Brief Udupi news with pictures
Kemmannu News Network, 04-11-2018 19:38:49
ಮರಳು ಶಿಲ್ಪ
ದೀಪಾವಳಿ ಹಬ್ಬದ ಕುರಿತಾಗಿ ಶುಭಾಷಯ ಕೋರುವುದರ ಜೊತೆಗೆ, ‘ನೋ ಕ್ರಾಕರ್ಸ್, ನೋ ಪೊಲ್ಯುಶನ್’ ಎಂಬ ಸಂದೇಶದಡಿಯಲ್ಲಿ ರಚಿಸಿದ ಮರಳು ಶಿಲ್ಪ ಕಲಾಕೃತಿಯು ‘ಸ್ಯಾಂಡ್ ಥೀಂ’, ಉಡುಪಿ ತಂಡವು ಕಲಾವಿದ ಹರೀಶ್ ಸಾಗಾ ನೇತೃತ್ವದಲ್ಲಿ ರಾಘವೇಂದ್ರ, ಜೈ ನೇರಳೆಕಟ್ಟೆ, ಪ್ರಸಾದ್ ಆರ್. ಮಲ್ಪೆ ಬೀಚ್ ನಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲ್ಪಟ್ಟಿತ್ತು.
ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟ : ಏಕಾಹ ಭಜನೆ
ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ವಾರ್ಷಿಕ ವರ್ಧಂತಿ ಪ್ರಯುಕ್ತ ‘ಏಕಾಹ ಭಜನೆ’ಯು ಶ್ರೀ ಶಿರ್ಡಿ ಸಾಯಿಬಾಬ ಮಂದಿರ ಕೊಡವೂರು ಇದರ ಸಹಯೋಗದೊಂದಿಗೆ ನವೆಂಬರ್ 1 ಗುರುವಾರ ಸೂರ್ಯೋದಯದಿಂದ ಪ್ರಾರಂಭಗೊಂಡು ಮರುದಿನ ನವೆಂಬರ್ 2 ಶುಕ್ರವಾರ ಸೂರ್ಯೋದಯದ ತನಕ ಕೊಡವೂರು ಶ್ರೀ ಶಿರ್ಡಿ ಸಾಯಿಬಾಬ ಮಂದಿರದಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಮಾಜಿ ಸಂಘ ಚಾಲಕ್ ಟಿ.ಶಂಭು ಶೆಟ್ಟಿ ಜ್ಯೋತಿ ಬೆಳಗಿಸಿ ಏಕಾಹ ಭಜನೆಗೆ ಚಾಲನೆ ನೀಡಿದರು. ಶ್ರೀ ಶಿರ್ಡಿ ಸಾಯಿಬಾಬ ಮಂದಿರದ ಧರ್ಮದರ್ಶಿ ದಿವಾಕರ ಶೆಟ್ಟಿ ತೋಟದ ಮನೆ ಕೊಡವೂರು, ಉದ್ಯಮಿ ಸಾಧು ಸಾಲ್ಯಾನ್ ಕೊಡವೂರು, ಬಿಲ್ಲವ ಸೇವಾ ಸಂಘ ಮಧ್ವನಗರ-ಮೂಡುಬೆಟ್ಟು ಅಧ್ಯಕ್ಷ ರಮೇಶ್ ಬಂಗೇರ, ಪಾಂಡುರಂಗ ಮಲ್ಪೆ, ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಭೋಜರಾಜ್ ಆರ್. ಕಿದಿಯೂರು, ಕಾರ್ಯಾಧ್ಯಕ್ಷ ಮಾಧವ ಸುವರ್ಣ ಎರ್ಮಾಳು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಉಪಾಧ್ಯಕ್ಷೆ ಯಶೋಧಾ ಕೇಶವ, ಸಂಘಟನಾ ಕಾರ್ಯದರ್ಶಿ ಸುಂದರ್ ಜತ್ತನ್ ತೆಂಕನಿಡಿಯೂರು, ರಾಧಾಕೃಷ್ಣ ಮೆಂಡನ್ ಮಲ್ಪೆ, ಉಡುಪಿ ತಾಲೂಕು ಒಕ್ಕೂಟದ ಅಧ್ಯಕ್ಷ ಧನಂಜಯ ಕಾಂಚನ್ ಮಲ್ಪೆ, ಪ್ರಧಾನ ಕಾರ್ಯದರ್ಶಿ ಭರತ್ರಾಜ್ ಕೆ.ಎನ್., ಉಡುಪಿ ನಗರ ವಲಯಾಧ್ಯಕ್ಷ ಕಿಶೋರ್ ಕುಮಾರ್, ಕರಾವಳಿ ವಲಯಾಧ್ಯಕ್ಷ ಕಿರಣ್ ಕುಂದರ್, ನಿತ್ಯಾನಂದ ನಾಯಕ್, ಶಾಲಿನಿ ಶೆಣೈ, ಸುಧಾಕರ್ ಶೆಟ್ಟಿ, ರಮೇಶ್ ಶೆಟ್ಟಿ, ಉಮೇಶ್ ಶೆಟ್ಟಿ ಹಾಗೂ ಶ್ರೀ ಶಿರ್ಡಿ ಸಾಯಿಬಾಬ ಸೇವಾ ಸಮಿತಿ ಕೊಡವೂರು ಇದರ ಪದಾಧಿಕಾರಿಗಳು ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಒಕ್ಕೂಟದ ಜಿಲ್ಲಾ, ತಾಲೂಕು, ವಲಯ ಪದಾಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ಅಹೋರಾತ್ರಿ ಭಜನೆ ಹಾಗೂ ಕುಣಿತದ ಭಜನಾ ಸೇವೆ ನಡೆಯಿತು.
ಜಿಲ್ಲೆಯಲ್ಲಿ ಶಾಂತಿಯುತ ಮತದಾನ
ಉಡುಪಿ, ನವೆಂಬರ್ 3 (ಕರ್ನಾಟಕ ವಾರ್ತೆ) : ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ಪ್ರಯುಕ್ತ ಉಡುಪಿ ಜಿಲ್ಲೆಯ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ಮತದಾನ ಶಾಂತಿಯುತವಾಗಿತ್ತು.
ಉಪ ಚುನಾವಣೆಯಲ್ಲಿ ಮತದಾನ ಮಾಡುವ ಕುರಿತಂತೆ ಸಾರ್ವಜನಿಕರಲ್ಲಿ ಹೆಚ್ಚಿನ ಉತ್ಸಾಹ ಕಂಡುಬರಲಿಲ್ಲ, ರೈತರು ತಮ್ಮ ಬೆಳೆ ಕಟಾವಿನಲ್ಲಿ ತೊಡಗಿದ್ದದು ಹಾಗೂ ಹೆಚ್ಚಿನ ಬಿಸಿಲಿನ ಕಾರಣ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು, ಬೆಳಗ್ಗೆ 9 ಗಂಟೆಯವರೆಗೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.11.47 ಮತದಾನ ನಡೆದಿದ್ದು, 11 ಗಂಟೆಯ ವೇಳೆಗೆ 25.10 ಮತ್ತು 1 ಗಂಟೆಗೆ 37.77 , 3 ಗಂಟೆಗೆ 45.35 ಮತದಾನ ನಡೆದಿದ್ದಿತು, 4 ಗಂಟೆಯ ನಂತರ ನಂತರ ಚುರುಕುಗೊಂಡ ಮತದಾನ ಪ್ರಕ್ರಿಯೆಯಲ್ಲಿ 5 ಗಂಟೆಯ ವೇಳೆಗೆ ಶೇ.55 ಮತದಾನ ನಡೆದಿದ್ದಿತು.
ನಕ್ಸಲ್ ಬಾಧಿತ ತೊಂಬಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 766 ಮತದಾರರಿದ್ದು 10.40 ರ ವೇಳೆಗೆ 278 ಮಂದಿ ಮತದಾನ ಮಾಡಿದ್ದರು, ಅತಿಸೂಕ್ಷ್ಮ ಮತಗಟ್ಟೆಗಳಾದ ಮಚ್ಚಟ್ಟು ಶಾಲೆಯಲ್ಲಿ 1263 ಮತದಾರರಿದ್ದು 364 ಮಂದಿ ಮತ ಚಲಾಯಿಸಿದ್ದರು, ಹಳ್ಳಿಹೊಳೆ ಗ್ರಾಮದ ಇರಿಗೆ ಶಾಲೆಯ ಮತಗಟ್ಟೆಯಲ್ಲಿ 521 ಮತದಾರರಿದ್ದು 262 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು , ನಕ್ಸಲ್ ಬಾಧಿತ ಮತಗಟ್ಟೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಸಶಸ್ತ್ರ ಸೀಮಾ ಬಲದ ಯೋಧರನ್ನು ನಿಯೋಜಿಸಲಾಗಿದ್ದಿತು.
ವಾರಾಹಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯ ಒಟ್ಟು 942 ಮತದಾರರಲ್ಲಿ 289 ಮಂದಿ 11.30 ರ ವೇಳೆಗೆ ಮತದಾನ ಮಾಡಿದ್ದರು, 89 ವರ್ಷದ ಪುಟ್ಟ ಕುಲಾಲ್ ತಮ್ಮ ಮಗನ ನೆರವಿನಿಂದ ಬಂದು ಮತದಾನ ಮಾಡಿದರು.
ಹಳ್ಳಿಹೊಳೆಯ ಸುಳುಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 933 ಮತದಾರರಿದ್ದು 12.30 ರ ವೇಳೆಗೆ 380 ಮಂದಿ ಹಕ್ಕು ಚಲಾಯಿಸಿದ್ದು, ಹಳ್ಳಿಹೊಳೆ ಪಂಚಾಯತ್ ವ್ಯಾಪ್ತಿಯ ಗ್ರಾಮವನ್ನು ಬೈಂದೂರು ತಾಲೂಕಿಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಆ ಗ್ರಾಮದ ಜನತೆ ಮತದಾನದಲ್ಲಿ ಭಾಗವಹಿಸಿರಲಿಲ್ಲ.
ಮರವಂತೆ ಗ್ರಾಮ ಪಂಚಾಯತ್ ಆವರಣದಲ್ಲಿ ತೆರೆಯಲಾಗಿದ್ದ ಪಿಂಕ್ ಮತಗಟ್ಟೆಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಮಹಿಳಾ ಸಿಬ್ಬಂದಿಗಳೇ ಕಾರ್ಯ ನಿರ್ವಹಿಸಿದರು, ಆಕರ್ಷಕವಾಗಿ ಪಿಂಕ್ ಬಣ್ಣದ ಬಟ್ಟೆ ಮತ್ತು ಬಲೂನ್ ಗಳಿಂದ ಸಿಂಗರಿಸಿದ್ದ ಈ ಮತಗಟ್ಟೆಗೆ ಮಹಿಳಾ ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸಿದರು, ಮತದಾನ ಕೇಂದ್ರಕ್ಕೆ ಮಹಿಳೆಯರೊಂದಿಗೆ ಬರುವ ಮಕ್ಕಳಿಗೆ ಆಟವಾಡಲು ಚಿಣ್ಣರ ಅಂಗಳ ನಿರ್ಮಿಸಿ , ವಿವಿಧ ಮಕ್ಕಳಿಗಾಗಿ ವಿವಿಧ ಆಟಿಕೆಗಳನ್ನು ಇಡಲಾಗಿದ್ದಿತು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಮತಗಟ್ಟೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಈ ಮತಗಟ್ಟೆಯಲ್ಲಿ 940 ಮತದಾರರಲ್ಲಿ 473 ಮಂದಿ ಮಹಿಳೆಯರಿದ್ದರು.
ಉಪ್ಪಿನಕುದ್ರು ನಲ್ಲಿ ತೆರೆಯಲಾಗಿದ್ದ ವಿಧಾನಸಭಾ ಕ್ಷೇತ್ರದ ಏಕೈಕ ವಿಕಲ ಚೇತನ ಮತಗಟ್ಟೆಯಲ್ಲಿ , ವಿಕಲಚೇತನ ಸ್ನೇಹಿ ಟಾಯ್ಲೆಟ್, ರ್ಯಾಂಪ್, ವೀಲ್ ಚೇರ್, ವಾಕರ್, ವಾಕಿಂಗ್ ಸ್ಟಿಕ್ ವ್ಯವಸ್ಥೆ ಮಾಡಲಾಗಿತ್ತು, ಇಲ್ಲಿನ ಮತಗಟ್ಟೆಯಲ್ಲಿ 21 ವಿಕಲಚೇತನರಿದ್ದು ಮದ್ಯಾಹ್ಮ 3.30 ವೇಳಗೆ 16 ಮಂದಿ ಮತ ಚಲಾಯಿದ್ದರು. ಜಿಲ್ಲಾ ವಿಕಲಚೇತನ ಸಬಲೀಕರಣ ಅಧಿಕಾರಿ ನಿರಂಜನ ಭಟ್ ಮತಗಟ್ಟೆಯ ಉಸ್ತುವಾರಿ ವಹಿಸಿಕೊಂಡಿದ್ದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link