Brief Mumbai, Mangalore news with pictures


Rons Bantwal
Kemmannu News Network, 16-07-2019 17:51:46


Write Comment     |     E-Mail To a Friend     |     Facebook     |     Twitter     |     Print


ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಸಯಿ ಸ್ಥಳೀಯ ಕಚೇರಿಯಲ್ಲಿ  ನಡೆಸಲ್ಪಟ್ಟ ವಾರ್ಷಿಕ ಶೈಕ್ಷಣಿಕ ನೆರಾವು ವಿತರಣಾ ಕಾರ್ಯಕ್ರಮ 
ಮುಂಬಯಿ, ಜು.15: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಸಯಿ ಸ್ಥಳೀಯ ಕಚೇರಿಯಲ್ಲಿ ಕಳೆದ ಗುರುವಾರ ರಾತ್ರಿ ವಾರ್ಷಿಕ ಶೈಕ್ಷಣಿಕ ನೆರವು ವಿತರಣಾ ಕಾರ್ಯಕ್ರಮ  ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಸಯಿ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷ ಕೆ. ಜಿ ಅಮಿನ್ ವಹಿಸಿದ್ದರು.

ಮುಖ್ಯ ಅತಿಥಿüಯಾಗಿ  ಸತೀಶ್ (ಕೃಷ್ಣಪ್ಪ) ಪೂಜಾರಿ (ಸಂಗೀತ್ ಬಾರ್ ಎಂಡ್ ರೆಸ್ಟೋರೆಂಟ್), ಅತಿಥಿüಯಾಗಿ ಭಾರತ್ ಬ್ಯಾಂಕ್‍ನ ನಿರ್ದೇಶಕ ಕೆ.ಬಿ ಪೂಜಾರಿ ಮತ್ತು ಬಿಲ್ಲವರ ಅಸೋಸಿಯೇಶನ್‍ನ ವಿದ್ಯಾ ಉಪಸಮಿತಿ ಕಾರ್ಯಧ್ಯಕ್ಷ ವಿಶ್ವನಾಥ ತೋನ್ಸೆ ಮತ್ತು ಸದಸ್ಯ ಗಣೇಶ್ ಬಂಗೇರ ಮತ್ತು ಕೋಶಾಧಿಕಾರಿ ನಾಗೇಶ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸುಮಾರು 20 ಮಂದಿ ವಿದ್ಯಾಥಿರ್üಗಳಿಗೆ ಶೈಕ್ಷಣಿಕ ನೆರವು ವಿತರಿಸಿದರು.

ವಿಶ್ವನಾಥ ತೋನ್ಸೆ ಮಾತನಾಡುತ್ತಾ ನಮ್ಮ ಮಕ್ಕಳು ಶೈಕ್ಷಣಿಕ ನೆರವು ಪಡೆದರೂ ಮುಂದೆ ಸಮಾಜದಲ್ಲಿ  ಬಂದು ಕೆಲಸಮಾಡಬೇಕು. ನಮ್ಮ ಅಸೋಸಿಯೇಶನ್‍ನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮದಲ್ಲಿ ಹಾಜರು ಆಗಬೇಕು. ನೀವೇನಾದರೂ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಯಾವುದೇ ತೊಂದರೆಗಳಿದ್ದಲ್ಲಿ ನಿಮ್ಮಲ್ಲಿಯೇ ಯುವ ಪ್ರತಿಭೆ ಕುಶಾಲ್ ಸುವರ್ಣ ಇವರನ್ನು ಭೇಟಿ ಮಾಡಿ (ಅಚಿಡಿeeಡಿ ಉuiಜಚಿಟಿಛಿe) ಇದರ ಬಗ್ಗೆ ಚರ್ಚಿಸಿರಿ ಎಂದರು. 

ಕೆ.ಬಿ ಪೂಜಾರಿ  ಮಾತನಾಡಿ ಇಂದಿನ ಮೊಬೈಲ್ ಯುಗದ ಮಕ್ಕಳಿಗೆ ವಿದ್ಯೆಯ   ಪರಿತತ್ವವನ್ನು ತಿಳಿಸಿ ವಿದ್ಯೆಯಲ್ಲಿ ಪ್ರವೀಣರಾಗಿ ತಂದೆ ತಾಯಿಗೆ ಹಾಗೂ ಸಮಾಜದ ಕೀರ್ತಿಯನ್ನು ಬೆಳಗಿಸುವಂತೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ವಸಯಿ ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಮತ್ತು ಪರಿಸರದ ನಮ್ಮ ಸಮಾಜ ಬಾಂಧವರು ಬಹುಸಂಖ್ಯೆಯಲ್ಲಿ ಭಾಗವಹಿಸಿದ್ದು,  ಗೌರವ ಕಾರ್ಯದರ್ಶಿ ಲೊಹಿತಾಕ್ಷ ಎಸ್.ಅಂಚನ್ ಕಾರ್ಯಕ್ರಮ ನಿರೂಪಿಸಿದರು.ಪೂಜೆ, ತೀರ್ಥ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಮಾಪ್ತಿ ಕಂಡಿತು.

ಭಾರತದ ಪ್ರಥಮ ಹಜ್ಜ್ ತಂಡಕ್ಕೆ ಕೆ.ಸಿ.ಎಫ್ ಮಕ್ಕಾ ಹಜ್ಜ್ ಸ್ವಯಂ ಸೇವಕರಿಂದ ಭವ್ಯ ಸ್ವಾಗತ
ಮುಂಬಯಿ,ಜು.13: 2019ನೇ ಸಾಲಿನ ಪವಿತ್ರ ಹಜ್ಜ್ ನಿರ್ವಹಿಸಲು ಭಾರತದ ದೆಹಲಿಯಿಂದ ಅಗಮಿಸಿದ ಪ್ರಥಮ ಹಜ್ಜ್ ತಂಡವು ಇಂದು ಪವಿತ್ರ ಮದೀನಾ ಮುನವ್ವರದಿಂದ ಪುಣ್ಯ ಮಕ್ಕಾ ನಗರಕ್ಕೆ ತಲುಪಿದ್ದು. ಈ ಎಲ್ಲಾ ಹಾಜಿಗಳನ್ನು ಕನಾ೯ಟಕ ಕಲ್ಚರಲ್ ಪೌಂಡೇಷನ್ ಏಅಈಹಜ್ಜ್ ಸ್ಟಯಂ ಸೇವಕರು (ಊಗಿಅ) ಬಹಳ ಆತ್ಮೀಯವಾಗಿ ಸ್ವಾಗತಿಸಿದರು.
ಇದೇ ವೇಳೆ ಭಾರತದ ರಾಯಭಾರಿಯಾಗಿ ಆಗಮಿಸಿದ ಡಾ| ಆಸಫ್ ಸಯೀದ್ ಹಾಗೂ  ಭಾರತ ದೂತವಾಸ ಕಚೇರಿಯ ಸಲಹೆಗಾರರಾದ ನೂರ್ ರಹ್ಮಾನ್ ಶೇಖ್ ರವರನ್ನು ಕೆ.ಸಿ.ಎಫ್ ಮಕ್ಕತ್ತುಲ್ ಮುಕರ್ರಮಃ ಸೆಕ್ಟರ್ ಊಗಿಅ ತಂಡದ ವತಿಯಿಂದ ಪ್ರತ್ಯೇಕ ಹೂ ಗುಚ್ಚಗಳನ್ನು ನೀಡಿ ಸನ್ಮಾನಿಸಲಾಯಿತು.

ಅದೇ ರೀತಿ ಮಕ್ಕಾದ ವಸತಿ ಕೇಂದ್ರಗಳಲ್ಲಿ ಹಾಜಿಗಳ ಕೂಠಡಿ ಗಳಿಗೆ ಲಗೇಜು, ಸಾಮಾಗ್ರಿಗಳನ್ನು ಕೊಂಡೊಯ್ಯಲು ಸಹಾಯಕರಾಗುವುದರೊಂದಿಗೆ ಮುಂದಿನ ದಿನಗಳಲ್ಲಿ ಪುಣ್ಯ ಮಕ್ಕಾ ನಗರಗಳಿಗೆ ಆಗಮಿಸುತ್ತಿರುವ ಎಲ್ಲಾ ರಾಷ್ಟ್ರಗಳ ಹಜ್ಜಾಜಿಗಳ ಸಮಸ್ಯೆಗಳಿಗೆ ಸ್ಪಂದಿಸಲಿದ್ದು, ಮಸ್ಜುದುಲ್ ಹರಮ್ ಸೇರಿದಂತೆ ವಿವಿದ ಕಡೆಗಳಲ್ಲಿ ಅನಾರೋಗ್ಯದಿಂದ ಬಳಲುವ ಹಾಗೂ ತಮ್ಮ ವಸತಿಗಳಿಗೆ ಮರಳಲು ದಾರಿ ತಿಳಿಯದೇ ಆತಂಕಕ್ಕೆ ಒಳಗಾಗುವ ನಿಸ್ಸಹಾಯಕ ಹಾಜಿಗಳಿಗೆ ಮಾರ್ಗದರ್ಶನ ನೀಡಲು ಕೆಸಿಎಫ್ ನ ಊಗಿಅ ಸ್ವಯಂ ಸೇವಕರು ಮಕ್ಕಾ ಹಾಗೂ ಮದೀನಾದಲ್ಲಿ ನಿರಂತರ ಸೇವೆಯಲ್ಲಿರುತ್ತಾರೆ.

ಕದ್ರಿ ಕೃಷ್ಣ ಮಂದಿರಕ್ಕೆ ಪೇಜಾವರ ಶ್ರೀಗಳಿಂದ ಭೂಮಿ ಪೂಜೆ
ಕದ್ರಿ ಮಲ್ಲಿಕಟ್ಟೆಯಲ್ಲಿರುವ ಶ್ರೀ ಕೃಷ್ಣ ಮಂದಿರ ಪುನರ್‍ನಿರ್ಮಾಣಗೊಳಿಸುವ ಉದ್ದೇಶದಿಂದ ಪೇಜಾವರ ಮಠದ ಹಿರಿಯ ಸ್ವಾಮಿಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮಿಜಿಯವರು  ಭೂಮಿಪೂಜೆ ನೆರವೇರಿಸಿದರು. ಶುಭಾಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧÀನಾ ಪ್ರಕ್ರಿಯೆಗಳಿಗೆ ನೂತನ ಸಭಾಭವನವು ಬಳಕೆಯಾಗಲಿದ್ದು  ಅಧುನಿಕ ಸವಲತ್ತುಗಳನ್ನು ಒಳಗೊಂಡಂತೆ ಮಂದಿರವು ಪುನರ್‍ನಿರ್ಮಾಣ ಗೊಳ್ಳಲಿದೆ.  ಇದರ ನಿರ್ಮಾಣ ಕಾರ್ಯಕ್ಕೆ ಸರ್ವರ ಸಹಕಾರವನ್ನು ಶ್ರೀ ಗಳು ಬಯಸುತ್ತಾ ಶೀಘ್ರಾತಿಶೀಘ್ರವೇ ನವೀಕೃತ ಶ್ರೀ ಕೃಷ್ಣ ಮಂದಿರವು ರೂಪುಗೊಳ್ಳಲೆಂದು ಶುಭವನ್ನು ಹಾರೈಸಿದರು. ವೈದಿಕರಾದ ಉಚ್ಚಿಲ ಶ್ರೀಪತಿ ಭಟ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

ಶ್ರೀ ಕೃಷ್ಣ ಮಂದಿರದ ವಿಶ್ವಸ್ಥರಲ್ಲೋರ್ವರಾದ ಎಸ್, ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ಎಂ. ಬಿ, ಪುರಾಣಿಕ್ ಪ್ರಸ್ತಾವನೆಗೈದರು. ಈ ಸಂದರ್ಭ ಕೆ.ಎಸ್. ಕಲ್ಲೂರಾಯ, ಹರಿಕೃಷ್ಣ ಪುನರೂರು, ಸ್ಥಳದ ದಾನಿಗಳಾದ ಸುಧಾಕರ ಪಾಂಗಾಳ, ಡಾ| ಜಯಪ್ರಕಾಶ್,  ಡಾ| ಎಸ್. ಎಂ. ಶರ್ಮಾ, ಡಾ| ಕೃಷ್ಣ ಪ್ರಸಾದ್, ಶ್ರೀಮತಿ ಫ್ರೆನ್ನಿ ಡೇಸ್ಸಾ, ಇಂಜಿನಿಯರ್ ಶುಭಾನಂದ ರಾವ್, ವಿಪ್ರ ಸಮಾಜದ ಅಧ್ಯಕ್ಷ ರಾಮಕೃಷ್ಣ ರಾವ್, ಡಾ. ಪ್ರಭಾಕರ ಅಡಿಗ ಕದ್ರಿ,  ಮಟ್ಟಿ ಲಕ್ಷ್ಮೀ ನಾರಾಯಣ ರಾವ್, ಮಧುಸೂದನ ಕಣ್ವ ತೀರ್ಥ, ಡಾ. ಎಮ್. ಪ್ರಭಾಕರ ಜೋಶಿ, ಪ್ರಭಾಕರ ರಾವ್ ಪೇಜಾವರ, ಶ್ರೀಮತಿ ಪೂರ್ಣಿಮಾ ರಾವ್ ಪೇಜಾವರ, ಡಾ| ಶೋಧನ ರಾವ್ ಪೇಜಾವರ, ನರೇಶ್ ರಾವ್ ಬಿ. ಮೊದಲಾದವರು ಉಪಸ್ಥಿತರಿದ್ದರು.

ಜು.14: ಕಾರ್ಕಳ ದಾನಶಾಲೆಯ ಬೊಮ್ಮರಾಜ ಬಸದಿಯಲ್ಲಿ  ಕ್ಷುಲ್ಲಕ 105 ಧ್ಯಾನ ಸಾಗರ ಮಹಾರಾಜರ ಧ್ಯಾನ ವರ್ಷಾಯೋಗ ಆರಂಭ

 

ಮುಂಬಯಿ, ಜು.12: ಸಂತ ಶಿರೋಮಣಿ ಆಚಾರ್ಯಶ್ರೀ 108 ವಿದ್ಯಾಸಾಗರ ಮಹಾರಾಜರ ಪ್ರಿಯ ಶಿಷ್ಯರಾದ "ಜಿನವಾಣಿ ಪುತ್ರ, ಜೈನ ಶ್ರುತಜ್ಞಾನ ಕೋಶ, ಕ್ಷುಲ್ಲಕ 105 ಧ್ಯಾನ ಸಾಗರ ಮಹಾರಾಜರ ಧ್ಯಾನ ವರ್ಷಾಯೋಗ 2019 (ಚಾತುರ್ಮಾಸ)ವು ಕಾರ್ಕಳ ದಾನಶಾಲೆಯ ಬೊಮ್ಮರಾಜ ಬಸದಿಯಲ್ಲಿ ದಿನಾಂಕ ಇದೇ ಜು.14ನೇ ಆದಿತ್ಯವಾರದಿಂದ ಆರಂಭಗೊಳ್ಳಲಿದೆ.

ಆ ಪ್ರಯುಕ್ತ  ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ, ಆದಿತ್ಯವಾರ ಮಧ್ಯಾಹ್ನ 2.30ಕ್ಕೆ ಸರಿಯಾಗಿ  ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ಧ್ಯಾನ ಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ (ಶ್ರೀ ಜೈನ ಮಠ, ದಾನಶಾಲೆ, ಕಾರ್ಕಳ) ಮತ್ತು ಸ್ವಸ್ತಿ ಶ್ರೀ ಮಧಭಿನವ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ (ಶ್ರೀ ಜೈನ ಮಠ ಸಿಂಹನಗದ್ದೆ, ಎನ್.ಆರ್.ಪುರ)ಇವರ ದಿವ್ಯ ಉಪಸ್ಥಿತಿಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಜಿನವಾಣಿ ಪುತ್ರ ಕ್ಷುಲ್ಲಕ 105  ಧ್ಯಾನಸಾಗರ ಮಹಾರಾಜರು ಆಶಿರ್ವಚನ ನೀಡುವರು.

ಸದ್ಧರ್ಮ ಬಂಧುಗಳೆಲ್ಲರೂ ಧರ್ಮಲಾಭವನ್ನು ಪಡೆದು ಕೊಳ್ಳಬೇಕಾಗಿ ಶ್ರೀ ಜೈನ ಮಠ, ದಾನಶಾಲೆ, ಕಾರ್ಕಳ ಇದರ ವಕ್ತಾರರು ಈಮೂಲಕ ವಿನಂತಿಸಿದ್ದಾರೆ.

ಮೂಲ್ಕಿ ಸುಧಾಕರ ಸುವರ್ಣ  ನಿಧನ

ಮುಂಬಯಿ, ಜು.12: ಮೂಲ್ಕಿ ಕೊಯ್ಯಾರು ನಿವಾಸಿ ದಿವಂಗತ ಕಿಟ್ಟ ಪೂಜಾರಿ ಅವರ ಪುತ್ರ ಮೂಲ್ಕಿ ಸುಧಾಕರ ಸುವರ್ಣ (54.) ಅವರು ಸೌತ್ ಆಫ್ರಿಕಾ ದೇಶದ ಲಾಗೋಸ್‍ನಲ್ಲಿ ಜುಲೈ 04ರಂದು ನಿಧನರಾದರು.

ಮೃತರು ಪತ್ನಿ ಭಾರತೀಯ ಮಹಿಳಾ ಕಬ್ಬಡಿ  ತಂಡದ ಪ್ರಥಮ ನಾಯಕಿ ಸುಮತಿ ಪೂಜಾರಿ ಮತ್ತು ಓರ್ವ ಮಗಳನ್ನು ಅಗಲಿದ್ದಾರೆ.

ಮೃತರ ಅಂತಿಮ ಕ್ರಿಯೆಯು (ಜು13) ರಂದು ಶನಿವಾರ ಬೆಳಿಗ್ಗೆ 9.00 ಗಂಟೆಗೆ ಗೋರೆಗಾಂ ಓಶಿವಾರ ಅಲ್ಲಿನ ಸ್ಮಶಾನಭೂಮಿಯಲ್ಲಿ ಜರುಗಲಿದೆ. 


ಧರ್ಮಸ್ಥಳ: ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಖುಷಿ ಕಂಡ ವಿದ್ಯಾರ್ಥಿಗಳು
ಚಿತ್ರಶೀರ್ಷಿಕೆ: ಕೃಷಿ ಕಾಯಕದಲ್ಲಿ ತೊಡಗಿದ ವಿದ್ಯಾರ್ಥಿಗಳು (15 ಯು.ಜೆ.ಆರ್ 2,3,4)

ಉಜಿರೆ: ಧರ್ಮಸ್ಥಳದಲ್ಲಿರುವ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳು ಕೃಷಿ ಕಾಯಕದಲ್ಲಿ ತೊಡಗಿ ಖುಷಿ ಪಡೆದರು.
ತುಳು ಹಾಡುಗಳು, ಕೋಲಾಟ, ಜಾನಪದ ಹಾಡುಗಳು, ಕೆಸರು ಗದ್ದೆಯಲ್ಲಿ ಮಕ್ಕಳ ಆಟ-ಓಟ ಇತ್ಯಾದಿ ಕೃಷಿ ಚಟುವಟಿಕೆಗಳಿಂದ ವಿದ್ಯಾರ್ಥಿಗಳು ಸಂತೋಷ, ಸಂಭ್ರಮ ಅನುಭವಿಸಿದರು.
ಪಾಠದ ಕಾಟವಿಲ್ಲ. ವಿದ್ಯಾರ್ಥಿಗಳು ಹಾಡಿ ಕುಣಿದರು. ಕುಣಿದು ಹಾಡಿದರು. ನೇಜಿ ನೆಟ್ಟರು. ಸಂದಿ-ಪಾಡ್ದನ ಹಾಡಿದರು.
ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಸುಪ್ರಿಯಾ ಹಷೇಂದ್ರ ಕುಮಾರ್ ಮಕ್ಕಳ ಚಟುವಟಿಕೆಗಳನ್ನು ವೀಕ್ಷಿಸಿ ಅಭಿನಂದಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ, ಎಂ.ವಿ. ನೇತೃತ್ವದಲ್ಲಿ ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಸಹಕರಿಸಿದರು.

Comments on this Article
James Fernandes, Barkur/Chicago Tue, July-16-2019, 9:00
I still use my hands to eat, wash, and even to plant. The satisfaction of a full meal eating with hands, or using spoon and fork are vastly different. Rice Planters are useless in lungi size fields.
Agree[1]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Monti Fest - 2025 | Nativity of Mother Mary | St.
View More

289th Wilfynight at Milagres Church Ground, Kallianpur on 21st. Jan289th Wilfynight at Milagres Church Ground, Kallianpur on 21st. Jan
Vespers 2026 | Mount Rosary Church, Santhekatte | UdupiVespers 2026 | Mount Rosary Church, Santhekatte | Udupi
Annual Church Feast 2026 | Mount Rosary Church, Santhekatte | UdupiAnnual Church Feast 2026 | Mount Rosary Church, Santhekatte | Udupi
Final Journey of Cecilia Menezes( 88 Years ) | LIVE From Kemmannu | UdupiFinal Journey of Cecilia Menezes( 88 Years ) | LIVE From Kemmannu | Udupi
New year Mass | St. Theresa Church, Kemmannu | UdupiNew year Mass | St. Theresa Church, Kemmannu | Udupi
Christman Mass | St. Theresa Church, Kemmannu | UdupiChristman Mass | St. Theresa Church, Kemmannu | Udupi
Silver Jubilee Rev. Bishop Gerald John Mathias and Golden Jubilee Rev. Sr. Jaya Mathias, Milagres, UdupiSilver Jubilee Rev. Bishop Gerald John Mathias and Golden Jubilee Rev. Sr. Jaya Mathias, Milagres, Udupi
Annual Day Calebration 2025 | Carmel English School, KemmannuAnnual Day Calebration 2025 | Carmel English School, Kemmannu
Final Journey Of Francis Paul Quadros (59 Years) | LIVE From UdupiFinal Journey Of Francis Paul Quadros (59 Years) | LIVE From Udupi
Final Journey of Sudeep Sebastian Gordon Martis (55 years) | LIVE from KalmadyFinal Journey of Sudeep Sebastian Gordon Martis (55 years) | LIVE from Kalmady
Final Journey of Tyron Pereira (57 years) | LIVE from Kalmady, UdupiFinal Journey of Tyron Pereira (57 years) | LIVE from Kalmady, Udupi
Final Journey of Lawrence M Lewis (82 years) | LIVE from Milagres, Kallianpur, UdupiFinal Journey of Lawrence M Lewis (82 years) | LIVE from Milagres, Kallianpur, Udupi
Final Journey of Salvadore Fernandes (76 Years) | LIVE from Shirva | UdupiFinal Journey of Salvadore Fernandes (76 Years) | LIVE from Shirva | Udupi
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi