ದ್ವೀಪರಾಷ್ಟ್ರ ಬಾಹ್ರೇಯ್ನ್‍ನ ಬೆಳ್ಳಿಪರದೆಯಲ್ಲಿ ವಿಜೃಂಭಿಸಲಿದೆ `ದೇಯಿಬೈದೆತಿ’


Rons Bantwal
Kemmannu News Network, 04-04-2019 17:19:16


Write Comment     |     E-Mail To a Friend     |     Facebook     |     Twitter     |     Print


ದ್ವೀಪರಾಷ್ಟ್ರ ಬಾಹ್ರೇಯ್ನ್‍ನ ಬೆಳ್ಳಿಪರದೆಯಲ್ಲಿ ವಿಜೃಂಭಿಸಲಿದೆ `ದೇಯಿಬೈದೆತಿ’

ಮುಂಬಯಿ, ಎ.03: ಬಾಹ್ರೇಯ್ನ್ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಕಂಡುಕೇಳರಿಯದ ಅದ್ಭುತ ಕಥಾನಕ ಇದು ಪ್ರತಿಯೊಬ್ಬ ತಾಯಿಯ ಸಹಾಸಗಾಥೆ, ತನ್ನ ದೇಹದ ರಕ್ತಬಸಿದು ಹೆತ್ತುಹೊತ್ತು ಸಲುಹುವತಾಯಿ ಎಂಬ ಕರುಣಾಮಯಿಯು ರಾಜ್ಯದ ಪ್ರಜೆಗಳ ಒಳಿತಿಗಾಗಿ ತನ್ನ ಪ್ರಾಣವನ್ನೇ ಅರ್ಪಣೆಗೈದ ಸಾಮಾನ್ಯ ಮಹಿಳೆಯ ಅಸಮಾನ್ಯ ವೀರಗಾಥೆ. ಈ ತುಳು ಚಿತ್ರವು ದ್ವೀಪರಾಷ್ಟ್ರ ಬಾಹ್ರೇಯ್ನ್‍ನಲ್ಲಿ ಇದೇ ಏಪ್ರಿಲ್.26ನೇÀ ಶುಕ್ರವಾರ ಸಂಜೆ 3.00 ಗÀಂಟೆಗೆ ಮನಮದಲ್ಲಿ ಇರುವ ಅಲ್ಹಮ್ರಾ ಸಿನಿಮಾ  ಚಿತ್ರಮಂದಿರದಲ್ಲಿಪ್ರದರ್ಶನ ಕಾಣಲಿದೆ.


ತುಳುನಾಡಿಗರ ರೋಚಕ ಇತಿಹಾಸವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯು ತುಳು ಚಿತ್ರರಂಗದಲ್ಲೇ ಮೊಟ್ಟಮೊದಲ ಬಾರಿಗೆ ಅದ್ಭುತವಾಗಿ ನಿರ್ಮಾಣಗೊಂಡ ಚಿತ್ರವೆಂದು ಭಾರಿ ಮೆಚ್ಚುಗೆ ವ್ಯಕ್ತಪಡಿಸಿ "ಯು" ಪ್ರಮಾಣಪತ್ರ ನೀಡಿದೆ.

2ಗಂಟೆ 50 ನಿಮಿಷಗಳ ಕಾಲ ಪ್ರೇಕ್ಷಕರನ್ನು 500 ವರ್ಷಗಳ ಹಿಂದಕ್ಕೆ ಕೊಂಡೊಯ್ಯುದು ಚಿಂತನೆಗೆ ಈಡುಮಾಡುವ ಈ ಚಿತ್ರವು ತಮ್ಮತಮ್ಮ ತಾಯಂದಿರ ತ್ಯಾಗಮಯ ಬದುಕನ್ನು ನೆನೆದು ಬಿಗಿದಪ್ಪಿ ರೋದಿಸುತ್ತಾ, ಯುವಪೀಳಿಗೆ ಜೀವನದ ಮಾರ್ಗದರ್ಶನವನ್ನು ನೀಡಲಿದೆ. ಕನ್ನಡ, ತಮಿಳು, ತುಳು ಚಿತ್ರರಂಗದಲ್ಲಿ ಸುಮಾರು 25 ವರ್ಷಗಳ ಕಾಲ ದುಡಿದು ಅನುಭವ ಹೊಂದಿರುವ ಸೂರ್ಯೋದಯ ಪೆರಂಪಳ್ಳಿ ನಿರ್ದೇಶನದ ಚೊಚ್ಚಲ ಚಲನಚಿತ್ರ ಇದಾಗಿದೆ.

ಈಚಿತ್ರಕ್ಕಾಗಿ 500 ವರ್ಷಗಳ ಹಿಂದಿನ ಕಾಲಕ್ಕೆ ಸರಿಹೊಂದುವ ಭವ್ಯ ಮನೆಗಳಸೆಟ್’ಗಳನ್ನು ನಿರ್ಮಿಸಲಾಗಿ ಆ ಕಾಲದ ಕರ್ನಾಟಕ ಕರಾವಳಿಗರ ಜನಜೀವನ, ಆಚಾರ ವಿಚಾರ, ಉಡುಗೆ ತೊಡುಗೆಗಳ ಓರಣಗಳನ್ನು, ತುಳುನಾಡಿನ ಅಗೋಚರ ಸಂಪ್ರದಾಯಗಳ ಕಟ್ಟುಪಾಡುಗಳನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದೆ. ಲಕ್ಷ್ಮಣ ಕೆ.ಅಮೀನ್ ಅರ್ಪಿಸುವ ಸಂಕ್ರಿಮೋಷನ್ ಪಿಕರ್ಸ್ ಬ್ಯಾನರ್‍ನಲ್ಲಿ ತಯಾರಾದ ಈ ಚಿತ್ರಕ್ಕೆ ದೇವ್‍ರಾಜ್ ಪಾಲನ್, ರಾಜ್ ಕೃಷ್ಣ, ಅಮಿತ್ ರಾವ್ ಅವರ ಸಹನಿರ್ದೇಶನವಿದ್ದು ಸಂಜೀವ ಪೂಜಾರಿ ಹೆರ್ಗ, ಕಿರಣ್ ಹೆಗೆ ್ಡಬಿಜ್ರಿ ಅವರ ನಿರ್ಮಾಣ ನಿರ್ವಹಣೆಯಿದೆ.

ಈ ಚಿತ್ರದಲ್ಲಿ ಕಂಚಿನಕಂಠ ಎಂದೇ ಖ್ಯಾತಿ ಪಡೆದ ಕರಾವಳಿಯ ಕಲಾವತಿ ದಯಾನಂದ್ ಅವರ ಜೊತೆಗೆ ಸೂರ್ಯೋದಯ ಪೆರಂಪಳ್ಳಿ, ಲಹರೀ ಕೋಟ್ಯಾನ್, ಸುರೇಶ್ ಸಾಲ್ಯಾನ್, ಕಾಲೇಶ್ ಅರವರ ಹಿನ್ನೆಲೆ ಗಾಯನವಿದೆ..ಭಾಸ್ಕರ್ ರಾವ್ ಸಂಗೀತ, ಮಣಿಕಾಂತ ಕದ್ರಿ ಅವರ ಹಿನ್ನೆಲೆ ಸಂಗೀತವಿದೆ. ರವಿ ಸುವರ್ಣ ಮತ್ತು ಹರೀಶ್ ಪೂಜಾರಿ ಕುಕ್ಕುಂಜೆ ಅವರ ಛಾಯಾಗ್ರಹಣ, ಮೋಹನ್ ಕಲ್ಸಂಕ ಸಂಕಲನದ ಜವಾಬ್ದಾರಿ  ನಿರ್ವಹಿಸಿದ್ದಾರೆ. ರವಿ ಪೂಜಾರಿ ಹಿರಿಯಡ್ಕ ಹಾಗೂ ದಿನೇಶ್ ಸುವರ್ಣ ರಾಯಿ ಅವರು ಕಲಾನಿರ್ದೇಶಕರಾಗಿ ಅದ್ಭುತವಾಗಿ ತಮ್ಮಕೈಚಳಕತೋರಿದ್ದಾರೆ.

ಉಮೇಶ್ ಪೂಜಾರಿ ಬೆಳ್ತಂಗಡಿ ಸಹನಿರ್ಮಾಪಕರಾಗಿದ್ದು, ಈ ಚಿತ್ರದ ಸಾಹಿತ್ಯ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ ಹಾಗೂ ನಿರ್ದೇಶನವನ್ನು ಸೂರ್ಯೋದಯ ಪೆರಂಪಳ್ಳಿ ನಿರ್ವಹಿಸಿದ್ದಾರೆ. ಈ ಚಿತ್ರದ ಟಿಕೇಟುಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಬಾಹ್ರೇಯ್ನ್ ಬಿಲ್ಲವಾಸ್ ಅಧ್ಯಕ್ಷ ಸುರೇಂದ್ರ ಉದ್ಯಾವರ ಮೊಬಾಯ್ಲ್ ಸಂಖ್ಯೆ  0097339582392 ಸಂಪರ್ಕಿಸಲು ಸಂಘಟಕರು ಕೋರಿದ್ದಾರೆ.   

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Welcome to Thonse Naturecure Hospital
View More

Veez Konkani Issue # 130Veez Konkani Issue # 130
A Letter to CM Yediyurappa from Jaya Shreekrishna Parisara Premi SamitiA Letter to CM Yediyurappa from Jaya Shreekrishna Parisara Premi Samiti
Udupi BasketUdupi Basket
Contact for Masks, Sanitizers, PPE kits and More..Contact for Masks,  Sanitizers, PPE kits and More..
LIVE STREAM OF MASSES - Holy week schedule from Abu DhabiLIVE STREAM OF MASSES - Holy week schedule from Abu Dhabi
Smparka Feb 2020Smparka Feb 2020
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India
Kemmann.com Face Book

Click here for Kemmannu Knn Facebook Link

Sponsored Albums