ಹಿರಿಯ ಸಾಹಿತಿ-(EX- Chairman of Bharat Bank) ಎಂ.ಬಿ ಕುಕ್ಯಾನ್ ನಿಧನ


Rons Bantwal
Kemmannu News Network, 09-01-2021 11:36:03


Write Comment     |     E-Mail To a Friend     |     Facebook     |     Twitter     |     Print


Former Chairman of Bharat Bank - M.B Kuckian EXPIRED

MUMBAI (RBI), July 9: The Billawara Association Mumbai its former Vice President and Former Chairman & Director of Bharat Co-operative Bank (Mumbai) Limited, Billawara Associations Akshay Monthly’s Honorary Editor Mr. M. B Kuckian (85.) died Today early Morning at a brief illness at Fortis Hospital in Navi Mumbai.

Mahabala Bhooba Kuckian (knowingly M.B Kuckian), a progressive thinker, journalist, poet, storyteller, columnist, businessman, donor and social worker, originally belonged to Mangalore Moodushedde Jara. After attending Mumbai’s Kuckian Hotel for the small age, he worked in canteens and was educated at night school, pursuing an MA in Kannada literature, business and business with an interest in social service.

Many works have been brought to the world of literature. He wrote and published around 16 Books. He was honored by many associations, including the Hrudayavahini Magazine Award, The Jayanti Kurkal Sahitya Award, by Chembur Karnataka Sangha, the Sadhana Shikhar Award by the Karnataka Sangha Mumbai, and the Journalist of the Year Award by the Kannada Art Center Mumbai.

He was the President of the Navi Mumbai Kannada Association, the Vice President of the Sahitya Parishad Maharashtra Unit and Patron Member of The Kannadiga Patrakartara Sangha Maharashtra.

Mahavier Amrut Building of Navi Mumbai Sanpada Palm Beach Road, where the deceased lived with his wife, Two Sons and a Girl, is enormous. M B Kuckian’s body was brought to his residence earlier in the day and placed on public display. Billawara Association Mumbai President Chandrashekhar S.Poojary  and the officers and relatives paid their last respects to Homage. The funeral was held in the evening at Chembur.

U.S Poojary Chairman, Bharat Bank, Vice Chairman Adv. Rohini J,Salyan, Former Chairman Vasudeva R.Kotyan, Managing Director Vidyananda S.Kerkera, Joint Managing Director Dinesh B.Salan, Executive Staff, Mumbai University’s Kannada Section Head Dr. G. N Upadhya, Several organizations of Officers and Dignitaries, including have expressed deep condolences.

ಹಿರಿಯ ಸಾಹಿತಿ-ಭಾರತ್ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ ಎಂ.ಬಿ ಕುಕ್ಯಾನ್ ನಿಧನ

ಮುಂಬಯಿ (ಆರ್‍ಬಿಐ), ಜ.09: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಉಪಾಧ್ಯಕ್ಷ, ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ)  ಲಿಮಿಟೆಡ್‍ನ ಮಾಜಿ ನಿರ್ದೇಶಕ, ಮಾಜಿ ಕಾರ್ಯಧ್ಯಕ್ಷ, ಬಿಲ್ಲವರ ಅಸೋಸಿಯೇಶನ್‍ನ ಮುಖವಾಣಿ ಅಕ್ಷಯ ಮಾಸಿಕದ ಗೌರವ ಪ್ರಧಾನ ಸಂಪಾದಕ ಎಂ.ಬಿ ಕುಕ್ಯಾನ್ (85.) ಇಂದಿಲ್ಲಿ ಶನಿವಾರ ಮುಂಜಾನೆ ನವಿ ಮುಂಬಯಿ ಇಲ್ಲಿನ ಫೆÇೀರ್ಟಿಸ್ ಆಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಬೃಹನ್ಮುಂಬಯಿ ಅಲ್ಲಿನ ಪ್ರಗತಿಪರ ಚಿಂತನಾ ಸಾಹಿತಿ, ಪತ್ರಕರ್ತ, ಕವಿ, ಕಥೆಗಾರ, ಅಂಕಣಕಾರ, ಉದ್ಯಮಿ, ದಾನಿ ಮತ್ತು ಸಮಾಜ ಸೇವಕರಾಗಿದ್ದ ಮಹಾಬಲ ಬೂಬ ಕುಕ್ಯಾನ್ (ಎಂ.ಬಿ ಕುಕ್ಯಾನ್) ಮೂಲತಃ ಮಂಗಳೂರು ಮೂಡುಶೆಡ್ಡೆ  ಜಾರದ ಮನೆತನದರು. 1950ನೇ ವರ್ಷ ಮುಂಬಯಿ ಸೇರಿದ್ದ ಕುಕ್ಯಾನ್ ಹೊಟೇಲು ನಂತರ ಕ್ಯಾಂಟೀನುಗಳಲ್ಲಿ ದುಡಿಯುತ್ತಾ ರಾತ್ರಿ ಶಾಲೆಯಲ್ಲಿ ಶಿಕ್ಷಣ ಪೂರೈಸಿ, ದುಡಿಮೆ, ಉದ್ಯಮಯೊಂದಿಗೆ ಸಾಹಿತ್ಯದಲ್ಲಿ ಎಂ.ಎ, ಸಮಾಜ ಸೇವೆಯಲ್ಲಿ ಆಸಕ್ತಿ ತೋರಿಸಿದ್ದÀರು.

ಕನ್ನಡ ಸಾಹಿತ್ಯ ಲೋಕಕ್ಕೆ ಅನೇಕ ಕೃತಿಗಳನ್ನು ಬೆಳಕಿಗೆ ತಂದಿದ್ದಾರೆ. ಸೌಗಂಧಿಕ, ಪಾವಾಣೆ, ಸೌರಭ, ಪೂವಕ್ಕನ ತೂಟೆ, ಸೌಪರ್ಣಿಕ, ಮೋಸದ ಬೀದಿಗಳು, ಸಾಮಾಯಿಕ, ಮೋಸದ ತಿರುವುಗಳು, ಸಾಂಪ್ರತ, ಮೋಸದ ಮುಖಗಳು, ಸಂಪಾದಿತ ಕೃತಿ (ಅಪೂರ್ವ ಸಮಾಜ ಸೇವಕ, ಕಲಾ ಪೆÇೀಷಕ ಜಯ ಸಿ.ಸುವರ್ಣರ ಬದುಕು ಮತ್ತು ಸಾಧನೆ 2010), ಸಂಜೀವನ, ಸಪ್ತಸ್ವರ, ಸುಮ ಸೌಸವ, ನೆನಪಿನ ಬೆಳಕಲ್ಲಿ, ಮುಕ್ಕಾಲ್, ನವಹೆಜ್ಜೆ, ಸಚೇತನ ಮೊದಲಾದ ಕವನ, ಅಂಕಣ ಬರಹ, ಕಥೆಸಂಕಲನ ಪುಸ್ತಕಗಳೊಂದಿಗೆ (ಸುಮಾರು 16 ಕೃತಿಗಳು) ಕುಕ್ಯಾನ್ ಸಾಹಿತ್ಯ ಲೋಕವನ್ನು ಪೆÇೀಷಿಸಿದ್ದಾರೆ.

ಹೃದಯವಾಹಿನಿ ಪತ್ರಿಕೆಯಿಂದ ಹೃದಯವಂತರು, ಚೆಂಬೂರು ಕರ್ನಾಟಕ ಸಂಘ ಸಂಯೋಜಿತ ಜಯಂತಿ ಕುರ್ಕಾಲ್ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಂಘ ಮುಂಬಯಿ ವತಿಯಿಂದ ಸಾಧನಾ ಶಿಖರ ಪ್ರಶಸ್ತಿ, ಕನ್ನಡ ಕಲಾ ಕೇಂದ್ರ ಮುಂಬಯಿ ಮುಖೇನ ವರ್ಷದ ಶ್ರೇಷ್ಠ ಪತ್ರಕರ್ತ ಪ್ರಶಸ್ತಿಗಳನ್ನು ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಸನ್ಮಾನ ಗೌರವಕ್ಕೆ ಪಾತ್ರರಾಗಿದ್ದರು.  

ನವಿ ಮುಂಬಯಿ ಕನ್ನಡ ಸಂಘದಲ್ಲಿ ಕಾರ್ಯಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತ್ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷರಾಗಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಜೀವ ಸದಸ್ಯರಾಗಿ, ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ ಪ್ರಾಯೋಜತ್ವದ ಗುರು ನಾರಾಯಣ ರಾತ್ರಿ ಶಾಲೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾಥಿರ್sಗಳಿಗೆ ಸ್ವರ್ಣ ಪದಕ ಪ್ರಾಯೋಜಕರಾಗಿ, ಬಡ ವಿದ್ಯಾಥಿರ್sಗಳ ದತ್ತಿ ಸ್ವೀಕಾರದ ಅಮೃತ ವಿದ್ಯಾ ನಿಧಿ ಕೊಡುಗೆಗಳೊಂದಿಗೆ ಕೊಡುಗೈದಾನಿಯಾಗಿ ಜನಾನುರೆಣಿಸಿದ್ದರು.

ನವಿ ಮುಂಬಯಿ ಸಾನ್ಪಾಡಾ ಪಾಮ್ ಬೀಚ್ ರೋಡ್ ಇಲ್ಲಿನ ಮಹಾವೀರ್ ಅಮೃತ್ ಇದರಲ್ಲಿ ವಾಸವಾಗಿದ್ದ ಮೃತರು ಪತ್ನಿ, ಎರಡು ಗಂಡು  ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಎಂ.ಬಿ ಕುಕ್ಯಾನ್ ಅವರ ಪಾರ್ಥೀವ ಶರೀರವನ್ನು ಪೂರ್ವಾಹ್ನ ಅವರ ನಿವಾಸಕ್ಕೆ ತರಲಾಗಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ, ಮತ್ತು ಪದಾಧಿಕಾರಿಗಳು, ಬಂಧುಗಳು ಅಂತಿಮ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಅಂತ್ಯಕ್ರಿಯೆಯು ಸಂಜೆ ಚೆಂಬೂರು ಇಲ್ಲಿನ ರುದ್ರಭೂಮಿಯಲ್ಲಿ ನೆರವೇರಿಸಲ್ಪಟ್ಟಿತು.

ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಯು.ಎಸ್ ಪೂಜಾರಿ, ಉಪ ಕಾರ್ಯಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾ ನ್, ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ಆಡಳಿತ ನಿರ್ದೇಶಕ ವಿದ್ಯಾನಂದ ಎಸ್.ಕರ್ಕೇರ, ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ.ಸಾಲ್ಯಾನ್, ಉನ್ನತಾಧಿಕಾರಿಗಳು, ನೌಕರವೃಂದ, ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Monti Fest - 2025 | Nativity of Mother Mary | St.
View More

Milarchi Lara, Milagres Cathedral, Kallianpur, Parish Bulletin - September 2025Milarchi Lara, Milagres Cathedral, Kallianpur, Parish Bulletin - September 2025
Final Journey of Mrs. Elizabeth D’Souza (91 years) | LIVE from UdupiFinal Journey of Mrs. Elizabeth D’Souza (91 years) | LIVE from Udupi
ಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.comಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.com
Monthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church KemmannuMonthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church Kemmannu
Final Journey of Philip Saldhana (64 years) | LIVE from Kanajar | UdupiFinal Journey of Philip Saldhana (64 years) | LIVE from Kanajar | Udupi
Feast of Assumption & Independence Day Celebration | St. Theresa Church, KemmannuFeast of Assumption & Independence Day Celebration | St. Theresa Church, Kemmannu
Moiye Krista Maye | ಮರಿಯೆ ಕ್ರಿಸ್ತಾ ಮಾಯೆ | 50 years Anniversary Video | Fr Francis CornelioMoiye Krista Maye | ಮರಿಯೆ ಕ್ರಿಸ್ತಾ ಮಾಯೆ | 50 years Anniversary Video | Fr Francis Cornelio
Final Journey of Golbert Suares (65 years) | LIVE from Barkur | UdupiFinal Journey of Golbert Suares (65 years) | LIVE from Barkur | Udupi
Final Journey of Gretta Suares (69 years) | LIVE from BarkurFinal Journey of Gretta Suares (69 years) | LIVE from Barkur
Final Journey of Asha Fernandes (43 years) | LIVE from Thottam | UdupiFinal Journey of Asha Fernandes (43 years) | LIVE from Thottam | Udupi
Yuva Samagam 2025 | ICYM | LIVE from Sastan, UdupiYuva Samagam 2025 | ICYM | LIVE from Sastan, Udupi
Final Journey of John Henry Almeida (71 years) | LIVE from UdyavaraFinal Journey of John Henry Almeida (71 years) | LIVE from Udyavara
Final Journey of Mrs. Severine Pais (85 years) | LIVE from Milagres, Kallianpur, UdupiFinal Journey of Mrs. Severine Pais (85 years) | LIVE from Milagres, Kallianpur, Udupi
Final Journey of Mrs Lennie Saldanha (89 years) | LIVE from Kemmannu | UdupiFinal Journey of Mrs Lennie Saldanha (89 years) | LIVE from Kemmannu | Udupi
Final Journey of Zita Lewis (77 years) | LIVE from Kallianpur, UdupiFinal Journey of Zita Lewis (77 years) | LIVE from Kallianpur, Udupi
Final Journey of Henry Andrade (83 years) | LIVE from KemmannuFinal Journey of Henry Andrade (83 years) | LIVE from Kemmannu
Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi