ಬ್ರಹ್ಮಾವರದಿಂದ ಚೇರ್ಕಾಡಿ  ರಸ್ತೆ ಚತುಷ್ಪಥ ಸಭೆ


Richard D’Souza
Kemmannu News Network, 10-09-2019 08:28:07


Write Comment     |     E-Mail To a Friend     |     Facebook     |     Twitter     |     Print


ಬ್ರಹ್ಮಾವರದಿಂದ ಚೇರ್ಕಾಡಿ ವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಬಿಡುಗಡೆಗೊಂಡ ಅನುದಾನದಲ್ಲಿ ರಸ್ತೆ ಕಾಮಗಾರಿ ಶೀಘ್ರವಾಗಿ ಆರಂಭಿಸುವ ನಿಟ್ಟಿನಲ್ಲಿ ರಸ್ತೆಬದಿ ಮರ ತೆರವು ಹಾಗೂ ಭೂಸ್ವಾದಿನ ಕುರಿತು ಸಾರ್ವಜನಿಕರ ಅಭಿಪ್ರಾಯ ದಿನಾಂಕ 9 - 9 - 2019 ರಂದು ಆರೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉಡುಪಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಇವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ ಜರುಗಿತು.

 ರಸ್ತೆ ಇಕ್ಕೆಲಗಳಲ್ಲಿ ಇರುವ ಮರಗಳ ಕುರಿತು ಅರಣ್ಯಾಧಿಕಾರಿಯಿಂದ ಮಾಹಿತಿಯನ್ನು ಪಡೆದುಕೊಂಡರು ಸಣ್ಣ ಮರಗಳನ್ನು ಸರಕಾರಿ ಸ್ಥಳಕ್ಕೆ ಸ್ಥಳಾಂತರಿಸುವ ಮತ್ತು ಗ್ರಾಮ ಪಂಚಾಯತ್ ನ ನೇತೃತ್ವದಲ್ಲಿ ಒಂದು ಮರ ಕಡಿದರೆ 25 ಗಿಡ ನೆಡುವ ಯೋಜನೆಯೊಂದಿಗೆ, ಅಕೇಶಿಯ ಮತ್ತು ಕಾಟುಮರಗಳ ಬದಲು ಉತ್ತಮ ಜಾತಿಯ ಮರಗಳನ್ನು ನೆಡುವ ನಿರ್ಣಯವನ್ನು ಕೈಗೊಂಡು ಮರ ತೆರವುಗೊಳಿಸಿ ರಸ್ತೆ ಅಭಿವೃದ್ಧಿಪಡಿಸುವ ಪ್ರಸ್ತಾವನೆಗೆ ಸರ್ವಾನುಮತದಿಂದ ಸಾರ್ವಜನಿಕರು ಒಪ್ಪಿಗೆ ನೀಡಿದರು.

ರಸ್ತೆ ಬದಿಗಳಲ್ಲಿ ಪಂಚಾಯತ್ ಗಳ ನೀರು ಟ್ಯಾಂಕ್, ನೀರು ಸರಬರಾಜು ಪೈಪ್‌ಲೈನ್, ಟ್ರಾನ್ಸ್ಫಾರ್ಮರ್ ವಿದ್ಯುತ್ ಕಂಬಗಳು, ಬೋರ್ವೆಲ್ ಗಳು ಇದ್ದು ಮೂಲಭೂತ ಸೌಕರ್ಯಗಳನ್ನು ಪ್ರಥಮ ಆದ್ಯತೆಯಲ್ಲಿ ಸ್ಥಳಾಂತರಿಸಲು ಮತ್ತು ಈ ಬಗ್ಗೆ ವಿವರವಾದ ಮಾಹಿತಿಯನ್ನು ತಕ್ಷಣ ಗ್ರಾಮಪಂಚಾಯತ್ ಪಿಡಿಒಗಳು ನೀಡಲು  ಶಾಸಕರು ಸೂಚಿಸಿದರು. ರಾಜ್ಯ ಹೆದ್ದಾರಿಗಳ ಅಗಲೀಕರಣಕ್ಕೆ ಭೂಸ್ವಾದಿನ ಪಡಿಸಲು ಸರ್ಕಾರದ ಅನುದಾನ ದೊರಕಲಿದ್ದು ಈ ರಸ್ತೆ ಎಂ ಡಿ ಆರ್ ರಸ್ತೆ ಆಗಿರುವುದರಿಂದ ಭೂಸ್ವಾಧೀನಕ್ಕೆ ಪರಿಹಾರ ಸಿಗದೆ ಇರುವುದರಿಂದ 90 ಶೇಕಡಾ ರಸ್ತೆ ಸರಕಾರಿ ನಿವೇಶನದಲ್ಲಿ ಬರುವುದರಿಂದ ಉಳಿದ ಖಾಸಗಿ ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರು ಉಚಿತವಾಗಿ ಭೂಮಿ ನೀಡುವಂತೆ ಸಾರ್ವಜನಿಕರಲ್ಲಿ ಶಾಸಕರು ಮನವಿ ಮಾಡಿದರು ಈ ಬಗ್ಗೆ ಸಭೆಯಲ್ಲಿ ಉತ್ತಮ ಸ್ವಂದನೆ ದೊರಕಿತು.

ಸಭೆಯಲ್ಲಿ ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜು ಕುಲಾಲ್, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ನಳಿನಿ ಪ್ರದೀಪ್ ರಾವ್, ಸುಧೀರ್ ಕುಮಾರ್ ಶೆಟ್ಟಿ, ಚೇರ್ಕಾಡಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಹರೀಶ್ ಶೆಟ್ಟಿ, ಆಶಾ ಕೋಟ್ಯಾನ್, ಉದಯ್ ಕಾಮತ್, ಗುತ್ತಿಗೆದಾರರಾದ  ಮುನಿಯಾಲು ಉದಯಕುಮಾರ್ ಶೆಟ್ಟಿ, ತಹಶೀಲ್ದಾರಾದ ಕಿರಣ್ ಬೋರಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್ ಭಟ್, ಪಿಡಿಓ, ವಿ. ಎ ಗಳು ಹಾಗೂ ಪಂಚಾಯತ್ ಸದಸ್ಯರುಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Udupi: Traffic congestion and dangers to pedestria
View More

Milarchi Laram - Issue Jan 2020Milarchi Laram - Issue Jan 2020
Kallianpur Grama Panchayat InvitationKallianpur Grama Panchayat Invitation
Veez Konkani Global Weekly e_magazine 108Veez Konkani Global Weekly e_magazine 108
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Milagres Milana 2020Milagres Milana 2020
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India