ʼಶಿಕ್ಷಣ ವ್ಯವಸ್ಥೆಯ ಲೋಪ:  ಸಂಘಟಿತ ಹೋರಾಟವೊಂದೇ ದಾರಿʼ


Rons Bantwal
Kemmannu News Network, 13-01-2020 20:20:13


Write Comment     |     E-Mail To a Friend     |     Facebook     |     Twitter     |     Print


ʼಶಿಕ್ಷಣ ವ್ಯವಸ್ಥೆಯ ಲೋಪ:  ಸಂಘಟಿತ ಹೋರಾಟವೊಂದೇ ದಾರಿʼ

ಮಂಗಳೂರು: ಶಿಕ್ಷಣ ವ್ಯವಸ್ಥೆಯ ಭ್ರಷ್ಟಾಚಾರಕ್ಕೆ, ಸಮಸ್ಯೆ ಪರಿಹಾರಕ್ಕೆ ಪರಿಣಾಮಗಳ ಬಗ್ಗೆ ಯೋಚಿಸದೆ ಸಂಘಟಿತರಾಗಿ ಹೋರಾಡಬೇಕಾಗಿದೆ. ಹೊಸದಾಗಿ ಆರಂಭವಾಗಲಿರುವ ಇ-ಆಫೀಸ್ ವ್ಯವಸ್ಥೆ ಒಂದಷ್ಟು ಸಮಸ್ಯೆಗಳನ್ನು ನಿವಾರಿಸುವ ಭರವಸೆಯಿದೆ, ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ್ ಅಬಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿ (ನ್ಯಾಕ್) ಜಂಟಿಯಾಗಿ ಎಸ್.ಡಿ. ಎಂ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಉಪನ್ಯಾಸಕರ ಸಮಸ್ಯೆಗಳಿಗೆ ಉತ್ತರಿಸಿದ ಅವರು, 2002 ರಲ್ಲಿ ಅಂದಿನ ಎಸ್.ಎಂ ಕೃಷ್ಣ ಸರ್ಕಾರ ತೆಗೆದುಕೊಂಡ 10 ಅಂಶಗಳ ನಿರ್ಣಯ ನೇಮಕಾತಿ, ವೇತನ ಬಿಡುಗಡೆಗೆ ಅಡ್ಡಿಯಾಗಿದೆ. ಜೊತೆಗೆ ಶಿಕ್ಷಣ ಇಲಾಖೆಯ ಪುನಃಸ್ಥಾಪನೆಯಾಗಬೇಕಿದೆ. ಈ ಕುರಿತು ಜನವರಿ ೧೪ ರಂದು ಶಿಕ್ಷಣ ಸಚಿವರ ಜೊತೆ ಮಹತ್ವದ ಸಭೆ ನಡೆಯಲಿದೆ ಎಂದರು.

ಸಂಶೋಧನೆಗೆ ಯುಜಿಸಿ ಬಿಡುಗಡೆ ಮಾಡುವ ಸಹಾಯಧನದ ಕೊರತೆ ಕುರಿತು ಸ್ಪಷ್ಟನೆ ನೀಡಿದ, ಯುಜಿಸಿ ಸದಸ್ಯ ಡಾ. ಗೋಪಾಲ ರೆಡ್ಡಿ,  ಮಾತೃ ಸಂಸ್ಥೆಯ ಒಪ್ಪಿಗೆ, ಅಗತ್ಯ ದಾಖಲೆಗಳು ಮತ್ತು 12ಬಿ ಮಾನ್ಯತೆ ಇದ್ದರೆ ಅನುದಾನಕ್ಕೆ ಸಮಸ್ಯೆಯಾಗುವುದಿಲ್ಲ. ಖಾಸಗಿ ಸಂಸ್ಥೆಗಳಲ್ಲಿ ದೊರೆಯುತ್ತಿರುವ ಅತ್ಯಲ್ಪ ವೇತನದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಸಂಸ್ಥೆಗಳು ತಾವು ಉತ್ತಮ ವೇತನ ನೀಡುತ್ತಿರುವುದಾಗಿ ಯುಜಿಸಿಗೆ ದಾಖಲೆ ಸಲ್ಲಿಸುತ್ತವೆ. ಆದರೆ ಅದರ ಸತ್ಯಾಸತ್ಯತೆ ಪರಿಶೀಲಿಸುವ ವ್ಯವಸ್ಥೆ ಯುಜಿಸಿಯಲ್ಲಿ ಇಲ್ಲ, ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಮಾಜಿ ವಿಧಾನ ಪರಿಷತ್ನ ಮಾಜಿ ಸದಸ್ಯ ಕ್ಯಾಪ್ಡಟನ್ ಗಣೇಶ್ ಕಾರ್ಣಿಕ್, ವಿಶ್ವವಿದ್ಯಾನಿಲಯ ಸಂಶೋಧನೆಯ ವಿದ್ಯಾರ್ಥಿ ಮೇಲೆ  6.94 ಲಕ್ಷ ಖರ್ಚುಮಾಡುತ್ತಿದೆ. ಆದರೆ ಪೇಟೆಂಟ್, ಪ್ರಕಟಣೆ ಅಷ್ಟಾಗಿ ಆಗುತ್ತಿಲ್ಲ. ನಮ್ಮ ಹಕ್ಕು ಕೆಲಸವನ್ನು ಕೂಡ ಯೋಚಿಸಬೇಕು. ಸಂಬಳದ ಸಮಸ್ಯೆಗೆ ನಾವು ಮತ್ತೆ ಮಿನಿಮಮ್ ಚೆಕ್ ಮೂಲಕ ಸಂಬಳ ಪಾವತಿಯನ್ನು ಒತ್ತಾಯಿಸಿ ಹೋರಾಟ ಮಾಡಬೇಕಿದೆ, ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ನಿರಂಜನ ವಾನಳ್ಳಿ , ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ. ಬಾಲಕೃಷ್ಣ ಭಟ್, ಕೆಆರ್ಎಮ್ಎಸ್ಎಸ್ ಕಾರ್ಯದರ್ಶಿ ಡಾ. ಜಿ ಸಿ ರಾಜಣ್ಣ, ಎಸ್ಡಿಎಂ ಬಿಬಿಎಂ ಕಾಲೇಜ್ ಪ್ರಾಂಶುಪಾಲೆ ಅರುಣಾ ಕಾಮತ್, ನಿರ್ದೇಶಕಿ ಸೀಮಾ ಶೆಣೈ ಮೊದಲಾದವರು ಉಪಸ್ಥಿತರಿದ್ದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

Milagres Milana 2020 on 26th Jan.Milagres Milana 2020 on 26th Jan.
Milarchi Laram - Issue Jan 2020Milarchi Laram - Issue Jan 2020
Veez Konkani Global Weekly e_magazine 109Veez Konkani Global Weekly e_magazine 109
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India