ಅಸಹನೆ ಮತ್ತುಅಸಮಾನತೆಯಿಂದದೇಶದ ಪ್ರಜಾಪ್ರಭುತ್ವ ಶಿಥಿಲ - ವಿನಯಕುಮಾರ್ ಸೊರಕೆ


Richard D’Souza
Kemmannu News Network, 17-08-2019 11:45:07


Write Comment     |     E-Mail To a Friend     |     Facebook     |     Twitter     |     Print


ಉದ್ಯಾವರ: ದೇಶಕ್ಕೆ ಸ್ವಾತಂತ್ರ್ಯದೊರಕಿ 72 ವರ್ಷಗಳು ಸಂದಿವೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ಈ ಎಪ್ಪತ್ತು ವರ್ಷಗಳಲ್ಲಿ ಆಗಿವೆ. ಆದರೆಇತ್ತೀಚಿನ ದಿನಗಳಲ್ಲಿ ದೇಶದಲ್ಲಿಧಾರ್ಮಿಕ ಅಸಹನೆಗಳು ಹೆಚ್ಚುತ್ತಿವೆ. ಧಾರ್ಮಿಕ ಘೋಷಣೆಗಳನ್ನು ಬಲತ್ಕಾರವಾಗಿ ಹೇಳಲು ಹಿಂಸಿಸಲಾಗುತ್ತಿದೆ. ಸಂವಿಧಾನಘೋಷಣೆ ಮೊಳಗಬೇಕಾದ ಲೋಕಸಭೆಯಲ್ಲಿಧಾರ್ಮಿಕ ಘೋಷಣೆಗಳನ್ನು ಹೇಳಲಾಗುತ್ತಿದೆ. ಇದರಿಂದದೇಶದಲ್ಲಿಅಸಮಾನತೆ ಹೆಚ್ಚುತ್ತಿದೆ. ರೀತಿ ಅಸಹನೆ ಮತ್ತುಅಸಮಾನತೆ ಹೆಚ್ಚುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾದುದು. ಇದುದೇಶದಅಭಿವೃದ್ಧಿಯನ್ನುಕುಂಠಿತಮಾಡುತ್ತದೆಎಂದು ಮಾಜಿ ಸಚಿವರೂ ಮಾಜಿ ಶಾಸಕರಾದ ಶ್ರೀ ವಿನಯಕುಮಾರ್ ಸೊರಕೆಯವರು, ಸೇವಾ ಮತ್ತು ಸಾಂಸ್ಕøತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್‍ಆಶ್ರಯದಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಉದ್ಯಾವರ ಹಪ್ಸಾಅಡಿಟೋರಿಯಂನಲ್ಲಿಜರಗಿದಯು. ಪದ್ಮನಾಭ ಶೆಟ್ಟಿಗಾರ್, ಕೆ. ಸದಾನಂದಕಾಂಚನ್, ಟಿ.ವೈ. ಶಾಬುದ್ದೀನ್, ಐರಿನ್ ಮಿನೇಜಸ್ ಸ್ಮಾರಕ ವಿದ್ಯಾರ್ಥಿ ವೇತನ, ಮಂಜುನಾಥಉದ್ಯಾವರ ಸ್ಮಾರಕ ವೈದ್ಯಕೀಯ ನೆರವು ಮತ್ತು ಶ್ರೀ ಅಬ್ದುಲ್‍ಜಲೀಲ್ ಸಾಹೇಬರ ಪ್ರಾಯೋಜಕತ್ವದಲ್ಲಿಅರ್ಹ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ನುಡಿದರು.

ಅವರು,ಮುಂದುವರಿಯುತ್ತಾ ಸತ್ಯ, ಶಾಂತಿ, ಅಹಿಂಸೆಯಿಂದದೊರೆತ ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರದು. ಗಾಂಧಿ, ನೆಹರೂ, ಅಂಬೇಡ್ಕರ್ ಈ ದೇಶದ ಬಗ್ಗೆ ಕಂಡ ಕನಸು ಎಲ್ಲೋ ಶಿಥಿಲವಾಗುತ್ತಿದೆಯೋ ಎಂಬ ಭಯಕಾಡುತ್ತಿದೆ. ಆದರೂ ಹಾಗಾಗದಂತೆತಡೆಯುವ ಶಕ್ತಿ ಈ ದೇಶದಜನತೆಗಿದೆಎಂದರು.

 ಮತ್ತೋರ್ವ ಮುಖ್ಯಅತಿಥಿಕಲ್ಯಾಣಪುರ ಮಿಲಾಗ್ರಿಸ್‍ಕಾಲೇಜಿನ ಪ್ರಾಂಶುಪಾಲರಾದಡಾ| ವಿನ್ಸೆಂಟ್ ಆಳ್ವರವರು ಮಾತನಾಡುತ್ತಾಕಷ್ಟದಲ್ಲಿರುವವರಕಣ್ಣೀರು ಒರೆಸಿದರೆ ಅದುದೇವರ ಸೇವೆ ಜನಾರ್ದನ ಸೇವೆ. ಈ ಕೆಲಸ ಈ ಸಂಸ್ಥೆ ಮಾಡುತ್ತಿದೆ. ನಾವು ಬೇರೆಯವರನ್ನು ಪ್ರೀತಿಸಿದರೆ ಅವರು ನಮ್ಮನ್ನು ಪ್ರೀತಿಸುತ್ತಾರೆ. ನೆಮ್ಮದಿ, ಪ್ರೀತಿ, ವಿಶ್ವಾಸ ಸಮಾಜದಲ್ಲಿ ಹೆಚ್ಚಾದಷ್ಟುದೇಶಅಭಿವೃದ್ಧಿಯಾಗುತ್ತದೆ. ಪ್ರಕೃತಿಯನ್ನು ಪ್ರೀತಿಸೋಣ. ನಾವು ಪ್ರಕೃತಿಯನ್ನು ಪ್ರೀತಿಸದೇ ಕಡೆಗಣಿಸಿದ್ದರಿಂದ ಇಂದು ಪ್ರಕೃತಿಯ ಕೋಪಕ್ಕೆ ತುತ್ತಾಗಿದ್ದೇವೆ. ಪ್ರಕೃತಿ ಮುನಿದರೆಅದರಎದುರು ನಿಲ್ಲುವ ಶಕ್ತಿ ನಮಗಾರಿಗೂಇಲ್ಲ. ವಿದ್ಯಾರ್ಥಿಗಳ ಹೃದಯದಲ್ಲಿ ಪ್ರೀತಿಯ ಬೀಜವನ್ನು ಬಿತ್ತೋಣಅಸಹನೆಯ ಬೀಜವನ್ನಲ್ಲ. ಅವರ ಹೃದಯದಲ್ಲಿ ಪ್ರೀತಿಗಿಡವಾಗಿ ಮರವಾಗಿ ಫಲವನ್ನುಕೊಡಲಿ ಎಂದರು.

  ಸ್ವಾತಂತ್ರ್ಯೋತ್ಸವದ ಹೆಸರಲ್ಲಿಇಂತಹ ಸುಂದರಕಾರ್ಯಕ್ರಮ ಮಾಡಲು ಹಳ್ಳಿಯಲ್ಲಿ ಮಾತ್ರ ಸಾಧ್ಯಏಕೆಂದರೆ ಆ ಮುಗ್ದತೆಇಲ್ಲಿಇದೆ. ಇದು ಉಳಿದು ಬೆಳೆಯಬೇಕಾದರೆ ಅದ್ಬುತವಾದ ಮಕ್ಕಳ ಬಾಲ್ಯವನ್ನು ಹಿರಿಯರು ಮಕ್ಕಳಿಗೆ ಕೊಡಬೇಕಾಗಿದೆ. ಮಕ್ಕಳ ಬಾಲ್ಯವನ್ನು ಹಿರಿಯರು ಕಸಿಯುವ ಚಾಳಿ ಎಲ್ಲೆಡೆಇದೆಅದು ಬದಲಾಗಬೇಕು. ಒಂದು ಬೆಳೆಯನ್ನು ಬೆಳೆಯಲು ಕಾಲ ಕಾಲಕ್ಕೆ ಅದಕ್ಕೆ ಪೂರೈಕೆ ಮಾಡಬೇಕಾದ್ದನ್ನು ನಾವು ಪೂರೈಕೆ ಮಾಡುತ್ತೇವೆಯೋಅದೇರೀತಿ ಮಕ್ಕಳ ಅಗತ್ಯತೆಯನ್ನು ಕಾಲ ಕಾಲ ಕಾಲಕ್ಕೆ ತಕ್ಕಂತೆ ಪೂರೈಸಬೇಕು. ಸೌಹಾರ್ದತೆ ಮತ್ತು ಸಮಾನತೆಯ ಬದುಕನ್ನುಅವರಿಗೆ ಕಲಿಸೋಣ ಆಗ ಮಾತ್ರ ನಾವು ಪಡಕೊಂಡ ಸ್ವಾತಂತ್ರ್ಯಕ್ಕೆ ಸಾರ್ಥಕತೆ ಬರುತ್ತದೆಎಂದು ಮತ್ತೋರ್ವ ಮುಖ್ಯಅತಿಥಿಬ್ರಹ್ಮಾವರಎಸ್.ಎಮ್.ಎಸ್. ಆಂಗ್ಲ ಮಾಧ್ಯಮ( ಸಿ.ಬಿ.ಎಸ್.ಇ.)ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅಭಿಲಾಷಾಎಸ್‍ಅವರುನುಡಿದರು.

ಇನ್ನೊರ್ವ ಮುಖ್ಯಅತಿಥಿದಲಿತ ಹೋರಾಟಗಾರ ಮತ್ತುದಲಿತಚಿಂತಕಾರದ ಶ್ರೀ ಜಯನ್ ಮಲ್ಪೆ ಮಾತನಾಡುತ್ತಾಇದು ಸಂವಿಧಾನದಆಶಯಕ್ಕೆ ಪೂರಕವಾದಕಾರ್ಯಕ್ರಮ. ಇಂದಿನ ಈ ಸಂದರ್ಭದಲ್ಲಿ ಈ ದೇಶದಲ್ಲಿ ಸೌಹಾರ್ದತೆ ಸಮಾನತೆ ಬಯಸುವ ಪ್ರಜ್ಞಾವಂತ ಸಮಾಜ ಈ ಸ್ವಾತಂತ್ರ್ಯೋತ್ಸವದಲ್ಲಿ ಸಂಭ್ರಮಿಸಲುಆಗದ ವಾತಾವರಣವಿದೆ. ಜನಪರ ಚಳುವಳಿಗೆಳು ಮಕಾಡ ಮಲಗಿವೆ. ಭಾರತದಆತ್ಮಸಾಕ್ಷಿ ಸಾಯುತ್ತಿದೆ. ನಮ್ಮಂತವರಿಗೆಧ್ವನಿ ಎತ್ತಲುಆಗುತ್ತಿಲ್ಲ. ಈ ದೇಶ ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು. ಸಂವಿಧಾನದ ಉಳಿವಿಗಾಗಿ ನಾವೆಲ್ಲರೂಕಟಿ ಬದ್ದರಾಗೋಣಎಂದರು.

ಉದ್ಯಾವರಗ್ರಾಮ ಪಂಚಾಯತ್‍ನಅಧ್ಯಕ್ಷರಾದ ಶ್ರೀಮತಿ ಸುಗಂಧಿ ಶೇಖರ್ ಸ್ವಾತಂತ್ರ್ಯೋತ್ಸವದ ಶುಭಾಶಯವನ್ನು ಹಾರೈಸಿದರು.

ಸಮಾರಂಭದಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಶ್ರೀ ಅಬ್ದುಲ್‍ಜಲೀಲ್ ಸಾಹೇಬ್ ವಹಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಮಹಮ್ಮದ್ ನಯಾಜ್, ಶ್ರೀ ಶರತ್‍ಕುಮಾರ್, ಶ್ರೀಮತಿ ಚಂದ್ರಾವತಿ ಭಂಡಾರಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿಸಂಸ್ಥೆಯಅಧ್ಯಕ್ಷರಾದ ಶ್ರೀ ತಿಲಕ್‍ರಾಜ್ ಸಾಲ್ಯಾನ್‍ರವರು ಅತಿಥಿಗಳನ್ನು ಸ್ವಾಗತಿಸಿದರು. ನಿರ್ದೇಶಕರಾದಉದ್ಯಾವರ ನಾಗೇಶ್‍ಕುಮಾರ್‍ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷರುಗಳಾದ ಶ್ರೀ ಆಬಿದ್ ಆಲಿ, ಶ್ರೀ ಅನೂಪ್‍ಕುಮಾರ್, ಮತ್ತು ಶ್ರೀ ಯು.ಆರ್. ಚಂದ್ರಶೇಖರ್‍ಫಲಾನುಭವಿಗಳ ಹೆಸರು ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಗಿರೀಶ್‍ಗುಡ್ಡೆಯಂಗಡಿ ವಂದಿಸಿದರು. ಮಾಜಿಅಧ್ಯಕ್ಷರಮೇಶ್‍ಕುಮಾರ್‍ರವರುಕಾರ್ಯಕ್ರಮ ನಿರ್ವಹಿಸಿದರು.

ಈ ಕಾರ್ಯಕ್ರಮದಲ್ಲಿ 200 ವಿದ್ಯಾರ್ಥಿಗಳಿಗೆ ಸಮವಸ್ತ್ರ, 75000ರೂಪಾಯಿ ವಿದ್ಯಾರ್ಥಿ ವೇತನ, 75000 ವೈಧ್ಯಕೀಯ ನೆರವು ವಿತರಿಸಲಾಯಿತು.ಕೊನೆಯಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯಜರಗಿತು.

ಬೆಳಿಗ್ಗೆ 8.00 ಕಾರ್ಯಕ್ರಮದಲ್ಲಿಜರಗಿದರಾಷ್ಟ್ರಧ್ವಜಾರೋಹಣಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಮಹಮ್ಮದ್ ನಯಾಜ್‍ಧ್ವಜವನ್ನು ಅರಳಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




The drinking water for Udupi ??
View More

https://issuu.com/austinprabhu/docs/____________111https://issuu.com/austinprabhu/docs/____________111
KEMMANNU CHURCH - Weekly Announcements.KEMMANNU CHURCH - Weekly Announcements.
Milarchi Laram - Issue Jan 2020Milarchi Laram - Issue Jan 2020
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India