Brief Mumbai - Mangalore news with pictures


Rons Bantwal
Kemmannu News Network, 30-04-2020 13:56:31


Write Comment     |     E-Mail To a Friend     |     Facebook     |     Twitter     |     Print


ಕೊರೋನಾ ಲಾಕ್‍ಡೌನ್; ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ನೆರವು
(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಎ.07: ಉಪನಗರ ಘಾಟ್ಕೋಪರ್ ಇಲ್ಲಿನ ಆಸುಪಾಸಿನ ಜನತೆಗೆ ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾಬಾಳಿಕೆ ಇವರ ಸಾರಥ್ಯದಲ್ಲಿ ಸೇವಾ ನಿರತವಾಗಿದೆ. ಘಾಟ್ಕೋಪರ್ ಪಂತ್‍ನಗರದಲ್ಲಿನ ವೆಲ್ಫೇರ್ ಸೊಸೈಟಿಯ ಬಾಬಾ’ಸ್ ಮಹೇಶ್ ಎಸ್.ಶೆಟ್ಟಿ ಸಭಾಗೃಹದಲ್ಲಿ ಸೊಸೈಟಿ ಕಳೆದ ಸುಮಾರು ಎರಡು ವಾರಗಳಿಂದ ನಿರಾಶ್ರಿತರು ಮತ್ತು ಅರ್ಹರಿಗೆ ಆಹಾರ ಸಾಮಾಗ್ರಿ, ಪಡಿತರವನ್ನು ವಿತರಿಸುತ್ತಿದೆ.

ಕನ್ನಡ ವೆಲ್ಫೇರ್‍ನ ಕಾರ್ಯದರ್ಶಿ ಸುಧಾಕರ ಎಲ್ಲೂರು, ಮಹಿಳಾ ವಿಭಾಗಧ್ಯಕ್ಷೆ ಶಾಂತÀ ನಾರಾಯಣ ಶೆಟ್ಟಿ, ಸುರೇಶ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಮತ್ತಿತರ ಪದಾಧಿಕಾರಿಗಳು, ನಾರಾಯಣ ಶೆಟ್ಟಿ ನಂದಳಿಕೆ, ಮನೋಹರ್ ನಂದಳಿಕೆ ಮತ್ತಿತರ ಸದಸ್ಯರು ಸಕ್ರೀಯರಾಗಿದ್ದು ದಿನಾಲೂ ಈ ಪುಣ್ಯಾಧಿ ಸೇವೆಯಲ್ಲಿ ತೊಡಗಿಸಿ ಕೊಂಡಿದೆ. ಅವಶ್ಯವುಳ್ಳರಿಗೆ ಶೀಘ್ರಗತಿಯಲ್ಲಿ ಸ್ಪಂದಿಸುವ ನವೀನ್ ಶೆಟ್ಟಿ ಈ ಬಾರಿ ಹಗಳಿರುಲು ಸೇವೆಯಲ್ಲಿ ನಿರತರಾಗಿದ್ದಾರೆ.

ಶೇಖರ್ ಅವಿೂನ್ ಜೋಕಟ್ಟೆ ನಿಧನ

ಮುಂಬಯಿ, ಎ.25: ಮಂಗಳೂರು ಬಜ್ಪೆ ಜೋಕಟ್ಟೆ ಇಲ್ಲಿನ ನಾಮಾಂಕಿತ ಸಮಾಜ ಸೇವಕ, ಕೊಡುಗೈದಾನಿ, ಉದ್ಯಮಿ, ಪಿಡಬ್ಲ್ಯುಡಿ ಗುತ್ತಿಗೆದಾರ, ಮಲಕಾರು ಇಟರ್‍ಲಾಕ್ ಸಿಸ್ಟಂ ಸಂಸ್ಥೆಯ ಮಾಲೀಕ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ (ಐ) ಪಕ್ಷದ ಮಾಜಿ ಕಾರ್ಯದರ್ಶಿ ಶೇಖರ್ ಅವಿೂನ್ (72.) ತೀವ್ರ ಹೃದಯಾಘಾತದಿ ಂದ ಇಂದಿಲ್ಲಿ ಶನಿವಾರ (ಎ.25) ಬೆಳಿಗ್ಗೆ ಜೋಕಟ್ಟೆಯಲ್ಲಿನ ಸ್ವನಿವಾಸದಲ್ಲಿ ವಿಧಿವಶರಾಗಿದ್ದಾರೆ.

ಶ್ರೀ ವಿಜಯ ವಿಠಲ ಭಜನಾ ಮಂದಿರ ಜೋಕಟ್ಟೆ ಇದರ ಮಾಜಿ ಅಧ್ಯಕ್ಷ, ಗೌರವ ಸಲಹಾಗಾರ, ಬಜ್ಪೆ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಪೆÇರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ, ಹಿಂದು ರುದ್ರಭೂಮಿ ಕಳವಾರು ಜೋಕಟ್ಟೆ ಇದರ ಸ್ಥಾಪಕ ಸದಸ್ಯ, ತೋಕುರು ಕೋರ್ದಬ್ಬು ಸಮಿತಿ ಸದಸ್ಯ, ಪೇಜಾವರ ಬಿಲ್ಲವ ಸಂಘ ಬಜ್ಪೆ ಕರಂಬಾರು, ಬಜ್ಪೆ ಬಿಲ್ಲವ ಸಂಘ (ರಿ.), ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಸ್ಥಾನ ಇತಾದಿಗಳ  ಸಕ್ರೀಯ ಸದಸ್ಯರಾಗಿದ್ದು ಹತ್ತುಹಲವಾರು ಸಂಸ್ಥೆಗಳು ಹಿಗೇ ಹಲವಾರು ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿ ಕೊಂಡು ಜನಾನುರಾಗಿದ್ದರು.

ಮೃತರು ಪತ್ನಿ ಚಂದ್ರಾವತಿ ಶೇಖರ್, ಎರಡು ಗಂಡು, ಒಂದು ಹೆಣ್ಣು  ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ಶೇಖರ್ ನಿಧನಕ್ಕೆ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಹಿರಿಯ ಉದ್ಯಮಿ ಕೆ.ಭೋಜರಾಜ್ (ಕುಳಾಯಿ) ಥಾಣೆ, ಕೆ.ನಾರಾಯಣ್ ಕುಳಾಯಿ, ಬಜ್ಪೆ ದೊಡ್ಡಿಕಟ್ಟೆ ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರÀ ಎಲ್.ವಿ ಅವಿೂನ್, ಬಜ್ಪೆ ಬಿಲ್ಲವ ಸಂಘದ ಅಧ್ಯಕ್ಷ ವಸಂತ ಬಂಗೇರ, ಭಾರತ್ ಬ್ಯಾಂಕ್‍ನ ನಿರ್ದೇಶಕ ಪುರುಷೋತ್ತಮ ಎಸ್.ಕೋಟ್ಯಾನ್ ಮತ್ತಿತರ ಗಣ್ಯರು ತೀವ್ರವಾಗಿ ಸಂತಾಪ ವ್ಯಕ್ತ ಪಡಿಸಿ ಬಾಷ್ಪಾಂಜಲಿ ಅರ್ಪಿಸಿ ಶೇಖರ್ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.

