"ಆಟಿದ ಕೂಟ"ಕ್ಕೆ ಸ್ಟಾರ್ ಟಚ್ ಕೊಟ್ಟ ಮಂಗಳೂರಿನ ವಿದ್ಯಾರ್ಥಿಗಳು


WALTER MONTEIRO
Kemmannu News Network, 08-08-2019 13:50:59


Write Comment     |     E-Mail To a Friend     |     Facebook     |     Twitter     |     Print


ಇಂದಿನ ಫಲಾನುಭವಿಗಳೇ ಮುಂದೆ ದಾನಿಗಳಾಗುವಂತಾಗಬೇಕು
     ಬೆಳ್ಮಣ್ ಜೇಸಿಸ್ ಚಾರಿಟೇಬಲ್ ಟ್ರಸ್ಟ್‍ನ ವಿದ್ಯಾರ್ಥಿವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿದ್ದ ಬೆಳ್ತಂಗಡಿ ಸಂತ ಥಾಮಸ್ ಕಾಲೇಜಿನ ಪ್ರಾಂಶುಪಾಲ ಪಿ.ಪಿ ಜೋಸೆಫ್ ಹೇಳಿದರು. ಸುಮಾರು 32 ವರ್ಷಗಳಿಂದ ಟ್ರಸ್ಟ್ ಮಾಡುತ್ತಿರುವ ಈ ಸ್ತುತ್ಯ ಕಾರ್ಯ ಅಭಿನಂದನೀಯ ಎಂದರು. ಫಲಾನುಭವಿಗಳೇ ಮುಂದೆ ದಾನಿಗಳಾದಾಗ ಸಾಧನೆ ಸಾರ್ಥಕವಾಗುತ್ತದೆ ಎಂದರು.
    ಟ್ರಸ್ಟ್ ಅಧ್ಯಕ್ಷ ಎನ್. ತುಕರಾಮ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಸರ್ವರನ್ನೂ ಸ್ವಾಗತಿಸಿದರು. ಟ್ರಸ್ಟಿನ 44 ನಿಧಿಗಳಿಂದ ಪರಿಸರದ 190 ಮಕ್ಕಳಿಗೆ ಸುಮಾರು ರೂ. 1,35,000 ವಿದ್ಯಾರ್ಥಿ ವೇತನ ವಿತರಿಸಲಾಯಿತು.
    ಭಾರತೀಯ ಜೇಸಿಸ್‍ನ ವಲಯ 15ರ ಕಾರ್ಯದರ್ಶಿ ರಾಘವೇಂದ್ರ ಕರ್‍ವಾಲ್ ಅವರು ಕಾರ್ಯಕ್ರಮದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ರಸ್ಟ್ ನಿಧಿ ಇನ್ನಷ್ಟು ಬೆಳೆದು ಹೆಚ್ಚಿನ ಫಲಾನುಭವಿಗಳು ಪ್ರಯೋಜನ ಪಡೆಯುವಂತಾಗಲಿ ಎಂದರು.
    ವಲಯ ಪೂರ್ವ ಅಧ್ಯಕ್ಷ ರಾಜೇಂದ್ರ ಭಟ್ ಅವರು ಭಾರತೀಯ ಜೇಸಿಸ್‍ನ ಇತಿಹಾಸದಲ್ಲೇ ಬೆಳ್ಮಣ್ ಜೇಸಿಸ್ ಚಾರಿಟೇಬಲ್ ಟ್ರಸ್ಟ್ ಪ್ರಪ್ರಥಮವಾದುದು ಎನ್ನುತ್ತಾ ಕಾರ್ಕಳ ತಾಲೂಕಿನಲ್ಲಿ 10ನೇ ತರಗತಿಯ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಶರಣ್ಯಾ ಶೆಟ್ಟಿಯವರನ್ನು ಅಭಿನಂದಿಸಿದರು. ಟ್ರಸ್ಟ್ ವತಿಯಿಂದ ಶರಣ್ಯಾಳನ್ನು ಸನ್ಮಾನಿಸಲಾಯಿತು.
    ಬೆಳ್ಮಣ್ ದೊಡ್ಡಮನೆ ಶ್ರೀನಿವಾಸ ತಂತ್ರಿಯವರ ಸ್ಮರಣಾರ್ಥ ಅವರ ಪತ್ನಿ ಹಾಗೂ ಮಕ್ಕಳು ದತ್ತಿ ನಿಧಿಯೊಂದನ್ನು ಸ್ಥಾಪಿಸಿದರು. ಡಾ| ಪ್ರಕಾಶತ್ಮ ಮತ್ತು ಬೆಳ್ಮಣ್ ಕರಮಡ್ಕ ರಾಮಚಂದ್ರ ರಾವ್ ಇವರು ತಮ್ಮ ಹೆಸರಿನ ನಿಧಿಗಳ ಮೊತ್ತವನ್ನು ಹೆಚ್ಚಿಸಿದರು.
    ವೇದಿಕೆಯಲ್ಲಿ ಜೇಸಿಐ ಅಧ್ಯಕ್ಷೆ ಶ್ವೇತಾ ಸುಭಾಸ್, ಟ್ರಸ್ಟ್ ಗೌರವಾಧ್ಯಕ್ಷ ಜಯಂತ್ ರಾವ್ ಪಿ., ಕಾರ್ಯದರ್ಶಿ ಅನಿಲ್ ಕುಮಾರ್, ಖಚಾಂಚಿ ಗಣಪತಿ ಕಾಮತ್, ಯುವ ಜೇಸಿಐ ಅಧ್ಯಕ್ಷ ದೀಕ್ಷಿತ್, ಜೇಸೀರೆಟ್ ಅಧ್ಯಕ್ಷೆ ಪ್ರತಿಭಾ ಎನ್ ರಾವ್ ಉಪಸ್ಥಿತರಿದ್ದರು.
    ಟ್ರಸ್ಟ್ ದಾನಿಗಳು ಜೇಸಿ ಪೂರ್ವಾಧ್ಯಕ್ಷರುಗಳು, ಜೇಸಿ ವಲಯಾಧಿಕಾರಿಗಳು, ಶಿಕ್ಷಕರು ಸಹಕರಿಸಿದರು. ಕುಮಾರಿ ಶರಣ್ಯಾ  ಮತ್ತು ಗಣೇಶ್ ಫಲಾನುಭವಿಗಳ ಪರವಾಗಿ ಕೃತಜ್ಞತೆ ಸಲ್ಲಿಸುತ್ತಾ ಶುಭ ಹಾರೈಸಿದರು. ಜೇಸಿಐ ಕಾರ್ಯದರ್ಶಿ ಸರಿತಾ ದಿನೇಶ್ ಧನ್ಯವಾದ ಸಮರ್ಪಿಸಿದರು. ಗಣಪತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.


"ಆಟಿದ ಕೂಟ"ಕ್ಕೆ ಸ್ಟಾರ್ ಟಚ್ ಕೊಟ್ಟ ಮಂಗಳೂರಿನ ವಿದ್ಯಾರ್ಥಿಗಳು

03-08-2019
ಸದಾ ಓದು, ಆಟೋಟ ಅನ್ನುತ್ತಾ ಹಿರಿಯರಷ್ಟೇ ಬ್ಯುಸಿ ಇರುವ ಮಂಗಳೂರಿನ ವಿದ್ಯಾರ್ಥಿಗಳು ಅದ್ಭುತವಾದ "ಆಟಿಡೊಂಜಿ ಕೂಟ" ಕಾರ್ಯಕ್ರಮ ಆಯೋಜಿಸಿದ್ದರು. 23 ಬಗೆಯ ತುಳುನಾಡಿನ ಆಹಾರ ವೈವಿಧ್ಯಗಳು, ತುಳುನಾಡಿನ ಹಳೆಯ ವಸ್ತುಗಳ ಪ್ರದರ್ಶನ, ಬೂತದ ಅಣ , ಹುಲಿ ವೇಷ, ಬಂದ ಅತಿಥಿಗಳಿಗೆ ಸ್ವಾಗತ, ಟೇಬಲ್‍ಗೆ ಆಹಾರ ಆತಿಥ್ಯ, ಹೀಗೆ ತುಳು ಸಂಸ್ಕøತಿಯನ್ನು ಬಿಂಬಿಸುವ ಆಟಿದ ಕೂಟಕ್ಕೆ ಮಂಗಳೂರಿನ ನಿಟ್ಟೆ ವಿದ್ಯಾಸಂಸ್ಥೆಯ ಸರೋಶ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ ಕಾಲೇಜಿನಲ್ಲಿ ಸ್ಟಾರ್ ಹೋಟೆಲ್ ಟಚ್ ನೀಡಲಾಗಿತ್ತು. ಕಾಲೇಜ್ ವಿದ್ಯಾರ್ಥಿಸಂಘದ ಅಧ್ಯಕ್ಷ ನಿತಿನ್ ಕಾಮತ್, ವಿಧ್ಯಾರ್ಥಿ ಸಂಯೋಜಕ ಪುನೀತ್ ಮತ್ತು ಪ್ರಾದ್ಯಾಪಕರಾದ ಜೋಯೆಲ್ ಲೋಬೊ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಸಂಯೋಜನೆಗೊಂಡಿತ್ತು.

ತುಳು ಸಂಸ್ಕøತಿಯ ಅನಾವರಣ
ಬರುವ ಅತಿಥಿಗಳನ್ನು ಬೆಲ್ಲ-ನೀರು ಕೊಟ್ಟು ತುಳು ಸಂಸ್ಕøತಿಯ ಮೂಲಕ ಸ್ವಾಗತಿಸಲಾಯಿತು. ಪಿಂಗಾರಿ ಅನಾವರಣದ ಮೂಲಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಆಟಿ ಕಲೆಂಜ ಬರುವಾಗ ಮನೆಯ ಅನಿಷ್ಠ ಹೋಗಲೆಂದು ತಡಪೆಯಲ್ಲಿ ಅಕ್ಕಿ, ಬತ್ತ ಕೊಡುವ ಸಂಪ್ರದಾಯವೂ ನಡೆಯಿತು. ಒಟ್ಟಿನಲ್ಲಿ ಇಡೀ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕøತಿ ಅನಾವರಣಗೊಳ್ಳುತ್ತಿತ್ತು.
ಪಾನಕ, ಅರಶಿನ ಎಳೆಯ ಗಟ್ಟಿ, ಹಲಸಿನ ಗಟ್ಟಿ, ಕೊಟ್ಟಿಗೆ-ಹೆಸರುಬೇಳೆ ಗಸಿ, ತಿಮರೆ ಚಟ್ನಿ (ಒಂದೆಲಗ ಚಟ್ನಿ), ಎಟ್ಟಿ ಚಟ್ನಿ, ಉಪ್ಪಡಚ್ಚಿಲ್, ಕೆಸು-ಅಂಬಡೆ ಚಟ್ನಿ, ಪತ್ರೊಡೆ, ಪುನರ್ಪುಳಿ ಚಟ್ನಿ ಹೀಗೆ ತುಳುನಾಡಿನ ಆಹಾರ ಪದ್ಧತಿಯಲ್ಲಿ ನೂರಾರು ವರ್ಷಗಳಿಂದ ಬಂದಂತಹ 23 ಬಗೆಯ ಆಹಾರಗಳನ್ನು ವಿದ್ಯಾರ್ಥಿಗಳೇ ತಯಾರಿಸಿದ್ದರು.
ತುಳು ಪರಂಪರೆಯ ಹಳೆಯ ವಸ್ತುಗಳಾದ ಭತ್ತದ ಮುಡಿ, ಗಂಟೆ, ನೊಗ, ಮಣ ್ಣನ ಮೂರ್ತಿಗಳು, ಮಣ ್ಣನ ಬಿಸಳೆ, ಮುಟ್ಟಲೆ, ಕೊರಂಬು ಹೀಗೆ ನೂರಾರು ವಸ್ತುಗಳನ್ನು ವಿದ್ಯಾರ್ಥಿಗಳೇ ಬೇರೆ ಬೇರೆ ಕಡೆಗಳಿಂದ ಸಂಗ್ರಹಿಸಿ ಪ್ರದರ್ಶನಕ್ಕೆ ಇಟ್ಟಿದ್ದರು.
ಪ್ರವೇಶವಾಗುವಾಗಲೇ ತಟ್ಟೆಯಿಂದ ಹಣೆದ ಬ್ಯಾನರ್ ರೀತಿಯಲ್ಲಿ ಆಟಿ ದಿನದ ತಿನಿಸುಗಳ ಮೆನುವನ್ನು ದೊಡ್ಡದಾಗಿ ಕೈಯಲ್ಲಿ ಬರೆದು ಹಾಕಿದ್ದರು. ಬೂತದ ಅಣ , ತೆಂಗಿನಗರಿಗಳಿಂದ ವಿದ್ಯಾರ್ಥಿಗಳೇ ಮಾಡಿದ ಸುಂದರ ವೇದಿಕೆ ಎಲ್ಲರ ಗಮನ ಸೆಳೆಯುತ್ತಿತ್ತು.
ಅತಿಥಿಗಳಿಗೆಲ್ಲ ಟೀಬಲ್ ವ್ಯವಸ್ಥೆ ಮಾಡಿ ಪ್ರತಿ ಟೇಬಲ್‍ನಲ್ಲೂ ಕರಕುಶಲ ವಸ್ತುಗಳಲ್ಲಿ ಮೆನುವನ್ನು ಇಟ್ಟು, ಟೇಬಲಿಗೊಬ್ಬರಂತೆ "ಆಟಿದ ಕೂಟ"ಕ್ಕೆ ಸ್ಟಾರ್ ಟಚ್ ಕೊಟ್ಟು ಮಂಗಳೂರಿನ ವಿದ್ಯಾರ್ಥಿಗಳು ಅತಿಥಿ ಸತ್ಕಾರ ವ್ಯವಸ್ಥೆ ಮಾಡಿದ್ದರು. ಒಟ್ಟಿನಲ್ಲಿ ಸ್ಟಾರ್ ಹೋಟೆಲ್ ರೀತಿಯಲ್ಲಿ ವಿದ್ಯಾರ್ಥಿಗಳು ಅತಿಥಿಗಳನ್ನು ಉಪಚರಿಸಿದರು.
ವಿದ್ಯಾರ್ಥಿಗಳು ಪಂಚೆ-ಬಿಳಿ ವಸ್ತ್ರದಲ್ಲಿದ್ದರೆ, ವಿದ್ಯಾರ್ಥಿನಿಯರು ಸೀರೆಯಲ್ಲಿ ಕಂಗೊಳಿಸುತ್ತಿದ್ದರು.


ವಿದ್ಯಾರ್ಥಿಗಳಿಗೆ ತುಳುನಾಡಿನ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ವಿಶೇಷ ಅತಿಥಿ ಕದ್ರಿ ನವನೀತ್ ಶೆಟ್ಟಿ, ಪ್ರಾಂಶುಪಾಲರಾದ ಅಮರ್ ಚೆರೆಯನ್, ಪ್ರಾದ್ಯಾಪಕರಾದ ಜೋಯೆಲ್ ಲೋಬೊ, ಕಾಲೇಜ್ ವಿದ್ಯಾರ್ಥಿಸಂಘದ ಅಧ್ಯಕ್ಷ ನಿತಿನ್ ಕಾಮತ್, ಕಾರ್ಯದರ್ಶಿ ರೇಚೆಲ್ ಮತ್ತು ವಿದ್ಯಾರ್ಥಿ ಸಂಯೋಜಕ ಪುನಿತ್ ಉಪಸ್ಥಿತರಿದ್ದರು.
ಜಿಲ್ಲೆಯಲ್ಲೇ ಇಷ್ಟು ಬಗೆಯ ತಿಂಡಿತಿನಿಸು, ವಸ್ತುಪ್ರದರ್ಶನ ವಿದ್ಯಾರ್ಥಿಗಳೇ ನಡೆಸಿಕೊಟ್ಟ ಕಾರ್ಯಕ್ರಮ ಇದೇ ಮೊದಲಾಗಿದೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Nirmala Thonse organizes Awareness Campaign agains
View More

https://issuu.com/austinprabhu/docs/____________111https://issuu.com/austinprabhu/docs/____________111
KEMMANNU CHURCH - Weekly Announcements.KEMMANNU CHURCH - Weekly Announcements.
Milarchi Laram - Issue Jan 2020Milarchi Laram - Issue Jan 2020
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India