ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥಿತ ಮತದಾನ


Richard D’Souza
Kemmannu News Network, 12-05-2018 17:52:24


Write Comment     |     E-Mail To a Friend     |     Facebook     |     Twitter     |     Print


ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥಿತ ಮತದಾನ

ಉಡುಪಿ : ವಿಧಾನಸಭಾ ಚುನಾವಣೆ 2018 ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಶನಿವಾರ ನಡೆದ ಮತದಾನ ಶಾಂತಿಯುತವಾಗಿತ್ತು, ಬೆಳಗ್ಗೆಯಿಂದಲೇ ಮತದಾನ ಮಾಡಲು ಜನರು ಆಸಕ್ತಿ ತೋರಿದ್ದರಿಂದ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಸರತಿಯ ಸಾಲು ಸಾಮಾನ್ಯವಾಗಿತ್ತು.

ಕಾಪು ವಿಧಾನಸಭಾ ವ್ಯಾಪ್ತಿಯ ಪೆರ್ಡೂರು ಗ್ರಾಮದ ಮತಗಟ್ಟೆಯಲ್ಲಿ ಬೆಳಗ್ಗೆ 10 ಗಂಟೆಯ ವೇಳಗೆ ಮತದಾನ ಪ್ರಕ್ರಿಯೆ ಚುರುಕುಗೊಂಡಿದ್ದು, 78  ವರ್ಷದ ಕಿಟ್ಟಿ ಮರಕಾಲ್ತಿ ತಮ್ಮ ಸಮಾನ ವಯಸ್ಕರೊಂದಿಗೆ  ಬಂದು ಮತದಾನ ಮಾಡಿದರು, ಈ ವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲೂ ತಮ್ಮ ಹಕ್ಕು ಚಲಾಯಿಸಿರುವುದಾಗಿ ಅವರು ಹೇಳಿದರು. ಬಿಎಂ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟೆಯಲ್ಲಿ 96 ವರ್ಷದ ಗಿರಿಜ ಅವರು ತಮ್ಮ ಸೊಸೆಯ ಸಹಾಯದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು , 21 ವರ್ಷದ ಮಹೇಶ್  ಮೊದಲ ಬಾರಿಗೆ  ಮತ ಚಲಾಯಿಸುವ ಅವಕಾಶ ಪಡೆದಿದ್ದು, ತನ್ನ ಊರಿನ ರಸ್ತೆ ಅಭಿವೃದ್ಧಿಗಾಗಿ ಉತ್ತಮ ಅಭ್ಯರ್ಥಿಗೆ  ತಮ್ಮ ಮತ ಚಲಾಯಿಸುವುದಾಗಿ ಹೇಳಿದರು. ದೈಹಿಕ ಅಶಕ್ತ ನಾರಾಯಣ ಶೆಟ್ಟಿ ಮನೆಯವರ ಸಹಾಯದಿಂದ ಬಂದು ಮತ ಚಲಾಯಿಸಿದರು.

  ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ಸಮಾಜ ಮಂದಿರದಲ್ಲಿ ಬುಡಕಟ್ಟು ಮತಗಟ್ಟೆ ತೆರೆಯಲಾಗಿದ್ದು, ಮತಗಟ್ಟೆಯನ್ನು ಆಕರ್ಷಕ ರೀತಿಯಲ್ಲಿ ಸಿಂಗರಿಸಲಾಗಿದ್ದಿತು. ಈ ಮತಗಟ್ಟೆಯಲ್ಲಿ ಬಡಾಗುಡ್ಡೆ ಗ್ರಾಮದ , ವಾತ್ಸಲ್ಯ, ಶ್ವೇತಾ , ಜಯಂತಿ ಎಂಬ ಮೂವರು ಯುವತಿಯರು ಪ್ರಥಮ ಬಾರಿಗೆ ಮತದಾನ ಮಾಡಿ ಸಂಭ್ರಮಿಸಿದರು.

 ನಕ್ಸ್‍ಲ್  ಪೀಡಿತ ಸೋಮೇಶ್ವರ ಮತಗಟ್ಟೆಯಲ್ಲಿ ಬಿಎಸ್‍ಎಫ್. ಯೋಧರಿಂದ ಮತಕೇಂದ್ರಕ್ಕೆ ಸೂಕ್ತ ಭದ್ರತೆ ಒದಗಿಸಲಾಗಿದ್ದು, ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗಹಿಸಿದ್ದರು. ರಾಜೀವಿ ಶೆಟ್ಟಿ ಎಂಬ ದೈಹಿಕ ಅಶಕ್ತರು ವೀಲ್ ಚೇರ್ ನಲ್ಲಿ ಬಂದು ಮತ ಚಲಾಯಿಸಿದರು. 11.30 ರ ವೇಳಗೆ ಈ ಮತಗಟ್ಟೆಯಲ್ಲಿ 45% ಮತದಾನ ನಡೆದಿದ್ದಿತು.

 ಕುಂದಾಪುರ ವಿಧಾನಸಭಾ  ವ್ಯಾಪ್ತಿಯ ಕೊಂಜಾಡಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಸಿಲಿನಲ್ಲಿ ಮತಗಟ್ಟೆಗೆ ದೂರದಿಂದ ಬರುವ ಮತದಾರರ ದಾಹ ತಣಿಸಲು  ಬಿದ್ಕಲ್ ಕಟ್ಟೆ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಸುಶ್ಮಿತಾ ಶೆಟ್ಟಿ ಪ್ರಥಮ ಬಾರಿಗೆ ಮತದಾನ ಮಾಡಿ ಸಂಭ್ರಮಿಸಿದರು.

 ಕುಂದಾಪುರ ವಿಧಾನಸಭಾ ವ್ಯಾಪ್ತಿಯ  ತೆಕ್ಕಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ವಿಕಲಚೇತನರ  ಮತಗಟ್ಟೆ ತೆರೆಯಲಾಗಿದ್ದು, ಈ ಮತಗಟ್ಟೆಯಲ್ಲಿ 22 ಮಂದಿ ವಿಕಲಚೇತನ ಮತದಾರರಿದ್ದು, 4 ಮಂದಿ ವಿಕಲಚೇತನ ಮತಗಟ್ಟೆ ಅಧಿಕಾರಿಗಳು ಇಲ್ಲಿ ಕಾರ್ಯ ನಿರ್ವಹಿಸಿದರು, ಈ ಮತಗಟ್ಟೆಯಲ್ಲಿ ವಿಕಲಚೇತನರಿಗೆ , ವಿಕಲಚೇತನ ಸ್ನೇಹಿ ಟಾಯ್ಲೆಟ್, ರ್ಯಾಂಪ್, ವೀಲ್ ಚೇರ್, ವಾಕರ್, ವಾಕಿಂಗ್ ಸ್ಟಿಕ್ ವ್ಯವಸ್ಥೆ ಮಾಡಲಾಗಿತ್ತು, ಜಯರತ್ನ ಎಂಬ ದೈಹಿಕ ಸಮಸ್ಯೆಯುಳ್ಳ  ವಿಕಲ ಚೇತನ ಪುರ್ನವಸತಿ ಕಾರ್ಯಕರ್ತೆ ಸಹಕರಿಸುತ್ತಿದ್ದರು, ತುರ್ತು ಅಗತ್ಯತೆಗಾಗಿ ಅಂಬುಲೆನ್ಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಸಹ ಇಲ್ಲಿ ಕಾರ್ಯ ನಿರ್ವಹಿಸಿದರು. ಮಧ್ಯಾಹ್ನ  1.30 ರ ವೇಳಗೆ ಇಲ್ಲಿ 22 ವಿಕಲಚೇತನರಲ್ಲಿ 16 ಮಂದಿ ಮತ ಚಲಾಯಿಸಿದ್ದರು.

ಉಡುಪಿಯ ಕ್ರಿಶ್ಚಿಯನ್ ಪ್ರೌಢಸಾಲೆ ಮತ್ತು ಸೈಂಟ್ ಮೇರಿಸ್ ಶಾಲೆಯಲ್ಲಿ ಮಹಿಳೆ ಮತದಾರರಿಗೆ ಪಿಂಕ್ ಮತಗಟ್ಟೆÉಗಳನ್ನು ತೆರೆಯಲಾಗಿದ್ದು, ಮಹಿಳಾ ಸಿಬ್ಬಂದಿಗಳು ಇಲ್ಲಿ ಕಾರ್ಯ ನಿರ್ವಹಿಸಿದರು.  ಈ ಮತಕೇಂದ್ರದಲ್ಲಿ ಪ್ರಥಮ ಬಾರಿಗೆ ಮತ ಚಲಾಯಿಸುವ ಮಹಿಳಾ ಮತದಾರರಿಗೆ ನೆನಪಿನ ಕಾಣಿಕೆ ನೀಡಲಾಯಿತು, ಚಿಟ್ಪಾಡಿಯ ಹಾಗೂ ಮಹಿಳೆಯರೊಂದಿಗೆ ಬರುವ ಮಕ್ಕಳಿಗೆ ಆಟವಾಡಲು ಪ್ರತ್ಯೇಕ ಕೋಣೆಯಲ್ಲಿ  ಆಟಿಕೆಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಪಿಂಕ್ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸವಾಗಿದೆ ಎಂದು ಮತಗಟ್ಟೆಯ ಸಿಬ್ಬಂದಿ ಹೇಳಿದರು.

ಜಿಲ್ಲೆಯಾದ್ಯಂತ ನಡೆದ  ಮತದಾನದಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನದಲ್ಲಿ ಪಾಲ್ಗೊಂಡಿದ್ದು, ಚುನಾವಣಾ ಸಿಬ್ಬಂದಿಗೆ  ಬಿಸಿಯೂಟ ವ್ಯವಸ್ಥೆ ಹಾಗೂ  ಎಲ್ಲಾ ಮತ-ಕೇಂದ್ರಗಳಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Welcome to Thonse Naturecure Hospital
View More

Announcement from St Anne’s Church Thottam, UdupiAnnouncement from St Anne’s Church Thottam, Udupi
Kemmannu Church - Weekly Announcements.Kemmannu Church - Weekly Announcements.
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Veez Konkani Illustrated Weekly e-Magazine # 72Veez Konkani Illustrated Weekly e-Magazine # 72
Manasa Vani - Manasa Pamboor News Letter - Vol 1 - Issue 1Manasa Vani - Manasa Pamboor News Letter - Vol 1 - Issue 1
PRIME LOCATION PROPERTY FOR SALE IN KEMMANNUPRIME LOCATION PROPERTY FOR SALE IN KEMMANNU
Admissions Open @ Milagres College, KallianpurAdmissions Open @ Milagres College, Kallianpur
Milarchi Lara - Easter Issue of Mlagres Parish Bulletin.Milarchi Lara - Easter Issue of Mlagres Parish Bulletin.
Appeal from Gudiam Shri Bhadrakali Temple, Kemmannu - Invitation Cards Released.Appeal from Gudiam Shri Bhadrakali Temple, Kemmannu - Invitation Cards Released.
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Milagres Tours and Travels upcoming Tours.Milagres Tours and Travels upcoming Tours.
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Milarchi Laram - Issue Jan 2019Milarchi Laram - Issue Jan 2019
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India