Udupi brief news - 24.11.2020
Kemmannu News Network, 24-11-2020 16:54:54
ಕಲಾವಿದರ ಮಾಹಿತಿ ಆಹ್ವಾನ
ಉಡುಪಿ, ನವೆಂಬರ್ 24 (ಕರ್ನಾಟಕ ವಾರ್ತೆ): ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ‘ಯಕ್ಷೆÆÃಪಾಸಕರು’ ಎಂಬ ಶೀರ್ಷಿಕೆಯಡಿಯಲ್ಲಿ ಈಗಾಗಲೇ ಎರಡು ಸಂಪುಟಗಳನ್ನು ಹೊರತಂದಿದ್ದು, ಸೇರ್ಪಡೆಯಾಗದೇ ಇರುವ ಕಲಾವಿದರನ್ನು ಒಳಗೊಳ್ಳುವಂತೆ ಮುಂದಿನ ಸಂಪುಟವನ್ನು ತರುವ ಯೋಜನೆ ಇದೆ.
ಯಕ್ಷಗಾನರಂಗದಲ್ಲಿ ತೊಡಗಿಸಿಕೊಂಡ ವೃತ್ತಿಪರ ಕಲಾವಿದರು ಮತ್ತು ಹವ್ಯಾಸಿ ಕಲಾವಿದರ ಕುರಿತ ವ್ಯಕ್ತಿಚಿತ್ರ ಈ ಸಂಪುಟದಲ್ಲಿ ಇರುತ್ತದೆ. ಕಳೆದ ಐದು ವರ್ಷಗಳಿಂದ ಯಕ್ಷಗಾನದಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಎಲ್ಲ ಯಕ್ಷಗಾನದ ಕಲೋಪಾಸಕರೂ ಕೂಡಾ (ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಹೊರತುಪಡಿಸಿ) ತಮ್ಮ ವಿವರಗಳನ್ನು ಅಕಾಡೆಮಿಗೆ ಸಲ್ಲಿಸಬೇಕು.
ವಿವರಗಳನ್ನು ನೀಡುವಾಗ ಹೆಸರು, ಹುಟ್ಟಿದ ದಿನಾಂಕ, ತಂದೆತಾಯಿಯ ಹೆಸರು, ಗುರುಗಳು ಮತ್ತು ಕಲಿತಕೇಂದ್ರ, ಪ್ರಧಾನವಾಗಿ ಕಾಣಿಸಿಕೊಂಡ ಪಾತ್ರಗಳು, ತಿರುಗಾಟ ಮಾಡಿದ ಮೇಳಗಳು, ಹವ್ಯಾಸಿಗಳಾಗಿದ್ದಲ್ಲಿ ಸಂಸ್ಥೆ/ ತಂಡದ ಹೆಸರು, ಪ್ರದರ್ಶನಗಳನ್ನು ನೀಡಿದ ವಿವರ, ದೊರೆತ ಗೌರವ ಪುರಸ್ಕಾರಗಳು, ವಿವಾಹಿತರಾಗಿದ್ದಲ್ಲಿ ಸಂಗಾತಿ ಮತ್ತು ಮಕ್ಕಳ ಹೆಸರು, ಫೋಟೋ ಹಾಗೂ ಲೇಖನ ರೂಪದಲ್ಲಿ ಕಿರುಪರಿಚಯ ಇದ್ದಲ್ಲಿ ಅದನ್ನು ಲಗತ್ತಿಸಿ, ರಿಜಿಸ್ಟಾçರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಡಿಸೆಂಬರ್ 15 ರ ಒಳಗೆ ಕಳುಹಿಸುವಂತೆ ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿರಿಯಾರ ಗ್ರಾ.ಪಂ-ಗ್ರಾಮಸಭೆ
ಉಡುಪಿ, ನವೆಂಬರ್ 24 (ಕರ್ನಾಟಕ ವಾರ್ತೆ): ಶಿರಿಯಾರ ಗ್ರಾಮ ಪಂಚಾಯತ್‌ನ ಪ್ರಸಕ್ತ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ನವೆಂಬರ್ 27 ರಂದು ಬೆಳಗ್ಗೆ 10.30 ಕ್ಕೆ ಶಿರಿಯಾರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ
ಉಡುಪಿ, ನವೆಂಬರ್ 24 (ಕರ್ನಾಟಕ ವಾರ್ತೆ) : ಉಡುಪಿ ಜಿಲ್ಲೆಯಲ್ಲಿ ಕೋಟ್ಪಾ 2003 ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳದ ವತಿಯಿಂದ ಉಡುಪಿ ತಾಲೂಕಿನ ಮಣಿಪಾಲ ವ್ಯಾಪ್ತಿಯ ಪ್ರದೇಶಗಳಲ್ಲಿ ಶನಿವಾರ ತಂಬಾಕು ಮಾರಾಟದ ಅಂಗಡಿ, ಹೋಟೇಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ದಾಳಿ ನಡೆಸಿ ಸೆಕ್ಷನ್ 4, 6 (ಎ) ಮತ್ತು 6(ಬಿ) ಅಡಿಯಲ್ಲಿ 24 ಪ್ರಕರಣ ದಾಖಲಿಸಿ ರೂ. 4500 ದಂಡ ವಸೂಲಿ ಮಾಡಲಾಯಿತು ಹಾಗೂ ಎಲ್ಲಾ ಅಂಗಡಿ, ಹೋಟೇಲ್‌ಗಳಲ್ಲಿ ಆಹಾರ ಸುರಕ್ಷತಾ ಪರವಾನಿಗೆಯನ್ನು ಪರೀಕ್ಷಿಸಲಾಯಿತು.
ದಾಳಿಯಲ್ಲಿ ಜಿಲ್ಲಾ ಸವೇಕ್ಷಣಾಧಿಕಾರಿ ಡಾ.ವಾಸುದೇವ್, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ, ಆಹಾರ ಸುರಕ್ಷತಾ ಅಧಿಕಾರಿ ವೆಂಕಟೇಶ್, ಹಿರಿಯ ಆರೋಗ್ಯ ಸಹಾಯಕ ದೇವಪ್ಪ ಪಟಗಾರ್, ತಾಲೂಕು ದೈಹಿಕ ಪರೀವೀಕ್ಷಣಾಧಿಕಾರಿ ವಿಶ್ವನಾಥ ಬಾಯರಿ, ಹಿರಿಯ ಆರೋಗ್ಯ ನಿರೀಕ್ಷಕ ಕರುಣಾರ ವಿ, ಜಿಲ್ಲಾ ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್, ರಾಷ್ಟೀಯ ತಂಬಾಕು ನಿಯಂತ್ರಣಾ ಘಟಕದ ವತಿಯಿಂದ ಎನ್.ಟಿ.ಸಿ.ಪಿ ಜಿಲ್ಲಾ ಸಲಹೆಗಾರರಾದ ಮಂಜುಳಾ ಶೆಟ್ಟಿ ಮತ್ತು ಮಣಿಪಾಲ ಪೊಲೀಸ್ ಠಾಣೆಯ ಆರಕ್ಷಕರಾದ ನವೀನ್ ಮತ್ತಿತರರು ಉಪಸ್ಥಿತರಿದ್ದರು.
ನ. 26 ರಂದು ನಗರಸಭೆ ಸಾಮಾನ್ಯ ಸಭೆ
ಉಡುಪಿ, ನವೆಂಬರ್ 24 (ಕರ್ನಾಟಕ ವಾರ್ತೆ) : ಉಡುಪಿ ನಗರಸಭೆಯ ಸಾಮಾನ್ಯ ಸಭೆಯು ನವೆಂಬರ್ 26 ರಂದು ಬೆಳಗ್ಗೆ 10 ಗಂಟೆಗೆ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ನಿಗಮದ ಪ್ರತಿಷ್ಠಿತ ಸಾರಿಗೆಗಳಲ್ಲಿ ಪ್ರಯಾಣದರ ಕಡಿಮೆ
ಉಡುಪಿ, ನವೆಂಬರ್ 24 (ಕರ್ನಾಟಕ ವಾರ್ತೆ) : ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರಾರಸಾ.ನಿಗಮದ ವತಿಯಿಂದ ಕರ‍್ಯಾಚರಣೆಯಾಗುತ್ತಿರುವ ಪ್ರತಿಷ್ಠಿತ ಸಾರಿಗೆಗಳಾದ ರಾಜಹಂಸ, ವೋಲ್ವೋ, ನಾನ್ ಎಸಿ ಸ್ಲೀಪರ್, ಮಲ್ಟಿಆಕ್ಸ್ಲ್, ಡ್ರೀಮ್‌ಕ್ಲಾಸ್ ಸಾರಿಗೆಗಳಲ್ಲಿ ನವೆಂಬರ್ 22 ರಿಂದ ಅನ್ವಯವಾಗುವಂತೆ ಪ್ರಯಾಣ ದರದಲ್ಲಿ ಕಡಿಮೆ ಮಾಡಲಾಗಿದೆ.
ಸದರಿ ಸಾರಿಗೆಗಳಿಗೆ ಆನ್‌ಲೈನ್ ಮುಂಗಡ ಟಿಕೇಟು ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು, ತಿತಿತಿ.ಞsಡಿಣಛಿ.iಟಿ ಗೆ / ಹತ್ತಿರದ ರಿಸರ್ವೇಶನ್ ಕೌಂಟರ್ ಸಂಪರ್ಕಿಸಬಹುದು. ಸದರಿ ಸಾರಿಗೆಗಳ ಸದುಪಯೋಗವನ್ನು ಸಾರ್ವಜನಿಕ ಪ್ರಯಾಣಿಕರು ಪಡೆದುಕೊಳ್ಳುವಂತೆ ಮಂಗಳೂರು ಕರಾರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾರಸುದಾರರಿಗೆ ಸೂಚನೆ
ಉಡುಪಿ, ನವೆಂಬರ್ 24 (ಕರ್ನಾಟಕ ವಾರ್ತೆ) : ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ರಂಗಪ್ಪ (29) ಎಂಬ ವ್ಯ÷ಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ವಾರಸುದಾರರು ಇದ್ದಲ್ಲಿ ಜಿಲ್ಲಾ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ ದೂರವಾಣಿ ಸಂಖ್ಯೆ: 0820-2520555 / 9449827833 ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.
ನ. 27 ರಂದು ಐಎಎಸ್, ಕೆಎಎಸ್ ತರಬೇತಿಗೆ ಚಾಲನೆ
ಉಡುಪಿ, ನವೆಂಬರ್ 24 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 60 ದಿನಗಳ ಆನ್‌ಲೈನ್ ತರಬೇತಿ ಆಯೋಜಿಸಿದ್ದು, ನವೆಂಬರ್ 27 ರ ಬೆಳಗ್ಗೆ 11 ಗಂಟೆಗೆ ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂಪಾಷ ಬೆಂಗಳೂರಿನಿAದಲೇ ತರಬೇತಿ ಉದ್ಘಾಟಿಸಿ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆ ಕುರಿತು ಮಾಹಿತಿ ನೀಡುವರು.
ಮೈಸೂರು ನಗರ ಪೊಲೀಸ್ ಉಪ ಆಯುಕ್ತ ಡಾ. ಎ.ಎನ್ ಪ್ರಕಾಶ್ ಗೌಡ ಆನ್‌ಲೈನ್‌ನಲ್ಲಿ ಪರೀಕ್ಷಾ ಅಧ್ಯಯನ ಕ್ರಮದ ಕುರಿತು ಮಾಹಿತಿ ನೀಡುವರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅಧ್ಯಕ್ಷತೆ ವಹಿಸಲಿದ್ದು, ಕುಲಸಚಿವ ಪ್ರೊ.ಲಿಂಗರಾಜಗಾAಧಿ ಉಪಸ್ಥಿತರಿರುವರು ಎಂದು ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಳ್ಳಿ ನೀರಿನ ಶುಲ್ಕ ಪಾವತಿಗೆ ಸೂಚನೆ
ಉಡುಪಿ, ನವೆಂಬರ್ 24 (ಕರ್ನಾಟಕ ವಾರ್ತೆ) : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಸ್ತವ್ಯ / ವಾಣಿಜ್ಯ ನೀರಿನ ಬಳಕೆದಾರರು ನಳ್ಳಿ ನೀರಿನ ಜೋಡಣೆ ಬಾಬ್ತು ಪ್ರತೀ ತಿಂಗಳ ನೀರಿನ ಶುಲ್ಕಗಳನ್ನು ನಿಗಧಿತ ಅವಧಿಯೊಳಗೆ ಪಾವತಿಸುವಂತೆ ಹಾಗೂ ಬಾಕಿ ಮಾಡಿಕೊಂಡಿರುವ ನಳ್ಳಿ ನೀರಿನ ಶುಲ್ಕವನ್ನು ಡಿಸೆಂಬರ್ 11 ರ ಒಳಗೆ ಪಾವತಿಸುವಂತೆ ಸೂಚಿಸಲಾಗಿದೆ. ತಪ್ಪಿದ್ದ÷ಲ್ಲಿ ನಳ್ಳಿ ನೀರಿನ ಜೋಡಣೆಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರು ಇದಕ್ಕೆ ಅವಕಾಶ ಕೊಡದೇ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟನೆ ತಿಳಿಸಿದೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey of John Henry Almeida (71 years) | LIVE from Udyavara

Final Journey of Mrs. Severine Pais (85 years) | LIVE from Milagres, Kallianpur, Udupi

Final Journey of Mrs Lennie Saldanha (89 years) | LIVE from Kemmannu | Udupi

Final Journey of Zita Lewis (77 years) | LIVE from Kallianpur, Udupi

Final Journey of Henry Andrade (83 years) | LIVE from Kemmannu

Final Journey of Mr. Leo Britto (65 years) | LIVE from Mother of Sorrows Church, Udupi

Mount Rosary Church - Rozaricho Gaanch May 2025 Issue

Final Journey of Juliana Machado (93 years) | LIVE from Udyavara | Udupi

Final Journey of Charles Pereira (78 years) | LIVE from Kemmannu

Milarchi Laram, Milagres Cathedral, Kallianpur, Diocese of Udupi, Bulletin - April 2025

Holy Saturday | St. Theresa Church, Kemmannu

Final Journey of Albert Lewis (85years) | LIVE From St Theresa’s Church Kemmannu | Udupi

Final Journey of Bernard G D’Souza | LIVE from Moodubelle

Earth Angels Kemmannu Unite: Supporting Asha Fernandes on Women’s Day

Final Journey of Joseph Peter Fernandes (64 years) | LIVE From Milagres, Kallianpur, Udupi

Milagres Cathedral, Kallianpur, Udupi - Parish Bulletin - January 2025 Issue

Rozaricho Gaanch 2024 December Issue - Mount Rosary Church, Santhekatte

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Naturya - Taste of Namma Udupi - Order NOW

Focus Studio, Near Hotel Kidiyoor, Udupi


Earth Angels - Kemmannu Since 2023

Click here for Kemmannu Knn Facebook Link
Sponsored Albums
Exclusive
Mangalorean Teen Feryl Rodrigues Shines as May Queen 1st Runner-Up at Indian Club Bahrain [Video]

A Saintly Shepherd of Our Times: A Tribute to Pope Francis

Servant of God – Fr Alfred Roche, Barkur -Closing ceremony of Birth Centenary Celebrations.

"Raav Sadanch" – A Konkani Musical Masterpiece by Young Prodigy Renish Tyson Pinto, Barkur Inspires Youth to Chase Their Passions.

Bishop Rt. Rev. Dr. Gerald Isaac Lobo, Offers the Solemn Thanksgiving Jubilee Mass, in Milagres Cathedral

GOLDEN YEARS, HAPPIER TOGETHER….by P. Archibald Furtado

Parish Level inaugural Badminton Little Flower Cup 2024 held in Kemmannu.

Udupi: Foundation stone laid for the SVP sponsored new house at Kemmannu

KAMBALA – A FORGOTTEN SPORT OF YESTER YEARS…..
