ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ


Rons Bantwal
Kemmannu News Network, 18-08-2019 19:54:07


Write Comment     |     E-Mail To a Friend     |     Facebook     |     Twitter     |     Print


ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ
ಸಾಹಿತ್ಯ ಬಳಗಕ್ಕೆ ಮಕ್ಕಳ ಅಂತರಂಗದ ಧ್ವನಿ ಅರ್ಥವಾಗಿದೆ-ಮಾ| ಶ್ರೀಕೃಷ್ಣ ಉಡುಪ  
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುಂಬಯಿ, ಆ.17: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಸದ್ಯ ರಜತ ಮಹೋತ್ಸವದ ಹೊಸ್ತಿಲಲ್ಲಿರುವ ಸಾಹಿತ್ಯ ಬಳಗ ಮುಂಬಯಿ ಸಂಸ್ಥೆಯು ನವಿಮುಂಬಯಿ ಕನ್ನಡ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಇಂದಿಲ್ಲಿ ಶನಿವಾರ ಅಪರಾಹ್ನ ವಾಶಿ ಇಲ್ಲಿನ ನವಿಮುಂಬಯಿ ಕನ್ನಡ ಸಂಘದ ಸಭಾಗೃಹದಲ್ಲಿ ಮಕ್ಕಳ ಪ್ರಥಮ ಸಮ್ಮೇಳನ ಆಯೋಜಿಸಿತ್ತು.

ಕು| ಜೀವಿಕಾ ಶೆಟ್ಟಿ ಪೇತ್ರಿ ಅಧ್ಯಕ್ಷತೆಯಲ್ಲಿ ಜರುಗಿದ ಸಮ್ಮೆಳನವನ್ನು ಮಾ| ಶ್ರೀಕೃಷ್ಣ ಉಡುಪ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. `ಕವಿತಾ ವಾಚನ ಹಿರಿಯರ ಕವಿತೆಗೆ ಕಿರಿಯರ ಸ್ಪಂದನ’ ವಿಚಾರಿತ ಮೊದಲ ಗೋಷ್ಠಿಯಲ್ಲಿ ವಿಧಿಶ ರಾವ್, ಭುವಿ ಭಟ್, ಧನುಷ್ ಆರ್.ಶೆಟ್ಟಿ, ಪ್ರತ್ವಿಕಾ ಆರ್.ಶೆಟ್ಟಿ ಭಾಗವಹಿಸಿ ತಮ್ಮ ವಿಚಾರ ಮಂಡಿಸಿದರು. ಜ್ಞಾನವಿ ಪೆÇೀತಿ ಗೋಷ್ಠಿ ನಡೆಸಿದರು.

ಶ್ರೀಕೃಷ್ಣ ಉಡುಪ ಮಾತನಾಡಿ ಮಕ್ಕಳಿಂದ ಮಕ್ಕಳಿಗಾಗಿ ಜರಗುವ ಇಂದಿನ ಕಾರ್ಯಕ್ರಮ ಅರ್ಥಪೂರ್ಣ ಆದದ್ದು. ನಾವೆಲ್ಲರೂ ಹೂವು ಮಾರುವವರಾಗಬೇಕು, ಕಟ್ಟಿಗೆ ಕಡಿಯುವವರಾಗಬಾರದು. ಪ್ರಾಯಶ: ಸಾಹಿತ್ಯ ಬಳಗಕ್ಕೆ ನಮ್ಮ ಅಂತರಂಗದ ಧ್ವನಿ ಅರ್ಥವಾಗಿದೆ ಎಂದರು.

ಈವತ್ತಿನ ಈ ಅಪೂರ್ವ ಮಕ್ಕಳ ಸಮಾವೇಶ ನಮ್ಮಂತಹ ಪುಟಾಣಿಗಳಿಗೆ ಮಾರ್ಗದರ್ಶಿಯಾಗಿದೆ. ಮುಂಬಯಿಯ ಇತಿಹಾಸದಲ್ಲಿ ಇದುವರೆಗೂ ನಡೆಯದ ಅದ್ಭುತವೊಂದು ಇಲ್ಲಿ ಇಂದು ನಡೆಯುತ್ತಿದೆ. ಇಂತಹ ಸಮಾವೇಶಗಳು ಮುಂದಿನ ದಿನಗಳಲ್ಲಿ ಬೇರೆಬೇರೆ ಸಂಘ ಸಂಸ್ಥೆಗಳು ಜರಗಿಸುವಂತಾಗಲಿ. ಸಾಹಿತ್ಯ ಬಳಗದ ಪ್ರತಿಯೊಂದು ಕಾರ್ಯಕ್ರಮಗಳು ಒಳನಾಡು ಹಾಗೂ ಹೊರನಾಡಿನಲ್ಲಿ ತನ್ನದೇ ಆದ ಶ್ರೇಷ್ಠ ಸ್ಥಾನವನ್ನು ಉಳಿಸಿಕೊಂಡು ಬಂದಿದೆ ಎಂದರೆ ಅದು ಉತ್ಪ್ರೇಕ್ಷೆಯ ಮಾತಾಗದು ಎಂದು ಜೀವಿಕಾ ಶೆಟ್ಟಿ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ತಿಳಿಸಿದರು.

ದ್ವಿತೀಯ ಗೋಷ್ಠಿಯಲ್ಲಿ  ಕು| ಸಾನ್ವಿ ಶೆಟ್ಟಿ ಅವರು `ಶಾಲಾ ಬ್ಯಾಗ್ ಹೊತ್ತು ಸೋತೆ’, ನಿಧಿ ಪೂಜಾರಿ ಅವರು `ಕಡಿಮೆ ಅಂಕ ಪಡೆದರೆ ಮನೆಯಲ್ಲಿ ಕಿರಿಕಿರಿ’, ಸುನಿಧಿ ಶೆಟ್ಟಿ ಅವರು `ಟ್ಯೂಶನ್ ಕ್ಲಾಸ್‍ನಿಂದ ದರೋಡೆ’, ಅಪ್ರಮೇಯ ಭಟ್‍ಅವರು `ಶಾಲಾ ಕೆಲಸ ಮತ್ತು ಮನೆ ಕೆಲಸ ನಡುವೆ ಖಾಸಾಗಿ ಕೆಲಸಕ್ಕೆ ಎಡೆ ಇಲ್ಲ’, ಪ್ರತೀಕ್ಷಾ ಭಟ್ ಅವರು `ನಮಗೆ ತಿಳಿಯದ ಯೋಜನಾ ಕೆಲಸಗಳು ಯಾರು ಮಾಡಬೇಕು’ ವಿಷಯಗಳಲ್ಲಿ ತಮ್ಮ ವಿಚಾರ ಮಂಡಿಸಿದರು. ಅದ್ವಿತಾ ಸಾಗರ್ ಗೋಷ್ಠಿ ನಡೆಸಿದರು.

ಬಳಿಕ ನಡೆಸಲ್ಪಟ್ಟ `ಹಿರಿಯರೊಡನೆ ಸಂವಾದ’ದಲ್ಲಿ ಡಾ| ಸುರೇಂದ್ರಕುಮಾರ್ ಹೆಗ್ಡೆ (ರಂಗನಟ),  ಆರ್.ಎಲ್ ಸುಧೀರ್ ಶೆಟ್ಟಿ (ಸಮಾಜ ಸೇವಕ), ಅಣ್ಣಿ ಸಿ.ಶೆಟ್ಟಿ (ಧರ್ಮದರ್ಶಿ), ಜ್ಯೋತಿ ಪ್ರಸಾದ್ (ಗೃಹಿಣಿ), ಡಾ| ವಿಜಯಾ ಎಂ.ಶೆಟ್ಟಿ (ವೈದ್ಯ), ಎನ್.ಆರ್ ರಾವ್ (ನ್ಯಾಯವಾದಿ) ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಸಾತ್ವಿಕ್ ರೈ, ನೇಹಾ ಹೆಗ್ಡೆ, ರಾಘವೇಂದ್ರ ಸಾಲ್ಯಾನ್, ಶುಭಾಶ್ರೀ ಭಟ್, ನೇಹಾ ನಾಯಕ್, ಸಾನ್ವಿ ಶೆಟ್ಟಿ, ಚಿರಾಯು ಪ್ರಕಾಶ್ ಸಂವಾದದಲ್ಲಿ ಪಾಲ್ಗೊಂಡಿದ್ದು, ದೀಪ್ಯಾ ಶಿವತ್ತಾಯ ಸಂವಾದ ನಡೆಸಿದರು.

ಸಾಹಿತ್ಯ ಬಳಗದ ಅಧ್ಯಕ್ಷ ಹೆಚ್.ಬಿ.ಎಲ್ ರಾವ್, ಎಸ್.ಕೆ ಸುಂದರ್, ಜಗದೀಶ್ ರೈ, ಸಹನಾ ಭಾರದ್ವಾಜ್, ಸಾ.ದಯ, ನವಿಮುಂಬಯಿ ಕನ್ನಡ ಸಂಘದ ಬಿ.ಹೆಚ್ ಕಟ್ಟಿ, ಸುಜಾತ ರಾವ್, ಮತ್ತಿತರರು ಉಪಸ್ಥಿತರಿದ್ದು ಸಮ್ಮೇಳನದ ಯಶಸ್ಸಿಗೆ ಸಹಕರಿಸಿದರು. ಸಾನ್ವಿ ರೈ ಮತ್ತು ಶೈಲಜಾ ಶೆಟ್ಟಿ ಯಕ್ಷಗಾನ ಶೈಲಿಯಲ್ಲಿ ಗಣಪತಿ ನಮನಗೈದರು. ಬಡುಗುತಿಟ್ಟು ಮತ್ತು ತೆಂಕುತಿಟ್ಟು ಶೈಲಿಯಲ್ಲಿ ಯಕ್ಷಗಾನ ಪ್ರವೇಶ ಸಮ್ಮೇಳನಕ್ಕೆ ಚಾಲನೆಯನ್ನೀಡಿದರು. ಕೃತಿ ಚಡಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷಗಾನ ಭಾಗವತಿಕೆ, ತಬಲಾ ವಾದನ, ಸುಗಮ ಸಂಗೀತ, ನೃತ್ಯ ವೈಭವ, ಏಕಾ ಪಾತ್ರಾಭಿನಯ, ಸಮೂಹ ಗೀತೆ, ಜಾನಪದ ನೃತ್ಯಗಳನ್ನು ಮಕ್ಕಳು ಪ್ರದರ್ಶಿಸಿದರು. ನಾನು ಏನು ಆಗಬೇಕು ಎಂದು ಬಯಸುತ್ತೇನೆ ಎಂದು ಸಭೆಯಲ್ಲಿದ್ದ ಮಕ್ಕಳು ಪ್ರತಿಕ್ರಿಯಿಸಿದರು. ನವ್ಯಶ್ರೀ ಭಟ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Udupi: Traffic congestion and dangers to pedestria
View More

KEMMANNU CHURCH - Weekly Announcements.KEMMANNU CHURCH - Weekly Announcements.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
KEMMANNU CHURCH - Weekly Announcements.KEMMANNU CHURCH - Weekly Announcements.
Veez Konkani Illustrated Weekly e-Magazine # 113Veez Konkani Illustrated Weekly e-Magazine # 113
Rozaricho Gaanz December IssueRozaricho Gaanz December Issue
Milarchi Laram - Issue Jan 2020Milarchi Laram - Issue Jan 2020
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India