Monthi Fest Celebrations at Udupi/ನಾಡಿನೆಲ್ಲೆಡೆಯಲ್ಲಿ  ಸ೦ಭ್ರಮದ ‘ಮೊಂತಿಫೆಸ್ತ್’.......


Jayaprakash Kini
Kemmannu News Network, 09-09-2011 10:14:17


Write Comment     |     E-Mail To a Friend     |     Facebook     |     Twitter     |     Print


September 8: This is one of the important dates in the calendar of catholic community especially in the twin districts of Dakshina Kannada. The Feast of Nativity of Our Lady or Monthi Fest which falls on this day was celebrated all over the world with devotion and joy and especially in Mangalore,  Udupi,  now even in Mumbai and Gulf. It is widely acknowledged as a family feast.

During the Holly mass which started 7.00 AM this morning in all most all the churches, the newly harvested rice stalks were blessed and people returned home with the blessed new paddy, which will be mixed with sweet dishes and eaten by the family members after thanksgiving to the Lord.

Sweets were distributed to the children who offered flowers to Mother Mary. Pictures from Udupi:

‘ಮೊಂತಿ’ ಎನ್ನುವುದು ಆಂಗ್ಲ ಭಾಷೆಯ ಮೌಂಟ್ ಎಂಬ ಪದದಿಂದ ಹಾಗೂ ಫೆಸ್ತ್ ಎನ್ನುವುದು ಆಂಗ್ಲಭಾಷೆಯ ಫೆಸ್ಟ್ ಎಂಬ ಪದದಿಂದ ಬಂದಿದೆ. ಕ್ಯಾಥೊಲಿಕ್ ಕ್ರೈಸ್ತರು ಮಾತೆ ಮೇರಿ ಅವರನ್ನು ಅವರ ಪ್ರಾಮುಖ್ಯತೆಗೆ ಅನುಗುಣವಾಗಿ ಬೇರೆ ಬೇರೆ ನಾಮದಿಂದ ಕರೆಯುತ್ತಾರೆ.

ನಾಡಿನೆಲ್ಲೆಡೆಯಲ್ಲಿ  ಸ೦ಭ್ರಮದ ‘ಮೊಂತಿಫೆಸ್ತ್’.......

‘ಮೊಂತಿ ಸಾಯ್ಬಿಣ್’ ಎನ್ನುವುದು ಅದರಲ್ಲಿ ಒಂದು. ‘ಮೊಂತಿ ಸಾಯ್ಬಿಣ್’ ಎಂದರೆ ಪರ್ವತದ ಮೇಲಿನ ತಾಯಿ ಅಥವಾ ಮಾತೆ ಎಂದು ಹಾಗೂ ಮೊಂತಿ ಫೆಸ್ತ್ ಎಂದರೆ ಪರ್ವತದ ಮೇಲಿನ ಮಾತೆಯ ಹಬ್ಬ ಎಂದರ್ಥ.

ಯೇಸುಕ್ರಿಸ್ತರ ಮಾತೆಯಾದ ಮೇರಿ ಸಂತ ಜೋಕಿಂ ಮತ್ತು ಸಂತ ಅನ್ನಾ ಅವರ ಪುತ್ರಿ. ಕ್ಯಾಥೊಲಿಕರಲ್ಲಿ ಯೇಸು ಕ್ರಿಸ್ತ (ಡಿ. 24), ಸಾನ್ನಿಕ ಯೋಹಾನ್ನಾ (ಜೂ. 24), ಮತ್ತು ಮೇರಿ ಮಾತೆ (ಸೆ.8)- ಈ ಮೂವರ ಜನ್ಮದಿನಕ್ಕೆ ಪ್ರಾಮುಖ್ಯತೆಯಿದೆ. ಮೇರಿ ಮಾತೆಯ ತಂದೆ-ತಾಯಿ ನೆಲೆಸಿದ್ದ ಬೆತ್ಸಾದಾ ಕೆರೆಬಳಿ ಅವರಿಗೆ ಸಮರ್ಪಿಸಿದ ದೇವಮಂದಿರ ೫ನೇ ಶತಮಾನದಲ್ಲಿ ನಿರ್ಮಾಣವಾಗಿತ್ತು. ಮಾತೆ ಮೇರಿ ಜನ್ಮದಿನದ ಆಚರಣೆಯು ಪ್ರಾರಂಭವಾದದ್ದೇ ಅಲ್ಲಿಂದ. ರೋಮ್‌ನಲ್ಲಿ ಪೋಪ್ ೧ನೇ ಸೆರ್‌ಜ್ಯೂಸ್ 7ನೇ ಶತಮಾನದ ಅಂತ್ಯದಲ್ಲಿ ಹಬ್ಬದ ಆಚರಣೆಗೆ ಪ್ರಾಮುಖ್ಯತೆಯನ್ನು ಕೊಟ್ಟರು. ಅಲ್ಲಿಂದ ಪ್ರಾರಂಭವಾಗಿ ಕ್ರಮೇಣ ಎಲ್ಲೆಡೆ ಹರಡಿ ಈಗ ವಿಶ್ವವ್ಯಾಪಿಯಾಗಿದೆ. 2ನೇ ವ್ಯಾಟಿಕನ್ ಸಮ್ಮೇಳನದಲ್ಲಿ ಚರ್ಚ್ ಸುಧಾರಣೆಗೆ ಸಂಬಂಽಸಿ ನಿರ್ಣಯ ಕೈಗೊಳ್ಳುವಾಗ ಮೇರಿ ಮಾತೆಯ ಜನ್ಮದಿನಾಚರಣೆಯನ್ನು ಕೂಡ ಸೇರಿಸಲಾಯಿತು.

‘ಮೊಂತಿ ಫೆಸ್ತ್’ ಸೆ. 8ರಂದು ಯಾಕೆ? ಮಾತೆ ಮೇರಿ ಬಗ್ಗೆ ಕ್ಯಾಥೊಲಿಕ್ ಕ್ರೈಸ್ತರಿಗೆ ಹೆಚ್ಚಿನ ಒಲವು. ಯಾಕೆಂದರೆ ಪ್ರಥಮವಾಗಿ ಅವರು ಯೇಸುಕ್ರಿಸ್ತರ ಹೆತ್ತ ತಾಯಿ. ಗುಣ ನಡತೆ, ದೈವಿಕ ಶ್ರದೆಟಛಿ, ಮನೆಯವರ ಹಾಗೂ ನೆರೆಕರೆಯವರ ಮೇಲಿನ ಪ್ರೀತಿ , ಲೋಕ ಕಲ್ಯಾಣಕ್ಕಾಗಿ ದೇವರ ಇಚ್ಛೆಗೆ ಪಾತ್ರವಾದ ಮೇರಿ ಮಾತೆ ಸರ್ವರ ಶ್ಲಾಘನೆಗೆ ಅರ್ಹರು. ದೇವ ಕುಮಾರ ಯೇಸುವನ್ನು ಮಾನವ ರೂಪದಲ್ಲಿ ಧರೆಗೆ ತರಲು ಮಾತೆ ಮೇರಿ ಸರ್ವೇಶ್ವರನಿಗೆ ಒಂದು ವಾಹಕವಾಗಿದ್ದರು. ಪರಮಾತ್ಮ ತನ್ನ ಮಹಾನ್ ಕಾರ್ಯಕ್ಕೆ ಮೇರಿಯನ್ನು ಆಯ್ಕೆ ಮಾಡಲು ಆಕೆಯ ಪವಿತ್ರತೆಯೇ ಕಾರಣ. ಹಾಗಾಗಿ ಕ್ಯಾಥೊಲಿಕರಿಗೆ ಆಕೆಯ ಮೇಲೆ ಪ್ರೀತಿ, ನಂಬಿಕೆ ಅಪಾರವಾಗಿದೆ.

ಕರಾವಳಿ ಕರ್ನಾಟಕದಲ್ಲಿ ಬೇಸಗೆ ಕಳೆದು ಸರಿಸುಮಾರು ಜೂನ್ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಿ ಬಿತ್ತನೆ ಕೆಲಸ ಶುರುವಾಗುತ್ತದೆ. ಈ ಬಿತ್ತನೆಯು ಮೊಳಕೆಯೊಡೆದು, ಗಿಡವಾಗಿ ಬೆಳೆದು ಫಸಲು ಬರುವಾಗ ಸಾಧಾರಣ ಸೆಪ್ಟಂಬರ್ ಪ್ರಾರಂಭವಾಗುತ್ತದೆ. ಒಳ್ಳೆಯ ಫಸಲು ಲಭಿಸಿದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಮೊದಲ ತೆನೆಯನ್ನು ಪ್ರಾವಿತ್ರ್ಯದ ಅರ್ಥದಲ್ಲಿ ಸೇವಿಸಲು ಒಂದು ಸಂದರ್ಭ ಬೇಕಾಗುತ್ತದೆ. ಮೇರಿಯ ಜನ್ಮದಿನವಾದ ಸೆ. à³® ಇದೇ ಸಮಯದಲ್ಲಿ ಬರುವುದರಿಂದ ಮೊದಲ ತೆನೆಯನ್ನು ಈ ಸಂದರ್ಭದಲ್ಲಿ ಸೇವಿಸಲು ಸುವರ್ಣಾವಕಾಶ. ಹೀಗೆ ಈ ಎರಡು ಮಹತ್ವದ ವಿಷಯಗಳನ್ನು ಗಮನದಲ್ಲಿಟ್ಟು ಸೆ. ೮ರಂದು ‘ಮೊಂತಿಫೆಸ್ತ್’ನ್ನು ಆಚರಿಸುತ್ತಾರೆ.

ಮೊಂತಿಫೆಸ್ತ್‌ನ ಪ್ರಾಮುಖ್ಯತೆ ‘ಮೊಂತಿ ಫೆಸ್ತ್’ ದಿನ ಒಂದು ವಿಶಿಷ್ಟ ದಿನವೂ ಹೌದು. ಯಾಕೆಂದರೆ ಕಟುಂಬದ ಎಲ್ಲಾ ಸದಸ್ಯರು ಆ ದಿನದಂದು ಒಟ್ಟಾಗಿ ಹೊಸ ತೆನೆಯನ್ನು ಸೇವಿಸಿ ಅನಂತರ ಭೋಜನ ಮಾಡುವುದು ರೂಢಿ. ಇದೊಂದು ಪ್ರೀತಿ ಬಾಂಧವ್ಯದ ಸೇತುವೆಯ ಸಂಕೇತ. ತಂದೆ, ತಾಯಿ, ಮಕ್ಕಳಿಂದ ಹಿಡಿದು ಅಜ್ಜ, ಅಜ್ಜಿ, ಮೊಮ್ಮಕ್ಕಳು, ಚಿಕ್ಕಪ್ಪ, ಚಿಕ್ಕಮ್ಮ (ಅವಿಭಾಜ್ಯ ಕುಟುಂಬ ತರಹ) ಒಟ್ಟಾಗಿ ವರ್ಷಕ್ಕೆ ಒಮ್ಮೆಯಾದರೂ ಸಹಭೋಜನ ಮಾಡಲು ಇದೊಂದು ಅವಕಾಶವಾಗಿದೆ. ನೊವೆನಾ (ನವದಿನ- 9 ದಿವಸ) ‘ಮೊಂತಿಫೆಸ್ತ್’ಗೆ ಸಿದಟಛಿತೆಯಾಗಿ ಹಬ್ಬದ ಮೊದಲು 9ದಿನ ಬಾಲೆ
ಮೇರಿಗೆ ಹೂವಿನ ಅರ್ಚನೆ ನಡೆಯುತ್ತದೆ. ಪುಟ್ಟ ಮಕ್ಕಳಿಗಂತೂ ಈ ಪುಷ್ಪಾರ್ಚನೆ ಆನಂದವನ್ನು ತರುತ್ತದೆ. ಮಕ್ಕಳು ಪುಷ್ಪಾರ್ಚನೆಗೋಸ್ಕರ ಹೂತೋಟ, ಹಿತ್ತಲುಗಳಲ್ಲಿ ಓಡಾಡಿ ಹೂಗಳನ್ನು ಸಂಗ್ರಹಿಸುತ್ತಾರೆ.

ಅವುಗಳನ್ನು ಅಂದವಾಗಿ ಜೋಡಿಸಿ ಉತ್ಸುಕತೆಯಿಂದ ಚರ್ಚ್‌ಗೆ ಒಯ್ದು ಬಾಲೆ ಮೇರಿಗೆ ಅರ್ಪಿಸುತ್ತಾರೆ. ಮಕ್ಕಳ ಈ ಹರ್ಷವನ್ನು ವೀಕ್ಷಿಸುವುದೇ ಕಣ್ಣಿಗೊಂದು ಆನಂದ. 9ದಿನಗಳ ಬಳಿಕ ಬರುವುದೇ ‘ಮೊಂತಿಫೆಸ್ತ್’. ಆ ದಿನದಂದು ಅಂದರೆ ಸೆ. 8ರಂದು ಇಗರ್ಜಿಯಲ್ಲಿ ಮೊದಲು ಬಾಲೆ ಮೇರಿಗೆ ಪುಷ್ಪಾರ್ಚನೆ, ಹೊಸ ಭತ್ತದ ತೆನೆಯ ಆಶೀರ್ವಚನ. ಅನಂತರ ಸಂಭ್ರಮದ ಬಲಿಪೂಜೆ. ಮನೆಗಳಲ್ಲಿ ಹಿರಿಯ ಸದಸ್ಯರು ಬಗೆಬಗೆಯ ತರಕಾರಿ ಪಲ್ಯಗಳನ್ನು ತಯಾರಿ ಮಾಡುವುದರಲ್ಲಿ ತಲ್ಲೀನವಾಗುತ್ತಾರೆ. ಬಡವ ಬಲ್ಲಿದರಿಗೆ ದಾನ ‘ಮೊಂತಿ ಫೆಸ್ತ್’ ದಿನದಂದು ಭಕ್ತಾದಿಗಳು ಇಗರ್ಜಿಯಲ್ಲಿ ಹಲವು ವಿಧದ ವಸ್ತುಗಳನ್ನು ಅರ್ಪಣೆ ಮಾಡುತ್ತಾರೆ. ಈ ವಸ್ತುಗಳನ್ನು ಜಾತಿ ಧರ್ಮದ ವ್ಯತ್ಯಾಸವಿಲ್ಲದೆ ಅಲ್ಲಿಗೆ ಬಂದ ಬಡವರಿಗೆ ಉಚಿತವಾಗಿ ನೀಡಲಾಗುತ್ತದೆ. ಒಟ್ಟಿನಲ್ಲಿ ಮೊಂತಿಫೆಸ್ತ್ ಕನ್ಯಾ ಮರಿಯಮ್ಮರ ಜನ್ಮದಿನದ ಆಚರಣೆಯ ಸಂಭ್ರಮವೂ ಹೌದು, ಜನ ಜೀವನದ ಬಾಂಧವ್ಯದ ಸಂಗಮವೂ ಹೌದು.

<p style="text-align: center">

Comments on this Article
Jason Francis Andrade, Bangalore / Mumbai Thu, September-8-2011, 3:04
Good photos. Thanks Kini.
Agree[0]
Venet, Bhramhavar Thu, September-8-2011, 1:14
Good photos and news Nice photo nice kini.....:-))
Agree[0]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




The drinking water for Udupi ??
View More

Land for Sale at Neelavara, Udupi District.Land for Sale at Neelavara, Udupi District.
KEMMANNU CHURCH - Weekly Announcements.KEMMANNU CHURCH - Weekly Announcements.
Veez Konkani Illustrated Weekly e-Magazine # 115Veez Konkani Illustrated Weekly e-Magazine # 115
Milagres English Medium, School, KallianpurMilagres English Medium, School, Kallianpur
Open Air Dance and Music Festival at Aryan Resorts, near Kemmannu on 7th March.Open Air Dance and Music Festival at Aryan Resorts, near Kemmannu on 7th March.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Rozaricho Gaanz December IssueRozaricho Gaanz December Issue
Milarchi Laram - Issue Jan 2020Milarchi Laram - Issue Jan 2020
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India