ವಿಮಾ ನೌಕರರ ಸಂಘ, ಉಡುಪಿ - ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ


Richard Dsouza
Kemmannu News Network, 16-03-2019 21:07:56


Write Comment     |     E-Mail To a Friend     |     Facebook     |     Twitter     |     Print


ವಿಮಾ ನೌಕರರ ಸಂಘ, ಉಡುಪಿ ವಿಭಾಗದ ಮಹಿಳಾ ಉಪ ಸಮಿತಿಯಿಂದ - ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ವಿಮಾ ನೌಕರರ ಸಂಘ, ಉಡುಪಿ ವಿಭಾಗ, ಇದರ ಮಹಿಳಾ ಉಪಸಮಿತಿಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮೂರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಬಹಳ ಆರ್ಥಪೂರ್ಣವಾಗಿ ಆಚರಿಸಿತು.

ದಿನಾಂಕ 10.03.2019 ರಂದು ಶಂಕರಪುರದ ವಿಶ್ವಾಸದ ಮನೆಗೆ ಭೇಟಿ ನೀಡಿ ಅಲ್ಲಿ ಆಶ್ರಯ ಪಡೆದಿರುವ ಬುದ್ಧಿಮಾಂದ್ಯ, ನಿರ್ಗತಿಕ ನಾಗರಿಕರ ದೈನಂದಿನ ಬಳಕೆಯ ಗೃಹೋಪಯೋಗಿ ವಸ್ತುಗಳನ್ನು ಮತ್ತು ಅವರಿಗೆ ಅಗತ್ಯವಾಗಿದ್ದ ಬಿಸಿನೀರು ಮತ್ತು ತಣ್ಣೀರಿನ ಅಕ್ವಾಗಾರ್ಡ್‍ನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಲ್ಲಿನ ಮುಖ್ಯ ನಿರ್ವಾಹಕರಾದ ಶ್ರೀಯುತ ಪ್ರಶಾಂತ್‍ರವರು ಮಾತನಾಡುತ್ತಾ “ಸಮಿತಿಯು ನೀಡಿರುವ ಸಹಾಯವು ಅಳಿಲ ಸೇವೆಯಲ್ಲ, ಇದು ಮಹತ್ತರವಾದ ಸೇವೆ. ನಾವು ಈ ಸೇವೆಯನ್ನು ಮನಃಪೂರ್ವಕವಾಗಿ ಸಂತೋಷದಿಂದ ಸ್ವೀಕರಿಸುತ್ತೇವೆ.  ವಿಮಾ ಸಂಸ್ಥೆಯಲ್ಲಿದ್ದುಕೊಂಡು ನಮ್ಮ ವಿಶ್ವಾಸದ ಮನೆಯನ್ನು  ಈ ಬಾರಿ ನೀವು ಆಯ್ಕೆಮಾಡಿಕೊಂಡಿರವುದು ಸಂತಸದ ವಿಚಾರ. ಯಾವುದೇ ಸಂಸ್ಥೆಯು ಮಾಡದಂತಹ ಕೆಲಸವನ್ನು ನಿಮ್ಮ ಸಂಸ್ಥೆ ಮಾಡುತ್ತಿದೆ. ಸಮಾಜದಲ್ಲಿರುವ ನಿರ್ಗತಿಕರಿಗೆ ಕಳೆದ ಹಲವು ವರ್ಷಗಳಿಂದ ಸಹಾಯವನ್ನು ನೀಡುತ್ತಾ ಬರುತ್ತಿದ್ದೀರೆಂಬುದು ನೀವು ತೋರಿಸುತ್ತಿರುವ ಕಾಳಜಿಯಿಂದಲೇ ವ್ಯಕ್ತವಾಗುತ್ತಿದೆ.  ಇನ್ನು ಮುಂದೆಯೂ ನಿಮ್ಮ ಸಂಸ್ಥೆಯು ಈ ರೀತಿಯ ಜನಪರ ಕಾರ್ಯಗಳನ್ನು ಮುಂದುವರಿಸಿಕೊಂಡು ಬರುತ್ತದೆ ಎಂಬ ವಿಶ್ವಾಸ ನಮಗಿದೆ” ಎಂದು ತಿಳಿಸಿದರಲ್ಲದೆ ಸಮಿತಿಗೆ ತಮ್ಮ ಸಂಸ್ಥೆಯ ಪರವಾಗಿ ಕೃತಜ್ಞತÉÉಯನ್ನು ಸಲ್ಲಿಸಿದರು. ವೇದಿಕೆಯಲ್ಲಿ ವಿಮಾ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿಯವರಾದ  ಶ್ರೀ ಪ್ರಭಾಕರ ಬಿ. ಕುಂದರ್, ಜತೆಕಾರ್ಯದರ್ಶಿಯಾದ ಶ್ರೀಮತಿ ಕವಿತಾ ಎಸ್, ಶ್ರೀಮತಿ ಜಯಮೇರಿ ಮತ್ತು ಶ್ರೀ ಪ್ರಶಾಂತ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶ್ರೀಮತಿ ರತ್ನಾ ಬಾಲಕೃಷ್ಣ ನಿರೂಪಿಸಿದರಲ್ಲದೇ ವಂದನಾರ್ಪಣೆಯನ್ನೂ ಮಾಡಿದರು.

ದಿನಾಂಕ 11.03.2019 ರಂದು ಎರಡನೇ ಕಾರ್ಯಕ್ರಮದ  ಹಂತದಲ್ಲಿ ವಿಮಾ ನೌಕರರ ಸಂಘದ ಕಛೇರಿಯ ಆವÀರಣದಲ್ಲಿ  ಮಾಹೆ, ಮಣಿಪಾಲ, ಫಿಸಿಯೊಥೆರಪಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಎಸ್.ನಿರ್ಮಲಾ ನಾಯಕ್ ಇವರಿಂದ “ನಮ್ಮ ಜೀವನದಲ್ಲಿ ಫಿಸಿಯೊಥೆರಪಿಯಿಂದ ಆರೋಗ್ಯದ ಮೇಲಾಗುವ ಲಾಭಗಳು” ಎಂಬ ವಿಷಯದ ಕುರಿತು ಪ್ರವಚನವನ್ನು ಏರ್ಪಡಿಸಲಾಗಿತ್ತು. ಶ್ರೀಮತಿ ಎಸ್.ನಿರ್ಮಲಾ ನಾಯಕ್‍ರವರು ಶೈಶವಾವಸ್ಥೆಯಿಂದ ವೃದ್ಧಾಪ್ಯದ ವರೆಗೂ ಹೇಗೆ ಫಿಸಿಯೊಥೆರಪಿ ಲಾಭದಾಯಕವಾಗಿದೆ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು. ನಮ್ಮ ಬಿಡುವಿನ ವೇಳೆಯಲ್ಲಿ ಸುಲಭವಾಗಿ ಮಾಡಬಹುದಾದ ವ್ಯಾಯಾಮಗಳನ್ನು ತೋರಿಸಿಕೊಟ್ಟರು. ಅವರ ವೃತ್ತಿ ಜೀವನದಲ್ಲಿ,್ಲ ಅವರಿಗಾದ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಈ ಕಾಂiÀರ್iಕ್ರಮದಲ್ಲಿ ನಮ್ಮ ಮಹಿಳಾ ಉಪಸಮಿತಿಯ ಹಿರಿಯ ಮಹಿಳಾ ಸದಸ್ಯೆಯರನ್ನು ಗುರುತಿಸಿ ಅಭಿನಂದಿಸಲಾಯಿತು.  ವೇದಿಕೆಯಲ್ಲಿ ಶ್ರೀ ಶೇಖರ ಪೂಜಾರಿ, ಶ್ರೀಮತಿ ಕವಿತಾ ಎಸ್, ಶ್ರೀಮತಿ ಜಯಮೇರಿ, ಶ್ರೀಮತಿ ಎಸ್.ನಿರ್ಮಲಾ ನಾಯಕ್, ಹಿರಿಯ ಸಂಗಾತಿಯಾದ ಶ್ರೀ ಅದಮಾರು ಶ್ರೀಪತಿ ಆಚಾರ್ಯ ಉಪಸ್ಥಿತರಿದ್ದರು. ಸಭೆಯ ಮೊದಲು ಶ್ರೀಮತಿ ನಿರ್ಮಲಾರವರು ಅತಿಥಿಗಳನ್ನು ಮತ್ತು ಸದಸ್ಯರನ್ನು ಸ್ವಾಗತಿಸಿದರು. ಶ್ರೀಮತಿ ಕವಿತಾ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದ ನಂತರ ಶ್ರೀಮತಿ ಪೂರ್ಣಿಮಾ ಎಸ್. ನಾಯ್ಕ್ ಅತಿಥಿಯವರನ್ನು ಸಭೆಗೆ ಪರಿಚಯಿಸಿದರು.  ಶ್ರೀಮತಿ ವಿದ್ಯಾಲತರವರು ಹಿರಿಯ ಮಹಿಳಾ ಸಂಗಾತಿಗಳ ಕಿರು ಪರಿಚಯ ನೀಡಿದರು.   ಶ್ರೀಮತಿ ರತ್ನಾ ಕೆ. ವಂದನಾರ್ಪಣೆಯನ್ನು ಮಾಡಿದರು.  ಶ್ರೀಮತಿ ನೀರಜಾ ಹೊಳ್ಳ ಕಾರ್ಯಕ್ರಮವನ್ನು ನಿರೂಪಿಸಿದರು.

 

ಮೂರನೇ ಹಂತದ ಕಾರ್ಯಕ್ರಮವನ್ನು ದಿನಾಂಕ 13.03.2019 ರಂದು ನಿಟ್ಟೂರಿನ ಸರಕಾರೀ ಬಾಲಕಿಯರ ಮಂದಿರಕ್ಕೆ  ಭೇಟಿ ನೀಡುವುದರ ಮೂಲಕ ನೆರವೇರಿಸಲಾಯಿತು.  ಮಕ್ಕಳಿಗೆ ದೈನಂದಿನ ಉಪಯೋಗಕ್ಕಾಗಿ ಬಕೇಟಿನ ಮತ್ತು ಒಳ ಉಡುಪುಗಳ ಆವಶ್ಯಕತೆಯಿದೆ ಎಂದು ಅಲ್ಲಿನ ಅಧೀಕ್ಷಕಿ ಶ್ರೀಮತಿ ಕುಸುಮಾ ನಾಯಕ್ ಇವರಿಂದ ತಿಳಿದು 40 ಅಲುಮ್ಯೂನಿಯಮ್ ಮತ್ತು ಫೈಬರ್‍ಬಕೇಟ್‍ಗಳನ್ನು, ಕೈಜಗ್‍ಗಳನ್ನು ಮತ್ತು ಒಳ ಉಡುಪುಗಳನ್ನು ಮಕ್ಕಳಿಗೆ ವಿತರಿಸಲಾಯಿತು.  ಶ್ರೀಮತಿ ಕುಸುಮಾ ನಾಯಕ್ ನಮ್ಮ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾ ಬಾಲಕಿಯರ ದಿನನಿತ್ಯದ ಬಳಕೆಗೆ  ನೀಡುತ್ತಿರುವ ಅಗತ್ಯ ವಸ್ತುಗಳ ಕೊಡುಗೆಯನ್ನು ಸಂತೋಷದಿಂದ ಸ್ವೀಕರಿಸಿದರು. ನಮ್ಮ ಮೊದಲ ಹಂತದ ಕಾರ್ಯಕ್ರಮವಾದ ವಿಶ್ವಾಸದ ಮನೆಗೆ ಇತ್ತ ಕೊಡುಗೆ ಔಚಿತ್ಯಪೂರ್ಣವಾದುದು ಎಂದು ತಿಳಿಸಿದರು. ನಮ್ಮ ಸಂಘಟನೆಯ ಜತೆಕಾರ್ಯದರ್ಶಿಯಾದ ಶ್ರೀಮತಿ ಕವಿತಾ ಎಸ್, ಮಾತನಾಡುತ್ತಾ ಮಕ್ಕಳೆಲ್ಲರೂ ಚೆನ್ನಾಗಿ ಓದಿ ಉನ್ನತ ಸ್ಥಾನವನ್ನೇರಬೇಕು ಮತ್ತು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರ ಮತ್ತು ಮೋಸವನ್ನು ಸಹಿಸದೇ ಪ್ರತಿಭಟಿಸುವ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕೆಂಬ ಸಲಹೆಯನ್ನಿತ್ತರು. ಸುಮಾರು 40 ಜನರು ಭಾಗವಹಿಸಿದ ಈ ಕಾರ್ಯಕ್ರಮದ ವೇದಿಕೆಯಲ್ಲಿ ವಿಮಾ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ವಿಶ್ವನಾಥ್, ಜತೆಕಾರ್ಯದರ್ಶಿಯಾದ   ಶ್ರೀಮತಿ ಕವಿತಾ ಎಸ್, ಶ್ರೀಮತಿ ಜಯಮೇರಿ, ಶ್ರೀಮತಿ ಕುಸುಮಾ ನಾಯಕ್, ಶ್ರೀ ಅದಮಾರು ಶ್ರೀಪತಿ ಆಚಾರ್ಯ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶ್ರೀಮತಿ ಪೂರ್ಣಿಮಾ ನಿರೂಪಿಸಿದರು. ಬಾಲಕಿಯರ ಮಂದಿgz ಸಹ ಶಿಕ್ಷಕರಾದ ಶ್ರೀ ಸದಾನಂದ ಅಡಿಗ ವಂದನಾರ್ಪಣೆ ಮಾಡಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Udupi: Traffic congestion and dangers to pedestria
View More

OXEM KITEAK KELEIM DEVA? | (ಅಶೆಂ ಕಿತ್ಯಾಕ್ ಕೆಲೆಂಯ್ ದೆವಾ?) New Konkani video song by DONY&ASHA CORREAOXEM KITEAK KELEIM DEVA? | (ಅಶೆಂ ಕಿತ್ಯಾಕ್ ಕೆಲೆಂಯ್ ದೆವಾ?) New Konkani video song by DONY&ASHA CORREA
Contact for Masks, Sanitizers, PPE kits and More..Contact for Masks,  Sanitizers, PPE kits and More..
LIVE STREAM OF MASSES - Holy week schedule from Abu DhabiLIVE STREAM OF MASSES - Holy week schedule from Abu Dhabi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India
Website Maintenance

Website Maintenance

Kemmann.com Face Book

Click here for Kemmannu Knn Facebook Link

Sponsored Albums