ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದಲ್ಲಿ ನಡೆಸಲ್ಪಟ್ಟ ವಿಚಾರ ಗೋಷ್ಠಿಗಳು

Rons Bantwal
Kemmannu News Network, 12-02-2018 15:04:37

Write Comment     |     E-Mail To a Friend     |     Facebook     |     Twitter     |     Print

ಹೊರನಾಡ ಕನ್ನಡಿಗರ ರಾಷ್ಟ್ರೀಯ ಸಮಾವೇಶದಲ್ಲಿ ನಡೆಸಲ್ಪಟ್ಟ  ಎರಡು ವಿಚಾರ ಗೋಷ್ಠಿಗಳು
ಶಿಕ್ಷಣ ವ್ಯಾಪಾರೀಕರಣದಿಂದ ಭಾಷೆಗಳು ನೆಲಕಚ್ಚಿವೆ : ಪೆÇ್ರ| ಎಸ್.ಜಿ ಸಿದ್ಧರಾಮಯ್ಯ
(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.10: ಭಾಷಾ ಭಿನ್ನತೆ, ಬಿಕ್ಕಟ್ಟಿನ ಸತ್ಯವನ್ನು ಮುಚ್ಚಿಟ್ಟಿರುವುದು ಖೇದಕರ ವಿಷಯವಾಗಿದೆ. ನಮ್ಮ ಭಾಷೆಯ ಅಸ್ತಿತ್ವ, ಅಸ್ಮಿತೆಗಳನ್ನು ಉಳಿಸಿಕೊಳ್ಳಬೇಕು. ಇಂದು  ನೆಲದ ಭಾಷೆ ಮರೆಯಾಗುತ್ತಿದೆ. ಪ್ರಾಂತ್ಯವಾರು ಭಾಷೆಗಳನ್ನು ವಿಫಲಗೊಳಿಸುತ್ತಿರುವುದು ಅತಂಕಕಾರಿ ವಿಚಾರ. ರಾಜ್ಯದಲ್ಲಿ ಇಚ್ಛಾ ಶಕ್ತಿಯ ಕೊರತೆ ದಿನದಿಂದ ದಿನಕ್ಕೆ  ಉಲ್ಭಾಣಗೊಳ್ಳುತ್ತಿದೆ. ಸಾಂಸ್ಕøತಿಕ ಗಡಿಗಳನ್ನು ಭದ್ರವಾಗಿ ರೂಪಿಸುವುದರಿಂದ ಮಾತೃಭಾಷೆಯ ಉನ್ನತಿ ಸಾಧ್ಯ. ಪ್ರಸ್ತುತ ದಿನಗಳಲ್ಲಿ ಭಾಷೆ ಎನ್ನುವುದು ರಾಜಕಾರಣಕ್ಕೆ ಬಳಕೆಯಾದ ಕಾರಣ ಭಾಷಾ ಸಾಮರಸ್ಯಕ್ಕೆ ಧಕ್ಕೆವುಂಟಾಗಿದೆ. ಈ ಕಾರಣದಿಂದ ದುರಂತಗಳನ್ನು ಹೆಚ್ಚಿಸುವುದೇ ಹೊರತು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ, ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿದ ಕಾರಣ ನೆಲದ ಭಾಷೆ ನೆಲಕಚ್ಚಿ ಹೋಗಿವೆ. ಕನ್ನಡಿಗರಿಗೆ ಕನ್ನಡಿಗರೇ ಶತ್ರುಗಳು ಹೊರತು ಅನ್ಯ ಭಾಷಿಗರಲ್ಲ. ನಾವೂ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಕನ್ನಡವು ಸತ್ತು ಹೋಗುವ ಅತಂಕ ಕಾಡುತ್ತಿದೆ. ಕನ್ನಡವನ್ನು ಆದ್ಯತೆಯ ಭಾಷೆಯನ್ನಾಗಿಸಿ ಇಂಗ್ಲೀಷ್‍ನ್ನು ಆಯ್ಕೆಯ ಭಾಷೆಯಾಗಿ ಬಳಸಿದಾಗ ಕನ್ನಡವು ಜೀವಂತವಾದ ಭಾಷೆಯಾಗಬಲ್ಲದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಅಧ್ಯಕ್ಷ ಪೆÇ್ರ| ಎಸ್.ಜಿ ಸಿದ್ಧರಾಮಯ್ಯ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಮುಂಬಯಿ ಹಾಗೂ ಉಪನಗರಗಳಲ್ಲಿನ ವಿವಿಧ ಕನ್ನಡ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ಅಂಧೇರಿ ಪಶ್ಚಿಮದಲ್ಲಿನ ಮೊಗವೀರ ಭವನದಲ್ಲಿ  ಆಯೋಜಿಸಿರುವ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದ ಎರಡನೇ ದಿನ ಸಮ್ಮೇಳನಧ್ಯಕ್ಷ ಡಾ| ಮನು ಬಳಿಗಾರ್ ಉಪಸ್ಥಿತಿಯಲ್ಲಿ ನಡೆಸಲ್ಪಟ್ಟ `ಹೊರನಾಡ ಕನ್ನಡಿಗರ ಭಾಷಾ ಬಿಕ್ಕಟ್ಟು-ಸಾಮರಸ್ಯ’ ವಿಚಾರಿತ ಸಮಾವೇಶದ ತೃತೀಯ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಪೆÇ್ರ| ಎಸ್.ಜಿ ಸಿದ್ಧರಾಮಯ್ಯ ಮಾತನಾಡಿದರು. 
ಕನ್ನಡ-ಮರಾಠಿ ವಿಷಯವಾಗಿ ಡಾ| ರಾಮಕೃಷ್ಣ ಮರಾಠೆ, ಕನ್ನಡ-ತೆಲುಗು ವಿಷಯದಲ್ಲಿ ಡಾ| ಶೇಷಶಾಸ್ತ್ರೀ ಅನಂತಪುರ ಮತ್ತು ಕನ್ನಡ-ತಮಿಳು ವಿಚಾ ರವಾಗಿ ಡಾ| ವಿ.ಗೋಪಾಲಕೃಷ್ಣ ಚೆನ್ನೈ ಪ್ರಬಂಧ ಮಂಡಿಸಿದರು. ಡಾ| ಕೆ.ಶಾರದಾ  ಆಂಧ್ರಪ್ರದೇಶ, ಶಿವರಾಮ್ ಕಾಸರಗೋಡು, ಮಲ್ಲಿಕಾರ್ಜುನ ಬಾದಮಿ ಪ್ರತಿಕ್ರಿಯೆ ನೀಡಿದರು. ಕನ್ನಡ ಕಲಾ ಕೇಂದ್ರ ಮುಂಬಯಿ ಅಧ್ಯಕ್ಷ ಬೈಲೂರು ಬಾಲಚಂದ್ರ ರಾವ್  ಸ್ವಾಗತಿಸಿದರು. ಪೆÇ್ರ| ಟಿ.ಎಸ್ ಸತ್ಯನಾಥ ಆಶಯ ನುಡಿಗಳನ್ನಾಡಿದರು. ಡಾ| ಜ್ಯೋತಿ ದೇವಾಡಿಗ ಗೋಷ್ಠಿ ನಿರ್ವಹಿಸಿದರು. ವಾಪಿ ಕನ್ನಡ ಸಂಘ ವಾಪಿ-ಗುಜರಾತ್ ಇದರ ಅಧ್ಯಕ್ಷ ಶಂಕರ ನಾರಾಯಣ ಕಾರಂತ ವಂದಿಸಿದರು.

ಮಧ್ಯಾಹ್ನ ಹಿರಿಯ ಸಾಹಿತಿ ಮತ್ತು ಕೇಂದ್ರೀಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ| ಎಚ್.ಎಂ ಮಹೇಶ್ವರಯ್ಯ ಅಧ್ಯಕ್ಷತೆಯಲ್ಲಿ `ರಾಷ್ಟ್ರೀಯ ಶಿಕ್ಷಣ ನೀತಿ’ ವಿಚಾರವಾಗಿ ನಾಲ್ಕನೇ ವಿಚಾರ ಗೋಷ್ಠಿ ನಡೆಸಲ್ಪಟ್ಟಿದ್ದು, `ಅನುಷ್ಠಾನದ ಸವಾಲುಗಳು’ ವಿಚಾರವಾಗಿ ಡಾ| ಶಿವರಾಂ ಪಡಿಕ್ಕಲ್, `ಪ್ರಾದೇಶಿಕ ಸಂಸ್ಕೃತಿ ಒಳಗೊಳ್ಳುವಿಕೆ’ ವಿಷಯದಲ್ಲಿ ಡಾ| ಕೆ.ವೈ ನಾರಾಯಣಸ್ವಾಮಿ ಮತ್ತು `ಉದ್ಯೋಗಾವಕಾಶ’ ವಿಷಯದಲ್ಲಿ ಹೇಮಲತಾ ಮಹಿಷಿ ಪ್ರಬಂಧ ಮಂಡಿಸಿದರು. ಕೈಗಾರಿಕಾಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ತಿಮ್ಮಯ್ಯ ಹಾಗೂ ಡಾ| ಅಪ್ಪಗೆರೆ ಸೋಮಶೇಖರ ಪ್ರತಿಕ್ರಿಯೆ ನೀಡಿದರು.

ಸಮಾವೇಶದ ವಿಶೇಷತೆಗಳು:
ಹೊಟ್ಟೆ ತುಂಬಾ ಉಂಡು ನಿದ್ದೆ ಹೋದ ಸಭಿಕರು. ಇದು ಬರೇ ಸರ್ಕಾರಕ್ಕೆ ತೋರ್ಪಡಿಸುವ ಸಮವೇಶವಾಗಿದೆ ಹೊರತು ಕನ್ನಡ ಬೆಳವಣಿಗೆ ಪೂರಕವಾದ ಸಮಾವೇಶವಲ್ಲ. ವಿಚಾರಗೋಷ್ಠಿಗಳನ್ನು ಮಂಡಿಸಿದವರಲ್ಲಿ ಹೆಚ್ಚಿನವರು ವಾಕ್ಯವೊಂದಕ್ಕೆ ಕನಿಷ್ಠ ನಾಲ್ಕೈದು ಇಂಗ್ಲೀಷ್ ಶಬ್ದ ಬಳಕೆ. ಮುಂಬಯಿ ನೆಲೆವಾಗಿ ಅಪ್ಪಟ ಕನ್ನಡಿಗರನ್ನು ಮುಜುಗರಕ್ಕೊಳ ಪಡಿಸಿದ್ದು ದುರಂತ ಎಂದೆಣಿಸಿತು. ಪ್ರತಿನಿಧಿಗಳಾಗಿ ಬಂದವರು ಬಸ್ಸನ್ನೇ ಮುಂಬಯಿ ದರ್ಶನಕ್ಕೆ ಹೋದದ್ದು ಸಮಾವೇಶದ ಹಿರಿಮೆಯನ್ನು ಸಾರುತ್ತಿತ್ತು. ವೇದಿಕೆಯಲ್ಲಿ ಮೈಕಾಸುರನನ್ನು ಒಳಸಿಕೊಂಡು ಸಮಯದ ವ್ಯವದಾನವಿಲ್ಲದ ಮಾತುಗಾರರು ಒಂದೆಡೆಯಾದರೆ ಮುಗ್ಧ ಬಾಲ ಕಲಾವಿದರು ವೇಷ ಭೂಷಣವನ್ನು ಧರಿಸಿ ಗಂಟೆ ಕಟ್ಟಲೆ ತಮ್ಮ ಯಾದಿಗಾಗಿ ಕಾಯುವುದು ಈ ಸಮಾವೇಶದ ವೈಶಿಷ್ಟ್ಯಗಳಲ್ಲಿ ಒಂದಾಯಿತು. 

125 ಕೋಟಿ ಬಹು ಸಂಸ್ಕøತಿ, ಬಹು ಭಾಷಿಕರು ನೆಲೆಯಾಗಿರುವ ಈ ದೇಶದ ಬಗ್ಗೆ ಚಿಂತಿಸಬೇಕಾಗಿದೆ. ಒಂದು ದೇಶದ ಭಾಷೆಯ ಅಭಿವೃದ್ಧಿ ಆ ದೇಶದ ಅಭಿವೃದ್ಧಿಯನ್ನು ಸೂಚಿಸುತ್ತದೆ.ಭಾಷೆಯ ಬಗ್ಗೆ ಫಲಾಪೇಕ್ಷೆಯಿಲ್ಲದೆ, ಯಾವುದೇ ರೀತಿಯ ದುರುದ್ದೇಶವಿಲ್ಲದೆ  ಚರ್ಚಿಸಬೇಕು ಮತ್ತು ಅದರ ಅಭಿವೃದ್ಧಿಗೆ ಪೂರಕವಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು.  ಶಿಕ್ಷಣ ಮಂತ್ರಿಗಳು,  ಶಿಕ್ಷಣಕ್ಕೆ ಸಂಬಧಿಸಿದವರು ಶಿಕ್ಷಣ ನೀತಿಯ ಕುರಿತು ತೀವ್ರವಾಗಿ ಚರ್ಚಿಸಬೇಕು ಎಂದು ಡಾ| ಮಹೇಶ್ವರಯ್ಯ ತಿಳಿಸಿದರು.

ಬಿಎಸ್‍ಕೆಬಿಎ ಉಪಾಧ್ಯಕ್ಷ ವಾಮನ ಹೊಳ್ಳ ಸ್ವಾಗತಿಸಿದರು. ಹಿರಿಯ ಭಾಷಾತಜ್ಞ ಡಾ| ಕೆ.ಆರ್ ದುರ್ಗಾದಾಸ್ ಆಶಯ ನುಡಿಗಳನ್ನಾಡಿದರು. ಓಂದಾಸ್ ಕಣ್ಣಂಗಾರ್ ಗೋಷ್ಠಿ ನಿರ್ವಹಿಸಿದರು.ಮೊಗವೀರ ಮಾಸಿಕದ ಸಂಪಾದಕ ಅಶೋಕ್ ಎಸ್.ಸುವರ್ಣ ಧನ್ಯವದಿಸಿದರು.

ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದಲ್ಲಿ ನಡೆಸಲ್ಪಟ್ಟ ವಿಚಾರ ಗೋಷ್ಠಿಗಳು
ಮುಂಬಯಿಗರ ಕನ್ನಡಪ್ರೇಮ ನಿಷ್ಕಳಂಕವಾದುದು: ಡಾ| ಜಯಂತ ಕಾಯ್ಕಿಣಿ
(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.10: ಮನುಷ್ಯನ ವಿಕಾಸದ ಆಟವು ಹಾವು-ಏಣಿಯಂತೆ. ಹಾವು ಎಂದರೆ ಜಾತೀಯತೆ, ಮತಾಂತರ ಪಿಡುಗು, ಮೂಢನಂಬಿಕೆ, ಹೆಣ್ಣಿನ ಶೋಷಣೆ ಇತ್ಯಾದಿ. ಏಣಿ ಅಂದರೆ ದಾಸರು ವಚನಕಾರರು ಬೇಂದ್ರೆ ಕುವೆಂಪು ಇಂತಹ ಚಿಂತಕರು ಸಾಧಕರು ಹಾಗಾಗಿ ನಾವೂ ಏಣಿಯನ್ನು ಏರಲಿ ಇಂತಹ ಸಾಹಿತ್ಯಾಸಕ್ತಿ ಇರಿಸಬೇಕು. ಮುಂಬಯಿ ಶಹರ ನಮಗೆ ಅನಾಮಿಕತೆ ನೀಡುತ್ತದೆ. ಅನಾಮಿಕತೆಯಿಂದ ಸಾಹಿತ್ಯ ಹುಟ್ಟುತ್ತದೆ. ಮುಂಬಯಿ ಎನ್ನುವುದು ನನಗೆ ಪರಮ ಮೌಲ್ಯ. ಇಲ್ಲಿ ಬಂದಾಗ ತಲೆಯಲ್ಲಿರುವ ಕಸವನ್ನು ಕಲೆ ಸ್ವಚ್ಛ ಮಾಡುತ್ತದೆ.ಮುಂಬಯಿಯವರು ಬಹಳ ದುಡ್ಡು ಮಾಡಿದ್ದಾರೆ ಎಂಬ ಕಲ್ಪನೆ ನಾಡಿನ ಜನತೆಗಿದೆ. ಆದರೆ ವಾಸ್ತವಸ್ಥಿತಿ ಹಾಗಿಲ್ಲ. ಇಲ್ಲಿಯ ಜನತೆ ಶ್ರಮಜೀವಿಗಳಾಗಿದ್ದು ಭಾಷಾಭಿಮಾನ, ಸಾಮರಸ್ಯದಿಂದ ಶ್ರೀಮಂತರಾಗಿ ದ್ದಾರೆ.  ಆದುದರಿಂದಲೇ ಮುಂಬಯಿಗೆ ತನ್ನದೇ ಆದ ಸ್ವಂತಿಕೆಯ ಅಸ್ತಿತ್ವವಿದೆ. ಅಂತಹ ಅಸ್ತಿತ್ವ ಬೆಂಗಳೂರುನಲ್ಲಿ ಸದ್ಯ ಲಕ್ಷಣ ಕಾಣುವುದಿಲ್ಲ. ಮುಂಬಯಿ ಮಹಾನಗರ ಬೇಧಭಾವವಿಲ್ಲದೆ ಪೆÇೀಷಿಸುವ ಮಹಾನಗರ ಎಂದು ನಾಡಿನ ಪ್ರಸಿದ್ಧ ಸಾಹಿತಿ ಡಾ| ಜಯಂತ ಕಾಯ್ಕಿಣಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಮುಂಬಯಿ ಹಾಗೂ ಉಪನಗರಗಳಲ್ಲಿನ ವಿವಿಧ ಕನ್ನಡ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ಅಂಧೇರಿ ಪಶ್ಚಿಮದಲ್ಲಿನ ಮೊಗವೀರ ಭವನದಲ್ಲಿ  ಆಯೋಜಿಸಿರುವ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದಲ್ಲಿ ನಡೆಸಲ್ಪಟ್ಟ `ಮುಂಬಯಿ ಕನ್ನಡಿಗರು ಸೃಜನಶೀಲ ನೆಲೆಗಳು’ ವಿಚಾರಿತ ಸಮಾವೇಶದ ಪ್ರಥಮ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಡಾ| ಕಾಯ್ಕಿಣಿ ಮಾತನಾಡಿದರು.

ಸಮ್ಮೇಳನಧ್ಯಕ್ಷ ಡಾ| ಮನು ಬಳಿಗಾರ್ ಉಪಸ್ಥಿತಿಯಲ್ಲಿ ನಡೆಸಲ್ಪಟ್ಟ ಗೋಷ್ಠಿಯಲ್ಲಿ `ಪ್ರದರ್ಶಕ ಕಲೆಗಳು’ ವಿಷಯದಲ್ಲಿ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಚಲನಚಿತ್ರ-ರಂಗಭೂಮಿ ವಿಷಯವಾಗಿ ಡಾ| ಮಮತಾ ರಾವ್, `ಸಾಹಿತ್ಯ’ ವಿಷಯದಲ್ಲಿ ಡಾ| ಗಣೇಶ ಎನ್.ಉಪಾಧ್ಯ ಬಹಳ ನಿಖರವಾಗಿ ಪ್ರಕರವಾಗಿ ಪ್ರಬಂಧಗಳನ್ನು ಮಂಡಿಸಿದರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮತ್ತು ಹಿರಿಯ ಸಾಹಿತಿ ಮಿತ್ರಾ ವೆಂಕಟ್ರಾಜ್ ಮುಂಬಯಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದರು. ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಹೆಚ್.ಕೆ ಸುಧಾಕರ ಅರಾಟೆ ಸ್ವಾಗತಿಸಿದರು. ರಂಗ ಕಲಾವಿದೆ ಅಹಲ್ಯಾ ಬಲ್ಲಾಳ್ ಗೋಷ್ಠಿ ನಿರ್ವಹಿಸಿದರು. ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ ಪಯ್ಯರ್ ವಂದಿಸಿದರು.

ಪ್ರಸಿದ್ಧ ಲೇಖಕ, ಮಧ್ಯಪ್ರದೇಶದ ಅಮರಕಂಟಕ ಅಲ್ಲಿನ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿವಿ ಕುಲಪತಿ ಪೆÇ್ರ| ತೇಜಸ್ವಿ ಕಟ್ಟೀಮನಿ ಅಧ್ಯಕ್ಷತೆಯಲ್ಲಿ ದ್ವಿತೀಯ ಗೋಷ್ಠಿಯು`ಹೊರನಾಡ ಕನ್ನಡಿಗರ ಸವಾಲುಗಳು’ ವಿಚಾರ ವಾಗಿ ನಡೆಸಲ್ಪಟ್ಟಿದ್ದು ಶೈಕ್ಷಣಿಕ-ವಿಷಯದಲ್ಲಿ ಪೆÇ್ರ| ಕೆ.ಬಿ ತಾರಕೇಶ್ವರ, ಔದ್ಯೋಗಿಕ-ವಿಷಯದಲ್ಲಿ ಮೊಗವೀರ ಬ್ಯಾಂಕ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ  ಸದಾನಂದ ಎಸ್.ಕೋಟ್ಯಾನ್, ಸಾಂಸ್ಕೃತಿಕ-ವಿಷಯದಲ್ಲಿ ಸಾಹಿತಿ ಡಾ| ಚಂದ್ರಕಾಂತ ಪೆÇೀಕಳೆ ಪ್ರಬಂಧ ಮಂಡಿಸಿದರು.  ಡಾ| ಗುರುಲಿಂಗಪ್ಪ ದಭಾಲೆ ಸೊಲ್ಲಾಪುರ, ಜಿ.ವಿ ವಿಠ್ಠಲ್ ದೆಹಲಿ ಮತ್ತು ಕಾಂತಿ ಶೆಟ್ಟಿ ಡೊಂಬಿವಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಸಾಹಿತ್ಯ ¨ಳಗ ಮುಂಬಯಿ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಸ್ವಾಗತಿಸಿದರು. ಮುಂಬಯಿ ವಿವಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಗೋಷ್ಠಿ ನಿರ್ವಹಿಸಿದರು. ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್ ಎಲ್.ಕುಲಾಲ್ ಧನ್ಯವದಿಸಿದರು.

ನಮ್ಮಲ್ಲಿ ಇಂದು ಕೋಟಿ ರೂಪಾಯಿ ಖರ್ಚು ಮಾಡಿ ಎಂಬಿಬಿಎಸ್, ಇಂಜಿನಿಯರ್ಸ್ ಇತ್ಯಾದಿ ಸೇರುತ್ತಾರೆ. ಆದರೆ ಉದ್ಯಮದತ್ತ ಇಳಿಯಲು ನಿರಾಕರಿಸುತ್ತಾರೆ. ಶಿಕ್ಷಣಕ್ಕೆ ವ್ಯಯಿಸಿದ ಕೋಟಿ ರೂಪಾಯಿ ಹಣವನ್ನು ಸ್ವಂತ ಉದ್ಯಮಕ್ಕೆ ಹಾಕುವ ಧೈರ್ಯ ವಹಿಸಿದ್ದರೆ ಅವರಿಂದು ಯಶಸ್ವಿ ಉದ್ಯಮಿಗಳಾಗುತ್ತಿದ್ದರು. ಯುವೋದ್ಯಮಿಗಳು ಆದವರೂ ಬಹಳಷ್ಟಿದ್ದಾರೆ. ಅವರ ಯಶಸ್ವಿನ ಕಥೆ ಲೇಖಕರು ಬರೆಯಿರಿ. ಇನ್ನೊಬ್ಬರಿಗೆ ಆ ಯಶಸ್ಸಿನ ಕಥೆಯಿಂದ ಸ್ಫೂರ್ತಿ ಬರಲಿ. ಬಹುಶ ನಮ್ಮ ಪೆÇ್ರಫೆಸರ್‍ಗಳಿಗೆ ಇಂತಹ ಬುಕ್-ಸ್ಟೋರಿ ಇಷ್ಟವಾಗಲಾರದು ಅಥವಾ ಯೋಗ್ಯ ಅಲ್ಲ ಅಂತ ಭಾವಿಸಿದ್ದಾರೋ ಏನೋ. ಈ ಸಕ್ಸಸ್ ಜನರ, ಕನ್ನಡಿಗರು ಕೌಶಲ್ಯದಿಂದ ಮೇಲೆ ಬಂದಿರುವ ಅಂತಂಹ ಯಶೋಗಾಥೆಯ ಬಗ್ಗೆ ಹೆಚ್ಚೆಚ್ಚು ಬರೆಯಿರಿ ಎಂದು ತೇಜಸ್ವಿ ಕಟ್ಟೀಮನಿ ತಿಳಿಸಿದರು.

ಸಂಜೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷ ಡಾ| ಮನು ಬಳಿಗಾರ್ ಪರಿಷತ್ತು ಸದಸ್ಯರನ್ನೊಳಗೊಂಡು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ| ಮೃತ್ಯುಂಜಯ  ಬಳಗವು  ಹಿಂದೂಸ್ತಾನಿ ಗಾಯನ ಪ್ರಸ್ತುತ ಪಡಿಸಿತು.  ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯು `ಕುಶಲವ’ ಯಕ್ಷಗಾನ ಪ್ರದರ್ಶಿಸಿತು. ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಜಿ.ಎಸ್.ನಾಯಕ್ ಸ್ವಾಗತಿಸಿದರು. ಡಾ| ಜಿ.ಪಿ ಕುಸುಮ ಕಾರ್ಯಕ್ರಮ ನಿರೂಪಿಸಿದ ರು. ಕರ್ನಾಟಕ ವೈಭವ ಸಂಸ್ಥೆ ಅಂಬರ್‍ನಾಥ್ ಅಧ್ಯಕ್ಷ ಹೆಚ್.ಆರ್ ಚಲವಾದಿ ಅಭಾರ ಮನ್ನಿಸಿದರು.

ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದಲ್ಲಿ ನಡೆಸಲ್ಪಟ್ಟ ವಿಚಾರ ಗೋಷ್ಠಿಗಳು ಮುಂಬಯಿಗರ ಕನ್ನಡಪ್ರೇಮ ನಿಷ್ಕಳಂಕವಾದುದು: ಡಾ| ಜಯಂತ ಕಾಯ್ಕಿಣಿ

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Full Video:Inauguration Udupi of Diocese
View More

Veez Konkani WeeklyVeez Konkani Weekly
Crib Making Competition 2018Crib Making Competition 2018
1st Death Anniversary of Rev. Fr. Wilson Clifford Andrade OFM Cap.1st Death Anniversary of Rev. Fr. Wilson Clifford Andrade OFM Cap.
Mount Rosary Church Annoucement for the weekMount Rosary Church Annoucement for the week
Newly constructed House for sale at Nejar near Santhekatte.Newly constructed House for sale at Nejar near Santhekatte.
Maria TravelsMaria Travels
Rozarich Gaanch September- 2018Rozarich Gaanch September- 2018
Karaval Milan Sports Event on 23rd December at Milagres Ground, Kallianpur.Karaval Milan Sports Event on 23rd December at Milagres Ground, Kallianpur.
Rozarich Gaanch September- 2018Rozarich Gaanch September- 2018
Milarchi-Lara-September-2018Milarchi-Lara-September-2018
Welcome to Thonse Naturecure HospitalWelcome to Thonse Naturecure Hospital
Santhosh Villa short film by youth of Udupi Parish and ICYM.Santhosh Villa short film by youth of Udupi Parish and ICYM.
Crossland College, Year book 2017-18Crossland College, Year book 2017-18
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India