ಮುಂಬಯಿ ಕನ್ನಡ ಸಂಘ ಇದರ ಮಹಿಳಾ ವಿಭಾಗಧ್ಯಕ್ಷೆ ಡಾ| ರಜನಿ ವಿ.ಪೈ ಅವರಿಂದ ಪಡಿತರ ವಿತರಣೆ

ಮುಂಬಯಿ,ಎ.15: ಮುಂಬಯಿ ಉಪನಗರದ ಮುಲುಂಡ್ ಪ್ರದೇಶದಲ್ಲಿ ನೆಲೆಸಿ ರುವ ಸ್ಥಾನೀಯ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸದಾ ಶ್ರಮಿಸುತ್ತಿರುವ ಬಡ ಮತ್ತು ದಲಿತರ ಸೇವೆಯಲ್ಲಿ ತೊಡಗಿಸಿಕೊಂಡು ಹಲವಾರು ಸಮಾಜಮುಖಿ ಕಾಯಕಗÀಳಲ್ಲಿ ತೊಡಗಿಸಿ ಕೊಂಡಿರುವ ಹೆಸರಾಂತ ಸಮಾಜ ಸೇವಕಿ ಡಾ| ರಜನಿ ವಿ. ಪೈ ಬಾರೀ ಪ್ರಮಾಣದ ಪಡಿತರ, ದೈನಂದಿನ ಅತ್ಯವಶ್ಯಕ ವಸ್ತುಗಳನ್ನು ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

ಅಂಧೇರಿ ಪೂರ್ವದಲ್ಲಿನ ಕ್ಯಾನ್ಸರ್ ಪೀಡಿತ ಮಹಿಳೆಯೋರ್ವರಿಗೂ ಕಳೆದ ವಾರ ಆರೋಗ್ಯನಿಧಿಯನ್ನು ಒದಗಿಸಿ ಶಸ್ತ್ರಚಿಕಿತ್ಸೆಗೆ ಸಹಾಯಸ್ತ ನೀಡಿದ್ದು, ವಿಶೇಷವಾಗಿ ಚಾಳ್, ಕೊಳಚೆಪ್ರದೇಶಗಳಿಗೆ ಭೇಟಿ ನೀಡಿ ಅರ್ಹರನ್ನು ಕಂಡಿಡಿದು ನೆರವನ್ನು ನೀಡುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಇಲ್ಲಿನ ಸಿದ್ಧಿ ಮೂಲತಃ ರಜನಿ ವಿನಾಯಕ ಪೈ ಹಲವಾರು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಮೂಲಕ ಜನಾನುರೆಣಿಸಿದ್ದು, ಮಹಾನಗರದ ಹಿರಿಯ ಕನ್ನಡ ಸಂಸ್ಥೆಯಾದ ಮುಂಬಯಿ ಕನ್ನಡ ಸಂಘ (ಮಾಟುಂಗ) ಇದರ ಮಹಿಳಾ ವಿಭಾಗಧ್ಯಕ್ಷೆ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್, ಕರ್ನಾಟಕ ವಿಕಾಸ ರತ್ನ, ಸೌರಭ ರತ್ನ, ಬೆಂಗಳೂರು ರತ್ನ-2018 ಪ್ರಶಸ್ತಿ, ಕ್ರಿಯಾಶೀಲ ಕನ್ನಡತಿ, ಅಂತಾರಾಷ್ಟ್ರೀಯ ಗೋಲ್ಡನ್ ಅಚೀವ್ಮೆಂಟ್ ಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ-2019 ಹೀಗೆ ಅನೇಕ ಪುರಸ್ಕಾರ, ಗೌರವಗಳು ಪ್ರಾಪ್ತಿಯಾಗಿವೆ.

ಮಂಗಳೂರು ಜೋಕಟ್ಟೆ ಇಲ್ಲಿನ ನಾಮಾಂಕಿತ ಸಮಾಜ ಸೇವಕ ಶ್ರೀ ಶೇಖರ್ ಅವಿೂನ್ (70.) ಜೋಕಟ್ಟೆ ಇಂದಿಲ್ಲಿ ಶನಿವಾರ (ಎ.25) ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಮೃತರು ಪತ್ನಿ ಚಂದ್ರಾವತಿ ಶೇಖರ್, ಎರಡು ಗಂಡು, ಒಂದು ಹೆಣ್ಣು  ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.

ಬಜ್ಪೆ ಬಿಲ್ಲವ ಸಂಘ (ರಿ.) ಮತ್ತು ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಸ್ಥಾನದ ಆದಿಯಿಂದಲೂ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರೀಯರಾಗಿ ಸೇವೆ ಸಲ್ಲಿಸಿದ್ದ ಅಗಲಿದ ತನ್ನ ಪರಮಾಪ್ತ ಶೇಖರ್ ದಿವ್ಯತ್ಮಕ್ಕೆ ಭಾರತ್ ಬ್ಯಾಂಕ್‍ನ ನಿರ್ದೇಶಕ, ಬಜ್ಪೆ ದೊಡ್ಡಿಕಟ್ಟೆ ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯ ಅಧ್ಯಕ್ಷ ಎಲ್.ವಿ ಅವಿೂನ್ ತೀವ್ರವಾಗಿ ಸಂತಾಪ ವ್ಯಕ್ತ ಪಡಿಸಿ ಬಾಷ್ಪಾಂಜಲಿಅರ್ಪಿಸಿ ಶೇಖರ್ ಕುಟುಂಬಕ್ಕೆ ಸಾಂತ್ವನ ನೀಡಿದ್ದಾರೆ.
ಎಲ್.ವಿ ಅಮೀನ್ (ಮುಂಬಯಿ)

ಲೋಕಯ್ಯ ಪೂಜಾರಿ ಬೋಂದೇಲ್ ನಿಧನ
ಮುಂಬಯಿ, ಎ.24: ಮಂಗಳೂರು ಬೋಂದೇಲ್ ಪದವಿನಂಗಡಿ ಇಲ್ಲಿನ ಮೇರಿಹಿಲ್ ನಿವಾಸಿ ಲೋಕಯ್ಯ ಪೂಜಾರಿ (66.) ತನ್ನ ಸ್ವಗೃಹದಲ್ಲಿ ಕಳೆದ ಶುಕ್ರವಾರ ಅಪರಾಹ್ನ ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ ಮಾಲತಿ ಎಲ್.ಪೂಜಾರಿ, ಎರಡು ಗಂಡು ಮಕ್ಕಳು, ಸೊಸೆ ಹಾಗೂ ಬಂಧು ಬಳಗ ಅಗಲಿದ್ದಾರೆ.

ದುಬಾಯಿ ಅನಿವಾಸಿ ಕನ್ನಡಿಗರ ಸೇವೆಯಲ್ಲಿ ಕರ್ನಾಟಕ ಎನ್‍ಆರ್‍ಐ ಫೆÇೀರಂ ಸಕ್ರೀಯಅನಿವಾಸಿ ಭಾರತೀಯರ ಸ್ಪಂದನೆಗೂ ಬದ್ಧ-ಪ್ರವೀಣ್‍ಶೆಟ್ಟಿ ವಕ್ವಾಡಿ
(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ (ದುಬಾಯಿ-ಅಲ್ ಖುಸಿಸ್), ಎ.26: ಭೌಗೋಳಿಕವಾಗಿ ತಾಂಡವವಾಡಿದ ಕೋವಿಡ್-19 ಸಾಂಕ್ರ್ರಾಮಿಕ ಮಹಾಮಾರಿ ಕೊರೋನಾದಿಂದ ಜನತೆ ತತ್ತರಿಸಿದ್ದು ಇದೀಗ ಈ ಮಹಾಮಾರಿ ಸಮಷ್ಟಿಯ ಸಮಗ್ರ ಜನಜೀವನದ ಮೇಲೆ ಭಾರೀ ಪರಿಣಾಮ ಬೀರಿದೆ. ವಿಶ್ವದಾದ್ಯಂತ ಲಾಕ್‍ಡೌನ್‍ನಿಂದ ಜಾಗತಿಕವಾಗಿ ವ್ಯಾಪಾರ ವಾಹಿವಟು ಸ್ತಬ್ದವಾಗಿದ್ದು ಆಥಿರ್üಕ ಶಕ್ತಿಯೇ ಕುಸಿದಿದೆ. ಕಣ್ಣಿಗೆ ಕಾಣದ ಸೂಕ್ಷ್ಮಣುಯೊಂದು ತನ್ನ ತಾಕತ್ತನ್ನೆ ಮೆರೆದು ಭೂಮಂಡಲವನ್ನೇ ಧರೆಗುರುಳಿಸಿದೆ. ಈ ಸಂಧಿಗ್ಧ ಸಮಯದಲ್ಲಿ ದುಬಾಯಿ ಅನಿವಾಸಿ ಕನ್ನಡಿಗರ ಸೇವೆಯಲ್ಲಿ ಕರ್ನಾಟಕ ಎನ್‍ಆರ್‍ಐ ಫೆÇೀರಂ-ಯುಎಇ ಸಕ್ರೀಯವಾಗಿದ್ದು, ಯುಎಇ ರಾಷ್ಟ್ರದ ಕಾಯ್ದೆಕಾನೂನುಗಳನ್ನು ಪಾಲಿಸುತ್ತಾ ಇಲ್ಲಿ ನೆಲೆಯಾದ ಕರ್ನಾಟಕದ ಜನತೆಯ ಆರೋಗ್ಯ, ಆಹಾರ, ವೀಸಾ ಇನ್ನಿತರ ಅತ್ಯವಶ್ಯಕ ಸೇವೆಯಲ್ಲಿ ಫೆÇೀರಂ ಹಗಲಿರುಳು ಶ್ರಮಿಸುತ್ತಿದೆ. ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರಕಾರ ನಮ್ಮನ್ನು ಪೆÇ್ರೀತ್ಸಹಿಸಿದರೆ ಅನಿವಾಸಿ ಭಾರತೀಯ ದುಬಾಯಿ ವಾಸಿಗಳನ್ನು ಕರುನಾಡಿಗೆ ಕಳುಹಿಸಿ ಕೊಡುವಲ್ಲಿ ತುಂಬಾ ಅನುಕೂಲಕರವಾಗಲ್ಲದು. ಶಾಶ್ವತವಾಗಿ ಉಳಿಯುವ ಉದ್ದೇಶ ಹೊಂದಿರದವರು, ಅಸ್ವಸ್ಥರು, ವಿದ್ಯಾಥಿರ್ü ವೀಸಾವುಳ್ಳ ಮತ್ತು ಸಂದರ್ಶಕ ಭೇಟಿಗೈದ ಕನ್ನಡಿಗರಲ್ಲಿ ತಮ್ಮತಮ್ಮ ತವರೂರು ಸೇರುವ ಆತುರ ಹೆಚ್ಚಿದ್ದು ವಿಮಾನಯಾನಕ್ಕೆ ಅವಕಾಶ ಒದಗಿಸಿದ್ದಲ್ಲಿ ಇವರನ್ನು ಮೊದಲಾಗಿ ಇಲ್ಲಿಂದ ಕರುನಾಡಿಗೆ ಕಳುಹಿಸಿ ಕೊಡುವ ಪ್ರಯತ್ನ ನಡೆಸಲಿದ್ದೇವೆ ಎಂದು  ದುಬಾಯಿ ಇಲ್ಲಿನ ಪ್ರತಿಷ್ಠಿತ ಹೊಟೇಲು ಉದ್ಯಮಿ, ಫÀರ್ಚೂನ್ ಸಮೂಹದ ಆಡಳಿತ ನಿರ್ದೇಶಕ, ಉಡುಪಿ ಜಿಲ್ಲೆಯ ಕುಂದಾಪುರ ಬಾರಕೂರು ವಕ್ವಾಡಿ ಮೂಲತಃ ಕರ್ನಾಟಕ ಎನ್‍ಆರ್‍ಐ ಫೆÇೀರಂ-ಯುಎಇ (ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ) ಅಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ ವಕ್ವಾಡಿ ತಿಳಿಸಿದರು.

ನಮ್ಮವರು ಅವರ ಅಗತ್ಯಗಳನ್ನು ನಮ್ಮ ಗಮನಕ್ಕೆ ತರುವುದೂ ಅಷ್ಟೇ ಮುಖ್ಯವಾಗಿದೆ. ಭಾರತೀಯ ವಿದೇಶಾಂಗ ಸಚಿವಾಲಯ, ರಾಜ್ಯದ ಮುಖ್ಯಮಂತ್ರಿ, ಸಚಿವರು, ವಿವಿಧ ಜಿಲ್ಲಾಡಳಿತಗಳೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದು ಇವೆಲ್ಲರ ಸಂಪರ್ಕದ ಮೇರೆಗೆ ಇಲ್ಲಿನ ಕರುನಾಡ ಜನತೆಯ ಸ್ಪಂದನೆಗೆ ಕರ್ನಾಟಕ ಎನ್‍ಆರ್‍ಐ ಫೆÇೀರಂ-ಯುಎಇ  ಕ್ಷಣಕ್ಷಣಕ್ಕೂ ಕಾರ್ಯನಿರತವಾಗಿದೆ. ಅದಕ್ಕಾಗಿ ಕನ್ನಡಿಗಸ್ ಹೆಲ್ಪ್‍ಲೈನ್‍ನನ್ನೂ ಬಿಡುಗಡೆ ಗೊಳಿಸಿದೆ ಆಹಾರ ವೈದ್ಯಕೀಯ, ಸಲಹೆ, ತುರ್ತು ಸಮನ್ವಯತೆ, ಕಾನೂನು ನೆರವು ಬಗ್ಗೆಯೂ ಸ್ಪಂದಿಸುತ್ತಿದ್ದು ಈ ಎಲ್ಲಾ ಸೇವೆಗೆ ನಾವು ಬದ್ಧರಾಗಿದ್ದೇವೆ ಎಂದೂ ಪ್ರವೀಣ್‍ಕುಮಾರ್ ಶೆಟ್ಟಿ ವಕ್ವಾಡಿ ತಿಳಿಸಿದ್ದಾರೆ.


ನಮ್ಮಲ್ಲಿನ ಕೋಟ್ಯಾಂತರ ಜನರು ಬದುಕನ್ನು ಕಟ್ಟುವ ಉದ್ದೇಶದೊಂದಿಗೆ ಉದ್ಯೋಗವನ್ನರಸಿ ಜಾಗತಿಕವಾಗಿ ವಲಸೆ ಹೋಗಿದ್ದಿದೆ. ಇಂತಹ ಭಾರತೀಯರು ಇದೀಗ ವಿವಿಧ ರಾಷ್ಟ್ರಗಳಲ್ಲಿ ಇದ್ದುಕೊಂಡು ತಮ್ಮ ಮುಂದಿನ ಭವಿಷ್ಯದ ಲೆಕ್ಕಾಚಾರ ಎಣಿಸಿಕೊಳ್ಳುವಂತಾಗಿದೆ. ಭಾರತದ ತಾಯ್ನಾಡಿನಿಂದ ಆತಿಥೇಯ ದೇಶಗಳಿಗೆ ಉದ್ಯೋಗ ಅಥವಾ ಉದ್ಯಮ ಅರಸುವುದರೂಂದಿಗೆ ವಲಸೆ ಕೆಲಸಗಾರರಾಗಿ, ವಿದೇಶಿ ಕಾರ್ಮಿಕ, ಅತಿಥಿü ಕೆಲಸಗಾರರಾಗಿ, ವಿಶೇಷ ಪರವಾನಗಿಯಲ್ಲಿ ಸಂದರ್ಶಕ ಭೇಟಿ (ವಿಸಿಟಿಂಗ್ ವೀಸಾ), ಉನ್ನತ ಶಿಕ್ಷಣಕ್ಕಾಗಿ ವಿದ್ಯಾಥಿರ್ü ವೀಸಾ ಹೊಂದಿ  ಆಶ್ರಯ ಪಡೆದವರೂ ಅನೇಕರಿದ್ದಾರೆ.  ಅದರಲ್ಲೂ  ಗಲ್ಫ್‍ರಾಷ್ಟ್ರಗಳಲ್ಲಿ ಅನಿವಾಸಿ ಭಾರತೀಯರಾಗಿ ಉಳಿದು ಕೊಂಡಿರುವರು ಏಳು ರಾಜಪ್ರಭುತ್ವದ ಎಮಿರೇಟ್ಸ್‍ಗಳ ಒಕ್ಕೂಟವಾದ ದುಬಾಯಿನಲ್ಲೇ (ಯುನೈಟೆಡ್ ಅರಬ್ ಎಮಿರೇಟ್ಸ್) ಭಾರತೀಯರ ಪೈಕಿ ಕರ್ನಾಟಕ ರಾಜ್ಯದ ಜನತೆ ಬಹಳಷ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ಯಾವ ರೀತಿಯಲ್ಲಿ ಪರಿಣಾಮ ಬೀರಬಲ್ಲದು ಅನ್ನೊವುದೇ ಇವರೆಲ್ಲರಿಗೆ ಯಕ್ಷಪ್ರಶ್ನೆಯಾಗಿ ಕಾಡಲಾರಂಭಿಸಿದೆ ಎಂದೂ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಫೆÇೀರಂನ ಉಪಾಧ್ಯಕ್ಷ ಜೋಸೆಫ್ ಮಥಾಯಸ್, ಪ್ರಧಾನ ಕಾರ್ಯದರ್ಶಿ ಪ್ರಬಾಕರ್ ಅಂಬಲತರೆ, ಜೊತೆ ಕಾರ್ಯದರ್ಶಿ ಎಂ.ಇ ಮುಳೂರು, ಜೊತೆ ಕೋಶಾಧಿಕಾರಿ ದಯಾ ಕಿರೋಡಿಯನ್ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಕಾರ್ಯಪ್ರವೃತ್ತರಾಗಿದ್ದಾರೆ.

ಅಗತ್ಯ ಸೇವೆಗಾಗಿ ದುಬಾಯಿನಲ್ಲಿ ದಯಾ ಕಿರೋಡಿಯನ್ (0507855649), ರೋನಾಲ್ಡ್ ಮಾರ್ಟಿಸ್ (0504307973), ಹರೀಶ್ ಶೇರಿಗಾರ್ (0506253143),  ಆಶ್ರಫ್ ಕೆಎಂ. (0505379817), ಯೂಸುಫ್ ಬೆರ್ಮವೆರ್ (0504667837), ಈದಾಯತ್ತ್ ಅಡ್ಡೂರು (0551118555), ನವೀದ್ ಮಾಗುಂಡಿ (0503728595), ಸುನೀಲ್ ರಾಜ್ (0569831111), ಶಾರ್ಜಾದಲ್ಲಿ ಚಂದ್ರು ಲಿಂಗದಳ್ಳಿ (0506883276), ಇಮ್ರಾನ್ ಖಾನ್ (0529214783), ಸಯ್ಯದ್ ಅಫ್ಜಲ್ ಎಸ್.ಎಂ (0509485368), ಅಜ್ಮಾನ್‍ನಲ್ಲಿ ಯಶ್ ಕರ್ಕೇರ (0561195007), ನೋವೆಲ್ ಅಲ್ಮೇಡಾ (0555878692), ಅಬುದಾಭಿಯಲ್ಲಿ ಸೀರಾಜ್ ಪರ್ಲಡ್ಕ (0505786560), ಜೋನ್ಸಾನ್ ಮಾರ್ಟಿಸ್ (0567557672), ರಾಸ್‍ಆಲ್ ಖೈಮಾ ಇಲ್ಲಿ ಅಲ್ತಾಫ್ ಹೌಸೈನ್ (0558694287) ಸೇವೆಯಲ್ಲಿದ್ದು ಕನ್ನಡಿಗರು ತಮ್ಮ ಅಗತ್ಯಗಳಿಗಾಗಿ ಮಾತ್ರ ಇವರನ್ನು ಅಥವಾ ಇ-ಮೇಯ್ಲ್ ಞಚಿಟಿಟಿಚಿಜigಚಿsheಟಠಿಟiಟಿe@gmಚಿiಟ.ಛಿom (ಪ್ರವೀಣ್ ಶೆಟ್ಟಿ) ಮೂಲಕ ಸಂಪರ್ಕಿಸುವಂತೆ ಈ ಮೂಲಕ ಕರ್ನಾಟಕ ಎನ್‍ಆರ್‍ಐ ಫೆÇೀರಂ-ಯುಎಇ ತಿಳಿಸಿದೆ.

 

ದುಬಾಯಿ ಸಂಪರ್ಕಿಸಿದ ರೋನ್ಸ್ ಬಂಟ್ವಾಳ್-ರಕ್ಷಣೆಗೆ ಬಂದ ಪ್ರವೀಣ್‍ಶೆಟ್ಟಿ ವಕ್ವಾಡಿ

ಮುಂಬಯಿ,ಎ.26: ಶ್ರೀವತ್ಸವ ವಿ., ದುರ್ಗಾಪ್ರಸಾದ್ ಗೌಡ, ದೀಪಕ್ ಬನ್ನೂರು ಈ ಮೂವರು ಕೋವಿಡ್ 19ರ ಲಾಕ್‍ಡೌನ್‍ನಿಂದ ದುಬಾಯಿ (ಶಾರ್ಜಾ)ನಲ್ಲಿ ಸಂಕಷ್ಟಕ್ಕೊಳಗಾದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ವಿಟ್ಲದ ಪತ್ರಕರ್ತ ನಿಶಾಂತ್ ಬಿಲ್ಲಂಪದವು ಇವರು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ  ರೋನ್ಸ್ ಬಂಟ್ವಾಳ್ ಇವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರು.

ಕೇವಲ ಐದಾರು ನಿಮಿಷಗಳಲ್ಲಿ ರೋನ್ಸ್ ತನ್ನ ದುಬಾಯಿ ಅಲ್ಲಿನ ಮಿತ್ರ ಅನಿಲ್ ಪಿಂಟೋ (ಐಕಳ, ಕಿನ್ನಿಗೋಳಿ) ಅವರನ್ನು ಸಂಪರ್ಕಿಸಿ ಕ್ಷಣಾರ್ಧದಲ್ಲೇ ಈ ಮೂವರ ಪೂರ್ಣ ಮಾಹಿತಿ ಕಲೆಹಾಕಿ ತತ್‍ಕ್ಷಣವೇ ಪರಮಾಪ್ತ ಕರ್ನಾಟಕ ಎನ್‍ಆರ್‍ಐ ಫೆÇೀರಂ-ಯುಎಇ ಅಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ ವಕ್ವಾಡಿ ಅವರನ್ನು ಸಂಪರ್ಕಿಸಿ ವಿವರಿಸಿದ್ದÀರು. ಪ್ರವೀಣ್ ಶೆಟ್ಟಿ ಅವರು ಖುದ್ಧಾಗಿ ಅವರಲ್ಲಿ ಮಾತಾಡಿ ಯೋಗ ಕ್ಷೇಮ ವಿಚಾರಿಸಿ ಬಂಟ್ವಾಳ್‍ಗೆ ಪ್ರತಿಕ್ರಿಯಿಸಿ ಇವರ ರಕ್ಷಣೆ, ಪರಿಹಾರ ಮತ್ತು ಸಹಕಾರಕ್ಕೆ ನಾವಿದ್ದೇವೆ ಎಂದು ಭರವಸೆಯನ್ನಿತ್ತರು.

ಇದು ಯಾರೂ ಇಲ್ಲವೋ ಎಂಬಂತೆ ಭಯದಲ್ಲಿದ್ದವರಿಗೆ ಧೈರ್ಯ ತುಂಬುವಂತೆ ಮಾಡಿದೆ  ರೋನ್ಸ್ ಹಾಗೂ ದುಬೈ ತಂಡ ಮಾಡಿರುವ ಕಾರ್ಯ ಶ್ರೇಷ್ಠವಾದ ಕಾರ್ಯಕ್ಕೆ ನಿಶಾಂತ್ ಬಿಲ್ಲಂಪದವು ಅಭಿವಂದಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi