ಜ.28: ಐಲೇಸಾ ಸಂಸ್ಥೆಯಿಂದ `ಬಾನ ಚಂದ್ರೆ ತೆಲಿಪುನಾನಿ’ ತುಳು ಹಾಡು ಬಿಡುಗಡೆ
Kemmannu News Network, 25-01-2023 19:04:54
ಜ.28: ಐಲೇಸಾ ಸಂಸ್ಥೆಯಿಂದ `ಬಾನ ಚಂದ್ರೆ ತೆಲಿಪುನಾನಿ’ ತುಳು ಹಾಡು ಬಿಡುಗಡೆ
ಮುಂಬಯಿ (ಆರ್‍ಬಿಐ), ಜ.25: ಐಲೇಸಾ-ದಿ ವಾಯ್ಸ್ ಆಫ್ ಓಷನ್ (ರಿ). ಡಿಜಿಟಲ್ ಸಂಸ್ಥೆಯು ಇದೇ ಶನಿವಾರ (ಜ.28) ಝೂಮ್ ಡಿಜಿಟಲ್ ವೇದಿಕೆಯಲ್ಲಿ `ಬಾನ ಚಂದ್ರೆ ತೆಲಿಪುನಾನಿ’ ತುಳು ಹಾಡು ಬಿಡುಗಡೆ ಮಾಡಲಿದೆ.
ಕಳೆದ ವರ್ಷ ಹನ್ನೊಂದು ತುಳು ಹಾಡುಗಳನ್ನು ಬಿಡುಗಡೆ ಗೊಳಿಸಿದ ಐಲೇಸಾ ಸಂಸ್ಥೆ ಈ ವರ್ಷದ ಮೊದಲ ಕಾಣಿಕೆಯಾಗಿ ಯುವ ಸಾಹಿತಿ ನರೇಂದ್ರ ಕಬ್ಬಿನಾಲೆ ಅವರ ಬಾನ ಚಂದ್ರೆ ತೆಲಿಪುನಾನಿ ಎನ್ನುವ ತಾಯಿ ಮಕ್ಕಳ ಬಾಂಧವ್ಯದ ಮಧುರ ಗೀತೆಯನ್ನು ಹೆಣ್ಣು ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ತನ್ನ ಸಾಂಸಾರಿಕ ಜೀವನದ ಒತ್ತೆಯಿಡುತ್ತಾ ಗಂಡ ಮಕ್ಕಳ ನಗುವಲ್ಲಿ ಬೆಳದಿಂಗಳಂತೆ ಲೀನಳಾಗುವ ಚಿತ್ರಣದ ಹಾಡನ್ನು ಬಿಡುಗಡೆ ಗೊಳಿಸಲಿದೆ.
ಪ್ರೇಮಲತಾ ದಿವಾಕರ್ ಈ ಹಾಡನ್ನು ಮಧುರವಾಗಿ ಸಂಯೋಜಿಸಿದ್ದು ಪ್ರಖ್ಯಾತ ಗಾಯಕಿ ಮಾಲಿನಿ ಕೇಶವ ಪ್ರಸಾದ್ ಅವರ ಧ್ವನಿಯಲ್ಲಿ ಮುದ್ರಿಸಲಾಗಿದೆ. ಪ್ರಮೋದ್ ಸಹಕಾರದಲ್ಲಿ ನಿಶಾಂತ್ ಕ್ಯಾಲಿಕಟ್ ಅವರ ವಾದ್ಯ ಸಂಗೀತವಿದ್ದು ಹಾಡನ್ನು ಮಹಿಷಮರ್ದಿನಿ ದೇವಸ್ಥಾನ ಅಜ್ಜಾವರ ಸುಳ್ಯ ಇದರ ಧರ್ಮದರ್ಶಿ ಶ್ರೀ ಶಿವರಾಯ ಇವರು ಬಿಡುಗಡೆ ಗೊಳಿಸಲಿದ್ದಾರೆ. ಅಖಿಲಭಾರತ ಸ್ಥಾನಿಕ ಬ್ರಾಹ್ಮಣ ಸಮಾಜ ಬೆಂಗಳೂರು ಇದರ ಕಾರ್ಯದರ್ಶಿ ರಾಜೇಶ್ ರಾವ್ ಅತಿಥಿüಗಳಾಗಿದ್ದು ಶುಭನುಡಿಯಲಿದ್ದಾರೆ.
ಐಲೇಸಾ ಸಂಸ್ಥೆಯು ತುಳುವಿನಲ್ಲಿ ಬಿಡುಗಡೆ ಗೊಳಿಸಿದ ಹನ್ನೆರಡನೆಯ ಹಾಡು ಇದಾಗಿದ್ದು ಟಿವಿ ನಿರೂಪಕ, ಅರೆಭಾಸೆಯ ಗಾಯಕ ತೇಜು ಕೊಲ್ಲಮಗರು ಕಾರ್ಯಕ್ರಮ ನಿರೂಪಿಸಲಿದ್ದು ಖ್ಯಾತ ಕವಯತ್ರಿ ಶ್ವೇತ ಜೈನ ಹಾಡಿನ ವಿಸ್ತಾರ ತಿಳಿಸಲಿದ್ದಾರೆ. ಗೋಪಾಲ್ ಪಟ್ಟೆ ಮತ್ತು ಸುರೇಂದ್ರ ಮಾರ್ನಾಡು ತಾಂತ್ರಿಕ ನಿರ್ವಹಣೆ ನಿರ್ವಹಿಸಲಿದ್ದಾರೆ
ಸಂಗೀತ ಪ್ರಿಯರು ಮತ್ತು ಭಾಷಾಭಿಮಾನಿಗಳು ಝೂಮ್ ವೇದಿಕೆಯಲ್ಲಿ ಒeeಣiಟಿg Iಆ: 831 3909 9953 ಮತ್ತು Pಚಿssಛಿoಜe: iಟesಚಿ ಬಳಸಿ ಶನಿವಾರ ಸಂಜೆ 7:30 (Iಟಿಜiಚಿ) ಗಂಟೆಗೆ ಸರಿಯಾಗಿ ಝೂಮ್ ವೇದಿಕೆಯಲ್ಲಿ ಸೇರಿಕೊಂಡು ಹಾಡಿನ ಲೋಕಾರ್ಪಣೆಯಲ್ಲಿ ಭಾಗಿಯಾಗಲು ಸಂಸ್ಥೆಯ ವ್ಯವಸ್ಥಾಪಕರು ಭಿನ್ನವಿಸಿ ಕೊಂಡಿದ್ದಾರೆ.
ತನ್ನ ದ್ವಿತೀಯ ಹುಟ್ಟುಹಬ್ಬದ ಪ್ರಯುಕ್ತ ನಡೆಸಿದ ಐಲೇಸಾ ಇ-ಪದ ಪಂತ ಸ್ಪರ್ಧೆಯಲ್ಲಿ ಬೆಂಗಳೂರುನ ಪ್ರಕಾಶ್ ಪಾವಂಜೆ ಮತ್ತು ಮುಂಬಯಿಯ ಕು| ಶ್ರದ್ಧಾ ಬಂಗೇರಾ ಆಯ್ಕೆಯಾಗಿದ್ದಾರೆ. ಸ್ಪರ್ಧಾ ಬಹುಮಾನ ರೂಪಾಯಿ 10,000/- ನಗದು ಮತ್ತು ಐಲೇಸಾ ಐಸಿರಿ ಮತ್ತು ಐಲೇಸಾ ಐಸಿರ ಸ್ಮರಣಿಕೆ ಹೊಂದಿತ್ತು.
ಕನ್ನಡ ಸಿನಿಮಾದ ಪ್ರಸಿದ್ಧ ಗೀತೆ ರಚನೆಕಾರ ಕೆ.ಕಲ್ಯಾಣ್, ಮುಂಬಯಿಯಲ್ಲಿನ ಹಿರಿಯ ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು (ಕಲಾ ಸೌರಭ) ಮತ್ತು ಶ್ರೇಷ್ಠ ರಂಗನಟ ಅವಿನಾಶ್ ಕಾಮತ್, ಮಂಗಳೂರುನ ಹೆಸರಾಂತ ಸಂಗೀತಗಾರ ಸದಾಶಿವದಾಸ್ ಪಾಂಡೇಶ್ವರ್, ದುಬೈಯ ಗಾಯಕ ನವೀದ್ ಮಾಗುಂಡಿ ಇವರನ್ನೊಳಗೊಂಡ ಆಯ್ಕೆ ಸಮಿತಿ ವಿಜೇತರ ಆಯ್ಕೆ ಮಾಡಿತು. ವಿಶೇಷ ಧ್ವನಿ ಮತ್ತು ಪ್ರಸ್ತುತಿಗಾಗಿ ಹುಬ್ಬಳಿಯ ಕನ್ನಡ ಗಾಯಕಿ ಡಾ| ರಂಜನಾ ರಾನಡೆ ಮತ್ತು ಚೆನ್ನೈನ ಡಾ| ಪಲ್ಲವಿ ಶ್ಯಾಮ್‍ಸುಂದರ್ ಅವರು `ಐಲೇಸಾ ವಿಶೇಷ ಗಾಯಕಿ’ ಗೌರವಕ್ಕೆ ಪಾತ್ರರಾದರು.
ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಹಾಡಿದ ಹನ್ನೆರಡು ಗಾಯಕ ಗಾಯಕಿಯರಲ್ಲಿ ಕ್ರಮವಾಗಿ ಶ್ರೀನಿವಾಸ್ ಅಂಗರಾಕೋಡಿ ಬೆಂಗಳೂರು, ಕು| ಶೀಲಾ ಪಡೀಲ್ ಮಂಗಳೂರು, ಕು| ಪೂರ್ಣಿಮಾ ಬಂಟ್ವಾಳ, ಪ್ರತೀಕ್ ರವೀಂದ್ರ ಜತನ್ ಪುಣೆ, ಜಯಲಕ್ಷಿ ್ಮ ಪ್ರಸಾದ್ ಶೆಟ್ಟಿ ಮುಂಬಯಿ, ಕು| ಶ್ವೇತಾ ಹೆಬ್ಬಾರ್ ಕುಂಬ್ಳೆ, ಕು| ಗ್ರಿಶ್ಮಾ ಕಟೀಲ್, ಅಕ್ಷತಾ ಪ್ರವೀಣ್ ಶೆಟ್ಟಿ ಸಿಡ್ನಿ, ಕು| ಕೀರ್ತಿ ಹರೀಶ್ ಶೆಟ್ಟಿ ಥಾಣೆ ಮುಂಬೈ, ಶ್ರೀವಲ್ಲಿ ರೈ ಮಾರ್ಟೆಲ್ ಫೆÇ್ಲೀರಿಡಾ ಸುಜಾತ ರೈ ಬದಿಯಡ್ಕ, ಸನತ್ ಕೆ.ಎಂ ಇವರು `ಐಲೇಸಾದ ಭವಿಷ್ಯದ ಹಾಡುಗಾರರು’ ಗೌರವಕ್ಕೆ ಪಾತ್ರರಾದರು. ಮುಂದಿನ ಐಲೇಸಾದ ಹಾಡುಗಳನ್ನು ಅವರ ಧ್ವನಿಯಲ್ಲಿ ಹಾಡಿಸಲು ಐಲೇಸಾ ಆಶಯ ವ್ಯಕ್ತ ಪಡಿಸಿದೆ .
ಮುಖ್ಯ ಅತಿಥಿüಯಾಗಿದ್ದ ಕೆ.ಕಲ್ಯಾಣ್ ಮಾತನಾಡಿ ಆಯ್ಕೆ ಅನ್ನುವುದು ಒಂದು ಪ್ರಕ್ರಿಯೆ ಅಷ್ಟೆ, ತುಳು ಭಾಷೆ ಬರದೇ ಇರುವುದರಿಂದ ಅವರ ಎಲ್ಲರ ಧ್ವನಿಯ ಬಗ್ಗೆ ಹೃದಯವಿತ್ತು ಕೇಳುವುದು ಸಾಧ್ಯವಾಯ್ತು. ಎಲ್ಲರೂ ತುಂಬಾ ಆಸ್ಥೆಯಿಂದ ಸಂಗೀತವನ್ನು ಪ್ರೀತಿಸಿ ಹಾಡಿದ್ದಾರೆ. ಹಾಗಾಗಿ ಈ ಎಲ್ಲ ಹದಿನಾಲ್ಕು ಮಂದಿಯೂ ಭವಿಷ್ಯದ ಹಾಡುಗಾರರಾಗಿ ಹೊರಹೊಮ್ಮಲಿದ್ದಾರೆ ಮತ್ತು ನಮ್ಮ ಮುಂದಿನ ಯೋಜನೆಗಳಲ್ಲಿ ಇವರ ಧ್ವನಿ ನಮ್ಮ ಗಮನದಲ್ಲಿ ಇರುತ್ತದೆ ಎಂದು ಬೆನ್ನುತಟ್ಟಿದರು .
ಪದ್ಮನಾಭ ಸಸಿಹಿತ್ಲು ಮಾತನಾಡಿ ಸಂಗೀತ ನಮ್ಮ ಎಲ್ಲ ನೋವುಗಳನ್ನು ಮರೆಯಲು ದಿವ್ಯ ಔಷಧ, ಅದು ಜೀವನವನ್ನು ಸರಾಗ ಮಾಡುತ್ತದೆ, ನನ್ನ ಶಿಷ್ಯರು ಅನೇಕರು ಈ ಸ್ಪರ್ಧೆಯಲ್ಲಿ ಭಾಗವಸಿದ್ದು ನನಗೆ ಖುಷಿ ಕೊಟ್ಟಿದೆ, ನಾನು ಸ್ಪರ್ಧೆಯ ಒಬ್ಬ ತೀರ್ಪುಗಾರ ಅನ್ನುವುದು ಕೊನೆಯವರೆಗೂ ಗೌಪ್ಯವಾಗಿ ಇಟ್ಟಿದ್ದೆ. ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತಲೂ ಭಾಗವಹಿಸುವಿಕೆಯ ಹುಮ್ಮಸ್ಸಿಗೆ ಅವರಿಗೆ ಅಭಿನಂದನೆಗಳು ಮುಂದೆಯೂ ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಆಶಿಸಿದರು .
ಖ್ಯಾತ ರಂಗಭೂಮಿ ನಟ ಅವಿನಾಶ್ ಕಾಮತ ಮಾತನಾಡಿ ನಿರಂತರ ಸಂಗೀತದ ಸಂಪರ್ಕ ಇರುವುದರಿಂದ ನನ್ನನ್ನು ಬಹುಶ: ತೀರ್ಪುಗಾರನಾಗಿ ಆಯ್ಕೆ ಮಾಡಿರಬಹುದು. ಸಂಗೀತ ಬದುಕಿಗೆ ಒಂದು ಲಯ ಕೊಡುತ್ತದೆ ಹಾಗಾಗಿ ಸಂಗೀತ ಕಲಿಯುವ ಅವಕಾಶವನ್ನು ಎಂದೂ ಕಳೆದು ಕೊಳ್ಳಬೇಡಿ ಎಂದು ತನ್ನ ಬಾಲ್ಯದ ನೆನಪಲ್ಲಿ ನಾಸಿರುದ್ದೀನ್ ಶ್ಹಾ ಮತ್ತು ಓಂಪುರಿ ಅವರು ತಾವು ಸಂಗೀತ ಕಲಿಯದಿರುವುದರ ಹಿಂದಿನ ಪಶ್ಚತ್ತಾಪವನ್ನು ತಮ್ಮ ತಂದೆಯವರಲ್ಲಿ ಹಂಚಿಕೊಂಡದ್ದನ್ನು ಸ್ಮರಿಸಿದರು.
ಶರತ್ರ ಪಡುಪಳ್ಳಿ ನೈಜಿರೀಯಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ವಿವೇಕ್ ಮಂಡಕರೆ ಪ್ರಸ್ತಾವನೆಗೈದರು. ಐಲೇಸಾದ ರೂವಾರಿ ದಿವಂಗತ ವಿದ್ಯಾರಣ್ಯ ಅವರನ್ನು ಸುಧಾಕರ್ ಸ್ಮರಿಸಿದರು. ತುಳು-ಕನ್ನಡ ಕವಿ ಶಾಂತರಾಮ ಶೆಟ್ಟಿ ತೀರ್ಪುಗಾರರನ್ನು ಪರಿಚಯಿಸಿದರು. ಸುರೇಂದ್ರ ಮಾರ್ನಾಡ್ ಸ್ಪರ್ಧಿಗಳ ಉತ್ಸಾಹಕ್ಕೆ ಅಭಿನಂದನೆ ಸಲ್ಲಿಸಿದರು. ಗೋಪಾಲ್ ಪಟ್ಟೆ ತಾಂತ್ರಿಕ ನಿರ್ವಹಣೆ ಮಾಡಿದರು. ಶಿವು ಸಾಲಿಯಾನ್ ಕಾರ್ಯಕ್ರಮ ನಿರ್ವಹಿಸಿದರು. ವಿಶ್ವನಾಥ್ ಪಳ್ಳಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸುಬ್ರಾಯ ಚೊಕ್ಕಾಡಿ ಅವರ ವಯೋ ಸಮ್ಮಾನ್ ಗೌರವದ ತುಣುಕುಗಳನ್ನು ಪ್ರದರ್ಶಿಸ ಲಾಯಿತು. ರಮೇಶ್ಚಂದ್ರ ಅವರು ನವೀದ್ ಕಲ್ಯಾಣ್ ಅವರ ರಚನೆಗಳನ್ನು ಹಾಡಿ ರಂಜಿಸಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Now Open - Namma Minimart, Santhekatte - Kemmanunu Cross, - Call for Home Delivery 9611175167

Final Journey of Rosy Fernandes (85 years) | LIVE From Kallianpura

Final Journey of Juliana Rodrigues (81 Years) | LIVE From Thottam

Wee Care Play Home Badanidiyoor | 3rd Annual day Celebration

Lourdsachi Zar - December Issue from Our Lady of Lourdes church, Kanajar, Udupi.

Milarchi-Lara-from-Milagres-Cathedral-Kallianpur-January-2023-Issue

KPL Super League • Cricket | LIVE from Kemmannu

Milarchi Lara Bulletin - Monthi Fest Issue, September 2022

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Focus Studio, Near Hotel Kidiyoor, Udupi


Kemmannu Channel - Ktv Live Stream - To Book - Contact Here

Click here for Kemmannu Knn Facebook Link
Sponsored Albums
Exclusive
The legend Konkan Kogull Wilfy Rebimbus still lives - by: Prof P. Archibald.[Video]

The living legend of Tracks in 70’s, Michael Sequeira, Barkur.

Let the unity of senior players be an example to the youth - Gautham Shetty

Udupi: Bidding for Milagres Premier League Volleyball held at Milagres Campus.[Live-streamed]

Elders Day Celebrated at Kemmannu Church

Mangaluru: Udupi’s Samantha Mascarenhas wins MCC Bank Ltd ‘Jigibigi Taram’ - Kemmanitte Ishney bagged the runner-up spot.

Solidarity with Hindu Brethrens- Kemmannu Church distributes sweet and juice for Ganesh idol immersion participants

Femina Miss India Sini Shetty visits Milagres College, Kallianpur. [Video]

Kallianpura/Santhekatte: Sweet Tooth Ice Cream Parlor inaugurated
