ಕಾಂಗ್ರೆಸ್ ನಾಯಕನಿಗೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಯತ್ನ


jpkiniudupi
KNW, 25-01-2013 19:29:14


Write Comment     |     E-Mail To a Friend     |     Facebook     |     Twitter     |     Print


ಉಡುಪಿ: ಯುವ ಕಾಂಗ್ರೆಸ್ ಮುಖಂಡ, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಯತೀಶ್ ಕರ್ಕೇರ ಅವರಿಗೆ ಮಲ್ಪೆಯ ಖಾಸಗಿ ಐಸ್ ಪ್ಲಾಂಟ್ ಒಂದರಲ್ಲಿ ಬಿಜೆಪಿ ಕಾರ್ಯಕರ್ತರು ಇಂದು ಘೆರಾವ್ ಹಾಕಿ ದಿಗ್ಭಂದನದಲ್ಲಿರಿಸಿದ್ದೂ ಅಲ್ಲದೆ ಹಲ್ಲೆಗೆ ಯತ್ನಿಸುವ ಮುಖಾ೦ತರ ಅವರು ನೀಡಿದ ಪತ್ರಿಕಾ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ಬಲವಂತವಾಗಿ ಕ್ಷಮೆ ಯಾಚಿಸುವಂತೆ ಮಾಡಿದ ಪ್ರಕರಣ ನಡೆದಿದೆ.

ಮಲ್ಪೆ ಬಂದರಿಗೆ ಸಮಬಂಧಪಟ್ಟ ಮೀನುಗಾರರು ಗೋವಾ ಕಡಲಕಿನಾರೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಆ ರಾಜ್ಯದ ಮೀನುಗಾರರು ಮಲ್ಪೆಯ ಮೀನುಗಾರರ ಮೇಲೆ ಹಲ್ಲೆ ನಡೆಸಿ, ಬೋಟ್ ಗಳಿಗೆ ಹಾನಿ ಮಾಡಿ, ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಒಪ್ಪಿಸಿದ ಪ್ರಕರಣ ಇತ್ತೀಚೆಗೆ ನಡೆದಿತ್ತು.

ಈ ಸಂಬಂಧ ಶಾಸಕ ರಘುಪತಿ ಭಟ್ ಅವರು ಹೇಳಿಕೆಯೊಂದನ್ನು ನೀಡಿ, ತಾನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಹಾಗೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಹಕಾರದೊಂದಿಗೆ ಗೋವಾ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮೀನುಗಾರರಿಗೆ ವಿಧಿಸಿದ ದಂಡವನ್ನು ಕಡಿಮೆಗೊಳಿಸಿ, ಅವರನ್ನು ಬಿಡುಗಡೆಗೊಳಿಸಲು ಬೇಕಾದ ಕ್ರಮ ಕೈಗೊಂಡಿದ್ದೇನೆ ಎಂದು ತಿಳಿಸಿದ್ದರು.

ಶಾಸಕರ ಹೇಳಿಕೆಗೆ ಪ್ರತಿಹೇಳಿಕೆ ಬಿಡುಗಡೆಗೊಳಿಸಿದ ಯತೀಶ್ ಕರ್ಕೇರ, ಮಲ್ಪೆ ಮೀನುಗಾರರರನ್ನು ಗೋವಾ ಪೊಲೀಸರು ಬಿಡುಗಡೆಗೊಳಿಸಲು ಸಂಸದ ಜಯಪ್ರಕಾಶ್ ಹೆಗ್ಡೆ ನಡೆಸಿದ ಪ್ರಯತ್ನವೇ ಕಾರಣ ಎಂದು ತಿಳಿಸಿದ್ದರು. ಮೀನುಗಾರರ ಬಿಡುಗಡೆಗೆ ಶಾಸಕ ರಘುಪತಿ ಭಟ್ಟರು ಪ್ರಯತ್ನಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದರು.

ಈ ಪತ್ರಿಕಾ ಹೇಳಿಕೆ ಓದಿ ಕ್ರದ್ಧರಾದ ಬಿಜೆಪಿ ಮುಖಂಡರು ಬಿಜೆಪಿಯ ಮೀನುಗಾರರನ್ನು ಎತ್ತಿಕಟ್ಟಿ ಯತೀಶ್ ಕರ್ಕೇರರಿಗೆ ಮುತ್ತಿಗೆ ಹಾಕಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹಲ್ಲೆಗೂ ಯತ್ನಿಸಿದರಲ್ಲದೆ, ಬಳಿಕ ಬಲಾತ್ಕಾರವಾಗಿ ತನ್ನ ಪತ್ರಿಕಾ ಹೇಳಿಕೆಗೆ ಕ್ಷಮೆ ಯಾಚಿಸಿದರು ಎಂದು ಹೇಳಲಾಗಿದೆ.

ಬಿಜೆಪಿ ಶಾಸಕ ರಘುಪತಿ ಭಟ್ಟರ ಪತ್ರಿಕಾ ಹೇಳಿಕೆಗೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ಯತೀಶ್ ಕರ್ಕೇರ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರ ಪತ್ರಿಕಾ ಹೇಳಿಕೆಗೆ ಬಿಜೆಪಿ ನಾಯಕರು ಉತ್ತರವಾಗಿ ಪ್ರತಿ ಹೇಳಿಕೆಯನ್ನು ನೀಡಬಹುದಿತ್ತು. ಅದು ಬಿಟ್ಟು ಬಿಜೆಪಿ ವಿರುದ್ಧ ಹೇಳಿಕೆ ನೀಡಿದರೆಂಬ ಕಾರಣಕ್ಕೆ ಯತೀಶ್ ಕರ್ಕೇರರಿಗೆ ಘೆರಾವ್ ಹಾಕಿದ್ದು ತಪ್ಪು, ಇದು ಸರಿಯಲ್ಲ. ಗೋವಾದಲ್ಲಿ ನಡೆದ ಘಟನಾವಳಿಗಳ ಬಗ್ಗೆ ಶೀಘ್ರವೇ ಸತ್ಯ ಹೊರಬರಲಿದೆ ಎಂದೂ ಸಂಸದ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.ಆದರೆ, ಈ ಘಟನೆಯ ಬಗ್ಗೆ ಪ್ರಶ್ನಿಸಿದರೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗೋಪಾಲ ಪೂಜಾರಿ ಉತ್ತರ ನೀಡದೆ, ಕನಿಷ್ಟ ಖಂಡನೆಯನ್ನೂ ವ್ಯಕ್ತಪಡಿಸಿದೇ ಇದ್ದುದು ಪಕ್ಷದೊಳಗೆ ಎಲ್ಲವೂ ಸರಿ ಇಲ್ಲ ಎನ್ನುವ ಸಂಶಯಕ್ಕೆ ಕಾರಣವಾಯಿತು.

Comments on this Article
Yogish K., Udupi Sat, January-26-2013, 10:15
BJP leaders are always aggressive and are intolerant about anything spoken against them. It is an highly condemnedable act against a upcoming congress leader and shows the’Goonda Sankriti’of BJP.
Agree[0]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Udupi: Traffic congestion and dangers to pedestria
View More

OXEM KITEAK KELEIM DEVA? | (ಅಶೆಂ ಕಿತ್ಯಾಕ್ ಕೆಲೆಂಯ್ ದೆವಾ?) New Konkani video song by DONY&ASHA CORREAOXEM KITEAK KELEIM DEVA? | (ಅಶೆಂ ಕಿತ್ಯಾಕ್ ಕೆಲೆಂಯ್ ದೆವಾ?) New Konkani video song by DONY&ASHA CORREA
Contact for Masks, Sanitizers, PPE kits and More..Contact for Masks,  Sanitizers, PPE kits and More..
LIVE STREAM OF MASSES - Holy week schedule from Abu DhabiLIVE STREAM OF MASSES - Holy week schedule from Abu Dhabi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India
Website Maintenance

Website Maintenance

Kemmann.com Face Book

Click here for Kemmannu Knn Facebook Link

Sponsored Albums