ಮುಂಬಯಿಯಲ್ಲಿ ಕನ್ನಡ ಭದ್ರವಾಗಿದೆ: ಮುದ್ದು ಮೂಡುಬೆಳ್ಳೆ
Kemmannu News Network, 18-08-2018 20:32:55
ಕನ್ನಡ ವಿಭಾಗ ಮುಂಬಯಿ ವಿವಿಯಿಂದ ಕೃತಿ ಬಿಡುಗಡೆ-ಉಪನ್ಯಾಸ-ಪದವಿ ಪ್ರದಾನ ಕಾರ್ಯಕ್ರಮ
ಮುಂಬಯಿಯಲ್ಲಿ ಕನ್ನಡ ಭದ್ರವಾಗಿದೆ: ಮುದ್ದು ಮೂಡುಬೆಳ್ಳೆ
ಮುಂಬಯಿ, ಆ.18: ಇಲ್ಲಿ ನಿಮ್ಮನ್ನೆಲ್ಲ ಕಂಡಾಗ ನಾವೆಲ್ಲ ಒಂದೇ ಓಣಿಯುವರಿರುವವರೆಂದು ಭಾವನೆ ಮೂಡುತ್ತದೆ. ಹೊರನಾಡಿನಲ್ಲಿದ್ದು ಕರುನಾಡ ತಾಯಿನಾಡನ್ನು ದಿನಾ ಧ್ಯಾನಿಸುವವರು ಮುಂಬಯಿ ಕನ್ನಡಿಗರು. ಇಲ್ಲಿನ ಎಲ್ಲರ ಕೃತಿಗಳು ಒಳ್ಳೆಯ ಕೃತಿಗಳು. ಇವತ್ತು ಕರ್ನಾಟಕದಲ್ಲೇ ಕನ್ನಡ, ಆಗ್ಲ ಮಾಧ್ಯಮದ ಪ್ರಭಾವದಿಂದ ಹಿನ್ನಡೆ ಪಡೆಯುತ್ತಿರುವಾಗ ಇಂತಹ ಸಂಕ್ರಮಣ ಕಾಲ ಘಟ್ಟದಲ್ಲಿ ಮುಂಬಯಿಯಲ್ಲಿ ಕನ್ನಡ ಬಲಿಷ್ಠವಾಗಿ ಬೆಳೆದಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾಲಯದ ನಿರ್ದೇಶಕ ಮುದ್ದು ಮೂಡುಬೆಳ್ಳೆ ತಿಳಿಸಿದರು.
ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿಯ ಜೆ.ಪಿ.ನಾಯಕ್ ಸಭಾಭವನದಲ್ಲಿ ಇಂದಿಲ್ಲಿ ಶನಿವಾರ ಪೂರ್ವಾಹ್ನ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಆಯೋಜಿಸಿರುವ ಕೃತಿ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಪದವಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮುದ್ದು ಮೂಡುಬೆಳ್ಳೆ ಮಾತನಾಡಿದರು.
ಏಕಕಾಲಕ್ಕೆ ಒಟ್ಟು ಆರು ಕೃತಿಗಳನ್ನು ಸಾರಸ್ವತ ಲೋಕಕ್ಕೆ ಲೋಕಾರ್ಪಣೆ ಮಾಡಲಾಗಿದ್ದು, ಮಹಾನಗರದಲ್ಲಿನ ಸಾಹಿತಿ ಡಾ| ದಾಕ್ಷಾಯಣಿ ಯಡಹಳ್ಳಿ ಅವರ `ಅಕ್ಕಮಹಾದೇವಿ ಮತ್ತು ಮೀರಾಬಾಯಿ’ ಪಿಹೆಚ್ಡಿ ಮಹಾಪ್ರಬಂಧ ಕೃತಿಯನ್ನು ಮುದ್ದು ಮೂಡುಬೆಳ್ಳೆ ಬಿಡುಗಡೆಗೊಳಿಸಿದ್ದು ಮುಂಬಯಿ ವಿವಿ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ| ಜೀವಿ ಕುಲಕರ್ಣಿ ಕೃತಿ ಪರಿಚಯಿಸಿದರು. ಮುಂಬಯಿನ ಸಾಹಿತಿ ಅರವಿಂದ ಹೆಬ್ಬಾರ್ ಅವರ `ಹಗಲು ಗನಸು’ ಕಥಾಸಂಕಲನವನ್ನು ವಿವಿ ಪೀಠಗಳ ಸಂಯೋಜಕ ಮತ್ತು ಉಪ ಕುಲಸಚಿವ ಪ್ರಭಾಕರ ನೀರುಮಾರ್ಗ ಬಿಡುಗಡೆ ಗೊಳಿಸಿದ್ದು ಕಥೆಗಾರ ಡಾ| ಕೆ.ಗೋವಿಂದ ಭಟ್ ಕೃತಿ ಪರಿಚಯಿಸಿದರು. ಕವಯತ್ರಿ ಶಾರದಾ ಅಂಬೆಸಂಗೆ ಅವರ `ಕಾಡಿ ಬೇಡಲಿಲ್ಲ’ ಕವನ ಸಂಕಲನವನ್ನು ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಬಿಡುಗಡೆಗೊಳಿಸಿದರು. ಕವಯತ್ರಿ ಶಾಂತಾ ಶಾಸ್ತ್ರೀ ಅವರ `ಚುಂಬಕ’ ಕವನ ಸಂಕಲನವನ್ನು ಆಳ್ವಾಸ್ ಕಾಲೇಜು ಮೂಡಬಿದ್ರೆ ಇದರ ಪ್ರಾಧ್ಯಾಪಕ ಡಾ| ಯೋಗೀಶ್ ಕೈರೋಡಿ ಬಿಡುಗಡೆ ಗೊಳಿಸಿದ್ದು ಮುಂಬಯಿ ವಿವಿ ಕನ್ನಡ ವಿಭಾಗದ ಸಂಶೋಧನಾ ವಿದ್ಯಾಥಿರ್üನಿ ಶೈಲಜಾ ಹೆಗಡೆ ಕೃತಿ ಪರಿಚಯಿಸಿದರು. ಪುಣೆ ಅಲ್ಲಿನ ಸಾಹಿತಿ ಪಾಂಗಾಳ ವಿಶ್ವನಾಥ ಶೆಟ್ಟಿ ಅವರ `ಬೆಂಕಿಯಲ್ಲಿ ಬೆಂದ ಬಂಗಾರ’ ಕೃತಿಯನ್ನು ಮುದ್ದು ಮೂಡುಬೆಳ್ಳೆ ಬಿಡುಗಡೆಗೊಳಿಸಿದ್ದು ಪೆÇಳಲಿ ಮಹೇಶ್ ಹೆಗ್ಡೆ ಕೃತಿ ವಿಶ್ಲೇಷಣೆಗೈದರು ಮತ್ತು `ಒಣಮರ ಚಿಗುರಿದಾಗ’ ಕೃತಿಯನ್ನು ಮುದ್ದು ಮೂಡುಬೆಳ್ಳೆ ಬಿಡುಗಡೆ ಗೊಳಿಸಿದ್ದು ಪುಣೆ ಅಲ್ಲಿನ ಕವಿ, ಲೇಖಕ ಪೆÇಳಲಿ ಮಹೇಶ್ ಹೆಗ್ಡೆ ಕೃತಿ ವಿಶ್ಲೇಷಿಸಿದರು. ಕೃತಿಕಾರರೂ ತಮ್ಮಅನಿಶಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಕಾರ್ಯಕ್ರಮ ನಡೆಸಲ್ಪಟ್ಟಿದ್ದು, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಡಿಪೆÇ್ಲೀಮಾ ಪದವೀಧರರಾದ ಶರತ್ ಹೆಗ್ಡೆ, ಶ್ರದ್ಧಾ ಹೆಗ್ಡೆ, ಭವನೇಶ್ವರಿ ಹರಳ ಮತ್ತು ವಿಜಯ ಪೂಜಾರಿ ಅವರಿಗೆ ಗೌರವಿಸಿ ಅಭಿನಂದಿಸಿದರು.
ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಪ್ರಸ್ತವಿಕ ನುಡಿಗಳನ್ನಾಡಿ ಮುಂಬಯಿನ ವಿದ್ಯಾನಗರಿಯ ಇಡೀ ಕಲೀನಾ ಕ್ಯಾಂಪಸ್ ಕನ್ನಡವನ್ನು ಉಸಿರಾಗಿಸಿ ಹಸಿರಾಗಿಸಿ ಕಂಗೋಳಿಸುತ್ತಿದೆ. ಇದೊಂದು ವಿಭಾಗದ ಶ್ರಾವಣ ಸಂಭ್ರಮದ ಕಾರ್ಯಕ್ರಮ. ಆರು ಕೃತಿಗಳ ಬಿಡುಗಡೆ ಅಂದರೆ ಈ ಕ್ಯಾಂಪಸ್ ವಿಶ್ವ ವಿದ್ಯಾಲಯ ಲೋಕಮುಖಕ್ಕೆ ಸಿಕ್ಸರ್ ಹೊಡೆಯುತ್ತಿರುವುದು ಅಭಿನಂದನೀಯ. ಶ್ರದ್ಧೆ ಶ್ರಮದಿಂದ ರಚಿಸಿ ಮುದ್ರಿಸಿಕೊಂಡ ಕೃತಿಗಳ ಬಿಡುಗಡೆ ಈ ವಿಭಾಗದ ಮಹಾನ್ ಸಾಧನೆಯಾಗಿದೆ. ಆದುದರಿಂದ ಇದು ಕನ್ನಡದ ಹಬ್ಬವೇ ಸರಿ ಎಂದರು.
ಗಿರೀಶ್ ಸಾರ್ವಡ್ ಅಕ್ಕನ ವಚನ ಮತ್ತು ತತ್ವಗೀತೆಗಳನ್ನಾಡಿದರು. ಕನ್ನಡ ವಿಭಾಗದ ಡಾ| ಪೂರ್ಣಿಮಾ ಎಸ್.ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ- ಕನ್ನಡ ವಿಭಾಗ ಮುಂಬಯಿ ವಿವಿ ಆಶ್ರಯದಲ್ಲಿ ಶ್ರೀ ನಾರಾಯಣಗುರು ಅವರ ಕುರಿತು ವಿಶೇಷ ಉಪನ್ಯಾಸ
ಉಪನಿಷತ್ತು ಯಾವುದರಲ್ಲೂ ಭೇದ ಮಾಡಲ್ಲ : ಬಾಬು ಶಿವ ಪೂಜಾರಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಆ.18: ನಾರಾಯಣ ಗುರುಗಳ ಸಾಧನಾ ಕಾಲಘಟ್ಟದಲ್ಲಿ ಕೇರ¼ವು ಹತಾಶ ಸ್ಥಿತಿಗತಿಯಲ್ಲಿತ್ತು. ನಮ್ಮದು ಹಿಂದು, ಸನಾತನ ಧರ್ಮ, ಸರ್ವ ಶ್ರೇಷ್ಠ ಧರ್ಮ, ವಿಶ್ವದಲ್ಲೇ ನಮ್ಮದು ಸುಕುಟುಂಬಸ್ಥ ಎಂದೆಲ್ಲಾ ಹೇಳಿ ಕೊಳ್ಳಬಹುದು. ಆದರೆ ಧರ್ಮದ ಸೂತ್ರಗಳು ಮಾನವೀಯತೆ ಕಳಕೊಂಡಾಗ ಅದು ಧರ್ಮಗಳಾಗಲ್ಲ. ಎಲ್ಲಿ ತನಕ ದ್ವೇಷ, ಮತ್ಸರ, ಅಸಮಾನತೆ ರಹಿತ ಧರ್ಮಗಳು ಸಾಧ್ಯವಿಲ್ಲವೋ ಅಲ್ಲಿ ತನಕÀ ಯಾವುದೇ ಸಮಾಜದ ಉದ್ಧಾರ ಸಾಧ್ಯವಿಲ್ಲ. ಆದುದರಿಂದಲೇ ಉಪನಿಷತ್ತುಗಳನ್ನು ನಾರಾಯಣ ಗುರುಗಳು ಆಯ್ಕೆ ಮಾಡಿ ಸಮಾಜ ಸುಧಾರಣೆಗೆ ನಿಷ್ಠಾವಂತರಾಗಿದ್ದರು ಎಂದು ನಾಡಿನ ಹೆಸರಾಂತ ವಿದ್ವಾಂಸ, ಸಂಶೋಧಕ ಬಾಬು ಶಿವ ಪೂಜಾರಿ ತಿಳಿಸಿದರು.
ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿಯ ಜೆ.ಪಿ.ನಾಯಕ್ ಸಭಾಭವನದಲ್ಲಿ ಇಂದಿಲ್ಲಿ ಶನಿವಾರ ಪೂರ್ವಾಹ್ನ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಆಶ್ರಯದಲ್ಲಿ ಶ್ರೀ ನಾರಾಯಣಗುರು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದ್ದು ಶಿವ ಪೂಜಾರಿ ಶ್ರೀನಾರಾಯಣಗುರು ಸಾಧನಾ ಪಥ ವಿಷಯದಲ್ಲಿ ಉಪನಿಷತ್ಧಾರೆಗೈದು ಉಪನ್ಯಾಸ ನೀಡಿದರು.
ಕೇರಳದಲ್ಲಿ ಬಹುಮುಖ್ಯ ಶೋಷಣೆ ಮೇಲುವರ್ಗದಿಂದ ತಳವರ್ಗದ ವರೆಗೆ ನಡೆಯುತ್ತಿವಂತಹ ಕಾಲ. ಕೇರಳ ಹತಾಶ ಸ್ಥಿತಿಗೆ ತಲುಪುವಂತಹ ಕಾಲದಲ್ಲೇ ನಾರಾಯಣ ಗುರುಗಳು ಜನಿಸಿದರು. ವಿಶ್ವವೇ ಒಂದು ಕುಟುಂಬ ಎನ್ನುವಂತಹ ಧರ್ಮ ಅಂದು ಇತ್ತು. ಆದರೂ ಅಂತಹ ಸ್ಥಿತಿ ಏಕಾಯ್ತು ಎಂದು ಚಿಂತಿಸ ತಕ್ಕದು. ಧರ್ಮದ ಸೂತ್ರ ಎಷ್ಟು ಗಣತರವಾಗಿದ್ದರೂ ಮಾನವತೆ ಇಲ್ಲದೆ ಹೋದಾಗ ಯಾವುದೇ ಸಮುದಾಯ ಅಥವಾ ವ್ಯಕ್ತಿ ಉದ್ಧಾರವಾಗದು. ಇದನ್ನೆಲ್ಲಾ ಅರಿತ ಅವರು ಉಪನಿಷತ್ತನ್ನು ಆಳವಾಗಿ ಅಧ್ಯಯನ ಮಾಡಲು ತೊಡಗಿದರು. ದ್ವೈತವೇ ಆಗಲಿ ಅದ್ವೈತವೇ ಆಗಲಿ ಉಪನಿಷತ್ತು ಯಾವುದರಲ್ಲೂ ಭೇದವನ್ನು ಮಾಡಲ್ಲ. ನಾರಾಯಣ ಗುರುಗಳ ಈ ಅಧೈತವನ್ನು ಬೇರೆಬೇರೆ ಮೂಲಗಳಿಂದ ಕಲಿತು ಕೊಂಡರು. ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬುದನ್ನು ನಾರಾಯಣ ಗುರುಗಳು ಪ್ರತಿಪಾದಿಸಿದರು ಎಂದೂ ಶಿವ ಪೂಜಾರಿ ತಿಳಿಸಿದರು.
ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾಲಯದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಪ್ರಸ್ತಾವನೆಗೈದÀು ನಾರಾಯಣಗುರು ಬರೇ ಸಂತ ಸನ್ಯಾಸಿವಲ್ಲ, ಬದಲಾವಣೆಗಳ ಹರಿಕಾರರಾಗಿ ಸಮಾಜ ಸುಧಾರಕರಾಗಿ ಶ್ರಮಿಸಿದ್ದರು. ಮಹಾನ್ ದಾರ್ಶನಿಕರಾಗಿದ್ದ ಅವರ ಜೀವನ ಉತ್ತರ ಭಾರತದಲ್ಲೂ ನಾರಾಯಣ ಉಲ್ಲೇಖವಾಗಿವೆ. ಗುರುವರ್ಯರು ಹಲವಾರು ಭಾಷೆಗಳಲ್ಲಿ ಸಾಹಿತ್ಯ ರಚಿಸಿ ಸಮಾಜ ನ್ಯಾಯ ಒದಗಿಸಿದ್ದರು. ಸಾಮರಸ್ಯದ ಬಾಳಿಗಾಗಿ ಒಳಿತನ್ನು ಯುವ ಸಮಾಜಕ್ಕೆ ವಿಸ್ತರಿಸಿದವರು. ತಳಸ್ಪರ್ಶಿಯಾಗಿ ಸುಧಾರಣಕರಿಸಿದ ಅವರ ಪಾಂಡಿತ್ಯವೂ ಅನನ್ಯವಾದುದು ಎಂದರು.
ಭಾರತದ ಸಾಮಾಜಿಕ ಸುಧಾರಕರಾಗಿದ್ದ ನಾರಾಯಣಗುರು ಕೇರಳದಲ್ಲಿ ಸುಧಾರಣೆ ಚಳುವಳಿ ನಡೆಸಿದ್ದರು. ಹಿಂದುಳಿದ ಸಮಾಜಗಳು ಸಹಿಸಲಾಗದ ಅನ್ಯಾಯ ಎದುರಿಸುತ್ತಿದ್ದಾಗ ನಾರಾಯಣಗುರು ಹೇಗೆ ಸಮಾಜ ಬದಲಾವಣೆಗೆ ಪಣತೊಟ್ಟರು ಎನ್ನುವುದು ತಿಳಿಯುವ ಅಗತ್ಯ ಸದ್ಯಕ್ಕಿದೆ. ಜಾತಿ ತತ್ವವನ್ನು ತಿರಸ್ಕರಿಸಿ ಆಧ್ಯಾತ್ಮಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಮಾನತೆಯ ಹೊಸ ಮೌಲ್ಯಗಳನ್ನು ಪೆÇ್ರೀತ್ಸಾಹಿಸಿದ ಇಂತಹ ಮಹಾನ್ ಪುರುಷರ ಅಧ್ಯಾಯನ ಪ್ರಸಕ್ತ ಯುವ ಜನತೆಗೆ ಅಗತ್ಯವಾಗಬೇಕು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಜಿ.ಎನ್ ಉಪಾಧ್ಯ ತಿಳಿಸಿದರು.
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ಕೃತಜ್ಞತೆ ಸಮರ್ಪಿಸಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link