ಪೊಲೀಸ್‌ ರಕ್ಷಣೆಯಲ್ಲಿ ಗೂಡಂಗಡಿ ಎತ್ತಂಗಡಿ

ಹೊನ್ನಾವರ : ಪೊಲೀಸ್‌ ಬಂದೋಬಸ್ತಿನಲ್ಲಿ ಗುರುವಾರ ಗೂಡಂಗಡಿ, ಗಾಡಿಯಂಗಡಿಗಳ ಎತ್ತಂಗಡಿ ಕಾರ್ಯಾಚರಣೆಯನ್ನು ಪಟ್ಟಣ ಪಂಚಾಯತ್‌ ನಡೆಸಿತು.

ಉಡುಪಿ, ಮ೦ಗಳೂರಿನಲ್ಲಿ ಜಿ.ಪ೦ ಮತ್ತು ತಾಲ್ಲೂಕು ಪ೦. ಚುನಾವಣೆಯಲ್ಲಿ ಬಿಜೆಪಿಯ ಜಯಭೇರಿ ; ಎಲ್ಲೆಡೆ ಬಿ.ಜೆ.ಪಿ ಕಾರ್ಯಕರ್ತರಿ೦ದ ಸ೦ಭ್ರಮ-ಸಡಗರ

ಈ ಬಾರಿಯ ಜಿಲ್ಲಾ ಪ೦ಚಾಯತ್ ಮತ್ತು ತಾಲ್ಲೂಕು ಪ೦.ಚುನಾವಣೆಯಲ್ಲಿ  ಉಡುಪಿ ಹಾಗೂ ಮ೦ಗಳೂರಿನಲ್ಲಿ ಬಿಜೆಪಿಯು ಹೆಚ್ಚಿನ ಸ್ಥಾನವನ್ನು ಗೆದ್ದಿದ್ದು ಎರಡು ಜಿಲ್ಲೆಯಲ್ಲಿನ ಜಿಲ್ಲಾ ಪ೦ಚಾಯತ್ ಮತ್ತು ತಾ.ಪ೦ ಆಡಳಿತವನ್ನು ತನ್ನದಾಗಿಸಿಕೊ೦ಡಿದೆ.

 

ಉಡುಪಿ ಜಿಲ್ಲಾ ಪಂಚಾಯತ್ ಮತ್ತು3 ತಾಲೂಕು ಪಂಚಾಯತ್ ಗಳಲ್ಲಿ ಸ್ಪಷ್ಟ ಬಹುಮತ ಗಳಿಸುವ ಮುಖಾ೦ತರ ಬಿಜೆಪಿ ಮೊದಲ ಬಾರಿಗೆ  ಉಭಯ ಜಿಲ್ಲೆಯಲ್ಲಿ ಅಧಿಕಾರದ ಗದ್ದುಗೆಯೇರಿದೆ. ಹಿಂದಿನ ಬಾರಿ ಕಾಂಗ್ರೆಸ್ ಕೈಯಲ್ಲಿದ್ದ ಅಧಿಕಾರವನ್ನು ಬಿಜೆಪಿ 16-9ಅಂತರದಲ್ಲಿ ಕಸಿದುಕೊಂಡಿದೆ. ಜೊತೆಗೆ ಉಡುಪಿ,

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಗೋಪಾಲ ಪೂಜಾರಿ ರಾಜೀನಾಮೆ

ಕುಂದಾಪುರ : ನೈತಿಕ ಹೊಣೆ ಹೊತ್ತು ಉಡುಪಿ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 


ಕಾಂಗ್ರೆಸ್‌ ಪಕ್ಷ ಸದೃಢಗೊಳಿಸುವ ಸಲುವಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿರುತ್ತೇನೆ. ಆದರೆ ಜಿ.ಪಂ. ಹಾಗೂ ತಾ.ಪಂ.ನ ಚುನಾವಣೆಯಲ್ಲಿ ಎಣಿಕೆಯಷ್ಟು ಸ್ಥಾನ ಗಳಿಸುವುದರಲ್ಲಿ ವಿಫಲವಾಗಿರುವ ಕಾರಣ ಅಧ್ಯಕ್ಷ ಸ್ಥಾನವನ್ನು ಬಿಟ್ಟು

ಜ. 6: ಸಮಸ್ತ ಸುನ್ನಿ ಸಮಾವೇಶ

ಮಂಗಳೂರು : ಕೇರಳ ಮಲಪ್ಪುರಂ ಜಿಲ್ಲೆಯ ಪಟ್ಟಿಕ್ಕಾಡ್‌ ಜಾಮಿಅಃ ನೂರಿಯಾ ಅರಬಿಕ್‌ ಕಾಲೇಜಿನ 48ನೇ ವಾರ್ಷಿಕ ಹಾಗೂ 46ನೇ ಪದವಿ ಪ್ರದಾನ ಮಹಾಸಮ್ಮೇಳನ . 14ರಿಂದ 16 ತನಕ ನಡೆಯಲಿದ್ದು, ಇದರ ಪ್ರಚಾರಾರ್ಥಸಮಸ್ತಸುನ್ನಿ ಸಮಾವೇಶ . 6ರಂದು ಮೂಡಿಗೆರೆ ಶಂಸುಲ್‌ ಉಲಮಾ ನಗರದಲ್ಲಿ ನಡೆಯಲಿದೆ ಎಂದು ನಿರ್ವಾಹಕ ಕಾರ್ಯದರ್ಶಿ . ಸಿರಾಜುದ್ದೀನ್‌ ಫೈಝಿ ಬಪ್ಪಳಿಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಡಭಾಂಡೇಶ್ವರ: ಶ್ರದ್ಧಾಭಕ್ತಿಯ ಸಮುದ್ರಸ್ನಾನ

ಮಲ್ಪೆ : ಇಲ್ಲಿನ ವಡಭಾಂಡೇಶ್ವರದಲ್ಲಿ ಎಳ್ಳಮಾವಾಸ್ಯೆಯಂದು ಸಹಸ್ರಾರು ಭಕ್ತರು ಸಮುದ್ರಸ್ನಾನಗೈದು ವಡಭಾಂಡ ಬಲರಾಮ ದೇವರ ದರ್ಶನ ಪಡೆದರು.

ಮುಂಜಾನೆ 3 ಗಂಟೆಗೂ ಮೊದಲೇ ಸಮುದ್ರಸ್ನಾನಕ್ಕಾಗಿ ಜನ ಕಡಲತೀರಕ್ಕೆ ಬರುತ್ತಿರುವುದು ಕಂಡುಬಂತು. 3 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು ಜನ ಸರತಿಸಾಲಿನಲ್ಲಿ ನಿಂತು ದೇವರ ದರುಶನ ಮಾಡಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.

ಯುವಕನಿಗೆ ಎಸ್ಸೆ ಥಳಿತ, ಠಾಣೆಗೆ ಮುತ್ತಿಗೆ, ಎಸ್ಸೆ ಅಮಾನತು

ಮಲ್ಪೆ : ಯಾವುದೇ ದೂರು ದಾಖಲುಗೊಳ್ಳದೆ ಅಮಾಯಕ ಯುವಕನ ಮೇಲೆ ಮಲ್ಪೆ ಠಾಣಾಧಿಕಾರಿ ಹಲ್ಲೆ ನಡೆಸಿರುವ ಆರೋಪದ ಮೇಲೆ ಸಾರ್ವಜನಿಕರು ಮಂಗಳವಾರ ಮಲ್ಪೆ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮಲ್ಪೆ ಬೈಲಕರೆಯ ಕಿಶೋರ್‌ ಎಂಬಾತನಿಗೆ ಪ್ರಕರಣ ಒಂದಕ್ಕೆ ಸಂಬಂಧಿಸಿ ಮಲ್ಪೆ ಠಾಣಾಧಿಕಾರಿ ಸಂತೋಷ್‌ ಶೆಟ್ಟಿ ಅವರು ಠಾಣೆಗೆ ಕರೆಸಿ ಆತನಿಗೆ ಥಳಿಸಿದಲ್ಲದೆ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ. ವಿಷಯವನ್ನರಿತು ಠಾಣೆಗೆ ಕೇಳಲು ಬಂದ ಆತನ ಮನೆಯವರಿಗೆ ಮತ್ತು ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ಬೈದು ತಾನು ಹೊಡೆದ್ದದ್ದು ಹೌದು ನಿವೇನು ಮಾಡುತೀರಿ ಎಂದು ಉದ್ದಟತನದಲ್ಲಿ ತೋರಿಸಿ ಕಾನೂನಿಗೆ ವಿರುದ್ದವಾಗಿ ವರ್ತಿಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಜಿ.ಪಂ-ತಾ.ಪಂ ಫಲಿತಾಂಶ; ಕ್ಷಣಕ್ಷಣದ ಮಾಹಿತಿ

ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ 30 ಜಿಲ್ಲೆಗಳ 1013 ಜಿಲ್ಲಾ ಮತ್ತು 3659 ತಾಲೂಕು ಪಂಚಾಯ್ತಿ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಿಗ್ಗೆಯಿಂದ ಆರಂಭಗೊಂಡಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಕೊಡಗು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ತನ್ನ ಮಡಿಲಿಗೆ ಹಾಕಿಕೊಂಡಿದೆ.

ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಹರಪನಹಳ್ಳಿ, ಮುಂಡಗೋಡ್ ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಗೆ ಬಂದಿದೆ.

ಪಂಚಾಯಿತಿ ಚುನಾವಣೆ : ಕೌಂಟಿಂಗ್‌ ಕೌಂಟ್‌ಡೌನ್‌

171 ಕೇಂದ್ರಗಳಲ್ಲಿ ಮತ ಎಣಿಕೆ

ಬೆಂಗಳೂರು

: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಲಿದ್ದು, 16,634 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇದರೊಂದಿಗೆ ಯಾವ ಪಂಚಾಯಿತಿ ಯಾರ ಪಾಲಿಗೆ ಎಂಬ ಕುತೂಹಲಕ್ಕೂ ತೆರೆ ಬೀಳಲಿದೆ.

14 ರೂ.ಗಳಿಗೆ ರಶೀದಿ ನೀಡದ ನಗರಸಭೆಗೆ 100 ರೂ. ದಂಡ

ಮಡಿಕೇರಿ: ಕೇವಲ 14 ರೂ. ಗಳಿಗೆ ರಶೀದಿ ನೀಡದ ತಪ್ಪಿಗೆ ವಕೀಲರಿಗೆ ನೂರಾರು ರೂಪಾಯಿಗಳ ಶುಲ್ಕ ಹಾಗೂ ಗ್ರಾಹಕರ ವಿವಾದಗಳ ಪರಿಹಾರ ವೇದಿಕೆಯ ಸೂಚನೆಯಂತೆ 100 ರೂ.ಗಳ ದಂಡ ತೆರುವ ಪರಿಸ್ಥಿತಿ ಮಡಿಕೇರಿ ನಗರಸಭೆಗೆ ಬಂದೊದಗಿದೆ.

ನಗರದ ಗಣಪತಿ ಬೀದಿಯ ನಿವಾಸಿ ವೈ.ಎಂ.ಕೌಶಿಕ್‌ ಎಂಬವರು ನಗರಸಭೆಯಿಂದ ಆಸ್ತಿ ವಿವರ ಹಾಗೂ ಆಸ್ತಿ ತೆರಿಗೆ ಸ್ವಯಂ ನಿರ್ಧರಣಾ ನಮೂನೆಯ ಎರಡು ಪ್ರತಿಗಳನ್ನು ಕಳೆದ ಏಪ್ರಿಲ್‌ 5 ರಂದು ನಗರಸಭೆಯಿಂದ ಪಡೆದುಕೊಂಡಿದ್ದು, ಇದರ ಬಾಬು¤ ತಲಾ 7 ರೂ.ಗಳಂತೆ ನಮೂನೆ ದರವನ್ನು ಪಾವತಿಸಿದ್ದರು. ಪಾವತಿಗೆ ಸಂಬಂಧಿಸಿದಂತೆ ರಶೀದಿ ನೀಡದಿರುವ ಬಗ್ಗೆ ಕೌಶಿಕ್‌ ಆವರು ಆಕ್ಷೇಪಿಸಿ, ಲಿಖೀತವಾಗಿ ಕೋರಿದರೂ ನಗರಸಭೆಯ ಅಧಿಕಾರಿಗಳು ರಶೀದಿ ನೀಡಲು ನಿರಾಕರಿಸಿದ್ದರು.

ಉಡುಪಿ: ಮತ ಎಣಿಕೆ-ಸೂಚನೆ

ಉಡುಪಿ: ಉಡುಪಿಯ ಸೈಂಟ್‌ ಸಿಸಿಲೀಸ್‌ ಶಾಲೆಯಲ್ಲಿ .4ರಂದು ಉಡುಪಿ ತಾಲೂಕು ಜಿ.ಪಂ., ತಾ.ಪಂ. ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಅಭ್ಯರ್ಥಿಗಳು, ಎಣಿಕಾ ಏಜೆಂಟರು, ಎಲ್ಲ ಎಣಿಕಾ ಸಿಬಂದಿಗಳು ಕಡ್ಡಾಯವಾಗಿ ತಮಗೆ ನೀಡಿದ ಗುರುತುಚೀಟಿಯೊಂದಿಗೆ ಬೆಳಗ್ಗೆ 7 ಗಂಟೆಗೆ ಹಾಜರಾಗಬೇಕೆಂದು ತಹಶೀಲ್ದಾರ್‌ ವಿ.ಪ್ರಸನ್ನ ಅವರು ಸೂಚಿಸಿದ್ದಾರೆ.

1-1-11ರ ತಿರುಪತಿ ತಿಮ್ಮಪ್ಪನ ’ಕಲೆಕ್ಷನ್’ 3.80 ಕೋಟಿ!

ವಿಶ್ವಪ್ರಸಿದ್ಧ ತಿರುಪತಿ ತಿಮ್ಮಪ್ಪನಿಗೂ ಹೊಸ ವರ್ಷ ಸಂಭ್ರಮವೇ? ಹೌದು, 2011 ಜನವರಿ 1ರಂದು ತಿಮ್ಮಪ್ಪನ ಹುಂಡಿಗೆ ದಾಖಲೆಯ 3.80 ಕೋಟಿ ರೂಪಾಯಿ ಕಾಣಿಕೆ ಬಿದ್ದಿದೆ!

ದೇವಳದ ಇತಿಹಾಸದಲ್ಲೇ ಇದು ದಾಖಲೆ. ಇಷ್ಟೊಂದು ಮೊತ್ತದ ಹುಂಡಿಯನ್ನು ತಿರುಪತಿ ಸೇರಿದಂತೆ ಭಾರತದ ಯಾವುದೇ ದೇವಾಲಯವು ಒಂದೇ ದಿನದಲ್ಲಿ ಕಾಣಿಕೆಯಾಗಿ ಪಡೆದಿರುವ ಉದಾಹರಣೆಯಿಲ್ಲ. ಕಳೆದ ವರ್ಷದ ಕಾಣಿಕೆ ಹೋಲಿಸಿದರೂ ಭಾರೀ ಹೆಚ್ಚಳವಿದು ಎಂದು ತಿರುಮಲ ತಿರುಪತಿ ದೇವಸ್ಥಾನಂ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಮೊದಲ ಅಂತರ್ಜಾಲ:ಪರೀಕ್ಷಾ ತಾಣ ’’’’ಅಚೀವರ್‌’’ ಬಿಡುಗಡೆ

 ಬೆಂಗಳೂರು:ದೆಹಲಿ ಮೂಲದ ಡಿಜಿಟೋಲಜಿ ಇನ್ಫೂಟೆಕ್‌ ಕಂಪೆನಿಯು ಬೆಂಗಳೂರು ಮೂಲದ ಸುಭಾಷ್‌ ಎಂಟರ್ ಪ್ರಸ್ರ್ಸ್‌ನೊಂದಿಗೆ ಸೇರಿ ವಿದ್ಯಾರ್ಥಿಗಳಿಗಾಗಿ ’ಅಚೀವರ್ ಎಂಬ ಪರೀಕ್ಷಾ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದಕ್ಕೆ ಸಂಬಂಧಿಸಿದ ಅಚೀವರ್ ಕಾರ್ಡ್‌ನ್ನು ಕ್ರಿಕೆಟ್‌ ಆಟಗಾರರಾದ ಮನೀಶ್‌ ಪಾಂಡೆ ಮತ್ತು ಆರ್ . ವಿನಯ್‌ಕುಮಾರ್ ಬಿಡುಗಡೆಗೊಳಿಸಿದರು.

ಯುವಕನ ಪ್ರಾಣಕ್ಕೆ ಮುಳುವಾದ ವಿಕೆಟ್!(Comments)

ಉಡುಪಿ: ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ರನ್‌ಗಾಗಿ ಓಡುತ್ತಿದ್ದಾಗ ಆಯತಪ್ಪಿ ವಿಕೆಟ್ ಮೇಲೆ ಬಿದ್ದ ಪರಿಣಾಮ ವಿಕೆಟ್ ಎದೆಗೆ ಚುಚ್ಚಿ ಯುವಕನೊಬ್ಬ ಸಾವನ್ನಪ್ಪಿದ ವಿಸ್ಮಯಕಾರಿ ಘಟನೆ ಭಾನುವಾರ ಸಂಜೆ ನಡೆದಿದೆ.

ಸಾಮಾನ್ಯವಾಗುತ್ತಿರುವ ವಿಚ್ಛೇದನೆ

ಹೊಸದಿಲ್ಲಿ: ವಿವಾಹದ ಪವಿತ್ರ ಬಂಧನಕ್ಕೆ ಹೆಸರು ಪಡೆದಿದ್ದ ಭಾರತದಲ್ಲಿ ಕೂಡ ಇದೀಗ ವಿಚ್ಛೇದನೆ ಎಂಬ ಪದ ತೀರಾ ಸಾಮಾನ್ಯವಾಗುತ್ತಿದೆ. ವೈವಾಹಿಕ ತೊಂದರೆಗಳು ಕಂಡು ಬಂದ ಕೂಡಲೆ ವಿಚ್ಛೇದನೆ ಕೊಟ್ಟು ಇನ್ನೊಂದು ವಿವಾಹವಾಗುವುದು ಸಲೀಸಾಗಿ ನಡೆಯುತ್ತಿದೆ.

ಮಧ್ಯಮ ವರ್ಗದ ಜನರಲ್ಲಿ ಹಾಸುಹೊಕ್ಕಿದ್ದ ಸಾಮಾಜಿಕ ಕಟ್ಟುಪಾಡುಗಳು ಶೀಘ್ರವಾಗಿ ಮಾಯವಾಗುತ್ತಿರುವುದೇ ವಿಚ್ಛೇದನೆಗಳು ಅಧಿಕವಾಗಲು ಕಾರಣ ಎಂದು ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ.

ಸುರಕ್ಷಿತ ಚಾಲನೆ - ಸುಖಕರ ಪ್ರಯಾಣ ಎಲ್ಲಿದೆ ?

ಸಂಚಾರಿ ನಿಯಮ ಉಲ್ಲಂಘನೆ : ಬಿಎಂಟಿಸಿ ಮೇಲೆ 17 ಸಾವಿರ ಕೇಸು !

ಬೆಂಗಳೂರು: ’ ಸುರಕ್ಷಿತ ಚಾಲನೆ- ಸುಖಕರ ಪ್ರಯಾಣಬಿಎಂಟಿಸಿ ಬಸ್‌ ಹತ್ತಿದರೆ ಇಂತಹ ಹಲವಾರು ಘೋಷ ವಾಕ್ಯಗಳು ಕಣ್ಣಿಗೆ ಕಾಣುತ್ತವೆ. ಆದರೆ ಮಾಯಾನಗರಿಯಲ್ಲಿ ಸಂಚಾರಿ ನಿಯಮ ಉಲ್ಲಂ ಸಿ , ಅಪಘಾತ ಮಾಡುವಲ್ಲಿ ಬೆಂಗಳೂರು ಮಹಾ ನಗರ ಸಾರಿಗೆ ಬಸ್‌ಗಳು ಹಿಂದೆ ಬಿದ್ದಿಲ್ಲ.

ನವ ಮಂಗಳೂರುಎನ್‌ಎಂಪಿಟಿ: ಎಲ್‌ಪಿಜಿ ನಿರ್ವಹಣೆಯಲ್ಲಿ ಹೊಸ ದಾಖಲೆ

ನವ ಮಂಗಳೂರು ಬಂದರು ಹೊಸ ವರ್ಷದ ಮೊದಲ ದಿನ 33,000 ಮೆಟ್ರಿಕ್‌ ಟನ್‌ ಎಲ್‌ಪಿಜಿ ನಿರ್ವಹಿಸುವ ಮೂಲಕ ದಾಖಲೆಯ ಸಾಧನೆ ಮಾಡಿದೆ.

ಗುಜರಾತ್‌ನ ಸಿಕ್ಕಾ ಬಂದರಿನಿಂದ ಟೋಟಲ್‌ ಆಯಿಲ್‌ ಇಂಡಿಯಾ ಸಂಸ್ಥೆಗಾಗಿ ಮಹರ್ಷಿ ವಾಮದೇವ ಎಂಬ ಬೃಹತ್‌ ಗ್ಯಾಸ್‌ ಕ್ಯಾರಿಯರ್‌ (ನೌಕೆ) ಈ ಎಲ್‌ಪಿಜಿಯನ್ನು ಹೊತ್ತು ತಂದಿತ್ತು.

ಈ ಹಿಂದೆ ಮಂಗಳೂರು ಬಂದರಿನಲ್ಲಿ ನಿರ್ವಹಿಸಿದ ಎಲ್‌ಪಿಜಿಯ ಗರಿಷ್ಠ ಪ್ರಮಾಣ 27,000 ಮೆಟ್ರಿಕ್‌ ಟನ್‌ ಮಾತ್ರ.

ಗಾಳಿ: ಸೈಂಟ್‌ಮೇರೀಸ್‌ ದೋಣಿಗೆ ಲ್ಯಾಂಡಿಂಗ್‌ ಸಮಸ್ಯೆ

ಪ್ರವಾಸಿಗರಿಗೆ ನಿರಾಸೆ

ಮಲ್ಪೆ : ಕರಾವಳಿಯಲ್ಲಿ ಶುಕ್ರವಾರ ಸಂಜೆಯಿಂದ ಒಂದೇ ಸವನೆ ಬೀಸುತ್ತಿರುವ ಗಾಳಿಯಿಂದಾಗಿ ಮಲ್ಪೆ ಸೈಂಟ್‌ಮೇರಿ ದ್ವೀಪ ಯಾನದ ದೋಣಿಗೆ ದ್ವೀಪದ ಬಳಿ ಲ್ಯಾಂಡಿಂಗ್‌ ಮಾಡಲು ಸಮಸ್ಯೆ ಉಂಟಾಗಿದ್ದು, ಪ್ರವಾಸಿಗರಲ್ಲಿ ನಿರಾಸೆ ಮೂಡಿಸಿದೆ.

ಉಡುಪಿ ಜಿಲ್ಲೆ :66 ಮತದಾನ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.67.76 ಮತದಾನ

ಉಡುಪಿ

: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಸರಾಸರಿ ಒಟ್ಟು ಶೇ. 66.16 ಮತದಾನ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಉಡುಪಿ ತಾಲೂಕಿನಲ್ಲಿ ಶೇ.63.5, ಕಾರ್ಕಳ ತಾಲೂಕಿನಲ್ಲಿ ಶೇ.70 ಮತ್ತು ಕುಂದಾಪುರ ತಾಲೂಕಿನಲ್ಲಿ ಶೇ.65 ಮತದಾನವಾಗಿದೆ.

ಆರಂಭದಲ್ಲಿಯೇ ಮಂದಗತಿಯಲ್ಲಿ ಮತದಾನ ನಡೆದಿತ್ತು. ಅಪರಾಹ್ನವಾಗುತ್ತಿದ್ದಂತೆ ಮತದಾನಕ್ಕೆ ಸ್ವಲ್ಪ ವೇಗ ದೊರಕಿತು. ಮತದಾರರಿಗೆ ಅಷ್ಟೊಂದು ಆಸಕ್ತಿ ಕಾಣದೆ ಇರುವುದು ವ್ಯಕ್ತವಾಗುತ್ತಿತ್ತು. ಆದರೆ ಕಾರ್ಯಕರ್ತರು ಹುಮ್ಮಸ್ಸಿನಿಂದಲೇ ಇದ್ದರು

.

ಎಟಿಎಂ ಕಳವಿಗೆ ವಿಫ‌ಲ ಯತ್ನ

ಬೆಂಗಳೂರು: ನಗರದ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಬ್ಯಾಂಕಿನ ಎಟಿಎಂನ್ನು ದುಷ್ಕರ್ಮಿಗಳು ಸರಳಿನಿಂದ ಮೀಟಿ ಕಳವಿಗೆ ಯತ್ನಿಸಿದ್ದಾರೆ.

ಮುಖ್ಯಮಂತ್ರಿ ಕಾರ್ಯದರ್ಶಿ ಕಾರು ಚಾಲಕ ಲೋಕಾಯುಕ್ತ ಬೆಲೆಗೆ.ಲೋಕಾಯುಕ್ತ ಬಲೆಗೆ ಐದು ಮಂದಿ !

ಬೆಂಗಳೂರು: ಲೋಕಾಯುಕ್ತ ಪೊಲೀಸರು ಗುರುವಾರ ನಡೆಸಿದ ಕಾರ್ಯಚರಣೆಯಲ್ಲಿ ಮುಖ್ಯಮಂತ್ರಿ ಕಾರ್ಯದರ್ಶಿಯ ಕಾರು ಚಾಲಕ ಸೇರಿದಂತೆ ಐವರು ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.

ಬನಶಂಕರಿ ದೇವಾಲಯ ಅರ್ಚಕ‌ರಿಂದ 35 ಸಾವಿರ ರೂ. ಲಂಚ ಪಡೆಯುವಾಗ ಮುಖ್ಯಮಂತ್ರಿ ಕಾರ್ಯದರ್ಶಿ ನಂದಕುಮಾರ್‌ ಅವರ ಕಾರು ಚಾಲಕ ಸುಂದರ್‌ ಹಾಗೂ ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಮುನಿಯಪ್ಪ ಎಂಬಾತ ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾರೆ.

’ಹಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ತಮ್ಮ ವಿರುದ್ಧ ಅನೇಕ ದೂರುಗಳು ಬಂದಿವೆ’ ಎಂದು ಬನಶಂಕರಿ ದೇವಾಲಯ ಅರ್ಚಕ ಆನಂದ್‌ಕುಮಾರ್‌ ಅವರನ್ನು ಬೆದರಿಸಿದ್ದಾರೆ. 3 ಲಕ್ಷ ರೂ. ಕೊಟ್ಟರೆ ಎಲ್ಲವನ್ನು ಸರಿಪಡಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಅರ್ಚಕರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಗುರುವಾರ 35 ಸಾವಿರ ರೂ. ಹಣ ಪಡೆಯುವಾಗ ಸುಂದರ್‌ ಮತ್ತು ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಉಪ ನೋಂದಣಾಧಿಕಾರಿ ಬಲೆಗೆ : ನಿವೇಶನ ನೋಂದಣಿ ಮಾಡುವ ವಿಚಾರವಾಗಿ 30 ಸಾವಿರ ರೂ. ಲಂಚ ಪಡೆಯುವಾಗ ಉಪ ನೋಂದಣಾಧಿಕಾರಿ ಮತ್ತು ಆತನ ಸಹಚರನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.


Symphony98 Releases Soul-Stirring Rendition of Len
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi