ಎಲ್‌ಪಿಜಿ-ಡೀಸೆಲ್‌ ಬೆಲೆ ಹೆಚ್ಚಳ ಇನ್ನೂ ನಿರ್ಧರಿಸಿಲ್ಲ : ಪ್ರಣವ್‌

ಹಲ್ದಿಯಾ : ಎಲ್‌ಪಿಜಿ ಹಾಗೂ ಡೀಸೆಲ್‌ ಬೆಲೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳುವ ಮುನ್ನ ಎಲ್ಲ ವಿಚಾರಗಳನ್ನು ಪರಿಗಣಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್‌ ಮುಖರ್ಜಿ ಹೇಳಿದ್ದಾರೆ. ಡೀಸೆಲ್‌ ಹಾಗೂ ಎಲ್‌ಪಿಜಿ ದರ ಪರಿಷ್ಕರಣೆ ಸಂಬಂಧ ನಡೆಯಲಿರುವ ಸಚಿವರ ಉನ್ನತಾಧಿಕಾರ ಸಮಿತಿ ಸಭೆಗೂ ಮುನ್ನ ಪ್ರಣವ್‌ ಅವರಿಂದ ಹೇಳಿಕೆ ವ್ಯಕ್ತಗೊಂಡಿದೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳದ ಪರಾಮರ್ಶೆ ಯಾವತ್ತೂ ನಡೆಯುತ್ತದೆ. ಎಲ್‌ಪಿಜಿ ಹಾಗೂ ಡೀಸೆಲ್‌ ಬೆಲೆ ಹೆಚ್ಚಿಸುವ ಕುರಿತು ಸರಕಾರ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಂಬಂಧ ಸಚಿವರ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಚರ್ಚಿಸುವ ವೇಳೆ ಎಲ್ಲ ವಿಚಾರವನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸಚಿವರ ಉನ್ನತಾಧಿಕಾರ ಸಮಿತಿ ಅಧ್ಯಕ್ಷರೂ ಆಗಿರುವ ಮುಖರ್ಜಿ ತಿಳಿಸಿದರು.

ಉಡುಪಿ ಜಿಲ್ಲೆ : ಏಳು - ಬೀಳುಗಳ ವರ್ಷಕ್ಕೆ ಚಿನ್ನದ ಮಾಲೆ...!

ಹೊತ್ತಗೆಯೊಂದರ ಪುಟ ಸರಿದು ಹೋದಂತೆ ವರ್ಷವೊಂದು ಸರಿದು ಹೋಯಿತು. ಉಡುಪಿ ಜಿಲ್ಲೆಯ ಪಾಲಿಗೆ 2010 ಕ್ಯಾಲೆಂಡರ್‌ ವರ್ಷ ಬಹು ಅಂಶ ಸವಿನೆನಪಾಗಿ ಉಳಿಯಬಲ್ಲ ಮತ್ತೂಂದು ವರ್ಷದ ಸೇರ್ಪಡೆ. ಸಹಜ ಏಳು - ಬೀಳುಗಳಿಗಿಂತಲೂ ಒಂದಷ್ಟು ಹೆಚ್ಚಿನದನ್ನು ಉಡುಪಿ ಜಿಲ್ಲೆಗೆ ಗತ ವರ್ಷ ತಂದುಕೊಟ್ಟಿದೆ. ಅಶ್ವಿ‌ನಿ , ಮಮತಾರ ಏಷ್ಯಾಡ್‌ ಚಿನ್ನದೊಂದಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಡುಪಿ ಜಿಲ್ಲೆ ಕ್ರೀಡಾಕ್ಷೇತ್ರದಲ್ಲಿ ಮಿನುಗಿದ ವರ್ಷವಿದು. ಶೀರೂರು ಶ್ರೀಗಳ ಪರ್ಯಾಯ ಆರಂಭದೊಂದಿಗೆ ಹೊಸ ವರ್ಷಕ್ಕೆ ಕಾಲಿಟ್ಟ ಉಡುಪಿಯಲ್ಲಿ ಅನಂತರ ಹಲವು ವರ್ಷ- ಹರ್ಷ- ಉತ್ಸವಗಳು ಕಂಡುಬಂದವು. ವರ್ಷಾರಂಭಕ್ಕೆ ಪರ್ಯಾಯ ಮೆರುಗು ದೊರೆತರೆ, ವರ್ಷಾಂತ್ಯ ವೇಳೆ ಜಿಲ್ಲೆಯ ಚಿನ್ನದ ಹುಡುಗಿಯರಿಬ್ಬರು ಹಳೆಯ ಕ್ಯಾಲೆಂಡರ್‌ ಹಾಳೆಗೆ ಚಿನ್ನದ ಲೇಪ ಒತ್ತಿಯೇ ಹೊಸ ಕ್ಯಾಲೆಂಡರ್‌ ನೇತು ಹಾಕಿಸಿದರು!.

ಮಕ್ಕಳಿಗೆ ಶಿಕ್ಷಣವೇ ಮುಖ್ಯವಾಗಲಿ: ಡಾ|ಕಲಾಂ

ಕಲಬುರ್ಗಿ: ಎಲ್ಲ ಮಕ್ಕಳೂ 17ನೇ ವಯಸ್ಸಿನವರೆಗೆ ಶಿಕ್ಷಣ ಬಿಟ್ಟು ಬೇರಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ಮಾಜಿ ರಾಷ್ಟ್ರಪತಿ ಡಾ|.ಪಿ.ಜೆ.ಅಬ್ದುಲ್‌ ಕಲಾಂ ಹೇಳಿದ್ದಾರೆ.

ಕಲಬುರ್ಗಿ ಕಂಪು-2010’ ಬೃಹತ್‌ ಸಮಾವೇಶದ ಅಂಗವಾಗಿ ಶನಿವಾರ ನಡೆದಜಾnನಶಕ್ತಿ ಸಂಗಮಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಲಿ 90 ಹರೆಯದಲ್ಲಿರುವ ತಮ್ಮ ಭೌತಶಾಸŒ ಶಿಕ್ಷಕ ರೆ|ಫಾ|ಚಿನ್ನಾದೊರೈ ಅನುಭವದ ಆಧಾರದ ಮೇಲೆ ಇದನ್ನು ಹೇಳುತ್ತಿದ್ದೇನೆ ಎಂದಧಿರು.

ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷಕರು ವರದಾನವಾಗಬೇಕು. ಮೊದಲು ಶಿಕ್ಷಕರ ಜೀವನವು ಸ್ವತ್ಛತೆ ಹಾಗೂ ಪರಿಶುದ್ಧತೆ ಹೊಂದಿರಬೇಕು. ಅಂದಾಗ ಯಶಸ್ವಿ ಶಿಕ್ಷಕನಾಗಲು ಸಾಧ್ಯ ಎಂದು ತಿಳಿಸಿದರು.

ಕಣ್ಣಿಗೆ ಕಾರದ ಪುಡಿ ಎರಚಿ 55 ಲಕ್ಷ ರೂ. ದರೋಡೆ

ಬೆಂಗಳೂರು: ಬೈಕ್‌ನಲ್ಲಿ ಬಂದಿರುವ ದುಷ್ಕರ್ಮಿಗಳು ಹಣ ತೆಗೆದುಕೊಂಡು ಹೋಗುತ್ತಿದ್ದ ಚಿನ್ನದ ಅಂಗಡಿ ಕೆಲಸಗಾರನ ಕಣ್ಣಿಗೆ ಕಾರದ ಪುಡಿ ಎರಚಿ 55 ಲಕ್ಷ ರೂ. ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.

ಅವೆನ್ಯೂ ರಸ್ತೆಯಲ್ಲಿ ನಂಬೂರ್‌ ಜ್ಯುವೆಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಶಿವಕುಮಾರ ಹಣ ಕಳೆದುಕೊಂಡ ವ್ಯಕ್ತಿ. ವಿದ್ಯಾಶಂಕರ್‌ ಮಾಲಿಕತ್ವದ ನಂಬೂರ್‌ ಜ್ಯುವೆಲ್ಸ್‌ನಲ್ಲಿ ಸುಮಾರು ವರ್ಷಗಳಿಂದ ಈತ ಕೆಲಸ ಮಾಡುತ್ತಿದ್ದ. ಆಭರಣಗಳನ್ನು ಶಿವಾನಂದ ವೃತ್ತದಲ್ಲಿರುವ ರಾಜೇಶ್ವರಿ ಆಭರಣ ಅಂಗಡಿಯಲ್ಲಿ ಖರೀದಿ ಮಾಡುತ್ತಿದ್ದರು. ಶಿವಕುಮಾರ್‌ ಅನೇಕ ಬಾರಿ ಹಣ ಪಾವತಿಸಿ ಆಭರಣ ತೆಗೆದುಕೊಂಡು ಹೋಗುತ್ತಿದ್ದ.

ಉಡುಪಿಯ ಜೋಸ್‌ ಆಲುಕ್ಕಾಸ್‌ನಲ್ಲಿ ಸ್ವರ್ಣ ಗೋದಲಿ !

ಉಡುಪಿ: ಉಡುಪಿಯ ಜೋಸ್‌ ಆಲುಕ್ಕಾಸ್‌ ಮಳಿಗೆಯು ಏಸುಕ್ರಿಸ್ತನ ಜನನವಾದ ಗೋದಲಿಯ ಪ್ರತಿಕೃತಿಯನ್ನು ಸುಮಾರು 1.35 ಕೋ.ರೂ. ವೆಚ್ಚದ ಸ್ವರ್ಣಾಭರಣಗಳ ಮೂಲಕ ನಿರ್ಮಿಸಿ ಕ್ರಿಸ್‌ಮಸ್‌ ಹಬ್ಬಕ್ಕೆ ವಿಶೇಷ ಮೆರುಗು ನೀಡಿದೆ.

ಸ್ವರ್ಣಗೋದಲಿಯು ಒಂದೂವರೆ ಅಡಿ ಉದ್ದ, ಒಂದು ಅಡಿ ಅಗಲ ಹಾಗೂ ಒಂದೂವರೆ ಅಡಿ ಎತ್ತರವಿದೆ. ಸ್ವರ್ಣ ತಟ್ಟೆಯಲ್ಲಿ ಮಲಗಿರುವ ಬಾಲ ಏಸು ಹಾಗೂ ಸುತ್ತಮುತ್ತ ಓರಣವಾಗಿ ಜೋಡಿಸಿರುವ ಜಾನುವಾರುಗಳ ಪ್ರತಿ ಕೃತಿ ಗಮನ ಸೆಳೆಯುತ್ತದೆ. ಗೋದಲಿಗೆ 5 ಕೆ.ಜಿ. ಚಿನ್ನ, 30 ಕ್ಯಾರೆಟ್‌ನ ವಜ್ರ, ವೈಢೂರ್ಯ, ಮುತ್ತುರತ್ನ, ಚಿನ್ನದ ಕರಿಮಣಿ, ಬಳೆ, ಕಂಠಾಭರಣ, ಕಾಲು ಚೈನು, ಮೂಗುತಿ, ಕಿವಿಯ ಓಲೆಗಳನ್ನು ಬಳಸಲಾಗಿದೆ. ಸ್ವರ್ಣ ಗೋದಲಿ ತಯಾರಿಗೆ ಸುಮಾರು 6 ಗಂಟೆ ತಗಲಿದೆ.

ಸಂಭ್ರಮೋಲ್ಲಾಸದಿಂದ ಕ್ರಿಸ್ತ ಜಯಂತಿ ಆಚರಣೆ

ಮಂಗಳೂರು ಕರಾವಳಿ ಜಿಲ್ಲೆಗಳಾದ .ಕನ್ನಡ , ಉಡುಪಿ ಹಾಗೂ ಕಾಸರಗೋಡಿನಲ್ಲಿ ಶನಿವಾರ ಕ್ರಿಸ್ತ ಜಯಂತಿ ಕ್ರಿಸ್ಮಸ್‌ ಹಬ್ಬವನ್ನು ಭಕ್ತಿ, ಸಂಭ್ರಮೋಲ್ಲಾಸಗಳಿಂದ ಆಚರಿಸಲಾಯಿತು.

ಮಂಗಳೂರಿನಲ್ಲಿ ರೊಸಾರಿಯೋ ಕೆಥಡ್ರಲ್‌ನಲ್ಲಿ ಶುಕ್ರವಾರ ರಾತ್ರಿ ಮಂಗಳೂರು ಕೆಥೊಲಿಕ್‌ ಧರ್ಮಪ್ರಾಂತ್ಯದ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್‌É ಡಿಸೋಜ ಅವರ ನೇತೃತ್ವದಲ್ಲಿ ಸಂಭ್ರಮದ ಬಲಿಪೂಜೆ ನೆರವೇರಿತು. ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ಫಾ| ಸ್ಟಾÂನಿ ಗೋವಿಯಸ್‌ ಸಹಿತ ಧರ್ಮಗುರುಗಳು ಉಪಸ್ಥಿತರಿದ್ದರು.

ಬಿಜೆಪಿ ಸರ್ಕಾರದ ಭ್ರಷ್ಟತೆ ಬಗ್ಗೆ ಆಡ್ವಾಣಿ ಮೌನ ಏಕೆ?:ದೇವೇಗೌಡ

ಬೆಂಗಳೂರು:

ದೇಶಾದ್ಯಂತ ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸಲು ಮುಂದಾಗಿರುವ ಬಿಜೆಪಿ ವರಿಷ್ಠ ಎಲ್‌.ಕೆ. ಆಡ್ವಾಣಿ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟ ಆಡಳಿತದ ವಿರುದ್ಧ ಏಕೆ ನಿರ್ಲಿಪ್ತರಾಗಿ ಉಳಿದಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.

ನಗರದ ಆನಂದರಾವ್‌ ವೃತ್ತದ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಪಕ್ಷದ ನಗರ ಘಟಕ ಆಯೋಜಿಸಿದ್ದಮುಖ್ಯಮಂತ್ರಿಗಳೇ ನೀವು ಮಹಾಭ್ರಷ್ಟರು ಮತ್ತು ಸ್ವಜನ ಪಕ್ಷಪಾತಿಎಂಬ ಶೀರ್ಷಿಕೆ ಒಳಗೊಂಡ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧದ ಆರೋಪಪಟ್ಟಿ ಬಿಡುಗಡೆ ಆಂದೋಲನದಲ್ಲಿ ಅವರು ಮಾತನಾಡಿದರು

.

ವಾಜಪೇಯಿಗೆ 87

ಬೆಂಗಳೂರು: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇಂದು 87ನೇ ವಸಂತಕ್ಕೆ ಕಾಲಿರಿಸುತ್ತಿದ್ದಾರೆ.

1924
ಡಿಸೆಂಬರ್‌ 25ರಂದು ಯಮುನಾ ತೀರದ ಬಟೇಶ್ವರದಲ್ಲಿ ಜನಿಸಿದ ವಾಜಪೇಯಿ ಕವಿ ಹೃದಯಿ, ಪತ್ರಕರ್ತ. ಎನ್‌ಡಿಎ ನೇತೃತ್ವದಲ್ಲಿ ಪ್ರಧಾನಿಯಾಗುವುದಕ್ಕಿಂತ ಮುನ್ನ ವಿದೇಶಾಂಗ ಸಚಿವರಾಗಿ ತಮ್ಮ ವಾಕ³ಟುತ್ವದಿಂದ ವಾಜಪೇಯಿ ಉತ್ತಮ ಹೆಸರು ಗಳಿಸಿದ್ದರು.

ಕಾರು ಅಪಘಾತ ಕಾಲ್‌ ಸೆಂಟರ್‌ ಇಬ್ಬರು ಉದ್ಯೋಗಿಗಳು ಸಾವು

ಬೆಂಗಳೂರು: ರಸ್ತೆ ವಿಭಜಕಕ್ಕೆ ಮಾರುತಿ ಕಾರು ಡಿಕ್ಕಿ ಹೊಡೆದು ಯುವತಿ ಸೇರಿದಂತೆ ಇಬ್ಬರು ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

ಕನಕಪುರ ಮೂಲದ ಆರ್‌. ದಿವ್ಯ (24) ಪಶ್ಚಿಮ ಬಂಗಾಳ ಮೂಲದ ಜ್ಯೋತಿರ್ಮಯಿ ಸರ್ಕಾರ್‌ (26) ಸಾವನ್ನಪ್ಪಿದ ದುರ್ದೈವಿಗಳು. ಜಾರ್ಖಂಡ್‌ ಮೂಲದ ಸುಮಿತ್‌ ಬೇಬ್‌ ( 28) ಹಾಗೂ ಕುಂದಾಪುರ ಮೂಲದ ದಾಮೋದರ್‌ ಶೆಟ್ಟಿ (28) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

60ರ ಹರೆಯಕ್ಕೆ ಬಜಪೆ ವಿಮಾನ ನಿಲ್ದಾಣ

ಮಂಗಳೂರು

ಮಂಗಳೂರಿನ ಬಜಪೆ ವಿಮಾನ ನಿಲ್ದಾಣ ಡಿ. 25ರಂದು ಅಂದರೆ ಶನಿವಾರ ತನ್ನ 59 ವರ್ಷವನ್ನು ಪೂರ್ಣಗೊಳಿಸಿ 60 ಹರೆಯ ಪ್ರವೇಶಿಸಲಿದೆ. ಆರು ದಶಕಗಳಲ್ಲಿ ವಿಮಾನ ನಿಲ್ದಾಣದ ಸ್ವರೂಪ ಬದಲಾಗುತ್ತಾ ಆಧುನಿಕವಾಗಿ ಸಾಗಿ ಬಂತು. ಆದರೆ, ಇನ್ನೂ ಹಲವು ಆಶಯಗಳು ಮತ್ತು ಬೇಡಿಕೆಗಳು ?

1951ರಂದು ಬಜಪೆ ವಿಮಾನ ನಿಲ್ದಾಣವನ್ನು ಆಗಿನ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರು ಉದ್ಘಾಟಿಸಿದರು. ಡಿಸಿ-3 ಎಂಬ ಡಕೋಟಾ ಕಂಪೆನಿಯ ವಿಮಾನದಲ್ಲಿ ಅವರು ಮುಂಬಯಿಯಿಂದ ಬಜಪೆಗೆ ಆಗಮಿಸುವ ಮೂಲಕ ಈ ಉದ್ಘಾಟನೆಯಾಯಿತು. ಈ ಪ್ರದೇಶದ ಬಹುಕಾಲದ ಕನಸು ನನಸಾಯಿತು.

ಸೌಹಾರ್ದ, ನೆಮ್ಮದಿಗೆ ಕ್ರಿಸ್ಮಸ್‌ ಸೂರ್ತಿಯಾಗಲಿ ಬಿಷಪ್‌ ರೈ| ರೆ| ಡಾ| ಎ.ಪಿ. ಡಿಸೋಜ

ಮಂಗಳೂರು: ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ (ಕ್ಯಾಥೊಲಿಕ್‌ ಡಯೊಸಿಸ್‌ ಆಫ್‌ ಮಂಗಳೂರಿನ ಬಿಷಪ್‌) ರೈ| ರೆ| ಡಾ| ಎಲೋಶಿಯಸ್‌ ಪಾವ್‌É ಡಿಸೋಜಾ ಅವರು ನೀಡಿರುವ ಕ್ರಿಸ್ಮಸ್‌ ಸಂದೇಶ:

ಅನಂತ್, ಗಡ್ಕರಿ ಮೇಲೆ ನೀರಾ ’ರಾಡಿ’; ಬಿಜೆಪಿಗೆ ಮುಖಭಂಗ........

ಸ್ವತಃ ಬಿಜೆಪಿ ನಾಯಕ ಅನಂತ್ ಕುಮಾರ್ ಲಾಬಿಗಾರ್ತಿ ನೀರಾ ರಾಡಿಯಾ ಜತೆ ಆಪ್ತ ಸಂಬಂಧ ಹೊಂದಿದ್ದರು, ಅವರು ಕಾರ್ಪೊರೇಟ್ ಲಾಬಿಯಿಂದ ಪಾಲನ್ನು ಕೂಡ ತೆಗೆದುಕೊಂಡಿದ್ದರು ಎಂದು ಆರೋಪಿಸಲಾಗಿದ್ದು, 2ಜಿ ಹಗರಣದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದ ಪ್ರಮುಖ ಪ್ರತಿಪಕ್ಷ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.

ಇಂತಹ ಗಂಭೀರ ಆರೋಪಗಳನ್ನು ಮಾಡಿರುವುದು ರಾಡಿಯಾ ಮಾಜಿ ಪಾಲುದಾರ ರಾವ್ ಧೀರಜ್ ಸಿಂಗ್. ನಿರೀಕ್ಷೆಯಂತೆ ಸ್ವತಃ ಅನಂತ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರು ಆರೋಪವನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ, ಧೀರಜ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಪ್ರಕಟಿಸಿದ್ದಾರೆ.

ಶತಮಾನೋತ್ಸವಕ್ಕೆ ಪ್ರತಿಭಾ ಪಾಟೀಲ್‌ ಚಾಲನೆ

ಮುಂಬಯಿ : ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಶತಮಾನೋತ್ಸವ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರಿಂದು ಎನ್‌ಸಿಪಿಎಯಲ್ಲಿ ಜರಗಿದ ಸಮಾರಂಭವೊಂದರಲ್ಲಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ರಾಜ್ಯಪಾಲ ಕೆ. ಶಂಕರನಾರಾಯಣನ್‌, ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌, ಕೇಂದ್ರ ಹಣಕಾಸು ಖಾತೆಯ ಸಹಾಯಕ ಸಚಿವ ನಮೋನಾರಾಯಣ್‌ ಮೀನಾ, ಕೇಂದ್ರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ಸಹಾಯಕ ಸಚಿವ ಗುರುದಾಸ್‌ ಕಾಮತ್‌, ಬ್ಯಾಂಕಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್‌. ಶ್ರೀಧರ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ರಾಷ್ಟ್ರಪತಿಯವರು ಸಂದರ್ಭದಲ್ಲಿ ಬ್ಯಾಂಕಿನ ಶತಮಾನೋತ್ಸವ ಸ್ಮರಣೆಗಾಗಿ ಹೊರತಂದಿರುವ ಅಂಚೆಚೀಟಿಯನ್ನು ಬಿಡುಗಡೆಗೊಳಿಸಿದರು. ಬ್ಯಾಂಕ್‌ ನೂರು ವರ್ಷಗಳ ಸಾಧನೆಗಾಗಿ ದೇಶದ ವಿವಿಧೆಡೆಗಳಲ್ಲಿ ಇಂದು 100 ಎಟಿಎಂಗಳನ್ನು ಪ್ರಾರಂಭಿಸಿದ್ದು, ಇದನ್ನು ರಾಜ್ಯಪಾಲರು ಸಾಂಕೇತಿಕವಾಗಿ ಉದ್ಘಾಟಿಸಿದರು. ಅಂತೆಯೇ 100 ಹಳ್ಳಿಗಳನ್ನು ದತ್ತು ಸ್ವೀಕರಿಸಿ ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವ ಯೋಜನೆಯನ್ನು ನಮೋ ನಾರಾಯಣ್‌ ಮೀನಾ ಉದ್ಘಾಟಿಸಿದರು.

ನ್ಯಾನೋ ಕಾರಿಗೆ ಪ್ರಶಸ್ತಿ

ಮುಂಬಯಿ : ಟಾಟಾ ಮೋಟಾರ್ಸಿನ ಪುಟ್ಟ ಕಾರು ನ್ಯಾನೋಗೆ ಚಿಕಾಗೋ ಅಥೇನಿಯಮ್‌ : ಮ್ಯೂಸಿಯಮ್‌ ಆಫ್‌ ಅರ್ಕಿಟೆಕ್ಚರ್‌ ಆಂಡ್‌ ಡಿಸೈನ್‌ ಕೊಡಮಾಡುವ 2010ನೇ ಸಾಲಿನ ಉತ್ತಮ ವಿನ್ಯಾಸ ಪ್ರಶಸ್ತಿ ದೊರೆತಿದೆ.

ಪ್ರಶಸ್ತಿ ಸಾರಿಗೆ ವಿಭಾಗದಲ್ಲಿ ದೊರೆತಿದೆ ಎಂದು ಟಾಟಾ ಮೋಟಾರ್ಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ನ್ಯಾನೋ ಕಾರು ಖರೀದಿಗೆ ಗ್ರಾಹಕರನ್ನು ಆಕರ್ಷಿಸಲು 48 ತಾಸಿನೊಳಗೆ ಸಾಲ ಸೌಲಭ್ಯ ಒದಗಿಸುವುದಾಗಿ ಟಾಟಾ ಮೋಟಾರ್ಸಿ ಇತ್ತೀಚೆಗೆ ಘೋಷಿಸಿದೆ.

ರಾಜ್ಯದಲ್ಲಿನ 5ಸಾವಿರ ಉಡುಪಿ ಜಿಲ್ಲೆಯ 60ಅನಧಿಕ್ರತ ದೇವಾಲಯವನ್ನು ಕೆಡವಲು ಮು೦ದಾದ ಸರಕಾರ: ಸರಕಾರದ ವಿರುದ್ದ ಹ೦ತ ಹ೦ತವಾಗಿ ಪ್ರತಿಭಟನೆಗೆ ಹಿ೦ದೂ ಸ೦ಘಟನೆಗಳಿ೦ದ ಚಿ೦ತನೆ...

ಕರ್ನಾಟಕ ರಾಜ್ಯದಲ್ಲಿ ಸುಮಾರು 5,000ದೇವಸ್ಥಾನಗಳನ್ನು ಸರಕಾರವು ಕೆಡವಿ ಕೊಡಲು ಮು೦ದಾಗಿದ್ದು ಈಗಾಗಲೇ ರಾಜ್ಯದಲ್ಲಿನ ಸುಮಾರು 100 ದೇವಸ್ಥಾನವನ್ನು ಕೆಡವಿದ್ದು ಅಕ್ಷಮ್ಯ ಅಪಾರಾಧವಾಗಿದೆ ಎ೦ದು ಹಿ೦ದೂ ಸ೦ಘಟನೆ ಆರೋಪಿಸಿದೆ. 

 

ದೇವಸ್ಥಾನವನ್ನು ಕೆಡವುವ ಬಗ್ಗೆ ಸುಪ್ರೀಮ್ ಕೋರ್ಟ್ ದೇವಸ್ಥಾನದ ಪ್ರಮುಖರೊ೦ದಿಗೆ ಮುಖಾಮುಖಿ ಮಾತುಕತೆ ನಡೆಸಿ ನ೦ತರ ಕ್ರಮಕೈಗೊಳ್ಲುವ೦ತೆ ಆದೇಶವನ್ನು ರಾಜ್ಯ ಸರಕಾರಕ್ಕೆ ಈಗಾಗಲೇ ನೀಡಿದೆ.

 

ವಾಹನ ಮಹಾಮೇಳಕ್ಕೆ ಕಾಲಿಟ್ಟ ಕೆಎಸ್‌ಆರ್‌ಟಿಸಿ

ಬೆಂಗಳೂರು: ದೇಶದ ಸರ್ವಶ್ರೇಷ್ಠ ಸರಕಾರಿ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಇದೀಗ ತನ್ನ ದಕ್ಷತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಮತ್ತೂಂದು ಹೆಜ್ಜೆ ಮುಂದಿಟ್ಟಿದ್ದು, ಅಂತಾರಾಷ್ಟ್ರೀಯ ಮೋಟಾರು ವಾಹನ ಮಹಾಮೇಳದಲ್ಲಿ ಭಾಗವಹಿಸಲಿದೆ.

ದುಬಾಯಿ ವಿಮಾನ: ಬಾರದ ಲಗ್ಗೇಜ್‌; ಯಾನಿಗಳಿಂದ ಗಲಾಟೆ

ಮಂಗಳೂರು : ದುಬೈನಿಂದ ಮಂಗಳವಾರ ಮಧ್ಯರಾತ್ರಿ 1.30ಕ್ಕೆ ಹೊರಟು ಬುಧವಾರ ಬೆಳಗ್ಗೆ 6.20ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಏರ್‌ ಇಂಡಿಯಾ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರಲ್ಲಿ ಕೆಲವರ ಲಗ್ಗೇಜ್‌ ಇನ್ನೂ ಬಂದಿಲ್ಲ.

ಯಜಮಾನನ ಶವ ಹೊತ್ತು ತಂದ ಎತ್ತು !

ಚಾಮರಾಜನಗರ

:ಹೃದಯಾಘಾತದಿಂದ ಗಾಡಿಯಲ್ಲಿಯೇ ಮೃತಪಟ್ಟ ಯಜಮಾನನ ದೇಹವನ್ನು ಎತ್ತೂಂದ ರಾತ್ರಿ ವೇಳೆ ಮನೆಗೆ ಹೊತ್ತು ತಂದು ಸ್ವಾಮಿ ನಿಷ್ಠೆ ಮೆರೆದಿದೆ.

ನಗರದ ಅಂಬೇಡ್ಕರ್‌ ಬಡಾವಣೆ ನಿವಾಸಿ, ಕೂಲಿ ಕಾರ್ಮಿಕ ರಾಮಚಂದ್ರ ಎಂಬುವರು ಒಂಟಿ ಎತ್ತಿನ ಗಾಡಿಯಲ್ಲಿ ಮೂಟೆ, ಸಾಮಾಗ್ರಿಗಳನ್ನು ಹೊತ್ತು ಸಾಗಿಸುವ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರ ರಾತ್ರಿ ನಗರದಿಂದ ಸಾಮಾಗ್ರಿಗಳನ್ನು ಎತ್ತಿನ ಗಾಡಿಯಲ್ಲಿ ತುಂಬಿಕೊಂಡು ತಾಲೂಕಿನ ಸಂತೇಮರಹಳ್ಳಿಗೆ ತೆರಳಿದ್ದು, ಅಲ್ಲಿ ಸಾಮಾಗ್ರಿ ಇಳಿಸಿ ನಂತರ ಅಲ್ಲೇ ಇದ್ದ ಮದ್ಯದಂಗಡಿಯಲ್ಲಿ ಮದ್ಯ ಸೇವಿಸಿ, ನಂತರ ಎತ್ತಿನ ಗಾಡಿಯಲ್ಲಿ ಹತ್ತಿ ಕುಳಿತಿದ್ದಾರೆ. ಕ್ಷಣದಲ್ಲಿ ಅವರಿಗೆ ತೀವ್ರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ತನ್ನ ಯಜಮಾನ ಗಾಡಿಯಲ್ಲಿ ಸಾವಿಗೀಡಾಗಿ ಮಲಗಿದ್ದು, ಯಾವುದೇ ಸೂಚನೆ ನೀಡದಿದ್ದರೂ ಸಹ ಎತ್ತು ರಾತ್ರಿ ವೇಳೆಯಲ್ಲಿಯೂ , ವಾಹನಗಳ ಸಂಚಾರ ದಟ್ಟಣೆಯ ನಡುವೆಯೂ ಸುಮಾರು 16 ಕಿ.ಮೀ ದೂರದಿಂದ ಸುರಕ್ಷಿತವಾಗಿ ಯಜಮಾನನ ಮೃತ ದೇಹವನ್ನು ಮನೆಗೆ ಹೊತ್ತು ತಂದು, ಶಬ್ದ ಮಾಡಿದೆ. ಇದರಿಂದ ಎಚ್ಚರಗೊಂಡ ಮನೆಯವರು ಹೊರಗಡೆ ಬಂದು ನೋಡಿದಾಗ ರಾಮಚಂದ್ರರ ಪ್ರಾಣ ಪಕ್ಷಿ ಹಾರಿ ಹೋಗಿರುವುದು ಗಮನಕ್ಕೆ ಬಂತು

.

ಹನೀಫ್ ಉಗ್ರ ಅಲ್ಲ; ಆಸಿಸ್ ಸರಕಾರದಿಂದ ಭರ್ಜರಿ ಪರಿಹಾರ

ಲಂಡನ್‌ನ ಗ್ಲಾಸ್ಕೋ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ್ದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಎಂದು ಆರೋಪಿಸಿ ಸೆರೆಹಿಡಿಯಲ್ಪಟ್ಟು ಬಂಧಮುಕ್ತಗೊಂಡಿದ್ದ ಭಾರತದ ವೈದ್ಯ ಮೊಹಮ್ಮದ್ ಹನೀಫ್‌ಗೆ ಇದೀಗ ಆಸ್ಟ್ರೇಲಿಯಾ ಸರಕಾರ ಬೃಹತ್ ಮೊತ್ತದ ಪರಿಹಾರ ನೀಡಲು ಮುಂದಾಗಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

2007
ರಲ್ಲಿ ಲಂಡನ್‌ನ ಗ್ಲಾಸ್ಕೋ ಏರ್‌ಪೋರ್ಟ್ ದಾಳಿ ಪ್ರಕರಣದಲ್ಲಿ ಡಾ.ಹನೀಫ್ ಉಗ್ರಗಾಮಿ ಎಂದು ಆಸ್ಟ್ರೇಲಿಯಾ ಸರಕಾರ ಆರೋಪಿಸಿ ಮೊಕದ್ದಮೆ ದಾಖಲಿಸಿತ್ತು. ಆದರೆ ಡಾ.ಮೊಹಮ್ಮದ್ ಹನೀಫ್ ಬಗ್ಗೆ ಕೋರ್ಟ್ ಕಟಕಟೆ ಏರಿದ್ದರು. ವಿಚಾರಣೆಯಲ್ಲಿ ಹನೀಫ್ ಉಗ್ರಗಾಮಿ ಹಣೆಪಟ್ಟಿಯಿಂದ ಮುಕ್ತಗೊಂಡಿದ್ದ. ತದನಂತರ ಹನೀಫ್ ಆಸ್ಟ್ರೇಲಿಯಾ ಸರಕಾರದ ವಿರುದ್ಧವೇ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಹನೀಫ್‌ಗೆ ಪರಿಹಾರ ನೀಡುವಂತೆ ಆಸೀಸ್ ಸರಕಾರಕ್ಕೆ ಆದೇಶ ನೀಡಿದೆ.

ಬ್ರಹ್ಮಾವರ: ರಾಷ್ಟ್ರೀಯ ಟೆನಿಸ್‌ ಪಂದ್ಯಾವಳಿ

ಉಡುಪಿ : ಬ್ರಹ್ಮಾವರ ನ್ಪೋರ್ಟ್ಸ್ ಕ್ಲಬ್‌ ಆಶ್ರಯದಲ್ಲಿ, ಎಸ್‌ಎಂಎಸ್‌ ಕಾಲೇಜು ಸಹಭಾಗಿತ್ವದಲ್ಲಿ ರಾಷ್ಟ್ರೀಯ ಕಿರಿಯರ ರಾಕಿಂಗ್‌ ಟೆನಿಸ್‌ ಪಂದ್ಯಾವಳಿ ಡಿ. 27ರಿಂದ 31ರವರೆಗೆ ಬ್ರಹ್ಮಾವರದ ಎಸ್‌.ಎಂ.ಎಸ್‌ ಕಾಲೇಜ್‌ ಮತ್ತು ಲಿಟ್ಲರಾಕ್‌ ಇಂಡಿಯನ್‌ ಸ್ಕೂಲ್‌ ಕ್ಯಾಂಪಸ್‌ನಲ್ಲಿ ನಡೆಯಲಿದೆ.


Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi