Aradya  - 18th District convention by Lions Club International, Dist. 317C


Richard Crasto
Kemmannu News Network, 20-04-2021 14:23:56


Write Comment     |     E-Mail To a Friend     |     Facebook     |     Twitter     |     Print


Aradya  - 18th District convention by Lions Clubs International, Dist. 317C

18 ನೇ ಜಿಲ್ಲಾ ಸಮ್ಮೇಳನ "ಆರಾಧ್ಯ"

ಸಹೃದಯಿ ಲಯನ್ಸ್ ಬಂಧುಗಳೆ,  ತಮ್ಮೆಲ್ಲರಿಗೂ ಹಾರ್ದಿಕ ಅಭಿನಂದನೆಗಳು ಹಾಗೂ ಶುಭಾಶಯಗಳು.

" ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ " ಎಂಬ ದಾಸವಾಣಿಯಂತೆ 18ನೇ ಜಿಲ್ಲಾ ವಾರ್ಷಿಕ ಸಮ್ಮೇಳನ  *ಆರಾಧ್ಯ* ದಿನಾಂಕ 17 ಹಾಗೂ 18 ಎಪ್ರಿಲ್ 2021 ರಂದು ಸಹನಾ ಕನ್ವೆನ್ಷನ್ ಸೆಂಟರ್, ಕೋಟೇಶ್ವರ ಇಲ್ಲಿ ಅತ್ಯಂತ ವೈಭವದಿಂದ  ಅಭೂತಪೂರ್ವ ಹಾಗೂ  ಯಶಸ್ವೀಯುತ ಸಮ್ಮೇಳನವಾಗಿ ಸಂಪನ್ನಗೊಂಡು ಸಮಸ್ತ ಲಯನ್ಸ್ ಬಂಧುಗಳ ಪ್ರಶಂಸೆಯ ಸುರಿಮಳೆಗೆ ಪಾತ್ರವಾಯಿತು.  ಮಾಹಾಮಾರಿ ಕೋವಿಡ್ ನ ಭಯಾನಕ ವಾತಾವರಣ ಒಂದೆಡೆಯಾದರೆ, ಜಿಲ್ಲಾಡಳಿತದ ಕಟ್ಟುನಿಟ್ಟಿನ ನಿಯಮಾವಳಿಗಳ ಅನುಷ್ಠಾನದ ಸೂಚನೆಗೆ ಸ್ಪಂದಿಸಬೇಕಾದ ಸಂಧಿಗ್ದ ಪರಿಸ್ಥಿತಿಯಲ್ಲಿ ಅದೇನೋ ಮಾಯೆಯೋ ಎಂಬಂತೆ ಎಲ್ಲವೂ ನಿರ್ವಿಘ್ನವಾಗಿ ಜರಗಿ ಎಲ್ಲರ ಮನದಲ್ಲೂ ಸಂತಸ, ಸಂತೃಪ್ತಿ ನೆಲೆಗೊಂಡಿತು.

Dr. Neri Cornelio from Kallianpur will be the New District Governor.

