Brief Mumbai, Mangalore news with pictures


Rons Bantwal
Kemmannu News Network, 02-04-2019 22:19:07


Write Comment     |     E-Mail To a Friend     |     Facebook     |     Twitter     |     Print


‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿ ನಾಗೇಂದ್ರ ಪ್ರಸಾದ್ !

ಖ್ಯಾತ ಗೀತರಚನೆಕಾರ, ನಿರ್ದೇಶಕ ನಾಗೇಂದ್ರ ಪ್ರಸಾದ್ ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿ-ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿ ಓಜಯ್ಯ ಎಂಬ ಪ್ರಮುಖ ಖಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ಉಘೇ ಉಘೇ ಮಾದೇಶ್ವರ’ ಧಾರಾವಾಹಿ ಯಶಸ್ವಿ ಆರು ತಿಂಗಳು ಪೂರೈಸಿದ್ದು, ಈ ಹಂತದಲ್ಲಿ ಕಥೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಪಯಣದಲ್ಲಿ ಬರುವುದೇ ‘ಓಜಯ್ಯನ ಸಾಲು’.  ಓಜಯ್ಯ ಎಂಬ ದುಷ್ಟ ಬುದ್ಧಿಯ ಶಿಕ್ಷಕ, ಶಿಷ್ಯಂದಿರಲ್ಲಿ ತಾರತಮ್ಯ ಮಾಡುತ್ತ ಜಾತಿ ಭೇದ ಮೆರೆಯುತ್ತಿರುತ್ತಾನೆ. ಸಿದ್ದಮ್ಮ ಎಂಬ ಬಹಿಷ್ಕೃತ ವಿಧವೆ ತನ್ನ ಮಗನನ್ನು ಗುರುಕುಲಕ್ಕೆ ಸೇರಿಸಲು ಬಂದಾಗ ಅವಳ ಮೇಲೆ ದೃಷ್ಟಿ ಹಾಕುತ್ತಾನೆ. ರೇವಣ ಸಿದ್ದೇಶ‍್ವರರ ಭಕ್ತೆಯಾದ ಆಕೆಯ ನೆರವಿಗೆ ಮರಿದೇವರು ಬರುತ್ತಾರೆ. ಓಜಯ್ಯನ ಅಹಂಕಾರ ಮಣಿಸಿ, ದುಷ್ಟತನ ಅಳಿಸಿ ಅವನನ್ನು ಮನುಷ್ಯನನ್ನಾಗಿ ಮಾಡಿ, ಸಿದ್ದಮ್ಮನ ಮಗನಿಗೆ ಗುರುಕುಲದಲ್ಲಿ ಕಲಿಕೆಯ ಅವಕಾಶ ಸಿಗುವಂತೆ ಮಾಡಿ ಅವಳನ್ನು ಮರಳಿ ಪತಿಗೃಹಕ್ಕೆ ಸೇರಿಸುತ್ತಾರೆ. ಈ ಹಂತದಲ್ಲಿ ಕ್ಲಿಷ್ಟಕರ ಸಂದರ್ಭಗಳು ಎದುರಾಗುತ್ತವೆ. ಅಂಥ ಸಂದರ್ಭಗಳಲ್ಲಿ ಹಲವು ಪವಾಡಗಳನ್ನು ಮೆರೆಯುತ್ತಾರೆ. ಅವುಗಳಲ್ಲಿ ಸತ್ತ ಬಾಲಕನನ್ನು ಬದುಕಿಸುವ ಪವಾಡ ಜನಜನಿತ. ಅದೇ ಓಜಯ್ಯನ ಸಾಲಿನ ಪ್ರಮುಖ ಘಟ್ಟ.

ಓಜಯ್ಯನ ಪಾತ್ರವನ್ನು ಡಾ|ನಾಗೇಂದ್ರ ಪ್ರಸಾದ್ ನಿರ್ವಹಿಸಿದರೆ ಪತ್ನಿಯಾಗಿ ಕಿರುತೆರೆ ನಟಿ ಸಂಜನಾ ನಟಿಸುತ್ತಿದ್ದಾರೆ. ದೊಡ್ಡಯ್ಯನಾಗಿ ಶೃಂಗೇರಿ ರಾಮಣ್ಣ, ಸಿದ್ದಮ್ಮನಾಗಿ ಕೀರ್ತಿ ಭಟ್, ಸಿದ್ದೇಶನಾಗಿ ಮಾ| ಶ್ರೇಯಸ್ತ್, ಓಜಯ್ಯನ ಮಗನಾಗಿ ಮಾ| ವಿಶಾಲ್ ಮುಂತಾದವರು ನಟಿಸುತ್ತಿದ್ದಾರೆ.

‘ನಟಿಸಬೇಕು ಎಂದಮೇಲೆ ಒಳ್ಳೆಯ ಪಾತ್ರ ಕೆಟ್ಟ ಪಾತ್ರ ಭೇದವಿಲ್ಲ. ಖಳನಾಯಕನ ಛಾಯೆ ಇರುವ ಪಾತ್ರದಲ್ಲಿ ನಟಿಸುವುದು ಸವಾಲೇ ಸೈ. ಓಜಯ್ಯನ ಪಾತ್ರಕ್ಕಾಗಿ ಮುಖವರ್ಣಿಕೆ, ಉಡುಗೆ, ಭಾಷೆ, ಆಂಗಿಕ ಅಭಿನಯ ಎಲ್ಲಾ ವಿಷಯಗಳ ಬಗ್ಗೆ ವಿಶೇಷ ಕಾಳಜಿವಹಿಸಿದೆವು. ಪಾತ್ರ ಚೆನ್ನಾಗಿ ಮೂಡಿ ಬರುತ್ತಿದೆ. ಮಾದೇಶ್ವರ ಮಹಾಕಾವ್ಯ ನನ್ನ ಇಷ್ಟದ ಕಾವ್ಯ. ಅದರಲ್ಲಿ ಪಾತ್ರ ಮಾಡುತ್ತಿರುವುದು ಹೆಚ್ಚಿನ ಖುಷಿ ತಂದಿದೆ’ ಎನ್ನುತ್ತಾರೆ ನಾಗೇಂದ್ರ ಪ್ರಸಾದ್.

‘ಓಜಯ್ಯನ ಪಾತ್ರವನ್ನು ನಾಗೇಂದ್ರ ಪ್ರಸಾದ್ ವಿಭಿನ್ನವಾಗಿ ನಿರ್ವಹಿಸುತ್ತಿದ್ದಾರೆ. ವೀಕ್ಷಕರು ಇದನ್ನು ಇಷ್ಟಪಡುವುದರಲ್ಲಿ ಸಂದೇಹವಿಲ್ಲ’ ಎನ್ನುತ್ತಾರೆ ನಿರ್ದೇಶಕ ನವೀನ್ ಕೃಷ್ಣ

‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿ ‘ಓಜಯ್ಯನ ಸಾಲು’ ಏಪ್ರಿಲ್ 6 ರಿಂದ ಸಂಜೆ 6ಕ್ಕೆ ಪ್ರಸಾರವಾಗಲಿದೆ.

ಬಿಲ್ಲವರ ಭವನದಲ್ಲಿ ಮಹಿಳಾ ವಿಭಾಗದಿಂದ ನಡೆಸಲ್ಪಟ್ಟ ವೈದ್ಯಕೀಯ ಶಿಬಿರ
ಅಜಾಗರೂಕತೆಯೇ ಅಸ್ವಸ್ಥತೆಯ ಮೂಲ: ಡಾ| ಶ್ಯಾಮಿಲಿ ಎಸ್.ಪೂಜಾರಿ
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುಂಬಯಿ, ಮಾ.31: ವೃತ್ತಿ, ಜೀವನ ಸಾಧನೆ, ಗಳಿಕೆಯ ಧಾವಂತದಲ್ಲಿರುವ ಮಾನವನ ಒತ್ತಡದ ಜೀವನದಲ್ಲಿ ಆರೋಗ್ಯದ ಕಾಳಜಿಗೆ ಮಹತ್ವ ನೀಡದಿರುವುದೇ ಅನಾರೋಗ್ಯದ ಬೆಳವಣಿಗೆಗೆ ಪ್ರಧಾನ ಕಾರಣವಾಗಿದೆ. ಅಂದರೆ ಅಜಾಗರೂಕತೆಯೇ ಅಸ್ವಸ್ಥತೆಗೆ ಮೂಲ ಎನ್ನುವುದು ಸೂಕ್ತ. ಕ್ಯಾನ್ಸರ್‍ನಂತಹ ಕಾಯಿಲೆಗಳನ್ನು ಆರಂಭದಿಂದಲೇ ಗುರುತಿಸಿ ಕೊಂಡು ಶಮನಗೊಳಿಸಲು ಸಾಧ್ಯ. ಆದರೆ ನಾವು ಸಣ್ಣಪುಟ್ಟ ನೆಪಒಡ್ಡಿ ಲಕ್ಷ್ಯ ನೀಡದೆ ಅದು ಗುಣಮುಖ ಹೊಂದದ ಹಂತಕ್ಕೆ ಬಂದಾಗ ಎಚ್ಚರವಾಗುವುದರಿಂದ  ಯಾವುದೇ ಕಾಯಿಲೆಗಳನ್ನು ನಮ್ಮ ದೇಹವನ್ನು ಆವರಿಸುವುದು. ಆದುದರಿಂದ ಮೊದಲ ಹಂತದಲ್ಲೇ ಆರೋಗ್ಯ ತಪಾಸನೆ ಮಾಡಿಸಿ ಜೀವನವನ್ನು ಆರೋಗ್ಯದಾಯಕವಾಗಿಸಿ ಎಂದು ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸಿ ತಮ್ಮ ಜೊತೆಗೆ ಸಮಾಜದ ಸ್ವಸ್ಥ ್ಯವ ನ್ನೂ ಕಾಪಾಡುವಂತೆ ಟಾಟಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಶ್ಯಾಮಿಲಿ ಎಸ್.ಪೂಜಾರಿ ಸಲಹಿದರು.

ಬಿಲ್ಲವರ ಅಸೋಸಿಯೇಶನ್ ಮಹಿಳಾ ವಿಭಾಗವು ಟಾಟಾ ಮೆಮೋರಿಯಲ್ ಆಸ್ಪತ್ರೆಯ ಸಹಯೋಗದೊಂದಿಗೆ
ಇಂದಿಲ್ಲಿ ಆದಿತ್ಯವಾರ ಬೆಳಿಗ್ಗೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ವೈದ್ಯಕೀಯ ಶಿಬಿರ ಆಯೋಜಿಸಿದ್ದು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಮಾರ್ಗದರ್ಶನ ಹಾಗೂ ಮಹಿಳಾ ವಿಭಾಗಧ್ಯಕ್ಷೆ  ಜಯಂತಿ ವಿ.ಉಳ್ಳಾಲ್ ಸಾರಥ್ಯದಲ್ಲಿ ನಡೆಸಲ್ಪಟ್ಟ ಶಿಬಿರವನ್ನು ಬಿಲ್ಲವರ ಅಸೋಸಿಯೇಶನ್‍ನ ಉಪಾಧ್ಯಕ್ಷ ಹರೀಶ್ ಜಿ.ಅವಿೂನ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಟಾಟಾ ಆಸ್ಪತ್ರೆಯ ಡಾ| ಶ್ಯಾಮಿಲಿ ಎಸ್.ಪೂಜಾರಿ, ಡಾ| ಅದಿತಿ ಆಗರ್‍ವಾಲ್, ಡಾ| ಮಂಗಳಾ ಪಾಟೀಲ್ ಸೇರಿದಂತೆ ಇತರ ನುರಿತ ವೈದ್ಯರು ಭಾಗವಹಿಸಿ ಧರ್ಮಾರ್ಥವಾಗಿ ವೈದ್ಯಕೀಯ ಶಿಬಿರ ನಡೆಸಿದ್ದು, ಶಿಬಿರದಲ್ಲಿ ಕ್ಯಾನ್ಸರ್ ತಡೆಗಟ್ಟುವಿಕೆ ಬಗ್ಗೆ ವೈದ್ಯರು ವಿಶೇಷ ತಪಾಸಣೆ ನಡೆಸಿ ಬಿಲ್ಲವರ ಅಸೋಸಿಯೇಶನ್‍ನಂತಹ ಸೇವಾ ಸಂಸ್ಥೆಗಳಿಂದ ಇಂತಹ ಶಿಬಿರಗಳ ಅವಶ್ಯಕತೆಯಿದೆ. ಕ್ಯಾನ್ಸರ್ ಅಂದಾಕ್ಷಣ ಭಯ ಪಡುವ ಅಗತ್ಯವಿಲ್ಲ ಬದಲಾಗಿ ಇಂತಹ ಲಕ್ಷಣಗಳೇನೂ ಕಾಡಿದರೂ ತತ್‍ಕ್ಷಣವೇ ಜಾಗೃತರಾಗಿ ಪ್ರಥಮ ಚಿಕಿತ್ಸೆಗೆ ಒಳಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಿರಿ ಎಂದರು.

ಕಾರ್ಯಕ್ರಮದಲ್ಲಿ ಭಾರತ್ ಬ್ಯಾಂಕ್‍ನ ನಿರ್ದೇಶಕ ಪುರುಷೋತ್ತಮ ಎಸ್.ಕೋಟ್ಯಾನ್, ಸಮಾಜ ಸೇವಕರಾದ ಗೋಪಾಲ್ ಪಾಲನ್ ಮಲಾಡ್, ಶಂಕರ್ ಕೆ.ಸುವರ್ಣ ಖಾರ್, ಶಿವರಾಮ ಪೂಜಾರಿ, ಮಾಧವ ಐಲ್, ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆಯರಾದ ಪ್ರಭಾ ಕೆ.ಬಂಗೇರ ಮತ್ತು ಗಿರಿಜಾ ಚಂದ್ರಶೇಖರ್, ಜೊತೆ ಕಾರ್ಯದರ್ಶಿಗಳಾದ ಜಯಂತಿ ಎಸ್.ಕೋಟ್ಯಾನ್ ಮತ್ತು ಕುಸುಮಾ ಅವಿೂನ್, ಯಶೋಧಾ ಎನ್.ಟಿ ಪೂಜಾರಿ, ಪೂಜಾ ಪುರುಷೋತ್ತಮ್ ಕೋಟ್ಯಾನ್ ಸೇರಿದಂತೆ ಅಸೋಸಿಯೇಶನ್‍ನ ವಿವಿಧ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು, ಸದಸ್ಯರನೇಕರು ಹಾಜರಿದ್ದು ಶಿಬಿರದ ಫಲಾನುಭವ ಪಡೆದರು.

ಮಹಿಳಾ ವಿಭಾಗಧ್ಯಕ್ಷೆ  ಜಯಂತಿ ವಿ.ಉಳ್ಳಾಲ್ ಸ್ವಾಗತಿಸಿ ಅತಿಥಿüವರ್ಯರಿಗೆ ಹಾಗೂ ವೈದ್ಯಾಧಿಕಾರಿಗಳಿಗೆ ಪುಷ್ಪಗುಪ್ಛಗಳನ್ನೀಡಿ ಗೌರವಿಸಿದರು. ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಗೌರವ ಕಾರ್ಯದರ್ಶಿ ಸುಮಿತ್ರಾ ಎಸ್.ಬಂಗೇರ ಧನ್ಯವದಿಸಿದರು.

ಶೀಘ್ರದಲ್ಲೇ ಬಿಡುಗಡೆ ಗೊಳ್ಳುವ `ಡಾ| ಶಿವರಾಮ ಭಂಡಾರಿ ಜೀವನ ಚರಿತ್ರೆ’ ಕೃತಿಗೆ
ಶುಭಾರೈಕೆ ಯಾಚಿಸಿ ಡಾ| ವೀರೇಂದ್ರ ಹೆಗ್ಗಡೆ ಅವರಿಗೆ ಸಾಂಪ್ರದಾಯಿಕ ಮನವಿ
ಮುಂಬಯಿ,ಎ.02: ಹೇರ್ ಸ್ಟೈಲೋ ಮೂಲಕ ಅಂತರಾಷ್ಟ್ರೀಯ ಹಿರಿಮೆಗೆ ಪಾತ್ರರಾಗಿರುವ ಮುಂಬಯಿನ ಖ್ಯಾತ ಕೇಶ ವಿನ್ಯಾಸಕಾರ, ಶಿವಾ’ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಕಳೆದ ಶುಕ್ರವಾರ (ಮಾ.29) ಭೇಟಿಗೈದು ಶೀಘ್ರದಲ್ಲೇ ಬಿಡುಗಡೆ ಗೊಳ್ಳುವ ತನ್ನ ಜೀವನ ಚರಿತ್ರೆ ಕೃತಿಗೆ ಶುಭಾರೈಕೆ ಯಾಚಿಸಿ ಸಾಂಪ್ರದಾಯಿಕವಾಗಿ ಬಿನ್ನಹ ಗೈದರು.

ಕಾರ್ಕಳ ಅತ್ತೂರು ಗ್ರಾಮದ ಹಳ್ಳಿ ಹುಡುಗನೋರ್ವ ತನ್ನ ಸಮುದಾಯದ ಕುಲಕಸಬು ಕೇಶ ಛೇದನವನ್ನೇ ಜೀವನ ಉದ್ಯಮವಾಗಿಸಿ ವೃತ್ತಿನಿಷ್ಠೆಯಿಂದಲೇ ಗೌರವ ಡಾಕ್ಟರೇಟ್‍ಗೆ ಭಾಜನರಾಗಿ ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವ  ಶಿವರಾಮ ಭಂಡಾರಿ ಅವರ ಸಾಧನೆಗೆ ಡಾ| ಹೆಗ್ಗಡೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಪೆÇ್ರ| ಎಂ.ಪಿ ಶ್ರೀನಾಥ್ ಅರಸಿನಮಕ್ಕಿ, ಪತ್ರಕರ್ತ ಆರೀಫ್ ಕಲಕಟ್ಟಾ ಉಪಸ್ಥಿತರಿದ್ದರು.

Ugadi Swara Sambhrama- Zee Kannada to present a musical evening

Welcoming auspiciousness and the festive fervor, leading General Entertainment Channel – Zee Kannada is all set to celebrate Ugadi with a grand celebration at UgadiSwaraSambhrama. The musical event will bring together the wonderous musical talent of the Kannada industry in a never-seen-before avatar as they present the perfect blend of joy and entertainment to your homes. The program will be telecasted between 8:00 PM and 11:00 PM on 6th and 7th April (Saturday & Sunday) exclusively on Zee Kannada.

Hosted by the exuberant Anushree, the program will witness the coming together of leading musicians including Arjun Janya, Rajesh Krishnan, Vijaya Prakash and Maha Guru Hamsalekha. The performances of the talented Sa Re Ga Ma Pa prodigies from Season 15 and Season 16 including Keerthan Holla, Nihal Tauro, Vijeth, Hanumantha, Chennappa and Sunil will be the highlight of the program.

Vijay Prakash, Arjun Janya and Rajesh Krishnan are not only taking part in this blissful event as judges but also will be performing to amuse the audience. The program will also encompass a special dance performance by the Anushree.

The event, which was held at the Nandi Link grounds in Bengaluru, will also showcase a special announcement wherein Hanumantha has been selected as the Election Commission’s Brand Ambassador for Haveri district with further details being unveiled during the telecast of the program.

ನವಿಮುಂಬಯಿ ಕನ್ನಡ ಸಂಘÀದಲ್ಲಿ `ಯಕ್ಷಗಾನದ ಸಮಗ್ರ ಶಿಕ್ಷಣ’ ಉದ್ಘಾಟನೆ
ಯಕ್ಷಗಾನದ ಅರ್ಥ ಬಹು ವ್ಯಾಪಕವಾದುದು : ಆನಂದ ಭಟ್ ಪುಣೆ
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುಂಬಯಿ, ಎ.01: ಜಾತಿ, ಮತ-ಭೇದವನ್ನು ಮರೆತು ಎಲ್ಲರಿಗೂ ಸೆಳೆಯುವ ಏಕೈಕ ಕಲೆ ಅದು ನಮ್ಮ ನೆಚ್ಚಿನ ಯಕ್ಷಗಾನ. ಯಕ್ಷಗಾನ ಕಲೆಯನ್ನು ಒಂದು ಕಲೆಯಾಗಿ ಸ್ವೀಕರಿಸದೆ ಅದನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ನಿಟ್ಟಿನಲ್ಲಿಇಂದಿನ ಈ ಯಕ್ಷ ಶಿಕ್ಷಣವು ತುಂಬಾ ವಿಶೇಷವೆನಿಸುತ್ತದೆ. ಬಹಳ ಶ್ರದ್ಧೆಯಿಂದ ಯಕ್ಷಗಾನ ಕಲೆಯನ್ನು ಕಲಿಯುವ ಈ ಮಕ್ಕಳು ಅಪಾರವಾದ ಶ್ರಮವನ್ನು ಮಾಡಬೇಕು. ಯಕ್ಷಗಾನ ಇದರ ಅರ್ಥ ಬಹು ವ್ಯಾಪಕವಾಗಿದೆ. ಬಹು ವೈವಿಧ್ಯಮಯ ಅಭಿನಯವನ್ನು ಬಯಸುವ ಈ ಕಲೆ ಜನರನ್ನು ಹೊಂದುಗೂಡಿಸುವ ಶಕ್ತಿಯನ್ನು ಹೊಂದಿದೆ. ನಿಮ್ಮ ಆಚಾರ ವಿಚಾರ ಹಾಗೂ ನಮ್ಮ ಸಂಸ್ಕೃತಿ ಉಳಿದಿರುವುದು ಈ ನಮ್ಮ ಯಕ್ಷಗಾನ ಕಲೆ ಎಂದು ಹೇಳಲು ತಪ್ಪೇನು ಇಲ್ಲ ಎಂದು ಯಕ್ಷರಂಗದ ಮಹಾನ್ ಕಲಾವಿದ ದಿ| ಕುರಿಯ ವಿಠಲ ಶಾಸ್ತ್ರಿ ಅವರ ಸೋದರಳಿಯ, ಮದಂಗಲ್ಲು ಗುರು ಆನಂದ ಭಟ್ (ಪುಣೆ) ನುಡಿದರು.

ಇಂದಿಲ್ಲಿ ರವಿವಾರ ಸಂಜೆ ವಾಶಿ ಅಲ್ಲಿನ ನವಿಮುಂಬಯಿ ಕನ್ನಡ ಸಂಘದ ಎಂ.ಬಿ ಕುಕ್ಯಾನ್ ಸಭಾಗೃಹದಲ್ಲಿ ಯಕ್ಷಗಾನ ಪರಂಪರೆಯನ್ನು ಉಳಿಸುವ ಮತ್ತು ಬೆಳೆಸುವ ದೃಷ್ಟಿಯಿಂದ ಯಕ್ಷ ಶಿಕ್ಷಣವಾಗಿಸಿ ಯಕ್ಷಗಾನದ ಸಮಗ್ರ ಶಿಕ್ಷಣ ವತಿಯಿಂದ ಪದವೀಧರ ಯಕ್ಷಗಾನ ಸಮಿತಿ ಮತ್ತು ನವಿಮುಂಬಯಿ ಕನ್ನಡ ಸಂಘ ವಾಶಿ ಸಂಸ್ಥೆಗಳು ಆಯೋಜಿಸಿದ್ದ `ಯಕ್ಷಗಾನದ ಸಮಗ್ರ ಶಿಕ್ಷಣ’ ಉದ್ಘಾಟಿಸಿ ಆನಂದ ಭಟ್ ಮಾತನಾಡಿದರು.

ನವಿಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಬಿ.ಎಚ್ ಕಟ್ಟಿ ಅಧ್ಯಕ್ಷೀಯ ಭಾಷಣಗೈದು ಕಳೆದ ಸುಮಾರು ನಾಲ್ಕು ದಶಕಗಳಿಂದÀ ನವಿಮುಂಬಯಿ ಕನ್ನಡ ಸಂಘ ಕನ್ನಡಿಗರ ಕೈಂಕರ್ಯವನ್ನು ಮಾಡಿತ್ತಾ ಬಂದಿದೆ ಎಂದು  ಸಂಘದ ಇದುವರೆಗಿನ ಕಾರ್ಯವೈಖರಿಯನ್ನು ವಿವರಿಸಿದರು.

ಪದವೀಧರ ಯಕ್ಷಗಾನ ಸಮಿತಿ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಮಾತನಾಡಿ ಯಕ್ಷಗಾನ ಕಲೆಯು ತುಳು ಕನ್ನಡಿಗರ ಉಸಿರಾಗಿದೆ. ವಾದನ, ಗಾಯನ, ನರ್ತನ, ವೇಷಭೂಷಣಗಳಿದ ಜನಮನ ಆಕರ್ಷಿಸುವ ಏಕೈಕ ಕಲೆ ಯಕ್ಷಗಾನ ಆಗಿದೆ. ಅದು ಬರೀ ಕಲೆಯಾಗಿ ಉಳಿಯದೆ ತುಳು ಕನ್ನಡಿಗರ ಆರಾಧನೆಯ ಕಲೆಯಾಗಿ ಈಗಲೂ ಮುಂಬಯಿಯ ಲ್ಲಿ ವಿಜೃಂಭಣೆಯಿಂದ ಮೆರೆಯುತ್ತಿದೆ. ಇಂತಹ ಬಹು ಪರಂಪರೆಯುಳ್ಳ ಕಲೆ ಮುಂದಿನ ಪೀಳಿಗೆಗೆ ತಿಳಿಯುವಂತೆ ಮಾಡುವುದು, ಅವರಿಗೆ ಯಕ್ಷಗಾನ ಕಲೆಯ ಮಹತ್ವವನ್ನು ಕಲಿಸಿಕೊಡುವುದು ಓರ್ವ ಯಕ್ಷಗಾನ ಕಲಾವಿದನಾದ ನನಗೆ ಹೆಮ್ಮೆ ಅನಿಸುತ್ತದೆ. ಯಕ್ಷಗಾನ ಕಲೆಯಲ್ಲಿ ಆಸಕ್ತಿ ಇದ್ದವರಿಗೆ ಅವಕಾಶವನ್ನು ಕಲ್ಪಿಸಿ ಕೊಡುವುದು ಯಕ್ಷಗಾನದ ಸಮಗ್ರ  ಶಿಕ್ಷಣದ ಉದ್ದೇಶವಾಗಿದೆ. ಇಂದಿಲ್ಲಿ ಬಹಳಷ್ಟು ಜನ ಯಕ್ಷಗಾನ ಕುರಿತು ಶಿಕ್ಷಣ ಪಡೆಯುವ ನಿಮಿತ್ತ ನಿಮಗೆಲ್ಲರಿಗೂ ಶುಭಾಶಯಗಳನ್ನು ಅರ್ಪಿಸುತ್ತೇನೆ ಎಂದರು.

ಚೆಂಡೆ, ಮದ್ದಳೆ ಮತ್ತು ಭಾಗವತಿಕೆ ವಿಷಯದಲ್ಲಿ ಭಾಗವತ ಜಯಪ್ರಕಾಶ್ ನಿಡುವಣ್ಣಾಯ, ತೆಂಕುತಿಟ್ಟಿನ ಹೆಜ್ಜೆಗಾರಿಕೆ ವಿಷಯದಲ್ಲಿ ವಾಸುದೇವ ಮಾರ್ನಾಡ್, ಬಡಗುತಿಟ್ಟಿನ ಹೆಜ್ಜೆಗಾರಿಕೆ ವಿಷಯದಲ್ಲಿ ರಮೇಶ್ ಬಿರ್ತಿ, ಯಕ್ಷಗಾನ ಸಾಹಿತ್ಯ, ಅರ್ಥಗಾರಿಕೆ ಮತ್ತು ಮುಖವರ್ಣಿಕೆ ವಿಷಯ ಹೆಚ್.ಬಿ.ಎಲ್ ರಾವ್ ಮಾಹಿತಿ ನೀಡಿದರು.

ಗುರು ನಾರಾಯಣ ಯಕ್ಷಗಾನ ಮಂಡಳಿ, ಯಕ್ಷಗಾನ ಕಲಾವಿದರುಗಳಾದ ವಿದುಷಿ ಸಹನಾ ಭಾರದ್ವಾಜ್, ಡಾ| ಸುರೇಂದ್ರ ಕುಮಾರ್ ಹೆಗ್ಡೆ, ವೈ.ವಿ ಮಧುಸೂದನ್ ರಾವ್, ಎಸ್.ಕೆ ಸುಂದರ್, ಸಾ.ದಯಾ, ನಿತ್ಯಾನಂದ ಕೋಟ್ಯಾನ್, ಬೈಲೂರು ಬಾಲಚಂದ್ರ ರಾವ್, ಎಂ.ಬಿ ಕುಕ್ಯಾನ್, ಸೋಮನಾಥ ಕರ್ಕೇರ, ಕರುಣಾಕರ ಎನ್.ಶೆಟ್ಟಿ, ದುರ್ಗಪ್ಪ ಕೋಟ್ಯಾವರ್ ಮತ್ತಿತರರು ಉಪಸ್ಥಿತರಿದ್ದರು.

ಈ ಶುಭವಸರದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಸಲಾಗಿದ್ದು, ದಿನೇಶ್ ಚಡಗ ಪೂಜಾಧಿಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿದರು. ಸುಧೇಶ್ ಕರ್ಕೇರ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು. ನವಿಮುಂಬಯಿ ಕನ್ನಡ ಸಂಘದ ಕಾರ್ಯದರ್ಶಿ ಸುಜಾತಾ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ಎನ್.ರೈ ವಂದನೆಗೈದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi