Brief Mumbai, Mangalore News with pictures


Rons Bantwal
Kemmannu News Network, 16-06-2019 16:28:10


Write Comment     |     E-Mail To a Friend     |     Facebook     |     Twitter     |     Print


ಜೂ.15-17: ನವಿ ಮುಂಬಯಿ ವಾಶಿ ಇಲ್ಲಿನ (ಬಾಲಾಜಿ ಮಂದಿರ)
ಶ್ರೀ ಲಕ್ಷಿ ್ಮೀ ವೆಂಕಟರಮಣ ದೇವಸ್ಥಾನದ ರಜತ ಸಂಭ್ರಮ

ಮುಂಬಾಯಿ, ಜೂ.13: ನವಿ ಮುಂಬಯಿ ಅಲ್ಲಿನ ಅನೇಕ ದೇವಸ್ಥಾನಗಳ ಪೈಕಿ ವಾಶಿ  ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನವೂ (ಬಾಲಾಜಿ ಮಂದಿರ) ಇದರ ರಜತ ಸಂಭ್ರಮವು ನಾಳೆ ಜೂ.13 ರ ಶನಿವಾರ ದಿಂದ ಮೊದಲ್ಗೊಂಡು ಜೂ.16ನೇ ಸೋಮವಾರ ತನಕ ಮೂರು ದಿನಗಳಲ್ಲಿ ವಾಶಿ ಇಲ್ಲಿನ ಶ್ರೀ ಲಕ್ಷಿ ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಗೌಡ ಸಾರಸ್ವತ್ ಬ್ರಾಹ್ಮಣ ಸಮಾಜದ ಕುಲಗುರು ದೈವಕ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳ ಕೃಪೆ ಹಾಗೂ ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ದಿವ್ಯೋಪಸ್ಥಿ ಮತ್ತು ಅನುಗ್ರಹಗಳೊಂ -ದಿಗೆ ಅದ್ದೂರಿಯಾಗಿ ನಡೆಸಲಾಗುವುದು.

ವರ್ಷಂಪ್ರತಿ ಶ್ರೀ ಲಕ್ಷ್ಮೀ ವೆಂಕಟರಮಣ ಮಂದಿರದ ವರ್ಧಂತ್ಯೋತ್ಸವ ವಿಧಿವತ್ತಾಗಿ ಆಚರಿಸಲಾಗುತ್ತಿದ್ದು ಈ ಬಾರಿ ರಜತ ಸಂಭ್ರಮ ಪ್ರಯುಕ್ತ 25ನೇ ಪ್ರತಿಷ್ಟಾ ವರ್ಧಂತಿ ಮಹೋತ್ಸವವನ್ನು ವಿವಿಧ ಸೇವೆಗಳೊಂದಿಗೆ ಸಂಭ್ರಮೋಲ್ಲಾಸದಿಂದ ನೆರವೇರಿಸಲಾಗುವುದು. ಅಂತೆಯೇ ಪರಿವಾರ ದೇವತೆಗಳ  22ನೇ ವರ್ಧಂತಿ ಮಹೋತ್ಸವವು ಮತ್ತು ನವಗ್ರಹ ದೇವತೆಗಳ  18ನೇ ವರ್ಧಂತಿ ಮಹೋತ್ಸವ ತ್ರಿದಿನಗಳಲ್ಲಿ ಬೆಳಿಗ್ಗೆ 7.00 ಗಂಟೆಯಿಂದ ರಾತ್ರಿ 8.30 ಗಂಟೆ ತನಕ ನಡೆಸಲಾಗುವುದು.

ಆ ನಿಮಿತ್ತ ಇಂದು (ಜೂ.14) ಶುಕ್ರವಾರ ಸಂಜೆ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ದೇವಸ್ಥಾನಕ್ಕೆ ಪಾದಾರ್ಪಣೆಗೈದು ನಾಲ್ಕು ದಿನಗಳಲ್ಲಿ ಮೊಕ್ಕಾಂ ಹೂಡಿ ಶ್ರೀದೇವರಿಗೆ ಪೂಜೆ ನೆರವೇರಿಸÀಲಿದ್ದಾರೆ. ಜೂ.15ನೇ ಶನಿವಾರ ಬೆಳಿಗ್ಗೆ 7.00 ಗಂಟೆಯಿಂದ ದೇವತಾ ಪ್ರಾರ್ಥನೆ, ಗುರುಪೂಜೆ, ದೇವಾನಂದಿನಿ ಸಮಾರಾಧನೆ, ಋತ್ವಿಜವರಣ, ಬೆಳಿಗ್ಗೆ 8.00 ಗಂಟೆಗೆ ವೆಂಕಟೇಶ ಹಾಗೂ ಪರಿವಾರ ದೇವತಾ ಮೂಲ ಮಂತ್ರ ಜಪ, ಜೂ.16ನೇ ಭಾನುವಾರ ಜೇಷ್ಠಶುಕ್ಲ ಚತುರ್ದಶಿ ದಿನ (ಪರಿವಾರ ದೇವತಾ ಪ್ರತಿಷ್ಠಾ ವರ್ಧಂತಿ) ಬೆಳಿಗ್ಗೆ 7.00 ಗಂಟೆಯಿಂದ ಮೂಲ ಮಂತ್ರ ಜಪ, ಶ್ರೀ ಲಕ್ಷಿ ್ಮೀ ಹೃದಯ ಪಾರಯಣ ಹವನ, ಜೂ.17ನೇ ಸೋಮವಾರ ಲಘು ವಿಷ್ಣು ಹವನ ಮತ್ತು ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮ, ಜೂ.20ನೇ ಗುರುವಾರ ನಾಗ ದೇವತೆಯ ಪ್ರತಿಷ್ಟಾ ವರ್ಧಂತಿ ಮಹೋತ್ಸವ ನಡೆಸಲಾಗುವುದು. ಅಂತೆಯೇ ಭಕ್ತಾಭಿಮಾನಿಗಳ ಸಹಕಾರದಿಂದ ಪ್ರಸಕ್ತ ವರ್ಷ ಆಡಳಿತ ಮಂಡಳಿಯು ಶ್ರೀ ವೆಂಕಟರಮಣ ಮತ್ತು ಶ್ರೀದೇವಿ, ಭೂದೇವಿಗೆ ಬೆಳ್ಳಿಯ ಆಭೂಷಣಗಳನ್ನು ಸಿದ್ಧಪಡಿದ್ದು ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಶ್ರೀ ದೇವರಿಗೆ  ಅರ್ಪಣೆ ಮಾಡಲಿದ್ದಾರೆ.

ಜಿಎಸ್‍ಬಿ ಸಭಾ ನವಿ ಮುಂಬಯಿ:
ನವಿ ಮುಂಬಯಿ ಅಲ್ಲಿನ ಅನೇಕ ದೇವಸ್ಥಾನಗಳ ಪೈಕಿ ವಾಶಿ  ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನವೂ (ಬಾಲಾಜಿ ಮಂದಿರ)  ಒಂದಾಗಿದೆ. ಇದು ಪ್ರತಿಷ್ಠಿತ ಹಾಗೂ ಉನ್ನತ ಸ್ಥಾನ ಪಡೆದಿರುವ ಒಂದು ಧಾರ್ಮಿಕ ಕೇಂದ್ರವೂ ಹೌದು. ವಾಶಿ ಇಲ್ಲಿನ ಹೃದಯ ಭಾಗದಲ್ಲಿ ಧಾರ್ಮಿಕ ಕೇಂದ್ರವಾಗಿದ್ದು ವಿವಿಧ ಮೂಲೆಗಳಿಂದಲೂ ಸಮಾಜದ ಸಹಸ್ರಾರು ಭಕ್ತಾಭಿಮಾನಿಗಳನ್ನು ಆಕರ್ಷಿಸುತ್ತಿದೆ. ಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಅತೀ ಸುಂದರವಾದ ಶ್ರೀ ವೆಂಕಟರಮಣ ದೇವರ ಮತ್ತು   ಎಡ ಬದಿಯಲ್ಲಿ ಶ್ರೀದೇವಿ ಹಾಗೂ ಬಲ ಬದಿಯಲ್ಲಿ ಭೂದೇವಿ ವಿಗ್ರಹವು ತಿರುಮಲ ತಿರುಪತಿ ದೇವಸ್ಥಾನದ ಕೊಡುಗೆಯಾಗಿರುತ್ತದೆ. ಮಂದಿರದ ಮೇಲಂತಸ್ತಿನ ನಾಲ್ಕು ಮೂಲೆಗಳಲ್ಲಿರುವ ಶ್ರೀ ಮುಖ್ಯಪ್ರಾಣ, ಶ್ರೀ ಗಣಪತಿ, ಶ್ರೀ ಲಕ್ಷ್ಮಿ, ಶ್ರೀ ಗರುಡ ಮತ್ತು ನೆಲ ಅಂತಸ್ತಿನಲ್ಲಿರುವ ಭಗವಾನ್ ಸುಬ್ರಹ್ಮಣ್ಯ, ನಾಗ ದೇವತೆ ಮತ್ತು ನವಗ್ರಹಗಳಿಗೆ ನಿತ್ಯ ಪೂಜೆಗಳು ನೆರವೇರಿಸಲಾಗುತ್ತ್ತಿದೆ.

1978ರಲ್ಲಿ ಸ್ಥಾಪಿತ ಜಿಎಸ್‍ಬಿ ಸಭಾ ನವಿ ಮುಂಬಯಿ ಸ್ವಸಮಾಜದ ಹಿತದೃಷ್ಟಿಯೊಂದಿಗೆ ಆಧ್ಯಾತ್ಮಿಕ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಗಳಲ್ಲಿ ತೊಡಗಿಸಿ ಕೊಂಡು ಸಮಾಜೋಭಿವೃದ್ಧಿಯ
ಸೇವೆಗಳಲ್ಲಿ ಕಾರ್ಯಪ್ರವೃತ ಗೊಂಡಿದೆ. ಉಪನಗರ ನವಿಮುಂಬಯಿ ಇಲ್ಲಿನ ವಾಶಿಯಲ್ಲಿ ಸಿಡ್ಕೋ ನಿವೇಶನ ಖರೀದಿಸಿ ತನ್ನ ಸಂಚಾಲಕತ್ವದಲ್ಲಿ ಶ್ರೀ ಲಕ್ಷಿ ್ಮೀ ವೆಂಕಟರಮಣ ದೇವಸ್ಥಾನವೂ (ಬಾಲಾಜಿ ಮಂದಿರ) ಸ್ಥಾಪಿಸಿ ಶ್ರದ್ಧಾಕೇಂದ್ರವಾಗಿಸಿ ಶ್ರೀದೇವರ ಸೇವೆಯಲ್ಲಿ ನಿರತವಾಗಿದೆ. ಹಾಗೂ ಸಮಾಜ ಭವನವನ್ನೂ ನಡೆಸುತ್ತಿದೆ. ಈ ವರ್ಷ ಜಿಎಸ್‍ಬಿ ಸಭಾ ನವಿ ಮುಂಬಯಿ ಸಂಸ್ಥೆಯು ಬೆಳ್ಳಿಹಬ್ಬ ಸಡಗರದಲ್ಲಿದ್ದು 25ನೇ ವಾರ್ಷಿಕ ಆಚರಣೆಯಲ್ಲಿದ್ದು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ (ಬಾಲಾಜಿ ಮಂದಿರ) ಪ್ರತಿಷ್ಠಾ ವರ್ಧಂತಿ ಮಹೋತ್ಸವ ರಜತಮಹೋತ್ಸವ ಸಂಭ್ರಮಿಸುತ್ತಿದೆ.

ಭಕ್ತಿಯಿಂದ ಮಾಡಿದ ಅರ್ಪಣೆಯನ್ನು ಭಗವಂತ ಸ್ವೀಕಾರ ಮಾಡಬೇಕೆಂದು ಅತ್ಯಂತ ಶ್ರದ್ಧಾ ಪೂರ್ವಕವಾಗಿ ವರ್ಧಂತಿ ಮಹೋತ್ಸವದ ಆಚರಣೆ ನಡೆಸಲಾಗುತ್ತದೆ. ಬಾಲಾಜಿಯ ವಿಗ್ರಹವು ಸ್ವರ್ಣಾಭರಣಗಳಿಂದ ಮತ್ತು ಚಿನ್ನದ ಕಿರೀಟದಿಂದ  ರಾರಾಜಿಸುತ್ತದೆ.  ಭಗವಂತ ತಮ್ಮ ಎಲ್ಲಾ ಸಮಸ್ಯಗಳ  ಪರಿಹಾರ ಮಾಡುತ್ತಿದ್ದು ಭಕ್ತಾಭಿಮಾನಿಗಳಿಗೆ ಇಲ್ಲಿನ ಭಗವಂತನ ಮೇಲಿರುವ ನಂಬಿಕೆ ವರ್ಷ ಕಳೆದಂತೆ ಹೆಚ್ಚೆಚ್ಚುತ್ತಿದ್ದು ಈ ಮಂದಿರವು ದಿನಕಳೆದಂತೆ ಸದ್ಭಕ್ತರ ಆಕರ್ಷಣೀಯ ಧಾರ್ಮಿಕ ಕೇಂದ್ರವಾಗಿ ಪರಿವರ್ತನೆ ಗೊಳ್ಳುತ್ತಿದೆ. ದೇವಸ್ಥಾನದ ಟ್ರಸ್ಟ್ ಕೂಡಾ ವಿವಿಧ ಸೇವೆಗಳಲ್ಲಿ ನಿರತವಾಗಿ ಆಥಿರ್üಕ ಸಂಕಷ್ಟದಲ್ಲಿರುವ ಸಮಾಜ ಬಾಂಧವರಿಗೆ ಶೈಕ್ಷಣಿಕ ನೆರವು ಮತ್ತು ವೈದ್ಯಕೀಯ ಸಹಾಯವನ್ನೂ ಮಾಡುತ್ತಿದೆ.

ಆ ಪ್ರಯುಕ್ತ ನಡೆಸಲ್ಪಡುವ ಈ ರಜತ ಸಡಗರದಲ್ಲಿ ನಾಡಿನ ಸಮಸ್ತ ಜಿಎಸ್‍ಬಿ ಬಂಧು-ಭಗಿನಿಯರು, ಸಭಾ ಸದಸ್ಯರು  ಮತ್ತು ಭಕ್ತಾಭಿಮಾನಿಗಳು ಆಗಮಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಿ ಶ್ರೀ ಹರಿಯ ಕೃಪೆಗೆ ಪಾತ್ರರಾಗುವಂತೆ ಜಿಎಸ್‍ಬಿ ಸಭಾ ನವಿ ಮುಂಬಯಿ ಅಧ್ಯಕ್ಷ ಎಸ್.ಆರ್ ಪೈ, ಕಾರ್ಯಾಧ್ಯಕ್ಷ ದೀಪಕ್ ಬಿ.ಶೆಣೈ ಗೌರವ ಕಾರ್ಯದರ್ಶಿ ವಸಂತ್ ಕುಮಾರ್ ಬಂಟ್ವಾಳ ಮತ್ತು ಕೋಶಾಧಿಕಾರಿ ಪ್ರೇಮಾನಂದ ಮಲ್ಯ ಹಾಗೂ ಪದಾಧಿಕಾರಿಗಳು ಆಡಳಿತ ಮಂಡಳಿ ಪರವಾಗಿ ಈ ಮೂಲಕ ವಿನಂತಿಸಿದ್ದಾರೆ.

ಕಲ್ಕಟ್ಟ ಮಸೀದಿಗೆ  ಕೂರತ್ ತಂಙಳ್ ಖಾಝಿಯಾಗಿ ಅಧಿಕಾರ ಸ್ವೀಕಾರ
ಮುಂಬಯಿ (ಉಳ್ಳಾಲ),ಜೂ.15:ಕಲ್ಕಟ್ಟ ಇಲ್ಯಾಸ್ ಜುಮುಅ ಮಸೀದಿಯ  ಖಾಝಿಯಾಗಿ  ದಕ್ಷಿಣ ಕನ್ನಡ ಜಿಲ್ಲೆ ಸಹಿತ ನೂರಾರು ಮೊಹಲ್ಲಾಗಳ ಖಾಝಿಯಾಗಿರುವ  ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್  ಕೂರತ್ ರವರನ್ನು ಖಾಝಿ ಸ್ವೀಕಾರ ಸಮಾರಂಭ ಕಲ್ಕಟ್ಟ ಮಸೀದಿ ವಠಾರದಲ್ಲಿ ನಡೆಯಿತು.
ಇಲ್ಯಾಸ್ ಜುಮಾ ಮಸೀದಿಯ ಖತೀಬ್ ಹಂಝ ಮದನಿ ಮಿತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಸಮಸ್ತ ಮುಶಾವರ ಉಪಾಧ್ಯಕ್ಷ ಉಸ್ತಾದುಲ್ ಅಸಾತೀದ್ ತಾಜುಶ್ಶರೀಅ ಎಮ್ ಅಲಿ ಕುಂಞೆ ಉಸ್ತಾದ್ ಖಾಝಿ ಸ್ವೀಕಾರ ಸಮಾರಂಭದ ಉಧ್ಘಾಟನೆ ಹಾಗೂ ಖಾಝಿ ಸಮರ್ಪಣೆಯನ್ನು ನೆರವೇರಿಸಿದರು

ಸುರಿಬೈಲ್ ದಾರುಲ್ ಅಶ್-ಅರಿಯ್ಯಾ ಸಂಸ್ಥೆಯ ಮ್ಯಾನೇಜರ್  ಮುಹಮ್ಮದಾಲಿ ಸಖಾಫಿ ಸಂದೇಶ ಭಾಷಣ ಮಾಡಿದರು.
 ಮಂಜನಾಡಿ ಮುದರ್ರಿಸ್ ಅಹ್ಮದ್ ಬಾಖವಿ, ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿ  ಅಧ್ಯಕ್ಷ  ಪಿ.ಐ ಮನ್ಸೂರು ರಕ್ಷಿದಿ ,ಕೆ.ಎಚ್ ಇಸ್ಮಾಯಿಲ್ ಸಅದಿ ಕಿನ್ಯ, ಅಬ್ದುಲ್ ಮಜೀದ್ ಹಾಜಿ ಉಚ್ಚಿಲ. ಅಲ್ ಮದೀನ ಮುಹಮ್ಮದ್ ಕುಂಞ ಅಂಜದಿ. ಶರೀಫ್ ಸಅದಿ ಕಿನ್ಯ. ಹಸ್ಸನ್ ಸಅದಿ ಅಸೈ. ಅಬ್ದುರ್ರಝಾಖ್ ಸಅದಿ ವಿಟ್ಲ.ಇಸ್ಹಾಖ್ ಸಅದಿ ಸೆರ್ಕಳ.
ಇಲ್ಯಾಲ್ ಜುಮಾ ಮಸೀದಿಯ ಉಪಾಕ್ಷರಾದ ಎ.ಎಮ್ ಕುಂಞ ಬಾವ ಹಾಜಿ. ಕಂಡಿಕ್ಕ ಮಹ್ಮೂದ್ ಹಾಜಿ. ಕೋಶಾಧಿಕಾರಿ ಪೊಡಿಯಬ್ಬ ಹಾಜಿ.
ರಿಫಾಯಿಯ ಮದರಸ ಉಸ್ತುವಾರಿ
ಅಶ್ರಫ್ ಕಟ್ಟೆ.ಇಬ್ರಾಹಿಮ್ ಮದನಿ. ಕೆ.ಎಮ್ ಮೋನು.  ಸಿದ್ದೀಖ್ ಮುಸ್ಲಿಯಾರ್ ಬಹರೈನ್. ಸಿದ್ದೀಖ್ ಸಖಾಫಿ ಬಶೀರ್ ಉರುಮಣೆ.ಕೆ ಐ.ಅಬ್ದರ್ರಝಾಕ್ ಉಪಸ್ಥಿತರಿದರು.

 ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿದರು. ಕಾರ್ಯದರ್ಶಿ
ಟಿ.ಎಚ್ ಹಸೈನಾರ್ ವಂದಿಸಿದರು.

ಎಸ್.ಎಸ್.ಎಲ್.ಸಿ: ಮರು ಮೌಲ್ಯಮಾಪನದಲ್ಲಿ ಹೆಚ್ಚಾದ ಅಂಕಗಳು

ಉಜಿರೆ: ಧರ್ಮಸ್ಥಳದಲ್ಲಿರುವ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ ರಕ್ಷಿತಾ ಬೇಕಲ್ ಮೊದಲ ಮೌಲ್ಯಮಾಪನದಲ್ಲಿ ಶೇ. 84.32 ಅಂಕ ಗಳಿಸಿದ್ದು ಮರು ಮೌಲ್ಯ ಮಾಪನದಲ್ಲಿ ಸಮಾಜ ವಿಜ್ಞಾನದಲ್ಲಿ ಏಳು ಅಂಕಗಳನ್ನು ಹೆಚ್ಚು ಪಡೆದು ಶೇ. 85.44 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳಾ, ಎಂ.ವಿ. ತಿಳಿಸಿದ್ದಾರೆ.

ಇದೇ ಶಾಲೆಯ ವಿದ್ಯಾರ್ಥಿನಿ ಅನನ್ಯ ಮರು ಮೌಲ್ಯಪನದಲ್ಲಿ ಗಣಿತದಲ್ಲಿ ಒಂದು ಅಂಕ ಹೆಚ್ಚು ಪಡೆದರೆ, ಹಾಗೂ ಸಂಜನಾ, ವಿಜ್ಞಾನದಲ್ಲಿ ಐದು ಅಂಕಗಳನ್ನು ಹೆಚ್ಚುವರಿಯಾಗಿ ಪಡೆದಿರುತ್ತಾರೆ ಎಂದು ಮುಖ್ಯೋಪಾಧ್ಯಾಯಿನಿ ತಿಳಿಸಿದ್ದಾರೆ.

ಪಟ್ಲ ಫೌಂಡೇಶನ್ ಟ್ರಸ್ಟ್‍ನಿಂದ ಧನ್ಯೋತ್ಸವ ಕಾರ್ಯಕ್ರಮ
ಮುಂಬಯಿ (ಮಂಗಳೂರು) ಜೂ.14: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‍ನ ಆಶ್ರಯದಲ್ಲಿ ಮಂಗಳೂರು ಹೊರ ವಲಯದ ಅಡ್ಯಾರ್ ಗಾರ್ಡ್‍ನಲ್ಲಿ ಇತ್ತೀಚೆಗೆ ಪಟ್ಲ ಸಂಭ್ರಮ ನಡೆಸಲಾಗಿದ್ದು ಇದರ ಯಶಸ್ಸಿಗೆ ಶ್ರಮಿಸಿದ ಘಟಕಗಳ ಪದಾಧಿಕಾರಿಗಳು, ಸದಸ್ಯರಿಗೆ ಧನ್ಯೋತ್ಸವ ಕಾರ್ಯಕ್ರಮ  ಇಂದಿಲ್ಲಿ ಬೆಂದೂರ್‍ವೆಲ್‍ನ ಅಭಿಮಾನ್ ಟೆಕ್ಸಸ್ ಕಮ್ಯುನಿಟಿ ಹಾಲ್‍ನಲ್ಲಿ ಆಯೋಜಿಸಲಾಗಿತ್ತು.

ಪಟ್ಲ ಸಂಭ್ರಮದ ಮೊದಲು ಕಲಾವಿದರಿಗೆ  ಹಮ್ಮಿಕೊಂಡಿದ್ದ ಕ್ರೀಡಾಕೂಟವು ಯಶಸ್ವಿಯಾಗಿ ನಡೆದಿದ್ದು ಪಟ್ಲ  ಸಂಭ್ರಮದ ಯಶಸ್ಸಿಗೆ ಇದು ಪೂರಕವಾಯಿತು. ಯಶಸ್ಸಿಗೆ ಶ್ರಮಿಸಿದ ಎಲ್ಲಾ ಘಟಕಗಳ ಪದಾಧಿಕಾರಿಗಳು ಸದಸ್ಯರು, ಕಲಾವಿದರು, ಮಹಿಳಾ ಘಟಕಗಳು ನಿರಂತರವಾಗಿ ಕೆಲಸ ಮಾಡಿದ ಪರಿಣಾಮ ಪಟ್ಲ ಸಂಭ್ರಮ ಅದ್ದೂರಿಯಾಗಿ ನೆರವೇರಿತು ಮುಂದಿನ ವರ್ಷ ಪಟ್ಲ ಸಂಭ್ರಮದ 5ನೇ ವರ್ಷಾಚರಣೆ ಅರ್ಥಪೂರ್ಣವಾಗಿ  ನಡೆಸಲು ಕಾರ್ಯ ಯೋಜನೆ  ರೂಪಿಸಲಾಗುವುದು ಎಂದು ಪಟ್ಲ ಫೌಂಡೇಶನ್  ಟ್ರಸ್ಟ್‍ನ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಟ್ಲ ಫೌಂಡೇಶನ್‍ನ ಮಂಗಳೂರು  ಘಟಕದ ಸಂಚಾಲಕ  ನಿಟ್ಟೆ ಗುತ್ತು  ರವಿರಾಜ ಶೆಟ್ಟಿ, ಅಮೋಘ ಶಿಪ್ಪಿಂಗ್‍ನ ಮಾಲಕ ನಿತ್ಯಾನಂದ ಶೆಟ್ಟಿ, ಸವಣೂರು ಸೀತಾರಾಮ ರೈ, ಭುಜಬಲಿ ಧರ್ಮಸ್ಥಳ, ಲಕ್ಷ್ಮೀಶ ಭಂಡಾರಿ, ಜಯರಾಮ ಶೇಖ ಕೇಂದ್ರೀಯ ಘಟಕದ ಉಪಾಧ್ಯಕ್ಷ ಮನುರಾವ್, ಪ್ರಧಾನ ಕಾರ್ಯದರ್ಶಿ  ಪುರುಷೋತ್ತಮ  ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಜತೆ ಕಾರ್ಯದರ್ಶಿ  ರಾಜೀವ ಪೂಜಾರಿ ಕೈಕಂಬ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಜಗನ್ನಾಥ್ ಶೆಟ್ಟಿ ಬಾಳ, ದುರ್ಗಾಪ್ರಕಾಶ್ ಈರೋಡ್, ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ, ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ  ಮೊದಲಾದವರು ಉಪಸ್ಥಿತರಿದ್ದರು.

ಸರಪಾಡಿ  ಅಶೋಕ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ,  ಪ್ರದೀಪ್ ಆಳ್ವ  ಕದ್ರಿ, ಪಡು ಶರತ್ ಶೆಟ್ಟಿ, ಕದ್ರಿ ನವನೀತ ಶೆಟ್ಟಿ, ಮಹವೀರ್ ಪಾಂಡಿ ಮತ್ತಿತರÀರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕೇಂದ್ರೀಯ ಘಟಕದ  ಗೌರವಾಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಬದಲಾಯಿಸುವಂತೆ ಸಭೆಯಲ್ಲಿ  ತೀರ್ಮಾನ ಕೈಗೊಳ್ಳಲಾಯಿತು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಸ್ವಾಗತಿಸಿ, ವಂದಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Nirmala Thonse organizes Awareness Campaign agains
View More

Veez Konkani Special Issue on Fr. Mahesh D’SouzaVeez Konkani Special Issue on Fr. Mahesh D’Souza
An AppealAn Appeal
Veez Konkani Illustrated Weekly e-Magazine # 94Veez Konkani Illustrated Weekly e-Magazine # 94
Congratulations to Joyce Dsouza, KemmannuCongratulations to Joyce Dsouza, Kemmannu
Best Wishes To Ellie Fernandes & Mellisa SaldanhaBest Wishes To Ellie Fernandes & Mellisa Saldanha
2 New Independent Houses for sale near Rice Mill Road, Nejar.2 New Independent Houses for sale near Rice Mill Road, Nejar.
Milarchi Laram - Issue Sep 2019Milarchi Laram - Issue Sep 2019
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India