ನಮ್ಮ ಗೌರವಾನ್ವಿತ ಜಿಲ್ಲಾ ಗವರ್ನರ್ ಲಯನ್  ನೀಲಕಂಠ ಎಮ್ ಹೆಗಡೆಯವರ ಸಮರ್ಥ ಸಾರಥ್ಯದಲ್ಲಿ, ಜಿಲ್ಲಾ ಸಂಫುಟ ಸದಸ್ಯರ ಹಾಗೂ ಎಲ್ಲಾ ಕ್ಲಬ್ ಗಳ ಸಂಘಟಿತ ಸಹಕಾರದೊಂದಿಗೆ ವಿಶೇಷವಾಗಿ ಸಮ್ಮೇಳನ ಸಮಿತಿಯ ಅಧ್ಯಕ್ಷರಾದ ಹಿರಿಯ ಲಯನ್ಸ್ ಮುಂದಾಳು ಲಯನ್ ಅರುಣ ಕುಮಾರ್ ಹೆಗ್ಡೆಯವರ ಹಾಗೂ ಎಲ್ಲಾ ಪದಾಧಿಕಾರಿಗಳ, ಉಪಸಮಿತಿಯ ಪದಾಧಿಕಾರಿಗಳ ನಿಷ್ಠೆ , ಪ್ರಾಮಾಣಿಕ ಪರಿಶ್ರಮ,  ಆತಿಥೇಯ ಕ್ಲಬ್ ಗಳಾದ ಲಯನ್ಸ್ ಕ್ಲಬ್ ಮೊಳಹಳ್ಳಿ-ಶಿವಶಾಂತಿ,  ಕುಂದಾಪುರ, ಕಲ್ಯಾಣಪುರ, ಕೋಟೇಶ್ವರ, ಹಾಲಾಡಿ ಬಿದ್ಕಲ್ ಕಟ್ಟೆ , ಹಂಗ್ಲೂರ್, ಬೈಂದೂರು-ಉಪುಂದ, ಬನ್ನಾಡಿ-ವಡ್ಡರ್ಸೆ, ಮೊಳಹಳ್ಳಿ-ಶಾಂತಿ ಈ ಎಲ್ಲಾ ಕ್ಲಬ್ ಗಳ ಸಂಯುಕ್ತ ಶ್ರಮ ಹಾಗೂ ಕಾರ್ಯವೈಖರಿ ಈ ಯಶಸ್ಸಿನ ಹಿಂದಿನ ಶಕ್ತಿಗಳು ಎಂದರೆ ಅತಿಶಯೋಕ್ತಿಯಾಗಲಾರದು. ಸಮ್ಮೇಳನದ ಉದ್ಘಾಟನಾ ಸಮಾರಂಭದ ಪೂರ್ವದಲ್ಲಿ  ನಡೆದ ಜಿಲ್ಲೆಯ ಕ್ಲಬ್ ಗಳ ಬ್ಯಾನರ್ ಪ್ರಸಂಟೇಶನ್ ಅತ್ಯಂತ ಶಿಸ್ತುಬದ್ಧವಾಗಿ ಆಕರ್ಷಣೀಯವಾಗಿ ಮೂಡಿಬಂದಿತ್ತು. ಮಹಿಳಾ ಚೆಂಡೆ ಬಳಗದವರ ಅಮೋಘ ಚೆಂಡೆವಾದನ ಈ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿತು

ಹೀಗೆ ಅರ್ಥಪೂರ್ಣವಾಗಿ ಈ ಕಾರ್ಯಕ್ರಮವನ್ನು ನೆರವೇರಿಸುವಲ್ಲಿ  ವಲಯಾಧ್ಯಕ್ಷರಾದ ಲಯನ್ ವಿಶ್ವನಾಥ ಶೆಟ್ಟಿ,ಬೈಂದೂರು,  ಲಯನ್ ಅಕ್ಷಯ ಹೆಗ್ಡೆ ಹಾಗೂ ಅವರ ತಂಡ ವಿಶೇಷ ಮುತುವರ್ಜಿ ವಹಿಸಿದ್ದರು.


ಬಹು ಆಕರ್ಷಣೀಯ ಭವ್ಯ ವೇದಿಕೆಯಲ್ಲಿ ಆಯೋಜಿಸಲಾದ ಉದ್ಘಾಟನಾ ಸಮಾರಂಭ ದ ಅಧ್ಯಕ್ಷತೆಯನ್ನು ಮಾನ್ಯ ಜಿಲ್ಲಾ ಗವರ್ನರ್ ಲಯನ್ ನೀಲಕಂಠ ಎಮ್ ಹೆಗಡೆ ವಹಿಸಿದ್ದರು. ಲಯನ್ ರಮ್ಯಾ ಆರ್ ಪೈ ಯವರು ಪ್ರಾರ್ಥಿಸಿದರು.  ಮಾಸ್ಟರ್ ಅರುಷ್ ಶೆಟ್ಟಿಯವರಿಂದ ಯಕ್ಷಗಾನ ಶೈಲಿಯಲ್ಲಿ ಸ್ವಾಗತ ನೃತ್ಯ ನಡೆಯಿತು. ಅತ್ಯಂತ ಗೌರವದಿಂದ ರಾಷ್ಟ್ರಧ್ವಜವನ್ನು ಪಥಸಂಚಲನದೊಂದಿಗೆ ಲಯನ್ ಡಾ. ರಾಜೇಂದ್ರ ಕೆ. ಅವರು ವೇದಿಕೆಗೆ ತಂದರು. ಲಯನ್ ಇಂ. ರಮಾನಂದ ಕೆ. ಧ್ವಜ ವಂದನೆ ಸಲ್ಲಿಸಿದರು. ವಿಶ್ವಶಾಂತಿಗಾಗಿ ಹಾಗೂ ವರದಿ ವರ್ಷದಲ್ಲಿ ನಮ್ಮನ್ನಗಲಿದ ಲಯನ್ಸ್ ಬಂಧುಗಳ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗುವಂತೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಲಯನ್ ಸೂರ್ಯಪ್ರಕಾಶ್ ದಾಮ್ಲೆ ಲಯನ್ಸ್ ನೀತಿಸಂಹಿತೆ ವಾಚಿಸಿದರು. ಸಮ್ಮೇಳನ ಸಮಿತಿಯ ಚೇರ್ಮನ್ ಲಯನ್ ಅರುಣಕುಮಾರ್ ಹೆಗ್ಡೆ ಸ್ವಾಗತಿಸಿದರು. ’ಆರಾಧ್ಯ’ ಸಮ್ಮೇಳನ ವನ್ನು ಜಿಲ್ಲೆಯ ಪ್ರಥಮ ಮಹಿಳೆ ಲಯನ್ ಸಂಧ್ಯಾ ಎನ್. ಹೆಗಡೆಯವರು ಕುಮಾರಿ ಆರಾಧ್ಯ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಜ್ಯೋತಿ ಬೆಳಗುವುದರೊಂದಿಗೆ ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿದರು. ಮುಂದೆ ಲಯನ್ ರವಿರಾಜ್ ನಾಯಕ್ ಹಾಗೂ ಲಯನ್ ಟಿ.ಜಿ. ಆಚಾರ್ಯ, ಸಂಪಾದಕತ್ವದ ಜಿಲ್ಲಾ  ವಿಶೇಷ ವಾರ್ತಾಪತ್ರಿಕೆ *ಸಂಚಲನ* ವನ್ನು  ಗೌರವಾನ್ವಿತ ಮುಖ್ಯ ಅತಿಥಿ ಅಂತರ್ರಾಷ್ಟ್ರೀಯ ಲಯನ್ಸ್ ಸಂಸ್ಥೆಯ ನಿರ್ದೇಶಕರಾದ ಲಯನ್ ಆರ್ ಸಂಪತ್ ರವರು ವೇದಿಕೆಯಲ್ಲಿಯ ಇತರ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.  ಜಿಲ್ಲಾ ವಕ್ತಾರ ಲಯನ್ ಕಿರಣ್ ರಂಗಯ್ಯ ನವರ ನೇತೃತ್ವದಲ್ಲಿ ನೂತನ ಕ್ಲಬ್‌ಗಳ ಬ್ಯಾನರ್ ಪ್ರಸಂಟೇಶನ್ ಬಹಳ ಆಕರ್ಷಣೀಯವಾಗಿತ್ತು. ಜಿಲ್ಲಾ ಲಿಯೋ ಬ್ಯಾನರ್ ಹಾಗೂ ಜಿಲ್ಲಾ ಬ್ಯಾನರ್ ನ್ನು ಅತ್ಯಂತ ಗೌರವದಿಂದ ವೇದಿಕೆಗೆ ತರಲಾಯಿತು.


ಜಿಲ್ಲೆಯ ಆಡಳಿತಾತ್ಮಕ  ವಿಸ್ತೃತ  ವರದಿಯ ಅಂಕಿ ಅಂಶಗಳ ವಿಡಿಯೋವನ್ನು ಲಯನ್ ಕಿರಣ್ ರಂಗಯ್ಯ ಪ್ರದರ್ಶಿಸಿದರು. ಆ ನಂತರದಲ್ಲಿ ಮಾನ್ಯ ಜಿಲ್ಲಾ ಗವರ್ನರ್ ಲಯನ್ ಎನ್.ಎಮ್. ಹೆಗಡೆಯವರು ಬ್ರಹತ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಈ ಸಮ್ಮೇಳನ ಎಲ್ಲಾ ರೀತಿಯಲ್ಲೂ ಅತ್ಯದ್ಭುತವಾಗಿ ಮೂಡಿಬರಲು ಸಹಕರಿಸಿದ ಸರ್ವರನ್ನು ಹೃದಯತುಂಬಿ ಅಭಿನಂದಿಸಿದರು. ಅನೇಕ ಸಂಕಷ್ಟಗಳ ನಡುವೆಯೂ ಜಿಲ್ಲೆಯ ಗೌರವಾನ್ವಿತ ಲಯನ್ಸ್ ಬಂಧುಗಳು ಬಹುಸಂಖ್ಯೆಯಲ್ಲಿ ಪಾಲ್ಗೊಂಡು ಜಿಲ್ಲೆಗೆ ಗೌರವ ತಂದಿರುವುದು ಹೆಮ್ಮೆಯ ಸಂಗತಿ ಎಂದರು. ಕಳೆದ ಮೂರು ತಿಂಗಳಿಂದ ಸಮ್ಮೇಳನದ ಸಿದ್ಧತೆಯಲ್ಲಿ ತೊಡಗಿಸಿಕೊಂಡು ಅದರ ಸಂಪೂರ್ಣ ಯಶಸ್ಸಿಗಾಗಿ ಅವಿರತ ಶ್ರಮಿಸಿದ ಸಮ್ಮೇಳನ ಸಮಿತಿ ಚೇರ್ಮನ್ ಲಯನ್ ಅರುಣಕುಮಾರ್ ಹೆಗ್ಡೆ ಹಾಗೂ ಅವರ ಕ್ರಿಯಾಶೀಲ ತಂಡದ ಕಾರ್ಯವೈಖರಿ ಯನ್ನು ಅತ್ಯಂತ ಅಭಿಮಾನದಿಂದ ಕೊಂಡಾಡಿದರು. ಎಲ್ಲಾ ಕಾರ್ಯಕ್ರಮಗಳು ಯೋಜನಾಬದ್ಧವಾಗಿ ನಡೆದಿದ್ದು ನಿಜಕ್ಕೂ ಶ್ಲಾಘನೀಯ ಎಂದರು. ಮುಖ್ಯ ಅತಿಥಿ ಅಂತರ್ರಾಷ್ಟ್ರೀಯ ಲಯನ್ಸ್ ಸಂಸ್ಥೆಯ ನಿರ್ದೇಶಕರಾದ ಲಯನ್ ಆರ್ ಸಂಪತ್ ರವರು ಸಮ್ಮೇಳನಕ್ಕೆ ತಮ್ಮನ್ನು ಆತ್ಮೀಯವಾಗಿ ಆಮಂತ್ರಿಸಿರುವುದಕ್ಕೆ ಎಲ್ಲರನ್ನು ಅಭಿನಂದಿಸಿದರು. ಕೋವಿಡ್ ನ ಪ್ರಭಾವದಿಂದಾಗಿ ಎರಡು ಬಾರಿ  ವಿಮಾನಯಾನ ರದ್ದಾಗಿದ್ದರೂ ಲಿಯೋ ನಿಹಾಲ್ ಹೆಗಡೆಯವರ ಭಗೀರಥ ಪ್ರಯತ್ನದಿಂದಾಗಿ ಎಲ್ಲಾ ವ್ಯವಸ್ಥೆಗಳೂ ಸಸೂತ್ರವಾಗಿದ್ದು ಇಂದು ಕಾರ್ಯಕ್ರಮದಲ್ಲಿ  ಭಾಗವಹಿಸುವುದಕ್ಕೆ ಸಾಧ್ಯವಾಯಿತು ಎಂದರು. ಅದರಂತೆ ತಮ್ಮನ್ನು ಅತ್ಯಂತ ಪ್ರೀತಿ ಗೌರವದಿಂದ ಸ್ವಾಗತಿಸಿ ಉಪಚರಿಸಿದ Pಡಿoಣoಛಿoಟ ಔಜಿಜಿiಛಿeಡಿ, ವಲಯಾಧ್ಯಕ್ಷರಾದ  ಲಯನ್ ಏಕನಾಥ ಬೋಳಾರ್ ರವರ ಆತಿಥ್ಯವನ್ನು ಮೆಚ್ಚಿ ಮಾತನಾಡಿದರು. ಸಮ್ಮೇಳನದ  ವೈಭವ ಹಾಗೂ ಅಚ್ಚುಕಟ್ಟಾದ ವ್ಯವಸ್ಥೆಗೆ ಸಂಘಟಕರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಜಿಲ್ಲೆಯ ಆಡಳಿತಾತ್ಮಕವಾಗಿ ಎಲ್ಲಾ ವಿಭಾಗಗಳಲ್ಲೂ  ದಾಖಲೆಯ ಬೆಳವಣಿಗೆಯನ್ನು ಸಾಧಿಸಿರುವುದಕ್ಕೆ ಹಾಗೂ ಮೌಲಿಕ ಸೇವಾಕಾರ್ಯಕ್ರಮಗಳ ನ್ನು ಪ್ರಶಂಸಿಸಿದರು. ಇನ್ನೋರ್ವ ಅತಿಥಿ ಖ್ಯಾತ ವಾಗ್ಮಿ, ಪ್ರಧಾನ ಸಂಪಾದಕರು, ನಾಗರಿಕ ವಾರಪತ್ರಿಕೆ,  ಶ್ರೀ ಕೃಷ್ಣಮೂರ್ತಿ ಹೆಬ್ಬಾರ್ ರವರ ದಿಕ್ಸೂಚಿ ಭಾಷಣ ಸಭಿಕರನ್ನು ಮಂತ್ರಮುಗ್ದರನ್ನಾಗಿ ಮಾಡಿತು. ಮತ್ತೋರ್ವ ಗೌರವ ಅತಿಥಿ, ಮಲ್ಟಿಪಲ್ ಡಿಸ್ಟ್ರಿಕ್ಟ್ 324 ರ ಮಾಜಿ ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಲಯನ್ ಡಾ. ರಾಮದಾಸ್ ರೈಯವರು ಜಿಲ್ಲೆಯ ಬಹುಮುಖ ಅಭಿವೃದ್ಧಿಗೆ  ಶ್ರಮಿಸಿದ ಜಿಲ್ಲಾ ಗವರ್ನರ್ ಮತ್ತು ಜಿಲ್ಲಾ ಸಂಪುಟವನ್ನು ಅಭಿನಂದಿಸಿದರು. ಲಯನ್ Pಆಉ ಪ್ರಕಾಶ್ ಟಿ. ಸೋನ್ಸ್, ವಲಯಾಧ್ಯಕ್ಷ ಲಯನ್ ವಿಶ್ವನಾಥ ಶೆಟ್ಟಿ ಬೈಂದೂರು ಹಾಗೂ ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಲಯನ್ ದಿನಕರ ಶೆಟ್ಟಿಯವರು ಅತಿಥಿಗಳನ್ನು ಪರಿಚಯಿಸಿದರು. ಎಲ್ಲಾ ಅತಿಥಿಗಳನ್ನು ಜಿಲ್ಲೆಯ ವತಿಯಿಂದ ಜಿಲ್ಲಾ ಗವರ್ನರ್ ರವರು ಹೃತ್ಪೂರ್ವಕವಾಗಿ ಅಭಿನಂದಿಸಿ ಸಂಮಾನಿಸಿದರು.

ಪ್ರಮುಖ ಸೇವಾ ಕಾರ್ಯಕ್ರಮಗಳ ಅಂಗವಾಗಿ ಹಿರಿಯಡಕ ಲಯನ್ಸ್ ಕ್ಲಬ್ ವತಿಯಿಂದ ಬಹುಮುಖ ಪ್ರತಿಭೆಯ ಕ್ರೀಡಾಪಟು ಶ್ರೀ ಬಾಬು ಶೆಟ್ಟಿಯವರನ್ನು ಹಾಗೂ ಬಿ.ಆರ್.ಪ್ರೊಜೆಕ್ಟ್ ಲಯನ್ಸ್ ನ ವತಿಯಿಂದ ರಾಜ್ಯಪ್ರಶಸ್ತಿ ಪುರಸ್ಕೃತ ಅರಣ್ಯಾಧಿಕಾರಿ ಶ್ರೀ ಅಂತೋನಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಲಯನ್ಸ್ ಕ್ಲಬ್ ಹೆಬ್ರಿಸಿಟಿ ಲಯನ್ಸ್ ಕ್ಲಬ್ ಕುಂದಾಪುರ ಹಾಗೂ ಲಯನ್ಸ್ ಕ್ಲಬ್ ಕೋಟೇಶ್ವರ ಇವರಿಂದ ಸಂಬಂಧಪಟ್ಟ ಫಲಾನುಭವಿಗಳಿಗೆ ವಿವಿಧ ಶ್ರೇಷ್ಠ ಕೊಡುಗೆಗಳನ್ನು ನೀಡಿದರು. ರಿಜಿಸ್ಟ್ರೇಶನ್ ಸಮಿತಿಯ ಅಧ್ಯಕ್ಷರಾದ ಲಯನ್ ಮೋಹನದಾಸ ಶೆಟ್ಟಿಯವರು ರಿಜಿಸ್ಟ್ರೇಶನ್ ವಿವರವನ್ನು ನೀಡಿದರು.

ಪ್ರಥಮ ಉಪಜಿಲ್ಲಾ ಗವರ್ನರ್ ಲಯನ್ ವಿಶ್ವನಾಥ ಶೆಟ್ಟಿ, ದ್ವಿತೀಯ ಉಪಜಿಲ್ಲಾ ಗವರ್ನರ್ ಲಯನ್ ಕೆ.ಸಿ. ವೀರಭದ್ರ, ಜಿಲ್ಲಾ ಮಾರ್ಗದರ್ಶಕರಾದ ಲಯನ್ ಡಿ. ಶ್ರೀಧರ ಶೇಣವ ಶುಭಾಶಂಸನೆಗೈದರು.

ವೇದಿಕೆಯಲ್ಲಿ ಜಿಲ್ಲಾ ಸಂಪುಟದ ಗಣ್ಯರು, ಪ್ರಾಂತ್ಯಾಧ್ಯಕ್ಷರು, ವಲಯಾಧ್ಯಕ್ಷರು, ಸಮ್ಮೇಳನ ಸಮಿತಿಯ ಪ್ರಮುಖ ಪದಾಧಿಕಾರಿಗಳು, ಆತಿಥೇಯ ಕ್ಲಬ್ ಅಧ್ಯಕ್ಷರು, ಜಿಲ್ಲಾ ಲಿಯೋ ಅಧ್ಯಕ್ಷರು, ಪ್ರಾಂತ್ಯ ಮಾರ್ಗದರ್ಶಕರು ಉಪಸ್ಥಿತರಿದ್ದರು.

 

ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಟಿ.ಜಿ. ಆಚಾರ್ಯ ಧನ್ಯವಾದ ಸಮರ್ಪಣೆ ಮಾಡಿದರು. ಜಿಲ್ಲಾ ಸಂಪುಟ ಕಾರ್ಯಕಾರಿ ಕಾರ್ಯದರ್ಶಿ ಲಯನ್ ರವಿರಾಜ ನಾಯಕ್ ಅತ್ಯಂತ ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಬಹು ಸೊಗಸಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಮಯದ ಪರಿಮಿತಿಯಲ್ಲಿ ಕಾರ್ಯಕ್ರಮ ಸಮಾಪ್ತಿಗೊಳಿಸುವಲ್ಲಿ ಯಶಸ್ವಿಯಾದರು ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜನೆಗೆ ವಲಯಾಧ್ಯಕ್ಷರಾದ ಲಯನ್ ರಾಜೀವ ಶೆಟ್ಟಿ, ಲಯನ್ಸ್ ಕ್ಲಬ್ ಹಾಲಾಡಿ ಅಧ್ಯಕ್ಷರಾದ ಲಯನ್ ವಿಶ್ವನಾಥ ಕುಲಾಲ್ ಹಾಗೂ ಲಿಯೋ ನಿಹಾಲ್ ಹೆಗಡೆ ಮತ್ತಿತರರು ಸಹಕರಿಸಿದರು.

ಕೃತಜ್ಞತಾಪೂರ್ವಕ ವಂದನೆ ಹಾಗೂ ಅಭಿನಂದನೆಗಳೊಂದಿಗೆ
ಜಿಲ್ಲಾ ಸಂಪುಟ ಕಾರ್ಯದರ್ಶಿ

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi