The Unheard Architect of Indian School in Bahrain


Leeladhar Baikampady/Bahrain
Kemmannu News Network, 03-11-2014 11:24:18


Write Comment     |     E-Mail To a Friend     |     Facebook     |     Twitter     |     Print


Vasanthi Rao - The Unheard Architect of Indian School in Bahrain

Manama, Bahrain: Certainly everybody has forgotten Mrs. Vasanthi Krishna Rao, one of the founders of Indian School in Bahrain. That’s just because the authority accountable to make her recognized by all has just overlooked its responsibility up to recent past in its longstanding existence of all those 65 years. So, Mrs. Rao has remained as the unsung heroine. It’s indeed highly peculiar instance; yet true!

Mrs. Rao belonged to Mangalore and based in Mumbai, before getting married to Mr. Athavara Krishna Rao, who was working for British Petroleum in Bahrain. Soon after her marriage she moved to Bahrain to join her husband and in 1950, at the age of 20 years, she was one of the 4 determined people who involved in the founding of the prestigious Indian School in Bahrain. She was the first Headmistress of this school and served in this capacity from the year 1950 to 1960. She was very much ambitious person and hence she had visionary plans and determination to achieve her ambitions. Her aspiring plans coupled with her willpower made her truly enterprising and enabled her to be of service to the community. She was highly instrumental in setting up theIndian School that has shaped the dreams of many youths since then.

The Indian School which was established in 1950 with a strength of just 35 students, three teachers and a headmistress today boasts of a historic tradition, the seeds of which were sown more than 6 decades back. 65 years of its successful existence, the school has made significant contribution towards education excellence. It is one of the largest expatriate schools in the Arabian Gulf with strength of over 12,000 students and an enthusiastic workforce of 600 staff members. It provides educational facilities for the children of Indian origin in accordance with the syllabus of the Central Board of Secondary Education (CBSE), New Delhi.     
After rendering exemplary service of memorable 10 years, Mrs. Rao returned to India in February 1968 and continued her much-loved teaching career in Rajasthan until 1976. Undeniably she was a dedicated teacher and was recognized by all including the principal and colleagues for her diligence & dedication towards her work.

But it really pained all in the family that her contribution to the Indian School had largely gone unnoticed until the recent past. With this dejected feeling and deeply saddened by this fact, she left for her heavenly abode on 20th January 2011. The 50 years celebration went off when she was alive and no efforts were made by the school management to locate her in this electronic age.
The Indian School Chairman Mr. Abraham John and his committee has posthumously recognized her contribution and put a full page article in this year’s school souvenir and has also agreed to put her portrait in the School Library very soon. Now, at least the family is happy after the Chairman’s promise. He had also invited her son Satish Rao to Founders Day Celebration at Riffa Campus on 14th October 2014 which he unfortunately could not attend.
 
Let’s all non-resident Indians living in the Kingdom of Bahrain applaud her commendable services to the field of education in particular and to the expat community in general. This article has been inserted to pay a special tribute to such a great and noble soul. May her departed divine soul continue to rest in heavenly abode with eternal peace.

ಶಾಲಾ  ಇತಿಹಾಸದಲ್ಲೇ  ಇಲ್ಲವಾದ  ಬಹ್ರೈನ್ನ  ಇಂಡಿಯನ್  ಸ್ಕೂಲ್  ಸಂಸ್ಥಾಪಕರಲ್ಲೋರ್ವರಾದ ತುಳುವ  ಮೂಲದ  ಕನ್ನಡಿತಿ  - ವಸಂತಿ ರಾವ್

ಮನಾಮ, ಬಹ್ರೈನ್: ಸುಮಾರು 65 ವರ್ಷಗಳ ಹಿಂದೆ ಕೇವಲ ಮರುಭೂಮಿಯಂತಿದ್ದು ಅಷ್ಟೇನೂ ಸೌಲಭ್ಯಗಳಿಲ್ಲದ ಕೊಲ್ಲಿ ರಾಷ್ಟ್ರ ಬಹ್ರೈನ್ನಲ್ಲಿ ಶಿಕ್ಷಣದ ತೊಂದರೆಯನ್ನು ಅನುಭವಿಸುತ್ತಿದ್ದ ಅನಿವಾಸಿ ಭಾರತೀಯರ ಮಕ್ಕಳಿಗಾಗಿ ದಿಢೀರನೆ ಶಾಲೆಯೊಂದರ ಸ್ಥಾಪನೆಗೆ ಮುಂದಾಗುವುದೆಂದರೆ ಅದೊಂದು ಊಹಿಸಲೂ ಅಸಾಧ್ಯವಾದ ಮಾತು. ಆದರೆ ಅಸಾಧ್ಯವೆನಿಸುವ ಅಂತಹದ್ದೊಂದು ಮಹತ್ಕಾರ್ಯಕ್ಕೆ ಇಳಿದು ಸಾಧಿಸಿ ತೋರಿಸಿದ ನಾಲ್ವರಲ್ಲಿ ಆಗಷ್ಟೇ ವಿವಾಹವಾಗಿ ತನ್ನ ಪತಿಯನ್ನು ಸೇರುವುದಕ್ಕಾಗಿ ಬಹ್ರೈನ್ ದ್ವೀಪ ರಾಷ್ಟ್ರಕ್ಕೆ ಪಯಣಿಸಿದ್ದ ಮಂಗಳೂರು ಮೂಲದ ಮುಂಬೈ ನಿವಾಸಿ ವಸಂತಿ ಕೃಷ್ಣ ರಾವ್ ಅವರೂ ಓರ್ವರು. ಹೀಗಿದ್ದರೂ ಕೂಡಾ ಇಂತಹ ಓರ್ವ ಮಹಾನ್ ಸಾಧಕಿಯು ಇತ್ತೀಚಿನ ದಿನಗಳವರೆಗೂ ತನಗೆ ದಕ್ಕಬೇಕಾಗಿದ್ದ ಅರ್ಹ ಗೌರವದಿಂದ ವಂಚಿತೆಯಾಗಿ ತೆರೆಯ ಮರೆಯಲ್ಲೇ ಉಳಿದು, ನೊಂದು, ಹಾಗೆಯೇ ಅಳಿದು ಹೋದುದು ಬಹ್ರೈನ್ ವಾಸ್ತವ್ಯದ ಅನಿವಾಸಿ ಭಾರತೀಯರ ಒಂದು ದಿವ್ಯ ನಿರ್ಲಕ್ಷ್ಯಕ್ಕೆ ಮೇರು ನಿದರ್ಶನವಾಗಿದೆ. ಅದಕ್ಕೂ ಮುಖ್ಯವಾಗಿ ಈ ಘಟನೆಯು ಶಾಲಾ ಆಡಳಿತ ಮಂಡಳಿಯ ವ್ಯವಸ್ಥಿತ ಗುಂಪುಗಾರಿಕೆಗೋ ಇಲ್ಲವೇ ದುರಾದೃಷ್ಟಕರ ದುರಭಿಮಾನಕ್ಕೋ ಒಂದು ಸ್ಪಷ್ಟ ಉದಾಹರಣೆಯಾಗಿರುವಂತಿದೆ. ಅಂತೂ ಇಂತೂ ತುಳು-ಕನ್ನಡ ಮೂಲದ ಸಾಧಕಿಯೋರ್ವರು ವಿದೇಶಿ ನೆಲದಲ್ಲಿ ಗೈದ ಅಪ್ರತಿಮ ಸೇವೆ ಮತ್ತು ಸಾಧನೆಯು ಗತ ಆರು ದಶಕಗಳವರೆಗೂ ಅತ್ತ ಶಾಲಾ ಇತಿಹಾಸ ಪುಸ್ತಕದಲ್ಲೂ ಇಲ್ಲದಂತಾಗಿ, ಇತ್ತ ಅನಿವಾಸಿ ಭಾರತೀಯರ ಮಸ್ತಕದಲ್ಲೂ ಇಲ್ಲವಾಗಿ ಹೋಗಿರುವುದು ಯಾರ ಕಲ್ಪನೆಗೂ ನಿಲುಕದ ಒಂದು ಬಹು ದೊಡ್ಡ ದುರಂತವೆನಿಸಿದೆ.

ಆಗಿನ್ನೂ 20ರ ಹರೆಯದವರಾಗಿದ್ದ ವಸಂತಿ ರಾವ್ ಅವರು ಬಹ್ರೈನ್ನಲ್ಲಿ ಬ್ರಿಟಿಷ್ ಪೆಟ್ರೋಲಿಯಮ್ ಉದ್ಯೋಗಿಯಾಗಿದ್ದ ಮಂಗಳೂರಿನ ಅತ್ತಾವರ ಮೂಲದ ಕೃಷ್ಣ ರಾವ್ ಅವರನ್ನು ವರಿಸಿ ಮುಂದೆ ತನ್ನ ದಾಂಪತ್ಯ ಜೀವನವನ್ನು ಆರಂಭಿಸುವುದಕ್ಕಾಗಿ ಬಹ್ರೈನ್ ಸೇರಿದ್ದರು. 1950ರ ವರ್ಷವಾಗಿದ್ದ ಆಗ ವಿದ್ಯಾಭ್ಯಾಸಕ್ಕಾಗಿ ಅನಿವಾಸಿ ಭಾರತೀಯರ ಮಕ್ಕಳು ಪಡುತ್ತಿರುವ ಪಾಡನ್ನು ಕಂಡು ಅದಕ್ಕೊಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ವಸಂತಿ ರಾವ್ ಸಹಿತವಾಗಿ ನಾಲ್ವರು ಸಮಾನಮನಸ್ಕ ಮಹಿಳೆಯರು ಒಟ್ಟು ಸೇರಿ, ಯೋಚಿಸಿ, ಯೋಜಿಸಿ, ಮುಂದಡಿಯಿಟ್ಟು ‘ಇಂಡಿಯನ್ ಸ್ಕೂಲ್’ ಎಂಬ ನಾಮಧೇಯದೊಂದಿಗೆ ಬಹ್ರೈನ್ ದ್ವೀಪ ರಾಷ್ಟ್ರದ ಹೃದಯ ಭಾಗವಾದ ಮನಾಮದಲ್ಲಿ ಶಾಲೆಯೊಂದನ್ನು ಸ್ಥಾಪಿಸಿಯೇ ಬಿಟ್ಟರು. ಹಾಗೆ ಸ್ಥಾಪನೆಗೊಂಡ ಆ ಶಾಲೆಯಲ್ಲಿ ಆಗ ಕೇವಲ 35 ವಿದ್ಯಾರ್ಥಿಗಳಿದ್ದು, ರಾವ್ ಅವರೇ ಪ್ರಥಮ ಮುಖ್ಯೋಪಾಧ್ಯಾಯಿನಿಯಾಗಿ ಹಾಗೂ ಉಳಿದ ಮೂವರು ಸಹ-ಸಂಸ್ಥಾಪಕಿಯರು ಶಿಕ್ಷಕಿಯರಾಗಿ ಸೇವೆ ಸಲ್ಲಿಸತೊಡಗಿದರು. ಅಗಾಧ ಇಚ್ಛಾಶಕ್ತಿಯನ್ನು ಹೊಂದಿದ್ದ ಅವರು ತನ್ನ ಜವಾಬ್ದಾರಿಯ ನಿರ್ವಹಣೆಯಲ್ಲಿ ತೋರಿಸುತ್ತಿದ್ದ ನಿಷ್ಠೆ, ದಕ್ಷತೆ ಮತ್ತು ದೂರದರ್ಶಿತ್ವದಿಂದಾಗಿ ಇಡೀ  ವಿದ್ಯಾರ್ಥಿ ಸಮುದಾಯದ, ಸಹ ಶಿಕ್ಷಕರ ಮತ್ತು ಅನಿವಾಸಿ ಭಾರತೀಯರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದರು. ಉದಾತ್ತ ಗುಣ, ಉತ್ಕೃಷ್ಟ ಆಡಳಿತ ಮತ್ತು ಆದರ್ಶ ಅಧ್ಯಾಪನಕ್ಕೆ ಉತ್ತಮ ನಿದರ್ಶನವಾಗಿದ್ದ ರಾವ್ ಅವರು 1950ರಿಂದ 1960ರವರೆಗೆ ಒಟ್ಟು ಹತ್ತು ವರ್ಷಗಳಷ್ಟು ಕಾಲ ಶಾಲಾ ಮುಖ್ಯೋಪಾಧ್ಯಾಪಕಿಯಾಗಿ ಅತಿ ಪ್ರಶಂಸನೀಯ ಸೇವೆಯನ್ನು ಸಲ್ಲಿಸುವ ಮೂಲಕ ಬಹ್ರೈನ್ನಲ್ಲೊಂದು ಅನಿವಾಸಿ ಭಾರತೀಯರ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯು ಅಸ್ತಿತ್ವದಲ್ಲಿರುವುದಕ್ಕೆ ಮತ್ತು ಅನಿವಾಸಿಯರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಲಭಿಸುವುದಕ್ಕೆ ಸಂಪೂರ್ಣವಾಗಿ ಕಾರಣೀಭೂತರಾಗಿದ್ದರು. ಸ್ಫೂರ್ತಿಯ ಚಿಲುಮೆಯಾಗಿದ್ದ ಅವರು ಹೊನ್ನ ಬದುಕಿನ ಕನಸನ್ನು ಹೊತ್ತ ವಿದ್ಯಾರ್ಥಿ ಸಮುದಾಯಕ್ಕೆ ಅದನ್ನು ಸಾಕಾರಗೊಳಿಸುವ ಎಲ್ಲಾ ಸೂಕ್ತ ಮಾರ್ಗದರ್ಶನವನ್ನಿತ್ತು, ಅವರೆಲ್ಲಾ ಬಂಗಾರದ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಭರವಸೆಯ ಸೆಲೆಯಾಗಿದ್ದರು.

ಹೀಗೆ ಭಾರತೀಯ ಮೂಲದ ಮಕ್ಕಳಿಗೆ ತಥಾ ಅನಿವಾಸಿ ಭಾರತೀಯರ ಮಕ್ಕಳಿಗೆ ಶಿಕ್ಷಣವನ್ನೊದಗಿಸಲು 1950ರಲ್ಲಿ ಸ್ಥಾಪಿತವಾದ ಬಹ್ರೈನ್ನ ಈ ಇಂಡಿಯನ್ ಸ್ಕೂಲಿಗೆ ಈಗ 65ರ ಹರೆಯ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಈ ಶಾಲೆ ಈಗ ಬಹ್ರೈನ್ನಲ್ಲಿ ಅಸ್ತಿತ್ವದಲ್ಲಿರುವ ಇತರ ಶಾಲೆಗಳ ಪೈಕಿ ಅತಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಕೇವಲ 35 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಈ ಶಾಲೆಯಲ್ಲಿ ಈಗ ದಾಖಲೆಯ 12,000ದಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಗೈಯುತ್ತಿದ್ದು, ಇದು ಅಗಾಧ ವಿದ್ಯಾರ್ಥಿ ಸಮುದಾಯವನ್ನು ಹೊಂದಿರುವ ಕೊಲ್ಲಿ ರಾಷ್ಟ್ರಗಳ ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುತ್ತದೆ. ಇಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ, ಸಾಧಿಸುತ್ತಾ ಮಿಂಚುತ್ತಿದ್ದಾರೆ. ನಾಲ್ಕು ಶಿಕ್ಷಕಿಯರಿಂದ ಆರಂಭವಾದ ಅಧ್ಯಾಪನಕ್ಕೆ ಇಲ್ಲಿ ಈಗ 600 ಶಿಕ್ಷಕ ವರ್ಗದ ಮಹಾ ಬಲವಿದೆ. ನವ ದೆಹಲಿಯ ಕೇಂದ್ರೀಯ ಶಿಕ್ಷಣ ಪದ್ಧತಿಯನ್ನು ಅನುಸರಿಸುವ ಈ ಶಿಕ್ಷಣ ಸಂಸ್ಥೆಯು ಒಟ್ಟು ಆರೂವರೆ ದಶಕಗಳ ಸಾಧನೀಯ ಇತಿಹಾಸವನ್ನು ಹೊಂದಿದ್ದು, ಆ ಮೂಲಕ ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಮೌಲಿಕ ಕೊಡುಗೆಗಳನ್ನೀಯುತ್ತಾ ಬಂದು ಅದನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ.

ಇತ್ತ ಇಂಡಿಯನ್ ಸ್ಕೂಲಿನಲ್ಲಿ 1960ರವರೆಗೆ ನಿರಂತರವಾಗಿ ಹತ್ತು ವರ್ಷಗಳ ಕಾಲ ಅತಿ ಶ್ಲಾಘನೀಯ ಸೇವೆಯನ್ನು ಸಲ್ಲಿಸಿದ್ದ ವಸಂತಿ ರಾವ್ ಅವರು ಆ ನಂತರ 1968ರಲ್ಲಿ ಭಾರತ ದೇಶಕ್ಕೆ ಹಿಂತಿರುಗಿ ರಾಜಸ್ಥಾನದ ಶಾಲೆಯೊಂದರಲ್ಲಿ ತನ್ನ ನೆಚ್ಚಿನ ಅಧ್ಯಾಪನದ ವೃತ್ತಿಯನ್ನು ಮುಂದುವರಿಸುತ್ತಾ 1976ರವರೆಗೆ ಅಲ್ಲಿಯೂ ಸೇವೆ ಸಲ್ಲಿಸಿದ್ದರು. ತನ್ನ ವೃತ್ತಿಪರತೆ, ಕಾರ್ಯತತ್ಪರತೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದಾಗಿ ಅಲ್ಲಿಯೂ ಸಹೋದ್ಯೋಗಿಗಳ ಮತ್ತು ವಿದ್ಯಾರ್ಥಿ ಸಮುದಾಯದ ಹೃನ್ಮನವನ್ನು ಗೆದ್ದಿದ್ದ ರಾವ್ ಅವರು ಸರ್ವರಿಂದಲೂ ಓರ್ವ ಆದರ್ಶ ಶಿಕ್ಷಕಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದರು.

ಆದರೆ ಮಹಾ ದುರಾದೃಷ್ಟವೆಂಬಂತೆ ಇಂತಹ ಮಹೋನ್ನತ ಸಾಧಕಿ ವಸಂತಿ ರಾವ್ ಅವರನ್ನೂ, ಅವರ ಅಪ್ರತಿಮ ಸೇವೆಯನ್ನೂ ಇಂಡಿಯನ್ ಸ್ಕೂಲಿನ ಆಡಳಿತ ಮಂಡಳಿ ಹಾಗೂ ಬಹ್ರೈನ್ನ ಸಮಗ್ರ ಅನಿವಾಸಿ ಭಾರತೀಯ ಸಮುದಾಯ ಮೊನ್ನೆ ಮೊನ್ನೆಯವರೆಗೆ ಸಂಪೂರ್ಣವಾಗಿ ಮರೆತೇ ಬಿಟ್ಟಿತ್ತು. ಈ ಕೊರಗು ರಾವ್ ಅವರನ್ನು ಮಾನಸಿಕವಾಗಿ ಬಹಳ ಖಿನ್ನರನ್ನಾಗಿಸಿತ್ತು. ಆ ಶಾಲೆಯ ಸುವರ್ಣ ಮಹೋತ್ಸವವೂ ಅವರ ಕಣ್ಣೆದುರಲ್ಲೇ ಅತಿ ಸಂಭ್ರಮದಿಂದ ಜರುಗಿ ಆ ಸಂದರ್ಭದಲ್ಲಿ ಇತರ ಎಲ್ಲಾ ಸಂಸ್ಥಾಪಕಿಯರನ್ನು ಗೌರವಿಸಲಾಯಿತಾದರೂ ರಾವ್ ಅವರನ್ನು ಮಾತ್ರ ಸಂಪೂರ್ಣವಾಗಿ ಮರೆತು ಬಿಡಲಾಗಿತ್ತು. ಈ ಎಲ್ಲಾ ನಿರ್ಲಕ್ಷ್ಯದ ಘಟನೆಗಳಿಂದಾಗಿ ಅತೀವವಾಗಿ ನೊಂದು ಹೋಗಿದ್ದ 57ರ ಹರೆಯದ ಅವರು ಕೊನೆಗೆ ಆ ವೇದನೆಯನ್ನು ತನ್ನ ಮನದಾಳದಲ್ಲಿಟ್ಟುಕೊಂಡೇ 2011ರ ಜನವರಿ 20ರಂದು ವಿಧಿವಶರಾದರು.

ಈ ಮಧ್ಯೆ ಇಂಡಿಯನ್ ಸ್ಕೂಲಿನ ಈಗಿನ ಆಡಳಿತ ಮಂಡಳಿಯು ದಿಢೀರನೆ ಎಚ್ಚೆತ್ತು ರಾವ್ ಅವರನ್ನು ಮರಣೋತ್ತರವಾಗಿ ಗುರುತಿಸಲು ನಿರ್ಧರಿಸಿರುವುದು ಈ ಅತ್ಯಂತ ಖೇದಕರ ಘಟನೆಯ ಅಂತಿಮದಲ್ಲಿ ನಮಗೆ ಕಾಣುವ ಒಂದು ತೃಪ್ತಿಕರ ತಿರುವು. ಆಡಳಿತ ಮಂಡಳಿಯ ನಿರ್ದೇಶನದಂತೆ ಈಗ ದಿ. ವಸಂತಿ ಕೃಷ್ಣ ರಾವ್ ಅವರು ಶಾಲೆಗೆ ನೀಡಿರುವ ಒಟ್ಟು ಸೇವೆ ಮತ್ತು ಕೊಡುಗೆಗಳನ್ನು ವಿವರಿಸುವ ಒಂದು ಲೇಖನವನ್ನು ಶಾಲೆಯ ಈ ಶೈಕ್ಷಣಿಕ ವರ್ಷದ ಸ್ಮರಣ ಸಂಚಿಕೆಯಲ್ಲಿ ಈಗಾಗಲೇ ಅಳವಡಿಸಲಾಗಿದೆ. ಅದೇ ರೀತಿ ಅತಿ ಶೀಘ್ರದಲ್ಲಿ ಅವರ ಭಾವಚಿತ್ರವನ್ನು ಶಾಲೆಯ ಗ್ರಂಥಾಲಯದಲ್ಲಿ ಅನಾವರಣಗೊಳಿಸುವ ಭರವಸೆಯನ್ನೂ ಶಾಲಾ ಆಡಳಿತ ಮಂಡಳಿಯು ಬಹ್ರೈನ್ನಲ್ಲಿರುವ ರಾವ್ ಅವರ ಕುಟುಂಬ ವರ್ಗಕ್ಕೆ ನೀಡಿರುತ್ತದೆ. ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ಜರುಗಿದ ಶಾಲೆಯ ಸಂಸ್ಥಾಪಕರ ದಿನಾಚರಣೆಯ ಸಂದರ್ಭದಲ್ಲಿ ದಿ. ವಸಂತಿ ಕೃಷ್ಣ ರಾವ್ ಅವರ ಪರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವವನ್ನು ಸ್ವೀಕರಿಸುವಂತೆ ಅವರ ಕುಟುಂಬಕ್ಕೆ ಆದರಪೂರ್ವಕ ಆಹ್ವಾನವನ್ನೂ ನೀಡಿದೆ. ತಮ್ಮ ನಿರಂತರ ಹೋರಾಟದ ಫಲಶ್ರುತಿಯಾಗಿ ಕೊನೆಗೂ ಶಾಲೆಯ ಆಡಳಿತ ಮಂಡಳಿಯು ದಿ. ರಾವ್ ಅವರನ್ನು ಗುರುತಿಸಿ ಗೌರವಿಸುತ್ತಿರುವುದನ್ನು ಕಂಡು ಅವರ ಕುಟುಂಬಿಕರು ಈಗ ಸಂತೃಪ್ತ ಭಾವವನ್ನು ತಳೆದಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಬಹ್ರೈನ್ ವಾಸ್ತವ್ಯದ ಸಮಸ್ತ ಅನಿವಾಸಿ ಭಾರತೀಯರೂ ಕೂಡಾ ತುಳುವ ಮೂಲದ ಕನ್ನಡಿತಿ ದಿ. ವಸಂತಿ ಕೃಷ್ಣ ರಾವ್ ಅವರ ಸೇವೆ ಮತ್ತು ಸಾಧನೆಗಳನ್ನು ಸ್ಮರಿಸುತ್ತಾ ಅಗಲಿದ ಅವರ ದಿವ್ಯ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ. ದಿ. ರಾವ್ ಅವರ ಸಂಸ್ಮರಣೆಯ ಈ ಮಹತ್ವದ ಸಂದರ್ಭದಲ್ಲಿ ಮೇಲಿನ ಲೇಖನವನ್ನೂ ದಿ.  ರಾವ್ ಅವರಿಗೆ ಗೌರವದಿಂದ ಸಮರ್ಪಿಸುತ್ತಾ  ಈ ಮೂಲಕ ಅತ್ಯಾದರದ ನುಡಿ ನಮನವನ್ನೂ ಸಲ್ಲಿಸಲಾಗಿದೆ.     
ವರದಿ: ಲೀಲಾಧರ್ ಬೈಕಂಪಾಡಿ, ಬಹ್ರೈನ್.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi