Brief Mumbai - Mangalore news with pictures


Rons Bantwal
Kemmannu News Network, 01-07-2018 09:42:44


Write Comment     |     E-Mail To a Friend     |     Facebook     |     Twitter     |     Print


Mumbai,June.29:Family Members of deceased Technician Manish Pandey takes his dead body from Rajawadi Hospital. Technician Manish Pandey lost his life in the chartered plane crash at Ghatkopar, in Mumbai on Friday.   

Mumbai : Actors Sanjay Dutt, Chitrangda Singh, Deepak Tejori, and Filmmakers Tigmanshu Dhulia and Raju Chadha during trailer launch of film Saheb Biwi aur Gangster 3 in Mumbai on Satrday today.

ಕಯ್ಯಾರ ಕಿಞ್ಞಣ್ಣ ರೈ ಅವರ ಬದುಕು ಬರಹ ಸಮಾಜಕ್ಕೆ ಆದರ್ಶ: ಸದಾನಂದ ಪೆರ್ಲ

ಮುಂಬಯಿ, ಜೂ.30: ಸರಕಾರದ ಪ್ರತಿಷ್ಠಿತ ಪಂಪಾ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿರುವ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ಬದುಕು ಬರಹ ಸಮಾಜಕ್ಕೆ ಆದರ್ಶ. ಅವರ ಚಿಂತನೆಯ ವಿಚಾರ ಧಾರೆ, ಬದುಕಿನ ರೀತಿ-ನೀತಿ ಅನುಕರಣಿಯವಾದುದು ಎಂದು ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ಮಾಪಕರಾದ ಡಾ| ಸದಾನಂದ ಪೆರ್ಲ ಅಭಿಪ್ರಾಯ ಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ, ಶ್ರೀ ಗೋಕರ್ಣ ನಾಗೇಶ್ವರ ಕಾಲೇಜಿನ ಸಹಭಾಗಿತ್ವದಲ್ಲಿ ನಡೆಸಿದ ಕಯ್ಯಾರರ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಯ್ಯಾರ ಅವರ ಬದುಕು ಬರಹ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಮಾತನಾಡಿ ಸಾಹಿತ್ಯ ಸಂಸ್ಕೃತಿಯ ಅರಿವು ಯುವ ಪೀಳಿಗೆಗೆ ಆಗಬೇಕಾದರೆ ಹಿರಿಯರ ಆದರ್ಶವನ್ನು ಮನಗಾಣಿಸಬೇಕು. ಆ ದಿಸೆಯಲ್ಲಿ ಕಯ್ಯಾರ ಅವರ ನೆನಪು ಅರ್ಥಪೂರ್ಣವಾದುದು ಎಂದು ಅಭಿಪ್ರಾಯ ಪಟ್ಟರು.

ಕವಿ ಕಯ್ಯಾರ ಸುಪುತ್ರ ಡಾ| ಪ್ರಸನ್ನ ರೈ ಅಭ್ಯಾಗತರಾಗಿದ್ದು ಈ ಸಂದರ್ಭದಲ್ಲಿ ಕಾಲೇಜಿನ ಕನ್ನಡ ಸಂಘದ ಉದ್ಘಾಟನೆ ನೇರವೇರಿತು. ಕಾಲೇಜಿನ ಪ್ರಾಂಶುಪಾಲರಾದ ಡಾ| ರೇಣುಕಾ ಕೆ. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದು ಕ್ಷಮಾ ಎನ್.ರಾವ್, ವಿಘ್ನೇಶ್ ಬಿ., ಕು| ಸುರಕ್ಷಾ ಉಪಸ್ಥಿತರಿದ್ದರು.

ಕಾಲೇಜ್‍ನ ಕನ್ನಡ ಸಂಘದ ನಿರ್ದೇಶಕ ಡಾ| ದಿನಕರ ಎಸ್.ಪಚ್ಚುನಾಡಿ ಕಾರ್ಯಕ್ರಮ ನಿರೂಪಿಸಿದರು. ರತ್ನಾವತಿ ಜೆ.ಬೈಕಾಡಿ ಕಯ್ಯಾರು ಅವರ ಹಾಡುಗಳನ್ನು ಪ್ರಸ್ತುತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕಧ್ಯಕ್ಷೆ ಕೆ.ವಿಜಯಲಕ್ಷ್ಮೀ ಸ್ವಾಗತಿಸಿದರು. ಕೋಶಾಧಿಕಾರಿ ವೈ.ಕೃಷ್ಣಮೂರ್ತಿ ವಂದಿಸಿದರು.

ರಷ್ಯಾ ರಾಷ್ಟ್ರದ ಟಸ್ಖೇಂಟ್‍ನಲ್ಲಿ ಜರಗುವ 17ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನ

ಎಲ್.ವಿ ಅವಿೂನ್-ಪಂ| ನವೀನ್ಚÀಂದ್ರ ಸನಿಲ್-ಚಂದ್ರಶೇಖರ ಬೆಳ್ಚಡ ಆಯ್ಕೆ

ಮುಂಬಯಿ, ಜುಲೈ.01: ಗ್ಲೋಬಲ್ ಫೌಂಡೇಶನ್ ಅಚೀವರ್ (ಜಿಎಫ್‍ಎ) ಸಂಸ್ಥೆಯು ರಷ್ಯಾ ರಾಷ್ಟ್ರದ ಟಸ್ಖೇಂಟ್ (ಉಝ್ಬೆಕೀಸ್ತಾನ್)ನ ಅಲ್ಲಿನ ಕುಶ್‍ಬೆಗಿ ಸ್ಟ್ರೀಟ್‍ನ ಅಮರ್ ಸಭಾಂಗಣದಲ್ಲಿ ಇದೇ ಜುಲೈ ಮೊದಲ ವಾರದಲ್ಲಿ ಜಾಗತಿಕ ಅರ್ಥಶಾಸ್ತ್ರದ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿ (ಗ್ಲೋಬಲಾಯಿಝೇಶನ್ ಆಫ್ ಇಕಾನಾಮಿಕ್ ಗ್ರೋಥ್ ಎಂಡ್ ಸೋಶಿಯಲ್ ಡೆವಲಪ್‍ಮೆಂಟ್) ವಿಚಾರಿತ ಮಹಾ ಸಮ್ಮೇಳನ ಆಯೋಜಿಸಿದೆ. ಈ ಮಹಾ ಸಮ್ಮೇಳನಕ್ಕೆ ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿ ಮಹಾನಗರದಲ್ಲಿನ ಪ್ರತಿಷ್ಠಿತ ಸಮಾಜ ಸೇವಕರಾದ ಕನ್ನಡ ಸಂಘ ಸಾಂತಕ್ರೂಜ್‍ನ ಅಧ್ಯಕ್ಷ ಎಲ್.ವಿ ಅವಿೂನ್, ವಾಸ್ತುತಜ್ಞ ಪಂ| ನವೀನ್‍ಚಂದ್ರ ಆರ್.ಸನಿಲ್ ಮತ್ತು ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಚಡ ಸಮ್ಮೇಳನಕ್ಕೆ ಆಯ್ಕೆಗೊಳಿಸಿದ್ದು ಆಯ್ದ ಬೃಹನ್ಮುಂಬಯಿನ ಪ್ರತಿಷ್ಠಿತ ಮೂರು ಮಹಾನೀಯರಿಗೂ ತಮ್ಮ ಸಾಧನೀಯ ಸೇವೆಯನ್ನು ಗುರುತಿಸಿ ಏಷಿಯಾ ಪೆಸಿಫಿಕ್ ಅಚೀವರ್ಸ್ ಅವಾರ್ಡ್ (ಂsiಚಿ Pಚಿಛಿiಜಿiಛಿ ಂಛಿhieveಡಿs ಂತಿಚಿಡಿಜ) ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು ಎಂದು ಜಿಎಫ್‍ಎ ಕಾರ್ಯದರ್ಶಿ ಎ.ಕೆ ಶರ್ಮ ತಿಳಿಸಿದ್ದಾರೆ.

ಸಮ್ಮೇಳನದ ಕೊನೆಯ ದಿನ ಜು.07ನೇ ಶನಿವಾರ ಅಂತರಾಷ್ಟ್ರೀಯ ಸಾಂಸ್ಕೃತಿಕ ಸಮಿತಿ ಮತ್ತು ಜಿಎಫ್‍ಎ ಇವುಗಳ ಆಶ್ರಯದಲ್ಲಿ ಹದಿನೆಳನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನ (ಇಂಟರ್‍ನೇಶನಲ್ ಕಲ್ಚರಲ್ ಫೆಸ್ಟ್-ಐಸಿಎಫ್) ಆಯೋಜಿಸಿದೆ. ಈ ಭವ್ಯ ಉತ್ಸವ `ಸಾಂಸ್ಕೃತಿಕ ಸೌರಭ’ದಲ್ಲಿ ಭಾರತೀಯ ಸಂಸ್ಕೃತಿ ಸಾರುವ ವೈವಿಧ್ಯಮಯ ನೃತ್ಯಾವಳಿ, ನೃತ್ಯರೂಪಕ, ಜಾನಪದ ಮತ್ತು ಸಾಹಿತಿಕ ಕಾರ್ಯಕ್ರಮಗಳು ಜರಗಲಿವೆ. ಅಪರಾಹ್ನ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಗಣ್ಯಾಧಿಗಣ್ಯರು ಉಪಸ್ಥಿತರಿದ್ದು ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್.ವಿ ಅವಿೂನ್, ವಾಸ್ತುತಜ್ಞ ಪಂ| ನÀವೀನ್‍ಚಂದ್ರ ಆರ್.ಸನಿಲ್, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಚಡ ಇವರಿಗೆ ವಾರ್ಷಿಕ ಪುರಸ್ಕಾರ ಪ್ರದಾನಿಸುವರು ಎಂದು ಐಸಿಎಫ್ ಭಾರತೀಯ ಸಮಿತಿ ಕಾರ್ಯಾಧ್ಯಕ್ಷ ಇಂ| ಮಂಜುನಾಥ್ ಸಾಗರ್ ತಿಳಿಸಿದ್ದಾರೆ.

ಎಲ್.ವಿ ಅವಿೂನ್:
ಕನ್ನಡ ಸಂಘ ಸಾಂತಾಕ್ರೂಜ್ ಇದರ ಅಧ್ಯಕ್ಷರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ, ಭಾರತ್ ಬ್ಯಾಂಕ್‍ನ ಮಾಜಿ ನಿರ್ದೇಶಕ, ಮುಂಬಯಿ ಪ್ರದೇಶ ಬಿಜೆಪಿ ಪಕ್ಷದ ಧುರೀಣ, ಮಂಗಳೂರು ಬಜಪೆ ದೊಡ್ಡಿಕಟ್ಟೆ ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಆಡಳಿತ ಮಂಡಳಿ ಅಧ್ಯಕ್ಷರಾಗಿ, ಸಮಾಜ ಸೇವಕ, ಧಾರ್ಮಿಕ ಮುಂದಾಳುವಾಗಿ, ಅಂಬಿಕಾ ಮೌಲ್ಡ್‍ಟೆಕ್ ಪ್ರೈವೇಟ್ ಲಿಮಿಟೆಡ್ (ಎಸ್ಸೆಲ್) ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಓರ್ವ ಯಶಸ್ವೀ ಉದ್ಯಮಿ ಆಗಿ ಮುಂಬಯಿ ಮಹಾನಗರದಲ್ಲಿ ತನ್ನದೇ ಆದ ಸ್ವಂತಿಕೆಯ ಪ್ರತಿಷ್ಠೆ ರೂಪಿಸಿ ಕೊಂಡವರು.

ಕನ್ನಡ ಸಂಘ ಸಾಂತಾಕ್ರೂಜ್ (ರಿ.) ಸಂಸ್ಥೆ ಇದೀಗ ಅರ್ವತ್ತರ ಆಚರಣೆಯಲ್ಲಿದ್ದು ವಜ್ರಮಹೋತ್ಸವ ಸಂಭ್ರಮದಲ್ಲಿ -ದೆ. ಆ ಪಯ್ಕಿ ಸುಮಾರು 18ವರ್ಷಗಳಿಂದ (ಆರು ಅವಧಿಗೆ) ನಿರಂತರವಾಗಿ ಸಂಘದ ಅಧ್ಯಕ್ಷಪದ ಅಲಂಕರಿಸಿದ್ದಾರೆ. ಸಂಘದಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಇನ್ನಿತರ ವಿಭಿನ್ನ, ಅರ್ಥಪೂರ್ಣ ಕಾರ್ಯಕ್ರಮ -ಗಳನ್ನು ರೂಪಿಸಿ ಸಮಾಜಹಿತ ಯೋಜನೆಗÀಳನ್ನು ರೂಪಿಸಿ ವೈಶಿಷ್ಟ್ಯಮಯವಾಗಿ ಬೆಳೆಸಿ ಕೀರ್ತಿಗೆ ಪಾತ್ರರಾದ ಎಲ್ವೀ ತನ್ನ ಅಧಿಕಾರವಧಿಯಲ್ಲಿ ಸಂಘಕ್ಕೆ ಪುನ:ರ್‍ಜೀವ ನೀಡಿ ಸಂಸ್ಥೆಯಲ್ಲಿ ಬೆಳೆಸಿದವರು. ಆ ಮೂಲಕ ಬೃಹನ್ಮುಂಬಯಿ ಅಲ್ಲಿನ ನೂರಾರು ಕನ್ನಡ ಸಂಸ್ಥೆಗಳ ಪಯ್ಕಿ ಕನ್ನಡ ಸಂಘ ಸಾಂತಾಕ್ರೂಜ್‍ನ್ನು ಅಗ್ರಗಣ್ಯ ಪಂಕ್ತಿಯಲ್ಲಿರಿಸಲು ಹರಸಾಹಸ ಪಟ್ಟವರು.

1974ರಲ್ಲಿ ತನ್ನ ಸ್ವಂತಿಕೆಯ ಉದ್ಯಮವನ್ನಾಗಿಸಿ ಅಂಬಿಕಾ ಗ್ರೂಫ್ ಆಫ್ ಕಂಪೆನಿಸ್ ಸಂಸ್ಥೆಯನ್ನು ಸ್ಥಾಂಪನೆಗೊಳಿಸಿ ಪ್ರೆಶರ್ ಡೈ, ಗೃಹಪಯೋಗಿ ಸಾಮಾಗ್ರಿಗಳ ಉತ್ಪಾದನೆಗಳಾದ ಮಿಕ್ಸರ್ ಗ್ರೈಂಡರ್ ಹಾಗೂ ಸಿಲಿಂಗ್ ಪ್ಯಾನ್ ಇತ್ಯಾದಿಗಳನ್ನು ಮುಂಬಯಿ ಹಾಗೂ ಗುಜರಾತ್‍ನ ದಮನ್‍ನಲ್ಲಿ ಉತ್ಪಾಧಿಸಿ ಮಾರುಕಟ್ಟೆಗೆ ವಿತರಿಸುವಲ್ಲಿ ಯಶಕಂಡರು. ಕ್ರಮೇಣ 1980ರಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪಕ್ಷವನ್ನು ಸೇರಿ ರಾಜಕೀಯಕ್ಕೆ ಸೇರ್ಪಡೆಗೊಂಡರು. ಬಳಿಕ 1980-1994ನಲ್ಲಿ ಸಾಂತಾಕ್ರೂಜ್ ವಿಧಾನ ಸಭಾ ಕ್ಷೇತ್ರದ ಕೋಶಾಧಿಕಾರಿ, 1994-2000ನಲ್ಲಿ ಸಾಂತಾಕ್ರೂಜ್ ವಿಧಾನ ಸಭೆಯ ಅಧ್ಯಕ್ಷರಾಗಿ, 2000-2003ರÀಲ್ಲಿ ಉತ್ತರ-ಪಶ್ಚಿಮ ಮುಂಬಯಿ ಜಿಲ್ಲಾ ಉಪಾಧ್ಯಕ್ಷ, 2003-2004ರÀಲ್ಲಿ ಉತ್ತರ-ಪಶ್ಚಿಮ ಮುಂಬಯಿ ಜಿಲ್ಲಾ ಕೋಶಾಧಿಕಾರಿ, 2004-2009ರಲ್ಲಿ ಸೌತ್ ಇಂಡಿಯಾನ್ ಸೆಲ್, ಮುಂಬಯಿ ಇದರ ಅಧ್ಯಕ್ಷ, 2009-2015 ಮುಂಬಯಿ ಬಿಜೆಪಿ ಕಾರ್ಯನಿರ್ವಾಹಣ ಸಮಿತಿಯ ಸದಸ್ಯರಾಗಿ ಹಾಗೂ ಇದೀಗ ಮಹಾರಾಷ್ಟ್ರ ಬಿಜೆಪಿ ಕಾರ್ಯನಿರ್ವಾಹಣ ಸಮಿತಿಯ ಸದಸ್ಯರಾಗಿ ರಾಜಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಾಹಿಸುತ್ತಾ ಒಟ್ಟಾರೆ ಎರಡುವರೆ ದಶಕಗಳಲ್ಲಿ ರಾಜಕರಣದಲ್ಲಿ ತೊಡಗಿಸಿರುವರು.
ಬಳಿಕ ಸಾಮಾಜಿಕಿ ಕಳಕಳಿ ಹೊಂದಿ ಸ್ವಸಮಾಜದ ಸಂಸ್ಥೆಗಳ ಮುಖೇನ ಸಮಾಜ ಸೇವೆಗೆ ಆಸಕ್ತಿ ತೋರಿದ ಎಲ್ವೀ

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ, ಅಧ್ಯಕ್ಷರಾಗಿ ಶ್ರಮಿಸುತ್ತಾ ಭಾರತ್ ಬ್ಯಾಂಕ್‍ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಅಲ್ಲೂ ಸಾಲ ವಿತರಣಾ ವಿಭಾಗದ ಕಾರ್ಯಧ್ಯಕ್ಷರಾಗಿ ದಕ್ಷತೆ ಮೆರೆದಿರುವರು. ಸದ್ಯ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ಇದರ ಉಪಾಧ್ಯಕ್ಷರಾಗಿರುವರು.

ಗೌರವ-ಸನ್ಮಾನಗಳು
2001ರ ಫೆಬ್ರವರಿಯಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಸ್ಥೆಯು ಇವರ ಅನನ್ಯ ಸಮಾಜ ಮತ್ತು ರಾಜಕೀಯ ಕ್ಷೇತ್ರದ ಸೇವೆಗಾಗಿ ಸನ್ಮಾನಿಸಿತು. 2001ರ ಎಪ್ರಿಲ್‍ನಲ್ಲಿ ಸಾಹಿತ್ಯ ಬಳಗ ಮುಂಬಯಿ, ಕರ್ನಾಟಕ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಸಂಸ್ಥೆಯಿಂದ ತುಳು ಸಂಸ್ಕೃತಿಯ ಸೇವೆಗಾಗಿ ಸನ್ಮಾನಿಸಲ್ಪಟ್ಟರು. 2002ರಲ್ಲಿ ಸೆÉಲ್ಯೂಟ್ ಮುಂಬಯಿ ಸಂಸ್ಥೆಯಿಂದ ರಾಜಕೀಯ, ಸಾಮಾಜಿಕ ಹಾಗೂ ಆಥಿರ್sಕ ಕ್ಷೇತ್ರದ ಕೊಡಗೆಗಾಗಿ ಪುರಸ್ಕಾರಿಸಿ ಗೌರವಿಸಿತು. ಹಿಂದುಳಿದ ಸಮಾಜ ಬಾಂಧವರಿಗೆ ನೀಡಿದ ಸೇವೆಗಾಗಿ ಮತ್ತೆ ಬಿಲ್ಲವರ ಅಸೋಸಿಯೇಶನ್ ಸನ್ಮಾನಿಸಿತು. ನವೆಂಬರ್ 2005ರಲ್ಲಿ ಜ್ಞಾನ ಮಂದರ ವಿದ್ಯಾ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಾಗಿ `ಸಮಾಜ ರತ್ನ’ ಬಿರುದು ನೀಡಿ ಪುರಸ್ಕಾರ ಪ್ರದಾನಿಸಿ ಗೌರವಿಸಿತು. ಮೇ. 2006 ರಲ್ಲಿ ಕರ್ನಾಟಕ ಸಂಘ ನವ ದೆಹಲಿ ಹಾಗೂ ಜ್ಞಾನ ಮಂದರ ಆಕಾಡೆಮಿ ಬೆಂಗಳೂರು ಅಯೋಜಿಸಿದ ಅಖಿಲ ಭಾರತ ಕನ್ನಡ ವಚನ ಸಾಹಿತ್ಯ ಸಮ್ಮೇಳನದಲ್ಲಿ ಭಾರತ `ಜ್ಯೋತಿ ಪುರಸ್ಕಾರ’ ನೀಡಿ ಸನ್ಮಾನಿಸಿತು. 2006ರ ಡಿಸೆಂಬರ್‍ನಲ್ಲಿ ಕರ್ನಾಟಕ ಸಂಘ ಮುಂಬಯಿ ಹಾಗೂ ರಂಗ ಸಮಾಜ ಸಂಸ್ಕೃತಿ ಬೆಂಗಳೂರು ಅಯೋಜಿಸಿದ ಅಖಿಲ ಭಾರತ ಕನ್ನಡ ವಚನ ಸಾಹಿತ್ಯ ಸಮ್ಮೇಳನದಲ್ಲಿ `ಸುವರ್ಣ ಕನ್ನಡಿಗ’ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. 2017ರ ಡಿಸೆಂಬರ್‍ನಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ತನ್ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ `ಸಮಾಜ ಭೂಷಣ’ ಪುರಸ್ಕಾರ ನೀಡಲಾಯಿತು. 2017ರ ಜನವರಿಯಲ್ಲಿ ಬಿಲ್ಲವರ ಅಸೋಸಿಯೇಶನ್ ತನ್ನ 85ನೇ ಸಂಸ್ಥಾಪಕ ದಿನಾಚರಣೆಯ ಶುಭಾವಸರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ನೀಡಿದ ಸೇವೆಗಾಗಿ ಸನ್ಮಾನಿಸಿತು. 2017ನೇ ಸೆಪ್ಟೆಂಬರ್‍ನಲ್ಲಿ ಕಲ್ವಾ ಫ್ರೆಂಡ್ಸ್ ತನ್ನ 9ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ `ಯಶಸ್ವಿ ಸಂಧಾನಕಾರ’ ಪ್ರಶಸ್ತಿ ನೀಡಿ ಗೌರವಿಸಿದೆ.

ಪಂ| ನÀವೀನ್‍ಚಂದ್ರ ಆರ್.ಸನಿಲ್:

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹೆಸರಾಂತ ಸಮಾಜ ಸೇವಕ ಮತ್ತು ಮುಂಬಯಿ ಶಿಕ್ಷಣ ಕ್ಷೇತ್ರದ ದಿಗ್ಗಜ ಉಡುಪಿ ಜಿಲ್ಲೆಯ ಬಡ ಎರ್ಮಾಳು ಗರಡಿ ಮನೆತನದ (ಸ್ವರ್ಗಸ್ಥÀ) ರಾಮ ಬಿ.ಸನಿಲ್ ಮತ್ತು ಬಜ್ಪೆ ದೊಡ್ಡಿಕಟ್ಟೆ ಮನೆತನದ ಗುಲಾಬಿ ರಾಮ ಸನಿಲ್ ದಂಪತಿ ಸುಪುತ್ರ ನವೀನ್‍ಚÀಂದ್ರ ಸನಿಲ್ ಅವರು ಸ್ಥಾಪತ್ಯವೇದ ವಾಸ್ತು ಪರಂಗತ ಪಂಡಿತರೆಂದೇ ಪ್ರಸಿದ್ಧರು. ಸನಿಲ್ ಅವರು ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳಾದ್ಯಂತ ಸೇರಿದಂತೆ ಹತ್ತಾರು ಪ್ರಸಿದ್ಧ ದೇವಸ್ಥಾನಗಳ ವಾಸ್ತು ಸಲಹಾಗಾರರಾಗಿ ಪ್ರಸಿದ್ಧರು.

ಮುಂಬಯಿ ಮಹಾನಗರಿಯ ಫೆÇೀರ್ಟ್ ಕನ್ನಡ ಭವನ ಶಾಲೆಯಲ್ಲಿ ಓದು ಪೂರೈಸಿ ಮುಂಬಯಿ ಅಲ್ಲಿನ ಲಾಲಾ ಲಜಪತರಾಯ್ ಕಾಲೇಜ್‍ನಲ್ಲಿ ಬಿ.ಕಾಂ ಪದವೀಧರರಾದರು. ಭಾರತೀಯ ರಕ್ಷಣಾ ಪಡೆಯ ಲೆಕ್ಕಪತ್ರ ವಿಭಾಗದಲ್ಲಿ ಸುಮಾರು ಎರಡು ದಶಕಕ್ಕೂ ಅಧಿಕ ಸೇವೆ ಸಲ್ಲಿಸಿ ಬಳಿಕ ಸೇವೆಯಿಂದ ಸ್ವಯಂ ನಿವೃತ್ತಿಯನ್ನು ಪಡೆದು ಸರ್ವ ಜನರಿಗೂ ಉಪಯುಕ್ತ ಹಾಗೂ ಅಗತ್ಯವುಳ್ಳ ವೇದ ಮೂಲದ ವಾಸ್ತುಶಾಸ್ತ್ರದ ಆಳವಾದ ಅಧ್ಯಾಯನಕ್ಕೆ ತೊಡಗಿದ ಮೇಧಾವಿ ಆಗಿದ್ದಾರೆ.

ವಾಸಸ್ಥಳ, ಕಟ್ಟಡ, ಶಾಲೆ, ಆಸ್ಪತ್ರೆ ಸ್ಥಳಗಳು, ಔದ್ಯೋಗಿಕ ಮತ್ತು ಉದ್ಯಮಸ್ಥಾನ ಸೇರಿದಂತೆ ಮುಖ್ಯವಾಗಿ ಪಾವಿತ್ರ್ಯತೆಯ ದೈವ ಯಾ ದೇವಸ್ಥಾನÀಗಳ ವಾಸ್ತುಗಳನ್ನು ನಿಷ್ಠಾವುಳ್ಳರಾಗಿ ತಿಳಿಸುವ ವಾಸ್ತುಪಂಡಿತ. ಇವರು ಮಸ್ಕತ್ (ಒಮಾನ್), ಕುವೇಯ್ಟ್ ಹಾಗೂ ಕತಾರ್ ರಾಷ್ಟ್ರಗಳಿಗೂ ಭೇಟಿಗೈದು ವಾಸ್ತು ಸಂಶೋಧನೆ ಮತ್ತು ಪರ್ಯಾಲೋಚನಾ ಅಧ್ಯಯನ ನಡೆಸಿದ್ದಾರೆ.

ಪ್ರತಿಷ್ಠಿತ ಮನೆತನದ ಹಿನ್ನೆಲೆಯೊಂದಿಗೆ ಬೆಳೆದರೂ ತೆರೆಮರೆಯಲ್ಲಿದ್ದು ಅಗತ್ಯವುಳ್ಳವರಿಗೆ ಸದಾ ಅಭಯಸ್ತ ಚಾಚುವ ದಾನಿಯಲ್ಲೊಬ್ಬರು. ಸರಳ ವ್ಯಕ್ತಿತ್ವ ರೂಢಿಸಿ ತಾನು ಕರಗತಗೊಳಿಸಿಕೊಂಡ ವಾಸ್ತು ವಿದ್ಯೆಯನ್ನು ನಿಷ್ಠುರತೆಯಿಂದಾದರೂ ಪ್ರಾಮಾಣಿಕವಾಗಿ ಪ್ರಯೋಗಿಸುವ ನಿಷ್ಠಾವಂತರು. ಶ್ರೀಮಂತ ಬಡವ ಎನ್ನುವ ತಾರತಮ್ಯವಿಲ್ಲದೆ ಸರ್ವ ಜನರಿಗೂ ಉಪಯುಕ್ತ ಹಾಗೂ ಆಗತ್ಯವುಳ್ಳ ವೇದಮೂಲದ ವಾಸ್ತು ಶಾಸ್ತ್ರವನ್ನು ಎಲ್ಲರಿಗೂ ಫಲಿಸುವಲ್ಲಿ ಸದಾ ಸಿದ್ಧರು. ಕ್ರೀಯಾಶೀಲ ಸಾಧಕರೆಂದಿನಿಸಿದರೂ ಎಲ್ಲೂ ತನ್ನ ಹೆಗ್ಗಳಿಕೆಯನ್ನು ತೋರ್ಪಡಿಸದೆ ಸಾಧನೆಯ ಹಾದಿಯಲ್ಲಿ ಮುನ್ನಡೆಯುವ ಸಜ್ಜನ ಸದ್ಗುಣವಂತರು. ಹಿಮಾಲಯದ ತಪ್ಪಲಿನವರೆಗೂ ಪಯಣಿಸಿ ಅಲ್ಲಿ ಅಧ್ಯಯನ ನಡೆಸಿ ವಾಸ್ತು ವಿದ್ಯಾಪಂಡಿತ್ ಮತ್ತು ವಾಸ್ತುವಿಶಾರದ ಎಂಬ ಎರಡು ಪದವಿಗಳನ್ನು ಪ್ರಾಪ್ತಿಸಿ ವಾಸ್ತು ಪಾಂಡಿತ್ಯವನ್ನು ಮೈಗೂಡಿಸಿದವರು.

ನೆರೂಳ್‍ನ ಶ್ರೀ ಶನೀಶ್ವರ ದೇವಸ್ಥಾನ, ಘನ್ಸೋಲಿಯ ಶ್ರೀ ಮೂಕಾಂಬಿಕಾ ದೇವಸ್ಥಾನ, ಐರೋಲಿಯ ಶ್ರೀ ದುರ್ಗಾಪರಮೇಶ್ವರಿ ಮಂದಿರ, ಹೀಗೆ ಸುಮಾರು 46ಕ್ಕೂ ಮಿಕ್ಕಿದ ದೇವಸ್ಥಾನಗಳ ನಿರ್ಮಾಣಕ್ಕೆ ವಾಸ್ತುವಿನ ಸಲಹೆ ಸೂಚನೆಗಳನ್ನು ನೀಡಿ ಆ ಕ್ಷೇತ್ರಗಳ ಪ್ರಸಿದ್ಧಿಗೆ ಕಾರಣೀಭೂತರಾದ ಶ್ರೇಯಸ್ಸು ಇವರಿಗಿದೆ. ಸಕಲಗುಣ ಸಂಪನ್ನರೆಣಿಸಿದ ನವೀನ್‍ಚಂದ್ರರು ಪ್ರಚಾರ ಪುರಸ್ಕಾರಗಳಿಂದ ದೂರವಿದ್ದರೂ, ತಮ್ಮನ್ನು ಆರಸಿ ಬಂದ ಬಿರುದು ಸನ್ಮಾನಗಳು ಹಲವಾರು. ಸಮಾಜರತ್ನ, ಜ್ಞಾನ ಸರಸ್ವತಿ, ಕರ್ನಾಟಕ ಚೇತನ, ಡಾ| ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ, ಸಿದ್ಧಾರ್ಥ ಪ್ರಶಸ್ತಿ, ಕರ್ನಾಟಕ ಜ್ಯೋತಿ ಮುಂತಾದ ರಾಜ್ಯ ಪ್ರಶಸ್ತಿಗಳು ತಮ್ಮ ಶ್ರೇಯಸ್ಸಿನ ಮಡಿಲನ್ನು ಸೇರಿದೆ. ಅಲ್ಲದೆ ಸ್ವಾಮಿ ವಿವೇಕಾನಂದ ರಾಷ್ಟ್ರ ಪ್ರಶಸ್ತಿ ಮತ್ತು ಅಬುಧಾಬಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ವಿಶ್ವಮಾನ್ಯರು (ಉಟobಚಿಟ ಒಚಿಟಿ-2012 ಂತಿಚಿಡಿಜ) ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಹಿರಿಮೆ ಇವರದ್ದು.

ವಾಸ್ತು ವಿಜ್ಞಾನ ಅಧ್ಯಯನಕ್ಕಾಗಿ ಇಂಟರ್‍ನ್ಯಾಷನಲ್ ವಾಸ್ತು ಅಸೋಸಿಯೇಶನ್ ಸರ್ಟಿಫಿಕೇಟ್ ಆಫ್ ಮಿಲಿನಿಯಂ ಪ್ರದಾನಿಸಿದ ವಾಸ್ತುಮಾರ್ತಾಂಡ ಎಂಬ ಬಿರುದು ಶ್ರೀ ಶಂಕರಾಚಾರ್ಯರ ಕಮಲ ಹಸ್ತದಿಂದ ಮುಡಿಗೇರಿಸಿ ಕೊಂಡ ವಾಸ್ತುಮೇಧಾವಿಯೂ ಇವರಾಗಿದ್ದಾರೆ. ರಾಷ್ಟ್ರವ್ಯಾಪಿ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಿಗೆ ಪಯಣಿಸಿ ತಮ್ಮ ವಾಸ್ತುಪಾಂಡಿತ್ಯ ಸಲಹೆಯನ್ನೀಡಿ ಅಂತರಾಷ್ಟ್ರೀಯ ಪ್ರಸಿದ್ಧಿ ವಾಸ್ತುತಜ್ಞರೆಣಿಸಿ ರುವರು. `ವಾಸ್ತು ವಿದ್ಯಾ ಪಂಡಿತ್’ ಮತ್ತು `ವಾಸ್ತು ವಿಷಾರದ’ ವಿದ್ಯೆಯನ್ನು ಕರಗತ ಮಾಡಿ ಕೊಂಡಿರುವರು. ಕರ್ನಾಟಕ ರಾಜ್ಯ ಮಟ್ಟದ 2012ನೇ ಸಾಲಿನ ಪ್ರತಿಷ್ಠಿತ `ಸೌರಭ ಪ್ರಶಸ್ತಿ’ ಭಾಜನರಾದ ಇವರು `ವಾಸ್ತು ಮಾರ್ತಾಂಡ’ ಪಂಡಿತರಾಗಿಯೇ ಪ್ರಸಿದ್ಧರು. ಕರ್ನಾಟಕ ರಾಜ್ಯ `ಸೌರಭ ಪ್ರಶಸ್ತಿ’ ಪುರಸ್ಕೃತರು.

ವಾಸ್ತುಶಾಸ್ತ್ರದಲ್ಲಿ ವಿಶೇಷ ಉಪನ್ಯಾಸಕರಾಗಿ, ದೇಶ ವಿದೇಶಗಳನ್ನು ಸುತ್ತಿ ಅಲ್ಲಿಯೂ ತುಳುನಾಡಿನ ಕಂಪನ್ನು ಬೀರಿದ ತಮ್ಮ ಸಾಧನೆ ಅನನ್ಯವಾದುದು. ತಮ್ಮ ಯಶಸ್ಸಿನ ಹಿಂದೆ ದೈವಾನುಗ್ರಹ ಹಾಗೂ ತನ್ನ ಮಾತಾಪಿತರ ಆಶೀರ್ವಾದ ಇದೆ ಎಂದು ಮನದಾಳದಿ ಸ್ಮರಿಸುವ ಭಾವಜೀವಿ ತಾವು. ಸದಾ ಹಸಖ್ಮಖಿಯಾಗಿ ಸದ್ದಿಲ್ಲದೆ ಸಮಾಜಸೇವೆಯನ್ನು ಮಾಡಿತ್ತಿರುವ ತಾವು ಇತರರಿಗೆ ಮಾದರಿ. ಸದ್ಯ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ವಿಶೇಷ ಆಮಂತ್ರಿತ ಸದಸ್ಯರಾಗಿ ಹಾಗೂ ಭವಾನಿ ಫೌಂಡೇಶನ್ ನವಿ ಮುಂಬಯಿ ಇದರ ಟ್ರಸ್ಟಿ ಆಗಿ ಸೇವಾ ನಿರತರಾಗಿದ್ದಾರೆ.

ಚಂದ್ರಶೇಖರ ಆರ್.ಬೆಳ್ಚಡ:
ಮಂಗಳೂರು ತಾಲೂಕಿನ ವಿಶ್ವಪ್ರಸಿದ್ಧ ಕಟೀಲು ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ, ಪುಣ್ಯಸ್ಥಳಗಳಲ್ಲಿ ಒಂದು. ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಶ್ರೀ ಭ್ರಮರಾಂಭಿಕೆ ನೆಲೆಯಾದ ಅಲ್ಲಿನ ನಂದಿನಿ ನದಿಯ ಮೇಲ್ದಂಡೆಯ ನಿವಾಸಿಗಳೇ ರಾಮ ತಿಮ್ಮಪ್ಪ ಮತ್ತು ಸೀತು ರಾಮ ದಂಪತಿ. ಅವರ ಸುಪುತ್ರರೇ ಚಂದ್ರಶೇಖರ್ ಬೆಳ್ಚಡ. ಕಟೀಲುನಲ್ಲಿ ಪ್ರೌಢ ವಿದ್ಯಾಭ್ಯಾಸ ಮಾಡಿ ಮುಂಬಯಿಗೆ ಬಂದು ವಾಣಿಜ್ಯ ಪದವಿಯನ್ನು ಓದುತ್ತಿರುವಾಗಲೇ ಒಂದು ವಿಶೇಷವಾದ ಕ್ಷೇತ್ರ ಎಂದೆಣಿಸಿದ ಅಗಡಾದ ಅವಶ್ಯಕ (ರಿಫ್ರ್ಯಾಕ್ಚರ್ ಮಟೀರಿಯಲ್) ಕಂಪೆನಿಯಲ್ಲಿ ಕೆಲಸ ಆರಂಭಿಸಿದ್ದರು. ನಂತರ ಉನ್ನತ ಶಿಕ್ಷಣ ಪೂರೈಸಿ, ಆಸಕ್ತ ವಿಚಾರದ ಸಾಕಷ್ಟು ಮಾಹಿತಿ ದೊರಕಿಸಿದರು. ಕ್ರಮೇಣ ಉಪನಗರ ಥಾಣೆಯಲ್ಲಿ ತನ್ನದೇ ಆದ ಸ್ವಂತದ ಪಿ.ಪಿ ರೆಫ್ರಕ್ಟೊರೀಸ್ ಕಾಪೆರ್Çೀರೇಶನ್ ಸಂಸ್ಥೆಯನ್ನು ರೂಪಿಸಿ ಕೊಂಡರು. ಆ ಮೂಲಕ ತನ್ನ ಸ್ವಂತಿಕೆಯ ವ್ಯವಹಾರಿಸಿ ಕರೋಝನ್ ಆ್ಯಂಡ್ ಕಂಟ್ರೋಲ್ ಕಂಪೆನಿಯು ದೇಶದ ಅನೇಕ ಭಾಗಗಳಲ್ಲಿ ಹಾಗೂ ಲಾಗೊಸ್, ಸಿಂಗಾಪುರ, ಥೈಲ್ಯಾಂಡ್ ಮತ್ತು ದುಬಾಯಿ (ಯುಎಇ) ದೇಶಗಳಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಿದ ನಿಸ್ಸೀಮಾ ಯುವ ಉದಯೋನ್ಮುಖ ಉದ್ಯಮಿಯಾಗಿ ಗುರುತಿಸಿ ಕೊಂಡರು.

ತನ್ನ ಜೀವನದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಇವರು 2000-2001ರಲ್ಲಿ ರೋಟರಿ ಕ್ಲಬ್ ಆಫ್ ಮುಂಬಯಿ ಇದರ ಮುಲುಂಡ್ ಪೂರ್ವ ವಲಯದ ಅಧ್ಯಕ್ಷರಾಗಿ ಹಾಗೂ ಅನೇಕ ಜಿಲ್ಲಾ ಮಟ್ಟದಲ್ಲಿ ರೋಟರಿ ಇಂಟರ್‍ನ್ಯಾಷನಲ್ ಗೋಲ್ ಪೂರ್ಣಗೊಳಿಸುವ ಮೂಲಕ ತನ್ನ ಸೇವೆಯನ್ನು ಸಮಾಜಮುಖಿ ಆಗಿಸಿದ್ದಾರೆ. ಇದೀಗ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ತೀರಾ ಸರಳ, ಸೌಮ್ಯತನ ಮತ್ತು ಸದಾ ಹಸನ್ಮುಖಿ ಆಗಿರುವ ಚಂದ್ರಶೇಖರ್ ಎಂದಿಗೂ ಚಂದಿರನಂತೆಯೇ ತಂಪಗಿನ ಬೆಳದಿಂಗಳ ಬೆಳಕಿನಂತೆ ಪ್ರಕಾಶಮಾನವಾಗಿರುವ ಸಜ್ಜನ ಗುಣನಡತೆಯ ವ್ಯಕ್ತಿ ಎಂದೇ ಗುರುತಿಸಿದವರು.


ಬಾಳ ಸಂಗಾತಿ ಶ್ರೀಮತಿ ದಿವೀಜಾ ಚಂದ್ರಶೇಖರ್ ಇವರು ಓರ್ವ ಅಪ್ರತಿಮ ಪ್ರತಿಭೆಯಾಗಿದ್ದು ಮುಂಬಯಿ ಅಲ್ಲಿನ ಕೆ.ಜೆ ಸೊಮಯ್ಯ ಕಾಲೇಜು ಆರ್ಟ್ಸ್ ಮತ್ತು ಕಾಮರ್ಸ್ ಕಾಲೇಜ್ ವಿದ್ಯಾವಿಹಾರ್ ಇದರ ಉಪ ಪ್ರಾಂಶುಪಾಲೆ ಆಗಿ ಶೈಕ್ಷಣಿಕ ಸೇವೆಗೈದಿದ್ದಾರೆ. ಸುಪುತ್ರ ಮೆಹೂಲ್ ಸಿ.ಬೆಳ್ಚಡ ಮತ್ತು ಸೊಸೆ ಅಸ್ಮಿತಾ ಎಂ.ಬೆಳ್ಚಡ ಅವರೊಂದಿಗೆ ಮುಲುಂಡ್ ಪೂರ್ವದಲ್ಲಿ ಸುಖಸಂಸಾರ ನಡೆಸುತ್ತಿದ್ದಾರೆ.

ಸಮಗ್ರ ಸಮೂದಾಯಗಳ ಜನತೆಯಲ್ಲಿ ಆತ್ಮೀಯರಾಗಿ, ಯುವ ನಾಯಕರಾಗಿ ಅತ್ಯುತ್ತಮ ಸಂಘಟನಾ ಚತುರರು ಎಂದೇ ಗುರುತಿಸಲ್ಪಟ್ಟ ಇವರು ತನ್ನ ಸ್ವಸಮುದಾಯವಾದ ತೀಯಾ ಸಮಾಜ ಮುಂಬಯಿ ಇದರ ಅಧ್ಯಕ್ಷರಾಗಿ ಮೂರನೇ ಅವಧಿಗೆ ಸರ್ವಾನುಮತದಿಂದ ಆಯ್ಕೆಯಾದ ಧುರೀಣರಾಗಿದ್ದಾರೆ. ತೀಯಾ ಸಮಾಜದ ಮಾತೃಭಾಷೆ, ಸಂಸ್ಕೃತಿ, ಪರಂಪರೆಯನ್ನು ಭವಿಷ್ಯದ ಪೀಳಿಗೆಯಲ್ಲಿ ರೂಢಿಸಿಕೊಂಡು ತೀಯಾ ಸಮಾಜ ಮುಂಬಯಿ ಮುಖೇನ ಸಮುದಾಯವನ್ನು ರಾಷ್ಟ್ರದ ಸರ್ವ ಸಮುದಾಯಕ್ಕೆ ಸಮಾನವಾಗಿಸಿ ಪರಿಚಯಿಸಲು ಇವರು ನಡೆಸಿದ ಪ್ರಯತ್ನಗಳು ಅತ್ಯದ್ಭುತವಾದದ್ದು.

ತೀಯಾ ಸಮಾಜ ಮುಂಬಯಿ ಇದರ ಮುಖವಾಣಿ `ತೀಯಾ ಜ್ಯೋತಿ’ ಮಾಸಿಕಕ್ಕೆ ಹೊಸದಾಗಿ `ತೀಯಾ ಬೆಳಕು’ ಎಂದಾಗಿ ನಾಮಕರಣ ಮಾಡಿ ಮೌಲ್ಯಯುತ ಬರವಣಿಗೆ ಮೂಲಕ ಸಮಾಜದ ಜನತೆಗೆ ಒದಗಿಸುವಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿದರು. ಮಾತ್ರವಲ್ಲದೆ `ತೀಯಾ ಬೆಳಕು’ ಇದರ 15ನೇ ವಾರ್ಷಿಕೋತ್ಸ ವವನ್ನು ವಿಚಾರಗೋಷ್ಠಿ-ಸನ್ಮಾನ ಕಾರ್ಯಕ್ರಮ, ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಿದ ಕೀರ್ತಿ ಚಂದ್ರಶೇಖರ್ ಅವರದ್ದು. ಹೊರನಾಡ ಕರ್ಮಭೂಮಿಯಲ್ಲಿ ಸಮಾಜದ ಜನತೆಯ ವಿಶ್ವಾಸಕ್ಕೆ ಪಾತ್ರರಾಗಿ ಉದ್ದೇಶಿಸಿದ ಸಮಾಜೋಭಿವೃದ್ಧಿಯ ಸಕರಾತ್ಮಕ ಉದ್ದೇಶಗಳನ್ನು ಫಲಪ್ರದಗೊಳಿಸಿದ ಯುವ ನೇತಾರ.


ಸಾರಸ್ವತ ಲೋಕಕ್ಕೆ ನಾಲ್ಕು ಕೃತಿಗಳನ್ನು ಅರ್ಪಿಸಿದ `ಸೃಜನಾ ಮುಂಬಯಿ’ ಕನ್ನಡ ಲೇಖಕಿಯರ ಬಳಗ
ಸಾಹಿತ್ಯ ಸೇವೆ ಹಾಗೂ ಮಹಿಳಾ ಲೇಖಕಿಯರಿಗೆ ಪೆÇ್ರೀತ್ಸಾಹ ಸೃಜನದ ವೈಶಿಷ್ಟ ್ಯತೆ 
 (ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಜೂ.30: ಸುಮಾರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬೆಳೆದಿರುವ ಮುಂಬಯಿ ಮಹಾನಗರದಲ್ಲಿ ಮಹಿಳೆಯರನ್ನು ಒಟ್ಟುಗೂಡಿಸಿ ಕನ್ನಡ ಪರಿಚಾರಿಕೆಯನ್ನು ಮಾಡುತ್ತಿರುವ ಸೃಜನಾ ಬಳಗ ಇಡೀ ಮುಂಬಯಿ ಕನ್ನಡಿಗರು ಅಭಿಮಾನ ಪಡುವ ಸಂಗತಿ. ಪುಸ್ತಕ ಪ್ರಕಟಣೆಯೊಂದಿಗೆ ಸಾಹಿತ್ಯ ಸೇವೆ ಹಾಗೂ ಮಹಿಳಾ ಲೇಖಕಿಯರಿಗೆ ಬರಹ ಮಾಡಲು ಪೆÇ್ರೀತ್ಸಾಹ ಕೊಡುತ್ತಿದೆ. ನಾವೂ ಬರೆಯುವುದು ಮೊದಲು ನಮಗಾಗಿ. ಆಮೇಲೆ ಸಮಾಜಕ್ಕಾಗಿ ಈ ಅರಿವು ಎಲ್ಲಾ ಬರಹಗಾರರಿಗೆ ಇರಬೇಕಾದ ಅಗತ್ಯವಾದ ಕೆಲಸ ಎಂದು ಸೃಜನಾ ಸಹ ಸಂಚಾಲಕಿ ವಿೂನಾ ಕಳವಾರ ತಿಳಿಸಿದರು.
ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಕಿರುಸಭಾಗೃಹದಲ್ಲಿ ಮಹಾನಗರದಲ್ಲಿನ ಕನ್ನಡ ಲೇಖಕಿಯರ ಬಳಗ `ಸೃಜನಾ ಮುಂಬಯಿ’ ಆಯೋಜಿಸಿದ್ದ ಐದು ಕೃತಿಗಳ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿೂನಾ ಕಳವಾರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ| ಸುನೀತಾ ಎಂ.ಶೆಟ್ಟಿ ಅವರ `ಸಮಾರಾಧನೆ’ ಕೃತಿಯನ್ನು ಮುಂಬಯಿನ ಹಿರಿಯ ಸಾಹಿತಿ ಡಾ| ವಿಶ್ವನಾಥ್ ಕಾರ್ನಾಡ್, ಸೃಜನಾ ಪ್ರಕಾಶಿತÀ ಕೃತಿಗಳ ಇತರ ಲೇಖಕರ ಅವಲೋಕನ ಬರಹಗಳ `ಓದು ಮುಗಿಸಿದ ಮೇಲೆ’ ಕೃತಿಯನ್ನು ಮೈಸೂರು ಅಸೋಸಿಯೇಶÀನ್ ಮುಂಬಯಿ ಅಧ್ಯಕ್ಷೆ ಕು| ಕಮಲಾ ಕಾಂತರಾಜ್ ಮತ್ತು ಡಾ| ದಾಕ್ಷಾಯಿಣಿ ಯಡಹಳ್ಳಿ ಅವರ ಕೃತಿಗಳಾದ `ವರ್ತುಲ’ ಕಥಾ ಸಂಕಲನವನ್ನು ನಾಡಿನ ಹೆಸರಾಂತ ವಿಮರ್ಶಕ ಡಾ| ಕೆ.ರಘುನಾಥ್ ಹಾಗೂ ಜಾನಪದ ಹಾಡುಗಳ ಸಂಕಲನ `ಅವ್ವಂದಿರ ಹಾಡುಗಳು’ ಕೃತಿಗಳನ್ನು ಏಕಕಾಲಕ್ಕೆ ಬಿಡುಗಡೆ ಗೊಳಿಸಿ ಕೃತಿಗಳನ್ನು ವಿಶ್ಲೇಷಿಸಿದರು.

ವಿಶ್ವನಾಥ್ ಕಾರ್ನಾಡ್ ಮಾತನಾಡಿ ಡಾ| ಸುನೀತಾ ಶೆಟ್ಟಿ ಅವರು ತುಂಬಾ ಸಂಶೋಧನೆ ಮಾಡಿ ಲೇಖನಗಳನ್ನು ಬರೆಯುತ್ತಾರೆ. ಅವರ ಲೇಖನಗಳು ವೈಚಾರಿಕೆಯಿಂದ ಕೂಡಿರುತ್ತದೆ. ವಿಷಯಗಳ ಆಯ್ಕೆ ಮತ್ತು ವಿವರಿಸುವ ಪದ್ಧತಿ ಗಮನಿಸಿದಾಗ ಅವರ ಆಳವಾದ ಅಧ್ಯಯನ ಕಂಡು ಬರುತ್ತದೆ. ಸಮಾರಾಧನೆ ಇದೊಂದು ಹೊಸ ರೀತಿಯ ಗ್ರಂಥ ಎಂದರು.
ನಮ್ಮಲ್ಲಿ ಇರುವ ಸಂಸ್ಕೃತಿ ನಮ್ಮ ಆಚಾರ ವಿಚಾರಗಳ ಬಗ್ಗೆ ನಾವು ಹೆಮ್ಮೆ ಹೊಂದಿರಬೇಕು. ಮುಂಬಯಿಯಲ್ಲಿ ಮಹಿಳೆ ಲೇಖಕಿಯರು ತುಂಬಾ ಕ್ರೀಯಾಶೀಲರಾಗಿ ಸಾಹಿತ್ಯ ನುಡಿ ಸೇವೆಯಲ್ಲಿ ತೊಡಗಿಸಿಕೊಂಡ ಪರಿ ನಿಜಕ್ಕೂ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ನಮ್ಮ ಸಂತೋಷವನ್ನು ಬೇರೆಯವರ ಜೊತೆಗೆ ಹಂಚಿಕೊಂಡು ಇನ್ನೊಬ್ಬರಿಗೆ ಖುಷಿ ಕೊಡುವಂತಹ ಬರಹಗಳು ಕೃತಿಗಳಲ್ಲಿ ಇಂದು ಕಾಣಿಸಿಕೊಳ್ಳುವುದು ಬಹಳ ಅಗತ್ಯವೆನಿಸುತ್ತದೆ ಎಂದು ಕಮಲಾ ಕಾಂತರಾಜ್ ತಿಳಿಸಿದರು.

ಕೆ.ರಘುನಾಥ್ ಮಾತನಾಡಿ ಕ್ರಿಯಾಶೀಲತೆಗೆ ಇನ್ನೊಂದು ಹೆಸರು ಮುಂಬಯಿ ಲೇಖಕಿ ಡಾ| ಸುನೀತಾ ಶೆಟ್ಟಿ. ಕನ್ನಡ ಜಾನಪದ ನಮ್ಮ ಆಸ್ತಿ. ಆದರಿಂದ ಹಾಡುಗಳೂ ಕೂಡ ಬಂದು ನಮ್ಮ ಲೌಕಿಕ ಪರಂಪರೆಗೆ ಸೇರಿದವು. ಅವುಗಳನ್ನು ಸಂಗ್ರಹಿಸಿ ಕೊಟ್ಟವರು ದಾಕ್ಷಾಯಣಿ ಯಡವಳ್ಳಿ ಅವರು. ಮೌಖಿಕ ಪರಂಪರೆಯ ಕಥೆಗಳು ಶಿಷ್ಟ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ. ವರ್ತುಲ ಕಥಾ ಸಂಕಲನದಲ್ಲಿ ಹೆಣ್ಣು ಗಂಡುಗಳ ವರ್ತುಲ ಬಂಧನ ಇರುವುದನ್ನು ಈ ಕಥಾ ಸಂಕಲನದಲ್ಲಿ ಆಶಯ ವ್ಯಕ್ತವಾಗಿದೆ. ನಮ್ಮ ಕನ್ನಡ ಸಂಸ್ಕೃತಿಯ ಅನಾವರಣ ಈ ಕಥೆಗಳಲ್ಲಿ ಪ್ರಕಟವಾಗಿದೆ. ದಾಕ್ಷಾಯಣಿ ಯಡಹಳ್ಳಿ ಅವರ ಜಾನಪದ ಅವ್ವಂದಿರ ಹಾಡುಗಳನ್ನು ಸುಶ್ರವಿವಾಗಿ ಗಾಯನ ಮಾಡಿದರು.

ಸೃಜನಕ್ಕೆ ಈಗ ಹದಿನಾರÀ ಹರೆಯ. ಮುಂಬಯಿ ಲೇಖಕಿಯರು ಸೇರಿ ಕಟ್ಟಿದ ಸಂಘವಿದು. ಮುಂಬಯಿ ಕನ್ನಡ ಲೇಖಕಿಯರಿಗೆ ವೇದಿಕೆ ಒದಗಿಸುವುದು ಇದರ ಮುಖ್ಯ ಕೆಲಸ. ಕನ್ನಡ ಸಾಹಿತ್ಯ, ಕನ್ನಡ ಭಾಷೆಯ ಸಂಸ್ಕೃತಿಯ ಕಂಪನ್ನು ಮುಂಬಯಿ ಕನ್ನಡಿಗರಿಗೆ ಊಣಬಡಿಸುತ್ತಿದೆ ಎಂದು ಡಾ| ದಾಕ್ಷಯಣಿ ಯಡವಳ್ಳಿ ಪ್ರಾಸ್ತಾವಿಕ ಭಾಷಣಗೈದÀು ಸ್ವಾಗತಿಸಿದರು.

ಮೈಸೂರು ಅಸೋಸಿಯೇಶನ್ ಮುಂಬಯಿ ಸಹಯೋಗ ಹಾಗೂ ಸೃಜನಾ ಸಂಸ್ಥೆಯ ಆಶ್ರಯದಲ್ಲಿ ನಡೆಸÀಲ್ಪಟ್ಟ ಕಾರ್ಯಕ್ರಮದ ವೇದಿಕೆಯಲ್ಲಿ ಸೃಜನಾ ರೂವಾರಿ ಡಾ| ಸುನೀತಾ ಎಂ.ಶೆಟ್ಟಿ, ಹೇಮಾ ಸದಾನಂದ್ ಅವಿೂನ್ ಉಪಸ್ಥಿರೈದ್ದು ಅತಿಥಿüಗಳಿಗೆ ಕೃತಿಗಳನ್ನಿತ್ತು ಗೌರವಿಸಿದರು. ಡಾ| ದಾಕ್ಷಾಯಿಣಿ ಯಡಹಳ್ಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ವಾಣಿ ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶಾರದಾ ಅಂಬೆಸಂಗೆ ಪ್ರಾರ್ಥನೆಯನ್ನಾಡಿ ಅಭಾರ ಮನ್ನಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi