Brief Mumbai, Managalore news with pictures


Rons Bantwal
Kemmannu News Network, 13-02-2018 19:32:09


Write Comment     |     E-Mail To a Friend     |     Facebook     |     Twitter     |     Print


Mumbai Feb. 12 :- Under the leadership of Mumbai Congress President Sanjay Nirupam protest against increasing Unemployment " Pradhanmantri Naukri Do ", lots of youth join & ezpress their anger neaar the Mantralaya. In pic police arrested them.

Mumbai Feb. 12 :- No more Suicide, now to stop suicide, the Ministry has now set a nets at Mantralaya Premises.

Mumbai Feb. 12 :- No more Suicide, now to stop suicide, the Ministry has now set a nets at Mantralaya Premises.

Mumbai Feb. 12 :- Tiger skin found at the Jurudiction of Shrinagar Police Station, Forest officials are called up to check the authenticity

Mumbai Feb. 13 :- L to R Mr. Yogesh Sharma, Director - Foundation of Independent Financial Advisors ( FIFA ), Mr. Swarup Mohanty, CEO - MIRAE ASSET MUTUAL FUND, Mr. Dhruv Mehta, Chairman - Foundation of Independent Financial Advisors ( FIFA ), Mr. Kailash Kulkarni, CEO - L & T MUTUAL FUND, Ms. Sangeeta Jhaveri, Director - Foundation of Independent Financial Advisors ( FIFA ) & Mr. Benis Kumar, Partner - FINALMILE CONSULTANT at the launched & discuss the study on " An Examination of Indian Mutual Funds Investors Awareness " ( A road map to improve Mutual Fund penetration among Indian Investors ).

Mumbai Feb. 13 :- On the auspicious occasion of Mahashivaratri, devotees offered milk floral &  water in Babulnath temple of Mumbai

Mumbai Feb. 13 :- On occssion of Valentine Day, Flowrist making Valetine day special Flowers booke in Mumbai.

Brief Mumbai, Managalore news with pictures

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿ  ನ್ಯಾಯವಾದಿ ಎಂ.ಚಂದ್ರಶೇಖರ ಪೂಜಾರಿ ನೇಮಕ

ಮುಂಬಯಿ (ಬಂಟ್ವಾಳ), ಫೆ.12: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿ ನ್ಯಾಯವಾದಿ ಎಂ.ಚಂದ್ರಶೇಖರ ಪೂಜಾರಿ ಇವರನ್ನು ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ನಿರ್ದೇಶನದಂತೆ ದ.ಕ.ಜಿಲ್ಲಾ ಕಾಂಗ್ರೆಸ್ ಪಕ್ಷದ  ಅಧ್ಯಕ್ಷ ಕೆ. ಹರೀಶ್‍ಕುಮಾರ್ ಬೆಳ್ತಂಗಡಿ ಅವರು ನೇಮಕ ಮಾಡಿರುತ್ತಾರೆ.

ನ್ಯಾಯವಾದಿ ಚಂದ್ರಶೇಖರ್ ಇವರು ಬಂಟ್ವಾಳ ತಾಲೂಕು ಟೂರಿಸ್ಟ್ ಕಾರು ಚಾಲಕ-ಮಾಲಕರÀ ಸಂಘದ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಸದಸ್ಯರಾಗಿ, ಪ್ರತಿಷ್ಟಿತ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷರಾಗಿ , 1994-97ರ ತನಕ ಬಂಟ್ವಾಳ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿರುತ್ತಾರೆ ಮತ್ತು ಕರ್ನಾಟಕ ಸರಕಾರದ ಉಚಿತ ಕಾನೂನು ಸೇವಾ ಸಮಿತಿಯ ದ.ಕ.ಜಿಲ್ಲಾ ಸದಸ್ಯರಾಗಿ 9 ವರ್ಷಗಳ ಕಾಲ ಸೇವೆ ಮಾಡಿರುತ್ತಾರೆ. ಬಂಟ್ವಾಳದ ಸರಕಾರಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾಗಿರುವ ಇವರು `ಮುಗ್ಗಗುತ್ತು ಟ್ರಸ್ಟ್’ ಬೆಳ್ತಂಗಡಿ ಇದರ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಮುಗ್ಗಗುತ್ತು ಮನೆನತದ ಪಂಜಾಜೆ ಕೊರಗಪ್ಪ ಪೂಜಾರಿ ಮತ್ತು ಮುತ್ತಮ್ಮ ಪೂಜಾರಿ ದಂಪತಿ ಸುಪುತ್ರರಾಗಿರುವರು. ಪತ್ನಿ ಎರ್ಮಾಳ್ ಕಲ್ಪನಾ ಚಂದ್ರಶೇಖರ್ ಬೆಂಗಳೂರುನಲ್ಲಿ ಹಿರಿಯ ಸಿವಿಲ್ ನ್ಯಾಯಧೀಶೆಯಾಗಿ ಸೇವಾ ನಿರತರಾಗಿದ್ದಾರೆ. ಸ್ಪೂರ್ತಿ ಚಂದ್ರಶೇಖರ್ ಮತ್ತು ಸ್ವೀಕೃತಿ ಚಂದ್ರಶೇಖರ್ ನಾಮಾಂಕಿತ ಇಬ್ಬರು ಸುಪುತ್ರಿಯರ ಚೊಕ್ಕ ಸಂಸಾರ ಇವರದ್ದಾಗಿದೆ.

ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ನೂತನ ಸಮಿತಿ ಅಸ್ತಿತ್ವಕ್ಕೆ

ಬಜಪೆ,ಫೆ.13: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ಇದರ 2018-19 ಸಾಲಿನ ವಾರ್ಷಿಕ ಮಹಾ ಸಭೆಯು ಸೋಮವಾರ ಬಜ್ಪೆ ದ‌ಅ್‌ವಾ ಸೆಂಟರ್ ಕಚೇರಿಯಲ್ಲಿ ನಡೆಯಿತು. ಸಯ್ಯಿದ್ ನಿಝಾಮುದ್ದೀನ್ ಬಾಫಖಿ ತಂಙಳ್ ದುಆಶಿರ್ವಚನ ಮಾಡಿದರು. ಸೆಕ್ಟರ್ ಅಧ್ಯಕ್ಷ ಬಿ.ಎ ಶಾಕಿರ್ ಅಹ್ಮದ್ ಎಮ್ಮೆಸ್ಸಿ ಅಧ್ಯಕ್ಷತೆ ವಹಿಸಿದ್ದರು. ಸೆಕ್ಟರ್ ಉಸ್ತುವಾರಿ ಶರೀಫ್ ವರಕೋಡಿ ಉದ್ಘಾಟಿಸಿದರು. ಬಜ್ಪೆ ಜುಮಾ ಮಸೀದಿ ಖತೀಬರಾದ ರಝಾಖ್ ಮದನಿ ಮತ್ತು ಅಸಾಸ್ ಮಲ್ಲೂರು ಅಧ್ಯಕ್ಷ ಎಂಪಿಎಂ ಅಶ್ರಫ್ ಸ‌ಅದಿ ತರಗತಿ ನಡೆಸಿಕೊಟ್ಟರು. ಇಶಾರ ಪಾಕ್ಷಿಕ ಸಂಪಾದಕರಾದ ಅಬ್ದುಲ್ ಹಮೀದ್ ಬಜ್ಪೆ ದಿಕ್ಸೂಚಿ ಭಾಷಣ ಮಾಡಿದರು. ಸೆಕ್ಟರ್ ಕಾರ್ಯದರ್ಶಿ ಸಿದ್ದೀಖ್ ಬಜ್ಪೆ ವರದಿ ವಾಚಿಸಿದರು. ಕೋಶಾಧಿಕಾರಿ ರಮೀಝ್ ತಾರಿಕಂಬಳ ಲೆಕ್ಕಪತ್ರ ಮಂಡಿಸಿದರು. ನಂತರ ಡಿವಿಶನ್ ವೀಕ್ಷಕ ಉವೈಸ್ ಮಾಸ್ಟರ್ ಉದ್ದಬೆಟ್ಟು ರವರ ನೇತೃತ್ವದಲ್ಲಿ ನೂತನ ಬಜ್ಪೆ ಸೆಕ್ಟರ್ ಎಸ್ಸೆಸ್ಸೆಫ್ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಬಿ.ಎ ಶಾಕಿರ್ ಅಹ್ಮದ್ ಎಮ್ಮೆಸ್ಸಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎ ಸಿದ್ದೀಖ್ ಬಜ್ಪೆ ಪುನರಾಯ್ಕೆಯಾದರು. ಕೋಶಾಧಿಕಾರಿಯಾಗಿ ಇಸ್ಮಾಈಲ್ ಬಜ್ಪೆ ಮತ್ತು ಕ್ಯಾಂಪಸ್ ಕಾರ್ಯದರ್ಶಿಯಾಗಿ ರಮೀಝ್ ತಾರಿಕಂಬಳ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ರಿಝ್ವಾನ್ ತಾರಿಕಂಬಳ, ಅಫ್ರಿದ್ ಬಜ್ಪೆ, ಜೊತೆ ಕಾರ್ಯದರ್ಶಿಗಳಾಗಿ ಮಝರ್ ತಾರಿಕಂಬಳ, ರಮೀಝ್ ಸೌಹಾರ್ದನಗರ ರವರನ್ನು ನೇಮಿಸಲಾಯಿತು. ಡಿವಿಶನ್ ಕೌನ್ಸಿಲರುಗಳಾಗಿ ಶಾಕಿರ್ ಎಮ್ಮೆಸ್ಸಿ, ಎಂ.ಎ ಸಿದ್ದೀಖ್, ಇಸ್ಮಾಈಲ್ ಬಜ್ಪೆ, ರಮೀಝ್ ತಾರಿಕಂಬಳ, ಝುಹೈರ್ ಜರಿನಗರ, ರಾಶಿಕ್ ಕೆ.ಪಿ ನಗರ, ರಿಝ್ವಾನ್ ತಾರಿಕಂಬಳ, ಸಾಬಿತ್ ಬಜ್ಪೆ ರವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಝುಹೈರ್ ಜರಿನಗರ, ರಿಫಾತ್ ಜರಿನಗರ, ಆಖಿಬ್ ಜರಿನಗರ,  ಶಫೀಖ್ ಕೆ.ಪಿ ನಗರ, ರಾಶಿಕ್ ಕೆ.ಪಿ ನಗರ,ಶಾಹಿಕ್ ಕೆ.ಪಿ ನಗರ, ಇರ್ಫಾನ್ ಸೌಹಾರ್ದ ನಗರ, ಇರ್ಷಾದ್ ಸೌಹಾರ್ದ ನಗರ, ಸಫೀರ್ ಸೌಹಾರ್ದ ನಗರ, ಫಾರೂಖ್ ಮುಸ್ಲಿಯಾರ್ ಸೌಹಾರ್ದ ನಗರ, ಸಾಬಿತ್ ಬಜ್ಪೆ, ಗಫಾರ್ ಬಜ್ಪೆ, ಮನಾಫ್ ಜರಿನಗರ, ಝುಬೈರ್ ಜರಿನಗರ, ಝಾಫರ್ ಜರಿನಗರ, ಮುಝಮ್ಮಿಲ್ ಪಡೀಲ್, ಮುಸ್ತಫಾ ಪಡೀಲ್ ಸೇರಿದಂತೆ ಹದಿನೆಂಟು ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಸಭೆಯಲ್ಲಿ ಎಸ್‌ವೈಎಸ್ ಮುಖಂಡರಾದ ಅಹ್ಮದ್ ಹುಸೈನ್ ಶಾಫಿ ಬಜ್ಪೆ, ಅಬ್ದುಲ್ ಬಶೀರ್ ಬಜ್ಪೆ ಉಪಸ್ಥಿತರಿದ್ದರು. ಸೆಕ್ಟರ್ ಕಾರ್ಯದರ್ಶಿ ಸಿದ್ದೀಖ್ ಬಜ್ಪೆ ಸ್ವಾಗತಿಸಿ ವಂದಿಸಿದರು.

ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಭಾಂಡೂಪ್‍ನಲ್ಲಿ ನಡೆಸಲ್ಪಟ್ಟ ಸಾಹಿತ್ಯ-ಸಾಂಸ್ಕೃತಿಕ ಸಂಜೆ

ಮುಂಬಯಿ, ಫೆ.12: ಮುಂಬೆಳಕು, ಮುಂಬಯಿ ಚುಕ್ಕಿ ಸಂಕುಲ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಕಳೆದ ಸುಮಾರು ಎರಡುವರೆ ದಶಕಗಳಿಂದ ಸಕ್ರೀಯರಾಗಿ ಸೇವ ನಿರತ ಹೆಸರಾಂತ ಸಂಘಟಕ, ಬರಹಗಾರರಾಗಿದ್ದು ಸ್ವರ್ಗಸ್ಥ ನಾವುಂದ ಚಂದ್ರಶೇಖರ್ ರಾವ್ ಸ್ಮರಣಾರ್ಥ ಅವರ ಜನ್ಮದಿನಾಚರಣೆ ಪ್ರಯುಕ್ತ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕಳೆದ ಶನಿವಾರ ಸಂಜೆ ಸಾಹಿತ್ಯ-ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಸಲ್ಪಟ್ಟಿತು.

ಕಾರ್ಯಕ್ರಮದಲ್ಲಿ ದಿ| ಚಂದ್ರಶೇಖರ್ ರಾವ್ ರಚಿತ ಬಹುಮಾನ ವಿಜೇತ ಹರಟೆ-ಕೆಮ್ಮು ಕೃತಿಯನ್ನು ಹಿರಿಯ ಕವಿ, ಪ್ರಶಸ್ತಿ ಪುರಸ್ಕೃತ ನಾಟಕಕಾರ ಸಾ.ದಯಾ ವಾಚಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೂ  ಗಂಗಾಧರ ಚಿತ್ತಾಲ ಮತ್ತು ಅರವಿಂದ ನಾಡಕರ್ಣಿ ಅವರ ಆಯ್ದ ಕವಿತೆಗಳ ವಾಚನಗೈದರು. ಬಳಿಕ ನಡೆಸಲ್ಪಟ್ಟ ಕಾವ್ಯಸಂಜೆ ಕಾರ್ಯಕ್ರಮದಲ್ಲಿ ಕವಿಗಳಾದ ಡಾ| ಜಿ.ಪಿ ಕುಸುಮಾ, ಗೋಪಾಲ ತ್ರಾಸಿ, ಕುಸುಮಾ ಪೂಜಾರಿ, ಅಶೋಕ ವಳದೂರು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಅಖಿಲ ಹಾಗೂ ಸರೋಜ್ ವೆಲ್ಮೇಕರ್ ಕಾವ್ಯ ಲಹರಿ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶ್ರೀದೇವಿ ಚಂದ್ರಶೇಖರ್ ರಾವ್ ಅವರು ವಹಿಸಿದ್ದು, ಮುಖ್ಯ ಅತಿಥಿsಯಾಗಿ ಪ್ರಥಾಪ್ ಎಂ, ನವೀನ್ ಕದ್ರಿ, ಟ್ರಸ್ಟ್‍ನ ಬೆಂಗಳೂರು ಸದಸ್ಯರಾದ ಸಜ್ಜನ್ ಬಿ.ಅಂಜನ್, ಶಮಂತ್, ಕೆ.ಅನಿಲ್ ಉಪಸ್ಥಿತರಿದ್ದರು.

ಶ್ರೀದೇವಿ ಮಾತನಾಡಿ  ಅವರ ಪತಿಯ ಇಚ್ಛೆಯಂತೆ ಅವರ ಹೆಸರಿನ ಟ್ರಸ್ಟ್‍ನ್ನು ಆರಂಭಿಸಿದ್ದೇವೆ. ಈ ಟ್ರಸ್ಟ್ ಮುಖೇನ ಕಳೆದ ಕೆಲವೇ ತಿಂಗಳಲ್ಲಿ ಮುಂಬಯಿ ಹಾಗೂ ಕರ್ನಾಟಕದ ಯೋಗ್ಯ ಅರ್ಹ ಸುಮಾರು 25 ವಿದ್ಯಾಥಿರ್sಗಳಿಗೆ ವಿದ್ಯಾಥಿರ್s ವೇತನ, ಹಿರಿಯ ನಾಗರಿಕರಿಗೆ ಸಹಾಯಧನ ಹಾಗೂ ವೈದ್ಯಕೀಯ ವೆಚ್ಚ ನೀಡಿದೆ. ಈ ರೀತಿಯಿಂದ ಚಂದ್ರಶೇಖರ್ ರಾವ್ ಅವರ ದಿವ್ಯ ಚೇತನಕ್ಕೆ ನಿಜವಾದ ಅರ್ಥಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದೆ ಎಂದರು. ಹಾಗೂ ಉಪಸ್ಥಿತ ಹಿರಿಯ ನಾಗರಿಕರಿಗೆ ಹಾಗೂ ಅಸೌಖ್ಯದಿಂದ ಅಸ್ಪತ್ರೆ ಸೇರಿಕೊಂಡಿರುವ ಅಸಹಾಯಕರಿಗೆ ವೈದ್ಯಕೀಯ ವೆಚ್ಚವನ್ನು ಹಸ್ತಾಂತರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಷನ್ಮಾಂತಾನಂದ ಆರ್ಟ್ಸ್ ಭಾಂಡೂಪ್ ತಂಡವು ನೃತ್ಯ ವೈವಿಧ್ಯ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಕು| ಎಸ್.ಅಖಿಲ ಪ್ರಾರ್ಥನೆಯನ್ನಾಡಿದರು. ಚಂದ್ರಶೇಖರ್ ರಾವ್ ಕುಂದಾಪುರ ನಾವುಂದ ಕಿರಿಮಂಜೇಶ್ವರ ಮೂಲದವರು. ಮುಂಬಯಿ ಕನ್ನಡ ಸಂಘ, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕ, ಜಿ.ಡಿ ಜೋಶಿ ಪ್ರತಿಷ್ಠಾನ ಸೇರಿದಂತೆ ಹಲವಾರು ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿ ನಿಷ್ಠಾವಂತರಾಗಿ ಶ್ರಮಿಸಿದ್ದರು ಎಂಬುದನ್ನು ಮನವರಿಸಿದ ಕವಿ ಗೋಪಾಲ ತ್ರಾಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದÀರು.

ಧರ್ಮಸ್ಥಳದಲ್ಲಿ ಪಾದಯಾತ್ರಿಗಳಿಗೆ ಸನ್ಮಾನ ಪಾದಯಾತ್ರಿಗಳು ತಂಗುವಲ್ಲಿ ಸತ್ಸಂಗ ಕಾರ್ಯಕ್ರಮ

ಮುಂಬಯಿ (ಉಜಿರೆ), ಫೆ.13: ಮುಂದಿನ ವರ್ಷದಿಂದ ಧರ್ಮಸ್ಥಳಕ್ಕೆ ಶಿವರಾತ್ರಿ ಸಂದರ್ಭ ಬರುವ ಪಾದಯಾತ್ರಿಗಳು ತಂಗುವ ಸ್ಥಳಗಳಲ್ಲಿ ಧರ್ಮಸ್ಥಳದ ಅಖಿಲ ಕರ್ನಾಟಕ ಭಜನಾ ಪರಿಷತ್ ವತಿಯಿಂದ ಭಜನೆ, ನೃತ್ಯ ಭಜನೆ, ಧಾರ್ಮಿಕ ಉಪನ್ಯಾಸ, ಭಕ್ತಿಗೀತೆಗಳ ಗಾಯನ ಮುಂತಾದ ಸತ್ಸಂಗ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು.
ವೀರೇಂದ್ರ ಹೆಗ್ಗಡೆ ಸೋಮವಾರ ಧರ್ಮಸ್ಥಳದಲ್ಲಿ ಬೆಂಗಳೂರಿನ ಆತ್ಮಲಿಂಗ ಪಾದಯಾತ್ರಾ ಸಮಿತಿಯ ಮುಖ್ಯಸ್ಥ ಹನುಮಂತಪ್ಪ ಸ್ವಾಮೀಜಿ ಮತ್ತು ಸದಸ್ಯರನ್ನು ಸನ್ಮಾನಿಸಿ ಮಾತನಾಡಿ ನಮ್ಮ ದೇಹವೇ ದೇಗುಲ, ಆತ್ಮನೇ ಪರಮಾತ್ಮ. ಪ್ರತಿಯೊಬ್ಬರ ಹೃದಯದಲ್ಲಿಯೂ ದೇವರಿದ್ದಾನೆ. ಆದುದರಿಂದ ಭಕ್ತರಲ್ಲೇ ನಾವು ಭಗವಂತನನ್ನು ಕಾಣಬೇಕು ಎಂದರು.

ಪಾದಯಾತ್ರೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ದುಶ್ಚಟಗಳನ್ನು ದೂರ ಮಾಡಿ ಸಾರ್ಥಕ ಜೀವನ ನಡೆಸಬೇಕು. ಪ್ರೀತಿ-ವಿಶ್ವಾಸದ, ಶ್ರದ್ಧಾ-ಭಕ್ತಿಯ ಗೃಹಸ್ಥ ಜೀವನದಿಂದ ಸುಖ-ಸಂತೋಷ, ಶಾಂತಿಯನ್ನು ಪಡೆಯಬಹುದು. ಪಾದಯಾತ್ರೆಯಿಂದ ಆತ್ಮ ಸಾಕ್ಷಾತ್ಕಾರ ಆಗುತ್ತದೆ. ಮನಸ್ಸು ಮತ್ತು ಇಂದ್ರಿಯಗಳ ನಿಯಂತ್ರಣವಾಗುತ್ತದೆ. ವರ್ಷದಲ್ಲಿ ಒಂದು ದಿನ ಮಾತ್ರ ಶಿವರಾತ್ರಿ ಆಚರಣೆ ಅಲ್ಲ. ನಿತ್ಯವೂ ಶಿವರಾತ್ರಿ ಆಗಬೇಕು. ಅಂದರೆ ಶ್ರದ್ಧಾ-ಭಕ್ತಿಯಿಂದ ದೇವರ ಧ್ಯಾನ ಮಾಡಿ, ದುಶ್ವಟಗಳನ್ನು ದೂರ ಮಾಡಿ ಸಾರ್ಥಕ ಜೀವನ ನಡೆಸಬೇಕು ಎಂದೂ  ಹೆಗ್ಗಡೆ ಕಿವಿಮಾತು ಹೇಳಿದರು.
ಧರ್ಮಸ್ಥಳಕ್ಕೆ ಈಗಾಗಲೇ 10,000 ಮಂದಿ ಪಾದಯಾತ್ರಿಗಳು ಬಂದಿದ್ದು ಮಂಗಳವಾರ ಶಿವರಾತ್ರಿ ಸಂದರ್ಭ ಇನ್ನೂ ಸಾವಿರಾರು ಪಾದಯಾತ್ರಿಗಳು ಬರುವ ನಿರೀಕ್ಷೆ ಇದೆ ಎಂದು ಕ್ಷೇತ್ರಾಧಿಕಾರಿಗಳು ತಿಳಿಸಿದ್ದಾರೆ.

ಜಿಎಸ್‍ಬಿ ಮಂಡಲ ಡೊಂಬಿವಲಿ ಅಧ್ಯಕರಾಗಿ ಮನೋಹರ್ ಡಿ.ಪೈ ಆಯ್ಕೆ

ಮುಂಬಯಿ, ಫೆ.13: ಜಿ.ಎಸ್.ಬಿ ಮಂಡಲ ಡೊಂಬಿವಲಿ ಇದರ 2018-19ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಳೆದ ಭಾನುವಾರ ಡೊಂಬಿವಿಲಿ ಪೂರ್ವದ ಗೋಗ್ರಾಸ್‍ವಾಡಿ ಅಲ್ಲಿನ ಜಿಎಸ್‍ಬಿ ಮಂಡಲ ಶಾಲಾ ಆವರಣದಲ್ಲಿ ನಡೆಸಲ್ಪಟ್ಟಿತು. ಅಧ್ಯಕ್ಷರಾಗಿ ಮನೋಹರ್ ಡಿ.ಪೈ, ಕಾರ್ಯದರ್ಶಿ ಆಗಿ ನಿತ್ಯಾನಂದ ಕೆ.ಶೆಣೈ, ಖಜಾಂಚಿ ಯಾಗಿ ಶ್ರೀ ವೆಂಕಟೇಶ್ ಆರ್. ಕಾಮತ್ ಅವಿರೋಧವಾಗಿ ಪುನಾರಾಯ್ಕೆ ಗೊಂಡರು.

ಸಮಿತಿಯ ಕಾರ್ಯಕಾರಿ ಸಮಿತಿ ಆಯ್ಕೆಗಾಗಿ ಚುನಾವಣೆ ನಡೆಸಲ್ಪಟ್ಟಿದ್ದು, ಗಣೇಶ ನಾಗೇಶ್ ಕಿಣಿ, ನಾರಾಯಣ ಆರ್.ಕಾಮತ್, ರಮಾನಂದ ಪಡಿಯಾರ್, ವಿಷ್ಣುದಾಸ್ ಮಲ್ಯ, ಮುರಳೀಧರ ಆರ್.ಭಟ್, ವಿನೀತ್ ವಿ.ಕಿಣಿ, ಉಮೇಶ್ ಶೆಣೈ, ರಜೇಂದ್ರ ಭಟ್, ವೃಂದಾ ಸುರೇಂದ್ರ ಮಹಾಲೇ, ಪುಷ್ಪಾ ಪಿ.ಪಡಿಯಾ ರ್, ಸುಜಯಾ ಎಸ್.ನಾಯಕ್ ಅತಾಧಿಕ ಮತಗಳಿಂದ ಚುನಾಯಿತರಾದರು. ಈ ಸಮಿತಿ ಸತತ ಮೂರನೇ ಬಾರಿಗೆ ಪುನಾರಾಯ್ಕೆ ಗೊಂಡಿದೆ.

ಖಾರ್ ಪೂರ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಮಹಿಳಾ ಮಂಡಳಿ ಆಚರಿಸಿದ ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮ

ಮುಂಬಯಿ, ಫೆ.08: ಉಪನಗರದ ಖಾರ್ ಪೂರ್ವದಲ್ಲಿ ತುಳು ಕನ್ನಡಿಗರ ಸಂಚಾಲಕತ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ ಮಹಿಳಾ ಮಂಡಳಿಯು ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮ ಕಳೆದ ಶನಿವಾರ ಸಂಜೆ ಸ್ಥಳಿಯ ಸಾಯಿಬಾಬಾ ರಸ್ತೆಯಲ್ಲಿನ ಜವಹಾರ್‍ನಗರ್‍ನ ಪಹೇಲ್ವಾನ್ ಚಾಳ್‍ನ ಸಾಯಿಧಾ ಮ್ ಬಿಲ್ಡಿಂಗ್‍ನಲ್ಲಿ ಸೇವಾ ನಿರತ ಶ್ರೀ ಶನಿಮಹಾತ್ಮ ಮಂದಿರದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಿತು.

ಸ್ಥಾನೀಯ ನಗರ ಸೇವಕಿ ಪ್ರಜ್ಞಾ ದೀಪಕ್ ಭೂತ್ಕರ್, ಸಮಿತಿಯ ಮಹಿಳಾ ಮಂಡಳಿ ಮುಖ್ಯಸ್ಥೆಯರುಗಳಾದ ಕೇಶರಿ ಬಿ.ಅಮೀನ್, ಶೋಭಾ ವಾಸು ಕೋಟ್ಯಾನ್ ಪದಾಧಿಕಾರಿಗಳೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾರದಾ ಶ್ರೀಧರ್ ಬಂಗೇರ, ಲೀಲಾವತಿ ಯೋಗೇಶ್ ಹೆಜ್ಮಾಡಿ, ಕಾರ್ಯಕರ್ತೆಯರಾ ದ ಪುಷ್ಪ ಅಂಚನ್, ಸರಸ್ವತಿ ಅಮೀನ್, ಸುಲೋಚನ ವಿ.ಬಂಗೇರ,  ಸರಸ್ವತಿ ಬಿ.ಪೂಜಾರಿ, ರೇವತಿ ಶೆಟ್ಟಿ, ಉಷಾ ಜತ್ತನ್, ಮೋಹಿನಿ ಸಾಲಿಯಾನ್, ಶೋಭಾ  ಸಾಲೀಯಾನ್, ಶೋಭಾ  ಪೂಜಾರಿ,  ವಿಮಲಾ ಆರ್ ಕೋಟ್ಯಾನ್, ಸುರೇಖಾ ಕೋಟ್ಯಾನ್, ಅನುಸೂಯ ಜಿ.ಸುವರ್ಣ, ರೇಖಾ ಎಸ್.ಪೂಜಾರಿ, ಪಾರ್ವತಿ ಆರ್. ನಾಯ್ಕ್, ಗೀತಾ ಪೂಜಾರಿ, ಕುಸುಮ ಶೆಟ್ಟಿ ಮತ್ತಿತರ ಸದಸ್ಯೆಯರು ಪಾಲ್ಗೊಂಡು ಶ್ರೀ ದೇವರಿಗೆ ಪೂಜೆ ನೆರವೇರಿಸಿ ಅರಸಿನ ಕಾರ್ಯಕ್ರಮ ವಿಧಿವತ್ತಾಗಿ ಆಚರಿಸಿದರು. ಮಂದಿರದ ಅರ್ಚಕ ನಾಗೇಶ್ ಸುವರ್ಣ ಪೂಜಾಧಿಗಳನ್ನು ನೆರವೇರಿಸಿ ಹರಸಿದರು.

ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಶಂಕರ್ ಕೆ.ಸುವರ್ಣ, ಉಪಾಧ್ಯಕ್ಷ ದೇವೆಂದ್ರ ವಿ.ಬಂಗೇರ, ಉಪ ಕಾರ್ಯಾಧ್ಯಕ್ಷ ಜಯರಾಮ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ರಮೇಶ್ ಎನ್.ಪೂಜಾರಿ, ಜೊತೆ ಕೋಶಾಧಿಕಾರಿ ವಿನೋದ್ ವೈ. ಹೆಜ್ಮಾಡಿ, ಸದಸ್ಯರುಗಳಾದ ಜನಾರ್ದನ ಸಾಲಿಯಾನ್, ಸಚಿನ್  ಪೂಜಾರಿ, ನೀಲೇಶ್ವರ ನಾಯ್ಕ, ಭೋಜ ಪೂಜಾರಿ, ತಿಲಕ್ ಶೆಟ್ಟಿಗಾರ್, ಪ್ರಕಾಶ್ ಶೆಟ್ಟಿ, ರಾಜೇಶ್ ಎಸ್.ಬಂಗೇರ,  ಉಪಸ್ಥಿತರಿದ್ದರು. ಸಮಿತಿ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೆ.ಹೆಜ್ಮಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.  ತದನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ಫೆ.17ನೇ ಶನಿವಾರ ಶ್ರೀ ಶನಿಮಹಾತ್ಮ ಮಂದಿರದಲ್ಲಿ 51ನೇ ವಾರ್ಷಿಕ ಶನೀಶ್ವರ ಮಹಾಪೂಜೆಯನ್ನು, ಫೆ.19ನೇ ಸೋಮವಾರ ಅಪರಾಹ್ನ ಬಿಲ್ಲವ ಭವನ, ಸಾಂತಾಕ್ರೂಜ್ ಪೂರ್ವ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, `ತುಳುನಾಡ ಸಿರಿ ಮಹಾತ್ಮೆ’ ಯಕ್ಷಗಾನ  ಆಯೋಸಲಾಗಿದೆ ಎಂದು ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೆ.ಹೆಜ್ಮಾಡಿ ತಿಳಿಸಿದ್ದಾರೆ.

ಫೆ.17: ಖಾರ್ ಪೂರ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯಲ್ಲಿ 51ನೇ ವಾರ್ಷಿಕ ಶನೀಶ್ವರ ಮಹಾಪೂಜೆ

ಮುಂಬಯಿ, ಫೆ.08: ಮುಂಬಯಿ ಉಪನಗರದ ಖಾರ್ ಪೂರ್ವದಲ್ಲಿ ತುಳು ಕನ್ನಡಿಗರ ಸಂಚಾಲಕತ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ (ರಿ.) ಸಂಚಾಲಕತ್ವದಿಂದ ಸ್ಥಳಿಯ ಸಾಯಿಬಾಬಾ ರಸ್ತೆಯಲ್ಲಿನ ಜವಹಾರ್‍ನಗರ್‍ನ ಪಹೇಲ್ವಾನ್ ಚಾಳ್‍ನಲ್ಲಿ ಕಳೆದ ಸುಮಾರು ಐದು ದಶಕಗಳಿಂದ ಸೇವಾ ನಿರತ ಸದ್ಯ  ಸಾಯಿಧಾಮ್ ಬಿಲ್ಡಿಂಗ್‍ನಲ್ಲಿ ಸೇವಾ ನಿರತ ಶ್ರೀ ಶನಿಮಹಾತ್ಮ ಮಂದಿರದಲ್ಲಿ 51ನೇ ವಾರ್ಷಿಕ ಶನೀಶ್ವರ ಮಹಾಪೂಜೆಯನ್ನು ಇದೇ ಫೆ.17ರ ಶನಿವಾರ ಹಮ್ಮಿಕೊಳ್ಳಲಾಗಿದೆ. 

ಶನೀಶ್ವರ ಮಹಾಪೂಜೆ ಅಂಗವಾಗಿ ಅಂದು ಶನಿವಾರ ಬೆಳಿಗ್ಗೆ 6.00 ಗಂಟೆಯಿಂದ ಗಣಹೋಮ,  8.00 ಗಂಟೆಯಿಂದ ಶ್ರೀಸತ್ಯನಾರಾಯಣ ಮಹಾಪೂಜೆ, ಮಧ್ಯಾಹ್ನ 11.00 ಗಂಟೆಯಿಂದ ಕಲಶ ಪ್ರತಿಷ್ಠಾ, ಭಜನೆ ಅಪರಾಹ್ನ 3.00 ಗಂಟೆಯಿಂದ ಶನೀಶ್ವರ ಗ್ರಂಥ ಪಾರಾಯಣ, ಸಂಜೆ 7.00 ಗಂಟೆಯಿಂದ ಮಂಗಳಾರತಿ, ರಾತ್ರಿ ತೀರ್ಥ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಿನಾಂಕ ಫೆ.19ನೇ ಆದಿತ್ಯವಾರ ಅಪರಾಹ್ನ 2.30 ಗಂಟೆಯಿಂದ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಸಮಿತಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಕ್ರೂಜ್ ಅವರಿಂದ `ತುಳುನಾಡ ಸಿರಿ ಮಹಾತ್ಮೆ’ ಯಕ್ಷಗಾನ  ಪ್ರದರ್ಶಿಸಲಿದೆ.

ಆ ಪ್ರಯುಕ್ತ ಮಹಾನಗರದಲ್ಲಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಈ ಪುಣ್ಯಾಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದವನ್ನು ಸ್ವೀಕರಿ ಶ್ರೀ ಶನಿದೇವರ ಕೃಪೆಗೆ ಪಾತ್ರರಾಗಬೇಕಾಗಿ  ಸೇವಾ ಸಮಿತಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿಯ ಸದಸ್ಯರು, ವಿಶ್ವಸ್ಥ ಸದಸ್ಯರು, ಮಹಿಳಾ ಮಂಡಳಿ, ಯುವ ವಿಭಾಗ, ಉಪ ಸಮಿತಿ ಸದಸ್ಯರೆಲ್ಲರ ಪರವಾಗಿ ಸಮಿತಿಯ ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಹೆಜ್ಮಾಡಿ ಈ ಮೂಲಕ ವಿನಂತಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Kemmannu Main Road [Work-in-progress, Pictures upd
View More

Need your helping hand...Need your helping hand...
Mount Rosary Church Annoucement for the weekMount Rosary Church Annoucement for the week
Blood Drive - 2 at Kemmannu on March 4.Blood Drive - 2 at Kemmannu on March 4.
Rozaricho Gaanch December 2017Rozaricho Gaanch December 2017
Milarchi Laram - Issue Jan 2018Milarchi Laram - Issue Jan 2018
"GOOD NEWS FOR NON RESIDENT INDIANS" SHORT TERM RENTAL FULLY FURNISHED ACCOMMODATION AVAILABLE AT UDUPI NOW"
Souza’s Mega Festival SaleSouza’s Mega Festival Sale
Read online Uzvaad:<font color=red> Read online Uzvaad</font color=red>:
Visit Axis Bank Now open in Kallianpura, SanthekatteVisit Axis Bank Now open in Kallianpura, Santhekatte
For all your travel needs contact Sequeira TouristFor all your travel needs contact Sequeira Tourist
Become a professional or part time trader or take Forex Trading as a hobby. We will provide our assistance to you in your success. Click here to know more....Become a professional or part time trader or take Forex Trading as a hobby. We will provide our assistance to you in your success. Click here to know more....
Power Care Services, MoodubellePower Care Services, Moodubelle
Ganapahti Co-operative Agricultural BankGanapahti Co-operative Agricultural Bank
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India
Mangalorean Fertility Physician in New York

 

Mangalorean Fertility Physician in New York

 

For information, please email nigelepereira.wcmc@gmail.com or contact Megi Zeku at 646-962-7499, prompt 3.

 

 

Thank you from Kemmannu.comContact for all your Travel, Tours and For Rent a Car

Contact Maria Travels  for all your Travel, Tours and For Rent a Car Mob: 9980889512 or 9819444307

Thanksgiving to St. Lawrance

Thanksgiving to St. Lawrance

SAHARA

Sponsored Albums