ಅನಿವಾಸಿಗಳಾದ ನಮ್ಮಂತಹ ಜನತೆಯನ್ನು ಪೋಷಿಸಿದ ಯು ಎ ಇ ರಾಷ್ಟ್ರದ ಋಣ ನಮ್ಮೆಲ್ಲರ ಮೇಲಿದೆ. - ಉಸ್ತಾದ್ ಅಲವಿ ಕುಟ್ಟಿ ಹುದವಿ


Shodhan Prasad
Kemmannu News Network, 19-12-2018 21:15:11


Write Comment     |     E-Mail To a Friend     |     Facebook     |     Twitter     |     Print


ಅನಿವಾಸಿಗಳಾದ ನಮ್ಮಂತಹ ಜನತೆಯನ್ನು ಪೋಷಿಸಿದ ಯು ಎ ಇ ರಾಷ್ಟ್ರದ ಋಣ ನಮ್ಮೆಲ್ಲರ ಮೇಲಿದೆ. - ಉಸ್ತಾದ್ ಅಲವಿ ಕುಟ್ಟಿ ಹುದವಿ

ದುಬೈ : ಹಲವಾರು ಕುಟುಂಬಗಳ ಕಣ್ಣೀರ ಧಾರೆಯನ್ನು ಒರೆಸಿ ಅವರ ಬಾಳಿನಲ್ಲಿ ಬೆಳಕನ್ನು ಚೆಲ್ಲಳು ಯು ಎ ಇ ರಾಷ್ಟ್ರದ ಕೊಡುಗೆಯನ್ನು ಎಂದೂ ಮರೆಯಲಸಾದ್ಯ. ಕಡಲಾಚೆಗೆ ಆಗಮಿಸಿದ ನಮ್ಮಂತಹ ಹಲವಾರು ಯುವ ಜನೆತೆಗೆ ಜಾತಿ  ವರ್ಣ ಪಂಗಡಗಳೆಂಬ ಭೇದ ಭಾವವನ್ನು ತೋರದೆ ಸರ್ವರನ್ನೂ ಸ್ವಾಗತಿಸಿ ಸರ್ವರಿಗೂ ಜೀವನದ ದಾರಿ ತೋರಿಸಿಕೊಟ್ಟ ಉದಾತ್ತ ರಾಷ್ಟ್ರವಾಗಿದೆ ಇದು. ಇಂತಹ ಸಂಧರ್ಭಗಳಲ್ಲಿ ಇಲ್ಲಿನ ಆಡಳಿತಾಧಿಕಾರಿಗಳನ್ನು , ನೇತಾರರನ್ನು ಸ್ಮರಿಸಿಕೊಂಡು ರಾಷ್ಟ್ರದ ಪ್ರಗತಿಯಲ್ಲಿ ನಾವೆಲ್ಲರೂ ಕೈಜೋಡಿಸಿಕೊಳ್ಳಬೇಕಾಗಿದ್ದು ನಮ್ಮ ಮೇಲಿನ ಕರ್ತವ್ಯವಾಗಿದೆ ಎಂದು ಉಸ್ತಾದ್ ಅಲವಿ ಕುಟ್ಟಿ ಹುದವಿ ರವರು ಕೆ ಐ ಸಿ ಯು ಎ ಇ ಹಾಗೂ ಕರ್ನಾಟಕ ಕಲ್ಚರಲ್ ಸೆಂಟರ್ ಹಮ್ಮಿಕೊಂಡ ಯು ಎ ಇ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

  ಓರ್ವ ತಾಯಿ ತನ್ನ ಮಕ್ಕಳ್ಳನ್ನು ಯಾವ ರೀತಿಯಲ್ಲಿ ಮಮತೆಯಿಂದ ಸಾಕುತ್ತಾಳೋ ಅದೇ ರೀತಿ ನಮ್ಮಂತಹ ಅದೆಷ್ಟೋ ಅನಿವಾಸಿಗಳನ್ನೂ ಈ ರಾಷ್ಟ್ರವು ಸಾಕುತ್ತಿದೆ. ಒಂದೊತ್ತಿನ ಅನ್ನಕ್ಕೆ ಪರದಾಡುವ ಹಲವಾರು ರಾಷ್ಟ್ರಗಳತ್ತ  ಈ ರಾಷ್ಟ್ರದ ನೇತಾರರು ಸಹಾಯದ ಹಸ್ತ ಚಾಚಿದ್ದು , ಇಸ್ಲಾಮಿನ ಆದರ್ಶಗಳಂತೆ ಮುನ್ನಡೆಯುತಿದೆ. ಪರಿಶುದ್ಧ ಹದೀಸ್ ಗಳ ಉಲ್ಲೇಖದಂತೆ , ತನ್ನ ನೆರೆಮನೆಯವನು ಹಸಿವಿನಿಂದ ಇದ್ದು ತಾನು ಹೊಟ್ಟೆ ತುಂಬ ಉಂಡು ತೇಗಿದವನು ಎಂದೂ ಪರಿಪೂರ್ಣ ಮುಸಲ್ಮಾನನಾಗಲಾರ,ಎಂಬಂತೆ ಈ  ರಾಷ್ಟ್ರವು ಅದೆಷ್ಟೋ ಮಾನವಕುಲವನ್ನು ರಕ್ಷಿಸಿದೆ. ಇಂತಹ ಉದಾತ್ತ ಮನೋಭಾವದ ಯು ಎ ಇ ರಾಷ್ಟ್ರವು ಇಂದು ತನ್ನ ನಲವತ್ತೇಳನೇ ರಾಷ್ಟ್ರೀಯ ದಿನಾಚರಣೆಯನ್ನು ಆಚರಿಸುತ್ತಿದ್ದು ಅದರ ಭಾಗವಾಗಿ ಅನಿವಾಸಿಗಳಾದ ನಾವು ಸಹಭಾಗಿಗಳಾಗಿದ್ದು ನಮ್ಮ ಈ ರಾಷ್ಟ್ರದ ಮೇಲಿನ ಪ್ರೀತಿಯನ್ನು ಎತ್ತಿತೋರಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಯ್ಯದ್ ಶುಹೈಬ್ ತಂಘಳ್ ಪ್ರಾರ್ಥನೆಗೆ ನೇತೃತ್ವವನ್ನು ನೀಡಿ ಶುಭಹಾರೈಸಿದರು. ನಂತರ ಕೆ ಐ ಸಿ ಗ್ರಾಂಡ್ ಮೀಟ್ ಸ್ವಾಗತ ಸಮಿತಿ ಅಧ್ಯಕ್ಷರಾದ ಅಶ್ರಫ್ ಷಾ ಮಾಂತೂರ್ ರವರು ಸ್ವಾಗತಿಸಿ ಮಾತನಾಡಿ ಅನಿವಾಸಿಗಳಾದ ನಮ್ಮ ಮೇಲೆ ಈ ರಾಷ್ಟ್ರದ ತೋರುತ್ತಿರುವ ಉದಾತ್ತ ಮನೋಭಾವವನ್ನು ಸ್ಮರಿಸಿಕೊಂಡು , ಜಗತ್ತಿನ ಇತರ ರಾಷ್ಟ್ರಗಳಿಗೆ ಮಾದರಿಯಾಗಿರುವ ಯು ಎ ಇ ರಾಷ್ಟ್ರವು ಮುಂದೆಯೂ ಉತ್ತಮ ಆಡಳಿತದೊಂದಿಗೆ ಮುನ್ನಡೆಯಲಿ ಎಂದು ಶುಭ ಹಾರೈಸಿದರು.

ಕೆ ಐ ಸಿ ಯು ಎ ಇ , ಕರ್ನಾಟಕ ಕಲ್ಚರಲ್ ಸೆಂಟರ್ ಯು ಎ ಇ ಸಮಿತಿಯು ಪೋಷಕರೂ ಉದ್ಯಮಿಗಳೂ ಆದ ಮುಹಮ್ಮದ್ ಮುಸ್ತಫಾ ಎಂಸ್ಕ್ವಾರ್ ರವರು ಉದ್ಘಾಟಿಸಿ ಮಾತನಾಡಿ  ಸಮಾನತೆಗೆ ಮಾದರಿಯಾದ ಈ ಯು ಎ ಇ ರಾಷ್ಟ್ರವು ಇಂದು ಸರ್ವ ಕ್ಷೇತ್ರಗಳಲ್ಲೂ ಸಂಪತ್ತ್ ಭರಿತವಾಗಿ ಮುನ್ನಡೆಯಿತ್ತಿದೆ. ಇಲ್ಲಿನ ನೇತಾರರ ಆಡಳಿತವರ್ಗದವರ ಉದಾತ್ತ ಮನೋಭಾವವಾಗಿದೆ ನಮ್ಮಂತಹ ಅನಿವಾಸಿಗಳ ಯಶಸ್ಸು. ಅದೆಷ್ಟೋ ಕನಸ್ಸುಗಳನ್ನು ಹೊತ್ತು ಬಂದ  ನಮ್ಮೆಲ್ಲಾ ಕನಸ್ಸನ್ನು ನನಸಾಗಿಸಿದ ಈ ರಾಷ್ಟ್ರದ ಋಣ ಜನ್ಮ ಜನ್ಮಗಳಲ್ಲೂ ಮರೆಯಲಸಾದ್ಯ ಎಂದು ಸರ್ವರಿಗೂ ಯು ಎ ಇ ರಾಷ್ಟ್ರೀಯ ದಿನಾಚರಣೆಯ ಶುಭ ಹಾರೈಸಿದರು. 

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಭರತ್ ಕನ್ಸ್ಟ್ರಕ್ಷನ್  ಮುಸ್ತಫಾ ಎಸ್ ಎಂ ರವರು ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿ ಇಂದು ಜಗತ್ತಿನಲ್ಲಿ ಅಸಾಧ್ಯವಾಗಿರುವುದು ಯಾವುದು ಇಲ್ಲ ಎಂಬುದಕ್ಕೆ ಯು ಇ ರಾಷ್ಟ್ರವು ಪ್ರತ್ಯಕ್ಷ ಶಾಕ್ಷಿಯಾಗಿದೆ. ಇತರ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧವನ್ನು ವೃದ್ಧಿಸಿಕೊಂಡು ಕಷ್ಟಗಳ ಸಂಧರ್ಭಗಳಲ್ಲಿ  ಪರಸ್ಪರ ಸಹಾಯ ಹಸ್ತವನ್ನು ಚಾಚುತ್ತಾ ಬಂದಿರುವ ಈ ರಾಷ್ಟ್ರ ನಾಯಕರ ಮನಸ್ಸನ್ನು ಪ್ರಶಂಸಿಲೇ ಬೇಕು ಎಂದರು. ವರ್ಣ ಜಾತಿ ದೇಶ ಗಳೆಂಬ ಭೇಧವನ್ನು ತೋರದೆ ಸರ್ವರಿಗೂ ಸಮಾನ ಅವಕಾಶವನ್ನು ನೀಡಿದ ಈ ರಾಷ್ಟ್ರದ ನಾಯಕರನ್ನು ಅಭಿನಂದಿಸುವುದಾಗಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಡುಕಾಟಿ ಬೈಕ್ ರೇಸ್ ಸ್ಪರ್ಧೆಯಲ್ಲಿ ಚಾಂಪಿಯನ್ ನಾಸಿರ್ ಸಯದ್ ರವರನ್ನು ನೀಡಿ ಅವರನ್ನು ಸನ್ಮಾನಿಸಲಾಯಿತು.

ಯು ಎ ಇ ಪುಟಾಣಿಗಳ ಯು ಎ ಇ ರಾಷ್ಟ್ರ ಗೀತೆಯೊಂದಿಗೆ ಪ್ರಾರಂಭ ಗೊಂಡ ಕಾರ್ಯಕ್ರಮದಲ್ಲಿ ಯು ಎ ಇ ಸ್ವದೇಶಿಗಳಾದ ಮುಹಮ್ಮದ್ ಒಬೈದ್ ಸಾಲಿಮ್ ಬೆಲ್ರುವೈಸ್ದ , ನಾಸೀರ್ ಅಬ್ದುಲ್ ಅಝೀಝ್ ಅಲಿ ಅಬ್ದುಲ್ ಅಲ್ ಖಾಝಾ,  ಮುಹಮ್ಮದ್ ಸುಲ್ತಾನ್ ಸಾಲಿಮ್ ಅಲ್ ಶಂಸಿ , ಮುಹಮ್ಮದ್ ಯೂಸುಫ್ ಮುಹಮ್ಮದ್ ಅಬ್ದುಲ್ಲಾ ಬಿನ್ ಇಸ್ಮಾಯಿಲ್ , ಫಹದ್ ಅಬ್ದುಲ್  ಅಝೀಝ್ ಅಲಿ ಅಬ್ದುಲ್ ಅಲ್ ಖಾಝಾ , ಅಲಿ ಹಸ್ಸನ್ ಅಲ್ ಮತ್ರೂಶಿ , ಖಾಲಿದ್ ಅಬ್ದುಲ್  ಅಝೀಝ್ ಅಲಿ ಅಬ್ದುಲ್ ಅಲ್ ಖಾಝಾ , ಫಾರಿಸ್ ಯೂಸುಫ್ ಅಲ್ ತಾನಿ ಅಲ್ ಸುವೈದಿ , ಸವೂದ್ ಅಬ್ದುಲ್ ಅಝೀಝ್ ಅಲಿ ಅಬ್ದುಲ್ ಅಲ್ ಖಾಝಾ , ಮೊದಲಾದವಾದವರು ಭಾಗವಹಿಸಿ ಕಾರ್ಯಕ್ರಮದ ಕುರಿತು ಹರ್ಷ ವ್ಯಕ್ತ ಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇದೇ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ವದೇಶೀ ನೇತಾರರಿಗೆ ಹಾಗೂ ಮುಖ್ಯ ಅತಿಥಿಗಳಿಗೆ ಕೆ ಐ ಸಿ ಗ್ರಾಂಡ್ ಮೀಟ್ ಪಧಾಧಿಕಾರಿಗಳು ಸ್ಮರಣಿಕೆ ನೀಡಿ ಗೌರವಿಸಿದರು. 

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಕೆ ಐ ಸಿ ಅಕಾಡೆಮಿ ಅಧ್ಯಕ್ಷರಾದ ಕೆ ಪಿ ಅಹಮ್ಮದ್ ಹಾಜಿ ಆಕರ್ಷಣ್ ರವರು ಮಾತನಾಡಿ ಅನಿವಾಸಿಗಳಾದ ತಮ್ಮಂತಹ ದೀನೀ ಸಹೋದರರ ಸೇವಾ ಮನೋಭಾವದಿಂದ ಇಂದು ತಾಯಿನಾಡಿನಾದ್ಯಂತ ಹಲವಾರು ಶಿಕ್ಷಣ ಕ್ಷೇತ್ರಗಳು , ಧಾರ್ಮಿಕ ಕ್ಷೇತ್ರಗಳು ಮುನ್ನಡೆಯುತ್ತಿದೆ. ಅಂತಹ ಶಿಕ್ಷಣ ಕೇಂದ್ರಗಳಲ್ಲಿ ಒಂದಾಗಿದೆ ಕರ್ನಾಟಕ ಇಸ್ಲಾಮಿಕ್ ಸೆಂಟರ್ , ಈ ಸಂಸ್ಥೆಯು ಇಂದು ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿದ ವಾಫಿ ಪಠ್ಯ ಪದ್ಧತಿಯೊಂದಿಗೆ ಮುನ್ನಡೆಯುತ್ತಿದ್ದು ತಮ್ಮ ಸಹಕಾರದ ಒಂದು ಭಾಗವಾಗಿದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 

ಕಾರ್ಯಕ್ರಮದಲ್ಲಿ ಮೂಲಖ್ಯಾ ಅತಿಥಿಗಳಾಗಿ ಉಪಸ್ಥಿತರಿದ್ದ ಸಯ್ಯದ್ ಅಸ್ಕರಲಿ ತಂಘಳ್ ಕೋಲ್ಪೆ ,ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬ ,  ಅಬ್ದುಲ್ ಲತೀಫ್ ಮದರ್ ಇಂಡಿಯಾ , ಮುಹಮ್ಮದ್ ಮುಸ್ತಾಕ್ ಕದ್ರಿ , ಶಂಸುದ್ದೀನ್ ಸೂರಲ್ಪಾಡಿ , ಮಿರ್ ಮುಹಮ್ಮದ್ ಮುನವ್ವರ್ ಅಲಿ , ಡಾ . ಎಂ ಕೆ ಅಬ್ದುಲ್ ಹಾರಿಸ್ , ನಾಸೀರ್ ಅಬ್ದುಲ್ ಖಾದರ್ , ಪ್ರೊಫೆಸ್ಸರ್ ಅಬೂಬಕ್ಕರ್ ತುಂಬೆ, ಯೂಸುಫ್ ಹಾಜಿ ಬೆರಿಕೆ , ಸಲೀಂ ಅಲ್ತಾಫ್ ಫರಂಗಿಪೇಟೆ , ಷರೀಫ್ ಕಾವು , ಅಬ್ದುಲ್ ಖಾದರ್ ಬೈತಡ್ಕ, ಅಬ್ದುಲ್ ಸಲಾಂ ಬಪ್ಪಳಿಗೆ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. 

ಕಾರ್ಯಕ್ರಮದಲ್ಲಿ ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಯು ಎ ಇ ನೇತಾರರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ , ಲತೀಫ್ ಕೌಡಿಚ್ಚಾರ್ , ಅಶ್ರಫ್ ಪರ್ಲಡ್ಕ ರವರು ನಿರೂಪಿಸಿದರು.  ಸುಲೈಮಾನ್ ಮೌಲವಿ ಕಲ್ಲೇಗ ವಂದಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
BIGGEST FLOOD IN 46 YEARS, KEMMANNU - UDUPI
View More

Free Covid-19 test at Santhekatte By Rotary Kallianpur on Oct 2.Free Covid-19 test at Santhekatte By Rotary Kallianpur on Oct 2.
Rozaricho Gaanch September Issue 2020Rozaricho Gaanch September Issue 2020
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Cool House Construction, Udupi.Cool House Construction, Udupi.
Computerised Clinical Laboratory, Kemmannu.Computerised Clinical Laboratory, Kemmannu.
Milarchi Lara - Bulletin Issue July 2020.Milarchi Lara - Bulletin Issue July 2020.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
St. Alphonsa of India