ಡಾ| ಬಿ.ಯಶೋವರ್ಮ ಅಕಾಲಿಕ ನಿಧನ ದಿಂದ ಆಘಾತವಾಗಿದೆ - ಡಿ.ವೀರೇಂದ್ರ ಹೆಗ್ಗಡೆ
Kemmannu News Network, 23-05-2022 18:02:31
ಡಾ| ಬಿ.ಯಶೋವರ್ಮ ಅಕಾಲಿಕ ನಿಧನದಿಂದ ಆಘಾತವಾಗಿದೆ - ಡಿ.ವೀರೇಂದ್ರ ಹೆಗ್ಗಡೆ
ಮುಂಬಯಿ (ಆರ್‍ಬಿಐ), ಮೇ.23: ನಮ್ಮ ಬಂಧು ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಆಗಿದ್ದ ಡಾ| ಬಿ.ಯಶೋವರ್ಮ ಅವಾರ ಅಕಾಲಿಕ ನಿಧನದಿಂದ ಆಘಾತವಾಗಿದೆ. ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ ಯಶೋವರ್ಮನು ಸ್ನೇಹಜೀವಿ ಹಾಗೂ ಪರಿಶ್ರಮಪಟ್ಟು ಯಾವುದೇ ಕಾರ್ಯವನ್ನು ಮಾಡುತ್ತಿದ್ದ ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಪ್ರಗತಿಯಲ್ಲಿ ಅವನ ಅಪಾರ ಶ್ರಮವಿದೆ ಮತ್ತು ಕೊಡುಗೆ ಇದೆ. ಸಮಸ್ಯೆಗಳು ಬಂದಾಗ ಕುಗ್ಗದೆ, ಯಶಸ್ಸು ಬಂದಾಗ ಹಿಗ್ಗದೆ ಸಮಚಿತ್ತವನ್ನು ಕಾಪಾಡಿಕೊಂಡು ಹೋಗುವ ನಿಜವಾದ ಜ್ಞಾನಿಯಾಗಿದ್ದ ಎನ್ನಬಹುದು. ಸಾರ್ವಜನಿಕ ಜೀವನದಲ್ಲಿ ತನ್ನನ್ನು ತೊಡಗಿಸಿಕೊಂಡು ನಗರದ ಸ್ವಚ್ಛತೆ, ಜನತೆಯ ಏಳಿಗೆಗಾಗಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಅಜಾತಶತ್ರು ಎನಿಸಿಕೊಂಡಿದ್ದಾನೆ.
ಅವರ ನಿಧನ ನಮ್ಮ ಕುಟುಂಬಕ್ಕೂ, ಕ್ಷೇತ್ರಕ್ಕೂ ಎಲ್ಲಾ ಸಂಸ್ಥೆಗಳಿಗೂ ತುಂಬಲಾರದ ನಷ್ಟವಾಗಿದೆ. ಅಗಲಿದ ಆತ್ಮಶಾಂತಿಗಾಗಿ ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾಥಿರ್üಸುತ್ತೇನೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.
ನಿಧನ : ಡಾ. ಬಿ. ಯಶೋವರ್ಮ
ಉಜಿರೆ: ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಉಜಿರೆ ನಿವಾಸಿ ಡಾ. ಬಿ. ಯಶೋವರ್ಮ (67) ಭಾನುವಾರ ತಡರಾತ್ರಿ ಸಿಂಗಾಪುರದಲ್ಲಿ ನಿಧನರಾದರು.
ಅವರಿಗೆ ಪತ್ನಿ ಸೋನಿಯಾವರ್ಮ ಮತ್ತು ಇಬ್ಬರು ಪುತ್ರರು ಪೂರನ್‍ವರ್ಮ ಮತ್ತು ಕೆಯೂರ್‍ವರ್ಮ ಇದ್ದಾರೆ. ಅಲ್ಪಕಾಲದ ಅನಾರೋಗ್ಯ ಪೀಡಿತರಾದ ಅವರು ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಹೋಗಿದ್ದರು.
ಮೂಲತಃ ಮೂಡಬಿದ್ರೆ ತಾಲ್ಲೂಕಿನ ಪೆರಾಡಿ ಬೀಡು ನಿವಾಸಿಯಾದ ಅವರು ಮೂಡಬಿದ್ರೆ ಜೈನ ಹೈಸ್ಕೂಲಿನ ಕನ್ನಡ ಪಂಡಿತರೆಂದೇ ಚಿರಪರಿಚಿತರಾಗಿದ್ದ ದಿವಂಗತ ಟಿ. ರಘುಚಂದ್ರ ಶೆಟ್ಟಿ ಮತ್ತು ಪೆರಾಡಿ ಬೀಡು ಪುಷ್ಪಾವತಿ ದಂಪತಿಯ ಮಗ.
ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು ಧಾರವಾಡದಲ್ಲಿ ಜೆ.ಎಸ್.ಎಸ್. ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಬಳಿಕ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ ಬಳಿಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದರು.
ಉತ್ತಮ ವಾಗ್ಮಿ, ಶಿಸ್ತಿನ ಸಿಪಾಯಿ, ನೇರ ನಡೆ-ನುಡಿಯ ಅವರು ದಕ್ಷ ಆಡಳಿತಗಾರರಾಗಿದ್ದು, ಉಜಿರೆಯನ್ನು ಜಾಗತಿಕ ನಕಾಶೆಯಲ್ಲಿ ಗುರುತಿಸುವ ಭಗೀರಥ ಪ್ರಯತ್ನ ಮಾಡಿದ್ದಾರೆ.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾಗಿ, ಜೈನ್ ಮಿಲನ್ ಅಧ್ಯಕ್ಷರಾಗಿ, ಬೆಳ್ತಂಗಡಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾಗಿ, ಧರ್ಮಸ್ಥಳದಲ್ಲಿ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನ ಸಮಿತಿಯ ಕಾರ್ಯದರ್ಶಿಯಾಗಿ, ಮಂಗಳೂರು ವಿ.ವಿ. ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಉತ್ತಮ ಸೇವೆ ಮಾಡಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಮೌನ ಪ್ರಾರ್ಥನೆ ಬಳಿಕ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಎಲ್ಲಾ ಶಾಲಾ-ಕಾಲೇಜುಗಳಿಗೆ ಸೋಮವಾರ ರಜೆ ನೀಡಲಾಯಿತು.
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರುಗಳಾದ ಕೆ. ಹರೀಶ್ ಕುಮಾರ್ ಮತ್ತು ಕೆ. ಪ್ರತಾಪಸಿಂಹ ನಾಯಕ್, ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶ್ರೀನಾಥ್ ಎಂ.ಪಿ., ಮಾಜಿ ಶಾಸಕ ಕೆ. ವಸಂತ ಬಂಗೇರ, ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್‍ಕೃಷ್ಣ ಪಡ್ವೆಟ್ನಾಯ, ಮೊದಲಾದ ಗಣ್ಯರು, ಅಭಿಮಾನಿಗಳು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
First Holy Communion of Alena & Nathan • LIVE from Mt.Rosary Church, Santhekatte

Final Journey of Dr. Edward Lewis (66 Years) | LIVE from Bejai, Mangalore

Milarchi Lara Souvenir - Ester Issue, April 2022

Sites for Sale in Santhekatte, Thottam, Alevoor and many other places, Please contact...

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Choice Furniture vast household showroom opens at Santhekatte, Kallianpur

Focus Studio, Near Hotel Kidiyoor, Udupi


K Live Streaming

Kemmannu Channel -YouTube Click Here
Sponsored Albums
Exclusive
Sastan St. Thomas Church ready for Inauguration Today - St. Thomas the Apostle of India.

Stone inscriptions of Vijayanagara King Immadi Devaraya found at Kemmannu

FERNANDES GROUP inaugurates its Overseas office at Deira, Dubai, UAE

KEMMANNU UTSAV 2022 - A perfect family entertainer to celebrate & conclude the parish feast….

Thonse Health Centre chairman BM Zaffer gets Indian Achievers’ Award 2021

Vehicular Overpass at Santhekatte junction : Public meeting held.
‘Old Man’s Club’ – A collection of 25 selected hilarious articles by Joe Quadrus, released in Udupi…..

Udupi: Increasing Traffic at Kallianpura Santhekatte Junction - ’Nightmare to commuters’ [Video]

MONTHI FESTH at the door steps, A FLASHBACK, TRANSITION & THE CURRENT SCENARIO….
