Brief Mumbai - Mangalore news with pictures


Rons Bantwal
Kemmannu News Network, 23-07-2018 18:40:52


Write Comment     |     E-Mail To a Friend     |     Facebook     |     Twitter     |     Print


Mumbai,July.23: On the occasion of Ashad Ekadashi, Chief Minister Devendra Fadnavis &  his wife Amrita Fadnavis, along with family & relatives, worshiped Lord Vittal and Rukmini Mata’s Chief Minister ’Varsha Banglow in Mumbai.

ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದ ಐದನೇ ಸರಣಿ ಸಾಹಿತ್ಯ ಕಾರ್ಯಕ್ರಮ - ಕಥಾಸಾಹಿತ್ಯಕ್ಕೆ ವ್ಯಕ್ತಿ-ಸಮಾಜ ಬದಲಾಯಿಸುವ ಶಕ್ತಿಯಿದೆ : ಥೋಮಸ್ ಡಿ’ಸೋಜಾ

ಮುಂಬಯಿ (ಕುಂಬಳೆ),ಜು.23: ಬದುಕಿನ ದೈನಂದಿನ ಆಗುಹೋಗುಗಳಿಗೆ ನಿಕಟವಾಗಿರುವ ಸಮಕಾಲೀನ ಕಥೆಗಳಿಗೆ ಸಾಹಿತ್ಯ ಪ್ರಪಂಚದಲ್ಲಿ ಬೇಡಿಕೆ ಇದೆ. ವ್ಯಕ್ತಿ ಕೇಂದ್ರಿತವಲ್ಲದ ವಸ್ತುಗಳನ್ನು ಹೆಚ್ಚು ಉತ್ಪ್ರೇಕ್ಷೆಗಳಿಲ್ಲದೆ ಕಟ್ಟಿಕೊಡುವ ಕಲೆಗಾರಿಕೆ ಯುವ ಕಥೆಗಾರರಲ್ಲಿ ಇರಬೇಕು ಎಂದು ಲೇಖಕಿ, ಕಥೆಗಾರ್ತಿ ಕೃಷ್ಣವೇಣಿ ಕಿದೂರು ಅಭಿಪ್ರಾಯ ವ್ಯಕ್ತಪಡಿಸಿದರು. ಪೆರ್ಲದ ಕವಿ ಹೃದಯದ ಸವಿಮಿತ್ರರು ವೇದಿಕೆಯ ನೇತೃತ್ವದಲ್ಲಿ ನಡೆಯುತ್ತಿರುವ ಸರಣಿ ಸಾಹಿತ್ತಿಕ ಕಾರ್ಯಕ್ರಮಗಳ ಭಾಗವಾಗಿ ಭಾನುವಾರ ಅಪರಾಹ್ನ ಸೀತಾಂಗೋಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದ ಐದನೇ ಸರಣಿ ಸಾಹಿತ್ಯ ಕಾರ್ಯಕ್ರಮ "ಕಥಾ ಸಲ್ಲಾಪ" ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಸರಗೋಡುನ ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಕಥಾ ಸಾಹಿತ್ಯ ಪರಿಪುಷ್ಟವಾಗಿ ಬೆಳೆದು ಬಂದಿದೆ. ಎಂ.ವ್ಯಾಸ ಅಂತಹ ಮಹಾನ್ ಕವಿಗಳ ಕಥೆಗಳು ಯುವ ಕಥೆಗಾರರಿಗೆ ಮಾರ್ಗದರ್ಶಿಯಾಗಿದ್ದು, ಮನುಷ್ಯನ ನಿತ್ಯ ಜೀವನದ ನೋವು-ನಲಿವು-ಸಂಘರ್ಷ, ಅಚ್ಚರಿಗಳು ವಸ್ತು ವಿಷಯಗಳಾಗಿ ಕಥೆಗಳಾಗುವುದು ಮುಂದಿನ ತಲೆಮಾರಿಗೆ ಇತಿಹಾಸವಾಗಿ, ಬದುಕಿಗೆ ಮಾರ್ಗದರ್ಶಿಯಾಗಿ ನೆರವಾಗುತ್ತದೆ ಎಂದು ಅವರು ತಿಳಿಸಿದರು.

ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಾಹಿತಿ, ಲೇಖಕ, ಪುತ್ತಿಗೆ ಗ್ರಾ.ಪಂ ಮಾಜಿ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿಸೋಜಾ ಮಾತನಾಡಿ, ಆಳವಾದ ಜೀವನಾನುಭವಗಳಿಂದ ಹೊರಹೊಮ್ಮುವ ಕಥಾ ಸಾಹಿತ್ಯ ವ್ಯಕ್ತಿ-ಸಮಾಜವನ್ನು ಬದಲಾಯಿಸುವ ಶಕ್ತಿ ಹೊಂದಿದೆ ಎಂದು ತಿಳಿಸಿದರು. ಹೆಚ್ಚು ಚಿಂತನೆಗಳಿಗೆ ಎಡೆಮಾಡುವ ಚಿಕ್ಕ-ಚೊಕ್ಕ ಕಥೆಗಳು ಇಂದು ಅಗತ್ಯವಿದ್ದು, ಯುವ ಕಥೆಗಾರರು ಹೆಚ್ಚು ಓದು ಮತ್ತು ಅನುಭವಗಳನ್ನು ಸಂಪಾದಿಸುವಲ್ಲಿ ಕ್ರಿಯಾಶೀಲರಾಗಬೇಕೆಂದು ಅವರು ಈ ಸಂದರ್ಭ ತಿಳಿಸಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಿಪಿಸಿಆರ್‍ಐಯ ಹಿರಿಯ ತಾಂತ್ರಿಕ ಅಧಿಕಾರಿ ಮುರಳೀಕೃಷ್ಣ ಹಳೆಮನೆ ಅವರು ಮಾತನಾಡಿ, ಕಲೆ-ಸಾಹಿತ್ಯಗಳು ಸಂಘರ್ಷ ರಹಿತ ಸಮಾಜ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಹೆಚ್ಚು ಕ್ರಿಯಾಶೀಲತೆ ಮತ್ತು ಧನಾತ್ಮಕ ಚಿಂತನೆಗಳಿಂದೊಡಗೂಡಿದ ಕಥಾ ಸಾಹಿತ್ಯ ಅಭಿವೃದ್ದಿಶೀಲ ಸಮಾಜದ ಪ್ರಾಮುಖ್ಯ ಅಂಗ ಎಂದು ತಿಳಿಸಿದರು.

ಕಲಾಗ್ರಾಮದ ನಿರ್ದೇಶಕ ಪ್ರಸಾದ್ ಮಣಿಯಂಪಾರೆ, ಪುತ್ತಿಗೆ ಗ್ರಾಮ ಪಂಚಾಯತು ಸದಸ್ಯ ಕೆ.ಮೊಹಮ್ಮದ್ ಕುಂಞÂ ಅತಿಥಿüಗಳಾಗಿ ಉಪಸ್ಥಿತರಿದ್ದರು. ಬಳಿಕ ನಡೆದ ಕಥಾಗೋಷ್ಠಿಯಲ್ಲಿ ಗೋಪಾಲಕೃಷ್ಣ ಭಟ್ ಕಟ್ಟತ್ತಿಲ,ಹರೀಶ್ ಪೆರ್ಲ, ಸನ್ನಿಧಿ ಟಿ.ರೈ, ಸಹನಾ ಡಿ., ಪದ್ಮಾವತಿ ಪೆರಡಾಲ, ಜ್ಯೋಸ್ನ್ಯಾ ಕಡಂದೇಲು, ಪಾರ್ವತಿ ಎಂ.ಭಟ್ ಕೂಳಕ್ಕೋಡ್ಳು, ಶಾರದಾ ಎಸ್.ಭಟ್ ಕಾಡಮನೆ, ರಾಜಶ್ರೀ ಟಿ.ರೈ, ಸುಭಾಶ್ ಪೆರ್ಲ, ಚೇತನಾ ಕುಂಬ್ಳೆ, ಶ್ವೇತಾ ಕಜೆ, ಶ್ಯಾಮಲಾ ರವಿರಾಜ್, ಚಿತ್ರಕಲಾ ಆಚಾರ್ಯ, ಲತಾ ಆಚಾರ್ಯ ಬನಾರಿ, ಸುಶೀಲಾ ಪದ್ಯಾಣ, ಪ್ರಭಾವತಿ ಕೆದಿಲಾಯ ಪುಂಡೂರು, ದಯಾನಂದ ರೈ ಕಲ್ವಾಜೆ, ಅಭಿಲಾಷ್ ಎಸ್.ಬಿ ಪೆರ್ಲ, ಚಿತ್ತರಂಜನ್ ಕಡಂದೇಲು ಸ್ವರಚಿತ ಕಥೆಗಳನ್ನು ವಾಚಿಸಿದರು.

ಕವಿ ಹೃದಯದ ಸವಿಮಿತ್ರರು ವೇದಿಕೆಯ ಸಂಚಾಲಕ ಮಣಿರಾಜ್ ವಾಂತಿಚ್ಚಾಲ್ ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು. ಪುರುಷೋತ್ತಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮಲಾ ರವಿರಾಜ್ ಪ್ರಾರ್ಥನಾ ಗೀತೆ ಹಾಡಿದರು.

ನಡೆದ ಸುಧೀರ್ಘ ಕಥಾಗೋಷ್ಠಿ, ಗಡಿನಾಡಿನ ಯುವ ಸಾಹಿತಿಗಳ ವೈವಿಧ್ಯ ಮಥೆಗಳೊಂದಿಗೆ ಸುಂದರವಾಗಿ ಮೂಡಿಬಂತು. ವಿದ್ಯಾರ್ಥಿಗಳಾದ ಚಿತ್ತರಂಜನ್ ಕಡಂದೇಲು, ಅಭಿಲಾಷ್ ಎಸ್.ಬಿ.ಪೆರ್ಲ ಹಾಗೂ ಸನ್ನಿಧಿ ಟಿ.ರೈ ಅವರ ಕಥೆಗಳು ಗಮನ ಸೆಳೆದವು. ರಾಜಶ್ರೀ ಟಿ.ರೈ ಹಾಗೂ ಶ್ವೇತಾ ಕಜೆ ತುಳು ಕಥೆಗಳನ್ನು ವಾಚಿಸಿದರು.

ದುಬಾಯಿ ವಿಶ್ವ ತುಳು ಪರ್ಬ: ಡಾ| ಡಿ.ವೀರೇಂದ್ರ ಹೆಗ್ಗಡೆ ಅವರಿಗೆ -ಸಮ್ಮೇಳನ ಸಮಿತಿ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅವರಿಂದ ಆಹ್ವಾನ

ಮುಂಬಯಿ, ಜು.23: ಅರಬ್ ಸಂಯುಕ್ತ ಸಂಸ್ಥಾನದ ದುಬಾಯಿ ಅಲ್ಲಿನ ಆಲ್ ನಸಾರ್ ಲೀಸರ್ ಲ್ಯಾಂಡ್ ಐಸ್‍ರಿಂಗ್ ಒಳಾಂಗಣ ಕ್ರೀಡಾಂಗಣದಲ್ಲಿ ಬರುವ ನವೆಂಬರ್ 23-24ರ ಎರಡು ದಿನಗಳಲ್ಲಿ ಡಾ| ಬಿ.ಆರ್ ಶೆಟ್ಟಿ ಘನಾಧ್ಯಕ್ಷತೆಯಲ್ಲಿ ನಡೆಸಲುದ್ದೇಶಿಸಿದ ವಿದೇಶದ ಪ್ರಪ್ರಥಮ ವಿಶ್ವ ತುಳು ಸಮ್ಮೇಳನ ಉದ್ಘಾಟಿಸುವರೇ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ವಿಶ್ವ ತುಳುವರೆ ಪರ್ಬ ಸಮಿತಿ ಗೌರವಾಧ್ಯಕ್ಷ, ಪದ್ಮಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಧರ್ಮಪತ್ನಿ ಹೇಮಾವತಿ ಹೆಗ್ಗಡೆ ಅವರನ್ನೊಳಗೊಂಡು ಸಾಂಪ್ರದಾಯಿಕ ಆಹ್ವಾನ ನೀಡಲಾಯಿತು.

ಇಂದಿಲ್ಲಿ ಸೋಮವಾರ ಬೆಳಿಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿನ ಕಚೇರಿಯಲ್ಲಿ ಡಾ| ವೀರೇಂದ್ರ ಹೆಗ್ಗಡೆ ಅವನ್ನು ಭೇಟಿಗೈದ ಸಮ್ಮೇಳನ ಸಲಹಾ ಸಮಿತಿ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಸಮ್ಮೇಳನದ ಪ್ರಸ್ತಾವನೆಗೈದು ಸಮ್ಮೇಳನ ಉದ್ಘಾಟಿಸುವಂತೆ ಆಮಂತ್ರಣವನ್ನೀಡಿ ಭಕ್ತಿಪೂರ್ವಕವಾಗಿ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕರ ರಾಜ್ಯ ತುಳು ಅಕಾಡಮಿ ಅಧ್ಯಕ್ಷ ಎ.ಸಿ ಭಂಡಾರಿ, ಅಖಿಲಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಗೌ| ಪ್ರ| ಕಾರ್ಯದರ್ಶಿ ನಿಟ್ಟೆ ಶಶಿಧರ್ ಶೆಟ್ಟಿ, ಎಸ್.ಕೆ ಶ್ರೀಯಾನ್ ಉಪಸ್ಥಿತರಿದ್ದರು.

Around 100 unknown  people indulged in stone pelting ,injuring police men & staff of MSSF. Three police vehicle’ s windshield have been damaged. 2 constable & 3 MSSF staff are injured and undergoing treatment in hospital.

Mumbai July,23: BJP National President Amit Shah today meet to Lata Mangeshkar in Mumbai.

ಸವಾಕ್ ಮಂಜೇಶ್ವರ ಬ್ಲಾಕ್ ಸಮಾವೇಶ - ಸಂಘಟನಾತ್ಮಕ ಮುನ್ನಡೆ ಆಧುನಿಕ ಸಮಾಜದ ಅಗತ್ಯ : ಎಂ. ಉಮೇಶ್ ಸಾಲ್ಯಾನ್

ಮುಂಬಯಿ (ಮಂಜೇಶ್ವರ),ಜು.23: ಮನೋರಂಜನೆ ಸಹಿತ ಜನಸಾಮಾನ್ಯರ ಬದುಕಿಗೆ ಬೆಳಕಾಗಿರುವ ಕಲಾವಿದರು ಇಂದು ಅನುಭವಿಸುತ್ತಿರುವ ಸವಾಲುಗಳಿಗೆ ಧ್ವನಿಯಾಗಿ ಸವಾಕ್ ಕಾರ್ಯನಿರ್ವಹಿಸುತ್ತಿರುವು ದು ಭರವಸೆಯಾಗಿ ಬೆನ್ನೆಲುಬಾಗಿದೆ. ಸಂಘಟನಾತ್ಮಕವಾಗಿ ಮುನ್ನಡೆಯುವುದು ಆಧುನಿಕ ಸಮಾಜ ವ್ಯವಸ್ಥೆಯ ಅಗತ್ಯವಾಗಿದ್ದು, ಸವಾಕ್‍ನ್ನು ಇನ್ನಷ್ಟು ಬಲಗೊಳಿಸಬೇಕು ಎಂದು ಸವಾಕ್ ಜಿಲ್ಲಾಧ್ಯಕ್ಷ ಎಂ. ಉಮೇಶ್ ಸಾಲ್ಯಾನ್ ಕರೆನೀಡಿದರು.

ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಕೇರಳ(ಸವಾಕ್) ನ ಮಂಜೇಶ್ವರ ಉಪಜಿಲ್ಲಾ ಸಮಾವೇಶವನ್ನು ಭಾನುವಾರ ಅಪರಾಹ್ನ ಮಂಜೇಶ್ವರದ ಕಲಾಸ್ಪರ್ಶಂ ಫೈನ್ ಆಟ್ರ್ಸ್ ಅಕಾಡೆಮಿ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಲಾವಿದರು ಮತ್ತು ಕಲಾಕ್ಷೇತ್ರಕ್ಕೆ ಸಂಬಂಧಿಸಿದ ಇತರ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವವ ರಿಗೆ ವಿಶೇಷ ಅನುದಾನಗಳು, ಯೋಜನೆಗಳನ್ನು ಸರಕಾರ ಜಾರಿಗೊಳಿಸಿದ್ದರೂ ಅನೇಕರಿಗೆ ಇದು ಲಭ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸವಾಕ್ ಸಂಘಟನೆ ಅಹರ್ನಿಶಿ ಕಾರ್ಯಾಚರಿಸಿ ನ್ಯಾಯಯುತ ನೆರವುಗಳನ್ನು ಒದಗಿಸಲು ಸಾಧ್ಯವಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಯಕ್ಷಗಾನ ಸಹಿತ ಗಡಿನಾಡು ಕಾಸರಗೋಡಿನ ಸಾಂಸ್ಕøತಿಕ ಪ್ರಕಾರಗಳಿಗೆ ರಾಜ್ಯ ಸರಕಾರ ಮನ್ನಣೆ ನೀಡುವ ನಿಟ್ಟಿನಲ್ಲಿ ಸವಾಕ್ ಕಾರ್ಯೋನ್ಮುಖವಾಗಿದೆ ಎಂದು ಅವರು ತಿಳಿಸಿದರು.

ಸವಾಕ್ ಬ್ಲಾಕ್ ಅಧ್ಯಕ್ಷ ಪ್ರಮೋದ್ ಪಣಿಕ್ಕರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತುಳಸೀಧರನ್ ಉಪಸ್ಥಿತರಿದ್ದು ಮಾತನಾಡಿದರು. ಜಿಲ್ಲಾ ಮುಖಂಡರಾದ ವೇಣುಗೋಪಾಲ ಶೇಣಿ, ಸುರೇಶ್ ಪಣಿಕ್ಕರ್, ಸುಶ್ಮಿತಾ ಆರ್ ಕುಂಬಳೆ, ಜಯಂತಿ ಸುವರ್ಣ ಅಡ್ಕ, ಸನ್ನಿ ಅಗಸ್ಟಿನ್, ಕಲಾಸ್ಪರ್ಶಂ ನಿರ್ದೇಶಕಿ ಜೀನ್ ಮೊಂತೇರೋ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಹತ್ತನೇ ತರಗತಿ ಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳೊಂದಿಗೆ ತೇರ್ಗಡೆಯಾದ ಸವಾಕ್ ಸದಸ್ಯರ ಮಕ್ಕಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅಂಗವಿಕಲ ಕಲಾವಿದ ಅಬ್ದುಲ್ ಕರೀಂ ಅವರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು. ವಾರ್ಷಿಕ ವರದಿ ವಾಚಿಸಲಾಯಿತು.

ನೂತನ ಬ್ಲಾಕ್ ಸಮಿತಿಗೆ ಆಯ್ಕೆ ನಡೆಯಿತು. ಪ್ರಮೋದ್ ಪಣಿಕ್ಕರ್ (ಅಧ್ಯಕ್ಷ), ಚಂದ್ರಹಾಸ ಕಯ್ಯಾರು (ಪ್ರ. ಕಾರ್ಯದರ್ಶಿ), ಬಾಲಕೃಷ್ಣ ಮಾಸ್ತರ್ ಮಜಿಬೈಲು (ಕೋಶಾಧಿಕಾರಿ), ದಯಾನಂದ ಮಾಡ, ಸುಜಾತಾ ಮಂಜೇಶ್ವರ, ಎ.ಬಿ.ರಾಧಾಕೃಷ್ಣ ಬಲ್ಲಾಳ್ (ಉಪಾಧ್ಯಕ್ಷರು), ರಮೇಶ ಕುರೆಡ್ಕ, ಅಪ್ಪಣ್ಣ ಕೋಳ್ಯೂರು, ರವಿ ಎಂ.ಎಸ್ (ಜೊತೆ ಕಾರ್ಯದರ್ಶಿಗಳು) ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಎ.ಬಿ ರಾಧಾಕೃಷ್ಣ ಬಲ್ಲಾಳ್ ಸ್ವಾಗತಿಸಿದರು. ಕು| ರೇಷ್ಮ ಹಾಗೂ ಕು.ದೀಕ್ಷಾ ಸ್ವಾಗತ ನೃತ್ಯಗೈದರು. ಚಂದ್ರಹಾಸ ಕಯ್ಯಾರು ವಂದಿಸಿದರು.

ಭರವಸೆಯ ಹೀರೋ ಶ್ರೀಕಾಂತ್ ರೈ

ತುಳುವಿಗೆ ಓರ್ವ ಸುಂದರ ಹಾಗೂ ಗಟ್ಟಿಮುಟ್ಟಾದ ಪ್ರತಿಭಾನ್ವಿತ ಹೀರೋ ಸಿಗುತ್ತಿದ್ದಾನೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿ ಶಹಬ್ಬಾಸ್ ಪಡೆದುಕೊಂಡಿರುವ ಶ್ರೀಕಾಂತ್ ಜೆ. ರೈ ಹೆಸರಿನ ಈತನ ಬಗ್ಗೆ ಎಲ್ಲರಿಗೂ ವಿಶೇಷ ಭರವಸೆ ಮೂಡಿದೆ.
ಗುರುಪುರ ಬೆಳ್ಳಿಬೆಟ್ಟುಗುತ್ತು ಜಗನ್ನಾಥ ರೈ ಮತ್ತು ಉಮಾ ಜೆ ರೈ ಅವರ ಪುತ್ರರಾಗಿರುವ ಇವರು ಶಾಲಾ - ಕಾಲೇಜು ದಿನಗಳಲ್ಲಿಯೇ ನಟನೆಯಲ್ಲಿ ಆಸಕ್ತಿ ಹೊಂದಿದವರು.

ಆಗಲೇ  ನಾಟಕಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಶಿಕ್ಷಣದಲ್ಲೂ ಮುಂಚೂಣಿಯಲ್ಲಿದ್ದ ಅವರು ಎಸ್‍ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿ. ಬಳಿಕ  ನಿಟ್ಟೆ ಕಾಲೇಜಿನಿಂದ ಎಂಬಿಎ ಪದವಿ ಪಡೆದಿರುವ  ಅವರು  ಬಿಗ್ ಎಫ್ ಎಂ ನಲ್ಲಿ ಒಂದು ವರ್ಷÀ ಆರ್‍ಜೆ ಆಗಿ ದುಡಿದಿದ್ದಾರೆ.

ನಟನಾಗಬೇಕು ಎಂಬ ಆಸೆ ಅವರಲ್ಲಿ ಆಳವಾಗಿತ್ತು. ಆದ್ದರಿಂದಲೇ ಅದಕ್ಕೆ ಬೇಕಾದ ತಯಾರಿ ನಡೆಸುತ್ತಿದ್ದರು.  ಬೆಂಗಳೂರಿನ ಬನಶಂಕರಿಯಲ್ಲಿ ಸುಚಿತ್ರಾ ಫಿಲ್ಮ್ ಅಕಾಡೆಮಿಯಿಂದ  ಅಭಿನಯ ಕುರಿತು ತರಬೇತಿ ಪಡೆದುಕೊಂಡಿರುವ ಅವರು  ಕೆ. ಬಾಲು ಅವರಿಂದ ಫೈಟಿಂಗ್ ತರಬೇತಿಯನ್ನೂ ಪಡೆದುಕೊಂಡಿದ್ದಾರೆ. ದೇಹ ದಂಡನೆ ಮೂಲಕ ಸಿನಿಮಾಕ್ಕೆ ಅಗತ್ಯವಿರುವ ರೀತಿಯಲ್ಲಿ ದೇಹವನ್ನು ಸಿದ್ಧಗೊಳಿಸುತ್ತಿದ್ದಾರೆ. ಆ ಶ್ರಮವೆಲ್ಲವೂ ಅವರ ದೇಹದಲ್ಲಿ ಈಗ ಕಂಡು ಬರುತ್ತಿದೆ. ಅವರು ಸುಂದರ ದೇಹದ ಸುಂದರ ರೂಪದ ಹೀರೋ ಎಂದು ಗುರುತಿಸಿಕೊಂಡಿದ್ದಾರೆ.

ಕೆಲವು ಟೆಲಿಫಿಲ್ಮ್‍ಗಳನ್ನು ಮಾಡಿರುವ ಅವರು ಕಂಡಿಷನ್ ಎಪ್ಲೈ, ಸ್ಟೋನ್  ಹೌಸ್ ಮುಂತಾದ ಕಿರುಚಿತ್ರ ಗಳನ್ನೂ ಮಾಡಿದ್ದಾರೆ. ಬರ್ಕೆ ಸಿನಿಮಾದಲ್ಲಿ ಮೂವರು ಹೀರೋಗಳ ಪೈಕಿ ಓರ್ವರಾಗಿ ನಟಿಸಿ ಗಮನ ಸೆಳೆದಿದ್ದರು. ಸಂಬಂಧ  ಹೆಸರಿನ  ತುಳು ಸೀರಿಯಲ್‍ನಲ್ಲೂ ನಟಿಸಿದ್ದರು. "ಗಂಟ್ ಕಲ್ವೆರ್" ಸಿನಿಮಾದಲ್ಲೂ ನಟಿಸಿರುವ ಇವರು ಕೆಲವು ಕನ್ನಡ ಸಿನಿಮಾಗಳಲ್ಲೂ ನಟಿಸಿ ಗಮನ ಸೆಳೆಯುತ್ತಿದ್ದಾರೆ. ಡ್ವಾನ್ ಕುಮಾರ್, ಅರಿಷಡ್ವರ್ಗ, ಕಾಲಚಕ್ರ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದು, ಪ್ರಸ್ತುತ ಅರುಣಾಶ್ವ ಎಂಬ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಹೀರೋ ಪಾತ್ರ ಮಾಡಿರುವ ಅವರಿಗೆ ಸಂಭ್ರಮ ಹೀರೋಯಿನ್ ಆಗಿದ್ದಾರೆ. ಅದೇ ತಂಡದವರು ಮಾಡುತ್ತಿರುವ ’ಆಯೆ ಏರ್’ ತುಳು ಸಿನಿಮಾದಲ್ಲೂ ಇವರೇ ಹೀರೋ ಆಗಿದ್ದಾರೆ. ಈ ಚಿತ್ರದಲ್ಲೂ ಸಂಭ್ರಮ ನಾಯಕಿಯಾಗಿದ್ದಾರೆ. ಇವರಿಗೆ  ಉತ್ತಮ ಅವಕಾಶಗಳು ಸಿಕ್ಕಿದರೆ ಅವರಲ್ಲಿರುವ ಪೂರ್ಣ ಪ್ರಮಾಣದ ಪ್ರತಿಭೆ ಹೊರಬರಲು ಸಾಧ್ಯ. ಅಂಥ ಅವಕಾಶ  ಶ್ರೀಕಾಂತ್‍ಗೆ ಲಭಿಸಲಿ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi