ಈಸ್ಟರ್ ಹಬ್ಬವು ಹೊಸ ಭರವಸೆಯನ್ನು ಮೂಡಿಸಲಿ - ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊ, ಉಡುಪಿಯ ಧರ್ಮಾಧ್ಯಕ್ಷರು
Kemmannu News Network, 04-04-2021 08:43:57
ಈಸ್ಟರ್ ಹಬ್ಬವು ಹೊಸ ಭರವಸೆಯನ್ನು ಮೂಡಿಸಲಿ - ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊ, ಉಡುಪಿಯ ಧರ್ಮಾಧ್ಯಕ್ಷರು
ಕತ್ತಲೆಗಿಂತ ಪ್ರಖರವಾದುದು ಬೆಳಕು, ಸುಳ್ಳಿಗಿಂತ ಹೆಚ್ಚು ಶಕ್ತಿಶಾಲಿ ಸತ್ಯ, ದ್ವೇಷಕ್ಕಿಂತ ಹೆಚ್ಚು ಬಲಶಾಲಿ ಪ್ರೀತಿ ಹಾಗೂ ಸ್ವಾರ್ಥಕ್ಕಿಂತ ಹೆಚ್ಚು ಶಕ್ತಿಯುತ ತ್ಯಾಗ ಎಂಬ ಸಂದೇಶವನ್ನು ಸಾರಿ ಮಾನವ ಜನಾಂಗಕ್ಕೆ ಹೊಸ ಭರವಸೆಯನ್ನು ತೋರಲು ಮತ್ತೊಮ್ಮೆ ಬಂದಿದೆ ಈಸ್ಟರ್ ಹಬ್ಬ. ಯೇಸುಕ್ರಿಸ್ತರ ಪುನರುತ್ಥಾನದ ಈ ಮಹೋತ್ಸವ ನಮ್ಮೀ ಜಗತ್ತಿನ ಸಕಲ ಮಾನವರನ್ನು ಕತ್ತಲೆಯಿಂದ ಬೆಳಕಿಗೆ, ಅಸತ್ಯದಿಂದ ಸತ್ಯದೆಡೆಗೆ ಕೈಹಿಡಿದು ನಡೆಸಲಿ.
ಕಳೆದೊಂದು ವರ್ಷವು ಇಡೀ ಜಗತ್ತಿನ ಜನರಿಗೆ ಭೀತಿ, ಹತಾಶೆ ಹಾಗೂ ಸಂಕಷ್ಟದ ಸಮಯವಾಗಿತ್ತು. ಕೋವಿಡ್-19 ಸೋಂಕಿನಿಂದ ಇಡೀ ಮಾನವಕುಲವೇ ತತ್ತರಿಸಿಹೋಗಿತ್ತು. ಅದರಲ್ಲೂ ವಿಶೇಷವಾಗಿ ಬಡವರು, ನಿರಾಶ್ರಿತರು, ನಿರ್ಗತಿಕರು ಹಾಗೂ ಕಾರ್ಮಿಕರು ಅತೀವ ಕಷ್ಟಗಳಿಗೆ ತುತ್ತಾದರು. ಈ ಮಧ್ಯೆ ಕಳೆದ ವರ್ಷದ ಈಸ್ಟರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅವಕಾಶವೇ ಇರಲಿಲ್ಲ. ಈ ವರ್ಷವೂ ಕೋವಿಡ್-19 ಪರಿಸ್ಥಿತಿಯು ಸುಧಾರಿಸಿಲ್ಲ. ಆದರೂ, ನಾವು ಆಚರಿಸುವ ಈಸ್ಟರ್ ಹಬ್ಬವು ನಮ್ಮ ಜೀವನದ ನಿರಾಶೆಯನ್ನು ಹೋಗಲಾಡಿಸಿ ಹೊಸ ಭರವಸೆಯನ್ನು ಮೂಡಿಸಲು ಒದಗಿದ ಸದವಕಾಶ ಎನ್ನಬಹುದು.
ಯೇಸುಸ್ವಾಮಿ ಸಕಲ ಮಾನವಕುಲದ ರಕ್ಷಣೆಗಾಗಿ ಶಿಲುಬೆಯ ಮೇಲೆ ಮೃತಪಟ್ಟರು. ಶಿಲುಬೆಯು ವಿಮೋಚನೆಯನ್ನು ನೀಡುವ, ಶಾಂತಿಯ ಜೀವನಕ್ಕೆ ಆಹ್ವಾನವೀಯುವ ದಿವ್ಯ ಸಾಧನ. ಕ್ರೈಸ್ತರ ಜೀವನದಲ್ಲಿ ಶಿಲುಬೆಗೆ ವಿಶೇಷವಾದ ಸ್ಥಾನವಿದೆ. ಅದನ್ನು ಭಕ್ತಿಪೂರ್ವಕವಾಗಿ ಕಂಡು, ತಮ್ಮ ಮನೆಗಳಲ್ಲಿ ಉನ್ನತವಾದ ಸ್ಥಾನದಲ್ಲಿ ಪ್ರತಿಷ್ಠಾಪಿಸುತ್ತಾರೆ. ಕ್ರೈಸ್ತರ ಪ್ರತಿ ದಿನವು ಶಿಲುಬೆಯ ಗುರುತಿನೊಂದಿಗೆ ಆರಂಭವಾಗಿ ಕೊನೆಗೊಳ್ಳುತ್ತದೆ. ಮನುಷ್ಯ ತನ್ನ ಸ್ವಾರ್ಥವನ್ನು ತ್ಯಜಿಸಿ ಪರಪ್ರೀತಿಯಲ್ಲಿ ಬಾಳಲು ದೇವರು ತೋರುವ ದಾರಿಯೇ ಶಿಲುಬೆಯ ಹಾದಿ.
ಮರಣವು ಯೇಸುಸ್ವಾಮಿಯನ್ನು ಸೋಲಿಸಲು ಅಶಕ್ತವಾಯಿತು. ಅವರು ಮರಣದ ಮೇಲೆ ವಿಜಯವನ್ನು ಸಾಧಿಸಿದರು. ನಮ್ಮ ಜೀವನದ ಕಷ್ಟ, ಸಾವು, ನೋವುಗಳು ಅರ್ಥರಹಿತವಲ್ಲ, ಬದಲಾಗಿ ದೇವರು ತಮ್ಮ ಚಿತ್ತವನ್ನು ನಮ್ಮಲ್ಲಿ ಕಾರ್ಯಗತಗೊಳಿಸುವ ಸಾಧನಗಳು. ತುಸು ಕಾಲ ನಾವು ಈ ಕಷ್ಟಗಳಿಂದ ವಿಚಲಿತರಾದರೂ, ದೇವರಲ್ಲಿ ಅಚಲ ವಿಶ್ವಾಸವಿಟ್ಟು ಅವರ ಚಿತ್ತಕ್ಕೆ ಮಣಿದರೆ, ನಮ್ಮ ಜೀವನದಲ್ಲೂ ಕಷ್ಟಗಳ ಕತ್ತಲೆ ಕಳೆದು, ಬೆಳಕು ಮೂಡುವುದು ನಿಶ್ಚಿತ. ಆದಷ್ಟು ಬೇಗ ನಮ್ಮನ್ನು ಆವರಿಸಿದ ಕೋವಿಡ್-19 ಸೋಂಕಿನಿಂದ ಈ ಲೋಕದ ಎಲ್ಲರಿಗೂ ಮುಕ್ತಿ ದೊರಕಲಿ ಎಂದು ಹಾರೈಸಿ ಪ್ರಾರ್ಥಿಸೋಣ.
ಈ ಲೋಕದ ಬದುಕು ಕಷ್ಟ, ನೋವು, ಅಪಜಯಗಳನ್ನೊಳಗೊಂಡ ಬದುಕು. ಪುನರುತ್ಥಾನವೆಂದರೆ ಸಾವು, ನೋವು, ಚಿಂತೆ, ಹಸಿವು, ನೀರಡಿಕೆಗಳಿಲ್ಲದ ಆಹ್ಲಾದಕರ ಬದುಕು. ಯೇಸುಸ್ವಾಮಿ ಪುನರುತ್ಥಾನರಾಗಿ ಆ ಬದುಕಿನ ಭರವಸೆಯನ್ನು ನಮಗೆ ನೀಡಿದ್ದಾರೆ. ಮನುಷ್ಯ ಯಾವುದೇ ಕೆಟ್ಟ ಪರಿಸ್ಥಿತಿಯಲ್ಲಿದ್ದರೂ ನಿರಾಶನಾಗಬೇಕಿಲ್ಲ. ‘ಕತ್ತಲು ಕಳೆದು ಬೆಳಕು ಹರಿಯುವ’ ಖಚಿತ ಭರವಸೆಯಿಂದ ಭಗವಂತನೆಡೆಗೆ ತಿರುಗಿದರೆ ನಿತ್ಯಜೀವ ಅವನದಾಗುವುದು ಎಂದು ಈಸ್ಟರ್ ಹಬ್ಬ ಸಾರುತ್ತದೆ. ನಾವು ನಮ್ಮ ಕೆಟ್ಟತನ ಎಂಬ ಕತ್ತಲೆಯನ್ನು ದಾಟಿ ಒಳ್ಳೆಯತನವೆಂಬ ಬೆಳಕಿಗೆ ಬರುವುದೇ ನಮ್ಮ ನಿಜವಾದ ಪುನರುತ್ಥಾನ.
ಈ ಪುನರುತ್ಥಾನ ಹಬ್ಬವನ್ನು ಆಚರಿಸುವ ನಾವೆಲ್ಲ ಕೋವಿಡ್ 19 ಸೋಂಕಿನಿಂದ ಬಳಲುವವರು ಹಾಗೂ ಅವರಿಗೆ ಆರೋಗ್ಯ ಚಿಕಿತ್ಸೆಯನ್ನು ನೀಡುವ ಎಲ್ಲರಿಗಾಗಿ ಪ್ರಾರ್ಥಿಸೋಣ. ಮೃತ್ಯುಂಜಯ ಯೇಸುಸ್ವಾಮಿ ಅವರ ತ್ಯಾಗಮಯ ಸೇವೆಗಾಗಿ ಅವರನ್ನು ಉದ್ಧರಿಸಲಿ. ಅಂತೆಯೇ, ನಮ್ಮೆಲ್ಲರನ್ನು ಅಪಾಯದಿಂದ ರಕ್ಷಿಸಿ ಸುರಕ್ಷಿತವಾಗಿ ಕಾಪಾಡಲಿ. ಸಮಾಜದ ಎಲ್ಲಾ ಪ್ರಿಯ ಬಾಂಧವರಿಗೂ ಈಸ್ಟರ್ ಹಬ್ಬದ ಶುಭಾಷಯಗಳನ್ನು ಕೋರಿ, ಪುನರುತ್ಥಾನರಾದ ಯೇಸು ನಿಮ್ಮನ್ನು ಶಾಂತಿಯಿಂದ ಕಾಪಾಡಲಿ.
ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊ
ಉಡುಪಿಯ ಧರ್ಮಾಧ್ಯಕ್ಷರು
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Maundy Thursday 2024 | LIVE From St. Theresa’s Church, Kemmannu | Udupi |
2 BHK Flat for sale on the 6th floor of Eden Heritage, Santhekatte, Kallianpur, Udupi
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, Kemmannu
Annual Church Feast 2024 | St. Theresa’s Church, Kemmannu
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link