ಕಲಾ ಪದವೀದರರಿಗೂ ವಿಫುಲವಾದ ಉದ್ಯೋಗದ ಅವಕಾಶಗಳು
ಕಲಾ ವಿಭಾಗದಲ್ಲಿ ಪದವಿ ಮಾಡಿದರೆ ಅವಕಾಶಗಳು ಇಲ್ಲ ಎನ್ನುವುದು ತಪ್ಪು ತಿಳುವಳಿಕೆ. ಶೇಕಡಾ 75 ಕ್ಕೂ ಹೆಚ್ಚು ಉದ್ಯೋಗಗಳು ಸಂವಹನ ಸಾಮಥ್ರ್ಯ, ಮಾನವ ಕೌಶಲ್ಯ, ಸಂಘಟನಾ ಸಾಮಥ್ರ್ಯ ಬಯಸುತ್ತವೆ. ಕೆಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು, ಪೋಲೀಸ್ ಇಲಾಖಾ ಪರೀಕ್ಷೆ  ಮತ್ತು ಬ್ಯಾಂಕಿಂಗ್ ಪರೀಕ್ಷೆಗಳನ್ನು ಎದುರಿಸಲು ಕಲಾ ಪದವಿ ಸಹಕಾರಿಯಾಗಲಿದೆ. ಬಿ.ಎ ಪದವಿಯ ಬಳಿಕ ಎಂ.ಎ ಅಥವಾ ಬಿ.ಎಡ್ ಪದವಿ ಗಳಿಸಿ ಉಪನ್ಯಾಸಕರಾಗಬಹುದು. ಕಾನೂನು ಪದವಿ ಗಳಿಸಿ ನ್ಯಾಯವಾದಿಗಳಾಗಬಹುದು ಅಥವಾ ಕಾನೂನು ಸಲಹೆಗಾರರಾಗಬಹುದು. ಆಪ್ತ ಸಮಾಲೋಚಕರಾಗಬಹುದು, ಅರ್ಥಶಾಸ್ತ್ರಜ್ಞ, ಇತಿಹಾಸ ತಜ್ಞ ಅಥವಾ ಪತ್ರಕರ್ತರಾಗಬಹುದು. ಈ ರೀತಿಯಾಗಿ ಹಲವಾರು ಉದ್ಯೋಗದ ಅವಕಾಶಗಳು ಬಿ.ಎ ಪದವೀಧರರಿಗೆ ಇದೆ.
ಡಾ. ರಾಮಕೃಷ್ಣ ಬಿ.ಎಂ

ಡಾ. ರಾಮಕೃಷ್ಣ ಬಿ.ಎಂ
ಪ್ರಾಂಶುಪಾಲರು
ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Nirmala Thonse organizes Awareness Campaign agains
View More

Veez Konkani Illustrated Weekly e-Magazine # 77Veez Konkani Illustrated Weekly e-Magazine # 77
Congratulations to Rons BantwalCongratulations to Rons Bantwal
Charitable Foundation welcomes likeminded personnel for permanent directors post in MangaloreCharitable Foundation welcomes likeminded personnel for permanent directors post in Mangalore
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Milarchi Lara - Easter Issue of Mlagres Parish Bulletin.Milarchi Lara - Easter Issue of Mlagres Parish Bulletin.
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India