ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ’


Rons Bantwal
Kemmannu News Network, 21-05-2019 14:01:24


Write Comment     |     E-Mail To a Friend     |     Facebook     |     Twitter     |     Print


ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ’

ಮುಂಬಯಿ (ಮಂಗಳೂರು), ಮೇ.21: 1974ರಿಂದ ಕೊಂಕಣಿ ಭಾಷೆ ಮತ್ತು ಸಂಸ್ಕøತಿಯ ಸೇವೆಯಲ್ಲಿ ತೊಡಗಿರುವ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇವರು ಆಯೋಜಿಸಿ ಕಳೆದ ಆದಿತ್ಯವಾರ ಮಂಗಳೂರಿನ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ಸ್ವರಶ್ರೀ ಗೋವಾ ಪ್ರಸ್ತುತ ಪಡಿಸಿದ ರಾಮಾಯಣ ಆಧಾರಿತ `ಕೊಂಕಣಿ ಶ್ರೀರಾಮ ಗೀತಾ’ ಸಂಗೀತ ಕಾರ್ಯಕ್ರಮ ಸಂಗೀತ ಪ್ರೇಮಿಗಳ ಮನಸೆಳೆಯಿತು.

ಕೊಂಕಣಿಯ ಭಾಷೆಯ ಖ್ಯಾತ ಕವಿ ದಿವಂಗತ ಮನೋಹರರಾಯ್ ಸರದೇಸಾಯಿ ಇವರು 50 ವರ್ಷಗಳ ಹಿಂದೆ ಗೋವಾ ಓಪಿನಿಯನ್ ಪೆÇೀಲ್‍ನ ಸಂದರ್ಭದಲ್ಲಿ ರಚಿಸಿದ ಗೀತೆಗಳಿಗೆ 17 ಕಲಾವಿದರ ತಂಡವಾಗಿರುವ `ಸ್ವರಶ್ರೀ ಗೋವಾ’ ಇವರು ಸಂಗೀತ ನೀಡಿ ವಿನೂತನ ಶೈಲಿಯಲ್ಲಿ ಕಾರ್ಯಕ್ರಮವನ್ನು ನೀಡಿದರು. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಈ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ್ದೆವೆ ಎಂದು ಸ್ವರಶ್ರೀ ಗೋವಾ ಇದರ ಅಧ್ಯಕ್ಷ ಅಜೀಜ ಲೋಬೊ ತಿಳಿಸಿದರು. ನವರಸಗಳಲ್ಲಿ ಹಲವು ರಸಗಳ ಪರಿಚಯ ಇವರ ಗಾಯನದಲ್ಲಿ ಅನುಭವಿಸಿದ ಪ್ರೇಕ್ಷಕರು ಮಂತ್ರಮುಗ್ಧರಾದರು.

ಇಂತಹ ವಿನೂತನ ಕಾರ್ಯಕ್ರಮಗಳನ್ನು ನೀಡಿ ಕೊಂಕಣಿ ಹಾಗೂ ಇತರ ಸಂಗೀತ ಪ್ರೇಮಿಗಳಿಗೆ ಸಂಗೀತದ ರಸದೌತಣ ನೀಡಿದ ಕೊಂಕಣಿ ಭಾಶಾ ಮಂಡಳ ಕರ್ನಾಟಕ ಇವರನ್ನು ಮುಖ್ಯ ಅತಿಥಿü ನಂದಗೋಪಾಲ ಶೆಣೈ ಶ್ಲಾಘಿಸಿದರು ಹಗೂ ಕಲಾವಿದರನ್ನು ಶಾಲು ಹೊದಿಸಿ ಗೌರವಿಸಿದರು.

ಪ್ರಸಿದ್ಧ ಸಿತಾರ ವಾದಕ ಉಸ್ತಾದ ರಪೀಕ ಖಾನ್ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ `ನಾನು ಹೆಚ್ಚಿನ ಸಮಯ ಗೋವಾದಲ್ಲಿ ಕಳೆದಿದ್ದು, ಗೋವಾ ರಾಜ್ಯದಿಂದ ಅನೇಕ ಸಂಗೀತಗಾರರರು ಹೊರಹೊಮ್ಮಿದ್ದಾರೆ. ಅಂತಹ ನಾಡಿನಿಂದ ಬಂದ ಈ ಕಲಾವಿದರ ಭವಿಷ್ಯ ಉಜ್ವಲವಾಗಲಿ’ ಎಂದು ಅವರು ಹಾರೈಸಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಶುಭವನ್ನು ಕೋರಿದರು ಮತ್ತು ಕವಿ ದಿವಂಗತ ಮನೋಹರರಾಯ್ ಸರದೇಸಾಯಿ ಅವರಿಗೆ ಶೃದ್ಧಾಂಜಲಿ ಅರ್ಪಿಸಿದರು.

ಕೊಂಕಣಿ ಭಾಷಾ ಮಂಡಳ ಅಧ್ಯಕ್ಷ ವೆಂಕಟೇಶ ಎನ್.ಬಾಳಿಗಾ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕೊಂಕಣಿ ಜಾಥಾ ಹಾಗೂ ಪ್ರಥಮ ವಿಶ್ವ ಕೊಂಕಣಿ ಸಮ್ಮೇಳನದಂತಹ ಕಾರ್ಯಕ್ರಮಗಳನ್ನು ಸಂಯೋಜಿಸಿದ ಅನುಭವವಿರುವ ಭಾಶಾ ಮಂಡಳವು ಮುಂದಿನ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದು ಎಲ್ಲರು ಸಹಕಾರ ನೀಡಬೇಕು ಎಂದು ವಿನಂತಿಸಿದರು.

ಸಿ.ಡಿ ಕಾಮತ್, ಗೋಕುಲದಾಸ ಪ್ರಭು, ಡಾ| ಕೆ.ಮೋಹನ ಪೈ, ಸ್ವರಶ್ರೀ ನಿರ್ದೇಶಕ ರಮಾನಂದ ರಾಯಕರ್ ಉಪಸ್ಥಿತರಿದ್ದರು. ಭಾಶಾ ಮಂಡಳದ ಉಪಾಧ್ಯಕ್ಷ ಎಂ. ಆರ್. ಕಾಮತ, ನಿಕಟ ಪೂರ್ವ ಅಧ್ಯಕ್ಷೆ ಗೀತಾ ಸಿ. ಕಿಣಿ, ಕಾರ್ಯದರ್ಶಿ ರತ್ನಾಕರ ಕುಡ್ವ, ಖಜಾಂಚಿ ವಿಠಲ ಕುಡ್ವ, ಸಂಚಾಲಕ ವಸಂತ ರಾವ, ಸಂಪರ್ಕ ಕಾರ್ಯದರ್ಶಿ ಸುರೇಶ ಶೆಣೈ, ಸಹ ಕಾರ್ಯದರ್ಶಿ ಜುಲಿಯೆಟ್ ಫೆರ್ನಾಡಿಂಸ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪೌಲ್ ಮೋರಾಸ್, ದಿನೇಶ ಶೇಠ್, ಪ್ರವೀಣ್ ಕಾಮತ್, ಮಿನಾಕ್ಷಿ ಪೈ ಸಹಕರಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Welcome to Thonse Naturecure Hospital
View More

KEMMANNU CHURCH - Weekly Announcements.KEMMANNU CHURCH - Weekly Announcements.
Obituary: Alice Antao nee Quadros (72), Kemmannu/Goa.Obituary: Alice Antao nee Quadros (72), Kemmannu/Goa.
Veez Konkani Illustrated Weekly e-Magazine # 90Veez Konkani Illustrated Weekly e-Magazine # 90
Milarchi Laram - Issue Sep 2019Milarchi Laram - Issue Sep 2019
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India