Brief Mumbai, Mangalore News with pictures


Rons Bantwal
Kemmannu News Network, 05-06-2019 17:29:20


Write Comment     |     E-Mail To a Friend     |     Facebook     |     Twitter     |     Print


ಶ್ರೀ ಗೀತಾಂಬಿಕಾ ಮಂದಿರ ಅಸಲ್ಪದಲ್ಲಿ ಸಂಭ್ರಮಿಸಲ್ಪಟ್ಟ 21ನೇ ಪ್ರತಿಷ್ಠಾ ವರ್ಧಂತೋತ್ಸವ
ದೈವ-ದೇವರ ನಂಬಿಕೆ ತುಳುನಾಡ ಜನತೆಯ ವೈಶಿಷ್ಟ ್ಯ : ಸಿಎ| ಶಂಕರ ಬಿ.ಶೆಟ್ಟಿ
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುಂಬಯಿ, ಜೂ.05: ತುಳುನಾಡ ಜನತೆ ದೈವ-ದೇವರುಗಳಲ್ಲಿ ನಂಬಿಕೆಯನ್ನಿಟ್ಟು ಆರಾಧಿಸಿ ಬದುಕು ಸಾಗಿಸುತ್ತಿದ್ದಾರೆ. ಆದುದರಿಂದಲೇ ದೈವ-ದೇವಸ್ಥಾನಗಳ ಅಭಿವೃದ್ಧಿ ಕಾರ್ಯಕ್ಕೆ ಕೋಟ್ಯಾಂತರ ರೂಪಾಯಿ ವ್ಯಯಿಸಿ ತುಳುನಾಡ ವೈಭವವನ್ನು ರೂಪಿಸುತ್ತಿದ್ದಾರೆ. ದೈವ ದೇವರ ಮೇಲೆ ಅಪಾರ ಭಕ್ತಿ-ನಂಬಿಕೆ ಇರುವುದರಿಂದಲೇ ಎಲ್ಲಿ ತುಳುನಾಡ ಜನತೆ ನೆಲೆಸುತ್ತಾರೋ ಅಲ್ಲೂ ಕ್ಷೇತ್ರಗಳನ್ನು ನಿರ್ಮಿಸಿ ಭಕ್ತಿಯನ್ನು ವೃದ್ಧಿಸಿ ಅಭಿವೃದ್ಧಿಯನ್ನು ಕಾಣುತ್ತಿದ್ಡಾರೆ. ಆ ಮೂಲಕ ಸಾಧನೆಯನ್ನು ಮಾಡುತ್ತಾ ಜೀವನ ಪಾವನಗೊಳಿಸುತ್ತಾರೆ. ಮಾನಸಿಕ ನೆಮ್ಮದಿ ಹಾಗೂ ಆತ್ಮವಿಶ್ವಾಸದ ವೃದ್ಧಿಗೆ ಮನುಷ್ಯನಿಗೆ ದೇವಸ್ಥಾನದ ಅಗತ್ಯವಿದೆ. ಅಂತಹ ಧಾರ್ಮಿಕ ಕೇಂದ್ರಗಳು, ದೇವಸ್ಥಾನಗಳ ಅಭಿವೃದ್ಧಿ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಬಂಟ್ಸ್ ಸಂಘ ಮುಂಬಯಿ ಇದರ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಕಾರ್ಯಧ್ಯಕ್ಷ ಸಿಎ| ಶಂಕರ ಬಿ.ಶೆಟ್ಟಿ ತಿಳಿಸಿದರು.

ಘಾಟ್ಕೋಪರ್ ಪಶ್ಚಿಮದ ಅಸಲ್ಫಾ ಇಲ್ಲಿನ ಶ್ರೀ ಗೀತಾಂಬಿಕಾ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಅಸಲ್ಫಾದಲ್ಲಿ ಶ್ರೀ ಗೀತಾಂಬಿಕಾದೇವಿ ಮತ್ತು ಪರಿವಾರದ ದೇವತೆಗಳ ಇಪ್ಪತ್ತ ಒಂದನೇ ಪ್ರತಿಷ್ಠಾ ವರ್ಧಂತೋತ್ಸವ ಕಳೆದ ಮಂಗಳವಾರ ವಿಜೃಂಭನೆಯಿಂದ ನೆರವೇರಿಸಿದ್ದು, ಶ್ರೀ ಗೀತಾಂಬಿಕಾ ಸೇವಾ ಸಮಿತಿ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅಧಕ್ಷತೆಯಲ್ಲಿ ನಡೆಸಲ್ಪಟ್ಟ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಸಿಎ| ಶಂಕರ ಶೆಟ್ಟಿ ಮಾತನಾಡಿದರು.

ಸೋನಿ ಸ್ಟೀಲ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಪಾಂಡುರಂಗ ಎಸ್.ಶೆಟ್ಟಿ, ಶ್ರೀ ಜಗದಾಂಬಾ ದೇವಸ್ಥಾನ ಡೊಂಬಿವಿಲಿ ಇದರ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯ ಕಾರ್ಯದರ್ಶಿ ಮತ್ತು ಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಸ್ಥಾಪಕಾಧ್ಯಕ್ಷ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅತಿಥಿü ಅಭ್ಯಾಗತರಾಗಿ ವೇದಿಕೆಯಲ್ಲಿದ್ದು ಶುಭಾರೈಸಿದರು.

ಶತಮಾನದÀ ಹಿಂದೆ ಮುಂಂಬಯಿ ಸೇರಿದ ನಮ್ಮ ಪೂರ್ವಜರು ಒಳ್ಳೆಯ ಸದದ್ದೇಶದಿಂದ ದೇವಸ್ಥಾನಗಳನ್ನು, ಧಾರ್ಮಿಕ ಕೇಂದ್ರಗಳನ್ನು ಕಟ್ಟಿ ಬೆಳೆಸಿದ್ದಾರೆ. ಶ್ರೀ ಗೀತಾಂಬಿಕಾ ಕ್ಷೇತ್ರಕ್ಕೆ ಸುಮಾರು ಐದುವರೆ ದಶಕಗಳ  ಇತಿಹಾಸವಿದೆ. ದೂದೃಷ್ಠಿತ್ವವುಳ್ಳ ನಮ್ಮ ಹಿರಿಯರು ಸಂಘಟಿತರಾಗಿ ನಮ್ಮ ಧಾರ್ಮಿಕ ಪರಂಪರೆ, ಕಲೆ, ಸಂಸ್ಕೃತಿ, ಉಳಿದು ಬೆಳೆಯಬೇಕೆಂಬ ಉದ್ದೇಶದಿಂದ ಶ್ರೀ ಗೀತಾಂಬಿಕೆಯ ಆರಾಧನೆಯೊಂದಿಗೆ ದೇವಸ್ಥಾನವನ್ನು ನಿರ್ಮಾಣ ಮಾಡಿದ್ಡಾರೆ. ಈ ಪರಿಸರದಲ್ಲಿ ಧಾರ್ಮಿಕ ಕೇಂದ್ರದೊಂದಿಗೆ ಯಕ್ಷಗಾನ ಮಂಡಳಿ, ಶಾಲೆಯನ್ನು ನಮ್ಮ ಹಿರಿಯರು ಕಟ್ಟಿ ಬೆಳೆಸಿ ಸಮಾಜಕ್ಕೆ ನೀಡಿದ್ದಾರೆ. ಅಂದು ನಮ್ಮ ಹಿರಿಯರು ಕಟ್ಟಿ ಬೆಳೆಸಿದ ದೇವಸ್ಥಾನಗಳು ಜೀರ್ಣಾವಸ್ಥೆಯಲ್ಲಿದ್ದಾಗ ಅದನ್ನು ದುರಸ್ತಿ ಇಲ್ಲವೇ ಜೀರ್ಣೋದ್ಧಾರ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದ ಕೆಲವೊಂದು ಅಭಿವೃದ್ಧಿ ಕಾರ್ಯ ನಡೆಯಲಿದೆ. ಅದಕ್ಕೆ ಭಕ್ತರೆಲ್ಲರೂ ಸಹಕರಿಸಿ ಶ್ರೀ ಗೀತಾಂಬಿಕೆಯ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಸುರೇಶ್ ಭಂಡಾರಿ ತಿಳಿಸಿದರು.

ಈ ಶುಭಾವಸರದಲ್ಲಿ ಮಂದಿರದಲ್ಲಿನ ಪ್ರತಿಷ್ಠಾಪಿತ ಗಣಪತಿ, ಈಶ್ವರ, ಆಂಜನೇಯ, ನಾಗದೇವರು, ರಕ್ತೇಶ್ವರಿ ಹಾಗೂ ಭದ್ರಕಾಳಿ ದೇವರಿಗೂ ವಿಶೇಷ ಪೂಜೆಗೈಯಲಾಯಿತು. ಬ್ರಹ್ಮಶ್ರೀ ಶಂಕರನಾರಯಣ ತಂತ್ರಿ ಡೊಂಬಿವಲಿ ತಮ್ಮ ಪೌರೋಹಿತ್ಯದಲ್ಲಿ ಸಾಮಾಹಿಕ ಪ್ರಾರ್ಥನೆ, ಅದ್ಯಗಣ ಯಾಗ, ತೋರಣ ಮೂಹೂರ್ತ, ಪರಿವಾರ ದೇವತೆಗಳ ನವಕ ಕಲಶ ಹಾಗೂ ಶ್ರೀ ದೇವಿಗೆ 25 ಕಲಶದ ಕಲಶಪೂರಣ, ಪಂಚಾಮೃತ ಅಭಿಷೇಕ, ಪರಿವಾರ ದೇವತೆಗಳ ಅಭಿಷೇಕ, ಶ್ರೀ ದೇವಿಗೆ ಪ್ರಧಾನ ಹೋಮ, ಪಲ್ಲಪೂಜೆ, ಪ್ರಧಾನ ಕಲಶಾಭಿಷೇಕ, ಮಧ್ಯಾಹ್ನ ಮಹಾಮಂಗಳಾರತಿ ಮತ್ತು ಅನ್ನ ಸಂತರ್ಪಣೆ ಇತ್ಯಾದಿಗಳನ್ನು ಪೂಜೆಗಳನ್ನು ನೆರವೇರಿಸಿದರು. ಸುರೇಶ್ ಎಸ್.ಭಂಡಾರಿ ಮತ್ತು ಶೋಭಾ ಸುರೇಶ್ ಭಂಡಾರಿ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಮಂದಿರದ ಪ್ರಧಾನ ಅರ್ಚಕ ವಿದ್ವಾನ್ ರಘುಪತಿ ಭಟ್ ಉಡುಪಿ ಮತ್ತು ಸಹ ಪುರೋಹಿತರು ಪೂಜಾಧಿಗಳನ್ನು ನೆರವೇರಿಸಿದ್ದು, ಅಧ್ಯಕ್ಷರು ಹಾಗೂ ಆರ್ಚಕರು ವಿಶೇಷವಾಗಿ ಉಪಸ್ಥಿತ ಬಂಟ್ಸ್ ಸಂಘ ಮುಂಬಯಿ ಇದರ ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಬಾಂಬೇ ಬಂಟ್ಸ್ ಅಸೋಸಿಯೇಶನ್ ಇದರ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ವಿ.ಶೆಟ್ಟಿ ಸೇರಿದಂತೆ ಅನೇಕ ಗಣ್ಯರಿಗೆ, ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಿ ಹರಸಿದರು. ಶ್ರೀ ಗೀತಾಂಬಿಕಾ ಭಜನಾ ಮಂಡಳಿ ಭಜನೆ ನಡೆಸಿದ್ದು, ಸೂರ್ಯೋಸ್ತಮದ ಬಳಿಕ ಶ್ರೀ ದೇವಿಯ ದರ್ಶನ, ರಾತ್ರಿ ರಂಗಪೂಜೆ ನಂತರ ಉತ್ಸವ ಬಲಿ, ಪ್ರಸಾದ ವಿತರಣೆ. ಮಹಾ ಅನ್ನಸಂತಾರ್ಪಣೆ ನಡೆಸಲ್ಪಟ್ಟಿತು.

ಈ ಸಂದರ್ಭದಲ್ಲಿ ಸೇವಾ ಸಮಿತಿ ಕಾರ್ಯಧ್ಯಕ್ಷ ಸುರೇಶ್ ಪಿ.ಕೋಟ್ಯಾನ್, ಉಪಾಧ್ಯಕ್ಷ ಸತೀಶ್ ಕೆ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ್ ಪಿ.ಕೋಟ್ಯಾನ್, ಕೋಶಾಧಿಕಾರಿ ವಿಕ್ರಮ ಸುವರ್ಣ, ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ ಅಧ್ಯಕ್ಷ ಕರ್ನೂರು ಮೋಹನ್ ರೈ, ಸಂಚಾಲಕ ಸುನೀಲ್ ಅವಿೂನ್ ಹಾಗೂ ಮಹಿಳಾ ಮಂಡಳಿ, ಪೂಜಾ ಸಮಿತಿ ಮತ್ತು ಶ್ರೀ ಗೀತಾಂಬಿಕಾ ಭಜನಾ ಸಮಿತಿ ಸದಸ್ಯರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.

21ನೇ ಪ್ರತಿಷ್ಠಾ ವರ್ಧಂತೋತ್ಸವ ಪ್ರಯುಕ್ತ ಇದೇ ಜೂ.08ನೇ ಶನಿವಾರ ಸಂಜೆ 6.00 ಗಂಟೆಯಿಂದ ದಿ| ರಮಾನಾಥ ಪಯ್ಯಡೆ ಸ್ಮರಣಾರ್ಥ ಗಂಗಾಧರ ಪಯ್ಯಡೆ ಪ್ರಾಯೋಜಕತ್ವದಲ್ಲಿ ಶ್ರೀ ಗೀತಾಂಬಿಕಾ ಕೃಪಾ ಪೆÇೀಷಿತ ಯಕ್ಷಗಾನ ಮಂಡಳಿಯ ಕಲಾವಿದರು `ಜಾಂಬಾವತಿ ಕಲ್ಯಾಣ’ ಯಕ್ಷಗಾನ ಬಯಲಾಟ ಪ್ರದರ್ಶಿಸಲಿದ್ದಾರೆ.

ಮುಂಬಯಿ (ಮಂಗಳೂರು),ಜೂ.05: ತಲಪಾಡಿಯ ಕೆ.ಸಿ ನಗರದ ಅಲ್ ಫಲಹಾ ಮಸೀದಿಯಲ್ಲಿ ಮೊಹಮ್ಮದ್ ಇಜಾಝ್ ಸ್ವಲಾಹಿ ನೇತೃತ್ವದಲ್ಲಿ ಈದುಲ್ ಫಿತರ್ ಪ್ರಯುಕ್ತ ವಿಶೇಷ ನಮಾಝ್ ಹಾಗೂ ಪ್ರಾರ್ಥನೆ  ನಡೆಯಿತು

ಮಲ್ಲಿಗೆ ಕೃಷಿಯ ವೈಜ್ಞಾನಿಕ ಬೇಸಾಯ ಪದ್ಧತಿ ಬಗ್ಗೆ ತರಬೇತಿ ಶಿಬಿರ

ಮುಂಬಯಿ, ಜೂ.05: ವಾಣಿಜ್ಯ ಹೂಬೆಳೆಗಳಲ್ಲಿ ಮಲ್ಲಿಗೆ ಮುಖ್ಯವಾದುದು. ಅತ್ಯಂತ ಪರಿಮಳ ಬೀರುವ ಮಲ್ಲಿಗೆಗೆ ಜಗತ್ತಿನಾದ್ಯಂತ ಬೇಡಿಕೆ ಇದೆ. ಪೂಜೆಗೆ ಸತ್ಕಾರಕ್ಕೆ , ಸುಗಂಧ ತೈಲ ಉತ್ಪಾದನೆಗೆ ಇದು ಬಳಸಲಾಗಿದ್ದು ಪುಷ್ಪಗಳ ರಾಣಿ  ಎಂದೇ ಕರೆಯಲ್ಪಡುವ ಮಲ್ಲಿಗೆಯ ಬೇಸಾಯವನ್ನು ಹೇಗೆ ಮಾಡಬೇಕು ಎಂಬುದೇ ಈ ಶಿಬಿರದ ಮೂಲ ಆಶಯವಾಗಿದೆ. ಹಾಗಾಗಿ ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿಯ ರೈತ ಸದಸ್ಯರಿಗಾಗಿ ಮಲ್ಲಿಗೆ ಕೃಷಿಯ ವೈಜ್ಞಾನಿಕ ಬೇಸಾಯ ಪದ್ಧತಿ ಬಗ್ಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಪುಷ್ಪಹರಾಜು ಕೇಂದ್ರ ಉಡುಪಿ ಇದರ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ತಿಳಿಸಿದರು.

ತೋಟಗಾರಿಕೆ ಇಲಾಖೆ ಉಡುಪಿ, ಇದರ ಪುಷ್ಪ ಹರಾಜು ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇವರ ವತಿಯಿಂದ ಮಲ್ಲಿಗೆ ಕೃಷಿಯ ವೈಜ್ಞಾನಿಕ ಬೇಸಾಯ ಪದ್ಧತಿ ಬಗ್ಗೆ ತರಬೇತಿ ಶಿಬಿರವನ್ನು ಇಂದಿಲ್ಲಿ ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿಯ ಕಚೇರಿ ಆವರಣದಲ್ಲಿ ನಡೆಸಲಾಗಿದ್ದು,  ಅನಿತಾ ಭಾಸ್ಕರ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಮಾತನಾಡಿದರು.

ರೈತ ಸದಸ್ಯರಿಗೆ ಮಲ್ಲಿಗೆ ಕೃಷಿಯ ಬೇಸಾಯ ಪದ್ಧತಿಯ ಬಗ್ಗೆ ಬೆಳೆಗೆ ಬೇಕಾಗುವ ಹವಾಗುಣ, ಸ್ಥಳ, ಮಣ್ಣು ಭೂಮಿ ಸಿದ್ಧತೆ, ನಾಟಿಕ್ರಮ, ನೀರು ನಿರ್ವಹಣೆ ಹಾಗೂ ಗಿಡಕ್ಕೆ ತಗಲುವ ರೋಗ ವಿಶ್ಲೇಷಣೆಯೊಂದಿಗೆ ರಸಾಯನಿಕ ಯಾ ಸಾವಯವ ಕೀಟನಾಶಕಗಳ ಅಳವಡಿಕೆಯ ಬಗ್ಗೆ ವಿಸ್ತಾರವಾದ ವಿವರಣೆಯನ್ನು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಎಸ್.ಚೈತನ್ಯ ಸಾದರ ಪಡಿಸಿದರು.

ಕಾರ್ಕಳ ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ಬಿ.ಶ್ರೀನಿವಾಸ ಅಥಿüತಿಯಾಗಿದು,್ದ ಇಲಾಖಾ ವತಿಯಿಂದ ರೈತರಿಗೆ ಸಿಗುವ ಅನುದಾನ ಹಾಗೂ ಇತರ ಪರಿಕರ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಕಾರ್ಕಳ ತೋಟಗಾರಿಕೆ ರೈತ ಉತ್ಪಾದಕಾ ಕಂಪೆನಿ ಅಧ್ಯಕ್ಷ ಅಂತೋನಿ ಡಿಸೋಜಾ ನಕ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮಾತನಾಡಿ ಮಲ್ಲಿಗೆಯನ್ನು ವೈಜ್ಞಾನಿಕ ನೆಲೆಯಲ್ಲಿ ಬೆಳೆದಲ್ಲಿ ಬೆಳಸುವ ರೈತನ ಸಂಸಾರದ ನಿರ್ವಹಣೆಯ ಖರ್ಚುವೆಚ್ಚ ಈ ಬೆಳೆಯಿಂದ ಸಾಧ್ಯ ಎಂದರು.

ವೇದಿಕೆಯಲ್ಲಿ ಕಂಪೆನಿ ನಿರ್ದೇಶಕರಾದ ಧರಣೇಂದ್ರ, ಪ್ರವೀಣ್ ಸಾಲ್ಯಾನ್, ಗಂಗಯ್ಯ ಪೂಜಾರಿ, ಮುರಳೀಧರ ಶರ್ಮ, ವೀಣಾ ನಾಯಕ್, ಜಯಲಕ್ಷ್ಮಿ ಮುಡಾರು, ಜ್ಯೋತಿ ಕುಲಾಲ್, ಕಂಪೆನಿ ಸಲಹೆಗಾರರಾದ ನವೀನ್‍ಚಂದ್ರ ಜೈನ್ ವೇದಿಕೆಯಲ್ಲಿದ್ದರು.

ಕಾರ್ಯಕ್ರಮವನ್ನು ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್.ಆರ್ ನಿರೂಪಿಸಿದರು. ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿ ಇದರ ಉಪಾಧ್ಯಕ್ಷ ಹರಿಶ್ಚಂದ್ರ ತೆಂಡುಲ್ಕರ್ ಧನ್ಯವದಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Full Video:Inauguration Udupi of Diocese
View More

Veez Konkani Illustrated Weekly e-Magazine # 80Veez Konkani Illustrated Weekly e-Magazine # 80
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Milarchi Lara - Easter Issue of Mlagres Parish Bulletin.Milarchi Lara - Easter Issue of Mlagres Parish Bulletin.
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India