Udupi Bishop greets Konkani Community on  "Monthi Fest" / ನಾಡಿನೆಲ್ಲೆಡೆಯಲ್ಲಿ  ಸ೦ಭ್ರಮದ ಮೊಂತಿಫೆಸ್ತ್.......


Press Release

Write Comment     |     E-Mail To a Friend     |     Facebook     |     Twitter     |     Print


Udupi : The Bishop of Udupi diocese Dr  Gerald Isaac Lobo greeted the Konkanni community on the occasion of Nativity Feast.

A press release issued from Bishop House on Friday, stated that the feast of the Nativity of the Blessed Virgin Mary is celebrated mostly by the “Konkanni speaking” Catholics all over the world with devotion, unction, pomp and gaiety on 08 September every year as “Monthi Fest”. It is also a family feast since those members dispersed whether for studies or job opportunities outside do make it a point to take part in this feast and the vegetarian family meal.

Right at this time nature blesses the earth with copious rain that ushers in bountiful and plentiful flowers of every kind and fresh vegetables are made available as its gift to this beautiful feast. While the little children flock to churches bringing  flowers of all varieties to be offered to Mother Mary fondly called as Maria Bambina (Baby Mary) during nine days of Novena, on the feast day, i.e. 08 September, the elders would bring fresh new corn of rice to be blessed by the priest and later the same to be reverently  consumed by the family members mixed mostly in milk or some sweet item followed by a vegetarian  family meal.

Those members who would be absent for the family meal, would receive the blessed corn through post. This Feast has a powerful message of thanksgiving to God for the bounty of nature filled with fresh and lush greenery, flowers, vegetables and rice and a sign of family union signifying family bond, love and unity. When the nature brings ingredients of our daily livelihood in abundance, this feast brings members together to share in the nature’s gift by sharing their joy, love and peace – all with a song of thanksgiving to God through Maria Bambina, i.e. Baby Mary. I wish you all a happy Feast of the Nativity of Mother Mary fondly wished by all as “Happy Monthi Fest.”

------------------------------------------------------------------------------

ನಾಡಿನೆಲ್ಲೆಡೆಯಲ್ಲಿ  ಸ೦ಭ್ರಮದ ಮೊಂತಿಫೆಸ್ತ್....... / ವಿಶೇಷ ಚಿತ್ರ/ ವರದಿ:ಜಯಪ್ರಕಾಶ್ ಕಿಣಿ,ಉಡುಪಿ

ಮೊಂತಿ ಎನ್ನುವುದು ಆಂಗ್ಲ ಭಾಷೆಯ ಮೌಂಟ್ ಎಂಬ ಪದದಿಂದ ಹಾಗೂ ಫೆಸ್ತ್ ಎನ್ನುವುದು ಆಂಗ್ಲಭಾಷೆಯ ಫೆಸ್ಟ್ ಎಂಬ ಪದದಿಂದ ಬಂದಿದೆ. ಕ್ಯಾಥೊಲಿಕ್ ಕ್ರೈಸ್ತರು ಮಾತೆ ಮೇರಿ ಅವರನ್ನು ಅವರ ಪ್ರಾಮುಖ್ಯತೆಗೆ ಅನುಗುಣವಾಗಿ ಬೇರೆ ಬೇರೆ ನಾಮದಿಂದ ಕರೆಯುತ್ತಾರೆ.

ಮೊಂತಿ ಸಾಯ್ಬಿಣ್ ಎನ್ನುವುದು ಅದರಲ್ಲಿ ಒಂದು. ಮೊಂತಿ ಸಾಯ್ಬಿಣ್ ಎಂದರೆ ಪರ್ವತದ ಮೇಲಿನ ತಾಯಿ ಅಥವಾ ಮಾತೆ ಎಂದು ಹಾಗೂ ಮೊಂತಿ ಫೆಸ್ತ್ ಎಂದರೆ ಪರ್ವತದ ಮೇಲಿನ ಮಾತೆಯ ಹಬ್ಬ ಎಂದರ್ಥ.

ಯೇಸುಕ್ರಿಸ್ತರ ಮಾತೆಯಾದ ಮೇರಿ ಸಂತ ಜೋಕಿಂ ಮತ್ತು ಸಂತ ಅನ್ನಾ ಅವರ ಪುತ್ರಿ. ಕ್ಯಾಥೊಲಿಕರಲ್ಲಿ ಯೇಸು ಕ್ರಿಸ್ತ (ಡಿ. 24), ಸಾನ್ನಿಕ ಯೋಹಾನ್ನಾ (ಜೂ. 24), ಮತ್ತು ಮೇರಿ ಮಾತೆ (ಸೆ.8)- ಈ ಮೂವರ ಜನ್ಮದಿನಕ್ಕೆ ಪ್ರಾಮುಖ್ಯತೆಯಿದೆ. ಮೇರಿ ಮಾತೆಯ ತಂದೆ-ತಾಯಿ ನೆಲೆಸಿದ್ದ ಬೆತ್ಸಾದಾ ಕೆರೆಬಳಿ ಅವರಿಗೆ ಸಮರ್ಪಿಸಿದ ದೇವಮಂದಿರ ೫ನೇ ಶತಮಾನದಲ್ಲಿ ನಿರ್ಮಾಣವಾಗಿತ್ತು. ಮಾತೆ ಮೇರಿ ಜನ್ಮದಿನದ ಆಚರಣೆಯು ಪ್ರಾರಂಭವಾದದ್ದೇ ಅಲ್ಲಿಂದ. ರೋಮ್‌ನಲ್ಲಿ ಪೋಪ್ ೧ನೇ ಸೆರ್‌ಜ್ಯೂಸ್ 7ನೇ ಶತಮಾನದ ಅಂತ್ಯದಲ್ಲಿ ಹಬ್ಬದ ಆಚರಣೆಗೆ ಪ್ರಾಮುಖ್ಯತೆಯನ್ನು ಕೊಟ್ಟರು. ಅಲ್ಲಿಂದ ಪ್ರಾರಂಭವಾಗಿ ಕ್ರಮೇಣ ಎಲ್ಲೆಡೆ ಹರಡಿ ಈಗ ವಿಶ್ವವ್ಯಾಪಿಯಾಗಿದೆ. 2ನೇ ವ್ಯಾಟಿಕನ್ ಸಮ್ಮೇಳನದಲ್ಲಿ ಚರ್ಚ್ ಸುಧಾರಣೆಗೆ ಸಂಬಂಧಿಸಿ ನಿರ್ಣಯ ಕೈಗೊಳ್ಳುವಾಗ ಮೇರಿ ಮಾತೆಯ ಜನ್ಮದಿನಾಚರಣೆಯನ್ನು ಕೂಡ ಸೇರಿಸಲಾಯಿತು.

ಮೊಂತಿ ಫೆಸ್ತ್ ಸೆ. 8ರಂದು ಯಾಕೆ? ಮಾತೆ ಮೇರಿ ಬಗ್ಗೆ ಕ್ಯಾಥೊಲಿಕ್ ಕ್ರೈಸ್ತರಿಗೆ ಹೆಚ್ಚಿನ ಒಲವು. ಯಾಕೆಂದರೆ ಪ್ರಥಮವಾಗಿ ಅವರು ಯೇಸುಕ್ರಿಸ್ತರ ಹೆತ್ತ ತಾಯಿ. ಗುಣ ನಡತೆ, ದೈವಿಕ ಶ್ರದೆಟಛಿ, ಮನೆಯವರ ಹಾಗೂ ನೆರೆಕರೆಯವರ ಮೇಲಿನ ಪ್ರೀತಿ , ಲೋಕ ಕಲ್ಯಾಣಕ್ಕಾಗಿ ದೇವರ ಇಚ್ಛೆಗೆ ಪಾತ್ರವಾದ ಮೇರಿ ಮಾತೆ ಸರ್ವರ ಶ್ಲಾಘನೆಗೆ ಅರ್ಹರು. ದೇವ ಕುಮಾರ ಯೇಸುವನ್ನು ಮಾನವ ರೂಪದಲ್ಲಿ ಧರೆಗೆ ತರಲು ಮಾತೆ ಮೇರಿ ಸರ್ವೇಶ್ವರನಿಗೆ ಒಂದು ವಾಹಕವಾಗಿದ್ದರು. ಪರಮಾತ್ಮ ತನ್ನ ಮಹಾನ್ ಕಾರ್ಯಕ್ಕೆ ಮೇರಿಯನ್ನು ಆಯ್ಕೆ ಮಾಡಲು ಆಕೆಯ ಪವಿತ್ರತೆಯೇ ಕಾರಣ. ಹಾಗಾಗಿ ಕ್ಯಾಥೊಲಿಕರಿಗೆ ಆಕೆಯ ಮೇಲೆ ಪ್ರೀತಿ, ನಂಬಿಕೆ ಅಪಾರವಾಗಿದೆ.

ಕರಾವಳಿ ಕರ್ನಾಟಕದಲ್ಲಿ ಬೇಸಗೆ ಕಳೆದು ಸರಿಸುಮಾರು ಜೂನ್ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಿ ಬಿತ್ತನೆ ಕೆಲಸ ಶುರುವಾಗುತ್ತದೆ. ಈ ಬಿತ್ತನೆಯು ಮೊಳಕೆಯೊಡೆದು, ಗಿಡವಾಗಿ ಬೆಳೆದು ಫಸಲು ಬರುವಾಗ ಸಾಧಾರಣ ಸೆಪ್ಟಂಬರ್ ಪ್ರಾರಂಭವಾಗುತ್ತದೆ. ಒಳ್ಳೆಯ ಫಸಲು ಲಭಿಸಿದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಮೊದಲ ತೆನೆಯನ್ನು ಪ್ರಾವಿತ್ರ್ಯದ ಅರ್ಥದಲ್ಲಿ ಸೇವಿಸಲು ಒಂದು ಸಂದರ್ಭ ಬೇಕಾಗುತ್ತದೆ. ಮೇರಿಯ ಜನ್ಮದಿನವಾದ ಸೆ. ೮ ಇದೇ ಸಮಯದಲ್ಲಿ ಬರುವುದರಿಂದ ಮೊದಲ ತೆನೆಯನ್ನು ಈ ಸಂದರ್ಭದಲ್ಲಿ ಸೇವಿಸಲು ಸುವರ್ಣಾವಕಾಶ. ಹೀಗೆ ಈ ಎರಡು ಮಹತ್ವದ ವಿಷಯಗಳನ್ನು ಗಮನದಲ್ಲಿಟ್ಟು ಸೆ. ೮ರಂದು ಮೊಂತಿಫೆಸ್ತ್ ನ್ನು ಆಚರಿಸುತ್ತಾರೆ.

ಮೊಂತಿಫೆಸ್ತ್‌ನ ಪ್ರಾಮುಖ್ಯತೆ ಮೊಂತಿ ಫೆಸ್ತ್  ದಿನ ಒಂದು ವಿಶಿಷ್ಟ ದಿನವೂ ಹೌದು. ಯಾಕೆಂದರೆ ಕಟುಂಬದ ಎಲ್ಲಾ ಸದಸ್ಯರು ಆ ದಿನದಂದು ಒಟ್ಟಾಗಿ ಹೊಸ ತೆನೆಯನ್ನು ಸೇವಿಸಿ ಅನಂತರ ಭೋಜನ ಮಾಡುವುದು ರೂಢಿ. ಇದೊಂದು ಪ್ರೀತಿ ಬಾಂಧವ್ಯದ ಸೇತುವೆಯ ಸಂಕೇತ. ತಂದೆ, ತಾಯಿ, ಮಕ್ಕಳಿಂದ ಹಿಡಿದು ಅಜ್ಜ, ಅಜ್ಜಿ, ಮೊಮ್ಮಕ್ಕಳು, ಚಿಕ್ಕಪ್ಪ, ಚಿಕ್ಕಮ್ಮ (ಅವಿಭಾಜ್ಯ ಕುಟುಂಬ ತರಹ) ಒಟ್ಟಾಗಿ ವರ್ಷಕ್ಕೆ ಒಮ್ಮೆಯಾದರೂ ಸಹಭೋಜನ ಮಾಡಲು ಇದೊಂದು ಅವಕಾಶವಾಗಿದೆ. ನೊವೆನಾ (ನವದಿನ- 9 ದಿವಸ) ಮೊಂತಿಫೆಸ್ತ್ ಗೆ ಸಿದಟಛಿತೆಯಾಗಿ ಹಬ್ಬದ ಮೊದಲು 9ದಿನ ಬಾಲೆ
ಮೇರಿಗೆ ಹೂವಿನ ಅರ್ಚನೆ ನಡೆಯುತ್ತದೆ. ಪುಟ್ಟ ಮಕ್ಕಳಿಗಂತೂ ಈ ಪುಷ್ಪಾರ್ಚನೆ ಆನಂದವನ್ನು ತರುತ್ತದೆ. ಮಕ್ಕಳು ಪುಷ್ಪಾರ್ಚನೆಗೋಸ್ಕರ ಹೂತೋಟ, ಹಿತ್ತಲುಗಳಲ್ಲಿ ಓಡಾಡಿ ಹೂಗಳನ್ನು ಸಂಗ್ರಹಿಸುತ್ತಾರೆ.

ಅವುಗಳನ್ನು ಅಂದವಾಗಿ ಜೋಡಿಸಿ ಉತ್ಸುಕತೆಯಿಂದ ಚರ್ಚ್‌ಗೆ ಒಯ್ದು ಬಾಲೆ ಮೇರಿಗೆ ಅರ್ಪಿಸುತ್ತಾರೆ. ಮಕ್ಕಳ ಈ ಹರ್ಷವನ್ನು ವೀಕ್ಷಿಸುವುದೇ ಕಣ್ಣಿಗೊಂದು ಆನಂದ. 9ದಿನಗಳ ಬಳಿಕ ಬರುವುದೇ ಮೊಂತಿಫೆಸ್ತ್ . ಆ ದಿನದಂದು ಅಂದರೆ ಸೆ. 8ರಂದು ಇಗರ್ಜಿಯಲ್ಲಿ ಮೊದಲು ಬಾಲೆ ಮೇರಿಗೆ ಪುಷ್ಪಾರ್ಚನೆ, ಹೊಸ ಭತ್ತದ ತೆನೆಯ ಆಶೀರ್ವಚನ. ಅನಂತರ ಸಂಭ್ರಮದ ಬಲಿಪೂಜೆ. ಮನೆಗಳಲ್ಲಿ ಹಿರಿಯ ಸದಸ್ಯರು ಬಗೆಬಗೆಯ ತರಕಾರಿ ಪಲ್ಯಗಳನ್ನು ತಯಾರಿ ಮಾಡುವುದರಲ್ಲಿ ತಲ್ಲೀನವಾಗುತ್ತಾರೆ. ಬಡವ ಬಲ್ಲಿದರಿಗೆ ದಾನ ಮೊಂತಿ ಫೆಸ್ತ್  ದಿನದಂದು ಭಕ್ತಾದಿಗಳು ಇಗರ್ಜಿಯಲ್ಲಿ ಹಲವು ವಿಧದ ವಸ್ತುಗಳನ್ನು ಅರ್ಪಣೆ ಮಾಡುತ್ತಾರೆ. ಈ ವಸ್ತುಗಳನ್ನು ಜಾತಿ ಧರ್ಮದ ವ್ಯತ್ಯಾಸವಿಲ್ಲದೆ ಅಲ್ಲಿಗೆ ಬಂದ ಬಡವರಿಗೆ ಉಚಿತವಾಗಿ ನೀಡಲಾಗುತ್ತದೆ. ಒಟ್ಟಿನಲ್ಲಿ ಮೊಂತಿಫೆಸ್ತ್ ಕನ್ಯಾ ಮರಿಯಮ್ಮರ ಜನ್ಮದಿನದ ಆಚರಣೆಯ ಸಂಭ್ರಮವೂ ಹೌದು, ಜನ ಜೀವನದ ಬಾಂಧವ್ಯದ ಸಂಗಮವೂ ಹೌದು.

(File Pictures of Monthi Feast Celebrations in Udupi)

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Full Video:Inauguration Udupi of Diocese
View More

Veez Konkani WeeklyVeez Konkani Weekly
Crib Making Competition 2018Crib Making Competition 2018
1st Death Anniversary of Rev. Fr. Wilson Clifford Andrade OFM Cap.1st Death Anniversary of Rev. Fr. Wilson Clifford Andrade OFM Cap.
Mount Rosary Church Annoucement for the weekMount Rosary Church Annoucement for the week
Newly constructed House for sale at Nejar near Santhekatte.Newly constructed House for sale at Nejar near Santhekatte.
Maria TravelsMaria Travels
Rozarich Gaanch September- 2018Rozarich Gaanch September- 2018
Karaval Milan Sports Event on 23rd December at Milagres Ground, Kallianpur.Karaval Milan Sports Event on 23rd December at Milagres Ground, Kallianpur.
Rozarich Gaanch September- 2018Rozarich Gaanch September- 2018
Milarchi-Lara-September-2018Milarchi-Lara-September-2018
Welcome to Thonse Naturecure HospitalWelcome to Thonse Naturecure Hospital
Santhosh Villa short film by youth of Udupi Parish and ICYM.Santhosh Villa short film by youth of Udupi Parish and ICYM.
Crossland College, Year book 2017-18Crossland College, Year book 2017-18
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India