Brief Udupi News with pictures
Kemmannu News Network, 14-04-2019 19:27:06
ಶ್ರೀಕೃಷ್ಣ ಮಠದಲ್ಲಿ ಶ್ರೀರಾಮೋತ್ಸವದ ಪರ್ವಕಾಲದಲ್ಲಿ ಸಪ್ತೋತ್ಸವ ಸೇವೆ ನೀಡಿದ ಕುತ್ಯಾರು,ಇಂದ್ರಪುರದ ಶ್ರೀಮತಿ ಸುಮತಿ ಉಪಾದ್ಯಾಯ ಮತ್ತು ಮಕ್ಕಳನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಗೌರವಿಸಿ ಅನುಗ್ರಹಿಸಿದರು.
ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಂದ ಪ್ರತಿ ವರ್ಷ ಪಲಿಮಾರು ಮಠದಲ್ಲಿ ನಡೆಯುವ ವಸಂತ ಧಾರ್ಮಿಕ ಶಿಬಿರವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಯತಿಗಳಾದ ಶ್ರೀ ಸುವಿದ್ಯೇoದ್ರತೀರ್ಥ ಶ್ರೀಪಾದರು ಉದ್ಘಾಟಿಸಿದರು. ಇಂದಿನ ದಿನಗಳಲ್ಲಿ ಗಂಡು ಹೆಣ್ಣು ಬೇಧವಿಲ್ಲದೆ ಹಿರಿಯಕಿರಿಯರೆಲ್ಲರಿಗೂ ಅವಶ್ಯಕವಾದ ಶಾಲಾಪಠ್ಯದಲ್ಲಿ ಸಿಗದೇ ಇರುವ ನಮ್ಮ ಹಿಂದಿನವರ ಆಧ್ಯಾತ್ಮಿಕ ಸಂಪ್ರದಾಯ,ಇತಿಹಾಸ ಪುರಾಣಗಳನ್ನು ತಿಳಿದುಕೊಂಡು ನಮ್ಮ ಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳನ್ನು ನಾವೇ ನಡೆಸುವಂತಾಗಬೇಕೆಂದು ಇಂತಹ ಶಿಬಿರಗಳನ್ನು ನಡೆಸುತ್ತಿದ್ದು, ಎಲ್ಲರೂ ಭಾಗವಹಿಸಿ ಧನ್ಯರಾಗೋಣ ಎಂದು ಆಶೀರ್ವಚನ ನೀಡಿದರು.
ಶ್ರೀ ಸುವಿದ್ಯೇoದ್ರತೀರ್ಥ ಶ್ರೀಪಾದರು ಭಾಗವಹಿಸಿ ಶ್ರೀವಿದ್ಯಾಮಾನ್ಯತೀರ್ಥರ ಸಂಕಲ್ಪದಂತೆ ಇಪ್ಪತ್ತೆರಡು ವರ್ಷಗಳಿಂದ ನಡೆಯುತ್ತಿದೆ.ಈ ಶಿಬಿರವು ನಮ್ಮತೇಜಸ್ಸನ್ನು ವೃದ್ಧಿಸಿ ,ಧರ್ಮಾಚರಣೆಯ ಬಗ್ಗೆ ನಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಕಲಿಸಿದರೆ ಮುಂದಿನ ಪೀಳಿಗೆಗೆ ಸಂಪ್ರದಾಯ, ಆಚರಣೆಗಳು ಉಳಿಯುತ್ತದೆ. ಧರ್ಮಾಚರಣೆಯಿಂದ ಸಂಸ್ಕೃತಿ ಉಳಿಸಿ ದೇಶಕ್ಕೆ ಸುಭಿಕ್ಷೆ ಆಗುತ್ತದೆ ಎಂದು ಅನುಗ್ರಹ ಸಂದೇಶ ನೀಡಿದರು.
ಮಠದ ವಿದ್ವಾಂಸರಾದ ಕಲ್ಮಂಜೆ ವಾಸುದೇವ ಉಪಾಧ್ಯಾಯರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.
ಜಿಲ್ಲೆಯಲ್ಲಿ 2 ಅಂಗವಿಕಲ ಮತದಾನ ಕೇಂದ್ರ
ಉಡುಪಿ ಜಿಲ್ಲಾಡಳಿತದ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಎಪ್ರಿಲ್ 18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ , ಚುನಾವಣಾ ಆಯೋಗದ ನಿರ್ದೇಶನದಂತೆ, ಒಳಗೊಳ್ಳುವ ಹಾಗೂ ಸುಗಮ ಚುನಾವಣೆಗಳ ಆಶಯದ ನಿಟ್ಟಿನಲ್ಲಿ , ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್ ಅವರ ಮಾರ್ಗದರ್ಶನದಲ್ಲಿ, ಅಂಗವಿಕಲರಿಗಾಗಿ ವಿಶೇಷ ಸೌಲಭ್ಯಗಳುಳ್ಳ 2 ಮತಗಟ್ಟೆಯನ್ನು ಪ್ರಾರಂಭಿಸಲಾಗುತ್ತಿದೆ, ಈ ಮತಗಟ್ಟೆಗಳು ಅಂಗವಿಕಲ ಸಿಬ್ಬಂದಿಗಳಿಂದ ನಿರ್ವಹಿಸುವ ಮತಗಟ್ಟೆಗಳಾಗಿದ್ದು, ಇವುಗಳನ್ನು ಮಾದರಿ ಮತಗಟ್ಟೆಗಳನ್ನಾಗಿ ರೂಪಿಸಲಾಗುತ್ತಿದೆ.
ಜಿಲ್ಲೆಯಲ್ಲಿ 119 ಕುಂದಾಪುರ ವಿಧಾನಸಭಾ ಕ್ಷೇತ್ರದ ಭಾಗ 217 ಕೋಡಿ ಕನ್ಯಾಣ , ಗ್ರಾಮ ಪಂಚಾಯತ್ ಕಚೇರಿ, ಮತ್ತು 120 ಉಡುಪಿ ವಿಧಾನಸಭಾ ಕ್ಷೇತ್ರದ ಭಾಗ 152 ರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹನುಮಂತನಗೆ(ಪಶ್ಚಿಮಭಾಗ) ಪುತ್ತೂರು ಇಲ್ಲಿ ಅಂಗವಿಕಲ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಮತಗಟ್ಟೆಯಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡು, ಸುಗಮ ಚುನಾವಣೆ ನಡೆಸಲು ನೋಡೆಲ್ ಆಧಿಕಾರಿಗಳನ್ನು ನೇಮಿಸಲಾಗಿದೆ.
ಈ ಅಧಿಕಾರಿಗಳು ಅಂಗವಿಕಲ ಮತಗಟ್ಟೆಗಳಲ್ಲಿ ಸೂಕ್ತ ವಿದ್ಯುತ್ ವ್ಯವಸ್ಥೆ, ಫ್ಯಾನ್ ವ್ಯವಸ್ಥೆ, ವಿಕಲಚೇತನ ಸ್ನೇಹಿ ಶೌಚಾಲಯ ಹಾಗೂ ಸೂಕ್ತ ನೀರಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ರ್ಯಾಂಪ್ ವ್ಯವಸ್ಥೆ, ವೀಲ್ ಚೇರ್ ವ್ಯವಸ್ಥೆ, ಮತಗಟ್ಟೆಗೆ ಸ್ವಯಂ ಸೇವಕರ ನಿಯೋಜನೆ, ಸ್ವಯಂ ಸೇವಕರಿಗೆ ಗುರುತಿನ ಚೀಟಿ ವ್ಯವಸ್ಥೆ, ವಿಶೇಷ ಚೇತನರು ಮತ್ತು ಅಶಕ್ತರು ಮತಗಟ್ಟೆಗೆ ಬರಲು ಮತ್ತು ವಾಪಸ್ ಮನೆಗೆ ಹೋಗಲು ಸೂಕ್ತ ವಾಹನ ವ್ಯವಸ್ಥೆ, ವಾಹನ ನಿಲ್ಲಿಸಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಮತಗಟ್ಡೆಯ ಹೊರಗೆ ಮತದಾನ ಸಹಾಯಕೇಂದ್ರ ಸ್ಥಾಪನೆ ಕುರಿತು ಮತದಾನಕ್ಕೆ 2 ದಿನ ಮುಂಚೆ ಪರಿಶೀಲಿಸಿ ಎಲ್ಲಾ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.
ಅಲ್ಲದೇ ಈ ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ತುರ್ತು ಚಿಕಿತ್ಸೆಗಾಗಿ ಆರೋಗ್ಯ ಸಹಾಯಕಿಯರ ಮೂಲಕ ಪ್ರಥಮ ಚಿಕಿತ್ಸಾ ಕೇಂದ್ರ ಸ್ಥಾಪನೆ, ಮತದಾರರು ಕಾಯುವಿಕೆಯ ಸಮಯದಲ್ಲಿ ಕುಳಿತುಕೊಳ್ಳಲು ಕುರ್ಚಿ ಹಾಗೂ ನೆರಳಿನ ವ್ಯವಸ್ಥೆ, ಮತಗಟ್ಟೆಯ ನೆಲಕ್ಕೆ ಮ್ಯಾಟ್ ಅಳವಡಿಕೆ, ಅಂಗವಿಕಲರಿಗೆ ಅಗತ್ಯವಿರುವ ಸಾಧನ ಸಲಕರಣೆಗಳು, ಗ್ರಾಮೀಣ /ನಗರ ಪುನರ್ವಸತಿ ಕಾರ್ಯಕರ್ತರ ನಿಯೋಜನೆ,ಸಂಜ್ಞಾ ಭಾಷೆಯಲ್ಲಿ ಸಹಾಯ ಮಾಡಲು ಶಿಕ್ಷಕರ ನಿಯೋಜನೆ, ಪೋಟೋ ವೀಡಿಯೋ ಚಿತ್ರೀಕರಣ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಈ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ, ಸ್ವಯಂ ಸೇವಕರಿಗೆ ಮತ್ತು ನಗರ ಮತ್ತು ಗ್ರಾಮೀಣ ಪುರ್ನವಸತಿ ಕಾರ್ಯಕರ್ತರಿಗೆ, ಛಾಯಾಚಿತ್ರಗ್ರಾಹಕರಿಗೆ ಗುರುತಿನ ಚೀಟಿ ಹಾಗೂ ವಿಶೇಷಚೇತನ ಮತದಾರರ ಪ್ರಯಾಣದ ವಾಹನ ಕುರಿತು ಸ್ಟಿಕರ್ ಗಳನ್ನು ಸಿದ್ದಪಡಿಸಲಾಗಿದೆ.
ಅಂಗವಿಕಲ ಮತದಾರರಿಗೆ ಜಿಲ್ಲಾಡಳಿತದಿಂದ ಸೌಲಭ್ಯ
ಉಡುಪಿ ಲೋಕಸಭಾ ವ್ಯಾಪ್ತಿಗೆ ಸಂಬಂದಿಸಿದ, ಕುಂದಾಪುರ ವಿಧಾನಸಭಾ ವ್ಯಾಪ್ತಿಯ ಒಟ್ಟು 246 ಮತಗಟ್ಟೆಯಲ್ಲಿ , 143 ಮತಗಟ್ಟೆ ವ್ಯಾಪ್ತಿಯಲ್ಲಿ 1649 ವಿಕಲಚೇತನ ಮತದಾರರನ್ನು ಗುರುತಿಸಿದ್ದು, ಇದರಲ್ಲಿ 412 ಮಂದಿ ಮೂಳೆಗೆ ಸಂಬಂದಿಸಿದ, 113 ಮಂದಿ ಕಿವಿಗೆ ಸಂಬಂದಿಸಿದ, 95 ಮಂದಿ ಕಣ್ಣಿಗೆ ಸಂಬಂದಿಸಿದ ಮತ್ತು 1029 ಮಂದಿ ಇತರೆ ಅಂಗವಿಕಲತೆ ಹೊಂದಿದ ಮತದಾರರಿದ್ದು, ಅವರಿಗಾಗಿ 143 ವೀಲ್ ಚೇರ್, 222 ಮ್ಯಾಗ್ನಿಫೈಯಿಂಗ್ ಗ್ಲಾಸ್, 222 ಮಂದಿ ಸಹಾಯಕರನ್ನು ನೇಮಿಸಲಾಗಿದೆ.
ಉಡುಪಿ ವಿಧಾನಸಭಾ ವ್ಯಾಪ್ತಿಯ ಒಟ್ಟು 222 ಮತಗಟ್ಟೆಯಲ್ಲಿ , 115 ಮತಗಟ್ಟೆ ವ್ಯಾಪ್ತಿಯಲ್ಲಿ 1516 ವಿಕಲಚೇತನ ಮತದಾರರನ್ನು ಗುರುತಿಸಿದ್ದು, ಇದರಲ್ಲಿ 922 ಮಂದಿ ಮೂಳೆಗೆ ಸಂಬಂದಿಸಿದ, 142 ಮಂದಿ ಕಿವಿಗೆ ಸಂಬಂದಿಸಿದ, 133 ಮಂದಿ ಕಣ್ಣಿಗೆ ಸಂಬಂದಿಸಿದ ಮತ್ತು 319 ಮಂದಿ ಇತರೆ ಅಂಗವಿಕಲತೆ ಹೊಂದಿದ ಮತದಾರರಿದ್ದು, ಅವರಿಗಾಗಿ 115 ವೀಲ್ ಚೇರ್, 226 ಮ್ಯಾಗ್ನಿಫೈಯಿಂಗ್ ಗ್ಲಾಸ್, 226 ಮಂದಿ ಸಹಾಯಕರನ್ನು ನೇಮಿಸಲಾಗಿದೆ.
ಕಾಪು ವಿಧಾನಸಭಾ ವ್ಯಾಪ್ತಿಯ ಒಟ್ಟು 208 ಮತಗಟ್ಟೆಯಲ್ಲಿ , 117 ಮತಗಟ್ಟೆ ವ್ಯಾಪ್ತಿಯಲ್ಲಿ 1299 ವಿಕಲಚೇತನ ಮತದಾರರನ್ನು ಗುರುತಿಸಿದ್ದು, ಇದರಲ್ಲಿ 371 ಮಂದಿ ಮೂಳೆಗೆ ಸಂಬಂದಿಸಿದ, 189 ಮಂದಿ ಕಿವಿಗೆ ಸಂಬಂದಿಸಿದ, 91 ಮಂದಿ ಕಣ್ಣಿಗೆ ಸಂಬಂದಿಸಿದ ಮತ್ತು 648 ಮಂದಿ ಇತರೆ ಅಂಗವಿಕಲತೆ ಹೊಂದಿದ ಮತದಾರರಿದ್ದು, ಅವರಿಗಾಗಿ 117 ವೀಲ್ ಚೇರ್, 208 ಮ್ಯಾಗ್ನಿಫೈಯಿಂಗ್ ಗ್ಲಾಸ್, 208 ಮಂದಿ ಸಹಾಯಕರನ್ನು ನೇಮಿಸಲಾಗಿದೆ.
ಕಾರ್ಕಳ ವಿಧಾನಸಭಾ ವ್ಯಾಪ್ತಿಯ ಒಟ್ಟು 209 ಮತಗಟ್ಟೆಯಲ್ಲಿ , 149 ಮತಗಟ್ಟೆ ವ್ಯಾಪ್ತಿಯಲ್ಲಿ 1439 ವಿಕಲಚೇತನ ಮತದಾರರನ್ನು ಗುರುತಿಸಿದ್ದು, ಇದರಲ್ಲಿ 186 ಮಂದಿ ಮೂಳೆಗೆ ಸಂಬಂದಿಸಿದ, 204 ಮಂದಿ ಕಿವಿಗೆ ಸಂಬಂದಿಸಿದ, 174 ಮಂದಿ ಕಣ್ಣಿಗೆ ಸಂಬಂದಿಸಿದ ಮತ್ತು 875 ಮಂದಿ ಇತರೆ ಅಂಗವಿಕಲತೆ ಹೊಂದಿದ ಮತದಾರರಿದ್ದು, ಅವರಿಗಾಗಿ 149 ವೀಲ್ ಚೇರ್, 209 ಮ್ಯಾಗ್ನಿಫೈಯಿಂಗ್ ಗ್ಲಾಸ್, 209 ಮಂದಿ ಸಹಾಯಕರನ್ನು ನೇಮಿಸಲಾಗಿದೆ.
ಕಾಪು ವಿಧಾನಸಭಾ ಕ್ಷೇತ್ರದ ಸೀ ಶೋರ್ ಫ್ರೆಂಡ್ಸ್, ಎರ್ಮಾಳು ಬಡಾದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಶ್ರೀ ಪ್ರಮೋದ್ ಮಧ್ವರಾಜ್‍ರವರು ಮತ್ತು ಮಾಜಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆಯವರು ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡುತ್ತಿರುವುದು. ಅವರೊಂದಿಗೆ ಜಿಲ್ಲಾ ಜೆ.ಡಿ.ಎಸ್ ಅಧ್ಯಕ್ಷ ಯೋಗಿಶ್ ಶೆಟ್ಟಿ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ನವೀನ್‍ಚಂದ್ರ ಜೆ. ಶೆಟ್ಟಿ, ಸರಸು ಡಿ. ಬಂಗೇರಾ, ಅಬ್ದುಲ್ ಅಜೀಜ್, ಗಂಗಾಧರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ಶ್ರೀ ಪ್ರಮೋದ್ ಮಧ್ವರಾಜ್‍ರವರ ಸುಪುತ್ರಿ ಪ್ರತ್ಯಕ್ಷ ಪ್ರಮೋದ್ ಮಧ್ವರಾಜ್‍ರವರು ಉಡುಪಿಯ ವಿವಿದೆಡೆ ಕಾರ್ಖಾನೆ ಕಾರ್ಮಿಕರನ್ನು ಭೇಟಿಯಾಗಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ವೆರೋನಿಕಾ ಕರ್ನೇಲಿಯೋ, ಶ್ರೀಮತಿ ಜಯಲಕ್ಷ್ಮಿ ಪುತ್ರನ್, ಶ್ರೀಮತಿ ಜ್ಯೋತಿ ಹೆಬ್ಬಾರ್, ಶ್ರೀ ರಮೇಶ್ ಕಾಂಚನ್, ಶ್ರೀಮತಿ ಚಂದ್ರಿಕಾ ಶೆಟ್ಟಿ, ಹಿರಿಯ ಮುಖಂಡರಾದ ಪರ್ಕಳ ಶ್ರೀ ಅಬ್ದುಲ್ ಸಾಹೇಬ್, ಡಾ. ಸುನಿತಾ ಶೆಟ್ಟಿ, ಶ್ರೀ ಸುಕೇಶ್ ಕುಂದರ್ ಉಪಸ್ಥಿತರಿದ್ದರು.
ಪ್ರಮೋದ್ ಮಧ್ವರಾಜ್ ಗೆಲುವು ಖಚಿತ
ಲೋಕಸಭಾ ಕ್ಷೇತ್ರದ ಅಭಿವೃದ್ಧಿ ನಿಶ್ಚಿತ - ವಿನಯ ಕುಮಾರ್ ಸೊರಕೆ
ಈ ಚುನಾವಣೆ ದೇಶದ ಭವಿಷ್ಯವನ್ನು ತೀರ್ಮಾನಿಸಲಿದೆ. ದೇಶದಲ್ಲಿ ಭಾವನಾತ್ಮಕವಾಗಿ ಜನರನ್ನು ದಿಕ್ಕುತಪ್ಪಿಸುವ ಶಕ್ತಿಗಳನ್ನು ದೂರ ಇಟ್ಟು ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯುವವರಿಗೆ ಮತ ಚಲಾಯಿಸಬೇಕೆಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್-ಜೆ.ಡಿಎಸ್. ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜರ ಪರವಾಗಿ ಮಾಜಿ ಸಚಿವ ಶ್ರೀ ವಿನಯ ಕುಮಾರ್ ಸೊರಕೆಯವರು ಹೆಜಮಾಡಿ ಪೇಟೆ ಹಾಗೂ ಸುತ್ತಮುತ್ತ ಪಾದಯಾತ್ರೆ ಮೂಲಕ ಮತಯಾಚಿಸುತ್ತಾ ಹೇಳಿದರು. ದೇಶದ ಐದು ಕೋಟಿ ಬಡ ಕುಟುಂಬಕ್ಕೆ ಮಾಸಿಕ ರೂ. 6000 ನೀಡುವ ಮೂಲಕ ಕನಿಷ್ಠ ಆದಾಯ ಕಲ್ಪಸಲಾಗುವುದು. ಈ ಯೋಜನೆಯಡಿ ವಾರ್ಷಿಕ 72,000 ರೂಪಾಯಿ ನೀಡಲಾಗುವುದು. ರೈತರಿಗೆ ಸಾಲ ಮನ್ನಾ, ಸಾಲ ಮುಕ್ತಿ ಯೋಜನೆ, ಪ್ರತ್ಯೇಕ ಬಜೆಟ್ ಮಂಡನೆ, ಒಂದೇ ಸ್ಲ್ಯಾಬ್‍ನ ಅಡಿ ಜಿ.ಎಸ್.ಟಿ.ಯನ್ನು ತಂದು ರೈತರಿಗೆ ಹಾಗೂ ಬಡ ಮಧ್ಯಮ ಜನತೆ ಸಂತೃಪ್ತಿಯ ಜೀವನ ಸಾಗಿಸುವಂತೆ ಕಾಂಗ್ರೆಸ್ ಕ್ರಮ ಕೈಗೊಳ್ಳಲಿದೆ. ಯಾವುದೇ ಹೊಸ ಉದ್ಯಮಗಳಿಗೆ ಮೊದಲ 3 ವರ್ಷ ಅನುಮತಿ ಕಡ್ಡಾಯವನ್ನು ರದ್ದುಗೊಳಿಸಿ ಹೊಸ ಉದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುವುದು. 2020ರ ಒಳಗೆ ಖಾಲಿ ಇರುವ 22 ಲಕ್ಷ ಸರಕಾರಿ ಹುದ್ದೆಗಳ ಭರ್ತಿಯೊಂದಿಗೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಪ್ರಮೋದ್ ಮಧ್ವರಾಜ್ ಗೆಲುವು ಖಚಿತ, ಲೋಕಸಭಾ ಕ್ಷೇತ್ರದ ಅಭಿವೃದ್ಧಿ ನಿಶ್ಚಿತ ಎಂದು ವಿನಯ ಕುಮಾರ್ ಸೊರಕೆಯವರು ಮತಯಾಚನಾ ಸಂದರ್ಭದಲ್ಲಿ ಅಲ್ಲಲ್ಲಿ ನಡೆದ ಸಭೆಗಳಲ್ಲಿ ಹೇಳಿದರು.
ನಿಮ್ಮ ಚಾಕರಿಯವನಾಗಲು ತೆನೆಹೊತ್ತ ಮಹಿಳೆಗೆ ಮತ ನೀಡಿ - ಪ್ರಮೋದ್ ಮಧ್ವರಾಜ್
ಅಭ್ಯರ್ಥಿ ಪ್ರಮೋದ್ ಮಧ್ವರಾಜರು ಮಾತನಾಡುತ್ತಾ ಕಳೆದ ಐದು ವರ್ಷಗಳಿಂದ ಜನರ ಸಂಪರ್ಕಕ್ಕೆ ಸಿಗದೇ ಇದ್ದ ಸಂಸದರನ್ನು ನೀವು ಆಯ್ಕೆ ಮಾಡುತ್ತೀರೋ ಅನ್ನುವ ಪ್ರಶ್ನೆ ನಿಮ್ಮ ಮುಂದೆ ಇಡುತ್ತಿದ್ದೇನೆ. ನಾನು ಸಚಿವನಾಗಿದ್ದಾಗ ಎಲ್ಲಾ ವಿಧಾನಸಭಾ ಕ್ಷೇತ್ರದ ಜನತೆಯ ಸಮಸ್ಯೆಗೆ ಸ್ಪಂದಿಸಿರುತ್ತೇನೆ. ವಿಶೇಷವಾಗಿ ದಿನದ 24 ಗಂಟೆಗಳ ಅವಧಿಯೂ ವಿದ್ಯುತ್ ಪೂರೈಕೆಯಾಗುವಂತೆ ಪ್ರಯತ್ನ ಮಾಡಿದ್ದೇನೆ. ಮೀನುಗಾರರ ಸಮಸ್ಯೆ, ಮರಳುಗಾರಿಕೆ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಅಲ್ಪಸಂಖ್ಯಾತರ ಸಮಸ್ಯೆ ಅಲ್ಲದೆ ಪ್ರಮುಖ ಸಮಸ್ಯೆಗಳನ್ನು ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ವಿನಯ ಕುಮಾರ್ ಸೊರಕೆಯವರು ಮಾಡಿರುತ್ತಾರೆ. ಇನ್ನು ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸೊರಕೆಯವರೊಂದಿಗೆ ಸೇರಿ ಕೋಟಿ-ಚೆನ್ನಯರಂತೆ ಕೆಲಸ ಕಾರ್ಯಗಳನ್ನು ಮಾಡುತ್ತೇವೆ. ನನ್ನ ಚಿಹ್ನೆ ತೆನೆಹೊತ್ತ ಮಹಿಳೆಗೆ ಮತವನ್ನು ನೀಡಬೇಕೆಂದು ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಮೈತ್ರಿ ಅಭ್ಯರ್ಥಿಯಾದ ಪ್ರಮೋದ್ ಮಧ್ವರಾಜರು ಜನರಲ್ಲಿ ವಿನಂತಿಸಿಕೊಂಡರು. ಅವರೊಂದಿಗೆ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ, ಎಂ.ಎ. ಗಪೂರ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಅಜೀಜ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ, ಸರಸು ಡಿ. ಬಂಗೇರಾ, ನವೀನ್‍ಚಂದ್ರ ಸುವರ್ಣ, ವಿಶ್ವಾಸ್ ವಿ. ಅಮೀನ್, ಎಂ.ಪಿ. ಮೊಯಿದಿನಬ್ಬ, ಗಣೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಕೇಂದ್ರದ ತಪ್ಪು ಆರ್ಥಿಕ ನೀತಿಯಿಂದ ಗೋಡಂಬಿ ಕಾರ್ಖಾನೆಗಳು ಸಂಕಷ್ಟದಲ್ಲಿ- ಪ್ರಮೋದ್ ಮಧ್ವರಾಜ್
ಉಡುಪಿ ಜಿಲ್ಲೆಯಲ್ಲಿ ಸಾವಿರಾರು ಮಹಿಳೆಯರು ಗೋಡಂಬಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರಕಾರ ಇರುವಾಗ ಗೋಡಂಬಿ ಉದ್ಯಮವು ಒಳ್ಳೆಯ ರೀತಿಯಲ್ಲಿ ನಡೆಯುತ್ತಿತ್ತು. ಇಂದು ಕೇಂದ್ರದ ತಪ್ಪು ಆರ್ಥಿಕ ನೀತಿಯಿಂದ ಜಿ.ಎಸ್.ಟಿ ಹಾಗೂ ನೋಟ್ ಬ್ಯಾನ್ ನಂತರ ಶೇ. 60 ಗೋಡಂಬಿ ಕಾರ್ಖಾನೆಗಳು ತೊಂದರೆಯಲ್ಲಿವೆ. ಪ್ರಸ್ತುತ ಕಾರ್ಯಚರಿಸುತ್ತಿರುವ ಕಾರ್ಖಾನೆಗಳು ಕೂಡಾ ನೌಕರರಿಗೆ ಪದೇ ಪದೇ ರಜೆ ಕೊಟ್ಟು ಸಾವಿರಾರು ಮಹಿಳೆಯರಿಗೆ ಉದ್ಯೋಗ ಇಲ್ಲದ ಪರಿಸ್ಥಿತಿ ಉಂಟಾಗಿದೆ. ವಿಶೇಷವಾಗಿ ಕಾರ್ಕಳ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ಗೋಡಂಬಿ ಕಾರ್ಖಾನೆಯಲ್ಲಿ ಉದ್ಯೋಗದಲ್ಲಿದ್ದಾರೆ. ಯುವಕರಿಗೆ ಈಗಾಗಲೇ ಕೆಲಸವಿಲ್ಲ. ಮಹಿಳೆಯರಿಗೆ ಈಗ ಇದ್ದ ಕೆಲಸವೂ ಇಲ್ಲವಾದರೆ ಬದುಕು ಕಷ್ಟಕರವಾಗಲಿದೆ. ಇದನ್ನು ಮನಗಂಡು ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದಾರೆ. ರಾಹುಲ್ ಗಾಂಧಿಯವರು ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಬಂದಲ್ಲಿ ಘೋಷಿಸಿದ ನ್ಯಾಯ್ ಯೋಜನೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಿ.ಪಿ.ಎಲ್. ಕುಟುಂಬದ ಓರ್ವ ಮಹಿಳೆಯ ಖಾತೆಗೆ ತಿಂಗಳಿಗೆ ನೇರ ನಗದು 6000 ರೂಪಾಯಿ, ವರ್ಷಕ್ಕೆ ಒಟ್ಟು 72,000 ರೂಪಾಯಿಯನ್ನು ಪಾವತಿಸುವ ಕಾರ್ಯಕ್ರಮದಿಂದ ಆರ್ಥಿಕವಾಗಿ ಮಹಿಳೆ ಸಬಲವಾಗಲು ಸಹಕಾರಿಯಾಗಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಮೈತ್ರಿ ಪಕ್ಷದ ಅಭ್ಯರ್ಥಿಯ ಚಿಹ್ನೆಯಾದ ತೆನೆಹೊತ್ತ ಮಹಿಳೆಗೆ ಮತವನ್ನು ನೀಡಬೇಕಾಗಿ ಶ್ರೀ ಗೋಪಲ ಭಂಡಾರಿಯವರು ವಿನಂತಿಸಿದರು. ಗತಕಾಲದ ಮನಮೋಹನ್ ಸಿಂಗ್ ಸರಕಾರವಿರುವಾಗ ಇದ್ದ ಆರ್ಥಿಕ ಸುಸ್ಥಿತಿ ಪರಿಸ್ಥಿತಿಯನ್ನು ಪುನರಪಿ ದೇಶದಲ್ಲಿ ಅನುಷ್ಠಾನಿಸಲು, ಗೇರುಬೀಜ ಕಾರ್ಖಾನೆಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೆಜ್‍ಗಳನ್ನು ಕೇಂದ್ರ ಸರಕಾರದ ಮೂಲಕ ಪ್ರಾರಂಬಿಸಲು ತಾನು ಬದ್ಧ. ತನ್ನನ್ನು ತಾವು ಲೋಕಸಭೆಗೆ ಆಯ್ಕೆಗೊಳಿಸಬೇಕು ಎಂದು ಕಾರ್ಕಳದಲ್ಲಿ ವಿವಿಧ ಗೇರುಬೀಜ ಕಾರ್ಖಾನೆಯ ಕಾರ್ಮಿಕರನ್ನು ಭೇಟಿಯಾಗಿ ಪ್ರಮೋದ್ ಮಧ್ವರಾಜರು ಮತಯಾಚಿಸಿದರು. ಈ ಸಂದರ್ಭದಲ್ಲಿ ನೀರೆ ಕೃಷ್ಣ ಶೆಟ್ಟಿ, ಸುಧಾಕರ ಕೋಟ್ಯಾನ್, ಮಂಜುನಾಥ ಪೂಜಾರಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಶೇಖರ ಮಡಿವಾಳ, ಶಶಿಧರ ಶೆಟ್ಟಿ ಎಲ್ಲೂರು, ಆರಿಫ್ ಕಲ್ಲೊಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಅಂಬೇಡ್ಕರ್ ಜೀವನ ಪ್ರತೀ ಭಾರತೀಯನಿಗೂ ಆದರ್ಶ : ಕೋಟ
ಉಡುಪಿ : ಅತ್ಯಂತ ಕಡುಬಡ ಕುಟುಂಬದಲ್ಲಿ ಹುಟ್ಟಿ ಜೀವನದುದ್ದಕ್ಕೂ ಅಸೃಶ್ಯತೆಯ ನೋವನ್ನುಂಡು ಅದರ ವಿರುದ್ಧ ಹೋರಾಟ ಮಾಡಿ ಜೀವನದಲ್ಲಿ ಯಶಸ್ವಿ ಕಂಡ ಮಹಾನ್ ದಾರ್ಶನಿಕ ಡಾ. ಅಂಬೇಡ್ಕರ್ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಭೀಮ್ ರಾವ್ ಅಂಬೇಡ್ಕರ್‍ರವರ 128ನೇ ಜಯಂತಿಯನ್ನು ಆಚರಿಸುತ್ತಾ ತಿಳಿಸಿದರು.
ಅವರು ಪಡೆದ ಶಿಕ್ಷಣ, ಪದವಿ, ಅವರಲ್ಲಿದ್ದ ಅಭೂತವಾದ ಜ್ಞಾನ ಸಂಪತ್ತು, ಅವರು ಸಾಗಿ ಬಂದ ಹಾದಿ ಪ್ರತಿಯೊಬ್ಬರಿಗೂ ಭಾರತೀಯನಿಗೂ ಅದರ್ಶ ಎಂದು ಕೋಟ ಹೇಳಿದರು. ದೀಪ ಪ್ರಜ್ವಲನೆ ಮಾಡಿ ಮಾತನಾಡಿದ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಜಗತ್ತೇ ಮೆಚ್ಚುವಂತಹ ಸಂವಿದಾನವನ್ನು ರಚಿಸಿ ದೇಶಕ್ಕೆ ಕೊಡುಗೆ ನೀಡಿದ ಮಹಾಚೇತನ ಡಾ. ಅಂಬೇಡ್ಕರ್‍ರವರು ಚಿರಸ್ಮರಣೀಯರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗುವುದರೊಂದಿಗೆ, ಅವರು ಕಂಡ ಭವ್ಯ ಭಾರತ ಕನಸನ್ನು ನನಸಾಗಿಸುವ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ಯಶ್‍ಪಾಲ್ ಎ. ಸುವರ್ಣ, ಜಿಲ್ಲಾ. ಪಂ. ಅಧ್ಯಕ್ಷ ದಿನಕರ್ ಬಾಬು, ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷ ಹೇಮಂತ್ ಕುಮಾರ್, ರಾಜ್ಯ ಎಸ್.ಸಿ. ಮೋರ್ಚಾ ಕಾರ್ಯಕಾರಿಣಿ ಸದಸ್ಯ ವಾಸುದೇವ ಬನ್ನಂಜೆ, ಮನೋಹರ್ ಕಲ್ಮಾಡಿ, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಶೋಭಾರವರಿಂದ ನಾನು ರಾಜಕೀಯ ಕಲಿಯಬೇಕಾಗಿಲ್ಲ - ಸೋಲಿನ ಭೀತಿ ನನಗಿಲ್ಲ - ಪ್ರಮೋದ್ ಮಧ್ವರಾಜ್
ಯಡಿಯೂರಪ್ಪನವರು ಬಿಜೆಪಿ ಪಕ್ಷಯನ್ನು ತೊರೆದು ಕೆಜೆಪಿ ಕಟ್ಟಿದಾಗ ಶೋಭಾರವರು ಕರಂದ್ಲಾಜೆಯವರು ಕೂಡಾ ಬಿಜೆಪಿಗೆ ಡೈವೋರ್ಸ್ ನೀಡಿದ್ದರು. ತದನಂತರ ಕೆಜೆಪಿಯಿಂದ ರಾಜಾಜಿನಗರದಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋಲು ಕಂಡಿರುವುದು ಜನತೆ ಇನ್ನೂ ಮರೆತಿಲ್ಲ. ದುರ್ಬಲರನ್ನು ಬಲಾಡ್ಯರನ್ನಾಗಿ ಮಾಡುವ ಬಲಾಡ್ಯರನ್ನು ದುರ್ಬಲರನ್ನಾಗಿ ಮಾಡುವ ಶಕ್ತಿ ಜನತೆಗಿದೆ. ಆ ಬಲಾಢ್ಯ ಶಕ್ತಿಯೇ ನನಗೆ ದೃಡತೆ ನೀಡಿದೆ. ಹಾಲು ಜೇನಿನಂತೆ ಒಗ್ಗೂಡಿದ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದಲ್ಲಿ ಸ್ಪರ್ಧಿಸುವ ನನ್ನ ಬಗ್ಗೆ ಶೋಭಾರವರಿಗೆ ಮಾತನಾಡುವ ಯಾವ ನೈತಿಕತೆಯೂ ಉಳಿದಿಲ್ಲ. ಕಳೆದ ಬಾರಿ ಮೋದಿ ಅಲೆಯಲ್ಲಿ ಗೆದ್ದವರು ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಜನರ ಸಮಸ್ಯೆಗೆ ಸ್ಪಂದಿಸದೆ ಜನತೆಗೆ ನಿರಾಸೆ ಮೂಡಿಸಿರುವಾಗ ಈಗ ದ್ವಿತೀಯ ಬಾರಿಗೆ ಮೋದಿಗೆ ಮತ ನೀಡಿ ಎಂದು ಶೋಭಾ ಮತಯಾಚಿಸುತ್ತಿರುವುದು ಸೋಲಿನ ಭಯದಿಂದ ಅಲ್ಲವೇ?
ಕಾಂಗ್ರೆಸ್ ಪಕ್ಷದ ಧೀಮಂತ ನಾಯಕಿ ಇಂದಿರಾ ಗಾಂಧಿಯವರು ದೇಶಕ್ಕೆ ಕೊಟ್ಟ ಕೊಡುಗೆಯನ್ನು ಜನತೆ ಇಂದೂ ನೆನಪಿಸಿಕೊಳ್ಳುತ್ತದೆ. ಆದರೆ ಮೈತ್ರಿ ಪಕ್ಷದ ಅಭ್ಯರ್ಥಿಗಳು ಇಂದಿರಾ ಗಾಂಧಿಗೆ ಮತ ನೀಡಿ ಎಂದು ಮತಯಾಚಿಸುವುದಿಲ್ಲ. ಪ್ರಧಾನಿ ಮೋದಿಯವರ ಆಡಳಿತ ಅವಧಿಯಲ್ಲಿ ದೇಶ ಕಂಡ ಆರ್ಥಿಕ ಸಂಕಷ್ಟ ಮತ್ತು ನಿರುದ್ಯೋಗ ಸಮಸ್ಯೆಯ ಉಲ್ಬಣಗಳು ಹಾಗೂ ದೇಶದ ಗಡಿ ಭಾಗಗಳಲ್ಲಿ ಉಗ್ರಗಾಮಿಗಳ ನುಸುಳುವಿಕೆ, ಸೈನಿಕರ ಸಾವು ಮತ್ತು ವಿವಿಧ ಧರ್ಮೀಯರಲ್ಲಿ ನಡೆದ ಘರ್ಷಣೆಗಳು ನಡೆದಿರುವುದು ಬಲಿಷ್ಟ ಭಾರತದ ಸಂಕೇತವೇ? ಎಂದು ಶೋಭಾರವರು ಉತ್ತರಿಸಬೇಕಾಗಿದೆ. ಭಾರತ ದೇಶ ವಿಭಜನೆಗೊಂಡು ಸ್ವತಂತ್ರ ರಾಷ್ಟ್ರವಾಗಿ ಪರಿವರ್ತನೆಗೊಂಡ ನಂತರ ನೆರೆಯ ಶತ್ರು ರಾಷ್ಟ್ರಗಳಿಂದ ನಿರಂತರವಾಗಿ ನುಸುಳುವಿಕೆ ಹಾಗೂ ಪ್ರತಿರೋಧಗಳು ನಡೆದಾಗ ಈ ಹಿಂದೆ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಎದುರಿಸಿದ ಇತಿಹಾಸವಿದೆ. ಸಶಕ್ತ ಭಾರತ ನಿರ್ಮಾಣಗೊಳ್ಳುವಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ.
ಆಯುಷ್ಮಾನ್ ಭಾರತ ಯೋಜನೆಯು ಶೇ. 40ರಷ್ಟು ರಾಜ್ಯದ ಅನುದಾನ ಹಾಗೂ ಶೇ.60ರಷ್ಟು ಕೇಂದ್ರದ ಅನುದಾನಗಳೊಂದಿಗೆ ಜಂಟಿ ಸಹಭಾಗಿತ್ವದಲ್ಲಿ ಪ್ರಾರಂಭಗೊಂಡಿದೆ. ಒಂದು ಕುಟುಂಬಕ್ಕೆ 5 ಲಕ್ಷವರೆಗಿನ ವೈದ್ಯಕೀಯ ವೆಚ್ಚ ಭರಿಸುವ ಅಧ್ಬುತ ಯೋಜನೆಯಾಗಿದ್ದು ಕೋಟ್ಯಾಂತರ ಜನರು ಇದರ ಫಲಾನುಭವಿಗಳಾಗಿದ್ದಾರೆ. ಆದರೆ 2011ರಲ್ಲಿ ಸ್ವಾಸ್ಥ ಬಿಮಾ ಯೋಜನೆಯ ಅನುಸಾರ ಯಾರ ಹೆಸರು ನೋಂದಾವಣೆಯಾಗಿದೆಯೋ ಅವರು ಮಾತ್ರ ಫಲಾನುಭವಿಗಳಾಗಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಆಯುಷ್ಮಾನ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ರಾಜ್ಯದ ಎಲ್ಲಾ ಬಿ.ಪಿ.ಎಲ್. ಕಾರ್ಡ್ ಹೊಂದಿದ ಕುಟಂಬದವರಿಗೆ 5 ಲಕ್ಷ ರೂಪಾಯಿ ವರೆಗಿನ ವೈದ್ಯಕೀಯ ವೆಚ್ಚಗಳು ಉಚಿತವಾಗಿರುತ್ತದೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ 5 ವರ್ಷದ ಶಾಸಕತ್ವದ ಅವಧಿಯಲ್ಲಿ ಸುಮಾರು 21,000 ಕುಟಂಬಗಳಿಗೆ ಬಿಪಿಎಲ್ ಕಾರ್ಡ್ ಅನ್ನು ಸಿಗುವಂತೆ ಮಾಡಿದ್ದೇನೆ. ಅವರೆಲ್ಲರೂ ಕೂಡಾ ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಮಾತ್ರ ಎಪಿಎಲ್ ಕಾರ್ಡ್ ಹೊಂದಿದವರಿಗೆ 30 ಶೇಕಡಾ ಆರೋಗ್ಯ ವೆಚ್ಚವನ್ನು ಸರಕಾರ ಭರಿಸುತ್ತದೆ ಉಳಿದ 70 ಶೇಕಡಾ ವೆಚ್ಚವನ್ನು ಫಲಾನುಭವಿಗಳೇ ಭರಿಸಬೇಕಾಗುತ್ತದೆ. ದೇಶದ ಅಭಿವೃದ್ಧಿಗಾಗಿ ಹಾಗೂ ಭದ್ರತೆಗಾಗಿ ಕಾಂಗ್ರೆಸ್ ನೀಡಿದ ಕೊಡುಗೆಯನ್ನು ಕೇವಲ 5 ವರ್ಷಗಳ ಆಡಳಿತದಿಂದ ಮರೆಮಾಚಲು ಯಾರಿಂದಲೂ ಅಸಾಧ್ಯ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch - December 2020

Congratulations to Prathiksha Shetty, Kemmannu

Congratulations to the winners of Panchayat Elections from Kemmannu Parish.

Milarchi Lara December 2020

Flat for Rent at Gopalpura, Santhekatte, Udupi.

Autobiography of Richard Carvalho, Barkur/Mumbai.

Contact on Going Residential ProjectAl Nayaab Residency, Udupi

Choice Furniture vast household showroom opens at Santhekatte, Kallianpur

Focus Studio, Near Hotel Kidiyoor, Udupi

Canara Beach Restaurant, Hoode/Bengre, Udupi.

Delite Catering, Santhekatte


Kemmannu Channel -YouTube Click Here

Click here for Kemmannu Knn Facebook Link
Sponsored Albums
Exclusive
Kodi-Bengre @ CNN News: Ishita Malaviya, India’s first female surfer, is changing her country’s perception of the ocean

Obituary: Augustine Saldanha (90), Kambla Thotta, Kemmannu

Heavy rains continue to lash Udupi, 3 fishing boats capsize, water entered several houses. [Watch Video’s ]

Monthi Fest Konkani Mass and Celebration Live from St. Theresa’s Church, Kemmannu

Last Journey of Benedict P. D Souza (Benna Master)

Revisiting the lost cricketing glory of Kemmannu

Brahmakalabisheka, Maha Anna Santarpane and Religious meet at Bhadrakali Temple, Gudiyam Kemmannu.

Brief History of Christians in Kallianpur Varado:

Great Relief: Kemmannu road completed
