Brief Mumbai, Mangalore News with pictures


Rons Bantwal
Kemmannu News Network, 02-11-2018 10:04:52


Write Comment     |     E-Mail To a Friend     |     Facebook     |     Twitter     |     Print




ನ.04: ಅಂಧೇರಿಪೂರ್ವದ ಹೋಲಿ ಫ್ಯಾಮಿಲಿ ಹೈಸ್ಕೂಲು ಚಕಾಲ ಮೈದಾನದಲ್ಲಿ
ಗಾಣಿಗ ಸಮಾಜ ಮುಂಬಯಿ ಇದರ ವಾರ್ಷಿಕ-2018ರ ಕ್ರೀಡಾಕೂಟ

ಮುಂಬಯಿ, ಅ.29: ಮಹಾನಗರದಲ್ಲಿನ ಸಮುದಾಯದ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ಗಾಣಿಗ ಸಮಾಜ ಮುಂಬಯಿ ಇದರ ವಾರ್ಷಿಕ-2018ರ ಕ್ರೀಡಾಕೂಟವು ಇದೇ ನ.03ನೇ ಆದಿತ್ಯವಾರ ಅಂಧೇರಿ ಪೂರ್ವದ ಚಕಾಲ ಇಲ್ಲಿನ ಹೋಲಿ ಫ್ಯಾಮಿಲಿ ಹೈಸ್ಕೂಲು ಮೈದಾನದಲ್ಲಿ ಬೆಳಿಗ್ಗೆ 8:00 ಗಂಟೆಯಿಂದ ಸಂಜೆ ತನಕ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ತಿಳಿಸಿದ್ದಾರೆ.

ಸಮುದಾಯದ ಒಗ್ಗೂಡುವಿಕೆ ಮತ್ತು ಸಾಂಘಿಕತೆ ಉದ್ದೇಶವನ್ನಾಗಿಸಿ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿದ್ದು, ಅಂದು ಬೆಳಿಗ್ಗೆ ಮಾಜಿ ರಣಜಿ ಕ್ರಿಕೇಟ್ ಆಟಗಾರ, ಫಿಟ್‍ನೆಸ್ ತರಬೇತುದಾರ ದಿವೇ ರಾಣ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಕ್ರೀಡಾ ಸ್ಪರ್ಧೆಯಲ್ಲಿ ಮಕ್ಕಳಿಗಾಗಿ ವಿನೋದಾಟಗಳು, ಚಿತ್ರ ಹಾಗೂ ಬಣ್ಣಗಾರಿಕಾ ಸ್ಪರ್ಧೆ, ಓಟ ಸ್ಪರ್ಧೆ, ಲೆಮನ್ ಎಂಡ್ ಸ್ಪೂನ್, ಮ್ಯೂಸಿಕಲ್ ಚೇಯರ್ ಮತ್ತಿತರ ಸ್ಪರ್ಧೆಗಳು, ಮಹಿಳೆಯರು ಮತ್ತು ಪುರುಷÀರಿಗೆ ವಾಲಿಬಾಲ್, ಫುಟ್‍ಬಾಲ್, ತ್ರೋಬಾಲ್, ಕ್ರಿಕೇಟ್ ಪಂದ್ಯಾಟ, ಶಾಟ್‍ಫುಟ್, ಲಾಂಗ್‍ಜಂಪ್, ಹಗ್ಗಜಗ್ಗಾಟ, ಕೇರಂ, ಮ್ಯೂಸಿಕಲ್ ಚೇಯರ್ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಆ ನಿಮಿತ್ತ ಮಹಾನಗರ ಮುಂಬಯಿಯಲ್ಲಿನ ಸಮಸ್ತ ಗಾಣಿಗ ಸಮಾಜದ ಎಲ್ಲಾ ಬಂಧುಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುವಂತೆ ಗೌರವಾಧ್ಯಕ್ಷ ಜಗನ್ನಾಥ ಎಂ.ಗಾಣಿಗ ಮತ್ತು ಜೊತೆ ಕಾರ್ಯದರ್ಶಿ ಬಿ.ಜಗದೀಶ್ ಗಾಣಿಗ ತಿಳಿಸಿದ್ದಾರೆ.

ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಸಕ್ತ ಎಲ್ಲಾ ಗಾಣಿಗ ಬಂಧುಗಳು ತಮ್ಮ ಹೆಸರುಗಳನ್ನು ಮುಂಚಿತವಾಗಿ ಸಂಘದ ಪದಾಧಿಕಾರಿಗಳಲ್ಲಿ ನೋಂದಾಯಿಸುವಂತೆ ಸಂಘದ ಗಣೇಶ್ ಆರ್.ಕುತ್ಪಾಡಿ (9892142223), ಭಾಸ್ಕರ್ ಎಂ.ಗಾಣಿಗ (9869799035), ಬಿ.ವಿ ರಾವ್ (9820328894), ಜಗದೀಶ್ ಗಾಣಿಗ (9892026650), 4ಉ ಗೋಪಾಲ ಗಾಣಿಗ (9321173131) ಸಂಪರ್ಕಿಸುವಂತೆ ಕೋರಲಾಗಿದೆ.

ಮುಂಬಯಿ ಮಹಾನಗರ, ಉಪನಗರದಲ್ಲಿನ ಸಮಸ್ತ ಗಾಣಿಗ ಬಾಂಧವರು ಸಕಾಲದಲ್ಲಿ ಕ್ರೀಡೋತ್ಸವದಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಗಳೊಂದಿಗೆ ಸಮಾಜದ ಏಕತೆಯನ್ನೂ ಪ್ರದರ್ಶಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘದ ಗೌ| ಪ್ರ| ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

Mumbai, Oct.29: Indian traditional lamps, Making of lamp for Diwali celebration. alsoIndian handmade Kandil Paper lamps in Mumbai.  

Mumbai Oct. 31 :- The newly appointed Consul General of Russian Federation in Mumbai Alexei V. Surovtsev accompanied by outgoing Consul General Andrei N. Zhiltsov called on the Governor of Maharashtra CH. Vidyasagar Rao at Raj Bhavan, Mumbai.
                   Speaking to the Governor, the new consul general Alexei Surovtsev said that direct air connectivity between Moscow and Mumbai and between St. Petersburg and Mumbai will open up new avenues of export for India including horticultural export.
                 He said that Russia and India enjoy excellent cooperation in the areas of defence, energy and other sectors. Observing that the trade volume between the two countries is relatively low, he said his country will give a fresh impetus to promoting trade between India and Russian Federation. In this connection, he informed the Governor that a large delegatioin of business leaders from Moscow and other cities will be visiting New Delhi and Mumbai later this year.
                Welcoming the Russian Consuls, the Governor said that Maharashtra has tremendous potential in the sectors of infrastructure development, tourism and horticulture export. He assured his support for cooperation in the areas of student exchange at the university level. Outgoing Consul General Andrei Zhiltsov thaked the Government of Maharashtra for the cooperation he received during his 3 year tenure.

Bollywood actress Mahima Chaudhry poses during Zaki Home Decor’s exclusive product launch,in Mumbai

ಸದಾನಂದ ಹೊಳ್ಳ ಬೀಳ್ಗೊಡುಗೆ - ‘ಆಕಾಶವಾಣಿಯ ಸಾರ್ಥಕ ಸೇವೆಯ ಧನ್ಯತೆ’

      ಮಂಗಳೂರು : ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯನಿರ್ವಹಣಾಧಿಕಾರಿ ಡಾ,ಸದಾನಂದ ಹೊಳ್ಳ ಅವರು ತಮ್ಮ 29 ವರ್ಷ 3 ತಿಂಗಳ ಸೇವೆಯಿಂದ ಅಕ್ಟೋಬರ್ 31ರಂದು ನಿವೃತ್ತಿ ಹೊಂದಿದ್ದು ಹೃದಯಸ್ಪರ್ಶಿ ಬೀಳ್ಗೊಡುಗೆ ನೀಡಲಾಯಿತು.

       ಆಕಾಶವಾಣಿ ಕೇಂದ್ರದದ ಮನೋರಂಜನಾ ಸಂಘದ ವತಿಯಿಂದ ಏರ್ಪಡಿಸಿದ ಬೀಳ್ಗೊಡುಗೆ ಸಮಾರಂಭದಲ್ಲಿ ಹೊಳ್ಳ ಅವರು ಭದ್ರಾವತಿ, ಮಡಿಕೇರಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಮಾಡಿದ ಅನುಪಮ ಸೇವೆಯನ್ನು ಶ್ಲಾಘಿಸಿ ಸೇವೆಯುದ್ದಕ್ಕೂ ಅರ್ಪಣಾ ಮನೋಭಾವದಿಂದ ದುಡಿದು ಸಂಸ್ಥೆಯ ಶ್ರೇಯಸ್ಸಿಗೆ ಸಾರ್ಥಕ ಸೇವೆ ಸಲ್ಲಿಸಿದರೆಂದು ಗುಣಗಾನ ಮಾಡಲಾಯಿತು. ಬಹ್ಮಾವರ ಸಕ್ಕರೆ ಕಾರ್ಖಾನೆ, ಕರ್ಣಾಟಕ ಬ್ಯಾಂಕ್ ಮುಂತಾದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಬಳಿಕ ಆಕಾಶವಾಣಿಗೆ ಕೃಷಿ ಅಧಿಕಾರಿಯಾಗಿ ಸೇರಿ ರೈತಾಪಿ ವರ್ಗದ ಜಾಗೃತಿ ಕಾರ್ಯಕ್ರಮ, ರೂಪಕ, ನಾಟಕ ರಚನೆಯ ಕೆಲಸದಲ್ಲಿ ಹೆಸರು ಪಡೆದಿದ್ದರು. ಸ್ವತಃ ಬಡಗುತಿಟ್ಟು ಯಕ್ಷಗಾನ ಕಲಾವಿದರಾಗಿ ಭದ್ರಾವತಿಯಲ್ಲಿ ಮಕ್ಕಳ ಯಕ್ಷಗಾನ ಸಂಸ್ಥೆ ಕಟ್ಟಿದ್ದರು. ಸಂಘಟನೆ ಮತ್ತು ಸಾಮಾಜಿಕ, ಸೇವಾ ಕಾರ್ಯದಲ್ಲೂ ತೊಡಗಿ ಜನಾನುರಾಗಿಯಾದ ಇವರು ಮಂಗಳೂರು ಕೇಂದ್ರದಲ್ಲಿ 6 ವರ್ಷಗಳ ಕಾಲ ಕಾರ್ಯಕ್ರಮ ವಿಭಾಗದ ಉಸ್ತುವಾರಿ ಸಂಯೋಜಕರಾಗಿ ನೇರಪ್ರಸಾರ, ವಿಐಪಿ ಕಾರ್ಯಕ್ರಮ ಪ್ರಸಾರ ಹೀಗೆ ಹಲವು ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿ ಹೆಸರು ಪಡೆದಿದ್ದರು.

      ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಸಿಬ್ಬಂದಿ ಸಂಘ (ಪಿಎಸ್‍ಎ), ಆಕಾಶವಾಣಿ ಪತ್ತಿನ ಸಹಕಾರ ಸಂಘದಿಂದ ಗೌರವದ ಸನ್ಮಾನ ನೀಡಲಾಯಿತು. ಮನೋರಂಜನಾ ಸಂಘದ ಅಧ್ಯಕ್ಷರಾದ ಜಿ.ರಮೇಶ್ಚಂದ್ರನ್, ಕಾರ್ಯಕ್ರಮ  ಮುಖ್ಯಸ್ಥರಾದ ಉಷಾಲತಾ ಸರಪಾಡಿ, ಕಾರ್ಯದರ್ಶಿ ಡಾ.ಸದಾನಂದ ಪೆರ್ಲ, ಲೆಕ್ಕಾಧಿಕಾರಿ ದಮಯಂತಿ, ಕೋಶಾಧಿಕಾರಿ ಕುಸುಮಾವತಿ ಮನೋಹರ್, ಜತೆಕಾರ್ಯದರ್ಶಿ ಸೂರ್ಯನಾರಾಯಣ ಭಟ್ ಸ್ಮರಣಿಕೆ, ಶಾಲು ಹಾಗೂ ಹಣ್ಣು ಹಂಪಲು ನೀಡಿ ಗೌರವಿಸಿದರು.

       ತಿರುಚ್ಚಿ ಆರ್ ಕುಮಾರ್, ಡಾ.ಶರಭೇಂದ್ರಸ್ವಾಮಿ, ಕನ್ಸೆಪ್ಟಾ ಫೆರ್ನಾಂಡಿಸ್, ಜೇಮ್ಸ್ ಫೆರ್ನಾಂಡಿಸ್ ಶುಭ ಹಾರೈಸಿದರು. ಬದುಕು ಮತ್ತು ಅನುಭವ ನೀಡಿದ ಆಕಾಶವಾಣಿ ಮಾಧ್ಯಮದ ಸೇವೆ ವ್ಯಕ್ತಿತ್ವಕ್ಕೆ ಗೌರವ ತಂದುಕೊಟ್ಟಿದ್ದು ಸಾರ್ಥಕತೆ ಮತ್ತು ಧನ್ಯತೆ ಇದೆ ಎಂದು ಸದಾನಂದ ಹೊಳ್ಳ ಅಭಿಪ್ರಾಯಪಟ್ಟರು.

ಬಿಲ್ಲವರ ಎಸೋಸಿಯೇಶನ್ ಮುಂಬಯಿ ವತಿಯಿಂದ ಹುಟ್ಟೂರಿನ ಸಮಾಜದ ವಿದ್ಯಾಥಿರ್sಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಕ್ಷಯ ಮಾಸಿಕ ಪತ್ರಿಕೆಯ ಹುಟ್ಟು ಹಬ್ಬ ಕಾರ್ಯಕ್ರಮ

ಮುಂಬಯಿ, ನ.31: ಮುಂಬಯಿಯ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯಾದ ಬಿಲ್ಲವರ ಎಸೋಸಿಯೇಶನ್ ಮುಂಬಯಿ, ಇದರ ವತಿಯಿಂದ ಹುಟ್ಟೂರಿನಲ್ಲಿ  ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಕ್ಷಯ ಮಾಸಿಕದ ಹುಟ್ಟು ಹಬ್ಬ ಕಾರ್ಯಕ್ರಮವು ಇದೇ ಕಳೆದ ತಾರೀಕು 17.10.2018ರಂದು ಮುಲ್ಕಿಯ ಬಿಲ್ಲವರ ಮಹಾಮಂಡಲದ ಸಭಾಗೃಹದಲ್ಲಿ ಜರಗಿತು.

ಈ ಕಾರ್ಯಕ್ರಮಕ್ಕೆ ಡಾ| ನಾಗರಾಜ್ ಎಸ್. (ಎಸೋಸಿಯೇಟ್ ಡೀನ್ ಫಾರ್ ಪಿ. ಜಿ. ಸ್ಟಡೀಸ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಹಾಸ್ಪಿಟಲ್ ಉದ್ಯಾವರ), ಡಾ| ಸೀತಾಲಕ್ಷ್ಮಿ ಕರ್ಕಿಕೋಡಿ (ಸಾಹಿತಿ, ಪತ್ರಕರ್ತೆ),  ಹಾಗೂ ಶ್ರೀ ಎನ್. ಎಂ. ಸನಿಲ್ ( ಮಾಜಿ ಗೌ. ಪ್ರ. ಕೋಶಾಧಿಕಾರಿ ಬಿಲ್ಲವರ ಎಸೋಸಿಯೇಶನ್, ಮುಂಬಯಿ ಮತ್ತು ಮಾಜಿ ನಿರ್ದೇಶಕರು ಭಾರತ್ ಕೊ. ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿ.) ಇವರು ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮವನ್ನು ಗಣ್ಯರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.


ವೇದಿಕೆಯಲ್ಲಿ  ಎಸೋಸಿಯೇಶನಿನ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಎಸ್. ಪೂಜಾರಿ, ಜನ ನಾಯಕ ಹಾಗೂ ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ ಜಯ ಸಿ. ಸುವರ್ಣ, ಅತಿಥಿ ಗಣ್ಯರು, ಉಪಾಧ್ಯಕ್ಷರಾದ ಶ್ರೀನಿವಾಸ್ ಆರ್. ಕರ್ಕೇರ, ಎಸೋಸಿಯೇಶನಿನ ಮಾಜಿ ಅಧ್ಯಕ್ಷರಾದ ಶ್ರೀ ಎಲ್. ವಿ. ಅಮೀನ್ , ಅಕ್ಷಯ ಮಾಸ ಪತ್ರಿಕೆಯ ಸಂಪಾದಕ ಶ್ರೀ ಈಶ್ವರ್ ಅಲೆವೂರು, ವಿದ್ಯಾ ಉಪಸಮಿತಿಯ ಕಾರ್ಯಾಧ್ಯಕ್ಷ ಶ್ರೀ ವಿಶ್ವನಾಥ್ ತೋನ್ಸೆ, ಯುವಾಭ್ಯುದಯ ಉಪ ಸಮಿತಿಯ  ಕಾರ್ಯಾಧ್ಯಕ್ಷ ಶ್ರೀ ನಾಗೇಶ್ ಕೋಟ್ಯಾನ್, ಅಕ್ಷಯ ಸಮಿತಿಯ ಸದಸ್ಯರುಗಳಾದ ಶ್ರೀ ಧರ್ಮೇಶ್ ಸಾಲ್ಯಾನ್, ಶ್ರೀ ಹರೀಶ್ ಜಿ. ಪೂಜಾರಿ ಕೊಕ್ಕರ್ಣೆ,  ಎಸೋಸಿಯೇಶನ್‍ನ ಕಾರ್ಯಕಾರಿ ಸಮಿತಿಯ ಸದಸ್ಯ ಹಾಗೂ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಉಪಾಧ್ಯಕ್ಷ ಶ್ರೀ ರಾಜ್‍ಶೇಖರ್ ಕೋಟ್ಯಾನ್, ಮುಲ್ಕಿ ಬಿಲ್ಲವ  ಸಂಘದ ಅಧ್ಯಕ್ಷರು, ಗುರು ನಾರಾಯಣ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರು, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರು, ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಉಡುಪಿ, ಮಂಗಳೂರು ಪರಿಸರದ 260 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 25 ಉಚ್ಛ ಶಿಕ್ಷಣ ಪಡೆಯುವ ಬಡ ಮಕ್ಕಳಿಗೆ ಆರ್ಥಿಕ ನೆರವನ್ನು ನೀಡಲಾಯಿತು.

ಡಾ| ಸೀತಾಲಕ್ಷ್ಮಿಯವರು ಅಕ್ಷಯ ಮಾಸ ಪತ್ರಿಕೆಯ ಹುಟ್ಟು ಹಬ್ಬದ ವಿಶೇಷ ಅಕ್ಟೋಬರ್ ತಿಂಗಳ ಸಂಚಿಕೆಯನ್ನು ಉದ್ಘಾಟಿಸಿ ಅಕ್ಷಯದಲ್ಲಿ ಪ್ರಕಟಗೊಳ್ಳುತ್ತಿರುವ ಮೌಲ್ಯಾಧಾರಿತ ಲೇಖನಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಡಾ| ನಾಗರಾಜ್ ಎಸ್. ಇವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪಾಲಿಸಬೇಕಾದ ವಿಚಾರಗಳು ಹಾಗೂ ಜೀವನವನ್ನು ಸಫಲಗೊಳಿಸಲು ಸೂಕ್ತ ವಿಷಯಗಳ ಮಾಹಿತಿಗಳನ್ನಿತ್ತರು. ಶ್ರೀ ಎನ್. ಎಂ. ಸನಿಲ್ ಮತ್ತು ಶ್ರೀ ಎಲ್. ವಿ. ಅಮೀನ್ ವಿದ್ಯಾರ್ಥಿಗಳಿಗೆ ಸಂಧರ್ಬೋಚಿತವಾಗಿ ಸಲಹೆ ನೀಡಿದರು.
 
ಎಸೋಸಿಯೇಶನಿನ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಎಸ್. ಪೂಜಾರಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಮಾಜದ ಯುವ ಪೀಳಿಗೆಯು ವಿದ್ಯಾರ್ಜನೆಯಲ್ಲಿ ಉತ್ಕøಷ್ಠತೆಯನ್ನು ಸಾಧಿಸಿ ಕೀರ್ತಿಯನ್ನು ತಂದಿದ್ದಾರೆ. ಇದು ಹೆಮ್ಮೆಯ ವಿಷಯ.  ಪ್ರಗತಿಯ ಪಥವು ಹೀಗೆ ಸಾಗುತ್ತಿರಲಿ ಎಂದು ಹಾರೈಸಿದರು.

ಮುಂಬೈ ಕನ್ನಡ ಲೇಖಕಿಯರ ಬಳಗ ಸೃಜನಾ ಗೆಳತಿಯರಿಗೆ ಇದೊಂದು ಸಂತೋಷಕೂಟ. ಬೆಂಗಳೂರಿಂದ ಲೇಖಕಿ, ಅಂಕಣಕಾರ್ತಿ, ವರ್ಲ್ಡ್ ಸಿನೆಮಾದ ಅತ್ಯುತ್ತಮ ವಿಮರ್ಶಕಿ ಸಂಧ್ಯಾರಾಣಿ  ಇತ್ತ ಭೇಟಿ , ಸಂವಾದಕ್ಕೂ ಎಡೆಯಿತ್ತ  ಸದವಕಾಶ.

ಮೈಸೂರ್ ಅಸೋಸಿಯೇಶನ್ ಅಂಗಣದಲ್ಲಿ ಪ್ರತ್ಯಕ್ಷರಾದ ಸಂಧ್ಯಾರಾಣಿಗೆ ಜೊತೆ ನೀಡಿದವರು ರಂಗಕರ್ಮಿ, ಅವಿನಾಶ್ ಕಾಮತ್.
ತೆಲುಗು, ತಮಿಳು, ಉರ್ದೂ, ಹಿಂದೀ, ಕನ್ನಡ, ಇಂಗ್ಲಿಷ್ ಹೀಗೆ ಬಹುಭಾಷಾ ಪರಿಣತರಾದ ಸಂಧ್ಯಾರ ಬರಹದ ಆಯ್ದ ಮುತ್ತುಗಳನ್ನು ಆವರ ಅಂಕಣ ಬರಹಗಳ ಸಂಕಲನ, " ಯಾಕೆ ಕಾಡುತಿದೆ  ಸುಮ್ಮನೆ ನನ್ನನು " ಕೃತಿಯಿಂದ ಸಂಧ್ಯಾರ ವಾಚನದಲ್ಲೇ ಕೇಳುವ ಅವಕಾಶ! ಅವರ ಬಾಲ್ಯ, ಸಾಹಿತ್ಯ ಲೋಕದ ಪ್ರವೇಶ, ಅವಧಿ ಅಂತರ್ಜಾಲ ಪತ್ರಿಕೆಯ ಉಪಸಂಪಾದಕಿಯಾಗಿ ಅವರ ಅನುಭವ, ಮಾಮಿ ಫೆಸ್ಟಿವಲ್ ನಲ್ಲಿ ಪ್ರದರ್ಶಿತವಾದ ಅವರ ಕಥೆ, ಸಂಭಾಷಣೆಯುಳ್ಳ "ನಾತಿಚರಾಮಿ" ಚಲಚಿತ್ರದ ಬಗ್ಗೆ ಅವರ ಮಾತುಗಳು ಎಲ್ಲವೂ ಸೃಜನಾ ಪಾಲಿಗೆ ಒದಗಿ ಬಂದ ಅಪೂರ್ವ ಅವಕಾಶ.

ಆರಂಭದಲ್ಲಿ ಸಂಧ್ಯಾರ ಕೋರಿಕೆಯಂತೆ ಸೃಜನಾ ಸದಸ್ಯೆ ಹಾಗೂ ಕೋಶಾಧಿಕಾರಿ ದಾಕ್ಷಾಯಿಣಿ ಎಡಹಳ್ಳಿ ಜಾನಪದ ಗೀತೆಯೊಂದನ್ನು ಹಾಡಿದರು.. ಶ್ಯಾಮಲಾ ಮಾಧವ, ಸಂಧ್ಯಾರ ಕಿರು ಪರಿಚಯಗೈದರು. ಸೃಜನಾ ಸಂಚಾಲಕಿ ಮೀನಾ ಕಾಳಾವರ , ಸೃಜನಾ ಸಂಸ್ಥಾಪಕಿ ಡಾ.ಸುನೀತಾ ಶೆಟ್ಟಿ, .ಪುಷ್ಪ ಹಾಗೂ ಪುಸ್ತಕ ಗೌರವದಿಂದ ಸಮ್ಮಾನಿಸಿದರು. ಕಾರ್ಯದರ್ಶಿ ಶಾರದಾ ಅಂಬೇಸಂಗೆ ಧನ್ಯವಾದ ಸಲಿಸಿದರು

ಉಪಾಹಾರದ ಪ್ರಾಯೋಜಕತ್ವವನ್ನು ಅಪರೂಪದ ಬಂಧುವಾಗಿ ಬಂದ ಗೆಳೆಯ, ರಂಗಕರ್ಮಿ ಅವಿನಾಶ್ ಕಾಮತ್ ವಹಿಸಿಕೊಂಡರು.
ಸಶಕ್ತ ಮಹಿಳಾ ದನಿಯಾದ ಸಂಧ್ಯಾರಾಣಿಯ ಕಥೆ, ಸಂಭಾಷಣೆಯ ಸಿನೆಮಾ, "ನಾತಿಚರಾಮಿ", ಫೀಮೇಲ್ ಸೆಕ್ಷುಆಲಿಟಿ ಬಗೆಗಿನ ವಿಶಿಷ್ಟ ಕಥಾನಕವನ್ನು ಹೊಂದಿದ್ದು, ಮನ್ಸೋರೆ ನಿರ್ದೇಶನ ಹಾಗೂ ಶ್ರುತಿ ಹರಿಹರನ್ ಹಾಗೂ ಸಂಚಾರಿ ವಿಜಯ್ ಅಭಿನಯದ ಚಿತ್ರವನ್ನು ಸಂಧ್ಯಾರೊಡನೇ ಮರುದಿನ  ಅಂಧೇರಿಯ ಸಿಟಿಮಾಲ್ ಮಲ್ಟಿಪ್ಲೆಕ್ಸ್ ನಲ್ಲಿ ನೋಡುವ ಕುತೂಹಲದೊಂದಿಗೆ ಸೃಜನಾ, ಸಂಧ್ಯಾರಾಣಿ ಅವರನ್ನು ಬೇಳ್ಕೊಟ್ಟಿತು.

ಶ್ಲಾಘನಾರ್ಹ ನಿರ್ದೇಶನ, ಕಥೆ, ಸಂಭಾಷಣೆ, , ದೃಶ್ಯ ಚಿತ್ರಣ, ನಟನಾ ಕೌಶಲದ "ನಾತಿಚರಾಮಿ" ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿ ಉಳಿಯಿತು.


ಮುಂಬಯಿ ವಿದ್ಯಾನಗರಿಯಲ್ಲಿ ಎಸ್.ಕೆ ಹಳೆಯಂಗಡಿ ಅವರ `ಓ ಮನಸೇ ತಲ್ಲಣಿಸದಿರು’ ಕೃತಿ ಬಿಡುಗಡೆ
ಎಸ್ಕೆ ಗುಜರಾತ್‍ನ ತುಳುಕನ್ನಡಿಗರ ರಾಯಭಾರಿ ಇದ್ದಂತೆ  : ದಯಾನಂದ   ಬೋಂಟ್ರಾ
(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಅ.27: ಗುಜರಾತ್‍ನಲ್ಲಿ ಹಿರಿಯ ಸಾಹಿತಿ ಎಸ್ಕೆ ಹಳೆಯಂಗಡಿ ಅಂದರೆ ತುಳುಕನ್ನಡಿಗರ ಭೀಷ್ಮಪಿತಾ ಮಹಾ ಪ್ರಸಿದ್ಧರು. ಯಾವುದೇ ತುಳು-ಕನ್ನಡ ಕಾರ್ಯಕ್ರಮಕ್ಕೆ ಅವರ ಸಂಚಲನೆಯೇ ಪ್ರಧಾನವಾದುದು. ಎಲ್ಲರಿಗೂ ಪ್ರೇರಕರಾದ ಅವರು ಓರ್ವ ಜಾತ್ಯಾತೀತ ಹಿರಿಯ ಚೇತನರಾಗಿದ್ದಾರೆ. ಆದುದರಿಂದ ಗುಜರಾತ್‍ನಲ್ಲಿ ಎಸ್ಕೆ ತುಳುಕನ್ನಡಿಗರ ರಾಯಭಾರಿ ಎಂದೇ ಜನಜನಿತರಾಗಿದ್ದಾರೆ. ಅವರ ಸಾಹಿತಿಕ ಕೆಲಸಗಳು ಇನ್ನೂ ಸ್ಪೂರ್ತಿದಾಯಕ ವಾಗಿ ಮುನ್ನಡೆಯಲಿ ಎಂದು ಬರೋಡದಲ್ಲಿನ ಹಿರಿಯ ಉದ್ಯಮಿ, ಗುಜರಾತ್ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ನುಡಿದರು. 


ಮುಂಬಯಿ ವಿವಿ ಕನ್ನಡ ವಿಭಾಗವು ನಾಡೋಜ ಪೆÇ್ರ| ಬರಗೂರು ರಾಮಚಂದ್ರಪ್ಪ ಪ್ರತಿಷ್ಠಾನ ಬೆಂಗಳೂರು ಇದರ ಸಹಯೋಗದೊಂದಿಗೆ ಇಂದಿಲ್ಲಿ ಶನಿವಾರ ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿಯ ಜೆ.ಪಿ ನಾಯಕ್ ಭವನದಲ್ಲಿ ಆಯೋಜಿಸಿದ್ದ ಅಭಿಜಿತ್ ಪ್ರಕಾಶನ್ ಮುಂಬಯಿ ಪ್ರಕಾಶಿತ, ಬರೋಡಾ ಅಲ್ಲಿನ ಹಿರಿಯ ಸಾಹಿತಿ ಎಸ್ಕೆ ಹಳೆಯಂಗಡಿ ಅವರ `ಓ ಮನಸೇ ತಲ್ಲಣಿಸದಿರು’ ಕೃತಿ ಬಿಡುಗಡೆ ಗೊಳಿಸಿ ಬೋಂಟ್ರಾ ಮಾತನಾಡಿದರು. 

ಪ್ರಸಿದ್ಧ ಸಿನಿಮಾ ನಿರ್ದೇಶಕ, ಪ್ರಸಿದ್ಧ ಸಾಹಿತಿ ನಾಡೋಜ ಪೆÇ್ರ| ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಉದ್ಘಾಟಿಸಿದರು. ಅತಿಥಿü ಅಭ್ಯಾಗತರುಗಳಾಗಿ ಬೆಂಗಳೂರುನ ಪ್ರಾಧ್ಯಾಪಕ ಡಾ| ಮನೋನ್ಮನಿ ಉದಯ, ಕರ್ನಾಟಕ ಸಂಘ ಮುಂಬಯಿ ಕಾರ್ಯದರ್ಶಿ ಡಾ| ಭರತ್‍ಕುಮಾರ್ ಪೆÇಲಿಪು, ತುಮಕೂರು ಸಿದ್ದಗಂಗಾ ವಿದ್ಯಾಲಯದ ಪ್ರಾಚಾರ್ಯ ನಿರಂಜನ್ ಸಿ.ಎಸ್, ಕವಿ-ಲೇಖಕ ಗೋಪಾಲ ತ್ರಾಸಿ ಉಪಸ್ಥಿತರಿದ್ದರು.

ತಾಯ್ನಾಡಿನಿಂದ ಬಹಳ ದೂರದ ಗುಜರಾತ್‍ನಲ್ಲಿದ್ದರೂ ಮಾತೃ ಭಾಷೆ, ಸಾಹಿತ್ಯವನ್ನು ಒಪ್ಪಿ ಅಪ್ಪಿಕೊಂಡು ಮುನ್ನಡೆದಿದ್ದೇವೆ. ನಾವು ಗುಜರಾತ್‍ನಲ್ಲಿದ್ದರೂ ಮುಂಬಯಿ ಕನ್ನಡಿಗರೇ ನಮ್ಮ ಬಂಧುಗಳು ಮತ್ತು ಪೆÇ್ರೀತ್ಸಕರು. ಇವರನ್ನೇ ನಾವು ಹೊಂದಿದ್ದೇವೆ. ಡಾ| ಜಿ.ಎನ್ ಉಪಾಧ್ಯರ ಪ್ರೇರಣೆ ಮತ್ತು ಡಾ| ಅಲೆವೂರು ಅವರ ಸಹಯೋಗದಿ ಂದ ಕೃತಿಗಳು ಪ್ರಕಾಶಮಾನವಾಗಲು ಸಾಧ್ಯವಾಯಿತು ಎಂದು ಕೃತಿಕಾರ ಎಸ್ಕೆ ಹಳೆಯಂಗಡಿ ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ| ಗೀತಾ ವಸಂತ ಅವರು `ಕನ್ನಡ ಪ್ರಜ್ಞೆ ನಿನ್ನೆ ಇಂದು ನಾಳೆ’ ವಿಚಾರವಾಗಿ ಉಪನ್ಯಾಸವನ್ನಿತ್ತು ಪ್ರಜ್ಞೆ ಎನ್ನುವುದು ನದಿಯಂತೆ  ನಿರಂತರವಾದುದು. ಕನ್ನಡ ಪ್ರಜ್ಞೆ ಎಂದರೆ ಸಾಂಘಿಕವಾದ ಬುದ್ಧಿಪೂರ್ವತೆವುಳ್ಳದ್ದು. ಎಲ್ಲವನ್ನೂ ಸ್ವೀಕರಿಸುವ ಗುಣ ಕನ್ನಡಕ್ಕಿದೆ. ಧರ್ಮ ಮತ್ತು ಪ್ರಭುತ್ವದ ನೆಲೆಯಲ್ಲೂ ಕನ್ನಡ ಪ್ರಜ್ಞೆಯನ್ನು ನಾವು ಕಾಣ ಬಹುದು. ರೂಪದ ದೃಷ್ಠಿಯಿಂದ ಮಾತ್ರವಲ್ಲ ಗುಣದ ದೃಷ್ಠಿಯಿಂದಲೂ ಕನ್ನಡ ಬಹಳ ಎತ್ತರದ ಸ್ಥಾನವನ್ನು ಅಲಂಕರಿಸಿದೆ. ಸ್ಥಗಿತವಾದ ಚೌಕಟ್ಟನ್ನು ಮೀರಿದಾಗ ಅರಿವಿನ ಮರ್ಮವನ್ನು ತಲುಪಲು ಸಾಧ್ಯ. ಕನ್ನಡ ಪ್ರಜ್ಞೆಯನ್ನು ಕಟ್ಟುವ ವೈಭವೀಕರಿಸುವ ಕಾಲವೂ ಒಂದಿತ್ತು. ಕನ್ನಡ ಅಂದರೆ ಅದು ಭಾವನಾತ್ಮಕವಾದಂತಹ ಭಾಷಾ ಬೆಳವಣಿಗೆ ಮಾತ್ರವಲ್ಲ. ಸಾಮೂಹಿಕ ಮನೋಭಾವವನ್ನು ಬೆಳಿಸಿಕೊಂಡಾಗ ಸಾಮೂಹಿಕ ಪ್ರಜ್ಞೆ ಮೂಡುತ್ತದೆ ಎಂದರು.

ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ್ ಅಲೆವೂರು ಕೃತಿಪರಿಚಯಿಸಿ ಮನಸ್ಸಿನ ಕುರಿತು ಇಡೀ ಕೃತಿ ಮಾತನಾಡುತ್ತ ಧ್ವನಿ ಆಗಿ ಮೂಡಿದೆ. ನಾನು ಎನ್ನುವ ಅಹಂ ಕೆಟ್ಟವಾಗಿಸಿ ಮನಸ್ಸು ಅನ್ನುವುದೇ ಮಹತ್ವದು ಎಂದು ಸಾರಿದೆ. ಪರಮಾತ್ಮನಲ್ಲಿ ಮನಸ್ಸನ್ನು ಅರ್ಪಿಸುತ್ತಾ ಆತ್ಮವಿಶ್ವಾಸವಾಗಿ ಮನಸ್ಸನ್ನು ಬೆಳೆಸಬೇಕು ಎಂದು ಈಕೃತಿ ಸಾರುತ್ತಿದೆ ಎಂದರು.

ಪುಸ್ತಕಕ್ಕೆ ಎಂದಿಗೂ ಸಾವು ಎನ್ನುವುದೇ ಇಲ್ಲ. ಡಿಜಿಟಲ್ ಯುಗದಲ್ಲಿ ಎಷ್ಟೋ ಆಧುನಿಕತೆವುಳ್ಳ ಮಾಧ್ಯಮಗಳು ರಾರಾಜಿಸಿದರೂ ಅವು ಬರೇ ಆರಂಭಿಕ ಹಿನ್ನಡೆಯಷ್ಟೇ. ಇಂತಹ ತಂತ್ರಜ್ಞಾನಗಳು ಬರೇ ಬಳಕೆಗಷ್ಟೇ ಮೀಸಲು.  ಆದರೇ ಕೃತಿ, ಪುಸ್ತಕಗಳು ಮೂಲಧಾರಿತ ಶಕ್ತಿಯುಳ್ಳವು. ಅದರಲ್ಲೂ ಕನ್ನಡದ ಒಟ್ಟು ಸಂಸ್ಕೃತಿಗೆ ದೀರ್ಘಕಾಲದ ಇತಿಹಾಸವಿದೆ. ಆದರೆ ತಂತ್ರಜ್ಞಾನ ಮಾಧ್ಯಮಗಳ ಬಳಕೆಯ ವಿವೇಕ ಅಗತ್ಯವಾಗಿದೆ.ಕನ್ನಡ ಎನ್ನುವುದು ಭಾಷೆಯೂ ಹೌದು ಬಹುಭಾಷಿಕವೂ ಮತ್ತು ಜೀವನವೂ ಹೌದು. ನಮ್ಮ ರಾಷ್ಟ್ರದಲ್ಲಿ ಸಾವಿರಾರು ಭಾಷೆಗಳಿದ್ದು ಅನೇಕವು ನಾಶವಾಗಿವೆ. ಆದರೆ ಕನ್ನಡ ಭಾಷೆಗೆ ಯಾವೊತ್ತೂ ಆ ಅಪಾಯವಿಲ್ಲ. ಶಿಕ್ಷಣ, ಆಡಳಿತದಲ್ಲಿ ಕನ್ನಡ ಇಲ್ಲದೇ ಹೋದಲ್ಲಿ ಕನ್ನಡಕ್ಕೆ ಆತಂಕವಿದೆ ಆದರೂ ಅಂತ್ಯವಂತೂ ಇಲ್ಲ. ಧರ್ಮ ಶಾಸ್ತ್ರವೂ ಆಗಬಾರದು ಶಸ್ತ್ರವೂ ಆಗಬಾರದು. ಅಪವ್ಯಾಖ್ಯಾನ ಮತ್ತು ವಿಭಜಿತ ಓದು ನಮ್ಮನ್ನು ಮತ್ತು ಕೃತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಪೆÇ್ರ| ರಾಮಚಂದ್ರಪ್ಪ ನುಡಿದರು.

ಯಾವುದೇ ಕ್ಷೇತ್ರದಲ್ಲೂ ಪ್ರಬುದ್ಧತೆಯೊಂದಿಗೆ ಮುನ್ನಡೆದಾಗ ಸಾಧನೆ ಸಿದ್ಧಿಸುವುದು. ನಾನು ಬಾಲ್ಯದಲ್ಲೇ ನಾಟಕ ಕ್ಷೇತ್ರ ಅರಿಸಿದೆ. ಆ ಮೂಲಕ ರಂಗಭೂಮಿಯನ್ನು ಮನ್ನಿಸಿ ಸುಮಾರು 367 ನಾಟಕಗಳಲ್ಲಿ ಅಭಿನಯಿಸಿದೆ. ಬರೆಯುವುದು ನನ್ನ ಕೆಲಸವಲ್ಲ ಅಂದಮೇಲೆ ಸಾಹಿತ್ಯ, ಬರವಣಿಗೆಯತ್ತ ಆಸಕ್ತಿ ತೋರಿಲ್ಲ. ಯಾವುದನ್ನೂ ಗುರುತಿಸುವ ಕಣ್ಣುಬೇಕು ಮತ್ತು ಆಯುವ ಮನಸ್ಸು ಅಗತ್ಯ. ಯಾವೊತ್ತೂ ರಂಗಭೂಮಿಯ ಪರದೆಹಿಂದೆ ಕಲಾವಿದನ ಮನಸ್ಸು ಅರಳುತ್ತದೆ  ಮುಂದುಗಡೆ ವ್ಯಕ್ತಿತ್ವ ಮರೆಯುತ್ತದೆ. ಅಂದು ಕಲೆಗಾಗಿ ಬದುಕು ಇತ್ತು ಆದರೆ ಇದು ಇಂದು ಬದುಕಿಗಾಗಿ ಕಲೆಯಾಗಿ ಮಾರ್ಪಟ್ಟಿದೆ. ಆ ಮಧ್ಯೆಯೂ ನನ್ನಂತಹ ಕಲಾವಿದನನ್ನು ಗುರುತಿಸಿದ್ದು ರಂಗಭೂಮಿ ಧನ್ಯವಾಯಿತು. ಈ ಗೌರವ ಡಾ| ಜಿ.ಎನ್ ಉಪಾಧ್ಯ ಅವರಿಗೆ ಅರ್ಪಿಸುತ್ತೇನೆ ಎಂದು ಮೋಹನ್ ಮಾರ್ನಾಡ್ ನುಡಿದರು.

ವಿಶ್ವ ವಿದ್ಯಾಲಯಗಳು ಸರ್ವಧರ್ಮದ ದೇವಾಲಯಗಳಿದ್ದಂತೆ. ಇಂತಹ ಪಾವಿತ್ರ್ಯತಾ ಪೀಠದಲ್ಲಿ ನನ್ನ ಗೌರವಾರ್ಪಣೆ ಇದು ನನ್ನ ಸೌಭಾಗ್ಯವೇ ಸರಿ. ಇದು ಯಕ್ಷಕಲಾ ಮಾತೆಗೆ ಮತ್ತು ಮಹಾನಗರದ ಸಮಗರ ಕಲಾಪೆÇೀಷಕರು ಮತ್ತು ಕಲಾಭಿಮಾನಿಗಳಿಗೆ ಸಂದ ಗೌರವ. ಬಾಲಯದಲ್ಲಿ ಅಂತಃಕರಣ ಪ್ರೇರಣೆಯಿಂದ ಕಲಿತ ಕಲಾರಾಧನೆಯಿಂದ ಇಂದು ಸಾವಿರಾರು ಆಸಕ್ತ ಕಲಾವಿದರಿಗೆ ಯಕ್ಷಗಾನ ಕಲಿಸಿ ಪೆÇೀಷಿಸಲು ಸಾಧ್ಯವಾಗಿದೆ. ಕಲೆಯನ್ನು ಆರಾಧಿಸಿದವರಿಗೆ ಕಲೆಯೇ ಫಲ ನೀಡುತ್ತದೆ. ಆದುದರಿಂದ ನಾನು ಯಕ್ಷಗುರು ಎಂದೆಣಿಸುವ ಕರೆಸಿಕೊಳ್ಳಲು ಕಾರಣಕರ್ತನಾದೆ. ಜೊತೆಗೆ ಈ ಗೌರವವೇ ಗೌರವ ಸಾಕ್ಷಿ ಎಂದು ಅಜೆಕಾರು ಬಾಲಕೃಷ್ಣ ತಿಳಿಸಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಪ್ರಸ್ತಾವನೆಗೈದು ಇದೊಂದು ಬಣ್ಣಬಣ್ಣದ ವರ್ಣಮಯ ಕಾರ್ಯಕ್ರಮ. ಹಚ್ಚಿಕೊಂಡ ಬಣ್ಣವಲ್ಲ ಹಾಕಿಕೊಂಡ ಬಣ್ಣ ಎಂದರು.

ಪೆÇ್ರ| ರಾಮಚಂದ್ರಪ್ಪ ಅವರು ದಯಾನಂದ ಬೋಂಟ್ರಾ ಮತ್ತು ಎಸ್ಕೆ ಹಳೆಯಂಗಡಿ ಅವರಿಗೆ ಶಾಲು ಹೊದಿಸಿ ಗ್ರಂಥಗೌರವ ನೀಡಿ ಅಭಿವಂದಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸುಖಾಗಮನ ಬಯಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಸಿದರು. ದಿನಕರ್ ಚಂದನ್ ಧನ್ಯವದಿಸಿದರು.

ಕೊಂಡೆವೂರುನಲ್ಲಿ ಜರಗÀುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಮುಂಬಯಿ ಸಭೆ - ಯಾಗದಿಂದ ಭಕ್ತರಲ್ಲಿ ಆತ್ಮಜ್ಞಾನ ವೃದ್ಧಿ ಸಾಧ್ಯ  : ಮಾಣಿಲಶ್ರೀ

ಮುಂಬಯಿ, ಅ.28: ಸಮಾಜ ಕಲ್ಯಾಣದ ಸಂಕಲ್ಪ ಹೊಂದಿದ ಸಾಧುಸಂತರು ಧರ್ಮಭೂಮಿಯ ಕರ್ಮ ತೀರಿಸಲು ತಮ್ಮಲ್ಲಿನ ಅಧ್ಯಾತ್ಮಿಕÀ ಮನಸ್ಸುಗಳನ್ನು  ಶುದ್ಧೀಕರಿಸಿ ಜನ್ಮಕಲ್ಯಾಣ ಮಾಡಬೇಕೆನ್ನುವ ಉದ್ದೇಶವಿರಿಸಿದ್ದೇ ವೆ. ಸಂತರು ಭಾವೈಕ್ಯದ ಹರಿಕಾರರು ಆಗಿದ್ದು ಅವರ ಅನುಗ್ರಹದಿಂದ ಅಧ್ಯಾತ್ಮದ ಒಲವನ್ನು ಹೊಂದಿದಾಗಲೇ ವೈಚಾರಿಕ ಪ್ರಜ್ಞೆಯ ಜಾಗೃತಿ ಮೂಡುವುದು. ಯಾಗದಿಂದ ಭಕ್ತರಲ್ಲಿ ಆತ್ಮಜ್ಞಾನ ವೃದ್ಧಿಯಾಗುವುದು ಎಂದು ಬಂಟ್ವಾಳ ಮುರುವ ಅಲ್ಲಿನ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷಿ ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಸಂಜೆ ಉಪನಗರ ಮುಲುಂಡ್ ಶಿವಾಜಿ ನಗರದಲ್ಲಿನ ನವೋದಯ ಕನ್ನಡ ವಿದ್ಯಾಲಯದ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಸಿದ್ಧತಾ ಮುಂಬಯಿ ಸಭೆ ಉದ್ಘಾಟಿಸಿ ಶ್ರೀ ಮೋಹನದಾಸ ಸ್ವಾಮೀಜಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು. ನನ್ನ ಶಿಷ್ಯರಾಗಿದ್ದ ಕೊಂಡೆಯೂರು ಶ್ರೀಗಳಿಗೆ ದೀಕ್ಷೆಯನ್ನಿತ್ತಾಗಲೇ ಅವರಲ್ಲಿ ಭಕ್ತಿಮಾರ್ಗದಿಂದ ಸಮಜೋದ್ಧಾರ ನಡೆಸುವ ಶಕ್ತಿ ಕಂಡಿದ್ದೆ. ಆದುದರಿಂದ ಅವರ ಆಶಯದ ಯಾಗದ ಮಹತ್ವವನ್ನು ನಾವೆಲ್ಲರೂ ತಿಳಿದು ಅವರೊಡನೆ ಒಗ್ಗೂಡಿ ಸಮಾಜ ಕಲ್ಯಾಣದ ಸಂಕಲ್ಪವನ್ನು ಈಡೇರಿಸ ಬೇಕು. ಆ ಮೂಲಕ ಭಾರತೀಯ ಸಂಸ್ಕೃತಿ ವಿಶ್ವದಾದ್ಯಂತ ಬೆಳಗಿಸೋಣ ಎಂದರು.

2019ರ ಫೆ.18ರಿಂದ 24ರ ತನಕ ಕಾಸರಗೋಡು ಉಪ್ಪಳ ಅಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ದಲ್ಲಿ ಹಮ್ಮಿಕೊಳ್ಳಲಾಗಿರುವ `ವಿಶ್ವಜಿತ್ ಅತಿರಾತ್ರ ಸೋಮಯಾಗ’ದ ಬಗ್ಗೆ ಕೊಂಡೆವೂರು ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಸಂಕ್ಷೀಪ್ತ ಮಾಹಿತಿ ನೀಡುತ್ತಾ ಭಕ್ತಿಯಿಂದ ಬಂದ ಪ್ರತಿಯೊಬ್ಬ ಭಕ್ತರ ಮನೋಭಿಷ್ಠಗಳನ್ನು ಈಡೇರಿಸುವುದು ಸನ್ಯಾಸಿಗಳ ಧರ್ಮವಾಗಿದೆ. ಸಜ್ಜನರ ಸ್ನೇಹಿಗಳಾಗಿ ಜೀವನ್ನುದ್ದಕ್ಕೂ ಭಕ್ತೋದ್ಧಾರದ ಕಾರ್ಯ ನೆರವೇರಿಸಿ ಜೀವನ ಪಾವನಗೊಳಿಸಲು ಇಂತಹ ಧಾರ್ಮಿಕ ಸೇವೆಗಳು ಅಗತ್ಯವಾಗಿವೆ. ಆದ್ದರಿಂದ ಸೋಮಯಾಗದಲ್ಲಿ ಭಾಗಿಗಳಾಗಿ ಪುಣ್ಯಕ್ಕೆ ಪಾತ್ರರಾಗಿರಿ ಎಂದು ಭಕ್ತಾಭಿಮಾನಿ ಬಂಧುಭಗಿನಿಯರಿಗೆ ಕರೆಯಿತ್ತರು.

ವೇದಿಕೆಯಲ್ಲಿ ನವೋದಯ ಕನ್ನಡ ಸೇವಾ ಸಂಘದ ಅಧ್ಯಕ್ಷ ಹಾಗೂ ಶಾಲಾಡಳಿತ ಸಮಿತಿ ಕಾರ್ಯಾಧ್ಯಕ್ಷ ಜಯ ಕೆ. ಶೆಟ್ಟಿ, ಶ್ರೀ ನಿತ್ಯಾನಂದ ಸೇವಾ ಸಮಿತಿ ಗಣೇಶ್‍ಪುರಿ ಟ್ರಸ್ಟೀ ನ್ಯಾಯವಾದಿ ಸಂಧ್ಯಾ ಜಾಧವ್, ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮುಂಬಯಿ ಸಮಿತಿ ಮಾಜಿ ಅಧ್ಯಕ್ಷರಾದ  ಧರ್ಮಪಾಲ ಯು.ದೇವಾಡಿಗ, ಕೃಷ್ಣ ಎನ್.ಉಚ್ಚಿಲ್, ಮಾಜಿ ಗೌರವಾಧ್ಯಕ್ಷ ರೋಹಿದಾಸ್ ಆರ್.ಬಂಗೇರಾ, ಕರ್ನಾಟಕ ಸರಕಾರದ ಮಾಜಿ ಎಂಎಲ್‍ಸಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಸಮಿತಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಮೋನಪ್ಪ ಎಂ.ಭಂಡಾರಿ, ಯಶೋಧಾ ಭಟ್ಟಂಪಾಡಿ, ಸಂದೀಪ್ ಶೆಟ್ಟಿ, ಸದಾನಂದ ನಾವರ, ಜಯರಾಮ್ ಪೂಜಾರಿ ಮತ್ತಿತರ ಪದಾಧಿಕಾ ರಿಗಳು ವೇದಿಕೆಯಲ್ಲಿ ಆಸೀನರಾಗಿದ್ದರು.

ಮುಂಬಯಿ ಸಮಿತಿಯ ಅಶೋಕ್ ಎಂ.ಕೋಟ್ಯಾನ್ ಥಾಣೆ, ಎಸ್.ಕೆ ಶ್ರೀಯಾನ್, ವಿಶ್ವನಾಥ್ ಯು.ಮಾಡಾ, ರವಿ ಎಸ್.ಮಂಜೇಶ್ವರ, ಹರೀಶ್ ಕೆ.ಚೇವಾರ್, ಚಂದ್ರಶೇಖರ ಆರ್.ಬೆಲ್ಚಡ, ತೋನ್ಸೆ ಸಂಜೀವ ಪೂಜಾರಿ ಸೇರಿದಂತೆ ನೂರಾರು ಭಕ್ತರು, ಸಮಿತಿ ಸದಸ್ಯರು ಉಪಸ್ಥಿತರಿದ್ದು, ಶ್ರೀಗಳು ಫಲಮಂತ್ರಾಕ್ಷತೆಯೊಂದಿಗೆ ಹರಸಿದರು.

ಯಾಗ ಸಮಿತಿ ಗೌ| ಪ್ರ| ಕಾರ್ಯದರ್ಶಿ ನಿತ್ಯಾನಂದ ಡಿ.ಕೋಟ್ಯಾನ್ ಸ್ವಾಗತಿಸಿ ಕೊಂಡೆವೂರು ಕ್ಷೇತ್ರದ ಸೇವಾ ವೈಖರಿಯನ್ನು ಪ್ರಸ್ತಾಪಿಸಿ ವಿಶ್ವಜಿತ್ ಅತಿರಾತ್ರ ಸೋಮಯಾಗದ ಸಿದ್ಧತೆ ಬಗ್ಗೆ ತಿಳಿಸಿದರು.   ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು. ಮುಂಬಯಿ ಸಮಿತಿ ಅಧ್ಯಕ್ಷ ರಾಜೇಶ್ ರೈ ವಂದಿಸಿದರು.

Actors Shatrughan Sinha, Shilpa Shetty Kundra, Vivek Oberoi, Shakti Kapoor, Dalip Tahil, Rahul Dev and Jayati Bhatia poses during
celebration of Success of Fever FM’s show Mahabharat in Mumbai.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi