ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯಿಂದ 10ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ


Media Release

Write Comment     |     E-Mail To a Friend     |     Facebook     |     Twitter     |     Print


ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯಿಂದ 10ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

ಮುಂಬಯಿ: ಲಕ್ಷ್ಮೀನಾರಾಯಣರ ಜೋಡಿಯು ಯಾವತ್ತೂ ವಿಚ್ಛೇದನವಾಗದ ಜೋಡಿಯಾಗಿದ್ದು ಕೇವಲ ಲಕ್ಷ್ಮಿಯನ್ನು ಪೂಜಿಸಿದರೆ ಅದು ಫಲಪ್ರದವಾಗುವುದಿಲ್ಲ. ಅದುದರಿಂದ  ಲಕ್ಷ್ಮೀನಾರಾಯಣರನ್ನು  ಒಂದಾಗಿ ಪೂಜಿಸಿದರೆ ಅದರಿಂದ ಪೂರ್ಣ ಫಲ ಸಿಗುತ್ತದೆ.  ವರಮಹಾಲಕ್ಷ್ಮಿ ಎಂದರೆ ವರನಿಂದ ಕೂಡಿದಂತ ಮಹಾಲಕ್ಷ್ಮಿ ಎಂದರ್ಥ. ಕಳೆದ ಹತ್ತು ವರ್ಷಗಳಿಂದ ನೀವೆಲ್ಲರೂ ವರಮಹಾಲಕ್ಷ್ಮಿ ವ್ರತಾಚರಣೆಯನ್ನು ಬಹಳ ಶ್ರದ್ಧಾಭಕ್ತಿಯಿಂದ ಮಾಡುತ್ತಿದ್ದೀರಿ.  ಮಹಾನಗರದಲ್ಲಿ ತುಳು ಕನ್ನಡಿಗರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಉನ್ನತ ಮಟ್ಟಕ್ಕೇರಿದ್ದು ಮತ್ತಷ್ಟು ಬೆಳೆಯುವಂತಾಗಲಿ ಎಂದು  ಕಟೀಲು ಕ್ಷೇತ್ರದ ಶ್ರೀ ಹರಿನಾರಾಯಣ ಆಸ್ರಣ್ಣರು ನುಡಿದರು.

ಆ 18 ರಂದು ಮಲಾಡ್ ಪೂರ್ವದ ಬಚ್ಚಾನಿ  ನಗರ ಚಿಲ್ಡ್ರನ್ಸ್ ಅಕಾಡೆಮಿಯ ಸಭಾಗೃಹದಲ್ಲಿ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಹತ್ತನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯ ಧಾರ್ಮಿಕ ಸಭೆಯಲ್ಲಿ ಭಕ್ತಾಭಿಮಾನಿಗಳಿಗೆ ಆಶೀರ್ವಚನ ನೀಡುತ್ತಾ ಯಕ್ಷಗಾನ ಅದು ಶ್ರೇಷ್ಠವಾದ ಕಲೆ. ಅಂತಹ  ಯಕ್ಷಗಾನವನ್ನು ಈ ಸಮಿತಿಯ ಸದಸ್ಯರೆಲ್ಲರೂ ಸೇರಿ ಗೆಜ್ಜೆ ಕಟ್ಟಿ ಪ್ರದರ್ಶನವನ್ನು ನೀಡಿದ್ದೀರಿ. ಯಕ್ಷಗಾನವನ್ನು ಕಲಿಯುವ ಇಲ್ಲವೇ ಕಲಿಸುವ ಮೂಲಕವಾಗಿ ಮುಂಬಯಿ ಮಹಾನಗರದಲ್ಲಿ ಕಲೆ-ಸಂಸ್ಕೃತಿ ಇಂದಿಗೂ ಜೀವಂತವಾಗಿದೆ ಎಂದರು.

ಸಭೆಗೆ ಗೌರವ ಅತಿಥಿಯಾಗಿ ಆಗಮಿಸಿದ ಉತ್ತರ ಮುಂಬಯಿ ಸಂಸದರಾದ ಗೋಪಾಲ್ ಶೆಟ್ಟಿ ಅವರು ಮಾತನಾಡುತ್ತಾ  ಸಾವಿರಾರು ಸಂಖ್ಯೆಯಲ್ಲಿ ತುಳು ಕನ್ನಡಿಗರನ್ನು ಒಂದುಗೂಡಿಸಿ ನಮ್ಮ ಧಾರ್ಮಿಕ ಆಚರಣೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಇದು ಉತ್ತಮ ಕಾರ್ಯಕ್ರಮವಾಗಿದೆ. ತುಳು  ಕನ್ನಡಿಗರು ಮಾಡುತ್ತಿರುವ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತುಂಬಾ ಅಭಿಮಾನವಾಗುತ್ತಿದೆ ಎಂದರು.

ನಗರದ ತುಂಗಾ ಹಾಸ್ಪಿಟಲ್ ಇದರ ನಿರ್ದೇಶಕರಾದ ರಾಜೇಶ್ ಶೆಟ್ಟಿ ಅವರು ಮಾತನಾಡಿ ಜೀವನದಲ್ಲಿ ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ  ಕಾಳಜಿಯನ್ನು ವಹಿಸಿಕೊಳ್ಳಬೇಕು. ಇಂತಹ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಕ್ಕಳಿಗೆ ನಮ್ಮ ನಾಡಿನ ಧಾರ್ಮಿಕ ಆಚರಣೆ ಸಂಸ್ಕೃತಿ-ಕಲೆ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಅಂದು ಬೆಳಿಗ್ಗೆ ಸದಾನಂದ ಕೋಟ್ಯಾನ್ ಮತ್ತು ತಂಡದವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ 10ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯ ಉದ್ಘಾಟನಾ ಸಮಾರಂಭ ನಡೆದಿದ್ದು  ಮಲಾಡ್ ಕುರಾರ್ ವಿಲೇಜ್ ಶ್ರೀ ಶನೀಶ್ವರ ದೇವಸ್ಥಾನದ ವೇದಮೂರ್ತಿ ರಾಘವೇಂದ್ರ ತುಂಗ ಭಟ್, ಮಲಾಡ್ ಪೂರ್ವ ತಾನಾಜಿ ನಗರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಾಘವೇಂದ್ರ ಭಟ್, ಸೂಡ, ಮಲಾಡ್ ಪೂರ್ವ ತತಾಸ್ತು ಪೌಂಡೇಶನ್ ನ ಅಧ್ಯಕ್ಷರಾದ ವೇದಮೂರ್ತಿ ಸತೀಶ್ ಭಟ್, ಮಲಾಡ್ ಪೂರ್ವ ಶಿವಭವಾನಿ ಶಂಕರ್ ದೇವಸ್ಥಾನದ ಸದಾಶಿವ ಆಚಾರ್ಯ, ಮಲಾಡ್ ಪೂರ್ವ ಕುರಾರ್ ಶ್ರೀ ಮೂಕಾಂಭಿಕ ದೇವಸ್ಥಾನದ ವೇದಾನಂದ ಸ್ವಾಮೀಜಿ, ಕುರಾರ್ ಶ್ರೀ ಮಹಾಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ರವಿ ಸ್ವಾಮೀಜಿ, ಇರಾನಿ ಚಾಲ್ ಶ್ರೀ ಶನೀಶ್ವರ ದೇವಸ್ಥಾನದ ಎಸ್. ಯು. ಬಂಗೇರ (ಭುವಾಜಿ), ಮಾಲಾಡ್ ಪೂರ್ವ ಗೋವಿಂದ ನಗರ ಶ್ರೀ ಅಂಬಿಕಾ ದೇವಸ್ಥಾನದ ಸಂತೋಷ್ ದೇವಾಡಿಗ ಉಪಸ್ಥಿತರಿದ್ದರು.

ಯಕ್ಷಗುರು ನಾಗೇಶ್ ಪೊಳಲಿ ಇವರ ನಿರ್ದೇಶನದಲ್ಲಿ ಸಮಿತಿಯ ಸದಸ್ಯರಿಂದ "ಮಹಿಷ ಮರ್ಧಿನಿ" ಯಕ್ಷಗಾನ ಪ್ರದರ್ಶನಗೊಂಡಿತು. ಬಾಗವತಿಕೆಯಲ್ಲಿ ಗಣೇಶ್ ಮಯ್ಯ ಗಣೇಶ್ ಮಯ್ಯ ವರ್ಕಾಡಿ, ಚೆಂಡೆ-ಮದ್ದಳೆಯಲ್ಲಿ ದಯಾನಂದ ಶೆಟ್ಟಿಗಾರ್ ಮೀಜಾರ್ ಮತ್ತು ಶ್ರೀಧರ್ ಎಡಮಲೆ ಸಹಕರಿಸಲಿರುವರು. ಇದಕ್ಕೆ ರವೀಂದ್ರನಾಥ್ ಭಂಡಾರಿ, ಬಾಬು ಶೆಟ್ಟಿ ಪೆರಾರ, ಅಶೋಕ ಶೆಟ್ಟಿ ಪೆರ್ಮುದೆ, ಸಿಎ ಸುರೇಂದ್ರ ಶೆಟ್ಟಿ, ಶೇಖರ ಪೂಜಾರಿ ಬ್ರಹ್ಮಾವರ, ಶ್ರೀನಿವಾಸ ಸಾಫಲ್ಯ, ಹರೀಶ್ ಎಸ್. ಶೆಟ್ಟಿ (ಮಲಾಡ್ ಕನ್ನಡ ಸಂಘ) ಇವರು ಪ್ರಾಯೋಜಕರಾಗಿ ಸಹಕರಿಸಿದ್ದಾರೆ.

ಮಧ್ಯಾಹ್ನದ ಸಾಂಸ್ಕೃತಿಕ ಕಾರ್ಯಕ್ರಮದ  ಗೌರವ ಅತಿಥಿಗಳಾಗಿ ಮುಂಬಯಿ ಬಿಲ್ಲವರ ಅಸೋಷಿಯೇಶನಿನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಉಳ್ಳಾಲ್, ರಾಜಪುರ ಸಾರಸ್ವತ್ ಮಹಿಳಾ ಮಂಡಳಿಯ ಕಾರ್ಯಾಧ್ಯಕ್ಷೆ ಸುಮಾ ನಾಯಕ್, ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಶುಭ ಎಸ್. ಆಚಾರ್ಯ ಉಪಸ್ಥಿತರಿದ್ದರು.

ಯುವಪ್ರತಿಭೆಗಳಾದ ಪ್ರೀಯಾ ಡಾನ್ಸ್ ಸ್ಟುಡಿಯೋ, ಕುರಾರ್ ನ ಕುಮಾರಿ ಪ್ರೀಯಾ ಪೂಜಾರಿ, ರಾಷ್ಟ್ರಮಟ್ಟದ ಸಿಬಿಸಿಐ ಅವಾರ್ಡ್ ವಿಜೇತ ವಿಕ್ರಮ್ ಪಾಟ್ಕರ್ ಮತ್ತು ರಾಜ್ಯ ಮಟ್ಟದ ಜೂಡೋ ಕುರಶ್ ವಿಜೇತ ಸೂರಜ್ ಮೊಗವೀರ ಇವರನ್ನು ಸನ್ಮಾನಿಸಲಾಯಿತು. ಈ ಸಮಾರಂಭವು ಕೇವಲ ಯುವ ಜನಾಂಗಕ್ಕೆ ಮೀಸಲಾಗಿದ್ದು ಗೌರವ ಅತಿಥಿಗಳಾಗಿ ದಂತ ತಜ್ನ ಡಾ. ಶಶಿನ್ ಕೆ. ಆಚಾರ್ಯ, ನಟ, ನಿರ್ದೇಶಕ ಅತೇಶ್ ಪೂಜಾರಿ, ಪೇಸ್ ಆಫ್ ತುಳುನಾಡು 2019 ವಿಜೇತೆ ಮೇಘಾ ಶೆಟ್ಟಿ, ನಲ್ಲಾಸೋಪಾರ ಕುಮಾರಿ ಸೃಷ್ಟಿ ಎಸ್. ಶೆಟ್ಟಿ, ಕುಮಾರಿ ತೃತಿ ಆರ್. ಶೆಟ್ಟಿ, ರಾಜ್ಯ ಮಟ್ಟದ ನೃತ್ಯ ಕಲಾವಿದೆ ಸಾಕ್ಷಿ ಪಿ. ಶೆಟ್ಟಿ, ಟೈಮ್ಸ್ ಎನ್ ಐ ಇ ಸ್ಟಾರ್ ಕರೆಸ್ಪೋಡೆಂಟ್ ವಿಜೇತೆ ದಿವ್ಯಾ ಎಸ್. ಸಾಫಲ್ಯ ಉಪಸ್ಥಿತರಿದ್ದರು. ಆ ನಂತರ ಸಂಜೆ 5.30 ರ ತನಕ ಸ್ಥಳೀಯ ಮಕ್ಕಳಿಂದ ಮತ್ತು ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ನೃತ್ಯ ವೈಭವ ನಡೆಯಿತು.

ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ , ಕಾಂದಿವಲಿ ಅವೆನ್ಯೂ ಹೋಟೇಲಿನ ರಘುರಾಮ ಶೆಟ್ಟಿ, ಬಂಟರ ಸಂಘ ಮೀರಾ-ಭಾಯಂಧರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗಿರೀಶ್ ಶೆಟ್ಟಿ ತೆಲ್ಲಾರ್, ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಸಾಲ್ಯಾನ್, ಕುಲಾಲ ಸಂಘ ಮುಂಬಯಿಯ ಪ್ರಧಾನ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್, ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್. ವಾಗ್ಲೆ,  ಯುವ ವಿಭಾಗದ ಕಾರ್ಯಾಧ್ಯಕ್ಷೆ ರಶ್ಮಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಗಣ್ಯರು ಶ್ರೀ ವರಮಹಾಲಕ್ಷೀ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ ಎನ್. ಶೆಟ್ಟಿ,  ಸಂಚಾಲಕರಾದ ಬಿ. ದಿನೇಶ್ ಕುಲಾಲ್, ಕೋಶಾಧಿಕಾರಿ ಜಗನ್ನಾಥ್   ಎಚ್. ಮೆಂಡನ್, ದಶಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಕೆ. ಪೂಜಾರಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಪೂಜಾರಿ ಬ್ರಹ್ಮಾವರ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸಾಣೂರು ಸಾಂತಿಂಜ ಜನಾರ್ಧನ ಭಟ್ ಇವರನ್ನು ಸನ್ಮಾನಿಸಿದರು

ಕಾರ್ಯಕ್ರಮವನ್ನು ಬಾಬಾಪ್ರಸಾದ್ ಅರಸ್, ರತ್ನಾ ದಿನೇಶ್ ಕುಲಾಲ್ ಮತ್ತು ಪ್ರಣೀತಾ ವರುಣ್ ಶೆಟ್ಟಿ ನಿರ್ವಹಿಸಿದರು.  ಭಾರತಿ ಆಚಾರ್ಯ ಅವರ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಆ ನಂತರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸಾಣೂರು ಸಾಂತಿಂಜ ಜನಾರ್ಧನ ಭಟ್ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯು ನಡೆ್ಯಿತು.  ಜರಿಮರಿಯ ದಿನೇಶ್ ಕೋಟ್ಯಾನ್ ಇವರು ಚೆಂಡೆ ವಾದ್ಯದಲ್ಲಿ ಸಹಕರಿಸಿದರು.

ಈ ಸಮಾರಂಭಕ್ಕೆ ನಲಾಸೋಪಾರ ಗ್ರಾಂಡ್ ರೀಜೆನ್ಸಿ ಹೋಟೇಲಿನ ಶಶಿಧರ ಕೆ. ಶೆಟ್ಟಿ, ನಿತ್ಯಾನಂದ ಪೂಜಾರಿ, ಡಾ. ಎಂ. ಜೆ. ಪ್ರವೀಣ್ ಭಟ್, ಸತೀಷ್ ಭಟ್, ಪ್ರನೀತಾ ವರುಣ್ ಶೆಟ್ಟಿ, ಹರೀಶ್ ಶೆಟ್ಟಿ, ಸಂತೋಷ್ ಕೆ ಪೂಜಾರಿ, ಉಮೇಶ್ ಅಂಚನ್ ಮಾರ್ನಾಡ್, ಐತು ಆರ್. ಮೂಲ್ಯ, ಮುಂಡ್ಕೂರು, ದಿನೇಶ್ ಕಾಮತ್ ಮೊದಲಾದವರು ವಿವಿಧ ರೀತಿಯಲ್ಲಿ ಪ್ರಾಯೋಜಕರಾಗಿ ಸಹಕರಿಸಿದ್ದಾರೆ.

ಸಮಿತಿಯ ಉಪ ಕಾರ್ಯಾಧ್ಯಕ್ಷರುಗಳಾದ ಕುಮರೇಶ್ ಆಚಾರ್ಯ,  ಸಿದ್ದರಾಮ ಗೌಡ, ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ನಿತ್ಯಾನಂದ ಕೋಟ್ಯಾನ್, ಉಪ ಕಾರ್ಯಾಧ್ಯಕ್ಷರುಗಳಾದ ಶೈಲೇಶ್ ಪೂಜಾರಿ, ದಿನೇಶ್ ಪೂಜಾರಿ, ಮಹಾಬಲ ಪೂಜಾರಿ, ಕಾರ್ಯದರ್ಶಿ ದಿನೇಶ್ ಕುಂಬ್ಳೆ, ಜೊತೆ ಕಾರ್ಯದರ್ಶಿಗಳಾದ ಸುಂದರ ಪೂಜಾರಿ, ಸನತ್ ಪೂಜಾರಿ,  ಪೂಜಾ ಸಮಿತಿಯ ಸದಸ್ಯರಾದ ಗೋಪಾಲ್ ಎಂ ಪೂಜಾರಿ, ರಾಮ್ ಪೂಜಾರಿ, ವಿನಯ್ ಕುಲಾಲ್, ಜಯ ಪೂಜಾರಿ, ಸದಾನಂದ ಕೋಟ್ಯಾನ್, ಉಮೇಶ್ ಸಿ ಪೂಜಾರಿ, ಬಾಲಕೃಷ್ಣ ಅಮೀನ್,ಮಹಿಳಾ ವಿಭಾಗದ  ಸಂಚಾಲಕಿ ಮೋಹಿನಿ ಜೆ ಶೆಟ್ಟಿ, ಉಪ ಕಾರ್ಯಾಧ್ಯಕ್ಷರುಗಳಾದ ರತ್ನ ಡಿ. ಕುಲಾಲ್, ಲಲಿತ ಎಸ್ ಗೌಡ, ಶೀಲ ಎಂ ಪೂಜಾರಿ, ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯ, ಜೊತೆ ಕಾರ್ಯದರ್ಶಿಗಳಾದ ಗೀತಾ ಜೆ ಮೆಂಡನ್, ಕೃಪಾ ಜೆ ಮೂಲ್ಯ, ಸದಸ್ಯರಾದ ವಿಜಯಲಕ್ಷ್ಮಿ ಯು ಸಾಲ್ಯಾನ್, ಶೋಭಾ ಎಲ್ ರಾವ್, ಲತಾ ಎಸ್ ಪೂಜಾರಿ, ಕುಸುಮಾ ಬಂಜನ್, ಗಿರಿತಾ ಎಸ್ ಮರಕಲ, ಅನಿತಾ ಶೆಟ್ಟಿ, ಕುಸುಮಾ ಶೆಟ್ಟಿ, ಪುಷ್ಪಾ ಶೆಟ್ಟಿ, ಭಾರತಿ ಕೋಟ್ಯಾನ್, ಪುಷ್ಪಲತಾ ಸಾಲ್ಯಾನ್, ತನುಜಾ ಜಿ ಪೂಜಾರಿ, ಶ್ಯಾಮಲಾ ಪೂಜಾರಿ, ವಿದ್ಯಾ ಬಿ ಸನಿಲ್, ಸುಮಿತ್ರಾ ಎಸ್ ಪೂಜಾರಿ, ಆಶಾ ಯು ಅಂಚನ್. ಸುಮಲತಾ ಕುಲಾಲ್, ಆಶಾ ಅರ್ ಪೂಜಾರಿ, ಪದ್ಮಾವತಿ ಆರ್ ಪೂಜಾರಿ, ಲತಾ ಜೆ ಅಂಚನ್, ಮೋಹಿನಿ ಬಿ ಚೌಟ, ಶಾಂಭವಿ ಮೂಲ್ಯ,  ಶೀತಲ್ ಕೋಟ್ಯಾನ್, ಯಶೋದಾ ರೈ,  ಯಶೋಧಾ ಡಿ. ಕುಂಬ್ಲೆ, ಭವಾನಿ ಪಿ ಪೂಜಾರಿ, ಲೀಲಾ ಜೆ ಪೂಜಾರಿ, ಜಯಲಕ್ಷ್ಮಿ ನಾಯಕ್, ಜಯಂತಿ ಸಾಲ್ಯಾನ್, ಸುನಂದ ವೈ. ಬಂಗೇರ, ನಳಿನಿ ಕರ್ಕೇರ, ಹರಿಣಾಕ್ಷಿ ಮೂಲ್ಯ, ಸುನಿತಾ ಭಂಡಾರಿ, ಶಶಿಕಲಾ ಕೋಟ್ಯಾನ್, ಸುಜಾತ ಗೌಡ, ಆಕೃತಿ ಗೌಡ, ಶೃತಿ ಗೌಡ, ಸುಧಾ ಗೌಡ, ಮೀನಾ ಗೌಡ, ಸುಂದರ ಗೌಡ, ಮನಿ ಗೌಡ, ರಾಧಾ ಗೌಡ, ಶೈಲಜಾ ಗೌಡ, ಉಷಾ ಗೌಡ, ರಾಜಶ್ರೀ ಪೂಜಾರಿ, ಶ್ರುತಿ ನಾಯಕ್, ವಿದ್ಯಾ ನಾಯಕ್, ಪ್ರಮೀಳಾ ಕುಲಾಲ್, ಸುಲೋಚನಾ ಬಂಜನ್, ಶುಭಾ ಪೂಜಾರಿ ವಸಂತಿ ಬಂಗೇರ, ಶುಭಲಕ್ಷ್ಮಿ, ರತ್ನ ಜೆ ಪೂಜಾರಿ, ಶೋಭಾ ಪೂಜಾರಿ, ಜಯಶ್ರೀ ಪೂಜಾರಿ, ವಾಣಿ ರಾವ್, ಗೀತಾ ಜತ್ತನ್, ಸುರೇಖಾ ಶೆಟ್ಟಿಯಾನ್, ಚಂದ್ರಕಲಾ ಪೂಜಾರಿ,  ಅಮೃತಾ ಹೆಗ್ಡೆ, ಯಶೋದಾ ಆರ್ ಪೂಜಾರಿ, ಭಾರತಿ ಎಸ್ ಆಚಾರ್ಯ, ಶ್ರುತಿ ಎಸ್ ಪೂಜಾರಿ, ಯುವ ವಿಭಾಗದ  ಸಂಚಾಲಕಿ ಪ್ರಣಿತಾ ವಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷರುಗಳಾದ ದಿವ್ಯ ಪೂಜಾರಿ, ಸುದೀಪ್ ಪೂಜಾರಿ, ನವೀನ್ ಸಾಲ್ಯಾನ್,  ಕಾರ್ಯದರ್ಶಿ ಸೌಮ್ಯ ಮೆಂಡನ್, ಜೊತೆ ಕಾರ್ಯದರ್ಶಿಗಳಾದ ದಿಶಾ ಕರ್ಕೇರ, ಯೋಗೇಶ್ವರಿ ಗೌಡ ಮತ್ತು  ಉಪಸಮಿತಿಗಳ ಇತರ ಎಲ್ಲಾ ಸದಸ್ಯರುಗಳು ಸಹಕರಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Nirmala Thonse organizes Awareness Campaign agains
View More

https://issuu.com/austinprabhu/docs/____________111https://issuu.com/austinprabhu/docs/____________111
KEMMANNU CHURCH - Weekly Announcements.KEMMANNU CHURCH - Weekly Announcements.
Milarchi Laram - Issue Jan 2020Milarchi Laram - Issue Jan 2020
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India