ಭವಾನಿ ಫೌಂಡೇಶನ್ ಮುಂಬಯಿ ದ್ವಿತೀಯ ವಾರ್ಷಿಕ ಮಹಾಸಭೆ


Rons Bantwal
Kemmannu News Network, 06-01-2018 05:54:04


Write Comment     |     E-Mail To a Friend     |     Facebook     |     Twitter     |     Print


ಭವಾನಿ ಫೌಂಡೇಶನ್ ಮುಂಬಯಿ ದ್ವಿತೀಯ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನ ಸ್ವರ್ಗ ಪ್ರಾಪ್ತಿಗೆ ಜನಸೇವೆಯೇ ಸನ್ಮಾರ್ಗವಾಗಿದೆ : ಚೆಲ್ಲಡ್ಕ ಕೆ.ಡಿ ಶೆಟ್ಟಿ 

ಮುಂಬಯಿ, ಜ.04: ನಮ್ಮ ಜನ್ಮ ಕರ್ನಾಟಕದಲ್ಲಾದರೂ ನಮ್ಮ ಜೀವನ ಮಹಾರಾಷ್ಟ್ರದಲ್ಲಿ ಪಾವನವಾಗಿದೆ. ಬರೇ ರೊಟ್ಟಿಯನ್ನೇ ಪ್ರಸಾದವಾಗಿ ತಿಂದು ದೊಡ್ಡವನಾದ ನನಗೆ ಧೈರ್ಯ ತುಂಬಿದವರೇ ನನ್ನ ಜನನಿದಾತೆ. ಸೇವೆಯಿಂದ ಸ್ವರ್ಗ ಕಾಣಲು ಪ್ರೇರೇಪಿಸುತ್ತಾ ಒಳ್ಳೆಯ ಸಂಸ್ಕಾರ ನೀಡಿದ ಮಾತೆಗೆ ಋಣಿಯಾಗಿ ಅವರನ್ನು ಸದಾ ಸ್ಮರಣೀಯವಾಗಿಸಲು ನಮ್ಮ ಸೇವೆಯನ್ನು ಮಾತೃನಾಮದಲ್ಲೇ ಭವಾನಿ ಫೌಂಡೇಶನ್ ಹುಟ್ಟುಹಾಕಿದ್ದೇವೆ. ಸ್ವರ್ಗ ಪ್ರಾಪ್ತಿಗೆ ಜನಸೇವೆಯೇ ಸನ್ಮಾರ್ಗವಾಗಿದೆ ಎನ್ನುವುದು ನನ್ನ ಅಭಿಮತ. ಆದುದರಿಂದ ರಾಷ್ಟ್ರಭೂಮಿಗೆ ಖುಷಿ ಖುಷಿಯಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆ ಎಂದೂ ತೋರ್ಪಡೆಗೆ ಸೇವೆ ಮಾಡಲಾರದು. ಇದೇನಿದ್ದರೂ ಎಲ್ಲವೂ ಮಾತೆಯ ಕೃಪೆ . ಇದು ನಮ್ಮ ಆರಂಭ ಅಷ್ಟೇ. ಮಾಡಬೇಕಾದ ಸೇವೆ ಬಹಳಷ್ಟಿದೆ ಎಂದು ಭವಾನಿ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋಧರ ದೇರಣ್ಣ ಶೆಟ್ಟಿ (ಕೆ.ಡಿ ಶೆಟ್ಟಿ) ನುಡಿದರು.

ಇಂದಿಲ್ಲಿ ಗುರುವಾರ ಸಂಜೆ ಕುರ್ಲಾ ಪೂರ್ವದಲ್ಲಿನ ಬಂಟರ ಸಂಘದ ರಂಜನಿ ಸುಧಾಕರ್ ಎಸ್.ಹೆಗ್ಡೆ ಅನೆಕ್ಸ್ ಕಟ್ಟಡದ ವಿಜಯಲಕ್ಷ್ಮೀ ಮಹೇಶ್ ಶೆಟ್ಟಿ (ಬಾಬಾ ಗ್ರೂಪ್) ಕಿರು ಸಭಾಗೃಹದಲ್ಲಿ ನಡೆಸಲ್ಪಟ್ಟ ಫೌಂಡೇಶನ್‍ನ ದ್ವಿತೀಯ ವಾರ್ಷಿಕ ಮಹಾಸಭೆ ಅಧ್ಯಕ್ಷತೆಯನ್ನುದ್ದೇಶಿಸಿ ಕೆ.ಡಿ ಶೆಟ್ಟಿ ಮಾತನಾಡಿದರು.

ಫೌಂಡೇಶನ್‍ನ ವಿಶ್ವಸ್ಥ ಸದಸ್ಯರುಗಳಾದ ಸರಿತಾ ಕುಸುಮೋಧರ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ  ಪಂಡಿತ್ ನÀವೀನ್ಚÀಂದ್ರ ಆರ್.ಸನೀಲ್,  ಚೆಲ್ಲಡ್ಕ ರಾಧಾಕೃಷ್ಣ ಡಿ.ಶೆಟ್ಟಿ ವೇದಿಕೆಯಲ್ಲಿದ್ದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯನ್ನಿತ್ತರು.

ವಿಶ್ವಸ್ಥರ ಮಂಡಳಿಯ ಸಹಕರ ಅತ್ಯಾಮೂಲ್ಯವಾಗಿದೆ. ವಿನೂತನ ತಾಕತ್ತು ದುರ್ಬಳಕೆ ಆಗಬಾರದು. ಜೀವಜ್ಞಾನ್ ಮಹಾರಾಷ್ಟ್ರದ್ದೂ, ತಮ್ಮೆಲ್ಲರ ಸಹಯೋಗ ಅನುಗ್ರಹ ಬೇಕಾಗಿದೆ. ಮಾತೆಯ ಹೆಸರನ್ನೀಡಿದರು ಮುನ್ನಡೆಯುತ್ತೇನೆ. ತಮ್ಮಲ್ಲರ ತಾಕತ್ತು ನನ್ನನ್ನು ಪೆÇ್ರೀತ್ಸಾಹಿಸಿದೆ.ಲೆಕ್ಕ ಪತ್ರ ಸರಿ ಇದ್ದರೆ ಎಲ್ಲವೂ ಸರಿ ಲೆಕ್ಕವ್ಯ್ ಬೆನ್ನು ಮೂಲೆ ಇದ್ದಂತೆ ಆವಾಗಲೆ ಸಂಸ್ಥೆಗಳ ಮುನ್ನಡೆ ಸುಲಲಿತವಾಗಿದೆ ಎನ್ನುತ್ತಾ ತನ್ನನ್ನು ಇಷ್ಟೆತ್ತರಕ್ಕೆ ಬೆಳೆಸಿ ಬಾಳಿಗೆ ಪ್ರೇರಕರಾದ ಶಿಕ್ಷಕರು, ಬಂಧು-ಹಿತೈಷಿಗಳ ಸಹಯೋಗವನ್ನು ಕೆ.ಡಿ ಶೆಟ್ಟಿ ಸ್ಮರಿಸಿದರು

ಸಭೆಯ ಮಧ್ಯಾಂತರದಲ್ಲಿ ಪದ್ಮನಾಭ ಎಸ್.ಪಯ್ಯಡೆ, ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ (ಪತ್ನಿ ಚಂದ್ರಿಕಾ ಹರೀಶ್ ಮತ್ತು ಸುಪುತ್ರಿ ಸನ್ನಿಧಿ ಶೆಟ್ಟಿ), ಬಂಟ್ಸ್ ನ್ಯಾಯ ಮಂಡಳಿ ಕಾರ್ಯಧ್ಯಕ್ಷ ರವೀಂದ್ರ ಎಂ.ಅರಸ, ಬೋಂಬೆ ಬಂಟ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ನ್ಯಾ| ಸುಭಾಷ್ ಬಿ.ಶೆಟ್ಟಿ, ಬಿಲ್ಲವರ ಅಸೋಸಿಯೇ ಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಡಾ| ಭಾಸ್ಕರ್ ಶೆಟ್ಟಿ ವಿೂರಾರೋಡ್, ಶಿಕ್ಷಕ ದಿನಕರ್ ಜಿ.ಕುಲ್ಕರ್ಣಿ (ಪತ್ನಿ ಶಾರದಾ ದಿನಕರ್), ಬಂಟ ಸಮಾಜದ ಹಿರಿಯ ಮುತ್ಸದ್ಧಿ ಎಂ.ಡಿ ಶೆಟ್ಟಿ, ಫೌಂಡೇಶನ್‍ನ ಆಡಳಿತ ಮಂಡಳಿ ಸದಸ್ಯರಾದ ಧರ್ಮಪಾಲ್ ಯು.ದೇವಾಡಿಗ, ನ್ಯಾ| ಬಿ.ಮೊಯಿದ್ಧೀನ್ ಮುಂಡ್ಕೂರು ಮತ್ತು ಮುರಳೀಧರ್ ವಿಠಲ್ ಪಾಲ್ವೆ ಅವರನ್ನು ಸನ್ಮಾನಿಸಲಾಯಿತು.

ಪದ್ಮನಾಭ ಪಯ್ಯಡೆ ಮಾತನಾಡಿ ಎಲ್ಲರೊಂದಿಗೆ ಬೆರೆತು ಸಂಬಂಧವನ್ನಿಟ್ಟು ಪವಿತ್ರ ಸಮಾಜ ಸೇವಕ ಎಂದೆಣಿಸಿದ ಕೆ.ಡಿ ಶೆಟ್ಟಿ ಸೇವೆ ಅನುಪಮ. ಅವರೊಬ್ಬ ಸ್ವತಂತ್ರರಾಗಿ ಬೆಳೆದು ಪ್ರತಿಷ್ಠೆಯನ್ನು ಮೈಗೂಡಿಸಿದ ವ್ಯಕ್ತಿ. ಹಿರಿಯರನ್ನೇ  ನಂಬಿ ಬಂದ ಚೆಲ್ಲಡ್ಕ ಪರಿವಾರವು ಹಿಂದಿನ ಸ್ಥಿತಿಗತಿ ಅವಲೋಕಿಸಿ ಮುಂದಿನ ಭವಿಷ್ಯತ್ತಿನ ಪೀಳಿಗೆ ಮಾದರಿಯಾಗಿ ಸಾಗುತ್ತಿದೆ. ಪರಿಶ್ರಮದಿಂದ ಸಾಧನೆ ಸಿದ್ಧಿ ಎನ್ನುವುದಕ್ಕೆ ಕೆ.ಡಿ ಶೆಟ್ಟಿ ಅವರೇ ಮಾದರಿ. ಶುದ್ಧ ಮತ್ತು ಒಳ್ಳೆ ಮನಸ್ಸು ಇದ್ದರೆ ಉದ್ದೇಶಗಳು ತನ್ನೀತಾನೇ ಸಾರ್ಥಕತೆ ಪಡೆಯುತ್ತಿದೆ ಎನ್ನುವುದಕ್ಕೆ ಈ ಸಂಸ್ಥೆ ತೋರ್ಪಡಿಸಿದೆ. ಸೇವೆಯನ್ನು ಬರೇ ಸ್ವಪರಿವಾರಕ್ಕೆ ಸೀಮಿತವಾಗಿಸದೆ  ಜನ್ಮ ಮತ್ತು ಕರ್ಮಭೂಮಿಯ ಅಖಂಡ ಸಮಾಜ ಸೇವೆಗೈಯುತ್ತಿರುವುದು ಸ್ತುತ್ಯರ್ಹ. ಶಿಕ್ಷಣ ದೇಗುಲಗಳ ಜೀರ್ಣೋದ್ಧಾರದಿಂದ ಸಮಗ್ರ ಸಮಾಜದ ಉದ್ಧಾರ. ಮಾತಾಪಿತರ ಸೇವೆಗೈಯಲಾಗದ ಮಕ್ಕಳ ಬದುಕೇ ಶೂನ್ಯವಾಗುತ್ತದೆ ಮತ್ತು ಪಾಪಕ್ಕೆ ಗುಣವಾಗುತ್ತದೆ. ಆದುದರಿಂದ ಜನ್ಮದಾತರ ಸೇವೆಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸುವ ಅಗತ್ಯವಿದೆ. ಸದ್ಯ ಸಮಾಜದ ಪರಿವರ್ತನೆ ಅಗತ್ಯವಿದ್ದು ಇಂತಹ ಪರಿವರ್ತನೆಗೆ ಪೂರಕವಾಗಿ ಶ್ರಮಿಸುವ ಭವಾನಿ ಫೌಂಡೇಶನ್‍ನ ಸೇವೆ ನಿಜಾರ್ಥದಲ್ಲಿ ಫಲಿಸಲಿ ಎಂದರು.

ವಿಶ್ವಸ್ಥರ ಮಂಡಳಿಯ ಸಹಕರ ಅತ್ಯಾಮೂಲ್ಯವಾಗಿದೆ. ವಿನೂತನ ತಾಕತ್ತು ದುರ್ಬಳಕೆ ಆಗಬಾರದು. ಜೀವಜ್ಞಾನ್ ಮಹಾರಾಷ್ಟ್ರದ್ದೂ, ಈ ಭೂಮಿಗೆ ಖುಷಿ ಖುಷಿಯಾಗಿ ನಿಸ್ವಾರ್ಥವಾಗಿ ಸೇವೆ. ತೋರ್ಪಡೆಗೆ ನಾವೂ ಸೇವೆ ಮಾಡಲಾರೆವು. ಇದು ನಮ್ಮ ಸುಶ್ವಾತ್ ಅಷ್ಟೇ. ತಮ್ಮೆಲ್ಲರ ಸಹಯೋಗ ಅನುಗ್ರಹ ಬೇಕಾಗಿದೆ. ದೈರ್ಯ ತುಂಬಿದವರೇ ನನ್ನ ತಾಯಿ. ಸ್ವರ್ಗ ನೋಡಬೇಕಾದರೆ ತಾಯಿಯ ಪಾದ ನೋಡಿದಾಗಲೇ ಸ್ವರ್ಗ ಕಾಣುವುದು.ರೊಟ್ಟಿ ಪ್ರಸಾದ ತಿಂದು ದೊಡ್ಡವನು. ಮಾತೆಯ ಹೆಸರನ್ನೀಡಿದರು ಮುನ್ನಡೆಯುತ್ತೇನೆ. ಒಳ್ಳೆ ಸಂಸ್ಕಾರ ನೀಡಿದ ಮಾತೆಗೆ ಋಣಿ. ನನ್ನದೇನಿಲ್ಲ ಎಲ್ಲವೂ ಮಾತೆಯ ಕೃಪೆ ಆಗಿದೆ. ತಮ್ಮಲ್ಲರ ತಾಕತ್ತು ನನ್ನನ್ನು ಪೆÇ್ರೀತ್ಸಾಹಿಸಿದೆ.ಲೆಕ್ಕ ಪತ್ರ ಸರಿ ಇದ್ದರೆ ಎಲ್ಲವೂ ಸರಿ ಲೆಕ್ಕವ್ಯ್ ಬೆನ್ನು ಮೂಲೆ ಇದ್ದಂತೆ ಆವಾಗಲೆ ಸಂಸ್ಥೆಗಳ ಮುನ್ನಡೆ ಸುಲಲಿತವಾಗಿದೆ.

ತುಳುನಾಡ ಸಮಗ್ರ ಜನರಿಗೆ ಕೆ.ಡಿ ಶೆಟ್ಟಿ ಸೇವಾಂಶ ಬಹಳಷ್ಟಿದೆ. ಹಿಂದಿನದ್ದು ಮರೆಯದೆ ಮುನ್ನಡೆಯಾತ್ತಿರುವ ಕಾರಣವೇ ಅವರು ಅಸಾಧರಣಾ ಸಾಧನೆಯ ಯಶ ಕಂಡಿದ್ದಾರೆ. ಮಾತೆಯ ಆಶೀರ್ವಾದ ಒಂದೆಡೆಯಾದರೆ ಮಡದಿ ಸರಿತಾ ಅವರ ಸಹಯೋಗವೂ ಅವರನ್ನು ಅಷ್ಟೇ ಪೆÇ್ರೀತ್ಸಾಹಿಸಿದೆ. ಎಂದಿಗೂ ಒಳ್ಳೆ ಕೆಲಸ ಮಾಡಿದಾಗ ಅವುಗಳೇ ಸ್ಮರಣೀಯವಾಗಿ ಸಮಾಜದಲ್ಲಿ ಉಳಿಯುವುದು. ಜನ್ಮ ನೀಡಿದ ಮಾತೆಯ ಹೆಸರಿನಲ್ಲಿ ಭಾಷೆ, ಪ್ರದೇಶ, ಜನಾಂಗೀಯತೆ ಮರೆತು ಭೇದಭಾವ ಇಲ್ಲದೆ ನಾಲ್ಕೂರು ಸೇವೆಗೈದು ಜನನಿದಾತೆಯ ಹೆಸರನ್ನು  ಪ್ರತಿಷ್ಠಾಪಿಸಿ ಪ್ರತಿಷ್ಠಿತ ಫೌಂಡೇಶನ್ ಜನಹಿತ ಸಂಸ್ಥೆಯಾಗಿ ಮುನ್ನಡೆಯಲಿ ಎಂದು ಐಕಳ ಹರೀಶ್ ಆಶಯ ವ್ಯಕ್ತ ಪಡಿಸಿದರು.

ಇದೊಂದು ಭಾವನಾತ್ಮಕ ಬೆಸುಗೆಯ ರಚನಾತ್ಮಕ ಸಂಭ್ರಮವಾಗಿದೆ. ಸೇವೆಯ ಮುಖೇನ ಜನಾಕರ್ಷಿಸುವ ಈ ಸಂಸ್ಥೆಗೆ ಸೇವೆಯೇ ಪ್ರಸಿದ್ಧಿಯನ್ನೀಡಿದೆ. ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಭವಾನಿ ಫೌಂಡೇಶನ್ ಮಾದರಿ ಎಂದೆಣಿಸಿದೆ ಎಂದು ನಿತ್ಯಾನಂದ ಕೋಟ್ಯಾನ್ ತಿಳಿಸಿದರು.

ಡಾ| ಭಾಸ್ಕರ ಶೆಟ್ಟಿ ಮಾತನಾಡಿ ನನಗೆ ತುಂಬಾ ಸನ್ಮಾನಗಳು ಪ್ರಾಪ್ತಿಯಾಗಿವೆ. ಆದರೆ ಸಾಮಾಜಿಕ ಕಳಕಳಿಯುಳ್ಳ ಇಂತಹ ಫೌಂಡೇಶ್‍ನಿಂದ ಗೌರವಿಸಲ್ಪಡುತ್ತಿರುವುದು ಇದು ನನ್ನ ಭಾಗ್ಯ. ಸಮಾಜ ಸೇವೆಯು ಮನುಕುಲದ  ದೊಡ್ಡ ಕೆಲಸ. ಇದನ್ನು ಕಡುಗ್ರಾಮೀಣ ಪ್ರದೇಶಕ್ಕೆ ತೆರಳಿ ಅದು ಕೂಡಾ ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ಪೆÇ್ರೀತ್ಸಹಿಸುವುದು ಎಂದರೆ ಇದು ನೈಜ್ಯ ರಾಷ್ಟ್ರಸೇವೆಯೇ ಸರಿ. ಒಬ್ಬರಿಗೆ ವಿದ್ಯೆ ನೀಡಿದರೆ ಇಡೀ ಸಮಾಜ ಸುಶಿಕ್ಷಿತವಾಗುವುದು ಎಂದರು.

ಶಿಕ್ಷಕನಾಗಿ ವಿದ್ಯಾಭ್ಯಾಸ ಕಲಿಸಿದ ನನಗೆ ಗುರು ಸ್ಥಾನದಲ್ಲಿರಿಸಿ  ಶಿಷ್ಯನೋರ್ವನಿಂದ ಗೌರವಿಸಲ್ಪಡುವುದು ಅತೀವ ಅಭಿಮಾನ ತಂದಿದೆ. ಇದು ಗುರುಶಿಷ್ಯರ  ಮರೆಯಲಾಗದ ಅನುಬಂಧವೇ ಸರಿ. ಯಾವನೇ ಗುರು ಜೀವನದಲ್ಲಿ ಮರೆಯಲಾಗದ ವಿದ್ಯಾಥಿರ್s. ಇವರೋರ್ವ ಕುತೂಹಲಕಾರಿ ಕಾಯಕವುಳ್ಳವರು. ಸಮಾಜಕ್ಕೆ ಉಪಕಾರ ಆಗುವಂತ ಇಂತಹ ವ್ಯಕ್ತಿಗಳು ಹೆಚ್ಚಾಗಬೇಕು. ಇಂತಹ ವಿದ್ಯಾಥಿರ್sಗಳು ರಾಷ್ಟ್ರಕ್ಕೆ ಮಾದರಿ ಎಂದು ಶಿಕ್ಷಕ ಡಿ.ಜಿ ಕಲಕರ್ಣಿ ತಿಳಿಸಿದರು.

ಕೆ.ಡಿ ಶೆಟ್ಟಿ ಅವರದ್ದು ಬಂಧುತ್ವದ ಪರಿವಾರ. ಮುಂಬಯಿಗರಲ್ಲಿ ದೊಡ್ಡ ಮನಸಿದೆ. ಅದರಲ್ಲೂ ಮರಾಠಿಗರು ನೀಡಿದ ಸೇವೆಗೆ ಸದಾ ಪ್ರಸನ್ನರಾಗಿರುತ್ತಾರೆ. ಮಾನವೀಯತೆಯನ್ನೇ ಬಂಡವಾಳವಾಗಿರಿಸಿ ಜನಸೇವೆಯಲ್ಲಿ ತೊಡಗಿಸಿರುವ ಕೆ.ಡಿ ಶೆಟ್ಟಿ ಸಾರಥ್ಯದ ಭವಾನಿ ಫೌಂಡೇಶನ್ ಇನ್ನೂ ಜನಹಿತ ಸೇವೆ ಮಾಡುವ ಭಾಗ್ಯ ಭ್ರಮರಾಂಭಿಕೆ ಕರುಣಿಸಲಿ ಎಂದು ಸಂತೋಷ್ ಶೆಟ್ಟಿ ನೆರೂಲ್ ಶುಭಾರೈಸಿದರು.

ಮಹಾರಾಷ್ಟ್ರದ ಜನರ ಮನಸ್ಸು ದೊಡ್ದದು. ಮರಾಠ ನೆಲೆಯಲ್ಲಿ ಕರ್ಮಭೂಮಿಯಾಗಿಸಿದ ಅವರ ಸೇವೆಯಿಂದ ನಮ್ಮವರ ಶ್ರೇಷ್ಠತ್ವ ಸಾಧ್ಯವಾಗಿದೆ. ಸೇವೆ ಎಂದೂ ನಿಸ್ವಾರ್ಥ ಮತ್ತು ನಿಷ್ಪಕ್ಷೀಯವಾಗಿದ್ದಲ್ಲಿ ಫಲದಾಯಕ ಆಗುವುದು ಎಂದು ಸಂತೋಷ ಶೆಟ್ಟಿ ಪನ್ವೇಲ್ ಅಭಿಪ್ರಾಯ ಪಟ್ಟರು.

ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ ಮಾತನಾಡಿ ಭವಾನಿ ಸಂಸ್ಥೆ ಸೇವಾಭಿಮಾನ ಸಂಸ್ಥೆಯಾಗಿದೆ. ಮರಗಿಡಗಳ ಬೇರು ಎಂದೂ ಭದ್ರವಾಗಿಯೇ ನೆಲೆಯೂರುತ್ತಾ ಬುಡವನ್ನು ಗಟ್ಟಿಯಾಗಿಸುತ್ತದೆ. ವಿಶಾಲವಾಗಿ ಎಷ್ಟೆತ್ತರಕ್ಕೂ ಬೆಳೆದರೂ ಬೇರುಗಳು ಮಾತ್ರ ಸ್ವಭಾವಿಕವಾಗಿರುತ್ತವೆ. ಅಂತೆಯೆ ಕೆ ಡಿ ಶೆಟ್ಟಿ ಅವರ ಜೀವನ. ಇಷ್ಟೆತ್ತರಕ್ಕೆ ಬೆಳೆದರೂ ತನ್ನ ಮಾತೃಸಂಸ್ಕೃತಿ, ಸಂಸ್ಕಾರಗಳನ್ನು ಮರೆಯದೆ ಸಾಗಿಬಂದ ದಾರಿ ತಿಳಿದು ಸರ್ವರನ್ನೂ ಸ್ವಪರಿವಾರ ಆಗಿಸಿ ಸಾಗುತ್ತಿದ್ದಾರೆ. ಆಮೂಲಕ ನೆಮ್ಮದಿಯನ್ನು ಅನುಭವಿಸಿ ಎಲ್ಲರಲ್ಲೂ ಸಮೃದ್ಧಿಯನ್ನು ಕಾಣುತ್ತಿರುತ್ತಿರುವ ಅಪರೂಪದ ವ್ಯಕ್ತಿತ್ವವುಳ್ಳವರು. ಅವರ ಆಶಯದ ಯೋಚನೆಗಳು ಸಂಪನ್ನಗೊಳ್ಳಲಿ ಎಂದÀು ಹರಸಿದರು.

ಕೆಡಿಎಸ್ ಅವರ ಸಾಮಾಜಿಕ ತುಡಿತ ಅತ್ಯಾದ್ಭುತವಾದುದು. ಅವರಲ್ಲಿನ ಸಮಾಜ ಉದ್ಧಾರ ಮನೋಭಾವ ನಿತ್ಯಕ್ರಿಯೆವಾಗಿರುಸುವುದು ಅಭಿಮಾನದ ವಿಚಾರ. ಅವರರೆಲ್ಲಾ ಆಶಯ ಚಿಂತನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಲಿ ಎಂದು ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ತಿಳಿಸಿದರು.

ಡಾ| ಸುನೀತಾ ಎಂ.ಶೆಟ್ಟಿ ಮಾತನಾಡಿ ಸಾಮಾಜಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಸ್ವಾಭಾವಿಕ. ಸಮಾಜದ ಸ್ವಸ್ಥ್ಯ ಕಾಣುವುದೇ ದೇವರ ಕೆಲಸ. ಇಂತಹ ಸೇವಾ ನಿರತ ಭವಾನಿ ಫೌಂಡೇಶನ್ ದೇವಸ್ಥಾನಕ್ಕೆ ಸಮಾನ. ಅದರಲ್ಲೂ ಶಿಕ್ಷಣ ಬದುಕಿಗೆ ದೊಡ್ಡ ಸಂಪತ್ತು ಆಗಿದ್ದು ಅದನ್ನು ಮನಪೂರ್ವಕವಾಗಿ ಈ ಸಂಸ್ಥೆ ಮಾಡುತ್ತಿರುವುದು ಅಭಿನಂದನೀಯ. ಸಂಸ್ಥೆ ಮಾಡುವ ಕೆಲಸಕ್ಕೆ ಸಹಕರಿಸುವುದೇ ದೊಡ್ಡ ಸಹಯೋಗ ಎಂದರು.

ನಮ್ಮ ಆರು ನಿಮಿಷಗಳ ಆಕಸ್ಮಿಕ ಭೇಟಿಯಿಂದ ಆಶ್ಚಯಂiರ್Àಕರ ಸೇವೆಗಳು ನಮ್ಮ ಗ್ರಾಮಕ್ಕೆ ಒದಗಿಸಲ್ಪಟ್ಟವು. ನಮ್ಮ ಜನತೆ ಹಾಗೂ ಮಕ್ಕಳಲ್ಲಿ ಸುಂದರ ಸಂಸ್ಕೃತಿ, ಸಂಸ್ಕಾರ ರೂಪಿಸಿದ ಭವಾನಿ ಫೌಂಡೇಶನ್‍ಗೆ   ನಮ್ಮ ಊರಿಗೆ ಊರೇ ಋಣಿಯಾಗಿದೆ ಎಂದು ಮುರಳೀಧರ್ ವಿಠಲ್ ಪಾಲ್ವೆ ಮನದಾಳದ ಮಾತುಗಳನ್ನಾಡಿದರು.

ನಿಸ್ವಾರ್ಥ ಸೇವೆಯ ಮೂಲಕ ಕರ್ನಾಟಕ ಮಹಾರಾಷ್ಟ್ರವನ್ನು ಬೆಸೆದ ಸಂಸ್ಥೆ ಭವಾನಿ ಫೌಂಡೇಶನ್. ಸಂಸ್ಥೆಯ ಕಾರ್ಯ ತತ್ಪರತೆ ಪ್ರಸ್ತಾಪಿಸಲು ಶಬ್ದಗಳಿಲ್ಲ. ಸಂಸ್ಥೆಯ ಶೆಟ್ಟಿ ಸಾಬ್ ಪರಿವಾರಕ್ಕೆ  ಉದಂಡ ಆಯುಷ್ಯ ಲಭಿಸಲಿ. ಸಮಾಜ ಬಂಧುಗಳೆಲ್ಲರೂ ಎಲ್ಲರೂ ಇಂತಹ ಧ್ಯೇಯ, ಉದ್ದೇಶ ಯೋಚಿಸಿ ಸೇವಾ ನಿರತದರೆ ಭಾರತ ರಾಷ್ಟ್ರ ಸ್ವರ್ಗವಾಗಬಹುದು ಎಂದು ಶಶಿಕಾಂತ್ ಠಾಕ್ರೆ ಅಭಿಪ್ರಾಯಪಟ್ಟರು.

ಫೌಂಡೇಶನ್‍ನ ವಿಶ್ವಸ್ಥ ಸದಸ್ಯೆಯರಾದ ಅಂಕಿತಾ ಜೆ.ಶೆಟ್ಟಿ, ಕು| ಶಿಖಾ ಕುಸುಮೋದರ್ ಶೆಟ್ಟಿ (ಜೊತೆ ಕೋಶಾಧಿಕಾರಿ), ಆಡಳಿತ ಮಂಡಳಿ ಸದಸ್ಯರಾದ ಪ್ರೇಮನಾಥ ಬಿ.ಶೆಟ್ಟಿ ಮುಂಡ್ಕೂರು, ನವೀನ್ ಎಸ್.ಶೆಟ್ಟಿ, ತಸ್ಶೊಡೆ ಪರ್ಸುರಾಮ್, ಶಶಿಕಾಂತ್ ಠಾಕ್ರೆ, ಸಿಎ| ಎಸ್. ಸುಬ್ರಹ್ಮಣ್ಯಂ, ಫೌಂಡೇಶನ್‍ನ ಮಾತೃಸಂಸ್ಥೆಯಾದ ಭವಾನಿ ಶಿಪ್ಪಿಂಗ್ ಸರ್ವೀಸಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‍ನ ಉನ್ನತಾಧಿಕಾರಿಗಳು, ಉದ್ಯೋಗಸ್ಥ ಮಂಡಳಿ (ಪರಿವಾರ) ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದು ಮೊಯಿದ್ಧೀನ್ ಮುಂಡ್ಕೂರು ಮತ್ತು ಧರ್ಮಪಾಲ್ ದೇವಾಡಿಗ ಅಲ್ಪಕಾಲಾವಧಿಯಲ್ಲಿ ಸಂಸ್ಥೆಯ ಕಾರ್ಯನಿಷ್ಠೆ ಮತ್ತು ಸೇವಾ ವೈಖರಿಯನ್ನು ತಿಳಿಸಿದರು. ವಿಶೇಷ ಆಮಂತ್ರಿತರಾಗಿ ಉಪಸ್ಥಿತ ಗಣ್ಯರನ್ನು ಕೆ.ಡಿ ಶೆಟ್ಟಿ ಮತ್ತು ಟ್ರಸ್ಟಿಗಳು ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು.

ಹೇಮಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷ ಜೀಕ್ಷಿತ್ ಕುಸುಮೋದರ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾನಿಕ ನುಡಿಗಳನ್ನಾಡಿ ಫೌಂಡೇಶನ್‍ನ ಸೇವೆಯ ಸ್ಥೂಲವಾದ ಮಾಹಿತಿಯನ್ನಿತ್ತರು. ಗೌರವ ಪ್ರಧಾನ ಕಾರ್ಯದರ್ಶಿ ರಾಜಲಕ್ಷಿ ್ಮೀ ಸುಬ್ರಹ್ಮಣ್ಯಂ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಕೋಶಾಧಿಕಾರಿ  ಸೀಮಾ ಶುಕ್ಲ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಕರ್ನೂರು ಮೋಹನ್ ರೈ ಸನ್ಮಾನಿತರನ್ನು ಪರಿಚಯಿಸಿದರು. ರೋನಾಲ್ಡ್ ಥೋಮಸ್ ಉಪಸ್ಥಿತ ಗಣ್ಯರನ್ನು ಪರಿಚಯಿಸಿದರು. ಗಣ್ಯರು ಫೌಂಡೇಶನ್‍ನ ಅಲ್ಪಾವಧಿಯ ಸೇವೆ ಪ್ರಶಂಸಿಸಿ ಭವಿಷ್ಯದ ಸರ್ವೋನ್ನತಿಗಾಗಿ ಶುಭಾರೈಸಿದರು. ಫೌಂಡೇಶನ್‍ನ ಟ್ರಸ್ಟೀ ಚೆಲ್ಲಡ್ಕ ಪ್ರಕಾಶ್ ಡಿ.ಶೆಟ್ಟಿ ಧನ್ಯವದಿಸಿದರು. ಸಭೆಯಲ್ಲಿ ಪೌಂಡೇಶನ್‍ನ ಸೇವೆಯ ಕ್ಷಣಿಕ ದರ್ಶನ ಪ್ರದರ್ಶಿಸಲ್ಪಟ್ಟಿತು. ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಸಮಾಪ್ತಿಗೊಂಡಿತು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

Veez Konkani Illustrated - Weekly e-MagazineVeez Konkani Illustrated - Weekly e-Magazine
Month’s MindMonth’s Mind
Mount Rosary Church Annoucement for the weekMount Rosary Church Annoucement for the week
Rozaricho Gaanch Easter 2018Rozaricho Gaanch Easter 2018
Milarchi Lara - Issue April - 2018Milarchi Lara - Issue April - 2018
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
Visit Axis Bank Now open in Kallianpura, SanthekatteVisit Axis Bank Now open in Kallianpura, Santhekatte
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India
Kemmann.com Face Book

Click here for Kemmannu Knn Facebook Link

Mangalorean Fertility Physician in New York

 

Mangalorean Fertility Physician in New York

 

For information, please email nigelepereira.wcmc@gmail.com or contact Megi Zeku at 646-962-7499, prompt 3.

 

 

Thank you from Kemmannu.comContact for all your Travel, Tours and For Rent a Car

Contact Maria Travels  for all your Travel, Tours and For Rent a Car Mob: 9980889512 or 9819444307

Thanksgiving to St. Lawrance

Thanksgiving to St. Lawrance

Sponsored Albums