Breif Mumbai Mangalore News with Pictures


Rons Bantwal
Kemmannu News Network, 07-05-2021 11:24:58


Write Comment     |     E-Mail To a Friend     |     Facebook     |     Twitter     |     Print


ದ.ಕ ಸಂಘದಿಂದ ನೂತನ ಶಾಸಕ ಶರಣು ಸಲಗರ್‍ಗೆ  ಅಭಿನಂದನೆ

ಮುಂಬಯಿ (ಆರ್‍ಬಿಐ), ಮೇ.06: ಬಸವಕಲ್ಯಾಣ ಉಪಚುನಾವಣೆಯಲ್ಲಿ ಜಯ ಸಾಧಿಸಿದ ನಂತರ ಮೊದಲ ಬಾರಿಗೆ ಕಲಬುರಗಿಗೆ ಮೇ.5 ರಂದು ಭೇಟಿ ಮಾಡಿದ ಸಂದರ್ಭದಲ್ಲಿ ಶರಣು ಸಲಗರ್ ಅವರಿಗೆ  ಮೈಸೂರು ಪೇಟ ತೊಡಿಸಿ ಹಾಗೂ ಕರಾವಳಿಯ  ಯಕ್ಷಗಾನದ ಕಿರೀಟ ಸ್ಮರಣಿಕೆಯನ್ನು  ನೀಡಿ ಸನ್ಮಾನಿಸಲಾಯಿತು.

ದಕ್ಷಿಣ ಕನ್ನಡ ಸಂಘದ ಅಧ್ಯಕ್ಷ ಡಾ| ಸದಾನಂದ ಪೆರ್ಲ, ಕರ್ನಾಟಕ ಹೋಟೆಲ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ  ಸದಸ್ಯ ಪ್ರವೀಣ್ ಜತ್ತನ್, ಅಸೋಸಿಯೇಷನ್‍ನ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮೆಂಡನ್ ಇದ್ದರು.

ಖಾಸಗಿ-ಸಹಕಾರಿ ಬ್ಯಾಂಕ್ ಸಿಬ್ಬಂದಿಗಳಿಗೆ ಸ್ಥಳೀಯ ರೈಲುಗ¼ ಪ್ರಯಾಣ ನಿಷೇಧ - ಬ್ಯಾಂಕು ಸೇವೆ ಅಂದರೆ ಖಾಸಾಗಿ ಯಾ ಸರಕಾರಿ ಒಂದೇ ತಾನೇ..?

ಮುಂಬಯಿ, ಮೇ.04: ಕೊರೋನಾ ನಿರ್ಮೂಲನೆಗಾಗಿ ಉಭಯ ಸರಕಾರಗಳು ಒಂದಷ್ಟು ಕಟ್ಟುನಿಟ್ಟಾದ ಕಾನೂನು ಕಾಯ್ದೆಗಳನ್ನು ಜಾರಿ ಮಾಡಿವೆ. ಅವುಗಳಲ್ಲಿ ರೈಲು ಪ್ರಯಾಣವೂ ಒಂದಾಗಿದೆ. ಈ ಪೈಕಿ ಯಾವುದು ಇದೆ, ಯಾವುದು ಎಲ್ಲ ಎಂಬುವುದನ್ನು ಆಯಾ ಸರಕಾರಿ ಇಲಾಖೆಗಳು, ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದೆ. ಬ್ಯಾಂಕ್ ನೌಕರರಿಗೆ ಇಲ್ಲಿ ಮುಕ್ತ ಅವಕಾಶವನ್ನು ಕಲ್ಪಿಸಿದೆ. ಆದರೆ ಇಲ್ಲೂ ಸರಕಾರಿ, ರಾಷ್ಟ್ರೀಯ ಮತ್ತು ಖಾಸಾಗಿ ಬ್ಯಾಂಕುಗಳ ನೌಕರರು ಎಂಬುವುದನ್ನು ವಿಭಾಗೀಸಿರುವುದು ಎಷ್ಟು ಸಮಂಜಸ ಅನ್ನುವುದನ್ನು ಸಹಕಾರಿ ಬ್ಯಾಂಕ್ ನೌಕರರು ಪ್ರಶ್ನಿಸಿದ್ದಾರೆ.

ಹಲವಾರು ವರ್ಷಗಳಿಂದ ರೈಲುಯಾನಗೈದು ಬ್ಯಾಂಕ್ ಸೇವೆಗೈಯುತ್ತಿದ್ದ ನನ್ನಲ್ಲಿ ಯಾವುದೇ ವಾಹನವಿಲ್ಲ. ವಾರ್ಷಿಕ ರೈಲುಪಾಸು ನನ್ನಲ್ಲಿರುತ್ತದೆ. ಇತ್ತೀಚೆಗೆ ಪಾಸು ಮುಕ್ತಾಯವಾಗಿದ್ದು ನಾನು ಚರ್ಚ್‍ಗೇಟ್ ನಿಲ್ದಾಣಕ್ಕೆ ಹೋದಾಗ ಅವರು ನೀವು ಕೋ.ಆಪ್ ಬ್ಯಾಂಕ್ ಉದ್ಯೋಗಿ ಆಗಿರುವುದರಿಂದ ನಾವು  ನಿಮಗೆ ಪಾಸ್ ನೀಡಲು ಸಾಧ್ಯವಿಲ್ಲ ಎಂದರು. ನಾನು ಅಂಧೇರಿ ನಿಲ್ದಾಣಕ್ಕೆ ಮತ್ತು ಜೋಗೇಶ್ವರಿ ನಿಲ್ದಾಣಕ್ಕೆ ಹೋದರೂ ಅಲ್ಲೂ ಇದೇ ಉತ್ತರ. ಇದು ನ್ಯಾಯವೇ...? ನಾನು ದಿನಾ ಜೋಗೇಶ್ವರಿಯಿಂದ ಫೆÇೀರ್ಟ್ (ವಿಟಿ)ಗೆ ಟ್ಯಾಕ್ಸಿ ಮಾಡಿಕೊಂಡು ಹೋಗುವುದು ಸಾಧ್ಯವೇ..? ಹಣಕಾಸು ಸೇವೆ ಅಂದರೆ ಅದು ಕೋ.ಆಪ್ ಬ್ಯಾಂಕ್ ಆಗಿರಲಿ ಅಥವಾ ಪ್ರೈವೇಟ್ ಬ್ಯಾಂಕ್ ಆಗಿರಲಿ ಒಂದೇ ತಾನೇ ಈ ಮಧ್ಯೆ ತಾರತಮ್ಯ ಯಾಕೆ ತಿಳಿಯದು ಎಂದು ಖಾಸಾಗಿ ಬ್ಯಾಂಕ್‍ವೊಂದರ ಉದ್ಯೋಗಿ ರಾಯನ್ ಬ್ರಾನ್ಕೋ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮುಂಬಯಿ ಅಂತಹ ಮಹಾನಗರ ಮಾತ್ರವಲ್ಲ ರಾಷ್ಟ್ರದ ಆಥಿರ್üಕ ರಾಜಧಾನಿಯಲ್ಲಿ ಅದೆಷ್ಟೋ ರಾಜ್ಯ, ಖಾಸಾಗಿ ಮತ್ತು ಸಹಕಾರಿ ಬ್ಯಾಂಕ್‍ಗಳಿದ್ದಾವೆ. ಈ ಬ್ಯಾಂಕುಗಳ ಸಿಬ್ಬಂದಿಗಳು, ನೌಕರರು ಮುಂಬಯಿ ಮಹಾನಗರದ ಉದ್ದಗಲದಲ್ಲೋ, ಉಪನಗರಗಳಲ್ಲೋ ವಾಸವಾಗಿರುತ್ತಾರೆ. ಇವರಿಗೆ ಬ್ಯಾಂಕ್ ಆಡಳಿತ ಕೆಲವೊಂದು ಷರತ್ತುಗಳೊಂದಿಗೆ ಸೇವೆಗೆ ಅನುವು ಮಾಡಿ ಕೊಟ್ಟಿದೆ. ಆದರೂ ರೈಲು ಯಾನಕ್ಕೆ ಇವರು ವಂಚಿತರಾಗಿರುವುದು ಸೋಜಿಗವೇ ಸರಿ.

ಕೊರೋನಾ ಎರಡನೇ ಅಲೆಯ ಆರಂಭದಿಂದಲೇ ನಮಗೆ ಆರ್‍ಬಿಐ, ರಾಜ್ಯ ಸಹಕಾರಿ ಇಲಾಖೆಗಳಿಂದ ಕಟ್ಟುನಿಟ್ಟಿನ ಕ್ರಮಕ್ಕಾಗಿ ಬ್ಯಾಂಕ್ ಮಂಡಳಿಯಲ್ಲಿ ಸಹಯೋಗ ಕೋರಿದ್ದಾರೆ. ಅವರ ಆಜ್ಞೆಗಳನ್ನು ಪಾಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅವಶ್ಯ ಸೇವೆಗಳಲ್ಲಿನ ಕೆಲವೊಂದು ಕ್ಷೇತ್ರಗಳಿಗೆ ನಿರ್ಬಂಧ ಹೇರಿದ್ದಾರೆ. ಬರುವಂತಹ ನೌಕರರು ಆಟೋ ರಿಕ್ಷಾ, ಟ್ಯಾಕ್ಸಿ, ಕೆವವೊಂದುಕಡೆ ಬಸ್ಸು ಅಥವಾ ತಮ್ಮ ಖಾಸಾಗಿ ವಾಹನಗಳನ್ನು ಅಧಿಕ್ರುತ ಪರವಾನಿಗೆ ಪಡೆದು ಬರುವಂತೆ ತಿಳಿಸಿದ್ದಾರೆ. ಇದಕ್ಕೆ ಸರಿ ಹೊಂದುವಂತೆ ನಮ್ಮ ನೌಕರರನ್ನು ವ್ಯವಸ್ಥೆ ಮಾಡಿ ಬ್ಯಾಂಕನ್ನು ನಡೆಸುವುದು ಅನಿವಾರ್ಯವಾಗಿದೆ ಎಂದು ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಉಪ್ಪೂರು ಶಿವಾಜಿ ಪೂಜಾರಿ (ಯು.ಎಸ್ ಪೂಜಾರಿ) ತಿಳಿಸಿದರು.

ಸರಕಾರದ ಆದೇಶದಂತೆ ನಾವು ನೌಕರರನ್ನು ಪರ್ಯಾಯ ವ್ಯವಸ್ಥೆಯಾಗಿಸಿ ಸೇವೆಗೆ ಆಯ್ದುಕೊಂಡಿದ್ದೇವೆ. ನಮಗೆ ಆಗುವ ಅಸಹಾಯಕತೆ ಬಗ್ಗೆ ನಾವು ಬ್ಯಾಂಕ್ಸ್ ಎಸೋಸಿಯೇಶನ್ ಮತ್ತು ಬ್ಯಾಂಕ್ಸ್ ಫೆಡರೇಶನ್‍ಗೆ ಮನವಿ ಮಾಡಿದ್ದೇವೆ. ಈ ಸಂಸ್ಥೆಗಳೂ ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವರು. ಆದರೆ ಇದೀಗಲೇ ದೀರ್ಘಾವಧಿ ರೈಲು ಪಾಸು ಇರುವಂತಹವರು ರೈಲುಗಳಲ್ಲಿ ಬರುತ್ತಿದ್ದಾರೆ. ಕೆಲವೊಮ್ಮ ಅವರನ್ನು ಟಿಸಿ, ರೈಲ್ವೇ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡು ವಾಪಾಸ್ಸು ಕಳುಹಿಸುತ್ತಿರುವ ಘಟನೆಗಳೂ ನಡೆಯುತ್ತಿವೆ. ಅಂತಹವರು ಪರ್ಯಾಯ ವ್ಯವಸ್ಥೆ ಮಾಡಿ ಸೇವೆಗೆ ಹಾಜರಾಗುತ್ತಾರೆ ಎಂದು ಅಭ್ಯುದಯ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಪ್ರೇಮನಾಥ ಎಸ್.ಸಾಲ್ಯಾನ್ ತಿಳಿಸಿದರು.

ಇದು ಬರೇ ನಮ್ಮ ಬ್ಯಾಂಕಿಗೆ ಅನ್ವಹಿಸಿದ ವಿಚಾರವಲ್ಲ ದೇಶದಾದ್ಯಂತದಲ್ಲಿನ ಖಾಸಾಗಿ, ಸಹಕಾರಿ ಬ್ಯಾಂಕುಗಳಿಗೆ ಅನ್ವಹಿಸಿದ ಕಾನೂನು. ಆದರೂ ಗ್ರಾಹಕರ ಸೇವಾದೃಷ್ಟಿಯಿಂದ ನಾವು ನೌಕರವೃಂದಕ್ಕೆ ಪೆÇ್ರೀತ್ಸಾಹಿಸಿ ಸೇವೆಗೆ ಅಡಚಣೆ ಆಗದಂತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಒಂದಿಷ್ಟು ದಿನಗಳಲ್ಲಿ ಇವೆಲ್ಲವೂ ಸರಿ ಆಗಲಿದ್ದು ಎಂದಿನಂತೆ ಗ್ರಾಹಕರ ಸೇವೆಗೆ ಬ್ಯಾಂಕನ್ನು ಅಣಿಗೊಳಿಸಲಿದ್ದೇವೆ ಎಂದು ಮೊಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿಸೋಜಾ ತಿಳಿಸಿದರು.


ಈ ನಿಟ್ಟಿನಲ್ಲಿ ಮಹಾರಾಷ್ಟ್ರದ ಸರಕಾರದ ಸಹಕಾರಿ ಸಚಿವ ಬಾಳಸಾಹೇಬ್ ಪಾಟೀಲ್, ಮಹಾರಾಷ್ಟ್ರ ರಾಜ್ಯ ಸಹಕಾರಿ ಆಯುಕ್ತ, ಮಹಾರಾಷ್ಟ್ರ ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್ಸ್ ಎಸೋಸಿಯೇಶನ್ ಲಿಮಿಟೆಡ್ ಮುಂಬಯಿ, ದಿ.ಮಹಾರಾಷ್ಟ್ರ ಅರ್ಬನ್ ಕೋ.ಅಪರೇಟಿವ್ ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್ ಇವುಗಳಲ್ಲೂ ಸಂಪರ್ಕದಲ್ಲಿದ್ದು ಬ್ಯಾಂಕ್ ಉದ್ಯೋಗಿಗಳಿಗೆ ಆಗುತ್ತಿರುವ ಅನ್ಯಾಯ ಶೀಘ್ರವಾಗಿ ಅಂತ್ಯವಾಗಲಿದೆ  ಎಂದು ಬ್ಯಾಂಕ್ಸ್ ಸಂಘಟನೆಯ ವಕ್ತಾರರು ತಿಳಿಸಿದ್ದಾರೆ.

ಬ್ಯಾಂಕಿಂಗ್ ಸೇವೆಯೂ ಅತ್ಯವಶ್ಯಕ ಸೇವೆಯೇ ಹೌದು. ಆದರೆ ಸರಕಾರವು ರೈಲಿನಲ್ಲಿ ಪ್ರಯಾಣಿಸಲು ಅನುಮತಿ ಇನ್ನೂ ಒದಗಿಸಿಲ್ಲ. ನಮಗೆ ಬರೇ  ಸರ್ಕಾರಿ ಬ್ಯಾಂಕುಗಳ ಸುತ್ತೋಲೆ ರವಾನಿಸಿದ್ದು ಅದನ್ನಷ್ಟೇ ನಾವು ಸ್ವೀಕರಿಸಿದ್ದೇವೆ. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕೆಲಸ ಮಾಡುವವರಿಗೆ ಮಾತ್ರ ರೈಲಿನಲ್ಲಿ ಪ್ರಯಾಣಿಸಲು ಅವಕಾಶವಿದೆ. ನಮ್ಮಲ್ಲಿ ಆ ಬ್ಯಾಂಕುಗಳ ಪಟ್ಟಿಯಿದೆ. ಅದರಂತೆ ಅವಶ್ಯಕ ಸೇವಾಕರ್ತರಿಗೆ ಪಾಸು ಒದಗಿಸುತ್ತಿದ್ದೇವೆ ಎಂದು ರೈಲ್ವೇ ಅಧಿಕಾರಿ ತಿಳಿಸಿದ್ದಾರೆ.

ಜೈನ ತೀರ್ಥ-ಶ್ರದ್ದಾ ಕೇಂದ್ರಗಳ ರಕ್ಷಿಸಿದ ಮಹಾನಾಯಕ ನಿರ್ಮಲ ಕುಮಾರ್ - ಅ.ಭಾ.ದಿ ಜೈನ್ ಮಹಾಸಭಾ ಅಧ್ಯಕ್ಷ ಸೇಠಿ ನಿಧನಕ್ಕೆ ಅಂತಾರಾಷ್ಟ್ರೀಯ ಶ್ರದ್ದಾಂಜಲಿ

ಮುಂಬಯಿ (ಆರ್‍ಬಿಐ), ಮೇ.06:  ಅಖಿಲ ಭಾರತ ದಿಗಂಬರ ಜೈನ್ ಮಹಾಸಭಾ ಅಧ್ಯಕ್ಷ ನಿರ್ಮಲ ಕುಮಾರ್ ಸೇಠಿ ಇವರು ಇತ್ತೀಚಿಗೆ (ಎ.27) ಸ್ವರ್ಗಸ್ಥರಾಗಿದ್ದು ಅಗಲಿದ ದಿವ್ಯಾತ್ಮದ ಸದ್ಗತಿಗಾಗಿ ಕಳೆದ ಬುಧವಾರ ವರ್ಚುವಲ್ ಮೀಟಿಂಗ್ ಮೂಲಕ ಗೌರವಾನ್ವಿತ ಮುನಿಗಳ, ಭಟ್ಟಾರಕರ ಉಪಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶ್ರದ್ದಾಂಜಲಿ ಸಭೆ ದೇಶದ ವಿವಿಧ ಸಂಘಟನೆಗಳ ಮೂಲಕ ಜರುಗಿತು. ಆಚಾರ್ಯ 108 ಪ್ರಗ್ಯಾ ಸಾಗರ್, ಆಚಾರ್ಯ ದೇವ ನಂದಿ, ಗುಣದರ ನಂದಿ,108 ಅಮಿತ್ ಸಾಗರ ಮುನಿ, ಡಾ| ಪ್ರಗ್ಯಾ ಸಾಗರ ನಿರಂಜನ್ ಸಾಗರ, ಅನುಮಾನ ಸಾಗರ, ಜಗದ್ಗುರು ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ, ಜೈನ ಕಾಶಿ ಮೂಡುಬಿದಿರೆ, ರವೀಂದ್ರ ಕೀರ್ತಿ ಹಸ್ತಿನಪುರ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಎಂ.ಕೆ ಜೈನ್ ಚೆನ್ನೈ, ಅಶೋಕ್ ಸೇಠಿ ಬೆಂಗಳೂರು, ಸೋಹನ್ ಲಾಲ್ ಪಾಂಡಿಚೇರಿ, ಮಹೇಂದ್ರ ಜೈನ್ ಕೊಚ್ಚಿನ್ ಕೇರಳ, ಸುಮೆರ್ ಪಾಂಡ್ಯ ಹೈದೆರಾಬಾದ್, ಮಹಾವೀರ ಸಿಲ್ಚಾರ್ ಅಸ್ಸಾಂ, ರಾಜ್ ಕುಮಾರ್ ಸೇಠಿ ಕಲ್ಕತ್ತಾ, ಉದಯ್ ಬಾನ್ ಜೈಪುರ್, ಜೆ.ಎನ್ ಹಪಾವತ್, ಮಣಿಂದ್ರ ಜೈನ್, ಸಾಹು ಅಖಿಲೇಶ್ ಜೈನ್, ಜ್ಞಾನ ಪೀಠ ಫೌಂಡೇಶನ್ ದೆಹಲಿ ಇದರ ನಿವೃತ್ತ ನ್ಯಾಯಾಧೀಶ ಪಾನಲಾಲ್, ಅನಿಲ್ ಜೈನ್, ಮತ್ತಿತರ ಸಾಧು ಸಂತರು ಗಣ್ಯ ಪ್ರಮುಖರು ಪಾಲ್ಗೊಂಡು  ಶ್ರೀ ನಿರ್ಮಲ್ ಕುಮಾರ್ ಸೇಠಿ ಗುಣಗಾನ ಗೈದರು.

108 ಅಮಿತ್ ಸಾಗರ ಮಹಾರಾಜ್ ಆಶೀರ್ವಚನಗೈದು ಇಡೀ ರಾಷ್ಟ್ರದಲ್ಲಿ ಜೈನ್ ಪ್ರಮುಖ ತೀರ್ಥಗಳ ದರ್ಶನ ಮಾಡಿ ಶ್ರದ್ದಾ ಕೇಂದ್ರಗಳ ರಕ್ಷಣೆ ಮಾಡಿದ ಮಹಾನಾಯಕ ನಿರ್ಮಲ ಕುಮಾರ್ ಆಗಿದ್ದರು ಎಂದರು.

ದೇಶ ಹಾಗೂ ವಿದೇಶದ ಜೈನ ಪುರಾತತತ್ವ ಸಂಬಂಧ ಅನೇಕ ಅಂತರಾಷ್ಟ್ರೀಯ ಸೆಮಿನಾರ್‍ಗಳನ್ನು ಅನೇಕ ಸಂಶೋದ ನಾತ್ಮಕ ಪುಸ್ತಿಕೆಗಳನ್ನು ಪ್ರಕಾಶನ ಪಡಿಸಿದವರು. ಸದಾ ಸಾಧು ಸಂತರ ಸೇವೆ ಧಾರ್ಮಿಕ ಕ್ರಿಯಾ ಕಲಾಪಗಳಲ್ಲಿ ತಮ್ಮ ನ್ನು ತಾವು ಸಮರ್ಪಿಸಿ ಕೊಂಡವರು. ಅನೇಕ ಕ್ಷೇತ್ರಗಳ ಯಶಸ್ವೀ ಪಂಚಕಲ್ಯಾಣ ಪೂಜೆ ಪ್ರತಿಷ್ಠೆಗಳಿಗೆ ನೇತೃತ್ವ ವಹಿಸಿ ಯಶಸ್ವೀಯಾಗಲು ಸಹಕರಿಸಿದವರು ಎಂದು ಮೂಡುಬಿದಿರೆ ಸ್ವಾಮೀಜಿ ತಮ್ಮ ಪ್ರಾರ್ಥನೆಯಲ್ಲಿ ನುಡಿದರು.

ಕಳೆದ 40 ವರ್ಷಗಳಿಂದ ರಾಷ್ಟ್ರೀಯ ಅಧ್ಯಕ್ಷ ರಾಗಿ ದಾಖಲೆಯ ಸಮಯ ಮಹಾಸಭೆ ಯನ್ನು ಮುನ್ನಡೆಸಿದ ಕೀರ್ತಿ ನಿರ್ಮಲ ಕುಮಾರ್‍ರದ್ದು ಶತಮಾನದ ಇತಿಹಾಸ ಇರುವ ಉತ್ತರ ಪ್ರದೇಶ ಕೇಂದ್ರ ಕಛೇರಿವುಳ್ಳ ಈ ಸಂಸ್ಥೆಯ ಅಧ್ಯಕ್ಷರಾಗಿ 1940ರ ಕಾಲದಲ್ಲಿ ಮೂಡುಬಿದಿರೆಯ ಜಗದ್ಗುರು ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಅವರು ಕೆಲಕಾಲ ಕಾರ್ಯನಿರ್ವಹಿಸಿದ್ದರು ಎಂಬುದನ್ನು ನೆನಪಿಸ ಬಹುದು ಎಂದೂ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕರು ತಿಳಿಸಿದರು.

ಶ್ರದ್ದಾಂಜಲಿ ಸಭೆಯ ಅಧ್ಯಕ್ಷತೆ ರಾಷ್ಟ್ರೀಯ ಪತ್ರಕಾರ ಸಂಘದ ಅಧ್ಯಕ್ಷ ರಮೇಶ್ ಜೈನ್ ತಿಜಾರ ವಹಿಸಿದ್ದರು. ಇದೆ ಸಂದರ್ಭದಲ್ಲಿ ಆಕಸ್ಮಿಕ ನಿಧನರಾದ ಮಧ್ಯ ಪ್ರದೇಶ ಮಾಜಿ ಸಚಿವ ಕಪೂರ್‍ಚಂದ್ ಗೋವಾರ ಹಾಗೂ ಪತ್ರಕರ್ತ ಕೈಲಾಶ್ ಚಂದ್ ಝಾನ್ಸಿ, ಬ್ರ. ವೃಷಭ್, ಬ್ರ.ರಾಜೇಶ್ ಇವರ ಆತ್ಮಗಳಿಗೂ ಸದ್ಗತಿ ಕೋರಲಾಯಿತು. ಕೇಂದ್ರ ಮಾಜಿ ಸಚಿವ ಪ್ರದೀಪ್ ಜೈನ್ ಉಪಸ್ಥಿತರಿದ್ದರು ವಿವಿಧ ರಾಷ್ಟ್ರೀಯ ಅಂತಾರಾಷ್ಟ್ರೀಯ ಶ್ರದ್ದಾಂಜಲಿ ಸಭೆಯಲ್ಲಿ ಮೂಡುಬಿದಿರೆ ಶ್ರೀಗಳವರು ಭಾಗವಹಿಸಿ ಣಮೋಕಾರ ಮಂತ್ರ, ಸಿದ್ಧಭಕ್ತಿ ಪಠಿಸಿ ಆತ್ಮಕ್ಕೆ ಸದ್ಗತಿ ಕೋರಿದರು.

ಮಂಗಳೂರು  ವಿಮಾನ ನಿಲ್ದಾಣದಲ್ಲಿ ಆರ್‍ಟಿ-ಪಿಸಿಆರ್ ವಿನÀಃ ಹೊರೆಗೆ ಬಿಡಲಾಗುವುದಿಲ್ಲ- ಉತ್ತರ ಮುಂಬಯಿ ಬಿಜೆಪಿ ಉಪಾಧ್ಯಕ್ಷರಿಗೆ ತಡೆ ಹಿಡಿದ ಅಧಿಕಾರಿಗಳು

ಮುಂಬಯಿ, ಮೇ.06: ಉತ್ತರ ಮುಂಬಯಿ ಜಿಲ್ಲಾ  ಭಾರತೀಯ ಜನತಾ ಪಕ್ಷ (ಬಿಜೆಪಿ) ಉಪಾಧ್ಯಕ್ಷ, ತುಳುಕನ್ನಡಿರ, ಉದ್ಯಮಿಗಳಲ್ಲಿನ ಮುಂಬಯಿಯ ಪ್ರಭಾವಿ ವ್ಯಕ್ತಿ ಎಂದೇ ಹೆಸರಾಂತ ಎರ್ಮಾಳ್ ಹರೀಶ್ ಶೆಟ್ಟಿ ಕಳೆದ ಬುಧವಾರ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದಲ್ಲಿ ಮಂಗಳೂರು ಪ್ರಯಾಣಿಸಿದ್ದರು. ಕೋವಿಡ್ ಎರಡೂ ಲಸಿಕೆಗಳನ್ನು ಪಡೆದು 20 ದಿನಗಳ ಬಳಿಕ ಭಾರತದಲ್ಲಿ ಅಂದರೆ ಅಂತರಾಜ್ಯ ಪ್ರಯಾಣಿಸುವ ಆರೋಗ್ಯವಂತ ಜನರಿಗೆ ಆರ್‍ಟಿ-ಪಿಸಿಆರ್ ಪರೀಕ್ಷೆಗಳ ದೃಢೀಕರಣ ಪತ್ರ ಅಗತ್ಯವಿಲ್ಲ ಅದನ್ನು ತೆಗೆದು ಹಾಕಲಾಗಿದೆ ಎಂದು ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಪ್ರಕಟವಾಗಿದ್ದ ಸುತ್ತೋಲೆ ಮಾನದಂಡವಾಗಿಸಿ ಹಾಗೂ ಕೋವಿಡ್ ಎರಡೂ ಲಸಿಕೆಗಳನ್ನು ಪಡೆದ ಪ್ರಮಾಣಪತ್ರವನ್ನು ಜೊತೆಗಿರಿಸಿ ಪ್ರಯಾಣ ಬೆಳೆಸಿದ್ದರು. ಅಂತೆಯೇ ಮುಂಬಯಿ ವಿಮಾನ ನಿಲ್ದಾಣದಲ್ಲಿ ಯಾವುದೇ ಅಡೆತಡೆವಿಲ್ಲದೆ ಮಂಗಳೂರು ತಲುಪಿದ್ದರು.

ಮಂಗಳೂರು  ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ನಿಲ್ದಾಣದಲ್ಲಿನ ಆರೋಗ್ಯ ತಪಸಣಾ ಅಧಿಕಾರಿಗಳು ಆರ್‍ಟಿ-ಪಿಸಿಆರ್ ಪ್ರಮಾಣಪತ್ರ ವಿನಹಃ ಹೊರಗೆ ಬಿಡಲಾಗುವುದಿಲ್ಲ ಎಂದಾಗ ಸರಕಾರಿ ಅಧಿಕಾರಿಗಳೇ ತಪಾಸನೆಗೈದು ಮುಂಬಯಿನಿಂದ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿರುವ ಬೋರ್ಡಿಂಗ್ ಪಾಸ್, ಇನ್ನಿತರ ಪ್ರಮಾಣಪತ್ರಗಳು ಇದೆ ಎಂದರೂ ಆರೋಗ್ಯಾಧಿಕಾರಿಯೋರ್ವ ತಮ್ಮ ಕರ್ತವ್ಯವನ್ನೇ ವಸ್ತುಸ್ಥಿತಿಯಾಗಿಸಿ ರೂಪಾಯಿ 800/- ನಗದು ಕಟ್ಟುವಂತೆ ಒತ್ತಾಯಿಸಿದರು ಎನ್ನಲಾಗಿದೆ. ಆದರೆ ಎರ್ಮಾಳ್ ಇದನ್ನು ನಿರಾಕರಿಸಿ ನ್ಯಾಯಕ್ಕಾಗಿ ಅಲ್ಲಿಂದಲೇ ಮಂಗಳೂರು ಸಂಸÀದ ನಳೀನ್‍ಕುಮಾರ್ ಕಟೀಲ್‍ಗೆ ಪೆÇೀನಾಯಿಸಿ ದೇಶದೊಳಗಿನ ರಾಜ್ಯಗಳ ಪ್ರಯಣಕ್ಕೆ ಒಂದೊಂದು ಕಾನೂನುಗಳ ಬಗ್ಗೆ ಸ್ಪಷ್ಟೀಕರಣ ಕೇಳಿದರು ಎನ್ನಲಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಂಗಳವಾರ ಆರ್‍ಟಿ-ಪಿಸಿಆರ್ (ಖeveಡಿse ಖಿಡಿಚಿಟಿsಛಿಡಿiಠಿಣioಟಿ - Poಟಥಿmeಡಿಚಿse ಅhಚಿiಟಿ ಖeಚಿಛಿಣioಟಿ) ಪರೀಕ್ಷೆಯನ್ನು ಉತ್ತಮ ಗೊಳಿಸಲು ಮತ್ತು ಸಿಒವಿಐಡಿ-19 ಪ್ರಕರಣಗಳ ಹೆಚ್ಚಳದ ಮಧ್ಯೆ ಪರೀಕ್ಷೆಯ ಲಭ್ಯತೆಯನ್ನು ಹೆಚ್ಚಿಸಲು ಸಲಹೆ ನೀಡಿದೆ. ಅಂತರರಾಜ್ಯ ದೇಶೀಯ ಪ್ರಯಾಣವನ್ನು ಕೈಗೊಳ್ಳುವ ಆರೋಗ್ಯವಂತ ವ್ಯಕ್ತಿಗಳಿಗೆ ಆರ್‍ಟಿ-ಪಿಸಿಆರ್ ಪರೀಕ್ಷೆಯ ಅಗತ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು ಎಂದು ಐಸಿಎಂಆರ್ ಹೇಳಿದೆ. ಲಕ್ಷಣರಹಿತ ದೇಶೀಯ ಪ್ರಯಾಣಿಕರು ಕೋವಿಡ್-19 ಸೂಕ್ತ ನಡವಳಿಕೆಗಳನ್ನು ಅನುಸರಿಸಬೇಕು ಎಂಬುವುದನ್ನು ಮನವರಿಸಿರುವೆ. ಅಂತೆಯೇ ಆರ್‍ಟಿಪಿಸಿಆರ್ ಪರೀಕ್ಷೆಯನ್ನು ಅತ್ಯುತ್ತಮವಾಗಿಸಲು ಶಿಫಾರಸು ಮಾಡಲಾದ ಕ್ರಮಗಳಂತೆ  (ಖಂಖಿ- ಖಚಿಠಿiಜ ಂಟಿಣigeಟಿ ಖಿesಣs) ಅಥವಾ ಆರ್‍ಟಿ-ಪಿಸಿಆರ್‍ನಿಂದ ಒಮ್ಮೆ ಧನಾತ್ಮಕ ಪರೀಕ್ಷೆ ಮಾಡಿದ ಯಾವುದೇ ವ್ಯಕ್ತಿಯಲ್ಲಿ ಆರ್‍ಟಿ-ಪಿಸಿಆರ್ ಪರೀಕ್ಷೆ   ಪುನರಾವರ್ತಿಸ ಬಾರದು. ಒiಟಿisಣಡಿಥಿ oಜಿ ಊeಚಿಟಣh ಚಿಟಿಜ ಈಚಿmiಟಥಿ Weಟಜಿಚಿಡಿe ಅಂದರೆ ಒoಊ & ಈWನ ಡಿಸ್ಚಾರ್ಜ್ ನೀತಿಗೆ ಅನುಸಾರವಾಗಿ ಆಸ್ಪತ್ರೆಯ ವಿಸರ್ಜನೆಯ ಸಮಯದಲ್ಲಿ ಕೋವಿಡ್-19 ಚೇತರಿಸಿಕೊಂಡ ವ್ಯಕ್ತಿಗಳಿಗೆ ಯಾವುದೇ ಪರೀಕ್ಷೆಯ ಅಗತ್ಯವಿಲ್ಲ. ಪ್ರಯೋಗಾಲಯಗಳ ಮೇಲಿನ ಹೊರೆ ಕಡಿಮೆ ಮಾಡಲು ಅಂತರರಾಜ್ಯ ದೇಶೀಯ ಪ್ರಯಾಣವನ್ನು ಕೈಗೊಳ್ಳುವ ಆರೋಗ್ಯವಂತ ವ್ಯಕ್ತಿಗಳಲ್ಲಿ ಆರ್‍ಟಿಪಿಸಿಆರ್ ಪರೀಕ್ಷೆಯ ಅಗತ್ಯವನ್ನು ಸಂಪೂರ್ಣವಾಗಿ ತೆಗೆದು ಹಾಕಬಹುದು. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ರೋಗಲಕ್ಷಣದ ವ್ಯಕ್ತಿಗಳ ಅನಿವಾರ್ಯವಲ್ಲದ ಪ್ರಯಾಣ ಮತ್ತು ಅಂತರರಾಜ್ಯ ಪ್ರಯಾಣ (ರೋಗ ಲಕ್ಷಣಗಳಂತಹ ಅಔಗಿIಆ19 ಅಥವಾ ಜ್ವರ) ಮೂಲಭೂತವಾಗಿ ತಪ್ಪಿಸಬೇಕು. ಅಗತ್ಯ ಪ್ರಯಾಣವನ್ನು ಕೈಗೊಳ್ಳುವ ಎಲ್ಲ ಲಕ್ಷಣರಹಿತ ವ್ಯಕ್ತಿಗಳು ಕೋವಿಡ್ ಅನುಮೋದನೆಯ ನಡವಳಿಕೆಯನ್ನು ಅನುಸರಿಸಬೇಕು. ಮೊಬೈಲ್ ಪರೀಕ್ಷಾ ಪ್ರಯೋಗಾಲಯಗಳು ಈಗ ಜಿಎಂ ಪೆÇೀರ್ಟಲ್‍ಗಳಲ್ಲಿ ಲಭ್ಯವಿದೆ. ಮೊಬೈಲ್ ವ್ಯವಸ್ಥೆಗಳ ಮೂಲಕ ಆರ್‍ಟಿಪಿಸಿಆರ್ ಪರೀಕ್ಷೆಯನ್ನು ಹೆಚ್ಚಿಸಲು ರಾಜ್ಯಗಳನ್ನು ಪೆÇ್ರೀತ್ಸಾಹಿಸಲಾಗುತ್ತದೆ ಎಂಬುವುದರ ಬಗ್ಗೆ ಎರ್ಮಾಳ್ ಆರೋಗ್ಯ ತಪಸಣಾ ಅಧಿಕಾರಿಗೆ ವಿವರಿಸಿದರೂ ಆ ಬಗ್ಗೆ ನಮಗೇನೂ ಮಾಹಿತಿಯಿಲ್ಲ ಎಂದು ರೂಪಾಯಿ 800/- ಕಟ್ಟಲು ಒತ್ತಾಯಿಸಿದರು ಎನ್ನಲಾಗಿದೆ .

ಹಣ ಕಟ್ಟಲು ಬಲವಾಗಿ ನಿರಾಕರಿಸಿದ ಹರೀಶ್ ಅವರ ವಾದವಿವಾದ ಮುಂದುವರಿಯುತ್ತಿದ್ದತೆಯೇ ಪೆÇೀಲಿಸರ ಆಗಮನವಾಗಿದ್ದು ನನಗೆ ಹಣ ಕಟ್ಟುವ ಪ್ರಶ್ನೆಯಲ್ಲ ಇದು ಸಾರ್ವಜನಿಕರಿಗೆ ಆಗುವ ಸಮಸ್ಯೆ, ಅನ್ಯಾಯ ಎಂದೆಲ್ಲಾ ವಾಗ್ದಾನ, ಹಂಗಾಮ ಮುಂದುವರಿಯಿತು. ಅಷ್ಟರಲ್ಲೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೆÇೀಲಿಸ್ ಅಧಿಕಾರಿ ಗೋಪಾಲ್ ಕುಂದರ್ ಮಧ್ಯಸ್ಥಿಕೆ ವಹಿಸಿ ಎರಡು ಕಡೆಗೂ ಸಮಜಾಯಿಸಿ ಘಟನೆಯನ್ನು ತಣ್ಣಗಾಗಿಸಿದರು.  

ಎರ್ಮಾಳ್ ಹರೀಶ್ ಹೇಳುವಂತೆ  ರೂಪಾಯಿ 800/- ಕಟ್ಟಿದ್ದಲ್ಲಿ ಯಾವನೇ ವ್ಯಕ್ತಿಯೊಳಗಿದ್ದ ಕೊರೋನಾ ಹಣದ ಜೊತೆ ಹೋಗಿ ಬಿಡುತ್ತದೆಯೇ...? ಹಣ ಪಾವಿತಿಸಿದರೆ ಆರ್‍ಟಿಪಿಸಿಆರ್ ವರದಿ ಬೇಡ ಎಂದಾಯಿತಲ್ಲವೇ..? ಅವರು ತಿಳಿಸಿದ ಮೊತ್ತ ಕಟ್ಟಿದಾಕ್ಷಣ ಎಲ್ಲವೂ ಸುಖ್ಯಾಂತವಾಗುವಂತಿದ್ದರೆ ಕೊರೋನಾ ನೆಪ ಹಣ ಮಾಡುವ ಉದ್ದೇಶ ಎಂದಾಯಿತಲ್ಲವೇ ಎಂದು ಜಿಜ್ಞಾಸೆ ವ್ಯಕ್ತ ಪಡಿಸಿದ್ದಾರೆÉ. ಒಂದೇ ದೇಶದೊಳಗಿನ ನಾಗರಿಕ ವಿಮಾನಯಾನ ಅಧಿಕಾರ ಅಥವಾ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸಂಸ್ಥೆಯು ರಾಜ್ಯಕ್ಕೊಂದು ಕಾನೂನು ಮಾಡಿದೆಯೇ ಅಥವಾ ರಾಜ್ಯ ಸರಕಾರ ಇಂತಹ ಆದೇಶವನ್ನು ಯಾವ ಉದ್ದೇಶಕ್ಕಾಗಿ  ಜಾರಿಯಲ್ಲಿರಿಸಿದೆ ಎಂದು ಸ್ವಪಕ್ಷೀಯ ಸರಕಾರಕ್ಕೆ ಪ್ರಶ್ನೆ ಹಾಕಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Beach Clean Drive | Thousand Beer Bottles on Beach
View More

Obituary:Peter Aroza (98) H/o. Mary Aroza Udyavara, UdupiObituary:Peter Aroza (98) H/o. Mary Aroza Udyavara, Udupi
Obituary: Richard Fernandes (74), ThottamObituary: Richard Fernandes (74), Thottam
Final Journey of Richard Fernandes (74 Years) | LIVE from Thottam |Final Journey of Richard Fernandes (74 Years) | LIVE from Thottam |
Udupi: Bishop Dr Gerald Isaac Lobo inaugurates agriculture on barren land projectUdupi: Bishop Dr Gerald Isaac Lobo inaugurates agriculture on barren land project
Udupi: Barren land cultivation movement started in KemmannuUdupi: Barren land cultivation movement started in Kemmannu
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Milarchi Lara from Milagres Cathedral, KallianpurMilarchi Lara from Milagres Cathedral, Kallianpur
Milarchi Lara December 2020Milarchi Lara December 2020
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi