Brief Udupi News with pictures


Richard Dsouza
Kemmannu News Network, 12-10-2018 14:33:59


Write Comment     |     E-Mail To a Friend     |     Facebook     |     Twitter     |     Print


ಕನ್ನಡ ರಾಜ್ಯೋತ್ಸವ ಪೂರ್ವಬಾವಿ ಸಭೆ
     ಉಡುಪಿ, ಅಕ್ಟೋಬರ್ 10 (ಕರ್ನಾಟಕ ವಾರ್ತೆ) :  ನವೆಂಬರ್ 1 ರಂದು ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪೂರ್ವಬಾವಿ ಸಭೆ ನಡೆಯಿತು.
     ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1 ರಂದು ಉಡುಪಿಯ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಭುವನೇಶ್ವರಿ ದೇವಿಯ ಸ್ಥಬ್ಧಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ,  ಬೀಡಿನಗುಡ್ಡೆಯ ಮಹಾತ್ಮ ಗಾಂಧೀ ಬಯಲುರಂಗ ಮಂದಿರದ ವರೆಗೆ ,  ವಿವಿಧ ಇಲಾಖೆಗಳ ಸಾಧನೆ ಬಿಂಬಿಸುವ ಆಕರ್ಷಕ ಟ್ಯಾಬ್ಲೋಗಳ ಮೆರವಣಿಗೆ ನಡೆಯಲಿದ್ದು, ಅರಣ್ಯ, ಅರೋಗ್ಯ, ಪ್ರವಾಸೋದ್ಯಮ, ನಿರ್ಮಿತಿ, ನಗರಸಭೆ, ತೋಟಗಾರಿಕೆ ಸೇರಿದಂತೆ ಪ್ರಮುಖ ಇಲಾಖೆಗಳಿಗೆ ಸ್ಥಬ್ಧಚಿತ್ರ ನಿರ್ಮಿಸುವಂತೆ ಹಾಗೂ ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕøತಿ  ಇಲಾಖೆಯಿಂದ ಕಲಾತಂಡಗಳ ಪ್ರದರ್ಶನ  ಏರ್ಪಡಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಬೀಡಿನಗುಡ್ಡೆಯ ಮಹಾತ್ಮ ಗಾಂಧೀ ಬಯಲುರಂಗ ಮಂದಿರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
      ಧ್ವಜಾರೋಹಣದ ನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ಏರ್ಪಡಿಸುವ ಕುರಿತಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಜಿಲ್ಲಾಧಿಕಾರಿ, ಪಥ ಸಂಚಲನ ನಂತರ ಕನ್ನಡ ನಾಡು ನುಡಿ ಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದರು.
     ಜಿಲ್ಲೆಯಲ್ಲಿ  ಲೋಕಸಭಾ ಉಪ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ  , ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿತರಣೆ ಕುರಿತಂತೆ ಅನುಮತಿ ಕೋರಿ, ಚುನಾವಣಾ ಆಯೋಗದ ಸ್ಪಷ್ಠೀಕರಣ ಕೋರಿದ್ದು, ಅಲ್ಲಿಂದ ಮಾಹಿತಿ ಬಂದ ನಂತರ , ಆಯ್ಕೆ ಸಮಿತಿ ರಚಿಸಿ ಪ್ರಶಸ್ತಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
    ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
    ರಾಜ್ಯೋತ್ಸವ ಅಚರಣೆ ಕುರಿತಂತೆ ವಿವಿಧ ಸಮಿತಿಗಳನ್ನು ರಚಿಸಿದ ಜಿಲ್ಲಾಧಿಕಾರಿ, ಎಲ್ಲಾ ಸಮಿತಿಗಳು ಜವಾಬ್ದಾರಿ ಅರಿತು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 
ಬೆಳೆ ಸಮೀಕ್ಷೆ: ಬೆಳೆ ದರ್ಶಕ ನೂತನ ಆಪ್ ಸಾಫ್ಟ್‍ವೇರ್ ಬಿಡುಗಡೆ
     ಉಡುಪಿ, ಅಕ್ಟೋಬರ್ 10 (ಕರ್ನಾಟಕ ವಾರ್ತೆ) : ಉಡುಪಿ ಜಿಲ್ಲೆಯಲ್ಲಿ 2018 ರ ಮುಂಗಾರು ಬೆಳೆಯ ಸಮೀಕ್ಷೆ ಕಾರ್ಯ ಪ್ರಾರಂಭವಾಗಿದ್ದು, ಈ ಕಾರ್ಯಕ್ಕಾಗಿ ಅನೇಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮುಂದುವರೆದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ರೈತರಿಗೆ ದೊರಕುವ ಉದ್ದೇಶದಿಂದ ಸರಕಾರವು ಬೆಳೆ ದರ್ಶಕ ಎಂಬ ನೂತನ ಆಪ್ ಸಾಫ್ಟ್‍ವೇರನ್ನು ಬಿಡುಗಡೆಗೊಳಿಸಿರುತ್ತದೆ.
     ರೈತರು ಈ ಆಪ್‍ನ್ನು ಉoogಟe Pಟಚಿಥಿ Sಣoಡಿe ಮುಖಾಂತರ ಡೌನ್‍ಲೋಡ್ ಮಾಡಿಕೊಂಡು 2018 ರ ಮುಂಗಾರು ಬೆಳೆ ಸಮೀಕ್ಷೆ ಕಾರ್ಯದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ಸಾಫ್ಟ್‍ವೇರ್‍ನಲ್ಲಿ ರೈತರು ತಮ್ಮ ವ್ಯಾಪ್ತಿಯ ಬೆಳೆ ಸಮೀಕ್ಷೆಗೆ ಬರುವ ಸಿಬ್ಬಂದಿಗಳ ಮಾಹಿತಿಯನ್ನು ಹಾಗೂ ತಮ್ಮ ಜಮೀನಿನ ಬೆಳೆ ಸಮೀಕ್ಷೆ ನಡೆದಿದೆಯೇ ಎಂಬ ಮಾಹಿತಿಯನ್ನು ಪಡೆಯಬಹುದಾಗಿದೆ. 
     ಇದರಿಂದ ರೈತರು ತಮ್ಮ ಜಮೀನಿನ ವ್ಯಾಪ್ತಿಯ ಬೆಳೆ ಸಮೀಕ್ಷೆ ಸಿಬ್ಬಂದಿಯನ್ನು ಸಂಪರ್ಕಿಸಿ ಬೆಳೆ ಸಮೀಕ್ಷೆ ಕಾರ್ಯ ನಡೆಸುವಂತೆ ಕೋರಬಹುದು ಮತ್ತು ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ದಾಖಲಾದ ಬೆಳೆ ವಿವರ ಹಾಗೂ ಬೆಳೆಯ ಪೋಟೊಗಳು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು ಹಾಗೂ ತಪ್ಪುಗಳು ಕಂಡು ಬಂದ ಸಂದರ್ಭದಲ್ಲಿ ನೇರವಾಗಿ ತಾಲೂಕು ತಹಶೀಲ್ದಾರರನ್ನು ಸಂಪರ್ಕಿಸಿ ದಾಖಲಾದ ಮಾಹಿತಿಯನ್ನು ಸರಿಪಡಿಸಿಕೊಳ್ಳಲಾಗಿದೆ.
ಆದುದರಿಂದ ರೈತರು ಈ ತಂತ್ರಾಂಶದ ಸದುಪಯೋಗ ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಚ್ಛತಾ ಸಿಬ್ಬಂದಿ ನೇಮಕಾತಿ ಬಗ್ಗೆ
ಉಡುಪಿ, ಅಕ್ಟೋಬರ್ 10 (ಕರ್ನಾಟಕ ವಾರ್ತೆ) : ಉಡುಪಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿರುವ 01 ಸ್ವಚ್ಛತಾ ಕಾರ್ಯ ನಿರ್ವಹಿಸುವ ಸಿಬ್ಬಂದಿಯ ಹುದ್ದೆಗೆ ಹೊರಗುತ್ತಿಗೆ ಆಧಾರದಲ್ಲಿ ಓರ್ವ ಮಹಿಳಾ / ಪುರುಷ ಸಿಬ್ಬಂದಿಯನ್ನು ನೇಮಿಸಲು, ಆಸಕ್ತಿಯುಳ್ಳ ಹೊರ ಗುತ್ತಿಗೆದಾರರು ಉಡುಪಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಗೆ ಕಚೇರಿ ಅವಧಿಯಲ್ಲಿ ಭೇಟಿ ನೀಡಿ ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ದರಪಟ್ಟಿಯನ್ನು ಅಕ್ಟೋಬರ್ 15 ರ ಒಳಗೆ ನೀಡುವಂತೆ ಪೊಲೀಸ್ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವೃತ್ತಿ ಪ್ರೋತ್ಸಾಹ ಯೋಜನೆ: ಅಲ್ಪ ಸಂಖ್ಯಾತರಿಂದ ಅರ್ಜಿ ಆಹ್ವಾನ
    ಉಡುಪಿ, ಅಕ್ಟೋಬರ್ 10 (ಕರ್ನಾಟಕ ವಾರ್ತೆ) : ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮವು 2018-19 ನೇ ಸಾಲಿನಲ್ಲಿ ಅನುಷ್ಟಾನಗೊಳಿಸುತ್ತಿರುವ ವೃತ್ತಿ ಪ್ರೋತ್ಸಾಹ ಯೋಜನೆಯಡಿ ಮತೀಯ ಅಲ್ಪ ಸಂಖ್ಯಾತರಿಂದ ಶೇ.80 ರಷ್ಟು ಮುಸ್ಲಿಂ, ಶೇ.10 ರಷ್ಟು ಕ್ರೈಸ್ತರು ಹಾಗೂ ಶೇ.10 ರಷ್ಟು ಇತರೆ( ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ) ಅಲ್ಪಸಂಖ್ಯಾತ ಜನಾಂಗದವರಿಂದ ಅರ್ಜಿ ಆಹ್ವಾನಿಸಲಾಗಿದೆ.
    ವೃತ್ತಿ ಪ್ರೋತ್ಸಾಹ ಯೋಜನೆ: ಈ ಯೋಜನೆಯಡಿ ಹಣ್ಣು ಮತ್ತು ತರಕಾರಿ ಮಾರಾಟ ಅಂಗಡಿ, ಮಾಂಸದ ಅಂಗಡಿ/ ಮೀನು ಮಾರಾಟ ಹೈನುಗಾರಿಕೆ/ ಎಳನೀರು/ ಕಬ್ಬಿನ ಹಾಲು ಮಾರಾಟ ಅಂಗಡಿ, ತಂಪು ಪಾನೀಯ ಮಾರಾಟ ಅಂಗಡಿ, ಬೇಕರಿ, ಲಾಂಡ್ರಿ, ಡ್ರೈಕ್ಲೀನಿಂಗ್, ಎ.ಸಿ.ರಿಪೇರಿ, ರೆಫ್ರಿಜರೇಟರ್, ಮೋಟಾರ್ ರಿವೈಂಡಿಗ್ ವಕ್ರ್ಸ್, ವಾಟರ್ ವಾಷ್ ಸರ್ವೀಸ್, ಪಂಚರ್ ಶಾಪ್, ಗ್ಯಾಸ್ ವೆಲ್ಡಿಂಗ್, ಮೆಕ್ಯಾನಿಕ್, ಕಾರ್ ಪೆಂಟರ್, ಎಲೆಕ್ಟ್ರೀಕಲ್/ ಎಲೆಕ್ಟ್ರಾನಿಕ್ ರಿಪೇರಿ ಇತ್ಯಾದಿ ವೃತ್ತಿಗಳಿಗೆ 2 ಲಕ್ಷ ರೂ. ಘಟಕ ವೆಚ್ಚಗಳಿಗೆ ಅಗತ್ಯವಿರುವ ಬಂಡವಾಳಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‍ನಿಂದ ಪಡೆಯುವ 1 ಲಕ್ಷ ರೂ. ಸಾಲಕ್ಕೆ, 1 ಲಕ್ಷ ರೂ. ಸಹಾಯಧನ ಮಂಜೂರು ಮಾಡಲಾಗುವುದು
     ಕರ್ನಾಟಕ ರಾಜ್ಯದಲ್ಲಿ  ಖಾಯಂ ನಿವಾಸಿಯಾಗಿದ್ದು, ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ 81000 ರೂ. ಹಾಗೂ ನಗರ ಪ್ರದೇಶದವರಿಗೆ 103000 ರೂ. ಮೀರಿರಬಾರದು.
    ಅರ್ಜಿದಾರರ ವಯಸ್ಸು ಕನಿಷ್ಟ 18 ರಿಂದ ಗರಿಷ್ಟ 45 ವರ್ಷಗಳಾಗಿದ್ದು, ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಪಡಿತರ ಚೀಟಿ, ಆಧಾರ್ ಕಾರ್ಡ್ ಹೊಂದಿರಬೇಕು. ಅರ್ಜಿದಾರ ಮತ್ತು ಕುಟುಂಬದವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರಲ್ಲದ ಬಗ್ಗೆ ಹಾಗೂ ಈ ಹಿಂದೆ ನಿಗಮದ ಯಾವುದೇ ಸೌಲಭ್ಯ ಪಡೆದಿಲ್ಲದಿರುವ ಬಗ್ಗೆ 50 ರೂ. ಛಾಪಾ ಕಾಗದದಲ್ಲಿ ಧೃಡೀಕರಣ ಪತ್ರ ಮತ್ತು ಯೋಜನಾ ವರದಿ, ಸಾಲ ಮಂಜೂರಾತಿಗಾಗಿ ಬ್ಯಾಂಕ್‍ನವರು ನೀಡುವ ಒಪ್ಪಿಗೆ ಪತ್ರ ನೀಡಬೇಕು.
   ಅರ್ಜಿ ನಮೂನೆಯನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ರಜತಾದ್ರಿ, ಜಿಲ್ಲಾಧಿಕಾರಿಗಳ ಸಂಕೀರ್ಣ, ಮಣಿಪಾಲ, ಉಡುಪಿ ಜಿಲ್ಲೆ ಈ ಕಚೇರಿಯಲ್ಲಿ  ಪಡೆದು, ದಾಖಲಾತಿಗಳೊಂದಿಗೆ ಅಕ್ಟೋಬರ್ 31 ರ ಒಳಗೆ ಸಲ್ಲಿಸಬೇಕು.
   ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ  ವ್ಯವಸ್ಥಾಪಕರು, ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ, ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸೈನಿಕ ಶಾಲೆ ಕೊಡಗು: ದಾಖಲಾತಿಗೆ ಅರ್ಜಿ ಆಹ್ವಾನ
   ಉಡುಪಿ, ಅಕ್ಟೋಬರ್ 10 (ಕರ್ನಾಟಕ ವಾರ್ತೆ) : ಅಖಿಲ ಭಾರತ ಸೈನಿಕ ಶಾಲಾ ಪರೀಕ್ಷೆಯ ಮೂಲಕ 6 ಮತ್ತು 9 ನೇ ತರಗತಿಗಳಿಗೆ 2019-20 ನೇ ಸಾಲಿನ ದಾಖಲಾತಿಗೆ ಹುಡುಗರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಸೈನಿಕ ಶಾಲಾ ಪ್ರವೇಶ ಪರೀಕ್ಷಾ ಕೇಂದ್ರವು 6 ನೇ ತರಗತಿಗೆ ಸೈನಿಕ ಶಾಲೆ ಕೊಡಗು, ಬೆಂಗಳೂರು, ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ನಡೆಯಲಿದೆ. 9 ನೇ ತರಗತಿಗೆ ಪರೀಕ್ಷೆಯು ಸೈನಿಕ ಶಾಲೆ ಕೊಡಗಿನಲ್ಲಿ ನಡೆಯಲಿದೆ.
ಶಾಲೆಯ ವೆಬ್‍ಸೈಟ್ ತಿತಿತಿ.sಚಿiಟಿiಞsಛಿhooಟಞoಜಚಿgu.eಜu.iಟಿ   ನಲ್ಲಿ ಮಾಹಿತಿ ಪುಸ್ತಕ ಮತ್ತು ಇತರೆ ವಿವರಗಳು ಲಭ್ಯವಿದೆ. ಆನ್‍ಲೈನ್ ಅರ್ಜಿ/ ನೋಂದಣಿ/ ಅರ್ಜಿ ಶುಲ್ಕ ಇವುಗಳಿಗೆ ನವೆಂಬರ್ 26 ರ ಒಳಗೆ sಚಿiಟಿiಞsಛಿhooಟಚಿಜmissioಟಿ.iಟಿ ಅನ್ನು ಸಂಪರ್ಕಿಸಬಹುದು. ನೋಂದಣಿ ಶುಲ್ಕವು ಸಾಮಾನ್ಯ ವರ್ಗ ಮತ್ತು ರಕ್ಷಣಾ ಇಲಾಖೆಯವರಿಗೆ 400 ರೂ ಮತ್ತು ಪರಿಶಿಷ್ಟ ಜಾತಿ/ ಪಂಗಡದವರಿಗೆ 250 ರೂ.ಗಳು.
   ಆನ್‍ಲೈನ್ ನೋಂದಾವಣಿ ಸಮಯದಲ್ಲಿ ಪೋಷಕರು ಅಭ್ಯರ್ಥಿ ಮತ್ತು ಪೋಷಕರ ಆಧಾರ್ ಕಾರ್ಡ್, ಅಭ್ಯರ್ಥಿಯ ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಬೇಕು. ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್ /ಡೆಬಿಟ್ ಕಾರ್ಡ್/ ನೆಟ್ ಬ್ಯಾಂಕಿಂಗ್ ಮೂಲಕ ಕಟ್ಟಬಹುದು. ಅಭ್ಯರ್ಥಿಯ ಜನನ ದಿನಾಂಕ, ಜಾತಿ ದೃಢೀಕರಣ ಪತ್ರ, ಪೋಷಕರ ಇ- ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ಪೋಷಕರ ಖಾಯಂ ಮತ್ತು ಪೋಸ್ಟಲ್ ವಿಳಾಸ, ವಾಸ ದೃಢೀಕರಣ ಪತ್ರವನ್ನು ಇಟ್ಟುಕೊಳ್ಳಬೇಕು.
   ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 8510055577, 8510044411, 08276-278963 ಅನ್ನು ಸಂಪರ್ಕಿಸುವಂತೆ ಕೊಡಗು ಸೈನಿಕ ಶಾಲೆಯ ಪ್ರಕಟಣೆ ತಿಳಿಸಿದೆ.

 ಉಡುಪಿ: ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಬೀಳ್ಕೊಡುಗೆ
    ಉಡುಪಿ, ಅಕ್ಟೋಬರ್ 10 (ಕರ್ನಾಟಕ ವಾರ್ತೆ) : ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್ .ಜಿ. ಭಟ್ ಇವರು ಯಲ್ಲಾಪುರ ಪ್ರಾದೇಶಿಕ ವಿಭಾಗಕ್ಕೆ ವರ್ಗಾವಣೆ ಹೊಂದಿರುವುದರ ಪ್ರಯುಕ್ತ ಮಣಿಪಾಲ ಮಧುವನ ಹೋಟೆಲ್ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ .ಎಸ್. ಪ್ರಭಾಕರನ್ ಐ.ಎಫ್.ಎಸ್. ಇವರು ವಹಿಸಿದ್ದರು.
    ಆರ್. ಜಿ. ಭಟ್ ಇವರು ಮಾತನಾಡಿ, ಸಾಮಾಜಿಕ ಅರಣ್ಯ ವಿಭಾಗದಲ್ಲಿ ಸಿಬ್ಬಂದಿಗಳ ಕೊರತೆ ಇದ್ದರೂ, ಹೆಚ್ಚಿನ ಪ್ರಗತಿ ಸಾಧಿಸಲು ಶ್ರಮಿಸಿದ ಎಲ್ಲಾ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.
    ಅಧ್ಯಕ್ಷತೆಯನ್ನು ವಹಿಸಿದ .ಎಸ್. ಪ್ರಭಾಕರನ್ ಐ.ಎಫ್.ಎಸ್. ಇವರು ಮಾತನಾಡಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸುವುದರೊಂದಿಗೆ ಸಾಮಾಜಿಕ ಅರಣ್ಯ ವಲಯದ ಎಲ್ಲ ಅಧಿಕಾರಿ/ ಸಿಬ್ಬಂದಿಯವರ ಸಹಕಾರವನ್ನು ಕೋರಿದರು. ವೇದಿಕೆಯಲ್ಲಿ ಉಡುಪಿ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ರವೀಂದ್ರ ಪಿ ಆಚಾರಿ, ಕುಂದಾಪುರ/ಕಾರ್ಕಳ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ತುಳಸಿ, ಉಡುಪಿ ಸಾಮಾಜಿಕ ಅರಣ್ಯ ವಿಭಾಗ ಕಛೇರಿಯ ಪ್ರಥಮ ದರ್ಜೆ ಸಹಾಯಕ ನಯನ್ ಉಪಸ್ಥಿತರಿದ್ದರು. ವಲಯ ಅರಣ್ಯಾಧಿಕಾರಿ ತುಳಸಿ, ಸ್ವಾಗತಿಸಿ ಕಾರ್ಯಕ್ರಮವನ್ನು ಸಂಯೋಜಿಸಿದರು. ಹಾಗೂ ಕಾರ್ಕಳ ಸಿಬ್ಬಂದಿ ಬಿ. ಪುಟ್ಟಣ್ಣ ಗೌಡ ಇವರು ಧನ್ಯವಾದ ಮಾಡಿದರು. ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ಹಾಗೂ ಅಧೀನ ವಲಯಗಳಾದ ಕಾರ್ಕಳ, ಕುಂದಾಪುರ, ಉಡುಪಿಯ ಎಲ್ಲಾ ಅರಣ್ಯ ಪ್ರೇರಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಹಿರಿಯಡಕ: ಭಾಷೆ, ಸಾಹಿತ್ಯ ಮತ್ತು ಕಲಾ ಸಂಘಗಳ ಉದ್ಘಾಟನೆ
ಉಡುಪಿ, ಅಕ್ಟೋಬರ್ 10 (ಕರ್ನಾಟಕ ವಾರ್ತೆ) : ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕದಲ್ಲಿ ಅಕ್ಟೋಬರ್ 10 ರಂದು ಭಾಷೆ, ಸಾಹಿತ್ಯ ಮತ್ತು ಕಲಾ ಸಂಘಗಳ ಉದ್ಘಾಟನೆ ಹಾಗೂ ಶಿವರಾಮ ಕಾರಂತರ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ಐಕ್ಯುಎಸಿ ಸಹಕಾರದೊಂದಿಗೆ ಆಯೋಜಿಸಲಾಗಿತ್ತು.
ಖ್ಯಾತ ಸಂಶೋಧಕರು ಹಾಗೂ ಚಿಂತಕರಾದ ಪ್ರತಾಪ್ ಚಂದ್ರಶೆಟ್ಟಿ ಹಳ್ನಾಡು ಕಾರ್ಯಕ್ರಮವನ್ನು ಉದ್ಘಾಟಿಸಿ, ಶಿವರಾಮ ಕಾರಂತರ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು. ಓದು ಎಂದರೇನು? ಓದು ಏಕೆ ಮತ್ತು ಹೇಗೆ? ಎಂಬ ಪ್ರಶ್ನೆಗಳಿಗೆ ಸಂವಾದ ರೂಪದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದರು. ಓದು ಎಂಬುದು ಸಂಕೀರ್ಣ ಪ್ರಕ್ರಿಯೆ, ಪ್ರತಿಯೊಬ್ಬರ ಓದಿನ ಗ್ರಹಿಕೆಗಳು ವೈವಿಧ್ಯಮಯವಾಗಿರುತ್ತವೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಕೇತನ ಅವರು ವಿದ್ಯಾರ್ಥಿಗಳಿಗೆ ಕುತೂಹಲ, ಬೆರಗು, ಪ್ರಶ್ನಿಸುವ ಮನೋಭಾವ ಈ ಗುಣಗಳು ಅತ್ಯಗತ್ಯವಾಗಿ ಇರಬೇಕು. ಜ್ಞಾನಕ್ಕೆ ಯಾವುದೇ ಗೋಡೆಗಳಿರಬಾರದು ಎಂದು ನುಡಿದರು.
ಭಾಷೆ, ಸಾಹಿತ್ಯ ಮತ್ತು ಕಲಾ ಸಂಘಗಳ ಸಂಚಾಲಕ ಡಾ. ರಾಘವೇಂದ್ರ ಪಿ ಕೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ,  ಮೂರು ಸಂಘಗಳ ಉದ್ದೇಶ ಜೀವನ ಪ್ರೇಮ ಮತ್ತು ಮನುಷ್ಯ ಪ್ರೀತಿ ಬೆಳೆಸುವುದು ಎಂದು ತಿಳಿಸಿದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಕಲಾ ವಿಭಾಗದ ವಿದ್ಯಾರ್ಥಿನಿ ಸಫ್ರೀನಾ ಕ್ವಾಡ್ರೊಸ್ ನಿರೂಪಿಸಿದರು. ಕಲಾ ಸಂಘದ ವಿದ್ಯಾರ್ಥಿ ಸಂಚಾಲಕ ಶಿವರಾಜ್ ವಂದಿಸಿದನು. ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಚಾಲಕಿ ಸುಮನಾ ಬಿ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುಜಯಾ ಕೆ. ಎಸ್., ಕಲಾ ಸಂಘದ ವಿದ್ಯಾರ್ಥಿ ಸಂಚಾಲಕಿ ಸುದರ್ಶಿನಿ, ಕಾಲೇಜಿನ ಎಲ್ಲಾ ಬೋಧಕರು, ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi