Brief University College news with pictures


Guru Prasad
Kemmannu News Network, 10-02-2019 11:14:16


Write Comment     |     E-Mail To a Friend     |     Facebook     |     Twitter     |     Print


ವಿಶ್ವವಿದ್ಯಾನಿಲಯ ಕಾಲೇಜು: ಬ್ರೆಕ್ಸಿಟ್ ಕುರಿತ ವಿಶೇಷ ಉಪನ್ಯಾಸ

ಮಂಗಳೂರು: ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್ ಮಾಡಿಕೊಂಡ ಐತಿಹಾಸಿಕ ಒಪ್ಪಂದ ಬ್ರೆಕ್ಸಿಟ್ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ರವೀಂದ್ರ ಕಲಾಭವನದಲ್ಲಿ ಶುಕ್ರವಾರ ನಡೆಯಿತು. .

ಯುರೋಪಿಯನ್ ಪಾರ್ಲಿಮೆಂಟಿನ ಸದಸ್ಯರಾಗಿದ್ದ ಪ್ರೊ. ಮೈಕಲ್ ಹಿಂಡ್ಲೆ, ಬ್ರೆಕ್ಸಿಟ್, ಭಾರತ ಮತ್ತು ಐರೋಪ್ಯ ಒಕ್ಕೂಟಗಳ ಸಂಬಂಧಗಳು ಹಾಗೂ ಬ್ರೆಕ್ಸಿಟ್ನಿಂದ ವ್ಯಾಪಾರ ಮತ್ತು ವಹಿವಾಟು ಕ್ಷೇತ್ರಗಳಲ್ಲಿ ಭಾರತ ಹಾಗೂ ಇತರ ರಾಷ್ಟ್ರಗಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು.

ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಜಯರಾಜ್ ಅಮೀನ್ ಉಪಸ್ಥಿತರಿದ್ದರು. ಕಾಲೇಜಿನ ವಿವಿಧ ವಿಭಾಗಗಳ ಬೋಧಕ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಎಂ.ಎ ಅವರು ಸ್ವಾಗತಿಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಎ. ಸಿದ್ದಿಕ್ ರವರು ವಂದಿಸಿದರು.

‘ಕನಕ ತತ್ವಕ್ಕೆ ವ್ಯತಿರಿಕ್ತವಾಗಿ ರೂಪುಗೊಳ್ಳುತ್ತಿರುವ ಸಮಾಜ’

ಕನಕ ಕೀರ್ತನ ಕಾರ್ಯಕ್ರಮದಲ್ಲಿ ಕವಯತ್ರಿ ಪ್ರತಿಭಾ ನಂದಕುಮಾರ್ ವಿಷಾದ

ಮಂಗಳೂರು: ಕನಕದಾಸ ಸಂಶೋಧನಾ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕನ್ನಡ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು ಜಂಟಿಯಾಗಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ಕನಕ ಕೀರ್ತನ ಕಾರ್ಯಕ್ರಮವನ್ನು ಏರ್ಪಡಿಸಿದ್ದವು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖ್ಯಾತ ಕವಯತ್ರಿ ಪ್ರತಿಭಾ ನಂದಕುಮಾರ್, ‘ಕುಲಕುಲವೆಂದು ಹೊಡೆದಾಡದಿರಿ’ ಎಂದು ಹೇಳಿದ ಕನಕದಾಸರ ಚಿಂತನೆಗೆ ವ್ಯತಿರಿಕ್ತವಾಗಿ ಇಂದಿನ ಸಮಾಜ ರೂಪುಗೊಳ್ಳುತ್ತಿದೆ. ಸಾಮಾನ್ಯ ಬದುಕಿನ ನೈತಿಕ ಮೌಲ್ಯಗಳಿಗೆ ತಕ್ಕಂತೆ ಕೀರ್ತನೆಕಾರರು ಕೀರ್ತನೆಗಳನ್ನು ರಚಿಸಿದ್ದಾರೆ. ಹಾಗಾಗಿ ನಾವು ಅದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕಾಗಿದೆ, ಎಂದರು.

ಅಧ್ಯಕ್ಷೀಯ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ ಎ ಎಂ ಖಾನ್, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 29 ವಿವಿಧ ಪೀಠಗಳಿದ್ದರೂ, ಕಾರ್ಯವೈಖರಿಯಲ್ಲಿ ಕನಕ ಪೀಠ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು. ಪ್ರಾಂಶುಪಾಲ ಡಾ ಉದಯ್ ಕುಮಾರ್ ಎಂ ಎ ಮಾತನಾಡಿ, ರಾಮರಾಜ್ಯದ ಆದರ್ಶಕ್ಕೆ ತಕ್ಕಂತೆ ನಮ್ಮ ಹೆಜ್ಜೆಯನ್ನು ಇಟ್ಟು ನಾಗರಿಕ ಸಮಾಜದಲ್ಲಿ ಬಾಳಬೇಕಿದೆ, ಎಂದರು.

ಇದೇ ವೇಳೆ ಪ್ರೌಢಶಾಲೆ, ಪದವಿಪೂರ್ವ, ಪದವಿ ವಿದ್ಯಾರ್ಥಿಗಳಿಗೆ, ಅಧ್ಯಾಪಕರುಗಳಿಗೆ ಹಾಗೂ ಅಧ್ಯಾಪಕೇತರರಿಗೆ  ಕೀರ್ತನ ಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ಬಿ. ಶಿವರಾಮ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ ರತ್ನಾವತಿ ಟಿ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ವಿನೋದ ಕಾರ್ಯಕ್ರಮ ನಿರೂಪಿಸಿದರು.

ಹೊಸತನವನ್ನು ಯೋಚಿಸುವುದೇ ಸ0ಶೋಧನೆ: ಡಾ. ನೀತಾ ಜಯವ0ತ್

ಮಂಗಳೂರು: ಹೊಸತನವನ್ನು ಯೋಚಿಸುವುದೇ ಸ0ಶೋಧನೆ ಎಂದು ನಿಟ್ಟೆ  ಉಷಾ ಇನಸ್ಟಿಟ್ಯೂಟ್ ಆಫ್ ನರ್ಸಿ0ಗ್ ಸೈನ್ಸ್ ಸ0ಸ್ಥೆಯ ಸಮುದಾಯ ಆರೋಗ್ಯ ನರ್ಸಿ0ಗ್ ವಿಭಾಗದ ಮುಖ್ಯಸ್ಥೆ ಡಾ. ನೀತಾ ಜಯವಂತ್ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಶಿವರಾಮ ಕಾರಂತ ಸಭಾಭವನದಲ್ಲಿ ಶುಕ್ರವಾರ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ವತಿಯಿ0ದ ಆಯೋಜಿಸಲಾಗಿದ್ದ ಸ0ಶೋಧನಾ ವಿಧಾನ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಸಂಶೋಧನೆಯಲ್ಲಿ ಗುಣಾತ್ಮಕ ಹಾಗೂ ಪರಿಮಾಣಾತ್ಮಕ ಅ0ಶಗಳು ಅಡಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಉದಯ್ ಕುಮಾರ್ ಎಂ.ಎ, ಅರ್ಥಶಾಸ್ತ್ರದಲ್ಲಿ ತಳಮಟ್ಟದ ಸಂಶೋಧನೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಜಯವಂತ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದಲ್ಲಿನ ನಿರುದ್ಯೋಗ, ಬಡತನ, ವರಮಾನ, ಅಸಮಾನತೆ ಮೊದಲಾದ ಸಮಸ್ಯೆಗಳಿಗೆ ಸ0ಶೋಧನೆಯಿ0ದ ಪರಿಹಾರ ಕ0ಡುಕೊಳ್ಳಬಹುದು ಎಂದರು.

ವಿಶ್ವವಿದ್ಯಾನಿಲಯ ಸ0ಧ್ಯಾ ಕಾಲೇಜಿನ ಪ್ರಾ0ಶುಪಾಲ ಡಾ. ರಾಮಕೃಷ್ಣ ಬಿ. ಎ0 ಉಪಸ್ಥಿತರಿದ್ದರು.  ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ವಿಜಯಲಕ್ಷ್ಮಿ ಅತಿಥಿಗಳನ್ನು ಪರಿಚಯಿಸಿದರು. ಕು. ಶಮಾ ಕಾರ್ಯಕ್ರಮ ನಿರ್ವಹಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Welcome to Thonse Naturecure Hospital
View More

Obituary: Isidore Mark D’souza, MudarangadiObituary: Isidore Mark D’souza, Mudarangadi
Milagres Alumni (NRI) Scholarship distribution on 30th August.Milagres Alumni (NRI) Scholarship distribution on 30th August.
Muddu Krishna Competition by Kemmannu Ganeshostava Samithi.Muddu Krishna  Competition by Kemmannu Ganeshostava Samithi.
Veez Konkani Illustrated Weekly e-Magazine # 86Veez Konkani Illustrated Weekly e-Magazine # 86
Milagres Milana 2020Milagres Milana 2020
Annual Feast of our Laday of Health, HariharAnnual Feast of our Laday of Health, Harihar
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Milarchi Lara - Easter Issue of Mlagres Parish Bulletin.Milarchi Lara - Easter Issue of Mlagres Parish Bulletin.
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India