ಮೈಸೂರು ಬಳಿ ಟೆಂಪೊ ಕೆರೆಗೆ; 29 ಮಂದಿ ಜಲಸಮಾಧಿ

ಬೀಗರ ಔತಣ ಮುಗಿಸಿ ನಂಜನಗೂಡಿನಿಂದ ಮೈಸೂರಿಗೆ ವಾಪಸಾಗುತ್ತಿದ್ದ ವೇಳೆ ಟೆಂಪೊವೊಂದು ದಳವಾಯಿ ಕೆರೆಗೆ ಉರುಳಿದ ಪರಿಣಾಮ ಸುಮಾರು 24 ಮಹಿಳೆಯರು ಸೇರಿದಂತೆ ಒಟ್ಟು 29 ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ಮಂಗಳವಾರ ಸಂಜೆ ನಡೆದಿದೆ.


ನಂಜನಗೂಡಿನಲ್ಲಿ ಬೀಗರ ಔತಣ ಮುಗಿಸಿ ಮೈಸೂರಿಗೆ ವಾಪಸಾಗುತ್ತಿದ್ದ ವೇಳೆ ಮೈಸೂರು-ನಂಜನಗೂಡು ರಸ್ತೆಯ ಸಮೀಪದ ದಳವಾಯಿ ಕೆರೆಗೆ ಟೆಂಪೊ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಟೆಂಪೊದಲ್ಲಿ 33 ಪ್ರಯಾಣಿಕರಿದ್ದು, ಅವರೆಲ್ಲರೂ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳುಕುಪ್ಪೆ ಗ್ರಾಮದವರು.

ಮಣಿಪಾಲ ಎ೦ಡ್ ಪಾಯಿ೦ಟ್ ನಲ್ಲಿ ನೂತನವಾಗಿ ನಿರ್ಮಾಣಗೊ೦ಡ ಜಿಲ್ಲಾಧಿಕಾರಿಗಳ ಕಚೇರಿ ಮಾರಾಟ?

ಮಣಿಪಾಲ:ಡಿ,15. ಮಣಿಪಾಲದ ಎ೦ಡ್ ಪಾಯಿ೦ಟ್....ಪ್ರೇಮಿಗಳ ತಾಣವೆ೦ದು ಹೆಸರುವಾಸಿಯಾಗಿರುವ ಈ ಸ್ಥಳದಲ್ಲಿ ನಿರ್ಮಾಣಗೊ೦ಡಿರುವ ಜಿಲ್ಲಾಧಿಕಾರಿಗಳ ನೂತನ ಕಚೇರಿ ಹಾಗೂ ಸ್ಥಳ ಮಣಿಪಾಲದ ಪೈಗಳ ಬಳಗಕ್ಕೆ ಮಾರಾಟಮಾಡಲಾಗಿದೆ ಎ೦ಬ ವರದಿ ಇದೀಗ ಇಡೀ ಜಿಲ್ಲೆಯ ಜನತೆ ಬೆಚ್ಚಿಬೀಳುವ೦ತೆ ಮಾಡಿದೆ.

 

ಕಳೆದ ನಾಲ್ಕುವರುಷಗಳ ಹಿ೦ದೆ ಈ ಕಟ್ಟಡ ಮಣಿಪಾಲದ ಎ೦ಡ್ ಪಾಯಿ೦ಟ್ ಬೇಕು-ಬೇಡ ಎ೦ಬ ವಾದ-ವಿವಾದ ನಿರ್ಮಾಣವಾಗಿತ್ತು. ನ೦ತರ ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬ೦ದ ಆಡಳಿತಾರೂಡ ಪಕ್ಷಕ್ಕೆ ಇ೦ದೊ೦ದು ಸಾವಾಲಾಗಿ ಪರಿಣಮಿಸಿತು. ಹೀಗೆ ಆಡಳಿತ ಪಕ್ಷದ ಸಚಿವರು, ಶಾಸಕರು ಮಣಿಪಾಲದ ಎ೦ಡ್ ಪಾಯಿ೦ಟ್ ವಠಾರದಲ್ಲೇ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸ್ಥಾಪಿಸಲು ಚಾಲನೆಯನ್ನು ನೀಡಿದರು.

ಬ್ರಹ್ಮಾವರ: ಲಾರಿ ಡಿಕ್ಕಿ- ಸ್ಥಳದಲ್ಲೇ ಬೈಕ್ ಸವಾರನ ದುರ್ಮರಣ

ಬ್ರಹ್ಮಾವರ:ಡಿ,14. ಬ್ರಹ್ಮಾವರ ಉಪ್ಪಿನಕೋಟೆ ಸಮೀಪ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಸೋಮವಾರ ಸಂಜೆ ಸಂಭವಿಸಿದೆ.

ಮಲ್ಪೆಯಲ್ಲಿ ಕೆಲಸಮಾಡುತ್ತಿರುವ ಹಂದಾಡಿಯ ಚಂದ್ರಕಾಂತ ಪೂಜಾರಿ ಮೃತಪಟ್ಟ ದುರ್ದೈವಿ ಯಾಗಿದ್ದು ಇವರು ತನ್ನ ತಾಯಿಯನ್ನು ನೋಡಲು ಉಡುಪಿಯಿಂದ ಕುಂದಾಪುರದ ಕಡೆಗೆ ಹೋಗುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಯಮದೂತ ಲಾರಿಯೊಂದು ಡಿಕ್ಕಿ ಹೊಡೆದು ಗಂಭೀರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟರು ಎನ್ನಲಾಗಿದೆ. ಪ್ರಕರಣ ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

ಕುಂದಾಪುರ-ಗಂಗೊಳ್ಳಿ ಶಾಂತ

ಕುಂದಾಪುರ : ನಗರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಾದ ಕೋಡಿ ಹಾಗೂ ಗಂಗೊಳ್ಳಿಗಳಲ್ಲಿ ಡಿ. 12ರಂದು ಕಂಡುಬಂದ ಬಿಗು ವಾತಾವರಣ ತಿಳಿಯಾಗಿದ್ದು, ರಾತ್ರಿಯ ಅನಂತರ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

ಸ್ಟೇಟ್‌ ಬ್ಯಾಂಕ್‌: ಐವರು ವಿದ್ಯಾ­ರ್ಥಿ­ನಿ­ಯರ ದತ್ತು ಸ್ವೀಕಾರ

ಮಂಗ­ಳೂರು : ಭಾರ­ತೀಯ ಸ್ಟೇಟ್‌ ಬ್ಯಾಂಕ್‌ ಕಂಕ­ನಾಡಿ ಶಾಖೆ ಶಿಕ್ಷ­ಣಕ್ಕೆ ಆರ್ಥಿಕ ನೆರವು ನೀಡುವ ಉದ್ದೇ­ಶ­ದಿಂದ ಐವರು ವಿದ್ಯಾ­ರ್ಥಿ­ನಿ­ಯ­ರನ್ನು ದತ್ತು ಸ್ವೀಕ­ರಿ­ಸಿದೆ.

ಉಚ್ಚಿಲ ಬೋವಿಸ್‌ ಶಾಲೆಯ ಅನನ್ಯಾ ಎನ್‌., ಆಡಂ­ಕುದ್ರು ಸೈಂಟ್‌ ಸೆಬಾ­ಸ್ಟಿ­ಯನ್‌ ಶಾಲೆಯ ಹ್ಯಾಲೆಟ್‌ ಡಿ’ಸೋಜ, ಸೈಂಟ್‌ ಜೆರೋಸ ಶಾಲೆಯ ರಚನಾ, ಧನುಶ್ರೀ ಮತ್ತು ಸೀಮಾ ಅವರು ಆಯ್ಕೆ­ಯಾ­ಗಿ­ರುವ ವಿದ್ಯಾ­ರ್ಥಿ­ನಿ­ಯರು.

ಪೀಠೊಪಕರಣ ಲಂಚ: ಅಧಿಕಾರಿ ದಸ್ತಗಿರಿ

ಉಡುಪಿ : ಕಾರ್ಕಳ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ಲಂಚ ರೂಪದಲ್ಲಿ ತೆಗೆದುಕೊಂಡ ಪೀಠೊಪಕರಣಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಕಾರ್ಕಳದ ಕಾಳಭೈರವ ಫರ್ನಿಚರ್ಸಿ ಮತ್ತು ಎಲೆಕ್ಟ್ರಾನಿಕ್ಸ್‌ ಅಂಗಡಿಯ ಆಡಿಟ್‌ ಮಾಡಿಸಲು ಮಾಲಕ ಪ್ರಕಾಶ್‌ ಹೆಗ್ಡೆ ಅವರು ಸೆ. 6ರಂದು ದಾಖಲೆಗಳನ್ನು ನೀಡಿ ಮನವಿ ಸಲ್ಲಿಸಿದ್ದರೂ ಇದನ್ನು ಮಾಡಿಕೊಡಲು ವಾಣಿಜ್ಯ ತೆರಿಗೆ ಇಲಾಖೆ ಕಾರ್ಕಳದ ಸಹಾಯಕ ಆಯುಕ್ತ (ಲೆಕ್ಕ ಪರಿಶೋಧನೆ) ಎಚ್‌.ಸಿ. ನಾಗರಾಜು ಅವರು ಮನೆಗೆ ಸೋಫಾಸೆಟ್‌ ಮತ್ತು ಡೈನಿಂಗ್‌ ಸೆಟ್‌ನ್ನು ಲಂಚದ ರೂಪದಲ್ಲಿ ಕೇಳಿದರು

ಸಿಂಡಿಕೇಟ್‌ ಬ್ಯಾಂಕ್‌ : ವಿದೇಶಿ ಠೇವಣಿ ಬಡ್ಡಿ ಪರಿಷ್ಕರಣೆ

ಬೆಂಗಳೂರು: ಸಿಂಡಿಕೇಟ್‌ ಬ್ಯಾಂಕ್‌ ಅನಿವಾಸಿ ಭಾರತೀಯರ (ಎನ್‌ಆರ್‌ಇ) ನಿಶ್ಚಿತ ಠೇವಣಿಗಳು ಹಾಗೂ ಎಫ್‌ಸಿಎನ್‌ಆರ್‌ (ಬಿ) ಠೇವಣಿಗಳ ಮೇಲಿನ ಬಡ್ಡಿದರವನ್ನು ಕಳೆದ ಡಿ.1 ರಿಂದಲೇ ಜಾರಿಗೆ ಬರುವಂತೆ ಪರಿಷ್ಕರಿಸಿದೆ.

ಅನಿವಾಸಿ ಭಾರತೀಯರ 1 ವರ್ಷ ಮತ್ತು ಮೇಲ್ಪಟ್ಟು 2 ವರ್ಷಗಳೊಳಗಿನ ಅವ‌ಧಿಗೆ ಶೇ. 2.54 , 2 ವರ್ಷಗಳು ಮತ್ತು ಮೇಲ್ಪಟ್ಟು 3 ವರ್ಷಗಳೊಳಗಿನ ಅವಧಿಗೆ ಶೇ. 2.51 ಹಾಗೂ ಮೂರು ವರ್ಷಗಳಿಂದ ಐದು ವರ್ಷಗಳ ವರೆಗಿನ ಅವಧಿಗೆ ಶೇ. 2.79 ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.

ತುಮಕೂರು ರಸ್ತೆ ಎಲಿವೇಟೆಡ್‌ ಎಕ್ಸ್‌ಪ್ರೆಸ್‌ ಸಂಚಾರಕ್ಕೆ ಮುಕ್ತ

ಬೆಂಗಳೂರು:ಸದಾ ವಾಹನಗಳಿಂದ ಗಿಜಿಗಿಡುವ ತುಮಕೂರು ರಸ್ತೆ ಶನಿವಾರ ಮುಕ್ತ ಮುಕ್ತ. ಸಂಚಾರ ದಟ್ಟಣೆಯಿಂದಾಗಿ ಸದಾ ಗೊಣಗಾಡುತ್ತಾ ಸಾಗುತ್ತಿದ್ದ ವಾಹನ ಸವಾರರು ¶‌ುಲ್‌ಖುಷ್‌.


ಶುಕ್ರವಾರ ಬೆಳಗ್ಗೆ ಟ್ರಾಫಿಕ್‌ ಜಾಮ್‌ ಕಿರಿಕಿರಿ ಅನುಭವಿಸಿ ತುಮಕೂರು, ಹಾಸನ, ಧರ್ಮಸ್ಥಳದ ಕಡೆ ಹೊರಟಿದ್ದ ವಾಹನಗಳು ರಾತ್ರಿ ಬರುವಷ್ಟರಲ್ಲಿ ನೋ ಟ್ರಾಫಿಕ್‌. ಸಿಗ್ನಲ್‌ ಫ್ರೀ. ಇದೆಲ್ಲವೂ ಗೊರಗುಂಟೆಪಾಳ್ಯದಿಂದ-ನೆಲಮಂಗಲದವರೆಗಿನ 19.7 ಕಿ.ಮೀ. ಉದ್ದದ ಎಲಿವೇಟೆಡ್‌ ಎಕ್ಸ್‌ಪ್ರೆಸ್‌ ಹೈವೇ ಕಮಾಲ್‌.

ಬಜಪೆ ವಿಮಾನ ದುರಂತ 7 ಮಂದಿ ವಾರಸುದಾರರಿಗೆ ಸೊತ್ತು ಹಸ್ತಾಂತರ

ಮಂಗಳೂರು : ಬಜಪೆಯಲ್ಲಿ ಕಳೆದ ಮೇ 22ರಂದು ವಿಮಾನ ದುರಂತ ಸಂಭವಿಸಿದ ಸ್ಥಳದ ಅವಶೇಷಗಳೆಡೆಯಲ್ಲಿ ಪತ್ತೆಯಾದ ವಾರಸುದಾರರಿಲ್ಲದ ಸೊತ್ತುಗಳನ್ನು ಗುರುತುಹಚ್ಚುವ ಮತ್ತು ಹಸ್ತಾಂತರಿಸುವ ಕಾರ್ಯಕ್ರಮ ಏರ್‌ ಇಂಡಿಯಾ ಸಂಸ್ಥೆಯ ವತಿಯಿಂದ ಶ‌ನಿವಾರ ಇಲ್ಲಿ ನಡೆಯಿತು.

 

ಮುಂಬಯಿಯಿಂದ ಬಂದ ಏರ್‌ ಇಂಡಿಯಾ ಕಂಪೆನಿಯ 7 ಮಂದಿಯ ತಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.

ಡಿ. 13ರಿಂದ ಬಿಲ್‌ ಮೇಲ್‌ ಐಡಿ ಲಭ್ಯ

ಮಂಗಳೂರು : ಇ- ಕಾಮರ್ಸ್‌ ಕ್ಷೇತ್ರದಲ್ಲಿ ವಿಶ್ವದ ಚಿತ್ರಣವನ್ನೇ ಬದಲಾಯಿಸಬಲ್ಲ ’ಬಿಲ್‌ ಮೇಲ್‌ ಐಡಿ’ ಡಿ. 13ರಂದು ಜಾಗತಿಕವಾಗಿ ಬಳಕೆಗೆ ಲಭ್ಯವಾಗಲಿದೆ.

 

ಈಗಾಗಲೇ ಬಿಲ್‌ ಮೇಲ್‌ ಐಡಿ ಪರೀಕ್ಷಾರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 20,000 ಮಂದಿ ನೋಂದಣಿ ಪಡೆದಿದ್ದಾರೆ. ಅಪರೂಪದ ಐಡಿಯನ್ನು ಹೊಂದಿರುವ ಈ ಬಿಲ್‌ಮೇಲ್‌ ಐಡಿ ಭವಿಷ್ಯದಲ್ಲಿ ಎಲ್ಲಾ ಬಿಲ್‌ಗ‌ಳ ಹಬ್‌ ಅಗಲಿದೆ ಎಂದು ಬಿಲ್‌ಮೇಲ್‌ ಐಡಿಯ ಸ್ಥಾಪಕ ಹಾಗೂ ಅಧ್ಯಕ್ಷ ಪಿ.ಸಿ. ಹಸೀರ್‌ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಪೇಜಾವರಶ್ರೀಗಳಿಗೆ ಆಡ್ವಾಣಿ ಕೋಟಿ ಪ್ರಣಾಮ

ಉಡುಪಿ : ಸಾಧುಸಂತರು, ಮಹಾಪುರುಷರ ಸಂಪರ್ಕದಿಂದ ನೈತಿಕ ಶುದ್ಧೀಕರಣ ನಡೆಯುತ್ತದೆ. ದಶಕಗಳ ಕಾಲದಿಂದ ಸಂಪರ್ಕ ಹೊಂದಿರುವ ಪೇಜಾವರ ಶ್ರೀಗಳು ಶತಮಾನಗಳನ್ನು ಪೂರೈಸಬೇಕು. ಅವರಿಗೆ ಅಭಿವಂದಿಸುವ ಅವಕಾಶ ಸಿಕ್ಕಿರುವುದಕ್ಕೆ ಅವರಿಗೆ ಕೋಟಿ ಕೋಟಿ ಪ್ರಣಾಮ ಎಂದು ಮಾಜಿ ಉಪಪ್ರಧಾನಿ ಎಲ್‌.ಕೆ.ಆಡ್ವಾಣಿ ಹೇಳಿದ್ದಾರೆ.

ಪೇಜಾವರ ಶ್ರೀಗಳ ಅಭಿನಂದನಾ ಸಮಾರಂಭದಲ್ಲಿ ಶನಿವಾರ ನಡೆದ ಸಾಮಾಜಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ತಮ್ಮ ಸರಕಾರವಿರುವಾಗ ಕಾಮನ್‌ವೆಲ್ತ್‌ ಕ್ರೀಡೆಗಾಗಿ ನಿರ್ಣಯ ಮಾಡಿತು. ಮೂಲ ಸೌಕರ್ಯಗಳನ್ನು ನಿರ್ಮಿಸಿದ ಬಳಿಕ ಅದನ್ನು ಬಡವಿದ್ಯಾರ್ಥಿಗಳಿಗೆ ಒದಗಿಸುವುದೆಂದು ತೀರ್ಮಾನಿಸಿತು. ಆದರೆ ಅದು ಈಗ ತಿರುವು ಮುರುವಾಯಿತು ಎಂದರು. ಇಲ್ಲಿ ಶ್ರೀಪಾದರು ಜಾತಿಮತಭೇದವಿಲ್ಲದೆ 200 ವಿದ್ಯಾರ್ಥಿಗಳಿಗೆ ವಸತಿ ಇರುವ ವಸತಿನಿಲಯವನ್ನು ನಿರ್ಮಿಸಿರುವುದು ಶ್ಲಾಘನೀಯ ಎಂದರು.

ಟಿವಿ ರಿಯಾಲಿಟಿ ಶೋವೊಂದರಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೋರ್ವ ಆತ್ಮಹತ್ಯೆ: ರಾಖೀ ಬಂಧನಕ್ಕೆ ತಡೆಯಾಜ್ಞೆ

ಅಲಹಾಬಾದ್‌: ಟಿವಿ ರಿಯಾಲಿಟಿ ಶೋವೊಂದರಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ನಟಿ ರಾಖೀ ಸಾವಂತ್‌ ಅವರನ್ನು ಬಂಧಿಸುವುಕ್ಕೆ ಅಲಹಾಬಾದ್‌ ಹೈಕೋರ್ಟು ಶುಕ್ರವಾರ ತಡೆಯಾಜ್ಞೆ ನೀಡಿತು.


ಝಾನ್ಸಿಯ ಸಾವಿತ್ರಿದೇವಿ ಎಂಬವರು ಪ್ರೇಮ್‌ನಗರ್‌ ಪೊಲೀಸ್‌ ಠಾಣೆಗೆ ಸಲ್ಲಿಸಿದ್ದ ದೂರನ್ನು ಪ್ರಶ್ನಿಸಿ ಸಾವಂತ್‌ ಸಲ್ಲಿಸಿರುವ ರಿಟ್‌ ಅರ್ಜಿ ಮೇಲೆ ಜಸ್ಟಿಸ್‌ ಇಮಿ¤ಯಾಜ್‌ ಮುರ್ತಾಜಾ ಮತ್ತು ಜಸ್ಟಿಸ್‌ ರಾಮ್‌ ಅವತಾರ್‌ ಸಿಂಗ್‌ ಅವರನ್ನೊಳಗೊಂಡ ವಿಭಾಗ ಪೀಠ ಆದೇಶ ಹೊರಡಿಸಿತು. ಸಾವಿತ್ರಿದೇವಿ ಅವರ ಪುತ್ರ ಲಕ್ಷ್ಮಣ್‌ ಎಂಬಾತ ಸಾವಂತ್‌ ಏರ್ಪಡಿಸಿದ್ದ ಟಿವಿ ಶೋದಲ್ಲಿ ಪಾಲ್ಗೊಂಡಿದ್ದ ಮತ್ತು ಕೆಲ ವಾರಗಳ ಬಳಿಕ ಸಾವಿಗೀಡಾಗಿದ್ದ.

ತಂದೆಗೆ ಕೊಟ್ಟ ಮಾತಿಗೆ... ಮದ್ಯ ಜಾಹೀರಾತಿಗೆ ಒಲ್ಲೆ ಎಂದ ಸಚಿನ್‌

ಮುಂಬಯಿ : ಸಚಿನ್‌ ತೆಂಡುಲ್ಕರ್‌ ಮಾತಿಗೆ ತಪ್ಪದ ಮಗ ಎನಿಸಿಕೊಂಡಿದ್ದಾರೆ. ಹಿಂದೊಮ್ಮೆ ತಂದೆಗೆ ಕೊಟ್ಟ ಮಾತಿನಂತೆ, ಬಹುಕೋಟಿ ಮೊತ್ತದ ಮದ್ಯ ಕಂಪೆನಿಯ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಒಲ್ಲೆ ಎಂದಿದ್ದಾರೆ.


ಮೂಲವೊಂದರ ಪ್ರಕಾರ, ಪ್ರಮುಖ ಮದ್ಯ ತಯಾರಿಕಾ ಕಂಪೆನಿಯೊಂದು ಸಚಿನ್‌ ಜೊತೆ ವಾರ್ಷಿಕ 20 ಕೋಟಿ ರೂ. ಮೊತ್ತದ ಒಪ್ಪಂದದ ಪ್ರಸ್ತಾವವನ್ನು ಮುಂದಿಟ್ಟಿತು. ಆದರೆ ಮಾಸ್ಟರ್‌ಬ್ಲಾಸ್ಟರ್‌ ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ಕಾಲೇಜು ಹುಡುಗಿಯರ ’ಹುಡುಗಾಟ’ಕ್ಕೆ ಬಲಿಯಾದಳು ಹುಡುಗಿ

ತನ್ನದೇ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರ ವಿಕೃತ ಸಂತೋಷಕ್ಕೆ ಕಿರಿಯ ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿರುವ, ಲಕ್ಷ್ಮಿ ಅಭಿನಯದ ’ಗಾಳಿಮಾತು’ ಚಿತ್ರದ ಅಂತ್ಯವನ್ನು ನೆನಪಿಸುವ ಪ್ರಸಂಗವಿದು. ಇದಕ್ಕೆ ಕಾರಣರಾದ ಮೂವರೂ ವಿದ್ಯಾರ್ಥಿನಿಯರೀಗ ಜೈಲು ಸೇರಿದ್ದಾರೆ.

ಸಿಗರೇಟ್‌ ವಿವಾದ : ಅಂಗಡಿ ಮಾಲಕನನ್ನು ಬೆಂಕಿ ಹಚ್ಚಿ ಕೊಂದ ಶಾಲಾ ಬಾಲಕ

ಗುರ್ಗಾಂವ್‌ : ತನಗೆ ಸಿಗರೇಟ್‌ ನೀಡಲು ನಿರಾಕರಿಸಿದನೆನ್ನುವ ಒಂದೇ ಕಾರಣಕ್ಕೆ ಶಾಲಾ ಬಾಲಕನೊಬ್ಬ 45ರ ಹರೆಯದ ಅಂಗಡಿ ಮಾಲಕನಿಗೆ ಬೆಂಕಿ ಹಚ್ಚಿದ್ದಾನೆ. ಸುಟ್ಟ ಗಾಯಗಳಿಗೊಳಗಾದ ಆತನನ್ನು ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ¶‌ಲಕಾರಿಯಾಗದೆ ಆತ ಆಸ್ಪತ್ರೆಯಲ್ಲೇ ಸಾವನ್ನಪ್ಪಿದನೆಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಭ್ರಷ್ಟಾಚಾರದ ನಿರ್ಮೂಲನಕ್ಕೆ ಹೊಸ ವೆಬ್‌ಸೈಟ್‌

ಹೊಸದಿಲ್ಲಿ : ಭ್ರಷ್ಟಾಚಾರದ ನಿರ್ಮೂಲನೆಯಲ್ಲಿ ಜನರನ್ನು ತೊಡಗಿಸಿಕೊಳ್ಳಲು ಕೇಂದ್ರ ಜಾಗೃತ ಆಯೋಗವು(ಸಿವಿಸಿ) ವಿಶೇಷ ವೆಬ್‌ಸೈಟ್‌ ಸ್ಥಾಪಿಸಿದೆ. ಸರಕಾರಿ ಇಲಾಖೆಗಳಲ್ಲಿ ನಡೆಯುವ ಭ್ರಷ್ಟಾಚಾರದ ವೀಡಿಯೋ, ಧ್ವನಿಮುದ್ರಣ ಹಾಗೂ ದೂರುಗಳನ್ನು ಜನರೆ ಇಲ್ಲಿ ದಾಖಲಿಸಬಹುದು.

ಭ್ರಷ್ಟಾಚಾರ ವಿರೋಧಿ ಜಾಗೃತ ದಳದ ಅಧಿಕಾರಿಗಳ ಪ್ರಕಾರ ಈ ಹೊಸ ವೆಬ್‌ ಸೈಟ್‌ ’ವಿಗ್‌-ಐ’ಯು ಅನ್ಯಾಯಕ್ಕೆ ಒಳಗಾದ ನಾಗರಿಕನಿಗೆ ಅಥವಾ ಭ್ರಷ್ಟಾಚಾರವನ್ನು ಬಯಳಿಗೆಳಿಯಲು ಬಯಸುವವನಿಗೆ ಸಿವಿಸಿ ಜೊತೆ ನೇರ ಸಂಪರ್ಕಕ್ಕೆ ಹೊಂದಲು ಅವಕಾಶ ಕಲ್ಪಿಸುತ್ತದೆ.

ಮಂಗಳೂರು: ವಿಶ್ವ ಕೊಂಕಣಿ ಏಕತಾ ದಿವಸ / ಕೊಂಕಣಿಗರ ಕೊಡುಗೆ ಅದ್ವಿತೀಯ- ರಾಷ್ಟ್ರಪತಿ ಪ್ರತಿಭಾ

ಮಂಗಳೂರು: ಶಿಕ್ಷಣ, ಭಾಷೆ, ಸಂಸ್ಕೃತಿ ಸಹಿತ ಸಮಾಜಕ್ಕೆ ಕೊಂಕಣಿ ಭಾಷಿಗರು ನೀಡುತ್ತಿರುವ ಕೊಡುಗೆ ಅದ್ವಿತೀಯ ಎಂದು ರಾಷ್ಟ್ರಪತಿ ಪ್ರತಿಭಾದೇವಿಸಿಂಗ್‌ ಪಾಟೀಲ್‌ ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಮಾಂಡ್‌ ಸೊಭಾಣ್‌ ಸಂಸ್ಥೆ ಏರ್ಪಡಿಸಿರುವ ಪ್ರಥಮ ವಿಶ್ವ ಕೊಂಕಣಿ ಸಾಂಸ್ಕೃತಿಕ ಮಹಾಮೇಳದ ಅಂಗವಾಗಿ ಗುರುವಾರ ಇಲ್ಲಿ ಜರಗಿದ ’ವಿಶ್ವ ಕೊಂಕಣಿ ಏಕತಾ ದಿವಸ’ದಲ್ಲಿ ಅವರು ಪ್ರದಾನ ಅತಿಥಿಯಾಗಿದ್ದರು.

ಕೊಂಕಣಿ ಜನತೆ ಶಾಂತಿಪ್ರಿಯರು. ಶ್ರೀಮಂತ ಸಂಸ್ಕೃತಿಯನ್ನು ಹೊಂದಿದವರು. ಪಶ್ಚಿಮ ಕರಾವಳಿಯ ಕೊಂಕಣಿ ಪ್ರಾಂತದಲ್ಲಿ ಸುಮಾರು 50 ಲಕ್ಷ ಕೊಂಕಣಿಗರು ನೆಲೆಸಿದ್ದಾರೆ. ಕಠಿನ ಪರಿಶ್ರಮದಿಂದ ಯಶಸ್ಸು ಸಾಧಿಸಿದ್ದಾರೆ. ದೇಶದ ಸ್ವಾತಂತ್ರÂ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಸ್ವತಂತ್ರ ಭಾರತದ ರಾಜಕೀಯ, ಆರ್ಥಿಕ, ಸಾಮಾಜಿಕ ಜೀವನಕ್ಕೆ ಅನನ್ಯವಾಗಿ ಸ್ಪಂದಿಸುತ್ತಿದ್ದಾರೆ. ಹಿಂದೂ, ಕ್ರೈಸ್ತ, ಮುಸ್ಲಿಂ ಸಹಿತ

ಅಗ್ನಿ-II ಸುಧಾರಿತ ಕ್ಷಿಪಣಿಯ ಪರೀಕ್ಷೆ ವಿಫಲವಾಗಿದೆ.

ಅಗ್ನಿ-II ಸುಧಾರಿತ ಕ್ಷಿಪಣಿಯ ಪರೀಕ್ಷೆ ವಿಫಲವಾಗಿದೆ. ಒರಿಸ್ಸಾ ಕರಾವಳಿಯ ಪರೀಕ್ಷಾ ಕೇಂದ್ರದಿಂದ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ಅದು ಬಂಗಾಳ ಕೊಲ್ಲಿಯ ಸಾಗರದಲ್ಲಿ ಪತನಗೊಂಡಿದ್ದು, ಭಾರತಕ್ಕೆ ತೀವ್ರ ನಿರಾಸೆಯಾಗಿದೆ.

 

2,500ದಿಂದ 3,000 ಕಿಲೋ ಮೀಟರ್ ದೂರ ಭೂಮಿಯಿಂದ ಭೂಮಿಗೆ ಚಿಮ್ಮುವ, ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಅಗ್ನಿ-II ಪ್ಲಸ್ ಎಂದು ಹೆಸರಿಸಲಾಗಿದ್ದ ಅಗ್ನಿ-II ಕ್ಷಿಪಣಿಯ ಸುಧಾರಿತ ಕ್ಷಿಪಣಿಯು ವೀಲರ್ ಐಸ್ಲೆಂಡ್‌ನಿಂದ ಬೆಳಿಗ್ಗೆ 10 ಗಂಟೆಗೆ ಚಿಮ್ಮಿದ ಕೆಲವೇ ಹೊತ್ತಿನಲ್ಲಿ ಸಮುದ್ರ ಪಾಲಾಗಿದೆ.

ಪೇಜಾವರ ವಿಶ್ವೇಶ ತೀರ್ಥಶ್ರೀಪಾದರ ವಿರಾಟ ಅಭಿನ೦ದನಾ ಕಾರ್ಯಕ್ರಮದ ಅ೦ಗವಾಗಿ ಹೋಮ ಆರ೦ಭ- ಶ್ರೀಕ್ರಷ್ಣನಿಗೆ ಕೋಟಿ ತುಳಸಿ ಅರ್ಚನೆ

ಪೇಜಾವರ ವಿಶ್ವೇಶ ತೀರ್ಥಶ್ರೀಪಾದರ ವಿರಾಟ ಅಭಿನ೦ದನಾ ಕಾರ್ಯಕ್ರಮದ ಅ೦ಗವಾಗಿ ಹೋಮ ಆರ೦ಭ- ಶ್ರೀಕ್ರಷ್ಣನಿಗೆ ಕೋಟಿ ತುಳಸಿ ಅರ್ಚನೆ

ಸ್ನೇಹಿತೆಯ ಮದುವೆ ಮುಗಿಸಿಕೊಂಡು ಬೀಚಿಗೆ ವಿಹಾರಕ್ಕಾಗಿ ಬಂದ ಚಿಕ್ಕಮಂಗಳೂರಿನ ತಂಡದಲ್ಲಿದ್ದ ಯುವಕನೋರ್ವ ಈಜಾಟದ ವೇಳೆ ಸಮುದ್ರದಲ್ಲಿ ಮುಳುಗಿ ಕಣ್ಮರೆ...

ಕಾಪು: ಮಣಿಪಾಲದಲ್ಲಿ ಸ್ನೇಹಿತೆಯ ಮದುವೆ ಮುಗಿಸಿಕೊಂಡು ಬೀಚಿಗೆ ವಿಹಾರಕ್ಕಾಗಿ ಬಂದ ಚಿಕ್ಕಮಂಗಳೂರಿನ ತಂಡದಲ್ಲಿದ್ದ ಯುವಕನೋರ್ವ ಈಜಾಟದ ವೇಳೆ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾದ ಘಟನೆ ಕಾಪು ಬೀಚ್‌ನಲ್ಲಿ ಗುರುವಾರ ಸಂಜೆ ಸಂಭವಿಸಿದೆ.

 

ಚಿಕ್ಕಮಂಗಳೂರಿನ ತರೀಕೆರೆಯ ಗೃಹರಕ್ಷಕದಳದ ಸಿಬ್ಬಂಧಿ ಕಾಂತರಾಜ್‌ ಎಂಬವರ ಪುತ್ರ ಕಿರಣ್‌ (20) ಸಮುದ್ರ ಪಾಲಾದ ದುರ್ದೈವಿ ಯುವಕನಾಗಿದ್ದಾನೆ. ಮೃತ ಯುವಕ ಬೆಂಗಳೂರಿನ ಸೋಲಾರ್‌ ಕಂಪೆನಿಯೊಂದರಲ್ಲಿ ಸೇಲ್ಸ್‌ ಎಕ್ಸ್‌ಕ್ಯೂಟಿವ್‌ ಆಗಿದ್ದನು.


52nd UAE National Day 2023 - Abu Dhabi Fireworks.
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi