ಪ್ರಾಕೃತಿಕ ವೈಪರೀತ್ಯಗಳಿಗೆ ಮಾನವನೇ ಕಾರಣ- ಅನುರಾಧ
Kemmannu News Network, 06-06-2018 10:30:27
ಪ್ರಾಕೃತಿಕ ವೈಪರೀತ್ಯಗಳಿಗೆ ಮಾನವನೇ ಕಾರಣ- ಅನುರಾಧ
ಉಡುಪಿ, ಜೂನ್ 4 (ಕರ್ನಾಟಕ ವಾರ್ತೆ):- ಪ್ರಕೃತಿಯಲ್ಲಿ ಸಂಭವಿಸುತ್ತಿರುವ ಪ್ರಾಕೃತಿಕ ವೈಪರೀತ್ಯಗಳಿಗೆ, ಮಾನವನು ಪರಿಸರವನ್ನು ನಾಶ ಮಾಡುತ್ತಿರುವುದು ಮತ್ತು ಕಲುಷಿತಗೊಳಿಸುತ್ತಿರುವುದೇ ಪ್ರಮುಖ ಕಾರಣ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಹೇಳಿದ್ದಾರೆ.
ಅವರು ಸೋಮವಾರ ಮಲ್ಪೆ ಬೀಚ್ ನಲ್ಲಿ, ಜಿಲ್ಲಾಡಳಿತ, ನಗರಸಭೆ ಉಡುಪಿ, ಜಿಲ್ಲಾ ಪರಿಸರ ಇಲಾಖೆ, ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಮಲ್ಪೆ ಬೀಚ್ ಅಭಿವೃದ್ದಿ ಸಮಿತಿ ವತಿಯಿಂದ , ವಿಶ್ವ ಪರಿಸರ ದಿನಚಾರಣೆ ಅಂಗವಾಗಿ ನಡೆದ ಬೀಚ್ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವನು ಪರಿಸರವನ್ನು ಹಾಳು ಮಾಡುತ್ತಿರುವ ಕಾರಣ , ಪ್ರಾಕೃತಿಕ ವಿಕೋಪಗಳು ಕಂಡುಬರುತ್ತಿದ್ದು, ಜಾಗತಿಕ ವಾತಾವರಣ ಬಿಸಿಯಾಗುತ್ತಿರುವುದು, ಓಝೋನ್ ಪದರ ನಾಶವಾಗುತ್ತಿರುವುದು ಸಂಭವಿಸುತ್ತಿದೆ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಹಸಿರು ಬೆಳೆಸುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕಿದೆ, ಸಮುದ್ರದಲ್ಲಿ ತ್ಯಾಜ್ಯ ಬಿಸಾಡುವುದರಿಂದ ಅದನ್ನು ಸೇವಿಸುವ ಜಲರಾಶಿಗಳು ನಾಶವಾಗುತ್ತಿದ್ದು, ಜೈವಿಕ ಅಸಮತೋಲನ ಉಂಟಾಗುತ್ತಿದೆ ಆದ್ದರಿಂದ ಪರಿಸರವನ್ನು ಸಂರಕ್ಷಿಸುವ ಜೊತೆಗೆ ಸ್ವಚ್ಚತೆ ಕಾಪಾಡುವ ಕುರಿತಂತೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಅನುರಾಧ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭೆ ಆಯುಕ್ತ ಜನಾರ್ಧನ್, ಉಡುಪಿ ನಗರಸಭಾ ವ್ಯಾಪ್ತಿಯ ಶಾಲೆಗಳಲ್ಲಿ ಪ್ಲಾಸ್ಟಿಕ್ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಿದ್ದು, ಆಯ್ದ ವಿದ್ಯಾರ್ಥಿಗಳನ್ನು ನಗರಸಭೆಯ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಕೇಂದ್ರಕ್ಕೆ ಕರೆದೊಯ್ದು, ಪ್ಲಾಸ್ಟಿಕ್ ವಿಲೇವಾರಿ ಸಮಸ್ಯೆ ಕುರಿತು ವೀಕ್ಷಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮಲ್ಪೆ ಬೀಚ್ ಅಭಿವೃಧ್ದಿ ಸಮಿತಿಯ ಸುದೇಶ್ ಶೆಟ್ಟಿ, ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಶಿವಪ್ರಕಾಶ್ , ಲಯನ್ಸ್ ಕ್ಲಬ್ ನ ಜಯಶ್ರೀ ಕೃಷ್ಣರಾಜ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್ ಸ್ವಾಗತಿಸಿ ನಿರೂಪಿಸಿದರು, ಲಕ್ಷ್ಮೀಪತಿ ವಂದಿಸಿದರು.
ಪ್ಲಾಸ್ಟಿಕ್ ತ್ಯಾಜ್ಯದಿಂದ ಜಲರಾಶಿಗಳುಗಳು ನಾಶವಾಗುವ ಕುರಿತು ರಚಿಸಿದ್ದ ಕಲಾಕೃತಿ , ಸಮುದ್ರದಲ್ಲಿ ತ್ಯಾಜ್ಯ ಎಸೆಯುವ ಕುರಿತು ಜಾಗೃತಿ ಮೂಡಿಸಿತು.
ವಿವಿಧ ಶಾಲಾ ಮಕ್ಕಳಿಂದ ಬೀಚ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ವಿಶ್ವ ಪರಿಸರ ದಿನಾಚರಣೆ: ಮೋಡೆಲ್ ಸ್ಪರ್ಧೆ
ಉಡುಪಿ, ಜೂನ್ 4 (ಕರ್ನಾಟಕ ವಾರ್ತೆ):- ಕುಂದಾಪುರ ಪುರಸಭೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಣಿಪಾಲ ಇವರ ಸಹಭಾಗಿತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಡಶಾಲಾ ವಿಧ್ಯಾರ್ಥಿಗಳಿಗೆ "Sಚಿve ಒಚಿಡಿiಟಿe Pಟಚಿsಣiಛಿ" ಶೀರ್ಷಿಕೆಯಡಿಯಲ್ಲಿ ಮೋಡಲ್ ಸ್ಪರ್ದೆಯನ್ನು ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಯಿತು.
ಪುರಸಭಾ ಅಧ್ಯಕ್ಷರಾದ ವಸಂತಿ ಮೋಹನ್ ಸಾರಂಗ, ಉಪಾಧ್ಯಕ್ಷರಾದ ರಾಜೇಶ್ ಕಾವೇರಿ, ಸ್ಥಾಯಿ ಸಮಿತಿ ಸದಸ್ಯರಾದ ಶ್ರೀ ವಿಠಲ ಕುಂದರ್, ಪುರಸಭಾ ಸದಸ್ಯರುಗಳಾದ ಕು. ಪುಷ್ಪಾ ಶೇಟ್, ಶ್ರೀಮತಿ ಶಕುಂತಲಾ ಗುಲ್ವಾಡಿ, ಚಂದ್ರ ಶೇಖರ್ ಖಾರ್ವಿ, ಚಂದ್ರ ಅಮೀನ್, ಶಿವರಾಮ್ ಪುತ್ರನ್, ಶ್ರೀಮತಿ ದೇವಕಿ ಸಣ್ಣಯ್ಯರವರು ಉಪಸ್ಥಿತರಿದ್ದರು. ಶ್ರೀ ಮಂಜುನಾಥ ಶೆಟ್ಟಿ ಪರಿಸರ ಅಭಿಯಂತರರು ಕುಂದಾಪುರ ಪುರಸಭೆ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸದ್ರಿ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳು ತಾವು "Sಚಿve ಒಚಿಡಿiಟಿe Pಟಚಿsಣiಛಿ" ಶೀóರ್ಷಿಕೆಯಡಿಯಲ್ಲಿ ತಯಾರಿಸಿದ ಮೋಡಲ್ ಗಳನ್ನು ಪ್ರದರ್ಶಿಸಿದರು.
ತೋಟಗಾರಿಕಾ ಸಸಿಗಳು ಲಭ್ಯ
ಉಡುಪಿ, ಜೂನ್ 4 (ಕರ್ನಾಟಕ ವಾರ್ತೆ):-ಉಡುಪಿ ಜಿಲ್ಲೆಯ, ಉಡುಪಿ ತಾಲ್ಲೂಕಿನ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ, ವಾರಂಬಳ್ಳಿ ತೋಟಗಾರಿಕೆ ಕ್ಷೇತ್ರ, ಕುಂದಾಪುರ ತಾಲೂಕಿನ ಕುಂಭಾಶಿ ತೋಟಗಾರಿಕೆ ಕ್ಷೇತ್ರ, ಕೆದೂರು ತೋಟಗಾರಿಕೆ ಕ್ಷೇತ್ರ, ಕಾರ್ಕಳ ತಾಲೂಕಿನ ಕುಕ್ಕುಂದೂರು ತೋಟಗಾರಿಕೆ ಕ್ಷೇತ್ರ, ರಾಮಸಮುದ್ರ ತೋಟಗಾರಿಕೆ ಕ್ಷೇತ್ರಗಳಲ್ಲಿ ರೈತರಿಗೆ ಇಲಾಖಾ ನಿಗದಿಪಡಿಸಿದ ದರದಲ್ಲಿ ಮಾರಾಟಮಾಡಲು ಇಲಾಖಾವತಿಯಿಂದ ಉತ್ಪಾದಿಸಿದ ಗುಣಮಟ್ಟದ ಅಡಿಕೆ,ತೆಂಗು,ಮಾವು,ಕೋಕೋ,ಗೇರುಕಸಿ, ಉಡುಪಿ ಮಲ್ಲಿಗೆ ಹಾಗೂ ಕಾಳುಮೆಣಸಿನ ಗಿಡಗಳು ಲಭ್ಯವಿದ್ದು,ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಲ್ಲಾ ಪಂಚಾಯತ್), ಉಡುಪಿ, ದೂರವಾಣಿ ಸಂಖ್ಯೆ:0820-2522837, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಲ್ಲಾ ಪಂಚಾಯತ್),ಕುಂದಾಪುರ 08254-230813, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಲ್ಲಾ ಪಂಚಾಯತ್),ಕಾರ್ಕಳ 08258-230288 ಅನ್ನು ಸಂಪರ್ಕಿಸುವಂತೆ,ಜಿಲ್ಲಾ ಮಟ್ಟದ ಸಹಾಯಕ ತೋಟಗಾರಿಕೆ ನಿರ್ದೇಶಕರು( ರಾಜ್ಯವಲಯ), ಉಡುಪಿ ತೋಟಗಾರಿಕೆ ಮಾಹಿತಿ ಕೇಂದ್ರ (ದೂರವಾಣಿ ಸಂಖ್ಯೆ:0820-2520590) ಇವರ ಪ್ರಕಟಣೆ ತಿಳಿಸಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ; ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಉಡುಪಿ, ಜೂನ್ 4 (ಕರ್ನಾಟಕ ವಾರ್ತೆ):- 2018-19ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾ ಕೇಂದ್ರ ಮತ್ತು ಕಾಪುವಿನಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅತಿಥಿ ಶಿಕ್ಷಕರ ಸೇವೆಯನ್ನು ಪಡೆಯಲು ಸೂಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕ್ರ.ಸಂ
ಹುದ್ದೆಯ ಪದನಾಮ
ಹುದ್ದೆ ಸಂಖ್ಯೆ
ವಿದ್ಯಾರ್ಹತೆ
1
ಕನ್ನಡ ಭಾಷಾ ಶಿಕ್ಷಕರು
2
ಬಿ.ಎ. ಬಿ.ಎಡ್
2
ಆಂಗ್ಲ ಭಾಷಾ ಶಿಕ್ಷಕರು
2
3
ಉರ್ದು ಭಾಷಾ ಶಿಕ್ಷಕರು
2
4
ಗಣಿತ ಶಿಕ್ಷಕರು
2
ಬಿ.ಎಸ್ಸಿ. ಬಿ.ಎಡ್
ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಜೂನ್ 10 ರ ಒಳಗಾಗಿ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಮಣಿಪಾಲ, ಉಡುಪಿ ಇಲ್ಲಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಉಡುಪಿ, ದೂರವಾಣಿ ಸಂಖ್ಯೆ: 0820-2574596/ 2574881 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಉಡುಪಿ ಇವರ ಪ್ರಕಟಣೆ ತಿಳಿಸಿದೆ.
ಅಧಿಕಾರ ಸ್ವೀಕಾರ
ಉಡುಪಿ, ಜೂನ್ 4 (ಕರ್ನಾಟಕ ವಾರ್ತೆ):- ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ನಿಕೇತನ ಅವರು ಪ್ರಭಾರ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ಶಿ ಜಿ. ಆರ್. ರಾಯ್ಕರ್ ಅವರು ನಿವೃತ್ತಿಯ ಸಂದರ್ಭದಲ್ಲಿ ಡಾ. ನಿಕೇತನ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಡಾ. ನಿಕೇತನ ಈ ಹಿಂದೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಮಹಿಳಾಪರ ಚಿಂತಕಿಯಾಗಿ, ಲೇಖಕಿಯಾಗಿ ಗುರುತಿಸಿಕೊಂಡಿರುವ ಡಾ. ನಿಕೇತನ ಅವರು ಹಲವು ಕೃತಿಗಳನ್ನು ಪ್ರಕಟಿಸಿ, ಪ್ರಶಸ್ತಿಗಳನ್ನು ಪಡೆದು ರಾಷ್ಟ್ರೀಯ ಸಂತಕವಿ ಕನಕದಾಸ ಸಂಶೋಧನಾ ಕೇಂದ್ರ ಇದರ ಪದನಿಮಿತ್ತ ಸದಸ್ಯರಾಗಿ ಸರಕಾರದಿಂದ ನೇಮಕಗೊಂಡಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸಂಶೋಧನ ಮಾರ್ಗದರ್ಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಿಲ್ಲಾ ಪಂಚಾಯತ್ ಅಧೀಕ್ಷಕರ ಬೀಳ್ಕೋಡುಗೆ
ಉಡುಪಿ, ಜೂನ್ 4 (ಕರ್ನಾಟಕ ವಾರ್ತೆ):- ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ಆಡಳಿತ ಶಾಖೆಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿ ಮೇ 31 ರಂದು ವಯೋನಿವೃತ್ತಿಯನ್ನು ಹೊಂದಿದ ಕಿಶೋರ್ ಕುಮಾರ ಅವರನ್ನು ಜಿಲ್ಲಾ ಪಂಚಾಯತ್ ವತಿಯಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹಾರ್ದಿಕವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಮಾತನಾಡುತ್ತಾ ಕಚೇರಿ ಕೈಪಿಡಿ,ನಿಯಮಾವಳಿಗಳು, ಕಾಯ್ದೆಗಳು ಹಾಗೂ ಕಾರ್ಯನಿರ್ವಹಣೆಯ ಕುರಿತು ಅಪಾರ ಅನುಭವ ಹಾಗೂ ತಿಳುವಳಿಕೆಯನ್ನು ಹೊಂದಿದ ಕಿಶೋರ್ ಕುಮಾರ ಇವರ ಕಾರ್ಯವೈಖರಿಯನ್ನು ಶ್ಲಾಘಿಸುತ್ತಾ ಅವರಿಗೆ ಶುಭ ಕೋರಿದರು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ನಾಗೇಶ್ ನಾಯ್ಕರ್, ಮುಖ್ಯ ಯೋಜನಾಧಿಕಾರಿಗಳಾದ ಶ್ರೀನಿವಾಸ ರಾವ್ ಹಾಗೂ ಇತರ ಸಹೋದ್ಯೋಗಿಗಳು ಕಿಶೋರ್ ಕುಮಾರ್ ಇವರು ಸುದೀರ್ಘ ಸಮಯದಿಂದ ಜಿಲ್ಲಾ ಪಂಚಾಯತ್ ಆಡಳಿತ ಶಾಖೆಯಲ್ಲಿ ನಿರ್ವಹಿಸಿದ ಕಚೇರಿ ಕೆಲಸದ ನಿಖರತೆ ಹಾಗೂ ಕರ್ತವ್ಯ ಬದ್ದತೆಯನ್ನು ಶ್ಲಾಘಿಸಿ ಶುಭ ಕೋರಿದರು.ತನ್ನ ಸೇವಾ ಅವಧಿಯಲ್ಲಿ ನಿರ್ವಹಿಸಿದ ಕರ್ತವ್ಯದ ವಿವಿಧ ಅಂಶಗಳ ಬಗ್ಗೆ ಕಿಶೋರ್ ಕುಮಾರ್ ಇವರು ತಮ್ಮ ಭಾಷಣದಲ್ಲಿ ತಿಳಿಸುತ್ತಾ, ತಮ್ಮೊಂದಿಗೆ ಸಹಕರಿಸಿದ ಎಲ್ಲಾ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳಿಗೆ ವಂದನೆಗಳನ್ನು ಅರ್ಪಿಸಿದರು.
ಬೀಳ್ಕೊಡುಗೆ
ಉಡುಪಿ, ಜೂನ್ 4 (ಕರ್ನಾಟಕ ವಾರ್ತೆ):- ಹಿರಿಯ ಉಪನಿರ್ದೇಶಕರ ಕಛೇರಿ, ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲ, ಉಡುಪಿ ಇಲ್ಲಿ ಹಿರಿಯ ಉಪನಿರ್ದೇಶಕರಾಗಿದ್ದ ಶ್ರೀಮತಿ ನಮಿತಾ ಇವರು ದಿ:31.05.2018ರಂದು ನಿವೃತ್ತಿ ಹೊಂದಿದ್ದು, ಇವರನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖಾ ವತಿಯಿಂದ ಬೀಳ್ಕೊಡಲಾಯಿತು.
ಕಾಣೆಯಾದವರ ಕುರಿತು.
ಉಡುಪಿ, ಜೂನ್ 4 (ಕರ್ನಾಟಕ ವಾರ್ತೆ):- ಧಿಕ್ಷಾಯಿಣಿ (19 ವರ್ಷ) ಎಂಬುವವರು ಮೇ 30 ರಂದು, ಸಂಜೆ 4.00 ಗಂಟೆಗೆ ಡಾಲ್ಫಿನ್ ಸರ್ಕಲ್ ಹತ್ತಿರ,ಪೊಲಿಪು,ಉಳಿಯಾರಗೋಳಿ ಗ್ರಾಮ, ಉಡುಪಿ ಇಲ್ಲಿಂದ ಕಾಣೆಯಾಗಿದ್ದು, 5 ಅಡಿ ಎತ್ತರವಿದ್ದು, ಗೋಧಿ ಮೈಬಣ್ಣ , ಕನ್ನಡ , ತುಳು, ಬಲ್ಲವರಾಗಿದ್ದು, ಇವರ ಪತ್ತೆಯಾದಲ್ಲಿ ಕಾಪು ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿರವರ ಪ್ರಕಟಣೆ ತಿಳಿಸಿದೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link