Udupi brief news and announcements


Richard D’Souza, Kallianpur
Kemmannu News Network, 30-06-2020 11:35:57


Write Comment     |     E-Mail To a Friend     |     Facebook     |     Twitter     |     Print


ತಿಳಿಸಿದೆ.

ಸಾರ್ವಜನಿಕ ಅಹವಾಲು ಸ್ವೀಕಾರ

ಉಡುಪಿ :  ಜುಲೈ 1 ರಂದು ಬೆಳಿಗ್ಗೆ 10 ರಿಂದ 12.30 ವರೆಗೆ , ಕುಂದಾಪುರದ ತಾಲೂಕು ಕಚೇರಿಯಲ್ಲಿ  , ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ , ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.

ಅಗಸ ಮತ್ತು ಕ್ಷೌರಿಕರಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಕೆ: ಜುಲೈ 10 ಕೊನೆಯ ದಿನಾಂಕ

  ಉಡುಪಿ :   ಅಗಸ ಮತ್ತು ಕ್ಷೌರಿಕ ವೃತಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಲಾಕ್‌ಡೌನ್ ಕಾರಣ ನೀಡಲಾಗುವ 5000 ರೂ ಗಳ ಪರಿಹಾರ ನೆರವು ನೀಡಲು , ಸೇವಾಸಿಂದು ಪೋರ್ಟಲ್ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗಧಿಪಡಿಸಿದ್ದ ದಿನಾಂಕವನ್ನು ಜುಲೈ 10 ರ ವರೆಗೆ ವಿಸ್ತರಿಸಲಾಗಿದ್ದು, ಫಲಾನುಭವಿಗಳು ಅರ್ಜಿ ಸಲ್ಲಿಸುವಂತೆ ಕಾರ್ಮಿಕ ಇಲಾಖೆ ಪ್ರಕಟಣೆ ತಿಳಿಸಿದೆ.

 

 

 

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸೇವೆಗಳನ್ನು ಪಡೆಯಲು

ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ

ಉಡುಪಿ :  ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ದೊರಕುವ ಸೇವೆಗಳನ್ನು ಸೇವಾ ಸಿಂಧು (hಣಣಠಿs://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ) ವೆಬ್‌ಸೈಟ್‌ನಲ್ಲಿಅಥವಾ ಸಿ.ಎಸ್.ಸಿ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಮಾತ್ರಅರ್ಜಿಯನ್ನು ಸಲ್ಲಿಸಬಹುದು.

   ಪ್ರಸ್ತುತ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಹಿರಿಯ ನಾಗರಿಕರ ಗುರುತು ಚೀಟಿಯನ್ನು ನೀಡಲಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 3,999 ಹಿರಿಯ ನಾಗರಿಕರ ಗುರುತು ಚೀಟಿಯನ್ನು ವಿತರಿಸಲಾಗಿದ್ದು, ಕರ್ನಾಟಕರಾಜ್ಯದಲ್ಲಿ ಹಿರಿಯ ನಾಗರಿಕರ ಗುರುತು ಚೀಟಿ ವಿತರಣೆಯಲಿ ್ಲಉಡುಪಿ ಜಿಲ್ಲೆಯು 3ನೇ ಸ್ಥಾನದಲ್ಲಿರುತ್ತದೆ.

ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಈ ಮುಂದಿನ ಸೇವೆಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಹಿರಿಯ ನಾಗರಿಕರ ಗುರುತಿನ ಚೀಟಿಗೆ ಅರ್ಜಿ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಯ ನೋಂದಣಿ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಯ ನೋಂದಣಿ ನವೀಕರಣ, ಹಿರಿಯ ನಾಗರಿಕರ ಕ್ಷೇತ್ರದಲ್ಲಿಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಯ ನೋಂದಣಿ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ ದೂರವಾಣಿ ಸಂಖ್ಯೆ 0820-2574810/811ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 

ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ

ಉಡುಪಿ :  ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜೂನ್ 26 ರಂದು  ಅಧ್ಯಕ್ಷ ಸ್ಥಾನಕ್ಕೆ  ಮಂದಾತಿ ಕೃಷಿ ಕ್ಷೇತ್ರದಿಂದ ಸತೀಶ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ  ಕೋಟಾ ಕ್ಷೇತ್ರದಿಂದ ಕೃಷಿಕ ಕೃಷ್ಣ ಪೂಜಾರಿ ಪಿ ಇವರು ನಾಮಪತ್ರವನ್ನು ಸಲ್ಲಿಸಿರುತ್ತಾರೆ.

     ಅಧ್ಯಕ್ಷ  ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಮಾತ್ರ  ಸಲ್ಲಿಕೆಯಾದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಶೆಟ್ಟಿರವರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣ ಪೂಜಾರಿ ಪಿ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಉಡುಪಿ ತಹಸೀಲ್ದಾರ್ ಅವರ ಪ್ರಕಟಣೆ ತಿಳಿಸಿದೆ.

ವೆಬಿನಾರ್ ಆಯೋಜನೆ

ಉಡುಪಿ :  ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸAಸ್ಥೆಯಾದ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯು ಜಿಯೋಇನ್ಪಾರ್ಮ್ಯಾಟಿಕ್ಸ್ ಅನ್ವಯಿಕಗಳು ಬಗ್ಗೆ ವೆಬಿನಾರನ್ನು 2020 ಜುಲೈ14ರಿಂದ 16ರವರೆಗೆ (ಮಂಗಳವಾರ , ಬುಧವಾರ ಮತ್ತು ಗುರುವಾರ) ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಯುವ ಉಪನ್ಯಾಸಕರಿಗೆ 3 ದಿನಗಳ ಕಾಲ ಆಯೋಜಿಸಲಾಗುತ್ತಿದೆ.

    ಈ ವೆಬಿನಾರ್ನಲ್ಲಿ , ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಂಗಸAಸ್ಥೆಯಾದ ಪ್ರಾದೇಶಿಕ ದೂರ ಸಂವೇದಿ ಕೇಂದ್ರ-ದಕ್ಷಿಣ (ಬೆಂಗಳೂರು)(ಖegioಟಿಚಿಟ ಖemoe Seಟಿsiಟಿg eಟಿಣಡಿe) ಅಂತಾರಾಷ್ಟಿçÃಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (Iಟಿಣeಡಿಟಿಚಿಣioಟಿಚಿಟ Iಟಿsiue ಔಜಿ Iಟಿಜಿoಡಿmಚಿಣioಟಿ ಖಿeಛಿhoಟಿoogಥಿ-IIIಖಿ) ಮತ್ತು ರಾಷ್ಟಿçÃಯ ಉನ್ನತ ಅಧ್ಯಯನ ಸಂಸ್ಥೆಗಳ (ಓಚಿಣioಟಿ Iಟಿsiue ಔಜಿ ಂಜvಚಿಟಿಛಿeSuies )   ಇಲ್ಲಿನ ಸಂಪನ್ಮೂಲ ತಜ್ಞರುಗಳು ಉಪನ್ಯಾಸ ನೀಡಲಿದ್ದಾರೆ.

     ಸದರಿ  ವೆಬಿನಾರ್‌ಗೆ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಲು ಜುಲೈ 13 ಕೊನೆಯ ದಿನವಾಗಿದ್ದು,  ಆಸಕ್ತರು ಹೆಚ್ಚಿನ ಮಾಹಿತಿಯನ್ನು ಅಕಾಡೆಮಿ ವೆಬ್‌ತಾಣದಲ್ಲಿ   ಪಡೆಯಬಹುದಾಗಿದೆ(hಣಣಠಿs://sಣಚಿಛಿಚಿಜemಥಿ.iಟಿ/eಟಿ/ಠಿಡಿogಡಿಚಿmseಟಿ/ಚಿಠಿಠಿಟiಛಿಚಿಣioಟಿ-oಜಿ-geoiಟಿಜಿoಡಿmಚಿಣiಛಿs-3ಜಚಿಥಿ-ತಿebiಟಿಚಿಡಿ-sessioಟಿ/) ಎಂದು ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಎಂ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಂಗಾಯಣದಲ್ಲಿ  ರಂಗಶಿಕ್ಷಣ ತರಬೇತಿ: ಅರ್ಜಿ ಆಹ್ವಾನ

ಉಡುಪಿ :   ಕರ್ನಾಟಕ ಸರ್ಕಾರವು ಮೈಸೂರಿನಲ್ಲಿ  ಸ್ಥಾಪಿಸಿರುವ ರಂಗಾಯಣವು ರಂಗತರಬೇತಿ ಶಾಲೆಯಾಗಿದ್ದು ಪ್ರತಿ ವರ್ಷ ಹತ್ತು ತಿಂಗಳ ಡಿಪ್ಲೊಮಾ ಕೋರ್ಸನ್ನು ನಡೆಸುತ್ತಾ ಬಂದಿದೆ.

    ಪ್ರಸ್ತುತ 2020-21 ನೇ ಸಾಲಿನ ರಂಗ ತರಬೇತಿ ಕೋಸ್ ð ಗೆ ಸೇರಬಯಸುವ ವಿದ್ಯಾರ್ಥಿಗಳು  ಕನಿಷ್ಠ   ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆತೇರ್ಗಡೆ ಹೊಂದಿರಬೇಕು.ಅರ್ಜಿ ಸಲ್ಲಿಸಲು  18 ವರ್ಷ ತುಂಬಿದ ಮತ್ತು 28 ವರ್ಷದ ಒಳಗಿನ ಅಭ್ಯರ್ಥಿಗಳಾಗಿರಬೇಕು.  ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಾಮನುಸಾರ ರಂಗಾಯಣದಿAದಲೇ ವಸತಿ ವ್ಯವಸ್ಥೆ ,ಕಲ್ಪಿಸಲಾಗುವುದು. ಮತ್ತು ಮಾಹೆಯಾನ ರೂ.3,000/-ಗಳ ವಿದ್ಯಾರ್ಥಿ ವೇತನ ಹಾಗೂ ಮಾಸಿಕ ರೂ.2.000/-ಗಳ ಊಟೋಪಚಾರದ ಭತ್ಯೆ ಪಾವತಿಸಲಾಗುವುದು.

   ರಂಗಶಾಲೆಗೆ ಸೇರಬಯಸುವ ವಿದ್ಯಾರ್ಥಿಗಳು ಜೂನ್ 25 ರಿಂದ ರಂಗಾಯಣದ ವೆಬ್ ಸೈಟ್. ತಿತಿತಿ.ಡಿಚಿಟಿgಚಿಥಿಚಿಟಿಚಿ.oಡಿg ನಲ್ಲಿ ಅರ್ಜಿಯನ್ನು ಡೌನ್ ಲೋಡ್ ಮಾಡಿ ಅಥವಾ ರಂಗಾಯಣದ ಕಚೇರಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಅರ್ಜಿಯನ್ನು  ಸಲ್ಲಿಸಬಹುದು. ಹೆಚ್ಚಿನ ವಿವರಕ್ಕಾಗಿ ದೂರವಾಣೆ ಸಂಖ್ಯೆ :0821-2512639,9448938661,9916600027,ಮತ್ತು 9448422343 ನ್ನು ಸಂಪರ್ಕಿಸಬಹುದು ಎಂದು ರಂಗಾಯಣದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

 

ವಿಕಲಚೇತನ ಪುರ್ನವಸತಿ ಕೇಂದ್ರದಲ್ಲಿ ನೇಮಕಾತಿ

ಉಡುಪಿ :   ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಅನುಷ್ಠಾನದಲ್ಲಿರುವ , ಜಿಲ್ಲಾ ವಿಕಲಚೇತನರ ಪುರ್ನವಸತಿ ಕೇಂದ್ರ ಉಡುಪಿಯಲ್ಲಿ,  ಕಚೇರಿ ಸೇವಕ (ವಿದ್ಯಾರ್ಹತೆ :ಎಸ್.ಎಸ್.ಎಲ್.ಸಿ. ವೇತನ ರೂ.7000), ಮೊಬಿಲಿಟಿ ಇನ್‌ಸ್ಟçಕ್ಟರ್(ವಿದ್ಯಾರ್ಹತೆ : ಸರ್ಟಿಫಿಕೇಟ್ ಕೋರ್ಸ್ ಇನ್ ಓ ಅಂಡ್ ಎಂ ವೇತನ ರೂ.8000) ತಾತ್ಕಾಲಿಕ ಹುದ್ದೆಗಳಿಗೆ ಗೌರವಧನ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

      ಅಸಕ್ತರು ಜುಲೈ 10 ರೊಳಗೆ , ವಿದ್ಯಾರ್ಹತೆಯ ಪ್ರತಿಯೊಂದಿಗೆ, ಕೈ ಬರಹದ ಅರ್ಜಿಯನ್ನು, ಕಾರ್ಯದರ್ಶಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ,

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Video:Non-Resident Parishioners’ Day
View More

Congratulations to Prathiksha Shetty, KemmannuCongratulations to Prathiksha Shetty, Kemmannu
Congratulations to the winners of Panchayat Elections from Kemmannu Parish.Congratulations to the winners of Panchayat Elections from Kemmannu Parish.
Milarchi Lara December 2020Milarchi Lara December 2020
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Autobiography of Richard Carvalho, Barkur/Mumbai.Autobiography of Richard Carvalho, Barkur/Mumbai.
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte