Brief Mumbai - Mangalore news with pictures


Rons Bantwal
Kemmannu News Network, 20-08-2018 22:01:08


Write Comment     |     E-Mail To a Friend     |     Facebook     |     Twitter     |     Print


Mumbai Aug. 20 :- Kajol promote her movie Helicopter Eela in Mumbai.

Mumbai Aug. 20 :- Veteran Producer Manish Goswami and his son, writer-director, Siddhant ventured into the education sector by opening their Preschool and Daycare center named - Joy in the western suburbs of Mumbai. The legendary Mr. Sunil Gavaskar  inaugurated the preschool and gave his blessings with best wishes to Siddhant and family for this new journey. The inauguration attracted a lot of celebrities like, veteran producer-director Subhash Ghai, Sidhanshu Pandey and his wife Mona Pandey, Prabal Panjabi, Jiten Lalwani, Ayub Khan, Lucky Morani, Mohmad Bhai, Chetanya Adib to name a few.

For people suffering from the disaster in Kerala, Mira Bhainar’s hawkers have made a unique initiative, sending cloth support to the flood victims of Kerala. This help was collected by the hawkers linked to the Independent Hawkers Union of Mira Bhainder under the guidance of founder, Dayashankar Singh. This material was sent through the Trust of Ayyappa Swami Temple of Mira Road

ಕನ್ನಡ ವೆಲ್ಫೇರ್ ಸೊಸೈಟಿ ಘಾಟ್‍ಕೋಪರ್ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿ - ಕೆಟ್ಟ ಮನಸ್ಸು ಎಂದೂ ಕವಿತೆ ರಚಿಸಲಾರದು : ಡಾ| ಸುನೀತಾ ಎಂ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಆ.20: ನಮ್ಮ ಬದುಕು ನಮಗೆ ಮುಖ್ಯ. ಆ ಬದುಕು ನಮ್ಮ ಕವಿತೆಗಳಲ್ಲಿ ಪಡಿಮೂಡಬೇಕು. ಕವಿತೆಗೆ ಭಾಷೆಯಿಲ್ಲ ಅದು ಇಂದ್ರೀಯಾತೀತವಾದುದು. ಯಾವೋತ್ತು ಒಂದು ಕೆಟ್ಟ ಮನಸ್ಸು ಕವಿತೆ ರಚಿಸಲಾರದು. ಕವಿತೆ ಕಟ್ಟಲು ಒಳ್ಳೆಯ ಸುಸಂಸ್ಕೃತ ಮನಸ್ಸು ಬೇಕು. ಯಾರಿಗೆ ಅರಿವು ಇಲ್ಲವೋ ಅವರಿಗೆ ಅರಿವನ್ನು ಕೊಡುವ ಕೆಲಸ ಕವಿಗಳಿಂದ ಆಗಬೇಕು. ಏಕೆಂದರೆ ಕವಿತೆ ಬದುಕನ್ನು ಪ್ರೀತಿಸಲು ಕಲಿಸುತ್ತದೆ ಎಂದು ನಾಡಿನ ಹಿರಿಯ ಕವಯತ್ರಿ ಡಾ| ಸುನೀತಾ ಎಂ.ಶೆಟ್ಟಿ ತಿಳಿಸಿದರು

ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಸಂಸ್ಥೆ ತನ್ನ ಸ್ವರ್ಣಮಹೋತ್ಸವ ವರ್ಷಾಚರಣಾ ನಿಮಿತ್ತ ಘಾಟ್‍ಕೋಪರ್ ಪಂತ್‍ನಗರದಲ್ಲಿನ ವೆಲ್ಫೇರ್ ಸೊಸೈಟಿಯ ಬಾಬಾ’ಸ್ ಮಹೇಶ್ ಎಸ್.ಶೆಟ್ಟಿ ಸಭಾಗೃಹದಲ್ಲಿ ಕಳೆದ ಆದಿತ್ಯವಾರ ಸಂಜೆ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಸಲ್ಪಟ್ಟಿದ್ದು ಡಾ| ಸುನೀತಾ ಶೆಟ್ಟಿ ಹಿಂಗಾರ ಅರಳಿಸಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ಅಡ್ವಕೇಟ್ ಹೆಚ್.ಕೆ ಸುಧಾಕರ್ ಹಾಗೂ ವೆಲ್ಫೇರ್ ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾಬಾಳಿಕೆ ಉಪಸ್ಥಿತರಿದ್ದು ಕವಿವರ್ಯರಿಗೆ ಪುಷ್ಫಗುಪ್ಚ, ಕೃತಿ ಗೌರವವನ್ನಿತ್ತು ಅಭಿವಂದಿಸಿದರು.

ನೋಡುವಾಗ ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಇದು ಚಿಕ್ಕ ಸಂಸ್ಥೆಯಾಗಿ ಕಂಡರೂ ಅರ್ಥಪೂರ್ಣವಾದ ಮಹತ್ತರವಾದ ಕನ್ನಡದ ಕೆಲಸವನ್ನು ನಿಭಾಯಿಸಿದೆ. ಇದಕ್ಕೆ ಸಂಸ್ಥೆಯ ಸ್ವರ್ಣಸಂಭ್ರಮವೇ ಇದಕ್ಕೆ ಸಾಕ್ಷಿ. ಸಂಸ್ಥೆಯ ಅನನ್ಯ ಸೇವೆಯಿಂದ ಮುಂಬಯಿನಲ್ಲೂ ಕನ್ನಡನಾಡು ಉದಯಿಸÀಲಿಎಂದು ಹೆಚ್.ಕೆ ಸುಧಾಕರ್ ತಿಳಿಸಿದರು.

ಮುದ್ದು ಮೂಡುಬೆಳ್ಳೆ ಅಧ್ಯಕ್ಷೀಯ ನುಡಿಗಳನ್ನಾಡಿ ಇಂದಿನ ಬಹುಭಾಷಾ ಕವಿಗೋಷ್ಠಿ ಬಹಳ ಅರ್ಥಪೂರ್ಣವಾಗಿ ನಡೆದಿದೆ. ಭಾಗವಹಿಸಿದ ಬಹುಭಾಷೆಯ ಎಲ್ಲಾ ಕವಿಗಳು ತಮ್ಮ ಒಳ್ಳೆಯ ಕವಿತೆಗಳನ್ನು ಸಾದರ ಪಡಿಸಿದ್ದಾರೆ. ಮನುಷ್ಯತ್ವ ಇಂದು ಅರಳಬೇಕು. ಬದುಕನ್ನು ಸುಂದರವಾಗಿ ಹೇಗೆ ರೂಪಿಸಬೇಕೆಂಬ ಆಶಯವುಳ್ಳ ಕವಿತೆಗಳೇ ಇಂದು ಪ್ರಸ್ತುತಗೊಂಡಿರುವುದು ಸ್ತುತ್ಯರ್ಹ ಎಂದರು.

ಡಾ| ಗಿರಿಜಾ ಶಾಸ್ತ್ರಿ, ಗೋಪಾಲ್ ತ್ರಾಸಿ, ಗಣೇಶ್ ಕುಮಾರ್ (ಕನ್ನಡ), ಡಾ| ಕರುಣಾಕರ್ ಶೆಟ್ಟಿ ಪಣಿಯೂರು, ಸಾ.ದಯಾ, ಡಾ| ಜಿ.ಪಿ ಕುಸುಮಾ, ಅಶೋಕ್ ವಳದೂರು, ಅಶೋಕ್ ಪಕ್ಕಳ, ಶಾರದಾ ಎ.ಅಂಚನ್ (ತುಳು), ರೋನ್ಸ್ ಬಂಟ್ವಾಳ್ (ಕೊಂಕಣಿ), ಶಾಂತಿ ಶಾಸ್ತ್ರಿ (ಹವ್ಯಾಕ), ಅಕ್ಷತಾ ದೇಶಪಾಂಡೆ (ಮರಾಠಿ), ಅರುಷಾ ಎನ್.ಶೆಟ್ಟಿ (ಗುಜರಾತಿ) ಭಾಷೆಗಳಲ್ಲಿ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು. ನಾರಾಯಣ ಶೆಟ್ಟಿ ನಂದಳಿಕೆ ತಮ್ಮ ಕವಿತೆ ವಾಚಿಸಿ ಕವಿಗೋಷ್ಠಿ ನಿರ್ವಾಹಿಸಿದರು.

ಕಾರ್ಯಕ್ರಮದಲ್ಲಿ ಹೆಸರಾಂತ ವಿದ್ವಾಂಸ, ಸಂಶೋಧಕ ಬಾಬು ಶಿವ ಪೂಜಾರಿ, ಮಂಗಳೂರು ವಿವಿ ಪೀಠಗಳ ಸಂಯೋಜಕ ಮತ್ತು ಉಪ ಕುಲಸಚಿವ ಪ್ರಭಾಕರ ನೀರುಮಾರ್ಗ, ಮೂಡಬಿದ್ರೆ ಆಳ್ವಾಸ್ ಕಾಲೇಜ್‍ನ ಪ್ರಾಧ್ಯಾಪಕ ಡಾ| ಯೋಗೀಶ್ ಕೈರೋಡಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಬಂಟರವಾಣಿ ಸಂಪಾದಕ ಅಶೋಕ್ ಪಕ್ಕಳ, ಜಿ.ಟಿ ಆಚಾರ್ಯ, ಕರ್ನೂರು ಮೋಹನ್ ರೈ, ಸತೀಶ್ ಎನ್.ಬಂಗೇರ, ರಾಧಾಕೃಷ್ಣ ಶೆಟ್ಟಿ, ಶಂಕರ್ ಶೆಟ್ಟಿ, ದಿವಾಕರ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ವೆಲ್ಫೇರ್ ಸೊಸೈಟಿಯ ಕನ್ನಡ ವೆಲ್ಫೇರ್‍ನ ಉಪಾಧ್ಯಕ್ಷ ಜಯರಾಜ್ ಜೈನ್, ಕೋಶಾಧಿಕಾರಿ ಹರೀಶ್ ಎಂ.ಶೆಟ್ಟಿ, ಜೊತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಶಾಂತÀ ಎನ್.ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಸದಸ್ಯರನೇಕರು ಅತಿಥಿüಗಳನ್ನು ಗೌರವಿಸಿದರು. ಕಾರ್ಯದರ್ಶಿ ಸುಧಾಕರ ಎಲ್ಲೂರು ಧನ್ಯವದಿಸಿದರು.

ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಸಂಸ್ಥೆಯಿಂದ ನಡೆಸಲ್ಪಟ್ಟ ಸಾಹಿತ್ಯ ಸಂಭ್ರಮ - ನಾರಾಯಣ ಗುರುಗಳ ಚಿಂತನೆ ಸರ್ವ ಶ್ರೇಷ್ಠವಾದದು : ಯೋಗೀಶ್ ಕೈರೋಡಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಆ.19: ಐವತ್ತರ ಚಾರಿತ್ರಿಕ ನೆಲೆಯ ವೇದಿಕೆಯಲ್ಲಿ ನಾರಾಯಣ ಗುರುಗಳ ಪರಿಚಯಿಕೆಯ ಕಾರ್ಯಕ್ರಮ ನೇರವೇರಿಸುವುದೇ ನನ್ನ ಅಭಿಮಾನ. ತುಳುನಾಡ ಇಡೀ ಪರಿವರ್ತನೆಗೆ ಮುಂಬಯಿಗರ ಶ್ರಮ ಅನುಪಮ ಆದುದು. ತುಳು ಸಂಸ್ಕೃತಿಯನ್ನು ಮೆಲುಕುವುದುದೆಂದರೆ ಅದೇ ಒಂದು ದೊಡ್ಡ ಹಿರಿಮೆಯಾಗಿದೆ. ತುಳು ಎನ್ನುವುದೇ ಒಂದು ಕುಟುಂಬ. ಕುಲಕಸುಬುಗಳಿಂದ ಕೊಡುಕೊಳ್ಳುವಿಕೆಯ ಬದುಕಿಗೆ ತುಳುವರು ಅಗ್ರರು. ಬೆಸೆದು ಬೆಳೆದ ಏಕತೆಯ ಸಂಸ್ಕೃತಿ ತುಳುವರಲ್ಲಿದ್ದು ಆ ಮೂಲಕ ಬಳಗವಾಗಿ ಬಾಳುವುದಕ್ಕೆ ತುಳುವರು ಮಾದರಿ. ಇದಕ್ಕೆಲ್ಲಾ ನಾರಾಯಣ ಗುರುಗಳ ಸಮಾಜ ಸುಧಾರಣಾ ಕ್ರಾಂತಿಯೂ ಪೂರಕ. ಅಜ್ಞಾನವನ್ನು ಜ್ಞಾನೋದಯ ಗೊಳಿಸಿದ ಸಂತರೇ ನಾರಾಯಣ ಗುರುಗಳು ವಿಶಾಲವಾದ ವಿಚಾರಧಾರೆವುಳ್ಳವರಾಗಿದ್ದರು. ಇಂತಹ ನಾರಾಯಣ ಗುರುಗಳ ಮಾನವೀಯ ಧರ್ಮದ ಕಲ್ಪನೆ ಆಧುನಿಕ ಯುಗಕ್ಕೆ ಮಾದರಿ ಆಗಿದೆ. ಅವರ ಚಿಂತನೆ ಸರ್ವ ಶ್ರೇಷ್ಠವಾದುದು ಎಂದು ಆಳ್ವಾಸ್ ಕಾಲೇಜು ಮೂಡಬಿದ್ರೆ ಇದರ ಪ್ರಾಧ್ಯಾಪಕ ಡಾ| ಯೋಗೀಶ್ ಕೈರೋಡಿ ತಿಳಿಸಿದರು

ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಸಂಸ್ಥೆಯು ತನ್ನ ಸುವರ್ಣ ಮಹೋತ್ಸವ ವರ್ಷಾಚರಣಾ ನಿಮಿತ್ತ ಮಂಗಳೂರು ವಿಶ್ವವಿದ್ಯಾಲಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಸಹಯೋಗದಲ್ಲಿ ಘಾಟ್‍ಕೋಪರ್ ಪಂತ್‍ನಗರದಲ್ಲಿನ ವೆಲ್ಫೇರ್ ಸೊಸೈಟಿಯ ಬಾಬಾ’ಸ್ ಮಹೇಶ್ ಎಸ್.ಶೆಟ್ಟಿ ಸಭಾಗೃಹದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂಭ್ರಮದಲ್ಲಿ ತುಳು ಸಂಸ್ಕೃತಿಗೆ ಗುರು ನಾರಾಯಣರ ಪ್ರಭಾವ ವಿಚಾರವಾಗಿ ಡಾ| ಕೈರೋಡಿ ಉಪನ್ಯಾಸವನ್ನಿತ್ತರು.

ವೆಲ್ಫೇರ್ ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾಬಾಳಿಕೆ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಸಾಹಿತ್ಯ ಸಂಭ್ರಮದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಮಂಗಳೂರು ವಿವಿ ಪೀಠಗಳ ಸಂಯೋಜಕ ಮತ್ತು ಉಪ ಕುಲಸಚಿವ ಪ್ರಭಾಕರ ನೀರುಮಾರ್ಗ, ಹೆಸರಾಂತ ವಿದ್ವಾಂಸ, ಸಂಶೋಧಕ ಬಾಬು ಶಿವ ಪೂಜಾರಿ, ಕನ್ನಡ ವೆಲ್ಫೇರ್‍ನ ಕಾರ್ಯದರ್ಶಿ ಸುಧಾಕರ ಎಲ್ಲೂರು, ಕೋಶಾಧಿಕಾರಿ ಹರೀಶ್ ಎಂ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಂಬಯಿ ಕನ್ನಡಿಗರ ಕೆಲಸಗಳೆಲ್ಲವು ಶುದ್ಧಮನಸ್ಸಿನಿಂದ ಕೂಡಿದ್ದು. ನಿಮ್ಮಿಂದ ಕನ್ನಡ ಕಟ್ಟುವ ಕೆಲಸ ಇನ್ನೂ ಹೆಚ್ಚಾಗಲಿ. ಕನ್ನಡಿಗರನ್ನು ಒಗ್ಗೂಡಿಸಿ ಕರುನಾಡನ್ನಾಗಿಸುವಂತಾಗಲಿ ಎಂದÀು ಪ್ರಭಾಕರ ನೀರುಮಾರ್ಗ ತಿಳಿಸಿದರು.

ಸಾಹಿತ್ಯ ಸಂಭ್ರಮದ ಅಂಗವಾಗಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಸಲ್ಪಟ್ಟಿದ್ದು ನಾಡಿನ ಹಿರಿಯ ಕವಯತ್ರಿ ಡಾ| ಸುನೀತಾ ಎಂ.ಶೆಟ್ಟಿ ಅವರು ಹಿಂಗಾರ ಅರಳಿಸಿ ಕವಿಗೋಷ್ಠಿ ಉದ್ಘಾಟಿಸಿದರು. ಡಾ| ಗಿರಿಜಾ ಶಾಸ್ತ್ರಿ, ಗೋಪಾಲ್ ತ್ರಾಸಿ, ಗಣೇಶ್ ಕುಮಾರ್ (ಕನ್ನಡ), ಡಾ| ಕರುಣಾಕರ್ ಶೆಟ್ಟಿ ಪಣಿಯೂರು, ಸಾ.ದಯಾ, ಡಾ| ಜಿ.ಪಿ ಕುಸುಮಾ, ಅಶೋಕ್ ವಳದೂರು, ಅಶೋಕ್ ಪಕ್ಕಳ, ಶಾರದಾ ಎ.ಅಂಚನ್ (ತುಳು), ರೋನ್ಸ್ ಬಂಟ್ವಾಳ್ (ಕೊಂಕಣಿ), ಶಾಂತಿ ಶಾಸ್ತ್ರಿ (ಹವ್ಯಾಕ), ಅಕ್ಷತಾ ದೇಶಪಾಂಡೆ (ಮರಾಠಿ), ಅರುಷಾ ಎನ್.ಶೆಟ್ಟಿ (ಗುಜರಾತಿ) ಭಾಷೆಗಳಲ್ಲಿ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು. ನಾರಾಯಣ ಶೆಟ್ಟಿ ನಂದಳಿಕೆ ತಮ್ಮ ಕವಿತೆ ವಾಚಿಸಿ ಕವಿಗೋಷ್ಠಿ ನಿರ್ವಾಹಿಸಿದರು.

ನಾರಾಯಣ ಗುರುಗಳ ಬಗ್ಗೆ ಮುಂಬಯಿಗರು ಹೆಚ್ಚು ತಿಳಿದವರು. 19ನೇ ಶತಮಾನದ ಸಂಧಿಗ್ದ ಕಾಲದಲ್ಲಿ ಮತಭೇದ ವಿಶೇಷವಾಗಿತ್ತು. ಆ ಕಾಲಕ್ಕೆ ಗುರುಗಳು ಹುಟ್ಟಿದ್ದರು. ಅಗಾಧ ಲೋಕಾನುಭವಿ ಗುರುಗಳು ಸಾಕ್ಷತ್‍ಕಾರ ಪಡೆದ ಸಂತರೆಣಿಸಿ ತಪಸ್ಸಿನ ಫಲವನ್ನು ಸಾಮಾಜಿಕವಾಗಿ ಪಡೆದ ಮಹಾನುಭವಿ. ಅಂತಹ ಪರಮ ಪುರುಷರ ಜೀವನ ಬಗ್ಗೆ ಪ್ರಸಕ್ತ ಜನತೆ ತಿಳಿಯಬೇಕು ಎನ್ನುವುದೇ ಈ ಕಾರ್ಯಕ್ರಮದ ಉದ್ದೇಶ. ತಮ್ಮೆಲ್ಲರ ಒಗ್ಗೂಡುವಿಕೆ ಮತ್ತು ಆತ್ಮೋನ್ನತಿಗೆ ಈ ಕಾರ್ಯಕ್ರಮ ಪೂರಕ ಪ್ರಸ್ತಾವಿಕ ನುಡಿಗಳನ್ನಾಡಿ ತಿಳಿಸಿದರು.

ಬಾಬು ಪೂಜಾರಿ ಮಾತನಾಡಿ ಇದೊಂದು ತುಳು ಕನ್ನಡ ಸಂಸ್ಕೃತಿಗಳ ಸಂಗಮವಾಗಿದೆ. ಮುಂಬಯಿಯಲ್ಲಿ ಕನ್ನಡದ ತೇರÀನ್ನು ಎಳೆದವರು ಬಹುಮುಖ್ಯರು ತುಳುವರೇ ಆಗಿದ್ದು ತುಳು ಕನ್ನಡಕ್ಕಿಂತ ಪುರಾತನ ಭಾಷೆಯಾಗಿದೆ. ಸತ್ತ ಮೇಲೂ ಶಾಂತಿ ಕರುಣಿಸುವ ಶಕ್ತಿ ತುಳು ಸಂಸ್ಕೃತಿಯಲ್ಲಿದೆ ಎಂದರು.

ಕನ್ನಡದ ಮಾತೃ ಸಂಸ್ಕೃತಿ ಜೊತೆಗೆ ತಾಯಿನುಡಿ ನಮಗೆಪ್ರಿಯವಾಗಬೇಕು ಜೊತೆಗೆ ಎಲ್ಲರನ್ನೂ ಒಗ್ಗೂಡಿಸುವಲ್ಲಿ ನಮ್ಮ ಹಿರಿಯರು ಕಟ್ಟಿಬೆಳೆಸಿದ ಸಂಸ್ಥೆಯು ಸದ್ಯ ಸ್ವರ್ಣಮಹೋತ್ಸವದ ತುತ್ತ ತುದಿಯಲ್ಲಿದೆ. ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಈ ಸಂಸ್ಥೆಯನ್ನು ಮುನ್ನಡೆಸುತ್ತಿದೆ. ಈ ಸೊಸೈಟಿಯು ಮುಂದೆಯೂ ಕನ್ನಡದ ಮುನ್ನಡಿಗೆ ಸಾಕ್ಷಿ ಆಗಿಸಲಿದ್ದೇವೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ನವೀನ್ ಇನ್ನಬಾಳಿಕೆ ತಿಳಿಸಿದರು.

ಕನ್ನಡ ವೆಲ್ಫೇರ್‍ನ ಉಪಾಧ್ಯಕ್ಷ ಜಯರಾಜ್ ಜೈನ್, ಕೋಶಾಧಿಕಾರಿ ಹರೀಶ್ ಎಂ.ಶೆಟ್ಟಿ, ಜೊತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಜೊತೆ ಕೋಶಾಧಿಕಾರಿ ಪೀಟರ್ ರೋಡ್ರಿಗಸ್, ಮಹಿಳಾ ವಿಭಾಗಧ್ಯಕ್ಷೆ ಶಾಂತÀ ಎನ್.ಶೆಟ್ಟಿ, ಮತ್ತಿತರ ಪದಾಧಿಕಾರಿಗಳು ಅತಿಥಿüUಳನ್ನು ಗೌರವಿಸಿದರು. ಕಾರ್ಯದರ್ಶಿ ಸುಧಾಕರ ಎಲ್ಲೂರು ಸ್ವಾಗತಿಸಿದರು. ವೀಣಾ ಎಂ.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಬಂಟರವಾಣಿ ಸಂಪಾದಕ ಅಶೋಕ್ ಪಕ್ಕಳ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi