ಏ 18 ರ ಚುನಾವಣೆಗೆ ಸರ್ವ ಸನ್ನದ್ಧ : ಡಾ.ಎಸ್.ಎಸ್. ಮಧುಕೇಶ್ವರ
Kemmannu News Network, 10-04-2019 17:35:03
ಉಡುಪಿ : ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 8 ವಿಧಾನಸಭಾ ಕ್ಷೇತ್ರಗಳಿದ್ದು, ಅದರಲ್ಲಿ 119 ಕುಂದಾಪುರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 97689 ಪುರುಷ, 105582 ಮಹಿಳಾ ಹಾಗೂ 2 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 203273 ಮತದಾರರಿರುತ್ತಾರೆ. ಈ ಪೈಕಿ 2141 ಅಂಗವಿಕಲ ಮತದಾರರಿರುತ್ತಾರೆ.
ಮತಗಟ್ಟೆ ವಿವರ: 119 ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 222 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಕುಂದಾಪುರ ಹೋಬಳಿಯ 33 ಹಾಗೂ ಕೋಟ ಹೋಬಳಿಯ 89 ಮತಗಟ್ಟೆಗಳು ಸೇರಿರುತ್ತವೆ. ಈ ಪೈಕಿ 64 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, 30 ಮತಗಟ್ಟೆಗಳನ್ನು ವಲ್ನರೇಬಲ್ ಮತಗಟ್ಟೆಗಳನ್ನಾಗಿ ಗುರುತಿಸಲಾಗಿರುತ್ತದೆ.
222 ಮತಗಟ್ಟೆಗಳ ಪೈಕಿ 4 ಮತಗಟ್ಟೆಗಳು ಸಖಿ ಮತಗಟ್ಟೆಗಳಾಗಿದ್ದು, ಸದ್ರಿ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಮಹಿಳಾ ಸಿಬ್ಬಂದಿಗಳೇ ಆಗಿರುತ್ತಾರೆ. ಒಂದು ಮತಗಟ್ಟೆಯು ಅಂಗವಿಕಲರ ಮತಗಟ್ಟೆಯಾಗಿದ್ದು, ಸದ್ರಿ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಅಂಗವಿಕಲ ಸಿಬ್ಬಂದಿಗಳಾಗಿರುತ್ತಾರೆ. ಕೊರಗ ಸಮುದಾಯ ಹೆಚ್ಚಿಗೆ ಇರುವ ಒಂದು ಮತಗಟ್ಟೆಯನ್ನು ಕೊರಗ ಸಂಪ್ರದಾಯ ಬಿಂಬಿಸುವ ಉದ್ದೇಶಕ್ಕಾಗಿ ಎಥ್ನಿಕಲ್ ಮತಗಟ್ಟೆಯಾಗಿ ಗುರುತಿಸಲಾಗಿರುತ್ತದೆ.
ಎಲ್ಲಾ 222 ಮತಗಟ್ಟೆಗಳಲ್ಲಿ ವಿಕಲ ಚೇತನ ಮತದಾರರ ಅನುಕೂಲಕ್ಕಾಗಿ ಸೂಕ್ತ ರ್ಯಾಂಪ್, ಗಾಲಿ ಕುರ್ಚಿ ವ್ಯವಸ್ಥೆ ಮತ್ತು ದೃಷ್ಠಿ ಮಾಂದ್ಯರಿಗೆ ಭೂತಗನ್ನಡಿ ಹಾಗೂ ಎಲ್ಲಾ ಮತದಾರರಿಗೆ ಪ್ರಥಮ ಚಿಕಿತ್ಸಾ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಅಪೇಕ್ಷೆಪಟ್ಟ ನಡೆದಾಡಲು ಬಾರದ ಅಂಗವಿಕಲರಿಗೆ ಮನೆಯಿಂದ ಮತಗಟ್ಟೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ಆಯ್ದ 26 ಮತಗಟ್ಟೆಗಳ ವೀಡಿಯೋ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಚುನಾವಣಾ ಸಿಬ್ಬಂದಿ: ಮತದಾನ ಪ್ರಕ್ರಿಯೆಯಲ್ಲಿ ಕರ್ತವ್ಯ ನಿರ್ವಹಿಸಲು ಒಟ್ಟು 222 ಮತಗಟ್ಟೆಗಳಿಗೆ ಹಾಗೂ ಕಾದಿರಿಸಿದ ಸಿಬ್ಬಂದಿಗಳನ್ನು ಸೇರಿ ಅಧ್ಯಕ್ಷಾಧಿಕಾರಿಗಳು 238, ಸಹಾಯಕ ಅಧ್ಯಕ್ಷಾಧಿಕಾರಿ 238 ಹಾಗೂ ಪೋಲಿಂಗ್ ಆಫೀಸರ್ 546 ಒಟ್ಟು 1022 ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದ್ದು, ಸಂಬಂಧಪಟ್ಟ ಸಿಬ್ಬಂದಿಗಳಿಗೆ ಈಗಾಗಲೇ ಎರಡು ಹಂತದಲ್ಲಿ ತರಬೇತಿ ನೀಡಿ ಸನ್ನದ್ಧಗೊಳಿಸಲಾಗಿರುತ್ತದೆ.
ಚುನಾವಣಾ ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ: ಚುನಾವಣಾ ಪ್ರಕ್ರಿಯೆಯಲ್ಲಿ ನಿಯೋಜಿತ ಅಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಅಗತ್ಯವಾದ ವಾಹನ ಸೌಲಭ್ಯ ಮಾಡಲಾಗಿದ್ದು, ಇದಕ್ಕಾಗಿ 37 ಬಸ್ಗಳನ್ನು, 28 ವ್ಯಾನ್ಗಳನ್ನು ಉಪಯೋಗಿಸಿಕೊಳ್ಳಲಾಗಿದೆ ಹಾಗೂ ಹೊರ ತಾಲೂಕುಗಳಿಂದ ಆಗಮಿಸುವ ಸಿಬ್ಬಂದಿಗಳಿಗೆ ಆಯಾ ತಾಲೂಕು ಕೇಂದ್ರಗಳಿಂದ ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.
ಮತಯಂತ್ರಗಳ ತಯಾರಿ: ಚುನಾವಣಾ ಅಂತಿಮ ಕಣದಲ್ಲಿರುವ 12 ಅಭ್ಯರ್ಥಿಗಳು ಹಾಗೂ ಸೇರಿದಂತೆ ಕ್ಯಾಂಡಿಡೇಟ್ ಸೆಟ್ಟಿಂಗ್ ಕಾರ್ಯವನ್ನು ಏಪ್ರಿಲ್ 10 ರಂದು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇಲ್ಲಿ ವಿವಿಧ ರಾಜಕೀಯ ಪಕ್ಷಗಳ ಏಜೆಂಟ್ ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆಸಿ, ಭದ್ರತಾ ಕೊಠಡಿಯಲ್ಲಿ ಬಿಗು ಆರಕ್ಷಕ ಬಂದೋಬಸ್ತಿನೊಂದಿಗೆ ದಾಸ್ತಾನು ಇರಿಸಲಾಗುತ್ತದೆ.
ಮಾದರಿ ನೀತಿ ಸಂಹಿತೆ : ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 17 ರೆವಿನ್ಯೂ ಸೆಕ್ಟರ್ ಅಧಿಕಾರಿಗಳ ಹಾಗೂ 30 ಪೊಲೀಸ್ ಸೆಕ್ಟರ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಕ್ಷೇತ್ರದಲ್ಲಿ 3 ಫ್ಲೈಯಿಂಗ್ ಸ್ಕ್ವಾಡ್ ತಂಡವನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲೂ ತಲಾ 3 ಅಧಿಕಾರಿಗಳಂತೆ ಒಟ್ಟು 9 ಅಧಿಕಾರಿಗಳಿದ್ದು, ಸದ್ರಿ ತಂಡವು 24*7 ರಂತೆ ಕಾರ್ಯಾಚರಿಸುತ್ತದೆ. ತಂಡದಲ್ಲಿ ಒಬ್ಬ ಅಧಿಕಾರಿ ಪೊಲೀಸ್ ಹಾಗೂ ವೀಡಿಯೋ ಗ್ರಾಫರ್ ಒಳಗೊಂಡಿರುತ್ತಾರೆ. ಕ್ಷೇತ್ರದಲ್ಲಿ ವೀಡಿಯೋ ಸರ್ವೆಲೈನ್ಸ್ ತಂಡಗಳನ್ನು ರಚಿಸಲಾಗಿದ್ದು, ಈ ತಂಡದಲ್ಲೂ ಸಹ ಒಬ್ಬ ಅಧಿಕಾರಿ, ಪೊಲೀಸ್ ಹಾಗೂ ವಿಡಿಯೋ ಗ್ರಾಫರ್ ಒಳಗೊಂಡಿರುತ್ತಾರೆ. ಸಹಾಯಕ ಚುನಾವಣಾಧಿಕಾರಿಯವರ ಕಚೇರಿಯಲ್ಲಿ ಒಂದು ವೀಡಿಯೋ ವ್ಯೂವಿಂಗ್ ತಂಡವನ್ನು ರಚಿಸಲಾಗಿರುತ್ತದೆ. ಸಹಾಯಕ ಚುನಾವಣಾಧಿಕಾರಿಯವರ ಕಚೇರಿಯಲ್ಲಿ 24*7 ಮಾದರಿಯಲ್ಲಿ ಕಂಟ್ರೋಲ್ ರೂಂ(08254-298058) ಹಾಗೂ ಟೋಲ್ ಫ್ರೀ ನಂಬರ್ 1950 ನ್ನು ತೆರೆಯಲಾಗಿದ್ದು, ಚುನಾವಣಾ ಸಂಬಂಧ ಸ್ವೀಕೃತವಾಗುವ ಎಲ್ಲಾ ರೀತಿಯ ದೂರುಗಳನ್ನು ಇಲ್ಲಿ ಸ್ವೀಕರಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಸಹಾಯಕ ಚುನಾವಣಾಧಿಕಾರಿಯವರ ಕಚೇರಿಯಲ್ಲಿ ಏಕ ಗವಾಕ್ಷಿ ತೆರೆಯಲಾಗಿದ್ದು, ಇದರಲ್ಲಿ ವಿವಿಧ ಸಭೆ/ ಸಮಾರಂಭಗಳನ್ನು ನಡೆಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ನಿಯಮಾನುಸಾರ ಅನುಮತಿ ನೀಡಲಾಗುತ್ತದೆ. ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಲೆಕ್ಕ ಪತ್ರ ಪರಿಶೀಲನೆ ತಂಡವನ್ನು ರಚಿಸಲಾಗಿರುತ್ತದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರು ಸಲ್ಲಿಸಲು ಸೀವಿಜಿಲ್ ಮೊಬೈಲ್ ಆಪ್ಅನ್ನು ಬಳಕೆ ಹಾಗೂ ಉಪಯೋಗದ ಬಗ್ಗೆ ಪ್ರತಿದಿನ ಗ್ರಾಮದಲ್ಲಿ 10 ಜನರನ್ನು ಗುರುತಿಸಿ ಮಾಹಿತಿ ನೀಡುವಂತೆ ಈಗಾಗಲೇ ಎಲ್ಲಾ ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸಂಬಂಧಪಟ್ಟ ಮೊಬೈಲ್ ಆಪ್ನಲ್ಲಿ 2 ಎಂ.ಬಿ ಯ ವರೆಗಿನ ಫೋಟೋ/ ವೀಡಿಯೋಗಳ ಮೂಲಕ ಸಾರ್ವಜನಿಕರು ಅನಾಮಧೇಯ ಹಾಗೂ ವಿಳಾಸದೊಂದಿಗೆ ದೂರನ್ನು ದಾಖಲಿಸಬಹುದಾಗಿರುತ್ತದೆ.
ಚುನಾವಣಾ ಭದ್ರತೆ : ಚುನಾವಣಾ ಸಂಬಂಧ ಅಗತ್ಯ ರಕ್ಷಣಾ ತುಕಡಿಗಳನ್ನು ನಿಯೋಜಿಸಿಕೊಳ್ಳಲಾಗಿದ್ದು, ವಿಶೇಷವಾಗಿ ವನ್ಯ ಮೃಗಗಳ ಉಪಟಳವಿರುವಲ್ಲಿ ಅಗತ್ಯ ಅರಣ್ಯ ಇಲಾಖೆಯ ರಕ್ಷಣಾ ತಂಡವನ್ನು ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅರೆಸೇನಾ ಭದ್ರತಾ ಪಡೆಗಳನ್ನು ಬಳಸಿಕೊಳ್ಳಲಾಗಿದೆ.
ಮತದಾನ ಜಾಗೃತಿ: ವಿಧಾನ ಸಭಾ ಕ್ಷೇತ್ರದ ಪ್ರತಿ ಗ್ರಾಮದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ವಿವಿಧ ಅಧಿಕಾರಿಗಳ ತಂಡಗಳ ಮೂಲಕ ಮತದಾನ ಜಾಗೃತಿಯ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಎಲ್ಲಾ ಅರ್ಹ ಮತದಾರರಿಗೆ ಭಾವಚಿತ್ರವಿರುವ ವೋಟರ್ ಸ್ಲಿಪ್ ಹಾಗೂ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡ ಮತದಾರರಿಗೆ ಮತದಾರರ ಗುರುತು ಚೀಟಿ ಹಂಚುವ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಮತದಾನದ ಪ್ರಕ್ರಿಯೆಯಲ್ಲಿ ಬಿಎಲ್ಓರವರು ನೀಡಿದ ಓಟರ್ಸ್ಲಿಪ್ನ್ನು ಗುರುತುಚೀಟಿ (ಎಪಿಕ್) ಹಾಗೂ ಚುನಾವಣಾ ಆಯೋಗ ನಿರ್ದೇಶಿಸಿದ ಇನ್ನಿತರ 11 ದಾಖಲೆಗಳನ್ನು ಬಳಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಿಗೆ ಈಗಾಗಲೇ ಸಲಹೆ ನೀಡಲಾಗಿರುತ್ತದೆ.
ಮತದಾನ ಪೂರ್ವ ತಯಾರಿ: ಚುನಾವಣಾ ಸಂಬಂಧ ಮಸ್ಟರಿಂಗ್ ಕಾರ್ಯವನ್ನು ಎಪ್ರಿಲ್ 17 ರಂದು ಹಾಗೂ ಡಿಮಸ್ಟರಿಂಗ್ ಕಾರ್ಯವನ್ನು ಎಪ್ರಿಲ್ 18 ರಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆಸಲಾಗುವುದು.
ಎಪ್ರಿಲ್ 18 ರಂದು ನಡೆಯುವ ಉಡುಪಿ - ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸರ್ವಸನ್ನದ್ಧರಾಗಿರುವುದಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ (ಕುಂದಾಪುರ ವಿಧಾನಸಭಾ ಕ್ಷೇತ್ರ) ಸಹಾಯಕ ಚುನಾವಣಾಧಿಕಾರಿ ಡಾ. ಎಸ್. ಎಸ್ ಮಧುಕೇಶ್ವರ. ಕೆ.ಎಸ್ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link