Janmashtami celebrations in Mumbai


Rons Bantwal
Kemmannu News Network, 03-09-2018 22:31:35


Write Comment     |     E-Mail To a Friend     |     Facebook     |     Twitter     |     Print


Krishna Janmashtami, also known as Janmashtami or Gokulashtami, is an annual festival that is celebrated with much fervour in our country. People celebrate by singing, fasting and preparing special food. People also visit Krishna temple to take part in Bhagavad Gita recitation and take part in dance drama events, popularly known as Krishna Lila or Raasleela.

Just like every part of the country has their unique way of celebrating this festival, Mumbai adds more flavour to the celebration of Janmashtami. In fact, the festival is more popular here as Dahi Handi, which translates to ‘an earthen pot of yogurt’. Most of the communities perform this tradition, where yogurt pots are hung high up in the air, with tall poles or high ropes hanging from second or third level of building. Then, as per the customs, youth form a team to climb one over another to form a human pyramid an

ನಗರದಾದ್ಯಂತ ಹರೇಕೃಷ್ಣ ಪಠಣದೊಂದಿಗೆ ಶ್ರದ್ಧೆ-ಭಕ್ತಿಯಿಂದ ಸಂಭ್ರಮಿಸಲ್ಪಟ್ಟ ಕೃಷ್ಣಾಷ್ಟಮಿ -ಗೋವಿಂದ ಹಾಲಾರೆ ಹಾಲಾ... ಘೋಷದೊಂದಿಗೆ ‘ದಹಿ ಹಂಡಿ’ ಸಂಭ್ರಮ
(ವರದಿ /   ಚಿತ್ರ: ರೋನ್ಸ್ ಬಂಟ್ವಾಳ್)
ಮುಂಬಯಿ ಸೆ.03: ಭಗವಾನ್ ಶ್ರೀಕೃಷ್ಣ ದೇವರ ಜನ್ಮ ಪುಣ್ಯಾಧಿ ದಿನವಾದ ಇಂದು ಮುಂಬಯಿ ಮಹಾನಗರ ದಾದ್ಯಂತ ಹರೇ ಕೃಷ್ಣ ಪಠಣ, ಸಂಪ್ರಾದಾಯಿಕವಾಗಿ ಶ್ರದ್ಧೆ, ಭಕ್ತಿ ಮತ್ತು ಅತ್ಯುತ್ಸವದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದ್ದು, ಮಹಾರಾಷ್ಟ್ರ ರಾಜ್ಯದ ಜಗತ್ಪ್ರಸಿದ್ಧ `ದಹಿ ಹಂಡಿ’ ಸಂಭ್ರಮ ಗೋವಿಂದ ಹಾಲಾರೆ ಹಾಲಾ... ಘೋಷಗಳೊಂದಿಗೆ ಸಂಭ್ರಮ ಸಡಗರಗಳೊಂದಿಗೆ ಆಚರಿಸಲ್ಪಟ್ಟಿತು.

ಮಹಾನಗರದಲ್ಲಿನ ವಿವಿಧ ರಾಜಕೀಯ ಪಕ್ಷಗಳು ವಿಶೇಷವಾಗಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್ (ಐ), ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ (ಎನ್‍ಸಿಪಿ), ಶಿವಸೇನೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಮನಸೆ), ಆರ್‍ಪಿಐ ಇತ್ಯಾದಿ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ತಮ್ಮತಮ್ಮ ಕ್ಷೇತ್ರ, ಪರಿಸರಗಳಲ್ಲಿ ಲಕ್ಷಂತರ ಮೌಲ್ಯದ  ನಗದು ಹಾಗೂ ಅತ್ಯಾಕರ್ಷಕ ಬಹುಮಾನಗಳನ್ನಿರಿಸಿ ಬಾಣೆತ್ತರದತ್ತ ಇರಿಸಿದ `ದಹಿ ಹಂಡಿ’ಗಳನ್ನು ಉತ್ಸಹಿ ತರುಣ ವೃಂದಗಳು ಪಿರಾಮಿಡ್‍ಗಳನ್ನು ರಚಿಸಿ `ದಹಿ ಹಂಡಿ’ ಒಡೆದು ತಮ್ಮದಾಗಿಸಿ ಸಂಭ್ರಮಕ್ಕೆ ವಿಶೇಷ ಕಳೆಯನ್ನಿತ್ತರು.

ನಗರದಾದ್ಯಂತದ ಓಣಿ-ಗಲ್ಲಿಗಳು, ಮೈದಾನ- ರಸ್ತೆಗಳ ಮೂಲೆಗಳಲ್ಲಿ ವಿವಿಧ ಸಂಘಟನೆಗಳು ಅತೀ ಎತ್ತರದಲ್ಲಿ ಅತ್ಯಾಕರ್ಷಕವಾಗಿ `ದಹಿ ಹಂಡಿ’ ರಚಿಸಿದ್ದು ವಿಶೇಷವಾಗಿ ಮಹಿಳಾ ತಂಡಗಳು ಮಾನವ ಗೋಪುರ (ಪಿರಮಿಡ್) ನಿರ್ಮಿಸಿ ಈ ದಹಿ ಹಂಡಿ ಒಡೆದು ಹರ್ಷಾಚರಣೆಯಲ್ಲಿ ತೊಡಗಿಸಿ ಕೊಂಡರು. ವಿವಿಧ ಪಕ್ಷದ ಕಾರ್ಯಕರ್ತರು, ಸಂಘ-ಸಂಸ್ಥೆಗಳ ಯುವಕ-ಯುವತಿಯರ ತಂಡಗಳು ಅನೇಕ ಕಡೆಗಳಲ್ಲಿ ದಹಿಹಂಡಿ ಸ್ಪರ್ಧೆ ಆಯೋಜಿಸಿದ್ದು, ಲಾರಿಲಾರಿಗಳಲ್ಲಿ ತಂಡೋಪತಂಡವಾಗಿ ಸಾಗಿ ದಹಿಹಂಡಿ ಒಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಪಾರಿತೋಷಕಗಳನ್ನು ಗಿಟ್ಟಿಸಿಕೊಂಡರೆ ಅನೇಕ ತಂಡಗಳು ಕೋಟ್ಯಾಂತರ ಮೊತ್ತದ ಬಹುಮಾನ ಬಾಚಿಕೊಂಡು ಸಂತಸದ ಸಾಗದಲ್ಲೇ ಜನ್ಮಾಷ್ಟಮಿ ಸಂಭ್ರಮಿಸಿದರು.

ಪುಟಾಣಿಗಳು ಮತ್ತು ಬಾಲಕ-ಬಾಲಕಿಯರು ರಾಧಾ-ಕೃಷ್ಣರಂತೆ ವೇಷ ಧರಿಸಿ ವೈವಿಧ್ಯಮಯ ನೃತ್ಯ ಪ್ರದರ್ಶನಗಳನ್ನಿತ್ತರೆ, ರಾಷ್ಟ್ರೀಯ ನಾಯಕರೂ, ಬಾಲಿವುಡ್ ತಾರೆಯರೂ ಜನ್ಮಾಷ್ಟಮಿಯಲ್ಲಿ ಪಾಲ್ಗೊಂಡು ಜನ್ಮಾಷ್ಟಮಿಗೆ ಮೆರುಗು ನೀಡಿದರು. ದಹಿಹಂಡಿ ಮಹೋತ್ಸವ ನಡೆಸುವ ಪ್ರಮುಖ ಮಂಡಲಗಳಾದ ಬಾಬು ಜೇನು ಮಂಡಿ ಮಂಡಲ್, ದಗ್ಡುಸೇಠ್ ಮಂಡಲ, ಹುತಾತ್ಮ ಬಾಬು ಮಂಡಲ್‍ಗಳು ಎಂದಿನಂತೆ ನೂತನ ಮಾದರಿಯಲ್ಲೇ ಸಂಭ್ರಮಕ್ಕೆ ಹೊಸ ಹುರುಪನ್ನಿತ್ತವು. ದಾದರ್ ಮಾರ್ಕೆಟ್, ಪರೇಲ್‍ಗಳಲ್ಲಂತೂ ಈ ಸಂಭ್ರಮ ಮುಗಿಲು ಮುಟ್ಟುವಂತಿದ್ದು ಸ್ಥಳಿಯ ಭಕ್ತರಲ್ಲಿ ನವೋಲ್ಲಾಸ ತುಂಬಿದಂತಿತ್ತು.

 

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ 

ಮುಂಬಯಿ, ಸೆ.03: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ ಬಿ. ಎಸ್.ಕೆ.ಬಿ. ಎಸೋಸಿಯೇಶನ್,ಗೋಕುಲ ಸಾಯನ್,   ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ರವಿವಾರ, ದಿನಾಂಕ 2.9. 2018 ರಂದು ಶ್ರೀ ಕೃಷ್ಣ ಬಾಲಾಲಯ, ಆಶ್ರಯ, ನೆರೂಲ್ ನಲ್ಲಿ ವಿಜೃಂಭಣೆಯಿಂದ  ಆಚರಿಸಿತು.

ಗೋಕುಲ ಸ್ಥಾಪಕ ಸದಸ್ಯರಲ್ಲೊಬ್ಬರಾದ ದಿ. ಯು.ವಿ. ಉಪಾಧ್ಯರವರ ಕುಟುಂಬ ಸದಸ್ಯರು  ಬಾಲಾಲಯ ಹಾಗೂ ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯ ವಿಶೇಷ ಆಲಂಕಾರಕ್ಕಾಗಿ ವಿವಿಧ ಪುಷ್ಪಗಳನ್ನು ಪ್ರಾಯೋಜಿಸಿದ್ದರು.  ವೇ. ಮೂ.  ದಿನೇಶ್ ಉಪ್ಪರ್ಣ ಮತ್ತು ಸಹ ಅರ್ಚಕ ವರ್ಗದವರು ಬಾಲಾಲಯ ಹಾಗೂ  ಶ್ರೀ ದೇವರ ಮೂರ್ತಿಯನ್ನು  ಅತ್ಯಂತ ಸುಂದರವಾಗಿ  ಅಲಂಕರಿಸಿದ್ದರು.  ಗೋಕುಲ ಭಜನಾ ಮಂಡಳಿ,  ಹರಿಕೃಷ್ಣ ಭಜನಾ ಮಂಡಳಿ,  ಶ್ರೀಕೃಷ್ಣ ಭಜನಾ ಮಂಡಳಿ ಹಾಗೂ ಬಾಲಕಲಾವೃಂದದವರಿಂದ ಶ್ರೀಕೃಷ್ಣ ದೇವರನಾಮಗಳ ಭಜನಾ ಕಾರ್ಯಕ್ರಮ ನೆರವೇರಿತು.   ನಂತರ  ಹರಿ ಭಟ್ ಹಾಗೂ ದಿನೇಶ್  ಉಪ್ಪರ್ಣ ರ  ನೇತೃತ್ವದಲ್ಲಿ  ವಿಷ್ಣು  ಸಹಸ್ರ ನಾಮ ಪಠನೆ, ಪುಷ್ಪಾರ್ಚನೆ, ಶ್ರೀ ಕೃಷ್ಣಾಷ್ಟೋತ್ತರ ಸ್ತೋತ್ರ ಪಠನೆಗಳೊಂದಿಗೆ ಪೂಜಾ ವಿಧಿಗಳು  ವಿಧಿವತ್ತಾಗಿ ನೆರವೇರಿದವು.  ದಿನೇಶ್ ಉಪ್ಪರ್ಣ ರವರು ತಮ್ಮ ಪ್ರಾರ್ಥನೆಯಲ್ಲಿ   ’ಕೃಷ್ಣನ ನೆನೆದರೆ ಕಷ್ಟ ಒಂದಿಲ್ಲ   ಎಂದು ದಾಸವರೇಣ್ಯರುಗಳು ಕೊಂಡಾಡಿದ್ದಾರೆ. ಆತನ ನಾಮಸ್ಮರಣೆ ಮಾತ್ರದಿಂದ ಮಾನವರ ಕಷ್ಟಗಳು  ಪರಿಹಾರವಾಗುವುವು.   ಧರ್ಮ ಸಂಸ್ಥಾಪನೆಗಾಗಿಯೇ  ಅವತರಿಸಿದ ಶ್ರೀ ಕೃಷ್ಣನ ಜನ್ಮದಿನವಾದ ಇಂದು ಭಕ್ತಿ ಶ್ರದ್ಧಾ ಪೂರ್ವಕವಾಗಿ  ಉಪವಾಸ,  ಭಜನೆ, ಕೀರ್ತನೆ, ಸ್ತೋತ್ರ ಪಠನೆ, ಮಂತ್ರ ಪುಷ್ಪಾರ್ಚನೆಗಳಿಂದ ಶ್ರೀಕೃಷ್ಣನ  ಆರಾಧನೆಯನ್ನು ನಾವೆಲ್ಲಾ ಮಾಡಿದ್ದೇವೆ. ಸಂಘವು ಈಗ ಶ್ರೀ ಕೃಷ್ಣ ಮಂದಿರ ಹಾಗೂ ಗೋಕುಲ ಕಟ್ಟಡ ನಿರ್ಮಾಣದಂತಹ  ಬೃಹತ್  ಯೋಜನೆಯನ್ನು  ಹಮ್ಮಿಕೊಂಡಿದೆ. ಶ್ರೀ ದೇವರ ಅನುಗ್ರಹದಿಂದ   ಹಾಗೂ  ಭಕ್ತಾದಿಗಳ ತನುಮನಧನದ ಸಹಕಾರದಿಂದ ಶ್ರೀ ಕೃಷ್ಣ ಮಂದಿರದ ನವ  ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರಿ ನವನವೀನ ಮಂದಿರದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠಾಪನೆ  ಅತಿ ಶೀಘ್ರವಾಗಿ ನೆರೆವೇರುವಂತಾಗಲಿ’   ಎಂದು ಪ್ರಾರ್ಥಿಸಿದರು. ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್  ಕಾರ್ಯಕಾರಿ ಸಮಿತಿ, ಬಿ.ಎಸ್ ಕೆ.ಬಿ. ಎಸೋಸಿಯೇಶನ್  ಉಪಾಧ್ಯಕ್ಷ ವಾಮನ್ ಹೊಳ್ಳ, ಕಾರ್ಯದರ್ಶಿ ಎ. ಪಿ. ಕೆ. ಪೆÇೀತಿ,  ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು  ಹಾಗೂ ನೂರಾರು ಭಕ್ತಾದಿಗಳು ಈ  ಧಾರ್ಮಿಕ ವಿಧಿಯಲ್ಲಿ ಪಾಲ್ಗೊಂಡು ಶ್ರೀ ಕೃಷ್ಣನಿಗೆ  ಅರ್ಘ್ಯ ಪ್ರದಾನ ಗೈದರು.  ತೀರ್ಥ ಪ್ರಸಾದ ವಿತರಣೆ ಹಾಗೂ ಲಘು ಉಪಹಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi