ವಿವಿ ಸಂಧ್ಯಾ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ


Kemmannu News Network, 15-01-2021 12:07:43


Write Comment     |     E-Mail To a Friend     |     Facebook     |     Twitter     |     Print


ವಿವಿ ಸಂಧ್ಯಾ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

ಮಂಗಳೂರು, ಜನವರಿ 12 : ನಗರದ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ಜನೋತ್ಸವದ ಪ್ರಯುಕ್ತ “ವ್ಯಕ್ತಿತ್ವ ನಿರ್ಮಾಣದಲ್ಲಿ ವಿವೇಕಾನಂದರ ಚಿಂತನೆಗಳು” ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಕೋವಿಡ್ 19 ನಿಯಮಾವಳಿಗಳನ್ನು ಅನುಸರಿಸಿ ಹಾಗೂ ನೇರ ಪ್ರಸಾರವನ್ನು ಗೂಗಲ್ ಮೀಟ್ ಆನ್‍ಲೈನ್ ವೇದಿಕೆಯ ಮೂಲಕ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ, ಶ್ರೀ ನಾರಾಯಣ ಗುರು ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಕೇಶವ ಬಂಗೇರ ತಮ್ಮ ವಿಶೇಷ ಉಪನ್ಯಾಸದಲ್ಲಿ ಯುವ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಸ್ವಾಮಿ ವಿವೇಕಾನಂದರ ಸಂದೇಶಗಳ ಮಹತ್ವ ಹಾಗೂ ಅವುಗಳ ಪ್ರಭಾವವನ್ನು ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಆಪ್ತ ಸಮಾಲೋಚಕಿ ಮಮತ ಅಚಾರ್ ಮಾತನಾಡಿ, ವಿದ್ಯಾರ್ಥಿಗಳು ಪದವಿಗಳನ್ನು ಕಲಿಯುವುದರ ಜೊತೆಗೆ ಸ್ವಾಮಿ ವಿವೇಕಾನಂದರ ತತ್ವಗಳು, ಅವರಲ್ಲಿದ್ದ ಆತ್ಮ ವಿಶ್ವಾಸ, ಆದರ್ಶಗಳನ್ನು ನಮ್ಮ ಜೀವನದಲ್ಲಿಯೂ ಬೆಳೆಸಬೇಕು. ಯುವ ದಿನಾಚರಣೆಯಂತಹ ಕಾರ್ಯಕ್ರಮಗಳು ಆತ್ಮಸ್ಥೈರ್ಯ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುವಕರಿಗೆ ಸ್ಪೂರ್ತಿಯಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಸುಭಾಷಿಣಿ ಶ್ರೀವತ್ಸರವರು ವಿವೇಕಾನಂದರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಪ್ರತೀ ದಿನ ಶಕ್ತಿಯಾಗಿ ಬೆಳೆದು, ಸುಂದರ ಸಮಾಜವನ್ನು ಕಟ್ಟೋಣ ಎಂದರು.

ಕಾರ್ಯಕ್ರಮದ ಪ್ರಾರ್ಥನೆಯನ್ನು ವಿದ್ಯಾರ್ಥಿ ರಂಜಿತ್ ನಿರ್ವಹಿಸಿ, ಉಪನ್ಯಾಸಕ ವೆಂಕಟೇಶ್ ನಾಯಕ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಉಪನ್ಯಾಸಕಿ ಮಧುಶ್ರೀ ಜೆ. ಶ್ರೀಯಾನ್ ಸ್ವಾಗತಿಸಿ, ವಿದ್ಯಾರ್ಥಿ ತರುಣ್ ಬೋಳಾರ್ ವಂದಿಸಿ, ಉಪನ್ಯಾಸಕಿ ಕಾವ್ಯಾ ಪಿ. ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

Obituary: Theresa Pinto (83), W/o. Late Justin Pinto, Bailoor, Udupi.Obituary: Theresa Pinto (83), W/o. Late Justin Pinto, Bailoor, Udupi.
’You Raise Me Up’ on YouTube recorded at Milagres Cathedral by youths of Udupi Parish.’You Raise Me Up’ on YouTube recorded at Milagres Cathedral by youths of Udupi Parish.
Kemmannu Church Annoucements.Kemmannu Church Annoucements.
Admissions Open to Milagres English Medium & Kindergarten - LKG to IXAdmissions Open to Milagres English Medium & Kindergarten - LKG to IX
Congratulations to Lavanya - State level 1st place in Painting.Congratulations to Lavanya - State level 1st place in Painting.
Ready Office Space For Bank on Highway Side - Location : Udupi - SanthekatteReady Office Space For Bank on Highway Side -  Location : Udupi - Santhekatte
HotteTumba Fish Court - UdupiHotteTumba Fish Court - Udupi
Rozaricho Gaanch - December 2020Rozaricho Gaanch - December 2020
Milarchi Lara December 2020Milarchi Lara December 2020
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte