ರಾಷ್ಟ್ರೀಯ ತೋಟಗಾರಿಕೆ - ಉಡುಪಿಯಲ್ಲಿ ಲಭ್ಯವಿರುವ ಸಹಾಯಧನದ ವಿವರ


Richard D’Souza
Kemmannu News Network, 26-06-2020 17:01:35


Write Comment     |     E-Mail To a Friend     |     Facebook     |     Twitter     |     Print


 

ಉಡುಪಿ :   ಸಣ್ಣ ಸಸ್ಯಾಗಾರಕ್ಕೆ ಸಹಾಯಧನ: 1.00 ಹೆ. ವಿಸ್ತೀರ್ಣದಲ್ಲಿ ಬ್ಯಾಂಕ್ ನಿಂದ ಅವದಿ ಸಾಲ ಪಡೆದು ಹೊಸದಾಗಿ ನಿರ್ಮಾಣ ಮಾಡುವ ಸಸ್ಯಾಗಾರ/ನರ್ಸರಿಗೆ ಒಟ್ಟು ವೆಚ್ಚದ ಶೇ. 50  ರಂತೆ ಗರಿಷ್ಟ ರೂ. 7.50 ಲಕ್ಷ ಸಹಾಯಧನ ವಿತರಿಸಲಾಗುವುದು.    

ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆಗೆ ಸಹಾಯಧನ: ಯೋಜನೆಯ ಮಾರ್ಗಸೂಚಿಯಂತೆ ನಿಗದಿತ ಬೆಳೆಗಳನ್ನು ನೂತನ ತಾಂತ್ರಿಕತೆಯೊAದಿಗೆ ಹೊಸದಾಗಿ ಬೆಳೆಯುವ ರೈತರಿಗೆ ಸಹಾಯಧನವನ್ನು ವಿತರಿಸಲಾಗುವುದು. ಪ್ರತಿ ಫಲಾನುಭವಿ ಕನಿಷ್ಟ 0.20 ಹೆ. ಹಾಗೂ ಗರಿಷ್ಟ 4.00 ಹೆ. ವರೆಗೆ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಸಹಾಯಧನವು ಒಟ್ಟು ವೆಚ್ಚದ ಶೇ. 40 ರಂತೆ ಇದ್ದು, 2020-21 ನೇ ಸಾಲಗೆ ಸಹಾಯಧನ ಪಡೆಯಬಹುದಾಗ ಬೆಳೆಗಳು ಹಾಗೂ ಸಹಾಯಧನದ ವಿವರ ಈ ಕೆಳಗಿನಂತಿದೆ.

ಬಾಳೆ (ಕಂದುಗಳು)        ವೆಚ್ಚ 65,000.00 ಸಹಾಯಧನ 26,000.00, ಬಾಳೆ (ಅಂಗಾAಶ ಕೃಷಿ)     1,02,000. ವೆಚ್ಚ 00              40,800.00 ಸಹಾಯಧನ , ಅನಾನಸ್ಸು (ಕಂದುಗಳು)     ವೆಚ್ಚ 87,500.00   ಸಹಾಯಧನ 35,000.00, ಹೈಬ್ರಿಡ್ ತರಕಾರಿಗಳು     ವೆಚ್ಚ  50,000.00,                 ಸಹಾಯಧನ 20,000.00, ಬಿಡಿ ಹೂಗಳು     ವೆಚ್ಚ  40,000.00 ಸಹಾಯಧನ 16,000.00, ಕಾಳುಮೆಣಸು ವೆಚ್ಚ  50,000.00        ಸಹಾಯಧನ  20,000.00, ಗೇರು/ಕೊಕ್ಕೊ   ವೆಚ್ಚ 50,000.00   ಸಹಾಯಧನ  20,000.00

ಅಣಬೆ ಉತ್ಪಾದನಾ ಘಟಕಕ್ಕೆ ಸಹಾಯಧನ: ಬ್ಯಾಂಕ್ ನಿಂದ ಅವದಿ ಸಾಲ ಪಡೆದು ಹೊಸದಾಗಿ ನಿರ್ಮಾಣ ಮಾಡುವ ಅಣಬೆ ಉತ್ಪಾದನಾ ಘಟಕಕ್ಕೆ ಒಟ್ಟು ವೆಚ್ಚದ ಶೇ. 40 ರಂತೆ ಗರಿಷ್ಟ ರೂ. 8.00 ಲಕ್ಷ ಸಹಾಯಧನ ವಿತರಿಸಲಾಗುವುದು.

ಕಾಳು ಮೆಣಸು ಪುನಃಶ್ಚೆತನಕ್ಕೆ ಸಹಾಯಧನ: ಹಳೆಯ ಅನುತ್ಪಾದಕ ಕಾಳುಮೆಣಸು ತೋಟಗಳನ್ನು ಪುನಃಶ್ಚೆತನ ಕೈಗೊಳ್ಳುವ ರೈತರಿಗೆ ಒಟ್ಟು ವೆಚ್ಚದ ಶೇ. 50 ರಂತೆ ಪ್ರತಿ ಹೆಕ್ಟೇರ್ ಗೆ ಗರಿಷ್ಟ ರೂ. 10,000.00 ಸಹಾಯಧನ ವಿತರಿಸಲಾಗುವುದು. ಪ್ರತಿ ಫಲಾನುಭವಿಗೆ ಗರಿಷ್ಟ 2.00 ಹೆ. ವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ

ಕೃಷಿ ಹೊಂಡಕ್ಕೆ ಸಹಾಯಧನ: 20 ಮೀ. ಉದ್ದ, 20 ಮೀ. ಅಗಲ ಹಾಗೂ 3 ಮೀ. ಆಳದ ಕೃಷಿ ಹೊಂಡವನ್ನು Iಟಿಟe, uಣಟeಣ ಹಾಗೂ Pಟಚಿsiಛಿ ಐiಟಿe ನೊಂದಿಗೆ ನಿರ್ಮಾಣ ಮಾಡುವ ರೈತರಿಗೆ ಒಟ್ಟು ವೆಚ್ಚದ ಶೇ. 50 ರಂತೆ ಗರಿಷ್ಟ ರೂ. 75,000.00 ಸಹಾಯಧನ ವಿತರಿಸಲಾಗುವುದು. ಸದರಿ ಕಾರ್ಯಕ್ರಮಕ್ಕೆ ಸಹಾಯಧನ ಪಡೆಯಲು ರೈತರು 1.00 ಹೆ. ಜಮೀನು ಹೊಂದಿರಬೇಕು.

ಪ್ಲಾಸ್ಟಿಕ್ ಹೊದಿಕೆಗೆ ಸಹಾಯಧನ: ಪ್ಲಾಸ್ಟಿಕ್ ಹೊದಿಕೆಯನ್ನು ಉಪಯೋಗಿಸಿ ತರಕಾರಿಗಳನ್ನು ಬೆಳೆಯುವ ರೈತರಿಗೆ ಒಟ್ಟು ವೆಚ್ಚದ ಶೇ. 40 ರಂತೆ ಪ್ರತಿ ಹೆಕ್ಟೇರ್ ಗೆ ಗರಿಷ್ಟ ರೂ. 16,000.00 ಸಹಾಯಧನ ವಿತರಿಸಲಾಗುವುದು. ಪ್ರತಿ ಫಲಾನುಭವಿಗೆ ಗರಿಷ್ಟ 2.00 ಹೆ. ವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ

ಸಮಗ್ರ ಪೀಡೆ/ಪೋಷಕಾಂಶ ನಿರ್ವಹಣೆಗೆ ಸಹಾಯಧನ: ತೋಟಗಾರಿಕೆ ಬೆಳೆಗಳಲ್ಲಿ ಉಪಯೋಗಿಸುವ ಸಸ್ಯ ಸಂರಕ್ಷಣಾ ಔಷದಿ, ಜೈವಿಕ ಗೊಬ್ಬರ, ಜೈವಿಕ ಪೀಡೆನಾಶಕಗಳ ಖರೀದಿಗೆ ಒಟ್ಟು ವೆಚ್ಚದ ಶೇ. 30 ರಂತೆ ಪ್ರತಿ ಹೆಕ್ಟೇರ್ ಗೆ ಗರಿಷ್ಟ ರೂ. 1,200.00 ಸಹಾಯಧನವನ್ನು ಗರಿಷ್ಟ 4.00 ಹೆಕ್ಟೇರ್ ವಿಸ್ತೀರ್ಣಕ್ಕೆ ವಿತರಿಸಲಾಗುವುದು.

ಜೇನು ಸಾಕಾಣೆಗೆ ಸಹಾಯಧನ: ತೋಟಗಾರಿಕೆ/ಕೃಷಿ ಬೆಳೆಗಳಲ್ಲಿ ಪರಾಗಸ್ಪರ್ಷ ಹೆಚ್ಚಿಸಲು ಜೇನು ಕೃಷಿ ಮಾಡುವ ರೈತರಿಗೆ ಯೋಜನೆಯಡಿ ಸಹಾಯಧನ ವಿತರಿಸಲಾಗುವುದು. ಜೇನು ಪೆಟ್ಟಿಗೆ, ಕುಟುಂಬ ಹಾಗೂ ಜೇನು ಸಂಗ್ರಹಣಾ ಉಪಕರಣಕ್ಕೆ ಒಟ್ಟು ವೆಚ್ಚದ ಶೇ. 40 ರಂತೆ ಈ ಕೆಳಗಿನಂತೆ ಸಹಾಯಧನವನ್ನು ನೀಡಲಾಗುವುದು. ಜೇನು ಪೆಟ್ಟಿಗೆ        ವೆಚ್ಚ 2,000.00     ಸಹಾಯಧನ 800.00 ಗರಿಷ್ಠ ಮಿತಿ 50 ಪೆಟ್ಟಿಗೆ, ಜೇನು ಕುಟುಂಬ ವೆಚ್ಚ 2,000.00 ಸಹಾಯಧನ 800.00 ಗರಿಷ್ಠ ಮಿತಿ 50 ಕುಟುಂಬ,           ಜೇನು ಸಂಗ್ರಹಣಾ ಯಂತ್ರ         ವೆಚ್ಚ 20,000.00             ಸಹಾಯಧನ 8,000.00      , ಗರಿಷ್ಠ ಮಿತಿ 1 ಯಂತ್ರ

 

ಟ್ರ‍್ಯಾಕ್ಟರ್ ಖರೀದಿಗೆ ಸಹಾಯಧನ: ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರು ಖರೀದಿಸುವ 20 ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯದ ಟ್ರ‍್ಯಾಕ್ಟರ್ ಗೆ ಸಹಾಯಧನ ನೀಡಲು ಅವಕಾಶವಿದ್ದು, ಸಣ್ಣ, ಅತಿ ಸಣ್ಣ, ಮಹಿಳಾ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಒಟ್ಟು ವೆಚ್ಚದ ಶೇ. 35 ರಂತೆ ಗರಿಷ್ಟ ರೂ. 1.00 ಲಕ್ಷ ಹಾಗೂ ಇತರೆ ರೈತರು ಒಟ್ಟು ವೆಚ್ಚದ ಶೇ. 25 ರಂತೆ  ಗರಿಷ್ಟ ರೂ. 0.75 ಲಕ್ಷ ಸಹಾಯಧನವನ್ನು ಪ್ರಸಕ್ತ ಸಾಲಿನಲ್ಲಿ ಖರೀದಿಸಿ ನೊಂದಣಿ ಮಾಡುವ ರೈತರಿಗೆ ವಿತರಿಸಲಾಗುತ್ತದೆ. ಸದರಿ ಯೋಜನೆಯಡಿ ಸಹಾಯಧನ ಪಡೆಯುವ ರೈತರು ಕನಿಷ್ಟ 0.40 ಹೆಕ್ಟೇರ್ ಜಮೀನು ಹೊಂದಿರಬೇಕು ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಸುತ್ತಿರಬೇಕು

ಪ್ಯಾಕ್ ಹೌಸ್ ಗೆ ಸಹಾಯಧನ: 9 ಮೀ ಉದ್ದ ಹಾಗೂ 6 ಮೀ ಅಗಲದ ಪ್ಯಾಕ್ ಹೌಸ್ ಅನ್ನು ಇಲಾಖಾ ಮಾರ್ಗಸೂಚಿಯಂತೆ ನಿರ್ಮಾಣ ಮಾಡುವ ರೈತರಿಗೆ ಒಟ್ಟು ವೆಚ್ಚದ ಶೇ. 50 ರಂತೆ ಗರಿಷ್ಟ ರೂ. 2.00 ಲಕ್ಷ ಸಹಾಯಧನ ವಿತರಿಸಲಾಗುತ್ತದೆ. ಸದರಿ ಯೋಜನೆಯಡಿ ಸಹಾಯಧನ ಪಡೆಯಲು ರೈತರು ಕನಿಷ್ಟ 1.00 ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ ಅಥವಾ 2.00 ಹೆಕ್ಟೇರ್ ಬಹುವಾರ್ಷಿಕ ಬೆಳೆಗಳನ್ನು ಬೆಳೆಸುತ್ತಿರಬೇಕು

ಪ್ರಾಥಮಿಕ ಸಂಸ್ಕರಣಾ ಘಟಕ/ಬಹುಪಯೋಗಿ ಸಂಸ್ಕರಣಾ ಘಟಕಗಳಿಗೆ ಸಹಾಯಧನ: ಬ್ಯಾಂಕ್ ನಿಂದ ಅವದಿ ಸಾಲ ಪಡೆದು ಹೊಸದಾಗಿ ನಿರ್ಮಾಣ ಮಾಡುವ ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕಗಳಿಗೆ ಒಟ್ಟು ವೆಚ್ಚದ ಶೇ. 40 ರಂತೆ ಗರಿಷ್ಟ ರೂ. 10.00 ಲಕ್ಷ ಸಹಾಯಧನ ನೀಡಲಾಗುತ್ತದೆ. 

ತರಬೇತಿ ಹಾಗೂ ಪ್ರವಾಸಗಳು: ರೈತರ/ರೈತ ಗುಂಪುಗಳ ಬೇಡಿಕೆಗನುಗುಣವಾಗಿ ತರಭೇತಿ ಹಾಗೂ ಪ್ರವಾಸಗಳನ್ನು ಇಲಾಖೆಯಲ್ಲಿ ಲಭ್ಯ ಅನುದಾನದಲ್ಲಿ ಆಯೋಜಿಸಲಾಗುವುದು

ಸಹಾಯಧನ ಪಡೆಯುವ ವಿಧಾನ

1.            ನಿಗದಿತ ಚಟುವಟಿಕೆಗಳನ್ನು ಕೈಗೊಳ್ಳುವ ರೈತರು ಅರ್ಜಿಗಳನ್ನು ತಾಲೂಕು ತೋಟಗಾರಿಕೆ ಇಲಾಖಾ ಕಛೇರಿಗೆ ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಹಾಗೂ ಚಟುವಟಿಕೆ ಕೈಗೊಳ್ಳುವ ರೈತರ ವಿವರದೊಂದಿಗೆ ಹಾಗೂ ಪ್ರಸ್ತಾವನೆ ಆಧಾರಿತ ಕಾರ್ಯಕ್ರಮಗಳಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸುವುದು

2.            ತಾಲೂಕು ಹಾಗೂ ಜಿಲ್ಲೆಗೆ ನಿಗದಿಪಡಿಸಿದ ಗುರಿಗನುಗುಣವಾಗಿ ಜೇಷ್ಟತೆಯ ಆದಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ, ನಿಗದಿತ ಚಟುವಟಿಕೆಗಳನ್ನು ಕೈಗೊಳ್ಳುವ ಬಗ್ಗೆ ಕಾರ್ಯಾದೇಶ ನೀಡಲಾಗುವುದು

3.            ಕಾರ್ಯಾದೇಶ ಪಡೆದ ರೈತರು ನಿಗದಿತ ಚಟುವಟಿಕೆಗಳನ್ನು ಕೈಗೊಂಡು, ಕಾರ್ಯಾದೇಶದಲ್ಲಿ ನಮೂದಿಸಿರುವ ದಾಖಲಾತಿಗಳನ್ನು ಸಲ್ಲಿಸುವುದು ಹಾಗೂ ಮಾರ್ಗಸೂಚಿ ಪ್ರಕಾರ ಸಹಾಯಧನ ಪಡೆಯಬಹುದುದಾಗಿದೆ

 

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಜಿಲ್ಲಾ ಅಥವಾ ಸಂಬAದಿಸಿದ ತಾಲೂಕು ಮಟ್ಟದ ಈ ಕೆಳಗಿನ ಕಛೇರಿಯನ್ನು ಸಂಪರ್ಕಿಸುವAತೆ , ಉಪ ನಿರ್ದೇಶಕರು ತೋಟಗಾರಿಕಾ ಇಲಖೆ ಉಡುಪಿ ಅವರ ಪ್ರಕಟಣೆ ತಿಳಿಸಿದೆ.

1)            ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ.), ಉಡುಪಿ ಜಿಲ್ಲೆ: 0820-2531950

2)            ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಉಡುಪಿ ತಾಲೂಕು: 0820-2522837

3)            ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.),ಕುAದಾಪುರ ತಾಲೂಕು: 08254-230813

4)            ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಕಾರ್ಕಳ ತಾಲೂಕು: 08258-230288

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Full Video:Inauguration Udupi of Diocese
View More

Congratulations to Prathiksha Shetty, KemmannuCongratulations to Prathiksha Shetty, Kemmannu
Congratulations to the winners of Panchayat Elections from Kemmannu Parish.Congratulations to the winners of Panchayat Elections from Kemmannu Parish.
Milarchi Lara December 2020Milarchi Lara December 2020
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Autobiography of Richard Carvalho, Barkur/Mumbai.Autobiography of Richard Carvalho, Barkur/Mumbai.
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte