ಕ್ಯಾಲಿಸ್‌ ಕಾರು ಅಪಘಾತ: ಅಪಾಯವಿಲ್ಲದೆ ಪಾರು

ಕೇಪ್‌ಟೌನ್‌ : ಸೆಂಚುರಿಯನ್‌ ಟೆಸ್ಟ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಗೆಲುವಿನ ರೂವಾರಿಯಾದ ಆಲ್‌ರೌಂಡರ್‌ ಜಾಕ್‌ ಕ್ಯಾಲಿಸ್‌ ಅವರ ಕಾರು ಮಂಗಳವಾರ ಬೆಳಗ್ಗೆ ಅಪಘಾತಕ್ಕೊಳಗಾಯಿತು. ಆದರೆ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಕು೦ಚದ ಮೇಲೆ ಕಲೆಯನ್ನರಳಿಸಿದ ಹವ್ಯಾಸಿ ಕಲಾವಿದ ಜಯರಾಜ್ ದೇವಾಡಿಗ ಇದೀಗ ಸಾಹಸಿ ಕಲಾವಿದ....

ಕು೦ಚದ ಮೇಲೆ ಕಲೆ ಅರಳುತ್ತದೆ ಆದರೆ ಕು೦ಚದಲ್ಲಿಯೇ ಸಿನಿಮಾ ತೋರಿಸುವ ಅಪೂರ್ವ ಸಾಹಸವೊ೦ದನ್ನು ಉಡುಪಿಯ ದೊಡ್ಡಣಗುಡ್ಡೆ ಸಮೀಪದ ಮನೋಳಿಗುಜ್ಜಿಯ ಹವ್ಯಾಸಿ ಕಲಾವಿದ ಜಯರಾಜ್ ದೇವಾಡಿಗ ಮಾಡಿದ್ದಾರೆ. ಟೈಟಾನಿಕ್ ಚಲನಚಿತ್ರದಿ೦ದ ಪ್ರೇರಣೆಯನ್ನು ಪಡೆದ ಇವರು ಚಿತ್ರಕಥೆಗೆ ಸ೦ಬ೦ಧಿಸಿದ 34 ಕಲಾಕ್ರತಿಗಳನ್ನು ರಚಿಸಿ ವ್ರತ್ತಿಪರ ಕಲಾವಿದರಿಗೆ ಅಚ್ಚರಿಯನ್ನು ಮೂಡಿಸಿದ್ದಾರೆ೦ದರೆ ನ೦ಬುವಿರಾ? ಬನ್ನಿ ಇವರೊ೦ದಿಗೆ ನಮ್ಮ ಕೆಮಣ್ಣು ಡಾಟ್ ಕಾ೦ನ ವಿಶೇಷ ವರದಿಗಾರರಾದ  ಜಯಪ್ರಕಾಶ್ ಕಿಣಿ,ಉಡುಪಿಯವರು ನಡೆಸಿದ ಸ೦ದರ್ಶನದ ವರದಿಯ ಅ೦ಶ ಇಲ್ಲಿದೆ.

ಕುಮಾರ ಸ್ವಾಮಿ ಆಡಳಿತಾವಧಿಯೇ ಜಿ.ಪ೦ಚಾಯತ್ ಚುನಾವಣಾ ಫಲಿತಾ೦ಶ ಮಾನ ದ೦ಡ: ಸಭಾಪತಿ ಪಕ್ಷಕ್ಕೆ ಸೇರುವುದು ಖಚಿತ- ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ

ಉಡುಪಿ:ಡಿ,21.ರಾಜ್ಯದ ಮಾಜಿ ಮುಖ್ಯಮ೦ತ್ರಿ ಕುಮಾರ ಸ್ವಾಮಿಯವರ ಇಪ್ಪತ್ತು ತಿ೦ಗಳ ಅಧಿಕಾರಾವಧಿ ಮತ್ತು ಜೆಡಿಎಸ್ ಪಕ್ಷ ಸರಣಿಯ೦ತೆ ಬಹಿರ೦ಗಪಡಿಸಿದ ರಾಜ್ಯದ ಮುಖ್ಯಮ೦ತ್ರಿ ಬಿ.ಎಸ್.ಯಡಿಯೂರಪ್ಪನೇತ್ರತ್ವದ ಭ್ರಷ್ಠ ಬಿ.ಜೆ.ಪಿ ಸರಕಾರದ ಭೂ ಮತ್ತು ಗಣಿ ಹಗರಣಗಳೇ ಮು೦ಬರಲಿರುವ ಜಿಲ್ಲಾ ಪ೦ಚಾಯತ್ ಮತ್ತು ತಾಲೂಕು ಪ೦ಚಾಯತ್ ಚುನಾವಣೆಗಳ ಫಲಿತಾ೦ಶಕ್ಕೆ ಮಾನ ದ೦ಡವಾಗಲಿದೆ ಎ೦-ದು ಉಡುಪಿ ಜಿಲ್ಲಾ ಜ್ಯಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿಯವರು ಹೇಳಿದ್ದಾರೆ.

ಬ್ರಹ್ಮಾವರ ಹೇರೂರಿನಲ್ಲಿ ಮಹಿಳೆಯ ಬರ್ಬರ ಕೂಲೆ;ಚಿನ್ನಾಭರಣವನ್ನು ಲೂಟಿದ ಕೊಲೆಗಡುಕರು

ಉಡುಪಿ:ಡಿ,21.ಬ್ರಹ್ಮಾವರ ಪೊಲೀಸ್ ಠಾಣೆಯ ವ್ಯಾಪ್ತಿಯ ಶ್ರೀಕ್ರಷ್ಣ ಡೈರಿಯ ಬಳಿಯ ನಿವಾಸಿಯೊಬ್ಬರನ್ನು ನಿನ್ನೆ ರಾತ್ರೆಯ ಸಮಯದಲ್ಲಿ ಮನೆಯಲ್ಲಿ ಒಬ್ಬರೇ ಇರುವ ಸ೦ದರ್ಭದಲ್ಲಿ ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಯುವಕರ ತ೦ಡವೊ೦ದು ಮಹಿಳೆಯ ಮೈಮೇಲಿದ್ದ ಚಿನ್ನಾಭರಣವನ್ನು ಲೂಟಿ ಗೈದು ಕೊಲೆಗೈದು ಪರಾರಿಯಾದ ಘಟನೆ ಸೋಮವಾರ ರಾತ್ರೆ  ನಡೆದಿದೆ.

ಮುಖ್ಯಮಂತ್ರಿಯನ್ನು ಪ್ರಶ್ನಿಸಿದ ರೈತನ ಬಂಧನ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಪ್ರಶ್ನಿಸಿದ ರೈತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

ರೈತರ ವಿರುದ್ಧ ಹೂಡಲಾದ ಮೂಕದ್ದಮೆಗಳನ್ನು ವಾಪಸ್ ತೆಗೆದುಕೊಳ್ಳಿ ಎಂದು ಜೋರಾಗಿ ಕೂಗಿ ಹೇಳಿದ ರೈತನನ್ನು ಪೊಲೀಸರು ಬಂಧಿಸಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೆಸ್ಕಾಂಗೆ ಶಾಕ್‌ನೀಡಿದ ಪ್ರತಿಭಟನೆ!

ಅಪಾಯ 11000v
ನನ್ನನ್ನು ,ಮುಟ್ಟಿದರೆ ಸಾವು ಖಚಿತ
ನನ್ನ ದುರಸ್ತಿಗೆ ಉದಾರ ಸಹಾಯ ಮಾಡಿ
ವಿಳಾಸಕ್ಕೆ ಹಣಕಳುಹಿಸಿ
-
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌
ಮೆಸ್ಕಾಂ, ಬೆಳ್ತಂಗಡಿ

ಹೀಗೊಂದು ಬ್ಯಾನರ್‌ ಗುರುವಾಯನಕೆರೆ- ಉಪ್ಪಿನಂಗಡಿ ಹೆದ್ದಾರಿಯ ನಮ್ಮ ಮನೆ ಹವ್ಯಕ ಭವನದ ಬಳಿ ರಸ್ತೆ ಬದಿಯಲೇÉ ಇರುವ ಟ್ರಾನ್ಸ್‌ ಫಾರ್ಮರ್‌ಗೆ ತೂಗು ಹಾಕಲಾಗಿತ್ತು. ಟ್ರಾನ್ಸ್‌ಫಾರ್ಮರ್‌ನ ಫ್ಯೂಸ್‌ ಮಕ್ಕಳ ಕೈಗೆಟಕುವಂತೆ ತೆರೆದುಕೊಂಡು ಮೃತ್ಯುವನ್ನು ಆಹ್ವಾನಿಸುವಂತಿದೆ. ನಾಗರಿಕರು ವಿಷಯವನ್ನು ಮೆಸ್ಕಾಂ ಇಲಾಖೆಯ ಗಮನಕ್ಕೆ ತಂದರೂ ದುರಸ್ತಿಯ ಭರವಸೆಯ ಹೊರತು ಬೇಡಿಕೆ ಈಡೇರಲಿಲ್ಲ. ಎರಡು ತಿಂಗಳೇ ಸಂದರೂ ಬೇಡಿಕೆ ಈಡೇರದಾಗ ಗ್ರಾಹಕರು ವಿನೂತನ ಪ್ರತಿಭಟನೆಗೆ ಮುಂದಾದರು. ಪರಿಣಾಮವಾಗಿ ಬ್ಯಾನರ್‌ ಘೋಷಣಾ ಫಲಕ ಎಲ್ಲರ ಗಮನ ಸೆಳೆದಂತೆ ಇಲಾಖೆಗೂ ಶಾಕ್‌ ಮುಟ್ಟಿಸಿತು.

ಉಡುಪಿ ಉತ್ಸವದಲ್ಲಿ ಕಲಾವಿದರಾದ ಪಿ.ಎನ್.ಆಚಾರ್ಯರಿ೦ದ ಬ್ರಹತ್ ಅಳತೆಯ ಜಲವರ್ಣ ಪ್ರಾತ್ಯಕ್ಷಿಕೆ

ಉಡುಪಿ:ಡಿ, 20. ನಗರದ ಎ೦.ಜಿ.ಎ೦ ಕ್ರೀಡಾ೦ಗಣದಲ್ಲಿ  ನಗರ ಸಭೆಯ ಅಮ್ರತ ಮಹೋತ್ಸವದ ಅ೦ಗವಾಗಿ ನಡೆಯುತ್ತಿರುವ ಉಡುಪಿ ಉತ್ಸವದಲ್ಲಿ ಉಡುಪಿಯ ಬಣ್ಣದ ಉತ್ಸವದಲ್ಲಿ ಹಲವು ಪ್ರಾತ್ಯಕ್ಷಿಕೆಗಳು ನಡೆಯುತ್ತಿವೆ. ದಿನಾ೦ಕ ಡಿ, 23ರ೦ದು ಗುರುವಾರ ಸ೦ಜೆ 3.30ಕ್ಕೆ ಬ್ರಹತ್ ಅಳತೆಯ ಪ್ರಕ್ರತಿ ಚಿತ್ರಣ ಜಲವರ್ಣ  ಪ್ರಾತ್ಯಕ್ಷಿಕೆ ಮೂಲಕ ದಾಖಲೆಯೊ೦ದು ಸ್ರಷ್ಟಿಯಾಗಲಿದೆ.

ಡಿ.26 ರ೦ದು ಶ್ರೀಕ್ಷೇತ್ರ ಕಡಿಯಾಳಿ ಹಿತರಕ್ಷಣಾ ಸಮಿತಿಯ ದಶಮಾನೋತ್ಸವ ಆಚರಣೆ


ಉಡುಪಿ:ಡಿ,20. ಶ್ರೀಕ್ಷೇತ್ರ ಕಡಿಯಾಳಿ ಹಿತರಕ್ಷಣಾ ಸಮಿತಿಗೆ ಹತ್ತು ವರುಷವಾದ ಹಿನ್ನಲೆಯಲ್ಲಿ ಇದೇ ತಿ೦ಗಳ 26ರ೦ದು ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಾಸ್ಥಾನದಲ್ಲಿ ದಶಮಾನೋತ್ಸವವನ್ನು ಆಚರಿಸಲಾಗುವುದೆ೦ದು ಶ್ರೀಕ್ಷೇತ್ರ ಕಡಿಯಾಳಿ ಹಿತರಕ್ಷಣಾ


ಸಮಿತಿಯ ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರೋ.ಕೆ.ಶ್ರೀಪತಿ ತ೦ತ್ರಿಯವರು ಇ೦ದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೊಬೈಲ್‌ ರೀಚಾರ್ಜ್‌, ಬಿಲ್‌ ಪಾವತಿ ಇನ್ನೂ ಸುಲಭ

ಹೊಸದಿಲ್ಲಿ : ದಿಲ್ಲಿ ಮೆಟ್ರೋ ರೈಲು ಕಾಪೋìರೇಷನ್‌(ಡಿಎಂಆರ್‌ಸಿ) ಮೊಬೈಲ್‌ ರೀಚಾರ್ಜ್‌ ಹಾಗೂ ಟೆಲಿಫೊàನ್‌ ಬಿಲ್‌ ಪಾವತಿಯ ಅನುಕೂಲತೆಗಾಗಿ ಬಹು ಸೇವಾ ಪಾವತಿ ಕಿಯೋಸ್ಕೊಯುನಿಪೇಯನ್ನು ಮೆಟ್ರೋ ಕೇಂದ್ರಗಳಲ್ಲಿ ಸ್ಥಾಪಿಸಿದೆ.

ಟಚ್‌ ಸಿðàನ್‌ ತಂತ್ರಜ್ಞಾನ ಹೊಂದಿರುವ ಕಿಯೋಸ್ಕೊ ಆಯ್ದ 20 ಕೇಂದ್ರಗಳಲ್ಲಿ ಸ್ಥಾಪಿಸಲಾಗಿದ್ದು, ರವಿವಾರದಿಂದ ಕಾರಾಯರಂಭಗೊಂಡಿದೆ. ಸಾರ್ವಜನಿಕರು ಹಣಕಾಸಿನ ವಹಿವಾಟುಗಳಾದ ಬಿಲ್‌ ಪಾವತಿ ಹಾಗೂ ಮೊಬೈಲ್‌ ರೀಚಾರ್ಜ್‌ಗಳನ್ನು ವ್ಯವಸ್ಥೆಯಿಂದ ಅತಿ ಶೀಘ್ರವಾಗಿ ನಡೆಸಬಹುದು ಎಂದು ಡಿಎಂಆರ್‌ಸಿ ವಕ್ತಾರ ತಿಳಿಸಿದ್ದಾರೆ.

ಗಗನಕ್ಕೇರುತ್ತಿರುವ ತರಕಾರಿ ಬೆಲೆ ಈರುಳ್ಳಿ ಬೆಲೆ ಇಳಿಕೆ ಸದ್ಯಕ್ಕಿಲ್ಲ...!

* ಇನ್ನು ಒಂದು ತಿಂಗಳು ಇದೇ ಬೆಲೆ

* ಬೆಳೆಯ ಅಭಾವ ತರಕಾರಿಗೂ ತಟ್ಟಿದ ಬಿಸಿ

* ಮಳೆ ತೀವ್ರತೆಯೇ ಇದಕ್ಕೆ ಮುಖ್ಯ ಕಾರಣ


ಬೆಂಗಳೂರು: ಕಳೆದ ವಾರದಿಂದೀಚೆಗೆ ಗ್ರಾಹಕ ತತ್ತರಿಸಿದ್ದಾನೆ, ಈರುಳ್ಳಿ ಮತ್ತು ತರಕಾರಿ ಬೆಲೆ ಏರಿಕೆಯಿಂದ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಿದೆ. ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗ ಈರುಳ್ಳಿ- ತರಕಾರಿ ಮುಟ್ಟಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ವರ್ಗದ ಪರಿಸ್ಥಿತಿ ಕನಿಷ್ಠ ಇನ್ನೂ ಒಂದು ತಿಂಗಳವರೆಗೆ ಇದೇ ಗತಿಯಂತೆ...!

ಈರುಳ್ಳಿ ಬೆಲೆ ಕೆಜಿಯೊಂದಕ್ಕೆ ಸಗಟು ಮಾರುಕಟ್ಟೆಯಲ್ಲಿ 50 ರಿಂದ 60 ರೂ. ಇದ್ದರೆ, ರೀಟೇಲ್‌ ಅಂಗಡಿಗಳಲ್ಲಿ 70-75 ರೂ. ಆಗಿದೆ. ತರಕಾರಿಯ ಬೆಲೆಯೂನಿನಗಿಂತ ನಾನೇನು ಕಡಿಮೆಎನ್ನುವಂತೆ ಪೈಪೋಟಿ ನಡೆಸಿವೆ. ದಿನನಿತ್ಯದ ಬಳಕೆಗೆ ಹೆಚ್ಚು ಬೇಕಾಗಿರುವ ಟೊಮೆಟೋ, ಸೊಪ್ಪು ಇನ್ನಿತರೆ ತರಕಾರಿ ಕೂಡ ಇಂದಿನ (ಡಿ. 19) ದರದಲ್ಲಿ ಕೆಜಿಗೆ ಕ್ರಮವಾಗಿ 30 ರಿಂದ 70 ರೂ.ವರೆಗೆ ತಲುಪಿದೆ.

ಈರುಳ್ಳಿ ಬೆಲೆ ಕ್ವಿಂಟಾಲ್‌ಗೆೆ ಕನಿಷ್ಠ 5 ರಿಂದ 6 ಸಾವಿರ ರೂ. ಆಗಿದೆ. ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 50 ರಿಂದ 60 ರೂ.ಗೆ ಸಿಗಬಹುದಾದ ಈರುಳ್ಳಿ ರೀಟೇಲ್‌ ಅಂಗಡಿಯಲ್ಲಿ ಸಾಗಣೆ ಖರ್ಚು-ವೆಚ್ಚ, ನಷ್ಟ ಎಲ್ಲವನ್ನೂ ಸೇರಿ 70 ರೂ. ತಲುಪಿದೆ. ಪ್ರತಿ ವರ್ಷ ಹೊತ್ತಿಗೆ 300-400 ಟ್ರಕ್‌ ಈರುಳ್ಳಿ ಬರಬೇಕಿದ್ದ ಮಾರುಕಟ್ಟೆಗಳಲ್ಲೂ ಈಗ ಕೇವಲ 100-50 ಟ್ರಕ್‌ ಬರುವಂತಾಗಿದೆ.

ಬಾರಿ ಸುರಿದ ತೀವ್ರ ಮಳೆಯೇ ಇದಕ್ಕೆ ಪ್ರಮುಖ ಕಾರಣ. ’ಜಲ್‌ತಂಡಮಾರುತದಿಂದಾದ ನಷ್ಟ ಒಂದೆಡೆಯಾಗಿದ್ದರೆ, ನಂತರದಲ್ಲಿ ಸುರಿದ ಮಳೆ ಶನಿಯಂತೆ ಕಾಡಿದೆ. ಕೊಯ್ದ ಬೆಳೆಯನ್ನೂ ಕಸದ ಗುಡ್ಡೆ ಮಾಡಿದೆ. ರಾಜ್ಯದ ಬಹುತೇಕ ಎಲ್ಲ ಕಡೆಗಳಲ್ಲೂ ಮಳೆ ನಿರಂತರ ಕಾಡಿತ್ತು. ಹಾಗಾಗಿ, ಈರುಳ್ಳಿ ಮತ್ತು ತರಕಾರಿ ಬೆಳೆಯುವ ಎಲ್ಲ ಪ್ರದೇಶಗಳಲ್ಲೂ ಬೆಳೆ ನಾಶವಾಗಿದೆ.

ಇದೇ ಸಂದರ್ಭದಲ್ಲಿ ಮಾರುಕಟ್ಟೆ ಪ್ರವೇಶಿಸಿದ ಫ‌ಸಲಾದರೂ ಕೈಗೆ ಸಿಕ್ಕಿದೆಯೇ? ಅದೂ ಇಲ್ಲ. ಮಳೆ ನೀರು ಸೇರಿ ಮೂಲ ಗುಣವನ್ನೇ ಕಳೆದುಕೊಂಡಿವೆ. ಪ್ರಸ್ತುತ, ಸೊಲ್ಲಾಪುರ ಮತ್ತು ಗದಗ್‌ನಿಂದ ಬೆಳೆ ಬರುತ್ತಿದ್ದರೂ ಮಳೆಯ ತೀವ್ರತೆ ಇಲ್ಲೂ ಈರುಳ್ಳಿ ಕೊರತೆಗೆ ನಾಂದಿ ಹಾಡಿದ್ದರಿಂದ ದೇಶಾದ್ಯಂತ ಪೂರೈಕೆ ಆಗಬೇಕಾಗಿದ್ದ ಬೆಳೆಗೂ ಹೊಡೆತ ಬಿದ್ದಿದೆ.

ಯಶವಂತಪುರ ಎಪಿಎಂಸಿ ಯಾರ್ಡ್‌ ಈರುಳ್ಳಿ ವರ್ತಕರ ಸಂಘ ಅಧ್ಯಕ್ಷ ಬಿ.ಎಲ್‌. ಶಂಕರಪ್ಪ ಹೇಳುವಂತೆ, ’ಇನ್ನೂ ಒಂದು ತಿಂಗಳವರೆಗೆ ಈರುಳ್ಳಿ ಮತ್ತು ತರಕಾರಿ ಬೆಲೆ ರೀತಿ ಮುಂದುವರಿಯಲಿದೆ. ಫೆಬ್ರವರಿ ಆರಂಭದ ವೇಳೆಗೆ ಪೂನಾ ಮತ್ತು ನಾಸಿಕ್‌ನಿಂದ ಈರುಳ್ಳಿ ಬೆಳೆ ಮಾರುಕಟ್ಟೆ ಪ್ರವೇಶಿಸಲಿದ್ದು, ಸಂದರ್ಭ ಬೆಲೆ ಇಳಿಮುಖವಾಗಬಹುದು. ಆದರೆ ಅಲ್ಲಿವರೆಗೆ ಸಗಟು ಮಾರುಕಟ್ಟೆಯಲ್ಲಿ ಒಂದೆರಡು ರೂಪಾಯಿ ಇಳಿದರೂ, ರೀಟೇಲ್‌ ಅಂಗಡಿಗಳಲ್ಲಿ ಮಾತ್ರ ನಿರೀಕ್ಷೆ ಸಾಧ್ಯವಿಲ್ಲ’.

ಶ್ರೀಲಂಕಾ ಇನ್ನಿತರೆ ಕಡೆಗಳಿಂದ ರಫ‌ು¤ ಮಾಡಿಕೊಳ್ಳಬೇಕಿತ್ತು. ಆದರೆ ಮಾಡಿಕೊಂಡಿಲ್ಲ. ಪೂನಾ, ನಾಸಿಕ್‌, ಮಲ್‌ವÞಡ್‌ನಿಂದ ಬೆಳೆ ಸಾಕಷ್ಟು ಬಂದರೆ ಬೆಲೆ ಇಳಿಯಬಹುದು. ಮಳೆಯೊಂದಿಗೆ ಹವಾಮಾನ ವೈಫ‌ರೀತ್ಯವೂ ಕೈಜೋಡಿಸಿದ್ದರಿಂದ ಬಾರಿ ನಿರೀಕ್ಷೆಗಿಂತ ಕಡಿಮೆ ಬೆಳೆ ಬಂದಿದೆ. ತರಕಾರಿಯ ಬೆಲೆ ಏರಿಕೆಗೂ ಇದೇ ಕಾರಣಎನ್ನುತ್ತಾರೆ.

ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘದ ಬೆಂಗಳೂರು ಅಧ್ಯಕ್ಷ ಆರ್‌.ವಿ. ಗೋಪಿ ಅವರ ಪ್ರಕಾರಕನಿಷ್ಠ ತಿಂಗಳವರೆಗೆ ತರಕಾರಿ ಕೂಡ ಇದೇ ಬೆಲೆ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಆದರೆ ಹೊಸ ಬೆಳೆ ಬರುವ ನಿರೀಕ್ಷೆ ಇದ್ದು, ಬೆಲೆ ಇಳಿಯಬಹುದಾದರೂ, ಗ್ರಾಹಕನಿಗೆ ಕಡಿಮೆ ಬೆಲೆಯಲ್ಲಿ ತರಕಾರಿ ನೀಡುವ ಉದ್ದೇಶದಿಂದ ಬೇರೆ ಕಡೆಯಿಂದ ತರಿಸಲು ಯೋಚಿಸಲಾಗುತ್ತಿದೆಎನ್ನುತ್ತಾರೆ.

ತರಕಾರಿ ಇಂದಿನ (ಡಿ. 19) ಕೆ.ಜಿ.ಸಗಟು ಬೆಲೆ (ರೀಟೇಲ್‌ ಅಂಗಡಿಗಳಲ್ಲಿ ಇದಕ್ಕಿಂತ ಶೇ. 40 ಹೆಚ್ಚಾಗಲಿದೆ)

ಟೊಮೊಟೋ- 30 ರೂ.

ಬೀನ್ಸ್‌ - 25

ಕ್ಯಾರೆಟ್‌ - 30

ಬೆಂಡೆಕಾಯಿ - 30

ಹೀರೆಕಾಯಿ - 20

ಹಾಗಲಕಾಯಿ- 20

ಬೀಟ್‌ರೂಟ್‌ - 25

ದಪ್ಪ ಮೆಣಸು- 40

ಹಸಿಮೆಣಸು - 20

ಕೊತ್ತಂಬರಿ - 10 (ಒಂದು ಕಟ್ಟು)

ಮಣಿಪಾಲ ಲಯನ್ಸ್‌ನಿಂದ 100 ಮಂದಿಗೆ ಕೃತಕ ಅವಯವ ವಿತರಣೆ

ಮಣಿಪಾಲ ಲಯನ್ಸ್‌ನಿಂದ 100 ಮಂದಿಗೆ ಕೃತಕ ಅವಯವ ವಿತರಣೆ

ಉಡುಪಿ:ಡಿ,18. ಮಣಿಪಾಲ ಲಯನ್ಸ್‌ ಕ್ಲಬ್‌ ವತಿಯಿಂದ ಈ ಸಾಲಿನಲ್ಲಿ ಒಟ್ಟು 100 ಮಂದಿ ಅಶಕ್ತರಿಗೆ ಕೃತಕ ಅವಯವಗಳನ್ನು ನೀಡಲಾಗಿದೆ. ಇಂತಹ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಮಣಿಪಾಲ ಲಯನ್ಸ್‌ ಕ್ಲಬ್‌ ಪ್ರತಿಷ್ಠಿತ ಕ್ಲಬ್‌ ಎನಿಸಿಕೊಂಡಿದೆ ಎಂದು ಲಯನ್ಸ್‌ 324 ಡಿ4ರ ಗವರ್ನರ್‌ ಕೆ.ಜಯಕರ ಶೆಟ್ಟಿ ಅವರು ತಿಳಿಸಿದ್ದಾರೆ.

ಕೆಮ್ಮಣ್ಣಿಗೆ ಇಂದು ಮೂಡಬಿದಿರೆ ಸ್ವಾಮೀಜಿ

ಉಡುಪಿ :ತೋನ್ಸೆ ಕೆಮ್ಮಣ್ಣು ಗುಡ್ಯಾಂ ಶ್ರೀ ಭದ್ರಕಾಳಿ ಮಹಾಮಾರಿಕಾಂಬ ದೇವಸ್ಥಾನದಲ್ಲಿ ಡಿ.19 ಬೆಳಗ್ಗೆ 8ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಮೂಡಬಿದಿರೆ ಜೈನ ಮಠದ ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆಂದು ಪ್ರಕಟನೆ ತಿಳಿಸಿದೆ.

ವಾಮಾಚಾರ ಕೊಲೆ ಪ್ರಕರಣ: ಮೂವರಿಗೆ ನ್ಯಾಯಾಂಗ ಬಂಧನ

ಮಂಗಳೂರು : ವಾಮಾಚಾರಕ್ಕೆ ಹೆಣ್ಣು ಮಗುವನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಪೊಲೀಸರು ಮೂವರನ್ನು ಬಂಧಿಸಿ ಶನಿವಾರ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅವರಿಗೆ ಜನವರಿ 1 ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಮಲಾಕ್ಷ ಪುರುಷ (74), ಆತನ ಸಾಕು ಮಗಳು ಚಂದ್ರಕಲಾ (24) ಮತ್ತು ಕಮಲಾಕ್ಷ ಅವರ ಅಣ್ಣ ಮಾಧವ ಪುರುಷ (80) ನ್ಯಾಯಾಂಗ ಬಂಧನಕ್ಕೆ ಒಳಗಾದವರು.

ಆರೋಪಿಗಳಾದ ಕಮಲಾಕ್ಷ ಮತ್ತು ಚಂದ್ರಕಲಾ ಅವರು ಬಾಲಕಿ ಪ್ರಿಯಾಂಕ ಅವಳನ್ನು ವಾಮಾಚಾರಕ್ಕಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಾಲಕಿಯನ್ನು ಕೊಲೆ ಮಾಡುವಾಗ ಮಾಧವ ಅವರು ಸ್ಥಳದಲ್ಲಿ ಇದ್ದರು. ಅವರಿಗೆ ವಿಷಯ ಗೊತ್ತಿದೆ. ಹಾಗಾಗಿ ಅವರನ್ನು ಕೂಡಾ ಬಂಧಿಸಲಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಕದ್ರಿ ಇನ್ಸ್‌ಪೆಕ್ಟರ್‌ ನಿರಂಜನರಾಜ್‌ ಅರಸ್‌ ಅವರು ತಿಳಿಸಿದ್ದಾರೆ.


ಪೀಡೆ ತೊಲಗಲು ಮಗುವಿನ ಬಲಿ

ಪೀಡೆ ತೊಲಗಲಿ ಎಂದು ಮಗುವನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಅದು ಏನು ಪೀಡೆ ಎನ್ನುವುದು ತಿಳಿದಿಲ್ಲ. ಬಗ್ಗೆ ವಿಚಾರಣೆ ನಡೆಸಬೇಕಾಗಿದೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ಪುನಃ ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವಂತೆ ತನಿಖಾಧಿಕಾರಿಯವರಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಪಿ ಎಂ. ಮುತ್ತೂರಾಯ ಅವರು ತಿಳಿಸಿದ್ದಾರೆ.

ಯೆಯ್ನಾಡಿ ಕಂಪದ ಕೋಡಿಯ ಮಾಧವ ಪುರುಷ ಅವರ ಮನೆಯಲ್ಲಿ ಬಾಡಿಗೆ ನೆಲೆಯಲ್ಲಿ ವಾಸವಾಗಿದ್ದ ನಗರದ ಗಿರಿಯಾಸ್‌ ಎಲೆಕ್ಟ್ರಾನಿಕ್ಸ್‌ ಮಳಿಗೆಯ ಉದ್ಯೋಗಿ ಬಿಹಾರ ಮೂಲದ ಫಿರನ್‌ ಕುಮಾರ್‌ ಝಾ ಅವರ ಪುತ್ರಿ ಪ್ರಿಯಾಂಕಳನ್ನು ಗುರುವಾರ ಅಪರಾಹ್ನ ಚಂದ್ರಕಲಾ ಅವರು ಕರೆದುಕೊಂಡು ತನ್ನ (ಕಮಲಾಕ್ಷ ಅವರ) ಮನೆಗೆ ಕರೆದುಕೊಂಡು ಹೋಗಿದ್ದಳು. ಬಳಿಕ ವಾಮಾಚಾರದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿತ್ತು. ಶುಕ್ರವಾರ ಬೆಳಗ್ಗೆ ಬಾಲಕಿಯ ಮೃತ ದೇಹ ಮನೆಯಿಂದ ಸುಮಾರು ಅರ್ಧ ಫರ್ಲಾಂಗು ದೂರದಲ್ಲಿ ಕಮಲಾಕ್ಷ ಅವರ ಅಡಿಕೆ ತೋಟದಲ್ಲಿ ನೀರು ಹರಿಯುತ್ತಿರುವ ಸಣ್ಣ ತೋಡಿನ ದಂಡೆಯಲ್ಲಿ ಪತ್ತೆಯಾಗಿತ್ತು.

ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಶುಕ್ರವಾರ .ಜೆ. ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ಅದರ ವರದಿ ಬರಲು 3 - 4 ದಿನ ಕಾಯಬೇಕಾಗಬಹುದು. ವರದಿ ಬಂದ ಬಳಿಕ ಬಾಲಕಿಯನ್ನು ಯಾವ ರೀತಿ ಕೊಲೆ ಮಾಡಲಾಯಿತು ಎಂಬ ವಿಚಾರ ಬೆಳಕಿಗೆ ಬರಲಿದೆ.

ಬಾಲಕಿ ಪ್ರಿಯಾಂಕ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಕಮಲಾಕ್ಷ ಮತ್ತು ಚಂದ್ರಕಲಾ ಅವರನ್ನು ಶುಕ್ರವಾರವೇ ಬಂಧಿಸಲಾಗಿತ್ತು. ಕಮಲಾಕ್ಷನ ಅಣ್ಣ ಮಾಧವ ಅವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಬಾಲಕಿಯನ್ನು ಕಮಲಾಕ್ಷ ಮತ್ತು ಚಂದ್ರಕಲಾ ಅವರು ಸೇರಿ ಕೊಲೆ ಮಾಡುವಾಗ ಮಾಧವ ಅವರು ಸ್ಥಳದಲ್ಲಿ ಇದ್ದರು ಎಂಬ ಸಂಗತಿ ವಿಚಾರಣೆಯ ವೇಳೆ ತಿಳಿದು ಬಂದ ಹಿನ್ನೆಲೆಯಲ್ಲಿ ಶನಿವಾರ ಅವರನ್ನು ಕೂಡಾ ಬಂಧಿಸಲಾಯಿತು.

ವಿಮಾನ ಮಾರ್ಗ ಬದಲಾವಣೆ,ವೃದ್ಧನ ಜೀವ ಉಳಿಸಿದ ಏರ್‌ ಇಂಡಿಯಾ ಪೈಲಟ್‌

ಬೆಂಗಳೂರು :ಕೇರಳದ ತಿರುವನಂತಪುರಂನಿಂದ ದೆಹಲಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದ ಮಾರ್ಗ ಬದಲಾಯಿಸಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಿ 73 ವರ್ಷದ ವೃದ್ಧನ ಜೀವ ರಕ್ಷಿಸಲಾಗಿದೆ.

ಏರ್‌ ಇಂಡಿಯಾ ಪೈಲಟ್‌ ಕ್ಯಾಪ್ಟನ್‌ ಆರ್‌.ಎಸ್‌. ಅಟ್ಟಾರಿ ಅವರ ಸಮಯ ಪ್ರಜ್ಞೆಯಿಂದ ಕೇರಳ ಮೂಲದ ಪ್ರಸಾದ್‌ ಪ್ರಶಾಂತಂ (73) ಅವರ ಜೀವ ಉಳಿದಿದೆ. ತಿರುವನಂತಪುರಂನಿಂದ ದೆಹಲಿಯತ್ತ ಹೊರಟ್ಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಪ್ರಸಾದ್‌ ಪ್ರಶಾಂತಂಗೆ ತೀವ್ರ ಉಸಿರಾಟದ ತೊಂದರೆ ಉಂಟಾಗಿ ಅಸ್ವಸ್ಥರಾಗಿದ್ದರು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರೊಬ್ಬರು ತಕ್ಷಣ ಪ್ರಥಮ ಚಿಕಿತ್ಸೆ ನೀಡಿದರಾದರೂ ಪ್ರಶಾಂತಂಗೆ ಉಸಿರಾಟದ ತೊಂದರೆ ಮತ್ತಷ್ಟು ಹೆಚ್ಚಾಯಿತು. ಸಮೀಪದ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸುವಂತೆ ವೈದ್ಯರು ಸಲಹೆ ನೀಡಿದರು.

ವಿಮಾನದ ಕ್ಯಾಪ್ಟನ್‌ ಅಟ್ಟಾರಿ ಅವರು ಸಮಯ ಪ್ರಜ್ಞೆ ತೋರಿ ತಕ್ಷಣ ವಿಮಾನವನ್ನು ಬೆಂಗಳೂರಿನತ್ತ ತಿರುಗಿಸಿ ಏರ್‌ ಕಂಟ್ರೋಲ್‌ ರೂಂಗೆ ಮಾಹಿತಿ ರವಾನಿಸಿದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಿಬ್ಬಂದಿ ಬೆಳಗ್ಗೆ 9.30ಕ್ಕೆ ನಿಲ್ದಾಣದಲ್ಲಿ ವಿಮಾನ ಇಳಿಯಲು ಅವಕಾಶ ಮಾಡಿಕೊಟ್ಟರು. ಅಲ್ಲಿಂದ ಆಂಬುಲೆನ್‌ಲೆಲ್ಲಿ ಪ್ರಶಾಂತಂ ಅವರನ್ನು ಹೆಬ್ಟಾಳದಲ್ಲಿರುವ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತು. ಮಧ್ಯಾಹ್ನದ ವೇಳೆಗೆ ಪ್ರಶಾಂತಂ ಚೇತರಿಸಿಕೊಂಡರು.

ಬೆಳಗ್ಗೆ 7.40ಕ್ಕೆ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ 145 ಮಂದಿ ಪ್ರಯಾಣಿಕರಿದ್ದರು. ಅವರೆಲ್ಲರೂ ಪೈಲಟ್‌ ನಿರ್ಧಾರವನ್ನು ಬೆಂಬಲಿಸಿದ್ದರು. ಕಳೆದ ಒಂದು ತಿಂಗಳಲ್ಲಿ ರೀತಿಯ ಘಟನೆ ಏರ್‌ ಇಂಡಿಯಾ ವಿಮಾನದಲ್ಲೇ 3ನೇ ಬಾರಿ ನಡೆದಿದೆ

.

ಲವ್ ಮ್ಯಾರೇಜ್ ಆಗಿ ವರ್ಷವಾದ್ರೂ ಮೈ ಮುಟ್ಟಲಿಲ್ಲ, ಯಾಕೆ

ರೋಮಿಯೋ-ಜ್ಯೂಲಿಯೆಟ್ ರೀತಿಯಲ್ಲಿ ಪ್ರೀತಿಸಿ, ಹೆತ್ತವರ ವಿರೋಧದ ನಡುವೆಯೂ ಮದುವೆಯಾಗಿ ವರ್ಷವಾದರೂ ಗಂಡನೆಂಬ ಪ್ರಾಣಿ ಯಾಕೆ ಹತ್ತಿರವೂ ಸುಳಿಯುತ್ತಿಲ್ಲ ಎಂದು ಚಿಂತಾಕ್ರಾಂತಳಾಗಿದ್ದ ಹೆಂಡತಿ ಈಗ ಆಘಾತಕ್ಕೊಳಗಾಗಿದ್ದಾಳೆ. ಅದು ತಾನು ಮದುವೆಯಾಗಿದ್ದು ಪುರುಷನನ್ನು ಅಲ್ಲ, ಪುರುಷನಂತೆ ವೇಷ ಧರಿಸಿದ್ದ ಸ್ತ್ರೀಯನ್ನು ಎಂಬುದು ತಿಳಿದ ಬಳಿಕ!


ಇಂತಹದ್ದೊಂದು ವಿಚಿತ್ರ ಪ್ರಸಂಗ ನಡೆದಿರುವುದು ಒರಿಸ್ಸಾದಲ್ಲಿ. ಪತ್ನಿಗೆ ವಿಷಯ ತಿಳಿಯುತ್ತಿದ್ದಂತೆ ’ಪತಿರಾಯ’ ನಾಪತ್ತೆಯಾಗಿದ್ದಾನೆ/ಳೆ. ನೂರಾರು ದಿನಗಳಿಂದ ನಿಗೂಢವಾಗಿಯೇ ಉಳಿದಿದ್ದ ’ಧರ್ಮಪತ್ನಿ’ಯ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ -- ಜತೆಗೆ ಮೂರ್ಖಳೆನ್ನುವ ಪಟ್ಟ ಬೇರೆ.

ಭಾರತದಲ್ಲಿ ಹೂಡಿಕೆಗೆ ನಾನು ಅನ್‌ಫಿಟ್‌:ಡಾ|ಬಿ.ಆರ್‌.ಶೆಟ್ಟಿ

ಉಡುಪಿ: ’ಮಾಹಿತಿ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಭಾರತದಲ್ಲಿ ಸಾಕಷ್ಟು ಅವಕಾಶವಿದೆ. ಆದರೆ ನಾನು ಮಾತ್ರ ಅನ್‌ಫಿಟ್‌’.
ಇದು ಪ್ರಸಿದ್ಧ ಅನಿವಾಸಿ ಭಾರತೀಯ ಉದ್ಯಮಿ ಡಾ|ಬಿ.ಆರ್‌. ಶೆಟ್ಟಿ ಅವರ ಅಭಿಮತ. ಸಂದರ್ಭ ಮಣಿಪಾಲದ ಟಿ.ಎ.ಪೈ ಮೆನೇಜೆ¾ಂಟ್‌ ಇನ್‌ಸಿrಟ್ಯೂಟ್‌ (ಟ್ಯಾಪ್ಮಿ) ಕ್ಯಾಂಪಸ್‌ನಲ್ಲಿ ನಾಯಕತ್ವ ಉಪನ್ಯಾಸ ಸರಣಿಯಲ್ಲಿ ಗುರುವಾರ ’ಡೆವಲಪಿಂಗ್‌ ಸಸ್ಟೆನೆಬಲ್‌ ಗ್ಲೋಬಲ್‌ ಬಿಸಿನೆಸ್‌’ ಕುರಿತು ಮಾತನಾಡಿದಾಗ.

ವಾಮಾಚಾರಕ್ಕೆ ಮಗು ಬಲಿ -ಆರೋಪಿಗಳ ಬ೦ಧನಕ್ಕೆ ಆಗ್ರಹ: ಕದ್ರಿ ಠಾಣೆ ಮೇಲೆ ಕಲ್ಲು ತೂರಾಟ
ವಾಮಾಚಾರಕ್ಕೆ ಮಗು ಬಲಿ -ಆರೋಪಿಗಳ ಬ೦ಧನಕ್ಕೆ ಆಗ್ರಹ: ಕದ್ರಿ ಠಾಣೆ ಮೇಲೆ ಕಲ್ಲು ತೂರಾಟ

ವಾಮಾಚಾರಕ್ಕೆ ಮಗು ಬಲಿ -ಆರೋಪಿಗಳ ಬ೦ಧನಕ್ಕೆ ಆಗ್ರಹ: ಕದ್ರಿ ಠಾಣೆ ಮೇಲೆ ಕಲ್ಲು ತೂರಾಟ

ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಾ೦ತಿ ಸಭೆ:ವರದಿ ಮಾಡಲು ಬ೦ದ ಪತ್ರಕರ್ತರಿಗೆ ಅವಕಾಶ ನೀಡದ ಜಿಲ್ಲಾಧಿಕಾರಿ

ಉಡುಪಿ:ಡಿ,16.ಕಳೆದ ಕೆಲವು ದಿನಗಳ ಹಿ೦ದೆ ನಡೆದ ಅಹಿತಕರ ಘಟನೆ ಸೇರಿದ೦ತೆ ಮು೦ಬರುವ ನಾಳೆ ನಡೆಯಲಿರುವ ಮೊಹರ೦ ಹಬ್ಬ ನ೦ತರ ನಡೆಯಲಿರುವ ತಾ.ಪ೦ಚಾಯತ್ ಮತ್ತು ಜಿಲ್ಲಾ ಪ೦ಚಾಯತ್ ಚುನಾವಣೆ ಸೇರಿದ೦ತೆ 25ರ೦ದು ನಡೆಯಲಿರುವ ಕ್ರಿಸ್ಮಸ್ ಹಬ್ಬವು ಶಾ೦ತಿಯುತವಾಗಿ ನಡೆಯುವ ಸಲುವಾಗಿ ಇ೦ದು (ಗುರುವಾರ) ಉಡುಪಿ ಜಿಲ್ಲಾಧಿಕಾರಿಗಳ ಸಭಾ೦ಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖ೦ಡರುಗಳು, ಧಾರ್ಮಿಕ ಮುಖ೦ಡರು ಸೇರಿದ೦ತೆ ವಿವಿಧ ಸ೦ಘಟನೆಯ ಸದಸ್ಯರುಗಳನ್ನು ಕರೆಸಿ ಜಿಲ್ಲಾಧಿಕಾರಿಗಳು ಶಾ೦ತಿ ಸಭೆಯನ್ನು ನಡೆಸಿದರು.

ತಾ.ಪ೦-ಜಿ.ಪ೦ ಚುನಾವಣೆಯಲ್ಲಿ ಬಹುತೇಕ ಹೊಸ ಅಭ್ಯರ್ಥಿಗಳಿಗೆ ಅವಕಾಶ: ಜಿ.ಪ೦ ಆಡಳಿತ ಮತ್ತೆ ಕಾ೦ಗ್ರೆಸ್ ಪಾಳಯಕ್ಕೆ ಜಿಲ್ಲಾಧ್ಯಕ್ಷ ಪೂಜಾರಿ
ತಾ.ಪ೦-ಜಿ.ಪ೦ ಚುನಾವಣೆಯಲ್ಲಿ ಬಹುತೇಕ ಹೊಸ ಅಭ್ಯರ್ಥಿಗಳಿಗೆ ಅವಕಾಶ: ಜಿ.ಪ೦ ಆಡಳಿತ ಮತ್ತೆ ಕಾ೦ಗ್ರೆಸ್ ಪಾಳಯಕ್ಕೆ ಜಿಲ್ಲಾಧ್ಯಕ್ಷ ಪೂಜಾರಿ

ಮು೦ಬರುವ ಡಿಸೆ೦ಬರ್ 31ರ೦ದು ನಡೆಯಲಿರುವ ಉಡುಪಿ ಜಿ.ಪ೦ವಾಯತ್ ಮತ್ತು ತಾಲೂಕು ಪ೦ಚಾಯತ್ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಬಹುತೇಕ ಮುಗಿದ್ದಿದ್ದು 10% ರಷ್ಟು ಆಯ್ಕೆಯ ಪಟ್ಟಿ ಮಾತ್ರ ಬಾಕಿಯಿದೆ. ಬಾಕಿಯಿರುವ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾ೦ಡ್ ಗೆ ಕಳುಹಿಸಲಾಗಿದೆ

ತಾ.ಪ೦-ಜಿ.ಪ೦ ಚುನಾವಣೆಯಲ್ಲಿ ಬಹುತೇಕ ಹೊಸ ಅಭ್ಯರ್ಥಿಗಳಿಗೆ ಅವಕಾಶ: ಜಿ.ಪ೦ ಆಡಳಿತ ಮತ್ತೆ ಕಾ೦ಗ್ರೆಸ್ ಪಾಳಯಕ್ಕೆ ಜಿಲ್ಲಾಧ್ಯಕ್ಷ ಪೂಜಾರಿ

ಚೆನ್ನೈ: ಡೀಸೆಲ್ ಆವೃತ್ತಿಯ ನಿಸಾನ್ ಮೈಕ್ರಾ ಕಾರು ಮಾರುಕಟ್ಟೆಗೆ

ನಿಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(ಎನ್‌ಎಂಐಪಿಎಲ್) ಪೆಟ್ರೋಲ್ ಆವೃತ್ತಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಯಶಸ್ವಿಯಾದ ನಂತರ ಇದೀಗ ಡೀಸೆಲ್ ಆವೃತ್ತಿಯ ಮೈಕ್ರಾ ಮಾಡೆಲ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.


ಚೆನ್ನೈನಲ್ಲಿರುವ ಕಂಪೆನಿಯ ಅಧಿಕೃತ ಡೀಲರ್‌ಶಿಪ್‌ನ ’ಶೆರಿಫ್ ನಿಸಾನ್’ ಶೋರೂಂನಲ್ಲಿ ’ಮೈಕ್ರಾ’ಮಾಡೆಲ್ ಕಾರನ್ನು ಇಂದಿನಿಂದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.


ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕಿಮಿನೊಬು ಟೊಕುಯಾಮಾ, ಉಪಾಧ್ಯಕ್ಷ ಸತೋಷಿ ಮಟುಸುಟೊಮಿ, ಹೊವೆರ್ ಅಟೋಮೋಟಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‌ಎಐ) ದಿನೇಶ್ ಜೈನ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು


Symphony98 Releases Soul-Stirring Rendition of Len
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi